ಉತ್ತರಾಖಂಡದಲ್ಲಿ ಪುನರುಜ್ಜೀವಕ ಭವಿಷ್ಯವನ್ನು ಸಕ್ರಿಯಗೊಳಿಸುತ್ತಿರುವ ಫ್ಲಿಪ್‌ಕಾರ್ಟ್‌ನಲ್ಲಿರುವ ಆನ್‌ಲೈನ್‌ ಗೇಮ್

Read this article in हिन्दी | English | বাংলা | தமிழ் | ગુજરાતી | मराठी | తెలుగు

ತಂತ್ರಜ್ಞಾನ, ಗ್ಯಾಮಿಫಿಕೇಶನ್ ಮತ್ತು ಸೀಡ್‌ ಬಾಂಬಿಂಗ್‌‌ ಸೇರಿದಂತೆ ನವೀನ ಕ್ರಮವನ್ನು ಬಳಸಿಕೊಂಡು ಫ್ಲಿಪ್‌ಕಾರ್ಟ್ ಫೌಂಡೇಶನ್‌, ಅದರ ಎನ್‌ಜಿಒ ಪಾಲುದಾರರು, ಫ್ಲಿಪ್‌ಕಾರ್ಟ್‌ ತಂಡಗಳು ಮತ್ತು ಗ್ರಾಹಕರು ಸೇರಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪುನರುಜ್ಜೀವಕ ಭವಿಷ್ಯವನ್ನು ನಿರ್ಮಿಸಲು ಸಹಕರಿಸುತ್ತಿದ್ದಾರೆ. ಫ್ಲಿಪ್‌ಕಾರ್ಟ್‌ ಅಪ್ಲಿಕೇಶನ್‌ನಲ್ಲಿರುವ ಒಂದು ಗೇಮ್ ಆದ ʻಫ್ಲಿಪ್‌ಕಾರ್ಟ್‌ ಸೆಲೆಬ್ರೇಶನ್ ಟ್ರೀʼ ರಾಜ್ಯಾದ್ಯಂತ ಹಳ್ಳಿಗಳಲ್ಲಿ ಮರು ಅರಣ್ಯೀಕರಣ ಮತ್ತು ಪುನರ್ವಸತಿ ಆಂದೋಲನಕ್ಕೆ ಹೇಗೆ ಚಾಲನೆ ನೀಡುತ್ತಿದೆ ಎಂಬುದನ್ನು ತಿಳಿಯಲು ಇದನ್ನು ಓದಿ.

seed bombing

ವಾಮಾನ ಬದಲಾವಣೆಯ ತಗ್ಗಿಸುವಿಕೆ ಮತ್ತು ಬದಲಾವಣೆಗೆ ಕಡೆಗೆ ಪುನರುಜ್ಜೀವಕ ವಿಧಾನವನ್ನು ರೂಪಿಸುವ ಮೂಲಕ ಮರುಅರಣ್ಯೀಕರಣಕ್ಕೆ ಮೂಲಭೂತ ವಿಧಾನದ ಅಗತ್ಯವಿದೆ. ಉತ್ತರಾಖಂಡದ ಗರ್ವಾಲ್ ಹಿಮಾಲಯದಲ್ಲಿ ನೆಲೆಸಿರುವ ಕೋಟೆಗಳ ನಾಡು ಚಮೋಲಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯ ಕರೆಗೆ ಸೀಡ್‌ ಬಾಂಬಿಂಗ್‌, ಅಂದರೆ ಬೀಜದ ಉಂಡೆಯನ್ನು ಎಸೆಯುವುದು ಒಂದು‌ ವಿನೂತನ ಪ್ರತಿಕ್ರಿಯೆಯಾಗಿದೆ. ಅದರ ನೈಜ ವ್ಯಾಪಕ ಪ್ರಭಾವದ ಸಾಮರ್ಥ್ಯವನ್ನು ಅರಿತುಕೊಂಡು, ಫ್ಲಿಪ್‌ಕಾರ್ಟ್‌‌ ಫೌಂಡೇಷನ್‌ ಎರಡು NGOಗಳಾದ, < a href=”https://give.do/” target=”_blank” rel=”noopener”>ಗಿವ್ ಫೌಂಡೇಶನ್ ಮತ್ತು ಸಂಕಲ್ಪತರು ಫೌಂಡೇಶನ್‌ ಗಳೊಂದಿಗೆ, ಫ್ಲಿಪ್‌ಕಾರ್ಟ್‌ ಸಸ್ಟೈನಬಿಲಿಟಿ ಮತ್ತು ಗೇಮ್ಸ್ ತಂಡಗಳು ವಿಶಾಲವಾದ ಚಿಂತನೆಯೊಂದಿಗೆ ಒಗ್ಗೂಡಿದವು.

