ಸ್ಥಳೀಯ ಮಾರಾಟದಿಂದ ಹಿಡಿದು ರಾಷ್ಟ್ರ ಮಟ್ಟದಲ್ಲಿ ತಲುಪುವುದು : ಫ್ಲಿಪ್ಕಾರ್ಟ್‌ನ ಮಾರಾಟಗಾರ ಮೆಹರ್‌ ಬಾತ್ರಗೆ ತಮ್ಮ ಕುಟುಂಬದ ವ್ಯಾಪಾರದ ಬಗ್ಗೆ ಮಹತ್ವಾಕಾಂಕ್ಷೆಯ ಯೋಜನೆಗಳಿವೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ತಮ್ಮ ತಾತ ಮತ್ತು ತಂದೆ ಕುಟುಂಬದ ವ್ಯಾಪಾರದಲ್ಲಿ ಕೆಲಸ ಮಾಡುವುದನ್ನು ತಮ್ಮ ಬಾಲ್ಯದಿಂದ ನೋಡಿದ್ದ ಮೆಹರ್‌ ಬಾತ್ರ ತಾವೂ ಈ ಉದ್ದಿಮೆಯಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡರು. ಅವರ ಮೊದಲ ಮಟ್ಟದ ವ್ಯಾಪಾರ ಆನ್ಲೈನ್‌ ಮಾರುಕಟ್ಟೆಗೆ ವಿಸ್ತರಿಸುವುದಾಗಿತ್ತು. ಫ್ಲಿಪ್ಕಾರ್ಟ್‌ನ ಮೂಲಕ ತಮ್ಮ ಪಿರಮಿಡ್‌ ಫಾಷನ್ಸ್‌ ಅನ್ನು ಡಿಜಿಟಲ್‌ ಮಾದರಿಗೆ ತೆಗೆದುಕೊಂಡು ಹೋಗಿ ಅವರು ಈಗ ದಿನಕ್ಕೆ ನೂರು ಬೇಡಿಕೆಗಳನ್ನು ಪೂರೈಸುತ್ತಾರೆ! ಅವರು ಮತ್ತು ಅವರ ತಂಡ ತಾವು ಬೆಳೆಯಲು ಈ-ಕಾಮರ್ಸ್‌ ಅನ್ನು ಹೇಗೆ ಬಳಸುತ್ತಾರೆಂದು ತಿಳಿದುಕೊಳ್ಳಲು ಓದಿ.

Flipkart seller

ಮೆಹರ್‌ ಬಾತ್ರ ತಾವು ಒಬ್ಬ ಫ್ಲಿಪ್ಕಾರ್ಟ್‌ ಮಾರಾಟಗಾರ ಎಂದು ಗುರುತಿಸಿಕೊಳ್ಳುವ ಮೊದಲು ಅವರು ತಮ್ಮ ವ್ಯಾಪಾರಿ ವಲಯದ ಬಗ್ಗೆ ಆಗಲೆ ಯೋಜನೆಗಳನ್ನು ಸಿದ್ಧಪಡಿಸಿದ್ದರು. ಮಾರುಕಟ್ಟೆ ನೀಡುವ ಅವಕಾಶಗಳನ್ನು ಬಳಸಿಕೊಳ್ಳಲು ಯೋಚನೆಗಳಿಂದ ತುಂಬಿದ್ದ ಅವರು ತಮ್ಮ ಕುಂಟುಂ ವ್ಯಾಪಾರವಾದ ಪಿರಮಿಡ್‌ ಫ್ಯಾಷನ್ಸ್‌ ಅನ್ನು ಬೇಗನೆ ಸೇರಿಕೊಂಡು ೨೭ನೆಯ ವಯಸ್ಸಿನಲ್ಲಿ ತಮ್ಮ ಛಾಪನ್ನು ಮೂಡಿಸಿದರು.

