ನಮ್ಮಲ್ಲಿ ಬಹುತೇಕರಿಗೆ ಲಾಕ್‌ಡೌನ್ ಸಮಯದಲ್ಲಿ ದಿನಸಿ ಮತ್ತು ಬೇರೆ ಪದಾರ್ಥಗಳು ಸಿಗುವುದು ಕಷ್ಟವಾಗಿದ್ದಾಗ, ಭಾರತದಾದ್ಯಂತ ಮುದ್ದಿನ ಪ್ರಾಣಿಗಳ ಮಾಲೀಕರು ಆ ಪ್ರಾಣಿಗಳಿಗೆ ಬೇಕಾದ ಪದಾರ್ಥಗಳನ್ನು ಹೇಗೆ ಪಡೆಯುವುದು ಎಂದು ತಿಳಿದುಕೊಳ್ಳುವ ಹೆಚ್ಚಿನ ಶ್ರಮವನ್ನು ಅನುಭವಿಸಬೇಕಾಯಿತು. ಬಹುತೇಕ ಫ್ಲಿಪ್ಕಾರ್ಟ್‌ನಲ್ಲಿ ಆನ್ಲೈನ್‌ನಲ್ಲಿ ಕಾರ್ಯವಹಿಸುವ ʼಫುಡಿ ಪಪ್ಪೀಸ್ ಗ್ರೂಪ್ʼ ಎಂಬ ಚಿಕ್ಕ ಕಂಪನಿಯು ಮುದ್ದಿನ ಪ್ರಾಣಿಗಳ ಮಾಲೀಕರಿಗೆ ಅವರ ಪ್ರಾಣಿಗಳಿಗೆ ಬೇಕಾದ ಎಲ್ಲ ಪದಾರ್ಥಗಳೂ ಸಿಗುವುದರಿಂದ ಅವು ಸಂತೋಷವಾಗಿ ಮತ್ತು ಆರೋಗ್ಯವಾಗಿರುವಂತೆ ನೋಡಿಕೊಂಡರು. ಅವರ ಕತೆಯನ್ನು ಓದಿ.
ಕೋವಿಡ್-೧೯ ಜಾಗತಿಕ ಮಾಹಾಮಾರಿಯಿಂದ ಲಾಕ್‌ಡೌನ್ ಶುರುವಾದಾಗ ಅನೇಕ ಜನರಿಗೆ ದಿನಸಿ ಮತ್ತಿತರ ಪದಾರ್ಥಗಳನ್ನು ಕೊಂಡುಕೊಳ್ಳಲು ತಮ್ಮ ಮನೆಗಳಿಂದ ಆಚೆ ಹೋಗುವುದು ಕಷ್ಟವಾಗಿತ್ತು ಅಥವ ಅಸಾಧ್ಯವಾಗಿತ್ತು. ಅಂತಹ ಜನರಲ್ಲಿ ಮುದ್ದಿನ ಪ್ರಾಣಿಗಳ ಮಾಲೀಕರೂ ಇದ್ದರು. ಅವರ ಮುದ್ದಿನ ಪ್ರಾಣಿಗಳೂ ಕೂಡ ಬುದ್ಧಿಪೂರ್ವಕವಲ್ಲದೆ ಕ್ವಾರನ್ಟೈನ್‌ಗೆ ಒಳಪಟ್ಟವು. ಅವರಿದ್ದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಮುದ್ದು ಪ್ರಾಣಿಗಳ ಅಂಗಡಿಗಳು ಮಾರಣಾಂತಿಕವಾದ ಕೊರೊನ ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು ಮುಚ್ಚಿದ್ದವು. ಆದರೆ, ಮುದ್ದಿನ ಪ್ರಾಣಿಗಳಿಗೆ ಬೇಕಾದ ಪದಾರ್ಥಗಳನ್ನು ಆನ್ಲೈನ್‌ನಲ್ಲಿ ಮಾರುತ್ತಿದ್ದ ಫುಡ್ ಪಪ್ಪೀಸ್ ಗ್ರೂಪ್ ಎಂಬ ಒಂದು ಸಣ್ಣ ಕಂಪನಿಯು ಮುದ್ದಿನ ಪ್ರಾಣಿಗಳ ಪೋಷಕರು ತಮ್ಮ ಮುದ್ದಿನ ಪ್ರಾಣಿಗಳು ಆರೋಗ್ಯಕರವಾಗಿರುವಂತೆ ಮತ್ತು ಚೆನ್ನಾಗಿ ಊಟಮಾಡುವಂತೆ ನೋಡಿಕೊಳ್ಳಲು ಸಹಾಯ ಮಾಡಿದರು. ಇದು ಅವರ ಕತೆ.