“ಫ್ಲಿಪ್‌ಕಾರ್ಟ್ ಫೌಂಡೇಶನ್ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸೀಡ್‌ ಬಾಲ್‌ ಬಾಂಬ್‌ ಯೋಜನೆಗೆ ಬೆಂಬಲ ನೀಡಲು ಮುಂದೆ ಬಂದಿತು. ಈ ಯೋಜನೆಯ ಉದ್ದೇಶವು ಪರ್ವತ ಪ್ರದೇಶದಲ್ಲಿ ಮರ-ಗಿಡಗಳನ್ನು ಮರುಸ್ಥಾಪಿಸುವುದಾಗಿದ್ದು, ಸಂಪೂರ್ಣ ಯೋಜನೆಯು ಜಿಲ್ಲೆಯ 63 ಹಳ್ಳಿಗಳಾದ್ಯಂತ 27,000 ಕ್ಕೂ ಹೆಚ್ಚು ಜನರ ಮೇಲೆ ಉತ್ತಮ ಪರಿಣಾಮ ಬೀರಿದೆ” ಎಂದು ಹೇಳುತ್ತಾರೆಫ್ಲಿಪ್‌ಕಾರ್ಟ್‌ ಫೌಂಡೇಷನ್‌ನ ನಿರ್ದೇಶಕಿ ಪೂಜಾ ತ್ರಿಸಾಲ್ .


ಕಥೆಯನ್ನು ಆನಂದಿಸುತ್ತಿರುವಿರಾ? ಕೆಳಗಿನ ಪಾಡ್‌ಕ್ಯಾಕ್ಸ್ಟ್‌ ಅನ್ನು ಆಲಿಸಿ:


ಪುನರುತ್ಪಾದಕ ಭವಿಷ್ಯಕ್ಕೆ ಬದ್ಧವಾಗಿರುವ, ಸೀಡ್ ಬಾಲ್‌ ಬಾಂಬಿಂಗ್(ಬೀಜದ ಉಂಡೆಯ ಬಾಂಬ್‌) ಯೋಜನೆ ಜಾಗೃತಿ ಮೂಡಿಸಿತಲ್ಲದೆ, ಬದಲಾವಣೆಯನ್ನು ಕ್ರಮಬದ್ಧಗೊಳಿಸಿತು ಮತ್ತು ಸುತ್ತಲಿನ ಸಮುದಾಯಗಳಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಂತೆ ಮಾಡಿತು. ಈ ಯೋಜನೆಯು ತಂತ್ರಜ್ಞಾನದ ಆವಿಷ್ಕಾರ ಮತ್ತು ಫ್ಲಿಪ್‌ಕಾರ್ಟ್‌ನ ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ತಳಮಟ್ಟದಲ್ಲಿ ಅಳವಡಿಸಿಕೊಳ್ಳುವ ಬದ್ಧತೆಯನ್ನು ಒಂದೇ ಸೂರಿನ ಅಡಿಯಲ್ಲಿ ತಂದಿತು.

ವಾಸ್ತವದಿಂದ ನಿಜಸ್ಥಿತಿಯೆಡೆಗೆ

seed bombing

 

ಕಳೆದ ಕೆಲವು ದಶಕಗಳಲ್ಲಿ, ಚಮೋಲಿಯ ಗುಡ್ಡಗಾಡು ಭೂಪ್ರದೇಶವು ಜಗತ್ತಿನಾದ್ಯಂತ ಆತಂಕಕಾರಿ ಪರಿಸರ ಬದಲಾವಣೆಗಳ ಪರಿಣಾಮಗಳ ಅಂತ್ಯದಲ್ಲಿದೆ. ಕ್ಷಿಪ್ರ ಅರಣ್ಯನಾಶದಿಂದ ಉಂಟಾದ ಹಲವಾರು ಭೂಕುಸಿತಗಳು ಹಲವಾರು ಜನರನ್ನು ಸ್ಥಳಾಂತರಿಸಿದೆ ಮತ್ತು ಜಿಲ್ಲೆಯ ಹಳ್ಳಿಗಳ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಿವೆ.

