ಫ್ಲಿಪ್ ಕಾರ್ಟ್ ನಲ್ಲಿ ನಕಲಿ ಉತ್ಪನ್ನಗಳನ್ನು ಮಾರಲಾಗುತ್ತದೆಯೇ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿವೆ ನಿಜವಾದ ಉತ್ತರಗಳು

Read this article in हिन्दी | English | বাংলা | தமிழ் | मराठी | ગુજરાતી

ಫ್ಲಿಪ್ ಕಾರ್ಟ್ ನಕಲಿ ಉತ್ಪನ್ನಗಳನ್ನು ಮಾರುತ್ತಿದೆ ಎಂಬ ಪ್ರಸ್ತುತ ಆನ್ ಲೈನ್ ಚರ್ಚೆಯಲ್ಲಿ ನಿಜಾಂಶವಿದೆಯೇ? ನೀವು ಈ ಹೇಳಿಕೆಗಳ ಹಿಂದಿರುವ ನಿಜವನ್ನು ಅರಿತುಕೊಳ್ಳುವ ಗಂಭೀರ ಪ್ರಯತ್ನ ಮಾಡಿದ್ದೀರಾ? ಅವುಗಳಿಗೆ ಸಂಬಂಧಿಸಿದ ಉತ್ತರಗಳು ಇಲ್ಲಿವೆ.

fake products

ಫ್ಲಿಪ್ ಕಾರ್ಟ್ ಹಗರಣ, ಫ್ಲಿಪ್ ಕಾರ್ಟ್ ವಂಚನೆ, ಫ್ಲಿಪ್ ಕಾರ್ಟ್ ಮೋಸ, ಫ್ಲಿಪ್ ಕಾರ್ಟ್ ದಗಾಬಾಜಿ. ಇವು ವೆಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಹೊಸ ಪದಗಳು. ಇಂಟರ್ನೆಟ್ ಬಳಕೆದಾರರು ಫ್ಲಿಪ್ ಕಾರ್ಟ್ ನಿಜವಾಗಿಯೂ ನಕಲಿ ಉತ್ಪನ್ನಗಳನ್ನು ಮಾರುತ್ತದೆಯೇ ಎಂಬುದರ ಬಗ್ಗೆ ಚರ್ಚೆಯಲ್ಲಿ ಮಗ್ನರಾಗಿರುವಾಗ ಪ್ರಿಯ ಗ್ರಾಹಕರೇ, ನಿಮಗೆ ನಮ್ಮದೊಂದು ಪ್ರಶ್ನೆ. ಈ ಆರೋಪಗಳೆಲ್ಲ ನಿಜವೋ ಸುಳ್ಳೋ ಎಂಬುದನ್ನು ಕಂಡುಹಿಡಿಯಲು ಸಾಕಷ್ಟು ಸಂಶೋಧನೆ ಮಾಡಿದ್ದೀರಾ? ನೀವು ಹಾಗೆ ಮಾಡಿದ್ದರೂ ಪರವಾಗಿಲ್ಲ, ನಮಗೆ ಅರ್ಥವಾಗುತ್ತದೆ. ನೀವು ಇಂತಹ ಪ್ರಸಂಗಗಳಲ್ಲಿ ನೀವು ಕೇವಲ ಪ್ರತಿಕ್ರಿಯೆ ಮಾತ್ರ ನೀಡುವುದು ಸ್ವಾಭಾವಿಕ. ಜೊತೆಗೆ ಇಂತಹ ಸಾಂಕ್ರಾಮಿಕ ಹೇಳಿಕೆಗಳ ಹಿಂದಿನ ಸತ್ಯಾಸತ್ಯತೆಯನ್ನು ಹುಡುಕುತ್ತ ಹೋಗುವುದು ನಿಮ್ಮ ಕೆಲಸವೂ ಅಲ್ಲ. ಆದ್ದರಿಂದ, ನಿಮ್ಮನ್ನು – ಮತ್ತು ನಮ್ಮನ್ನು ತೊಂದರೆಗೀಡಾಗಿಸುತ್ತಿರುವ ಪ್ರಶ್ನೆಗೆ ಉತ್ತರ ನೀಡುವುದೇ ಈ ಲೇಖನದ ಉದ್ದೇಶವಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಮ್ಮ ಕಳವಳಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ.