“ನನ್ನ ಹೆಸರು ಅಂಕಿತ್ ಪಹುಜ. ನನಗೆ ನಿಜವಾಗಿಯೂ ಪ್ರಣಿಗಳು, ಹಕ್ಕಿಗಳು ಮತ್ತು ಮೂನುಗಳು ಇಷ್ಟ. ನನಗೆ ಸಾಧ್ಯವಾದಾಗಲೆಲ್ಲ ನಾನು ಅವುಗಳಿಗೆ ನೀರು ಮತ್ತು ಆಹಾರವನ್ನು ಇಡುತ್ತೇನೆ. ನನಗೆ ನಾಲ್ಕೂವರೆ ವರ್ಷಗಳ ಹಿಂದೆ ಮುದ್ದಿನ ಪ್ರಾಣಿಗಳ ಮಾಲೀಕರಿಗೆ ಆ ಪ್ರಾಣಿಗಳಿಗೆ ಬೇಕಾದ ಪದಾರ್ಥಗಳನ್ನು ಒದಗಿಸುವ ಯೋಚನೆ ಬಂದಿತು.
“ಈ ವಿಚಾರವನ್ನು ನಾನು ನನ್ನ ವ್ಯಾಪಾರದ ಪಾಲುದಾರರಾದ ಸಿದ್ಧಾರ್ಥ್ ಗುಲಟಿ ಮತ್ತು ವರುಣ್ ಕಾಲ್ರ ಅವರೊಂದಿಗೆ ಪರಿಶೋಧಿಸಿದೆ ಮತ್ತು #ಸ್ವಯಂ-ನಿರ್ಮಿತ ಫ್ಲಿಪ್ಕಾರ್ಟ್ ಮಾರಾಟಗಾರ ಆದೆ. ನಾನು ಮುದ್ದಿನ ಪ್ರಾಣೀಗಳಿಗೆ ಆಹಾರ ಮತ್ತು ಪರಿಕರಗಳನ್ನು ಮಾರುತ್ತೇನೆ. ಈಗ ವ್ಯಾಪಾರದ ೯೫%ರಷ್ಟು ಪ್ರಮಾಣ ಆನ್ಲೈನ್ ಮಾರಾಟದ ಮಾದರಿಗೆ ಹೊಂದಿಕೊಂಡಿದೆ.
“ಈ ಲಾಕ್‌ಡೌನ್ ಅವಧಿಯಲ್ಲಿ ಸಹಜವಾಗಿಯೆ ಯಾವಾಗಲೂ ಸಿಗುವುದಕ್ಕಿಂತ ಹೆಚ್ಚು ಬೇಡಿಕೆಗಳು ಬಂದವು. ಮುದ್ದಿನ ಪ್ರಾಣಿಗಳ ಮಾಲೀಕರು ತಮ್ಮ ಪ್ರಾಣಿಗಳ ಆರೈಕೆ ಮಾಡಲು ಯಾವುದೇ ತೊಂದರೆಗಳನ್ನು ಅನುಭವಿಸಬಾರದು ಎನ್ನುವುದಷ್ಟೆ ನಮ್ಮ ಗುರಿ. ಆದ್ದರಿಂದ ಈ ಪದಾರ್ಥಗಳಿಗೆ ನಮ್ಮ ಬೆಲೆಗಳು ಅಷ್ಟೆ ಇರುವಂತೆ ನಾವು ನೋಡಿಕೊಂಡೆವು. ಪ್ರಸ್ತುತ ಸಂದರ್ಭದಿಂದ ಲಾಭ ಮಾಡಿಕೊಳ್ಳುವ ಉದ್ದೇಶ ನಮಗಿಲ್ಲ.