ಮೆಹರ್‌ ಅವರು ದೆಹಲಿಯಲ್ಲಿ ಹುಟ್ಟಿ ಬೆಳೆದ ಮೂರನೆಯ ತಲೆಮಾರಿನ ಉದ್ಯಮಿ. ಅವರ ವ್ಯಾಪಾರದ ಅಡಿಪಾಯವನ್ನು ಅವರ ತಾತ ರಫ್ತಿಗಾಗಿ ಹೆಂಗಸರ ಒಳ ಉಡುಪುಗಳನ್ನು ತಯಾರಿಸುವುದರ ಮುಖೇನ ೨೫ ವರ್ಷಗಳಿಗೂ ಹಿಂದೆ ಹಾಕಿದರು. ಈ ವ್ಯಾಪಾರವು ಒಂದು ಸಣ್ಣ ಕೊಠಡಿಯಲ್ಲಿ ಬೆರಳೆಣಿಕೆಯಷ್ಟು ಕೆಲಸಗಾರರಿಂದ ಮತ್ತು ಕೆಲವು ಯಂತ್ರಗಳಿಂದ ಶುರುವಾಗಿ ಇವತ್ತು ಹಲವು ಪ್ರದರ್ಶನಾ ಮಳಿಗೆಗಳಿರುವ ಒಂದು ಉತ್ಪಾದನಾ ಉದ್ಯಮವಾಗಿ ಬೆಳೆದಿದೆ. ಈ ಜಿಗಿತವೇ ಮೆಹರ್‌ ಅವರಿಗೆ ಒಬ್ಬ ಫ್ಲಿಪ್ಕಾರ್ಟ್‌ನ ಮಾರಾಟಗಾರರಾಗಿ ಮಾರಾಟದ ಹೊಸ ಅವಕಾಶಗಳನ್ನು ಉಪಯೋಗಿಸಲು ಪ್ರೇರಣೆ ನೀಡಿದೆ.

ಮೆಹರ್‌ ಹೇಳುತ್ತಾರೆ ಅವರ ಗಿರಾಕಿಗಳ ಆನ್ಲೈನ್‌ನಲ್ಲಿರುತ್ತಾರೆ, ಆದ್ದರಿಂದ ಅವರೂ ಅಲ್ಲೇ ಇರಬೇಕಾಗುತ್ತದೆ. ಭಾರತದಾದ್ಯಂತ ಮಾರುಕಟ್ಟೆ ಒದಗಿಸುವ ಜೊತೆಗೆ ಫ್ಲಿಪ್ಕಾರ್ಟ್‌ ಈ-ಕಾಮರ್ಸ್‌ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲು ವ್ಯಾಪಾರಗಳಿಗೆ ಎಲ್ಲ ಬೆಂಬಲವನ್ನೂ ನೀಡುತ್ತದೆ.

ಒಂದು ಪರಂಪರೆಯನ್ನು ಮುಂದುವರೆಸುವುದು

ಹಿಂದಿನ ಕಾಲದ ಬಗ್ಗೆ ಯೋಚಿಸುತ್ತ ಮೆಹರ್‌ ತಮ್ಮ ತಾತ ಅವರಿಗೆ ದಾಟಿಸಿದ ಒಂದು ಮುತ್ತಿನಂತಹ ಸೂಕ್ತಿಯನ್ನು ನೆನಪಿಸಿಕೊಳ್ಳುತ್ತಾರೆ : ಒಂದು ವ್ಯಾಪಾರವನ್ನು ನಿರ್ಮಿಸುವುದು ಸತತ ಪರಿಶ್ರಮದ ಕೆಲಸ – ಅದಕ್ಕೆ ಸಮಯ ಬೇಕಾಗುತ್ತದೆ. ಆಧುನಿಕ ವ್ಯಾಪಾರಗಳ ವೇಗದ ವಾತಾವರಣದಲ್ಲೂ ಅವರು ಉದ್ಯಮದ ಸವಾಲುಗಳನ್ನು ದಾಟಲು ಈ ಮಾತುಗಳನ್ನು ತಮ್ಮ ಜೊತೆ ಹೊತ್ತುಕೊಂಡಿರುತ್ತಾರೆ. ಅವರ ತಂದೆ ಮತ್ತು ತಾತ ಸಮಯ, ಕೆಲಸ ಮತ್ತು ಶ್ರದ್ಧೆಯನ್ನು ತೊಡಗಿಸಿ ತಮ್ಮ ವಸ್ತ್ರೋದ್ಯಮವನ್ನು ಮುಂದಿನ ಸುತ್ತಿನ ಯಶಸ್ಸಿಗೆ ತೆಗೆದುಕೊಂಡು ಹೋಗಿದ್ದನ್ನು ನೋಡಿತ್ತಿದ್ದ ಮೆಹರ್‌ ಸಹಜವಾಗಿಯೆ ಅವರ ಹೆಜ್ಜೆ ಹಿಡಿದು ಅನುಸರಿಸಿದರು.