ನಕಲಿ ಉತ್ಪನ್ನಗಳ ಬಗ್ಗೆ ನೀವು ಹೊಂದಿರುವ ಕಳವಳಗಳನ್ನು ಫ್ಲಿಪ್ ಕಾರ್ಟ್ ಹೇಗೆ ನಿವಾರಿಸುತ್ತದೆ ಎಂಬುದನ್ನು ಅರಿತುಕೊಳ್ಳಲು ಮುಂದೆ ಓದಿ.

fake products

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇಂಟರ್ನೆಟ್ ನಲ್ಲಿ ನಡೆಯುವ ಚರ್ಚಾಕೂಟಗಳಲ್ಲಿ ಆನ್ ಲೈನ್ ಶಾಪಿಂಗ್ ಸೈಟ್ ಗಳಲ್ಲಿ ಮಾರಲಾಗುವ ಕೆಲವು ಉತ್ಪನ್ನಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸಿ ದೂರುಗಳು ಮತ್ತು ಸಿಟ್ಟಿನಿಂದ ಕೂಡಿದ ಸಂಭಾಷಣೆಗಳು ಪ್ರತಿಧ್ವನಿಸುತ್ತಿವೆ. ನಕಲಿ ಉತ್ಪನ್ನಗಳು, ಕೃತಕ ಸರಕುಗಳು, ಮತ್ತು ನಿಜವಾದ ಬ್ರಾಂಡೆಡ್ ಉತ್ಪನ್ನಗಳಂತೆ ಕಾಣುವ ನಕಲಿ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಪ್ರತಿನಿತ್ಯ ಪ್ರಶ್ನೆಗಳು ಕೇಳಿಬರುತ್ತಿರುತ್ತವೆ. (ಇಲ್ಲಿ ನೀಡಿರುವ ನಮ್ಮ ಶೈಕ್ಷಣಿಕ ಲೇಖನ ಓದಿ how to avoid buying fake perfumes).

ಫ್ಲಿಪ್ ಕಾರ್ಟ್ ನಂತಹ ಆನ್ ಲೈನ್ ಮಾರುಕಟ್ಟೆಗಳು ತಮ್ಮ ವೆಬ್ ಸೈಟ್ ಗಳ ಮೂಲಕ ಮಾರಲಾಗುತ್ತಿರುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಹೇಗೆ ತೋರುತ್ತಿವೆ ಎಂಬುದರ ಬಗ್ಗೆ ಎಲ್ಲೆಡೆ ಸಾಕಷ್ಟು ಹತಾಶೆ ವ್ಯಕ್ತವಾಗುತ್ತಿದೆ. ಇಂಟರ್ನೆಟ್ ನಲ್ಲಿ ನಮ್ಮ ಬಗ್ಗೆ ಮಾಡಲಾಗುತ್ತಿರುವ ಕೆಲವು ಮೀಮ್ ಗಳೆಂದರೆ ಫ್ಲಾಪ್ ಕಾರ್ಟ್, ಫೇಕ್ ಕಾರ್ಟ್ ಮತ್ತು ಫ್ರಾಡ್ ಕಾರ್ಟ್. ನಿಮ್ಮ ಸೃಜನಶೀಲತೆಯನ್ನು ಪ್ರಶಂಶಿಸಿದ್ದಲ್ಲದೇ, ನಿಮ್ಮೊಂದಿಗೆ ನಾವೂ ಕೂಡ ನಕ್ಕಿದ್ದೇವೆ. ಅದರ ಹಿಂದೆಯೇ ನಮ್ಮ ಕರ್ತವ್ಯವನ್ನು ಕೂಡ ನಿಭಾಯಿಸುತ್ತ ಬಂದಿದ್ದೇವೆ. ಈ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರುವ ಮುಂಚೆಯೇ ಇವುಗಳ ಹಿಂದಿರುವ ಸತ್ಯಾಂಶವನ್ನು ತಿಳಿಯಲು ನಾವು ಆಳವಾದ ಮತ್ತು ಸವಿಸ್ತಾರವಾದ ವಿಚಾರಣೆ ನಡೆಸಿದ್ದೆವು. ಫ್ಲಿಪ್ ಕಾರ್ಟ್ ನಲ್ಲಿರುವ ಮಾರಾಟಗಾರರು ನಿಜವಾಗಿಯೂ ನಕಲಿ ಉತ್ಪನ್ನಗಳನ್ನು ಮಾರುತ್ತಿದ್ದರೇ?