ಸುಸ್ಥಿರ ಕ್ರಿಯೆ, ನಾವೀನ್ಯತೆ ಮತ್ತು ಫ್ಲಿಪ್‌ಕಾರ್ಟ್‌ನ ವಿಧಾನದ ಸಾರವನ್ನು ನೀಡುವ ಸಂಸ್ಕೃತಿಯೊಂದಿಗೆ, ಈ ಹಾನಿಯನ್ನು ಆದಷ್ಟು ವೇಗವಾಗಿ ಸರಿಪಡಿಸುವ ಗುರಿ ಇದಾಗಿತ್ತು. ಒಂದೇ ಗುರಿಯೊಂದಿಗೆ ಮೂರು ಆಂತರಿಕ ತಂಡಗಳಾದ್ಯಂತ ತಜ್ಞರು ಗುರಿ ಸಾಧನೆಗಾಗಿ ಕೆಲಸ ಮಾಡಿದರು.

ಸುಸ್ಥಿರ ಪ್ರಭಾವ ಬೀರುವ ಗೇಮಿಫೈಡ್‌ ಮತ್ತು ಆಧುನಿಕ ಪರಿಹಾರವಾದ ʼಫ್ಲಿಪ್‌ಕಾರ್ಟ್ ಸೆಲೆಬ್ರೇಶನ್ ಟ್ರೀʼ ಮೂಲಕ ಬದಲಾವಣೆಯ ಬೀಜಗಳನ್ನು ಬಿತ್ತಲಾಗಿದೆ. ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಇಂಟರ್ಯಾಕ್ಟೀವ್‌ ಗೇಮ್‌ ಅನ್ನು ಆಡುವ ಮೂಲಕ, ಬಳಕೆದಾರರು ವರ್ಚುವಲ್ ಮರಗಳನ್ನು ಬೆಳೆಸಬಹುದು ಮತ್ತು ಬೆಳೆಸಲಾದ ಪ್ರತಿ ವರ್ಚುವಲ್ ಮರಕ್ಕೆ ಪ್ರತಿಯಾಗಿ ನೈಜ ಪರಿಸರದಲ್ಲಿ ಒಂದು ಸಸಿಯನ್ನು ನೆಡಲು ಫ್ಲಿಪ್‌ಕಾರ್ಟ್‌ ಬದ್ಧವಾಗಿದೆ. ಇದರೊಂದಿಗೆ, ಫ್ಲಿಪ್‌ಕಾರ್ಟ್ ಗ್ರಾಹಕರೂ ಸಹ ಸಾವಿರಾರು ಜನರ ಮೇಲೆ ಪ್ರಭಾವ ಬೀರುವ ಆಂದೋಲನದ ಭಾಗವಾಗಲು ಅವಕಾಶವನ್ನು ಪಡೆದರು.

seed bombing

ಫ್ಲಿಪ್‌ಕಾರ್ಟ್‌ನ ಹೊಸ ಉಪಕ್ರಮಗಳ ನಿರ್ದೇಶಕರು ಮತ್ತು ವಿಶೇಷತಜ್ಞರಲ್ಲಿ ಒಬ್ಬರಾದ ಅರ್ಪಿತಾ ಕಪೂರ್‌ ಅವರು, ಮಿಷನ್‌ನೊಂದಿಗೆ ನಿಜವಾದ ಸಂಬಂಧ ಹೊಂದುವುದು ಗೇಮರ್ಗ‌ಳಿಗೆ ಮುಖ್ಯವಾಗಿತ್ತು.