ಅವರು ವ್ಯಾಪಾರದ ಆಡಳಿತದಲ್ಲಿ ಬಿಬಿಎ ಪದವಿಯನ್ನು ಪಡೆದು ಅವರು ಈಗಾಗಲೆ ಪರಿಚಯವಿದ್ದ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಬೇಕಾದ ಜ್ಞಾನವನ್ನು ಪಡೆದುಕೊಂಡರು. ತಾವು ಒಬ್ಬ ಫ್ಲಿಪ್ಕಾರ್ಟ್‌ ಮಾರಾಟಗಾರರಾಗಲು ಯಾಕೆ ಆಯ್ಕೆಮಾಡಿದರು ಎಂದು ಮೆಹರ್‌ ಹೇಳುತ್ತಾರೆ : “ಜನ ಫ್ಲಿಪ್ಕಾರ್ಟನ್ನು ಅದರ ಗಿರಾಕಿಗಳಿಗೆ ಸೇವೆ ಮತ್ತು ಗುಣಮಟ್ಟದ ಭರವಸೆಗಾಗಿ ಆರಿಸುತ್ತಾರೆ. ಆದ್ದರಿಂದ, ಬೆಲೆ ಎಟುಕುವಂತಿರುವುದು , ಸುಲಭವಾಗಿ ಸಿಗುವುದು ಮತ್ತು ಗುಣಮಟ್ಟ ಬೇಕಾದ ಗಿರಾಕಿಗಳಿಗೆ ಫ್ಲಿಪ್ಕಾರ್ಟ್‌ ಮೊದಲನೆಯ ಆಯ್ಕೆಯಾಗಿರುತ್ತದೆ”.

ಒಂದು ವರ್ಷಕ್ಕಿಂತ ಸ್ವಲ್ಪವೇ ಹೆಚ್ಚಿನ ಕಾಲವಷ್ಟೆ ಫ್ಲಿಪ್ಕಾರ್ಟ್‌ ಮಾರಾಟಗಾರರಾಗಿರುವ ಮೆಹರ್‌ ಅವರು ಬಟ್ಟೆ ಮತ್ತು ಉಡುಪು ಕೈಗಾರಿಕೆಗೆ ಅಭಿವೃದ್ಧಿ ಹೊಂದುವ ಸಾಮರ್ಥ್ಯವಿದೆ ಎಂದು ನಂಬುತ್ತಾರೆ. ಇವತ್ತು, ಅವರಿಗೆ ೨೦೦ಕ್ಕೂ ಹೆಚ್ಚು ಜನ ಕೆಲಸಮಾಡುವ ಮತ್ತು ೧೮೦ಕ್ಕೂ ಮಿಗಿಲಾಗಿ ಯಂತ್ರಗಳಿರುವ ತಮ್ಮದೇ ತಯಾರಿಕಾ ಉದ್ಯಮದ ಬೆಂಬಲವಿದೆ. ಫ್ಲಿಪ್ಕಾರ್ಟ್‌ ತಮಗೆ ಪೂರ್ಣ ಬೆಂಬಲ ನೀಡುತ್ತಿರುವುದರಿಂದ ಅವರಿಗೆ ಆಕಾಶವೇ ಮಿತಿ ಎಂದು ಗೊತ್ತಿದೆ.

ಒಂದು ಜನತಂತ್ರೀಕರಿಸಿದ ಈ-ಕಾಮರ್ಸ್‌ ವೇದಿಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು

ಮೆಹರ್‌ ಅವರ ಗುರಿ ಸರಳವಾಗಿದೆ : “ನನಗೆ, ಆನ್ಲೈನ್‌ಗೆ ಬರುವುದು ಬೆಳವಣಿಗೆಯ ವಿಷಯವಾಗಿತ್ತು. ನನಗೆ ಒಳ್ಳೆಯ ಬದುಕು ಬೇಕು, ಒಳ್ಳೆಯ ಜೀವನಶೈಲಿಯಿರಬೇಕು ಮತ್ತು ಖ್ಯಾತಿಯನ್ನು ಗಳಿಸಬೇಕು”.

ಅವರ ತಂದೆ ಮತ್ತು ತಾತ ಕಾರ್ಖಾನೆ ಮತ್ತು ಪ್ರದರ್ಶನಾಲಯಗಳನ್ನು ನೋಡಿಕೊಂಡರೆ, ಮೆಹರ್‌ ಆನ್ಲೈನ್‌ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಾರೆ. ಪ್ರಸ್ತುತ, ಈ ಫ್ಲಿಪ್ಕಾರ್ಟ್‌ ಮಾರಾಟಗಾರರು ಪಾಶ್ಚಿಮಾತ್ಯ ಮತ್ತು ಸಾಂಪ್ರದಾಯಿಕ ಮಹಿಳೆಯರ ಉಡುಪುಗಳ ಬಗ್ಗೆ ಗಮನಕೊಡುತ್ತಿದ್ದಾರೆ; ಅವೆಲ್ಲವನ್ನೂ ತಾವೇ ತಯಾರಿಸುತ್ತಾರೆ. ಒಳ್ಳೆಯ ಗುಣಮಟ್ಟದ ಬಗ್ಗೆ ನಿಗಾ ವಹಿಸುವ ಗಿರಾಕಿಗಳಿಗೆ ಮೆಚ್ಚುವಂತೆ ಅವರು ಬಳಸುವ ಎಲ್ಲ ಬಟ್ಟೆಗಳನ್ನು ಸೂರತ್‌ನಲ್ಲಿರುವ ಅವರ ಸೋದರ ಮಾವನವರಿಂದ ತರಿಸುತ್ತಾರೆ. ಅವರು ಮೊದಲಿನಿಂದ ಉತ್ಕೃಷ್ಟತೆ ಕಾಪಾಡಿಕೊಂಡು ಬರುವುದಕ್ಕೆ ಸಹಾಯ ಮಾಡುತ್ತಿದ್ದಾರೆ.