 

ನಕಲಿ ಉತ್ಪನ್ನಗಳೆಂದರೇನು?

fake products

ಆನ್ ಲೈನ್ ನಲ್ಲಿ ಮಾರಲಾಗುತ್ತಿರುವ ನಕಲಿ ಉತ್ಪನ್ನಗಳ ಬಗ್ಗೆ ಮಾತನಾಡುವ ಮುಂಚೆ ‘ನಕಲಿ’ ಎಂದು ಯಾವ ಉತ್ಪನ್ನಗಳನ್ನು ಕರೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಕಲಿ ಎಂಬ ಪದಕ್ಕೆ ಆನ್ ಲೈನ್ ನಲ್ಲಿರುವ ಜನಪ್ರಿಯ ವ್ಯಾಖ್ಯಾನವೆಂದರೆ, ‘ಪ್ರಾಮಾಣಿಕವಾದುದಲ್ಲ, ಅನುಕರಣೆ ಅಥವಾ ನಕಲು ಮಾಡಿದ್ದು’. ಈ ಯತಾರ್ಥ ವ್ಯಾಖ್ಯಾನವನ್ನು ಮೀರಿ ನೋಡುವುದಾದರೆ, ನೀವು ಆನ್ ಲೈನ್ ನಲ್ಲಿ ನೋಡುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಇದರ ಅರ್ಥವೇನು?

ಆನ್ ಲೈನ್ ಚಿಲ್ಲರೆ ವ್ಯಾಪಾರ ನಡೆಸುವ ಉದ್ಯಮದ ಮುಂದಿರುವ ಅತಿ ದೊಡ್ಡ ಸವಾಲುಗಳಲ್ಲಿ ನಕಲಿ ಉತ್ಪನ್ನಗಳು ಹೇರಳವಾಗಿ ಲಭ್ಯವಿರುವುದೂ ಒಂದಾಗಿದೆ. ಸಾಮಾನ್ಯವಾಗಿ, ಈ ಉತ್ಪನ್ನಗಳು ನಿಜವಾದ ಉತ್ಪನ್ನದಂತೆಯೇ ಕಾಣುತ್ತವೆ ಆದರೆ ಕೆಲವು ಉತ್ಪಾದಕರು ಅವುಗಳನ್ನು ನಿಜವಾದ ಬ್ರಾಂಡೆಡ್ ಉತ್ಪನ್ನಗಳು ಎಂದು ನಂಬಿಸುವ ಉದ್ದೇಶದಿಂದ ಕಳಪೆ ಮಟ್ಟದ ಅನುಕರಣೆ ಮಾಡಿ ಈ ಉತ್ಪನ್ನಗಳನ್ನು ತಯಾರಿಸಿರುತ್ತಾರೆ. ಆನ್ ಲೈನ್ ನಲ್ಲಿ ಖರೀದಿ ಮಾಡುವ ಗ್ರಾಹಕರ ಕಣ್ಣಿಗೆ ಈ ಉತ್ಪನ್ನಗಳ ಚಿತ್ರಗಳು ನಿಜವಾದ ಉತ್ಪನ್ನಗಳಂತೆಯೇ ಕಾಣಿಸಬಹುದು. ನಿಜವಾದ ‌ಉತ್ಪನ್ನಗಳ ಗುಣಲಕ್ಷಣಗಳನ್ನು ಅನುಕರಿಸಿ ನಕಲಿ ಉತ್ಪನ್ನಗಳ ಚಿತ್ರಗಳು ಮತ್ತು ಅವುಗಳ ವಿವರಗಳನ್ನು ನೀಡಲಾಗಿರುತ್ತದೆ – ಲೋಗೊ, ಪ್ಯಾಕೇಜಿಂಗ್ ಮತ್ತು ಟ್ರೇಡ್ ಮಾರ್ಕ್‌ಗಳು ಇವೆಲ್ಲ ನಿಜವಾದ ಉತ್ಪನ್ನಗಳನ್ನೇ ಹೋಲುತ್ತವೆ. ಅಸಹಾಯಕರಾದ ಆನ್ ಲೈನ್ ಖರೀದಿದಾರರಿಗೆ ಅವುಗಳಲ್ಲಿ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವೆನಿಸಬಹುದು.

ಈ ‘ನಕಲಿ ಉತ್ಪನ್ನಗಳು’ ದೊಡ್ಡ ಬ್ರಾಂಡ್ ಗಳ ಗೌರವಕ್ಕೆ ಧಕ್ಕೆಯುಂಟು ಮಾಡುತ್ತವೆಯಲ್ಲದೇ ಗ್ರಾಹಕರಿಗೆ ಆರ್ಥಿಕ ಮತ್ತು ಭಾವನಾತ್ಮಕ ಹಾನಿಯುಂಟುಮಾಡುತ್ತವೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ ನಿಮಗೆ ಈ ಒಂದು ಸಂಗತಿ ತಿಳಿದಿರಬೇಕು: ಒಬ್ಬ ಆನ್ ಲೈನ್ ಮಾರಾಟಗಾರರು ಫ್ಲಿಪ್ ಕಾರ್ಟ್ ನಲ್ಲಿ ನಕಲಿ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಗೊತ್ತಾದರೆ ಅವರನ್ನು ತಕ್ಷಣ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಸೈಟ್ ನಲ್ಲಿ ಮಾರಾಟ ಮಾಡದಂತೆ ನಿಷೇಧಿಸಲಾಗುತ್ತದೆ.

 

ನೀವು ಆನ್ ಲೈನ್ ನಲ್ಲಿ ನಕಲಿ ಉತ್ಪನ್ನವನ್ನು ಹೇಗೆ ಕಂಡುಹಿಡಿಯಬಹುದು?

fake products

ಈ ಸವಾಲು ಎದುರಿಸುವುದು ಅನಿವಾರ್ಯ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ನಕಲಿ ಉತ್ಪನ್ನವನ್ನು ಗುರುತಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರಲ್ಲೂ ನೀವು ಶಾಪಿಂಗ್ ಮಾಡುವ ಹುರುಪಿನಲ್ಲಿದ್ದರೆ ಅಥವಾ ಸೇಲ್ ಇದ್ದಾಗ ಶಾಪಿಂಗ್ ಮಾಡುತ್ತಿದ್ದರೆ ನಕಲಿ ಉತ್ಪನ್ನ ಗುರುತಿಸುವುದು ಇನ್ನೂ ಕಷ್ಟ. ಒಂದು ಉತ್ಪನ್ನದ ಬಗ್ಗೆ ನಿಮಗೆ ಖಚಿತತೆ ಇಲ್ಲದಿದ್ದರೆ ಮತ್ತು ಅದರಲ್ಲಿ ಏನೋ ಕೊರತೆ ಇದೆ ಎಂದು ನಿಮಗೆ ಅನ್ನಿಸಿದರೆ, ಖರೀದಿಸುವ ಮುಂಚೆ ನೀವು ಮಾಡಬಹುದಾದ ಈ ಮೂರು ಮೂಲಭೂತ ಕೆಲಸಗಳು ಇಲ್ಲಿವೆ.

ಹಂತ 1: ಬಹಳ ಸೂಕ್ಷ್ಮವಾಗಿ ಗಮನಿಸಿ

ನಿಜವಾದ ಉತ್ಪನ್ನಗಳ ನಕಲಿ ಉತ್ಪನ್ನಗಳನ್ನು ಬಹಳ ಚಾಣಾಕ್ಷತನದಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಮೊದಲ ನೋಟಕ್ಕೆ ಅವು ನಿಜವಾದ ವಸ್ತು ಎಂದು ಕಂಡು ಬರಬಹುದು. ಆದ್ದರಿಂದ ಆ ಉತ್ಪನ್ನವನ್ನು ಎಚ್ಚರಿಕೆಯಿಂದ ಅಭ್ಯಸಿಸಲು ಸಮಯ ತೆಗೆದುಕೊಳ್ಳಿ, ಉತ್ಪನ್ನದ ವಿವರವನ್ನು ಸ್ವಲ್ಪವೂ ಬಿಡದೇ ಓದಿ, ಮತ್ತು ಕಂಪನಿ ಹೆಸರು, ಲೋಗೊ ಪ್ರಕಾರ, ಮತ್ತು ತಪ್ಪಿದಂತೆ ಕಾಣುವ ಇತರ ವಿನ್ಯಾಸಗಳನ್ನು ಗಮನಿಸಿ.