“ ಇಲ್ಲಿ ಐಫೋನ್ ಅಥವಾ ಟಿವಿಯಂತಹ ಸಾಮಾನ್ಯ ರಿವಾರ್ಡ್‌ಗಳು ಅಥವಾ ರಿಯಾಯಿತಿಗಳಿಂದ ಸಾಧ್ಯವಾಗದ, ಒಂದು ಮರವನ್ನು ಪೂರ್ಣವಾಗಿ ಬೆಳೆಸಲು 21 ದಿನಗಳನ್ನು ಹೂಡಿಕೆ ಮಾಡಿದವರು ಯಾರೇ ಆಗಿರಲಿ, ಅವರ ಸಾಧನೆಗೆ ಮಹತ್ವದ ಅರ್ಥ ಹೊಂದಬೇಕೆಂದು ನಾವು ಬಯಸುತ್ತೇವೆ. ನಿಜ ಜೀವನದಲ್ಲಿ ಮರವನ್ನು ನೆಡುವ ಈ ಆಲೋಚನೆಯನ್ನು ನಾವು ಹೇಗೆ ಕಂಡುಕೊಂಡಿದ್ದೇವೆ ಮತ್ತು ಇದು 21 ದಿನಗಳ ಕಾಲ ಈ ಆಟವನ್ನು ಆಡಿದ್ದರ ಪ್ರತಿಫಲವಾಗಿದೆ,” ಎಂದು ಅರ್ಪಿತಾ ಹೇಳುತ್ತಾರೆ. 21-ದಿನದ ಈ ಅಭಿಯಾನದಲ್ಲಿ, ಸೆಲೆಬ್ರೇಶನ್ ಟ್ರೀಗೆ 3 ಮಿಲಿಯನ್ ಗೇಮರುಗಳು ಟ್ಯೂನ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯಾವ ಪರ್ವತವೂ ತುಂಬಾ ಎತ್ತರವಿಲ್ಲ

seed bombing

“ಫ್ಲಿಪ್‌ಕಾರ್ಟ್ ಗ್ರೂಪ್ ತಮ್ಮ ಎಲ್ಲಾ ವ್ಯವಹಾರದ ಅಭ್ಯಾಸಗಳಲ್ಲಿ ಸುಸ್ಥಿರತೆಯನ್ನು ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು 2040 ರ ವೇಳೆಗೆ ನಿವ್ವಳ ಶೂನ್ಯ ಹವಾಮಾನ ಬದಲಾವಣೆಯ ಪರಿಣಾಮದ ಕಡೆಗೆ ಕೆಲವು ದಿಟ್ಟ ಬದ್ಧತೆಗಳನ್ನು ಹೊಂದಿದೆ” ಎಂದು ಫ್ಲಿಪ್‌ಕಾರ್ಟ್‌ನ ಸುಸ್ಥಿರತೆಯ ನಿರ್ದೇಶಕಿ ಧಾರಶ್ರೀ ಪಾಂಡಾ ವಿವರಿಸುತ್ತಾರೆ. “ನಮಗೆ ಆರೋಗ್ಯಕರ ಮತ್ತು ಸುಸ್ಥಿರ ಜೀವನ ಪರಿಸರ ವ್ಯವಸ್ಥೆಯನ್ನು ರಚಿಸುವುದು ನಿಜವಾಗಿಯೂ ಈ ದೊಡ್ಡ ಗುರಿಯ ಒಂದು ಭಾಗವಾಗಿದೆ ಮತ್ತು ಸಂಪೂರ್ಣ ಮೌಲ್ಯ ಸರಪಳಿಯನ್ನು ಒಟ್ಟುಗೂಡಿಸಲು ನಮ್ಮ ಎಲ್ಲಾ ಗ್ರಾಹಕರು, ಪೂರೈಕೆದಾರರು, ಕ್ಲೈಮೇಟ್‌ ಪ್ರ್ಯಾಕ್ಟೀಷನರ್‌ಗಳು ಮತ್ತು ಥಿಂಕ್ ಟ್ಯಾಂಕ್‌ಗಳೊಂದಿಗೆ ಕೆಲಸ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಬೀಜ ಬಾಂಬ್ ಅಥವಾ ಸೀಡ್‌ ಬಾಂಬ್‌ ಸ್ಫೋಟ ಉಪಕ್ರಮದ ನೇರ ಪರಿಣಾಮವಾಗಿದೆ.

ಉತ್ತರಾಖಂಡದ ಚಮೋಲಿಯ ಪೀಡಿತ ಹಳ್ಳಿಗಳಲ್ಲಿ ಮರಗಳನ್ನು ನೆಡುವ ಬದ್ಧತೆಯನ್ನು ಅನುಸರಿಸಲು ಮತ್ತು ಬದುಕಲು ಸಿದ್ಧರಾಗಿರುವ ತಂಡವು ಯೋಜನೆಯನ್ನು ಕಾರ್ಯಗತಗೊಳಿಸಲು ಸರಿಯಾದ ಪಾಲುದಾರರನ್ನು ಗುರುತಿಸಿದೆ – ಗಿವ್ ಫೌಂಡೇಶನ್ ಮತ್ತು ಸಂಕಲ್ಪತರು ಫೌಂಡೇಶನ್.