“ಬೇಡಿಕೆಯಲ್ಲಿ ಹೆಚ್ಚಳವಿರುವುದರಿಂದ ನಾವು ಹೆಚ್ಚು ದಾಸ್ತಾನು ಇಟ್ಟುಕೊಂಡೆವು. ನಮ್ಮ ಅರ್ಧದಷ್ಟು ದಾಸ್ತಾನು ತೀರಿಹೋಗಿದೆ. ನಮ್ಮ ಪ್ರದೇಶಕ್ಕೆ ಹತ್ತಿರವಿರುವ ಮಾರಾಟಗಾರರಿಂದ ದಾಸ್ತಾನನ್ನು ತರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಪೆಡಿಗ್ರಿಯಂತಹ ಆಮದು ಮಾಡಿದ ಉತ್ಪನ್ನಗಳನ್ನೂ ಮಾರುತ್ತೇವೆ. ಈ ಉತ್ಪನ್ನಗಳಿಗೆ ಮಾರಾಟಗಾರರು ಹೆಚ್ಚು ಹಣ ಕೇಳುತ್ತಿದ್ದಾರೆ, ಆದರೆ ಈ ಪರಿಸ್ಥಿತಿ ಬೇಗನೆ ಸರಿಯಾಗುತ್ತದೆಂದು ನಾವು ಆಶಿಸುತ್ತೇವೆ.
“ಈ ಮಹಾಮಾರಿಯ ಹೊತ್ತಿನಲ್ಲಿ ನಾವು ಸುರಕ್ಷಿತವಾಗಿರಲು ಎಲ್ಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುತ್ತಿದ್ದೇವೆ. ಜೊತೆಗೆ, ನಮ್ಮ ಗಿರಾಕಿಗಳು ಮತ್ತು ಮುದ್ದಿನ ಪ್ರಾಣಿಗಳೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಿದ್ದೇವೆ. ನಾವು ಸ್ಯಾನಿಟೈಸರ್‌ಗಳನ್ನು ಬಳಸುತ್ತೇವೆ ಮತ್ತು ನಮ್ಮ ಕಾರ್ಯಸ್ಥಳವನ್ನು ಎರಡು ಗಂಟೆಗಳಿಗೊಮ್ಮೆ ಸ್ಯಾನಿಟೈಸ್ ಮಾಡುತ್ತೇವೆ. ಪ್ರವೇಶದಲ್ಲಿ ನಾವು ಸ್ಯಾನಿಟೈಸರ್‌ಗಳು ಮತ್ತು ಸೋಪ್ ಡಿಸ್ಪೆನ್ಸ್‌ರ್‌ಗಳನ್ನು ಇಟ್ಟಿದ್ದೇವೆ. ನಮ್ಮ ಸ್ಥಳವನ್ನು ಪ್ರವೇಶಿಸುವ ಪ್ರತಿಯೊಬ್ಬರೂ ಒಂದು ಇನ್ಫ್ರರೆಡ್ ಥರ್ಮಾಮೀಟರ್‌ನಿಂದ ತಾಪಮಾನ ಪರೀಕ್ಷೆಗೆ ಒಳಪಡುತ್ತಾರೆ. ಮಾಸ್ಕ್‌ಗಳು ಕಡ್ಡಾಯ; ಅವುಗಳಿಲ್ಲದೆ ಯಾರೂ ಒಳಗೆ ಬರುವಂತಿಲ್ಲ. ನಾವು ನಮ್ಮ ಕೆಲಸಗಾರರನ್ನು ನಮ್ಮ ಕಾರಿನಲ್ಲಿ ಕಾರ್ಯಸ್ಥಳಕ್ಕೆ ಕರೆದುಕೊಂಡು ಬರುತ್ತೇವೆ.
“ಮೊದಲನೆಯ ಬಾರಿ ಲಾಕ್‌ಡೌನ್ ಮಾಡಿದಾಗ ನಮ್ಮ ಕೆಲಸಗಳನ್ನು ಶುರುಮಾಡಿಕೊಳ್ಳಲು ಕಷ್ಟವಾಯಿತು. ಆದರೆ, ಫ್ಲಿಪ್ಕಾರ್ಟ್‌ನ ಸಹಾಯದಿಂದ ನಾವು ಜಿಲ್ಲಾಧಿಕಾರಿಯವರಿಂದ ಅನುಮತಿಯೊಂದಿಗೆ ನಮ್ಮ ವ್ಯಾಪಾರವನ್ನು ನಡೆಸಲು ಒಪ್ಪಿಗೆ ಪಡೆದೆವು.