ಹಂತ 2: ಕಡಿಮೆ ಬೆಲೆ ಹೊಂದಿರುವ ಉತ್ಪನ್ನಗಳೆಂದರೆ ನಕಲಿ ಉತ್ಪನ್ನಗಳಾಗಿರಬಹುದು

ಭಾರತದಲ್ಲಿ, ಬೆಲೆ ಖರೀದಿಯ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ಹಗರಣ ಮಾಡುವವರಿಗೆ ಇವರ ಅಲೋಚನೆಗಳು ತಿಳಿದಿರುತ್ತದೆ. ಆದ್ದರಿಂದ, ನಿಮಗೆ ಚಿರಪರಿಚಿತವಾದ ಬ್ರಾಂಡೆಡ್ ಉತ್ಪನ್ನವನ್ನು ನಂಬಲು ಅಸಾಧ್ಯವಾದ ಬೆಲೆಗೆ ಮಾರುವುದು ನಿಮ್ಮ ಗಮನಕ್ಕೆ ಬಂದರೆ ಮಾರು ಹೋಗಬೇಡಿ. ಜಾಗೃತರಾಗಿರಿ. ಬೇರೆ ಮಾರಾಟಗಾರರು ನೀಡುತ್ತಿರುವ ಬೆಲೆಗಳೊಂದಿಗೆ ಹೋಲಿಸಿ ನೋಡಿ, ಮತ್ತು ಅದರ ಮುಖ್ಯ ಲಕ್ಷಣಗಳಾದ ಗಾತ್ರ, ತೂಕ ಮತ್ತು ಆಯಾಮಗಳನ್ನು ಮತ್ತೊಮ್ಮೆ ಪರೀಕ್ಷಿಸಿ. ಕೆಲವೊಮ್ಮೆ, ಮಾರಾಟಗಾರರು ಆ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರುವ ಪರವಾನಗಿ ಪಡೆದುಕೊಂಡಿರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಉತ್ಪನ್ನವು ಪ್ರಾಮಾಣಿಕವಾಗಿರಬಹುದು. ಇಲ್ಲವಾದರೆ, ನಿಮ್ಮ ಸಂದೇಹ ನಿಜವಾಗಿರಬಹುದು.