seed bombing

“ಸೀಡ್ ಬಾಂಬಿಂಗ್ ಯೋಜನೆಯು ಫ್ಲಿಪ್‌ಕಾರ್ಟ್ ಫೌಂಡೇಶನ್‌ನ ಬಹುಪಾಲು ತತ್ವಕ್ಕೆ ಬದ್ಧವಾಗಿದೆ. ಎಲ್ಲೆಡೆ ಹಸಿರಾಗಿಸುವುದು ಮತ್ತು ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಒಮ್ಮೆ ನಾವು ಮಣ್ಣಿನ ಸವೆತವನ್ನು ಕಡಿಮೆ ಮಾಡಿದರೆ, ಅದು ಹಿಮಾಲಯದ ಬೆಲ್ಟ್‌ನ ಭೂಕುಸಿತ ಪೀಡಿತ ಪ್ರದೇಶಗಳನ್ನು ಸುಸ್ಥಿರಗೊಳಿಸುತ್ತದೆ,” ಎಂದು ಪೂಜ ವಿವರಿಸುತ್ತಾರೆ.

ಪ್ರಸ್ತುತ ಮಾಡಬೇಕಿರುವ ಕಾರ್ಯವೆಂದರೆ, 63 ಹಳ್ಳಿಗಳಲ್ಲಿ 1 ಮಿಲಿಯನ್ ಸ್ಥಳೀಯ ಸೀಡ್‌ ಬಾಲ್‌(ಬೀಜದ ಉಂಡೆ)ಗಳನ್ನು ಚದುರಿಸುವುದು. ಸಮುದಾಯದ ಸಹಭಾಗಿತ್ವವನ್ನು ಸಕ್ರಿಯಗೊಳಿಸುವ ಮೂಲಕ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಹಳ್ಳಿಗಳ ಮಹಿಳೆಯರು ಯೋಜನೆಯ ಯಶಸ್ಸಿಗಾಗಿ ಕೈಜೋಡಿಸಲಿದ್ದಾರೆ. ಫ್ಲಿಪ್‌ಕಾರ್ಟ್ ಮತ್ತು ಅದರ ಪಾಲುದಾರ ಎನ್‌ಜಿಒಗಳು ಸಹ ಡ್ರೋನ್‌ಗಳನ್ನು ಬಳಸುವ ಮೂಲಕ, ಉಪಕ್ರಮದ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವವನ್ನು ವಿಸ್ತರಿಸಿದವು. ಈಗ, ಚಮೋಲಿಯ ಅತ್ಯಂತ ಪ್ರಯಾಸದ ಭಾಗಗಳಲ್ಲಿಯೂ ಸಹ ಸೀಡ್‌ ಬಾಲ್‌ಗಳನ್ನು ಪ್ರಯೋಗಿಸಬಹುದಾಗಿದ್ದು, ಸುಮಾರು 300 ಕೆಜಿ ಸೀಡ್‌ ಬಾಲ್‌ಗಳನ್ನು ಚಮೋಲಿಯಾದ್ಯಂತ ಡ್ರೋನ್‌ಗಳ ಮೂಲಕ ಹರಡಲಾಯಿತು.

ಈ ಚಟುವಟಿಕೆಯು ಸೀಡ್‌ಬಾಲ್‌ಗಳನ್ನು ತಯಾರಿಸಲು ತರಬೇತಿ ಪಡೆದ ಅನೇಕ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿತು. “ಸ್ಥಳೀಯ ಗ್ರಾಮಸ್ಥರಿಂದ ಸುಮಾರು 25 ರಿಂದ 30 ಮಹಿಳೆಯರಿಗೆ ಈ ಸೀಡ್ ಬಾಲ್ ತಯಾರಿಸಲು ತರಬೇತಿ ನೀಡಲಾಗಿದೆ. ನಾವು ಅವುಗಳನ್ನು ಸಮುದಾಯದ ಸದಸ್ಯರಿಗೆ ವಿತರಿಸಿದ್ದೇವೆ, ಇದರ ಜೊತೆಗೆ, ನಮ್ಮ ಅನುಕೂಲಕ್ಕಾಗಿ ಡ್ರೋನ್‌ಗಳನ್ನು ಬಳಸಿದ್ದೇವೆ,”ಎಂದು ಪೂಜಾ ತಿಳಿಸಿದ್ದಾರೆ.

