ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್‌ಗಳು: ಬಹು-ಬ್ರಾಂಡ್ ಪ್ರತಿಫಲ ಪರಿಸರ ವ್ಯವಸ್ಥೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

Read this article in বাংলা | English | ગુજરાતી | हिन्दी | தமிழ் | मराठी

ನಿಮ್ಮ ನೆಚ್ಚಿನ ಫ್ಲಿಪ್‌ಕಾರ್ಟ್ ಪ್ಲಸ್ ಕಾಯಿನ್‌ಗಳು ಈಗ ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್‌ಗಳಾಗಿವೆ! ಏನು ಬದಲಾಗಿದೆ ಮತ್ತು ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್‌ಗಳೊಂದಿಗೆ ನೀವು ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ತಿಳಿಯಲು ಮುಂದೆ ಓದಿ.

Flipkart SuperCoins

ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ಸ್ ಎನ್ನುವುದು ಲಕ್ಷಾಂತರ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಪ್ರಯೋಜನಗಳನ್ನು ಒದಗಿಸಲು ರೂಪಿಸಲಾದ ಅದರ ರೀತಿಯ ಮೊದಲ ಪ್ರತಿಫಲ ಪರಿಸರ ವ್ಯವಸ್ಥೆಯಾಗಿದೆ. ಗ್ರಾಹಕರು ಈಗ ತಾವು ಇಷ್ಟಪಡುವ ಎಲ್ಲವನ್ನೂ ಮಾಡಿದ್ದಕ್ಕಾಗಿ ಪ್ರತಿಫಲ ಪಡೆಯುತ್ತಾರೆ, ಹಾಗೂ ವಿವಿಧ ರೀತಿಯ ಬಹುಮಾನ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳಬಹುದು, ಮತ್ತು ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ನಿರ್ವಹಿಸಲಾಗುತ್ತದೆ. ಫ್ಯಾಶನ್ ಉತ್ಪನ್ನಗಳನ್ನು ಖರೀದಿಸುವುದು, ಔಷಧಿಗಳನ್ನು ಖರೀದಿಸುವುದು, ಹೋಟೆಲ್ ಕೊಠಡಿ ಅಥವಾ ವಿಮಾನ ಟಿಕೆಟ್ ಅನ್ನು ಕಾಯ್ದಿರಿಸುವುದು ಮುಂತಾದ ಹಲವಾರು ಅವಶ್ಯಕತೆಗಳಿಗಾಗಿ ಫ್ಲಿಪ್‌ಕಾರ್ಟ್ ನಿಮ್ಮ ಏಕ ಛತ್ರ ತಾಣವಾಗಲಿದೆ!

ಈ ಅನನ್ಯವಾದ ಪ್ರತಿಫಲ ಪರಿಸರ ವ್ಯವಸ್ಥೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲದಕ್ಕೂ ನಿಮ್ಮ ಮಾರ್ಗದರ್ಶಿ ಇಲ್ಲಿದೆ:

ಸೂಪರ್‌ಕಾಯಿನ್‌ಗಳು ಇತರ ಪ್ರತಿಫಲ ಕಾರ್ಯಕ್ರಮಗಳಿಗಿಂತ ಹೇಗೆ ಭಿನ್ನವಾಗಿವೆ?

ಸಾಂಪ್ರದಾಯಿಕ ಪ್ರತಿಫಲ ಕಾರ್ಯಕ್ರಮಗಳು ಅಂಕಗಳನ್ನು ಪ್ರತಿಫಲಗಳಾಗಿ ಪರಿವರ್ತಿಸಲು ಸೀಮಿತ ಅವಕಾಶಗಳನ್ನು ನೀಡುವುದರಿಂದ ಹಾಗೂ ತಮ್ಮದೇ ವ್ಯಾಪಾರ ಪರಿಸರ ವ್ಯವಸ್ಥೆಯೊಳಗೆ ನಿರ್ಬಂಧಗಳನ್ನು ಹೊಂದಿರುವುದರಿಂದ ಅವುಗಳಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಫ್ಲಿಪ್‌ಕಾರ್ಟ್‌ನ ಸೂಪರ್‌ಕಾಯಿನ್ ಪರಿಸರ ವ್ಯವಸ್ಥೆಯನ್ನು ಆಹಾರ, ಪ್ರಯಾಣ ಮತ್ತು ಮನರಂಜನಾ ವಿಭಾಗಗಳಲ್ಲಿ ವ್ಯಾಪಕ ಶ್ರೇಣಿಯ ಪಾಲುದಾರರನ್ನು ಪರಿಚಯಿಸುವ ಮೂಲಕ ಈ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ನಿವಾರಿಸಲು ಪರಿಚಯಿಸಲಾಗಿದೆ.

ನಾನು ಸೂಪರ್‌ಕಾಯಿನ್‌ಗಳನ್ನು ಹೇಗೆ ಗಳಿಸಬಹುದು?