ಹಂತ 3: ಮಾರಾಟಗಾರರ ರೇಟಿಂಗ್ ಮತ್ತು ಉತ್ಪನ್ನದ ಬಗ್ಗೆ ವಿಮರ್ಶೆ

ಒಂದು ಉತ್ಪನ್ನಕ್ಕೆ ನೀಡಲಾಗುವ ರೇಟಿಂಗ್ ಅಥವಾ ವಿಮರ್ಶೆಯ ವಿಶ್ವಾಸಾರ್ಹತೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಬಹುದಾದರೂ ಇದು ಒಂದು ಉತ್ಪನ್ನದ ನೈಜತೆಯನ್ನು ಪರೀಕ್ಷಿಸಲು ಇರುವ ನಿರಾಕರಿಸಲಾಗದ ಮೂಲವಾಗಿದೆ. ಉತ್ಪನ್ನ ಪಟ್ಟಿ ಮಾಡಿರುವ ಪುಟದಲ್ಲಿ ಒದಗಿಸಲಾದ ವಿಮರ್ಶೆಗಳು ಮತ್ತು ರೇಟಿಂಗ್ ಗಳನ್ನು ತಾಳ್ಮೆಯಿಂದ ಓದಿ, ನಿಮ್ಮಲ್ಲಿರುವ ಸಂದೇಹಗಳನ್ನು ನಿವಾರಿಸಿಕೊಳ್ಳಿ ಮತ್ತು ಉತ್ಪನ್ನದ ವಿಶ್ವಾಸಾರ್ಹತೆಯನ್ನು ತಿಳಿಯಿರಿ. ಯಾವಾಗಲೂ ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಅಥವಾ ರಿವ್ಯೂಗಳನ್ನು ಹೊಂದಿರುವ ಮಾರಾಟಗಾರರಿಂದ ಖರೀದಿಸಿ. ಫ್ಲಿಪ್ ಕಾರ್ಟ್ ನಲ್ಲಿ ದೊರೆಯುವ ಉತ್ಪನ್ನಗಳ ವಿಮರ್ಶೆಗಳ ಬಗ್ಗೆ ಹೇಳುವುದಾದರೆ, ಯಾವಾಗಲೂ ಪ್ರಮಾಣಿತ ಖರೀದಿದಾರರ ವಿಮರ್ಶೆಗಳನ್ನು ಓದಿ. ಏಕೆಂದರೆ ಪರಿಶೀಲಿಸಲಾದ ಉತ್ಪನ್ನ ಖರೀದಿದಾರರು ಈ ವಿಮರ್ಶೆಗಳನ್ನು ಬರೆದಿರುತ್ತಾರೆ. ಪಟ್ಟಿಮಾಡಲಾದ ಉತ್ಪನ್ನಗಳು ಪ್ರಮಾಣಿತ ಖರೀದಿದಾರರು ನೀಡಿದಂತಹ ಸಕಾರಾತ್ಮಕ ವಿಮರ್ಶೆಗಳನ್ನು ಹೊಂದಿದ್ದರೆ, ಅವು ನಕಲಿ ಉತ್ಪನ್ನಗಳಲ್ಲವಾದ್ದರಿಂದ ನೀವು ನಿಶ್ಚಿಂತರಾಗಿರಬಹುದು.

 

ಫ್ಲಿಪ್ ಕಾರ್ಟ್ ನಕಲಿ ಉತ್ಪನ್ನಗಳ ಮಾರಟವನ್ನು ಹೇಗೆ ತಡೆಗಟ್ಟುತ್ತದೆ?

fake products

ನಕಲಿ ಉತ್ಪನ್ನಗಳನ್ನು ಗುರುತಿಸಿ ತೆಗೆದುಹಾಕುವುದಕ್ಕಾಗಿ ಫ್ಲಿಪ್ ಕಾರ್ಟ್ ಅನೇಖ ಹಂತಗಳಲ್ಲಿ ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆ. ಈ ಕ್ರಮಗಳನ್ನು ಪೂರ್ವಭಾವಿ ಮತ್ತು ಪ್ರತಿಕ್ರಿಯಾತ್ಮಕ ಶೋಧನೆ ಎಂದು ವಿಶಾಲವಾಗಿ ವರ್ಗೀಕರಿಸಬಹುದು, ಮತ್ತು ಇವು ಆಟೊಮೇಟೆಡ್ ಮತ್ತು ಮ್ಯಾನ್ಯುವಲ್ ಸುರಕ್ಷತೆಗಳನ್ನು ಒಳಗೊಂಡಿರುತ್ತದೆ. ಒಂದು ಕರ್ತವ್ಯನಿರತ ತಂಡವು ಫ್ಲಿಪ್ ಕಾರ್ಟ್ ನಲ್ಲಿ ಮಾರಲಾಗುವ ‌ಉತ್ಪನ್ನಗಳ ಪ್ರಾಮಾಣಿಕತೆಯನ್ನು ಮೌಲ್ಯಮಾಪನ ಮಾಡುತ್ತಿರುತ್ತದೆ ಮತ್ತು ಅತ್ಯಂತ ಸಣ್ಣ ನಕಲಿಯ ಉದಾಹರಣೆ/ಎಚ್ಚರಿಕೆಯನ್ನೂ ಮೇಲಧಿಕಾರಿಗಳಿಗೆ ತಿಳಿಸುತ್ತದೆ.