ಹಸಿರು ನಿಯೋಗ

ನಡುವೆ 3 ಮತ್ತು 4 ಲಕ್ಷ ಮರಗಳು ಬೆಳೆಯುವ ನಿರೀಕ್ಷೆಯಿದೆ< /a> ಸೀಡ್ ಬಾಂಬಿಂಗ್ ಯೋಜನೆಯಿಂದ, ಪ್ರದೇಶದಲ್ಲಿ ಉಂಟಾದ ಹೆಚ್ಚಿನ ಹಾನಿಯನ್ನು ಸಮರ್ಥವಾಗಿ ರದ್ದುಗೊಳಿಸುತ್ತದೆ. ಈ ಯೋಜನೆಯ ಮೂಲಕ, ಫ್ಲಿಪ್‌ಕಾರ್ಟ್ ಮತ್ತು ಅದರ ಪಾಲುದಾರರು 95,788 tCO2e ಹೊರಸೂಸುವಿಕೆಯ ಪರಿಣಾಮವನ್ನು ಸೃಷ್ಟಿಸಲು ಆಶಿಸಿದ್ದಾರೆ (ನೆಟ್ಟಿರುವ ಮರಗಳ ಜೀವಿತಾವಧಿಯಲ್ಲಿ) ಜೊತೆಗೆ ತಲೆಮಾರುಗಳವರೆಗೆ ಇಲ್ಲಿನ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ.

“ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ರಾಜ್ಯದ ಗ್ರಾಮೀಣ ಭಾಗದ ಅನೇಕ ಮಹಿಳೆಯರಿಗೆ, ಈ ಪ್ರಯತ್ನವು ಅವರ ಜೀವನದ ಗುಣಮಟ್ಟವನ್ನು ಹೆಚ್ಚು ಸುಧಾರಿಸಿದೆ. ಕಾರ್ಖಾನೆಗಳು ಸ್ಥಗಿತಗೊಳ್ಳುವುದರೊಂದಿಗೆ, ಅನೇಕ ಮಹಿಳೆಯರಿಗೆ ಆದಾಯದ ಮಾರ್ಗಗಳಿಲ್ಲ, ಆದರೆ ಈ ಯೋಜನೆಯು ಅವಕಾಶವನ್ನು ಒದಗಿಸಿತು. ಈಗ, ಉದ್ಯೋಗದೊಂದಿಗೆ, ಈ ಮಹಿಳೆಯರು ತಮ್ಮ ಷರತ್ತುಗಳ ಮೇಲೆ ಜೀವನ ನಡೆಸಲು ಮತ್ತು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಬೇಕಾದ ಹಣವನ್ನು ಹೊಂದಿದ್ದಾರೆ, ”ಎಂದು ಸಂಕಲ್ಪತರು ಫೌಂಡೇಶನ್‌ನ ಪ್ರತಿನಿಧಿ ಹೇಳುತ್ತಾರೆ.

63 ಹಳ್ಳಿಗಳು, 27,000 ಫಲಾನುಭವಿಗಳು ಮತ್ತು 1.1 ಮಿಲಿಯನ್ ಸ್ಥಳೀಯ ಸೀಡ್‌ ಬಾಲ್‌ಗಳ ಎಸೆತ – ಸೀಡ್‌ ಬಾಲ್‌ ಎಸೆತ ಯೋಜನೆಯು ಒಂದು ಭರವಸೆಯಾಗಿದ್ದು, ಭೂಮಿ ಹಾಗೂ ಸಮುದಾಯಗಳಿಗಾಗಿ ಕೆಲಸ ಮಾಡುವ ಪರಿಣಾಮಕಾರಿ ಮತ್ತು ಬದ್ಧತೆಯ ಕಥೆಯಾಗಿದೆ.

“ನಾವು ನಿಜವಾಗಿಯೂ ತಳಮಟ್ಟದ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಸಮರ್ಥರಾಗಿದ್ದೇವೆ ಮತ್ತು ಈ ಮಧ್ಯಸ್ಥಗಾರರು ಇಂದು ಪರಿಸರ ರಾಯಭಾರಿಗಳು ಅಥವಾ ಹಸಿರು ಯೋಧರಾಗಿ ಹೊರಹೊಮ್ಮಿದ್ದಾರೆ” ಎಂದು ಪೂಜಾ ಹೇಳುತ್ತಾರೆ.

ಸುಸ್ಥಿರತೆ ಮತ್ತು ಹಸಿರು ಭೂಮಿಯನ್ನು ನಿರ್ಮಿಸುವ ಕುರಿತು ಹೆಚ್ಚಿನ ಕಥೆಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ /a>.

Enjoy shopping on Flipkart