0
ಮರುಗುವುದಕ್ಕಿಂತ ಸುರಕ್ಷಿತವಾಗಿರುವುದು ಲೇಸು-ನಿಮ್ಮ ಫ್ಲಿಪ್ಕಾರ್ಟ್ ಖಾತೆಯನ್ನು ಸುರಕ್ಷಿತಗೊಳಿಸುವುದು ಹೇಗೆ
ನೀವು ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ, ನಿಮ್ಮ ವೈಯಕ್ತಿಕ ಮಾಹಿತಿಗಳು ಮತ್ತು ಬ್ಯಾಂಕ್ ವಿವರಗಳು, ಅಕೌಂಟ್ ನಂಬರ್ ಗಳು, ಪಾಸ್ವರ್ಡ್ಗಳು ಮುಂತಾದ ಡೇಟಾ ಸುರಕ್ಷಿತವಾಗಿರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ಡೇಟಾ ವಂಚಕರ ಕೈಗೆ ಸೇರಿದರೆ ಅವರು ಅದನ್ನು ದುರುಪಯೋಗಪಡಿಸಿಕೊಳ್ಳಲು ಹಿಂಜರಿಯುವುದಿಲ್ಲ. ಆದರೆ ಚಿಂತಿಸಬೇಡಿ! ನಿಮ್ಮ ಖಾತೆಯನ್ನು ವಂಚಕರಿಂದ ಸುರಕ್ಷಿತವಾಗಿರಿಸುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಫ್ಲಿಪ್ಕಾರ್ಟ್ ಖಾತೆಯ ಪಾಸ್ವರ್ಡ್ ಫೂಲ್ಪ್ರೂಫ್ ಆಗಿದೆ ಎಂದು ನೀವು ಖಚಿತಪಡಿಸಿಕೊಂಡಿದ್ದೀರಾ? ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳಲು ಮುಂದೆ ಓದಿ.