ಮಾರ್ಚ್ ೨೨ರಿಂದ ಏಪ್ರಿಲ್ ೧೦ರ ವರೆಗೆ ನಾವು ಸಂಪೂರ್ಣವಾಗಿ ಮುಚ್ಚಿದ್ದೆವು. ಆದರೆ, ಫ್ಲಿಪ್ಕಾರ್ಟ್‌ನ ನಮ್ಮ ಲೆಕ್ಕ ವ್ಯವಸ್ಥಾಪಕರು ಕೋವಿಡ್-೧೯ ಮಹಾಮಾರಿಯ ಕಾಲದಲ್ಲಿ ನಮಗೆ ಬಹಳ ಸಹಾಯ ಮಾಡಿದರು. ಅವರು ನಮಗೆ ಯಾವ ಉತ್ಪನ್ನಗಳನ್ನು ಸರಬರಾಜು ಮಾಡಬಹುದು ಎಂದು ತಿಳಿಸಿದರು ಮತ್ತು ಆಕೆಯ ಮಾರ್ಗದರ್ಶನದಂತೆ ನಾವು ನಮ್ಮ ಉತ್ಪನ್ನಗಳ ಪಟ್ಟಿಯನ್ನು ನವೀಕರಿಸಿದೆವು. ನಮಗೆ ಬರುವ ಪಾವತಿಗಳು ದಿನ ಬಿಟ್ಟು ದಿನ ಬರುವಂತೆ ಫ್ಲಿಪ್ಕಾರ್ಟ್ ನೋಡಿಕೊಂಡಿತು.
“ನೀವು ಆನ್ಲೈನಲ್ಲಿ ಬೇಡಿಕೆ ಸಲ್ಲಿಸಿದರೆ, ಉತ್ಪನ್ನಗಳು ನೇರ ನಿಮ್ಮ ಮನೆ ಬಾಗಿಲಿಗೆ ಬರುತ್ತವೆ. ಯಾವುದೆ ಸಂಪರ್ಕ ಅಥವ ಸೋಂಕಿನ ಅಪಾಯವಿರುವುದಿಲ್ಲ ಮತ್ತು ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಈ ಸಮಯದಲ್ಲಿ ನಿಜವಾಗಿಯೂ ಈ-ಕಾಮರ್ಸ್ ಬಹಳ ಉಪಯುಕ್ತ. ಆದ್ದರಿಂದ, ದಯವಿಟ್ಟು ಹೊರಗಡೆ ಹೋಗಬೇಡಿ. ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳಿ. ಮತ್ತು ಆರೋಗ್ಯಕರವಾಗಿರಿ”.
ಮುದ್ದಿನ ಪ್ರಾಣಿಗಳು ಪ್ರೀತಿ ಮತ್ತು ಸ್ನೇಹದ ಮೂಲವಾಗಿರುವುದರ ಜೊತೆಗೆ ನಮಗೆ ಮಾನಸಿಕ ಒತ್ತಡ ಮತ್ತು ಆತಂಕಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಅವು ಸಂಗಾತಿಯಾಗಿ ಪ್ರೀತಿ, ರಕ್ಷಣೆಯನ್ನು ನೀಡಿ ತಮ್ಮ ಮಾಲೀಕರ ಜೊತೆ ಅನನ್ಯವಾದ ಬಂಧನಗಳನ್ನು ಉಂಟುಮಾಡುತ್ತವೆ. ಆದ್ದರಿಂದ ಅಂಕಿತ್ ಮತ್ತು ಅವರ ಪಾಲುದಾರರಾದ ಸಿದ್ಧಾರ್ಥ್ ಮತ್ತು ವರುಣ್ ಅವರಂತಹ ಮಾರಾಟಗಾರರಿರುವುದರಿಂದ ಮುದ್ದಿನ ಪ್ರಾಣಿಗಳಿಗೆ ಬೇಕಾದ ಪದಾರ್ಥಗಳನ್ನು ಆನ್ಲೈನ್‌ನಲ್ಲಿ ಮಾರುವುದರಿಂದ ಈ ದುಸ್ತರವಾದ ಜಾಗತಿಕ ಮಹಾಮಾರಿಯ ಸಮಯದಲ್ಲಿ ನಮ್ಮ ದೇಶದ ಮುದ್ದಿನ ಪ್ರಾಣಿಗಳ ಮಾಲೀಕರು ಕೂಡ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ; ಅವರ ಮುದ್ದಿನ ಪ್ರಾಣಿಗಳೂ ಅವರ ಪಕ್ಕದಲ್ಲಿ ವಿಶ್ರಾಂತಿ ಪಡೆದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಎಟುಕುವ ಬೆಲೆಗಳಲ್ಲಿ ಅನುಭವಿಸುತ್ತಿವೆ!
ಜುಶ್ನು ಮುರಳಿಯವರಿಗೆ ಹೇಳಿದಂತೆ; ಪಲ್ಲಿವಿ ಸುಧಾಕರ್ ಅವರಿಂದ ಹೆಚ್ಚಿನ ಮಾಹಿತಿಯೊಂದಿಗೆ.