೨೦೨೦ರ ಕೊನೆಯಲ್ಲಿ ಆನ್ಲೈನ್‌ ವೇದಿಕೆಯನ್ನು ಸೇರಿಕೊಂಡ ಈ ಫ್ಲಿಪ್ಕಾರ್ಟ್‌ ಮಾರಾಟಗಾರರು ಮೊದಲು ನಿಧಾನವಾದ ಆರಂಬವನ್ನು ಅನುಭವಿಸಿದರು, ಆದರೆ ಈಗ ಅವರು ಕಲ್ಪಿಸಿಕೊಂಡಿದ್ದಕ್ಕೂ ಹೆಚ್ಚಿನ ಗತಿಯಲ್ಲಿ ಬೇಡಿಕೆಗಳು ಬೆಳೆಯುತ್ತಿರುವುದನ್ನು ಕಾಣುತ್ತಿದ್ದಾರೆ. ಮಾರಾಟ ಮತ್ತು ಪ್ರಚಾರದ ಬಗ್ಗೆ ಫ್ಲಿಪ್ಕಾರ್ಟ್‌ನ ಲೆಕ್ಕ ವ್ಯವಸ್ಥಾಪಕರ ಮಾರ್ಗದರ್ಶನದೊಂದಿಗೆ ಮೆಹರ್‌ ಅವರ ವ್ಯಾಪರ ಈಗ ದಿನಕ್ಕೆ ನೂರಕ್ಕೂ ಹೆಚ್ಚು ಬೇಡಿಕೆಗಳನ್ನು ಪಡೆಯುತ್ತದೆ.

“ನನ್ನ ಉತ್ಪನ್ನಗಳು ಹೆಚ್ಚು ಜನರಿಗೆ ಪ್ರಕಟವಾಗಬೇಕು ಮತ್ತು ನಾನು ಆನ್ಲೈನ್‌ ಕ್ಷೇತ್ರದಲ್ಲಿ ನನ್ನ ಬ್ರ್ಯಾಂಡ್‌ ಅನ್ನು ಸ್ಥಾಪಿಸಬೇಕೆಂದು ನನ್ನ ಆಸೆ. ಫ್ಲಿಪ್ಕಾರ್ಟ್‌ನ ಬೆಂಬಲದಿಂದಿಗೆ ನಾನು ಇದನ್ನು ಸಾಧಿಸಬಲ್ಲೆ ಎಂದು ನನಗೆ ನಂಬಿಕೆಯಿದೆ ಮತ್ತು ನನ್ನ ವ್ಯಾಪಾರ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ” ಎಂದು ಮೆಹರ್‌ ಹೇಳುತ್ತಾರೆ.

ಈ ಫ್ಲಿಪ್ಕಾರ್ಟ್‌ನ ಮಾರಾಟಗಾರ ತನ್ನ ವೃತ್ತಿಯಲ್ಲಿ ಇನ್ನೂ ಆರಂಭದ ಹಂತದಲ್ಲಿದ್ದರೂ ಅದರ ಸಾಮರ್ಥ್ಯವನ್ನು ಅವರು ಬಹಳ ಬೇಗ ಅರಿತಿದ್ದಾರೆ. ಅತಿ ಪ್ರಮುಖ ಮಾರಾಟದ ಉತ್ಸವಗಳಲ್ಲಿ ಅವರ ಮಾರಾಟದ ಪ್ರಮಾಣ ದ್ವಿಗುಣಗೊಳ್ಳುತ್ತದೆಂಬುದನ್ನು ಗಮನಿಸಿರುವ ಮೆಹರ್‌ ʼದಿ ಬಿಗ್‌ ಬಿಲಿಯನ್‌ ಡೇಸ್‌ ೨೦೨೨ರ ಮುಂದಿನ ಆವೃತ್ತಿಯ ಬಗ್ಗೆ ಸಂಭ್ರಮದಿಂದ್ದಾರೆ!

Enjoy shopping on Flipkart