ಫ್ಲಿಪ್‌ಕಾರ್ಟ್‌ನಲ್ಲಿ ಅಥವಾ ನಿಮ್ಮ ಎಲ್ಲಾ ದೈನಂದಿನ ಅಗತ್ಯಗಳನ್ನು ಪೂರೈಸುವ ಯಾವುದೇ ಸೂಪರ್‌ಕಾಯಿನ್ ಪಾಲುದಾರರಲ್ಲಿ ಶಾಪಿಂಗ್ ಮಾಡುವ ಮೂಲಕ ಸೂಪರ್‌ಕಾಯಿನ್‌ಗಳನ್ನು ಗಳಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವುದರ ಜೊತೆಗೆ, ನೀವು ಯಾವುದೇ ಸಮಯದಲ್ಲೂ ಫೋನ್‌ಪೇ ಓಲಾ , ಅರ್ಬನ್ ಕ್ಲ್ಯಾಪ್ , 1ಎಮ್‌ಜಿ , ಓಯೋ ಗಳಂಥ ಬ್ರಾಂಡ್ ಪಾಲುದಾರರನ್ನು ಬಳಸಿದಾಗಲೆಲ್ಲ Zoomcar ಪ್ರತಿ ಖರೀದಿಯಲ್ಲೂ ನಿಮಗೆ ಸೂಪರ್‌ಕಾಯಿನ್‌ಗಳೊಂದಿಗೆ ಪ್ರತಿಫಲ ಸಿಗುತ್ತದೆ! ಸೂಪರ್‌ಕಾಯಿನ್ ಗಳಿಸುವ ಪ್ರಕ್ರಿಯೆಯು ಅತ್ಯಂತ ಸುಗಮ ಮತ್ತು ನಿರಾಯಾಸವಾಗಿದೆ. ಗ್ರಾಹಕರು ಯಾವುದೇ ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಂಡರೂ ಸೂಪರ್‌ಕಾಯಿನ್ಸ್ ಪರಿಸರ ವ್ಯವಸ್ಥೆಯು ಅವರಿಗೆ ತೆರೆದಿರುತ್ತದೆ. ಇದರರ್ಥ ಗ್ರಾಹಕರು ತಮ್ಮ ನಗದು-ಮಾತ್ರದ ಪಾವತಿಗಳಲ್ಲೂ ಸೂಪರ್‌ಕಾಯಿನ್‌ಗಳನ್ನು ಗಳಿಸುತ್ತಾರೆ!

ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್‌ಗಳನ್ನು ಗಳಿಸುವುದು ಅನುಕೂಲಕರವೇ?

ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಸೂಪರ್‌ಕಾಯಿನ್ಸ್ ಪ್ರತಿಫಲ ಕಾರ್ಯಕ್ರಮಕ್ಕೆ ಗ್ರಾಹಕರಿಂದ ಯಾವುದೇ ಹೆಚ್ಚುವರಿ ಪ್ರಯತ್ನಗಳು (ನೋಂದಣಿಯಂಥದ್ದು) ಅಗತ್ಯವಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಯಾವುದೇ ಶಾಪರ್ ಸೂಪರ್‌ಕಾಯಿನ್‌ಗಳನ್ನು ಗಳಿಸಲು ಅರ್ಹರಾಗಿರುತ್ತಾರೆ, ಮತ್ತು ಇದು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಾಗಲು ಉತ್ತಮ ಸಮಯವಾಗಿದೆ, ಏಕೆಂದರೆ ನೀವು ಪ್ರತಿ ವಹಿವಾಟಿಗೂ 2X ಹೆಚ್ಚಿನ ಸೂಪರ್‌ಕಾಯಿನ್‌ಗಳನ್ನು ಪಡೆಯುತ್ತೀರಿ.

ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರಿಗೆ ಸೂಪರ್‌ಕಾಯಿನ್ ಪ್ರಯೋಜನಗಳೇನು?

  1. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಫ್ಲಿಪ್‌ಕಾರ್ಟ್ ಅಲ್ಲದ ಸದಸ್ಯರಿಗಿಂತ ಎರಡು ಪಟ್ಟು ಸೂಪರ್‌ಕಾಯಿನ್‌ಗಳನ್ನು ಪಡೆಯುತ್ತಾರೆ
  2. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಫ್ಲಿಪ್‌ಕಾರ್ಟ್‌ನಲ್ಲಿ ತಾವು ಮಾಡುವ ಖರೀದಿಗೆ ಸೂಪರ್‌ಕಾಯಿನ್‌ಗಳನ್ನು ತಮ್ಮ ಆದ್ಯತೆಯ ಪಾವತಿ ವಿಧಾನದೊಂದಿಗೆ ಸಂಯೋಜಿಸಬಹುದು
  3. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಸೂಪರ್‌ಕಾಯಿನ್‌ಗಳೊಂದಿಗೆ ‘ಪ್ಲಸ್ ಎಕ್ಸ್‌ಕ್ಲೂಸಿವ್’ ಬಹುಮಾನಗಳನ್ನು ಪಡೆದುಕೊಳ್ಳಬಹುದು

ಸೂಪರ್‌ಕಾಯಿನ್‌ಗಳೊಂದಿಗೆ, ಫ್ಲಿಪ್‌ಕಾರ್ಟ್ ಅನೇಕ ಖರೀದಿಯ ಅವಶ್ಯಕತೆಗಳಿಗಾಗಿ ಏಕ ಛತ್ರ ತಾಣವಾಗುವುದರ ಜೊತೆಗೆ ಗ್ರಾಹಕರ ಪ್ರತಿಫಲಗಳ ಪರಿಸರದಲ್ಲಿ ಕ್ರಾಂತಿ ತರಲು ಸನ್ನದ್ಧವಾಗಿದೆ.

Enjoy shopping on Flipkart