ಉತ್ಪನ್ನವು ನಕಲಿ ಎಂದು ಗೊತ್ತಾದ ತಕ್ಷಣ ಇಡೀ ಉತ್ಪನ್ನಗಳ ಪಟ್ಟಿಯನ್ನು ಹಾಗೂ ಮಾರಾಟಗಾರರ ಸಂಪೂರ್ಣ ಪೋರ್ಟ್‌ಫೋಲಿಯೋವನ್ನು ತೆಗೆದುಹಾಕಲಾಗುತ್ತದೆ. ಅನಂತರ ಪ್ರಕರಣವನ್ನು ಆಂತರಿಕ ವಿಚಾರಣಾ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಈ ಸಮಿತಿಯು ಮಾರಾಟಗಾರರ ಬಗ್ಗೆ ವಿಚಾರಣೆ ಕೈಗೊಳ್ಳುತ್ತದೆ. ಉತ್ಪನ್ನವು ನಕಲಿಯಾಗಿದ್ದರೆ ಮತ್ತು ಮಾರಾಟಗಾರರು ಅದನ್ನು ಪ್ರೋತ್ಸಾಹಿಸಿದ್ದಾರೆಂದು ಸಾಬೀತಾದರೆ, ಅವರನ್ನು ತಕ್ಷಣ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಕಪ್ಪು ಪಟ್ಟಿ ಅಥವಾ ನಿಷೇಧಿತ ಮಾರಾಟಗಾರರ ಪಟ್ಟಿಗೆ ಸೇರಿಸಲಾದ ಮಾರಾಟಗಾರರು ಭವಿಷ್ಯದಲ್ಲಿ ಫ್ಲಿಪ್ ಕಾರ್ಟ್‌ನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ.

ನಕಲಿ ಉತ್ಪನ್ನಗಳ ಮೇಲೆ ನಿಗಾವಹಿಸಲು ಫ್ಲಿಪ್ ಕಾರ್ಟ್ ಬಳಿ ಇರುವ ಇನ್ನೊಂದು ವ್ಯವಸ್ಥೆ ಎಂದರೆ ಮಾರಾಟಗಾರರ ರೇಟಿಂಗ್ ವ್ಯವಸ್ಥೆ. ಈ ಪ್ರಕ್ರಿಯೆಯು ಫ್ಲಿಪ್ ಕಾರ್ಟ್ ನಲ್ಲಿ ನಡೆಯುವ ಅನೈತಿಕ ಮಾರಾಟವನ್ನು ಕಂಡುಹಿಡಿಯಲು ಜನಸಮೂಹದಿಂದ ಪಡೆದ ಅಭಿಪ್ರಾಯ ಪದ್ಧತಿಯನ್ನು ಉಪಯೋಗಿಸುತ್ತದೆ. ಗ್ರಾಹಕರು ನೀಡಿದ ರೇಟಿಂಗ್, ರಿಟರ್ನ್‌ಗಳ ಸಂಖ್ಯೆ, ಮತ್ತು ಮಾರಾಟಗಾರರ ರದ್ಧತಿಗಳು ಒಬ್ಬ ಮಾರಾಟಗಾರರ ವಿಶ್ವಾಸಾರ್ಹತೆಯ ಅಡಿಪಾಯವಾಗಿವೆ. ನಿಗದಿಪಡಿಸಿದ ಮಿತಿಗಿಂತ ಮಾರಾಟಗಾರರಿಗೆ ಕಡಿಮೆ ರೇಟಿಂಗ್ ದೊರೆತರೆ, ಆ ಸಮಸ್ಯೆಯನ್ನು ಗುರುತಿಸಲಾಗುತ್ತದೆ ಮತ್ತು ವಿಚಾರಿಸಲಾಗುತ್ತದೆ. ವಿಚಾರಣೆಯ ವೇಳೆ ಅಂತಹ ಮಾರಾಟಗಾರರು ತಪ್ಪಿತಸ್ಥರೆಂದು ತಿಳಿದುಬಂದರೆ, ಅವರು ಫ್ಲಿಪ್ ಕಾರ್ಟ್‌ನಲ್ಲಿ ಮಾರಾಟ ಮಾಡದಂತೆ ನಿಷೇಧಿಸಲಾಗುತ್ತದೆ ಮತ್ತು ಅವರ ಪೋರ್ಟ್‌ಫೋಲಿಯೊದಲ್ಲಿರುವ ಉತ್ಪನ್ನಗಳನ್ನು ತೆಗೆದುಹಾಕಲಾಗುತ್ತದೆ.

ಫ್ಲಿಪ್ ಕಾರ್ಟ್ ಹೇಗೆ Mystery Shoppers ಸಹಾಯದಿಂದ ನಕಲಿ ಉತ್ಪನ್ನಗಳನ್ನು ಗುರುತಿಸುತ್ತಿದೆ ಎಂದು ತಿಳಿಯಿರಿ

 

ನಕಲಿ ಮಾರಾಟಗಾರರಿಗೆ ಏನಾಗುತ್ತದೆ?

fake products

ಫ್ಲಿಪ್ ಕಾರ್ಟ್‌ನಲ್ಲಿ ಮಾರಾಟಕ್ಕೆ ಅನುಮತಿ ಹೊಂದಿರುವ ಎಲ್ಲ ಮಾರಾಟಗಾರರು ನೋಂದಣಿಗೊಳ್ಳುವ ಮುಂಚೆ ಮತ್ತು ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸುವ ಮುಂಚೆ ಕಟ್ಟುನಿಟ್ಟಾದ ಪ್ರಮಾಣೀಕರಣ ಪ್ರಕ್ರಿಯೆಗೆ ಒಳಗಾಗಬೇಕು. ಈ ಪ್ರಕ್ರಿಯೆಯು ವ್ಯವಸ್ಥಿತ ಹಿನ್ನೆಲೆ ಪರಿಶೀಲನೆ, ವ್ಯವಹಾರ ನೋಂದಣಿ ದಾಖಲೆಗಳನ್ನು ಒಳಗೊಂಡಿದೆ, ಮತ್ತು ಇದು ಭಾರತೀಯ ಕಾನೂನು ಹಾಗೂ ಉದ್ಯಮ ನಿಯಮಗಳು ಮತ್ತು ನಿಯಂತ್ರಣಗಳಿಗೆ ತಕ್ಕಂತಿರಬೇಕಾಗಿರುತ್ತದೆ.

ಫ್ಲಿಪ್ ಕಾರ್ಟ್ ತನ್ನ ವೇದಿಕೆಯಿಂದ ಮಾರಾಟವಾಗುವ ನಕಲಿ ಉತ್ಪನ್ನಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ. ಮಾಡುವುದನ್ನು ನಮ್ಮ ಗುರುತಿಸುವ ಪ್ರಕ್ರಿಯೆಗಳು ಮತ್ತು ಕ್ರಮಗಳು ಫ್ಲಿಪ್ ಕಾರ್ಟ್‌ನಲ್ಲಿ ಕೇವಲ ಸಕಾರಾತ್ಮಕ ವ್ಯವಹಾರ ಹಿನ್ನೆಲೆ ಹೊಂದಿರುವವರು ಮಾರಾಟ ಮಾಡುವುದನ್ನು ಖಚಿತಪಡಿಸುತ್ತವೆ. ನಕಲಿ ಉತ್ಪನ್ನಗಳನ್ನು ಗುರುತಿಸುವ ತಂಡವು ಉತ್ಪನ್ನಗಳ ಪಟ್ಟಿಗಳನ್ನು ನಿರಂತರವಾಗಿ ಅವಲೋಕಿಸುವ ಮೂಲಕ ನಕಲಿ ಉತ್ಪನ್ನಗಳ ಘಟನೆಗಳ ವಿರುದ್ಧ ಕ್ರಮ ಕೈಗೊಂಡು, ಅವುಗಳ ನಿರ್ಮೂಲನೆ ಮಾಡುತ್ತದೆ.

ನಕಲಿ ಉತ್ಪನ್ನಗಳ ಮಾರಾಟಗಾರರಿಗೆ ಏನಾಗುತ್ತದೆ? ತಿಳಿಯಿರಿ

ಫ್ಲಿಪ್ ಕಾರ್ಟ್ ನಲ್ಲಿ ಹೇಗೆ ಸುರಕ್ಷಿತವಾಗಿ ಮತ್ತು ಸಂತೋಷದಿಂದ ಶಾಪಿಂಗ್ ಮಾಡಬೇಕು ಎಂಬುದರ ಬಗ್ಗೆ ಶಿಕ್ಷಣ ನೀಡುವುದು ಈ ಲೇಖನದ ಉದ್ದೇಶವಾಗಿದೆ.

Cartoon by Balraj K N for Flipkart Stories

 

Enjoy shopping on Flipkart