ಒಟ್ಟಿಗೆ ಬಲಶಾಲಿ – ಈ ಗಂಡ-ಹೆಂಡತಿ ಜೋಡಿ ಫ್ಲಿಪ್‌ಕಾರ್ಟ್‌ ಮಾರಾಟಗಾರರಾಗಿ ತಮ್ಮ ಶ್ರೇಷ್ಠ ಮೈಲಿಗಲ್ಲನ್ನು ಸಾಧಿಸಿದ್ದಾರೆ!

Read this article in हिन्दी | English | বাংলা | தமிழ் | ગુજરાતી | मराठी

#Sellfmade ಫ್ಲಿಪ್‌ಕಾರ್ಟ್‌ ಮಾರಾಟಗಾರರಾದ ರಿತೇಶ್ ಮತ್ತು ಅವರ ಪತ್ನಿ ಉದ್ಯಮಿಗಳು ಮತ್ತು ವ್ಯಾಪಾರ ಪಾಲುದಾರರಾಗಿ ತಮ್ಮ ಆರ್ಥಿಕ ಬೆಳವಣಿಗೆಯ ಮೇಲೆ ಹಿಡಿತ ಸಾಧಿಸಲು ಹೊರಟರು. ಆಫ್‌ಲೈನ್‌ನಲ್ಲಿ ಮಾರಾಟ ಮಾಡುತ್ತ, ಅವರು ಕನಸು ಕಂಡಷ್ಟು ವೇಗವಾಗಿ ಅವರಿಗೆ ತಮ್ಮ ವ್ಯಾಪಾರವನ್ನು ಬೆಳೆಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ, ಅವರು ಇ-ಕಾಮರ್ಸ್‌ನ ಪ್ರಯೋಜನಗಳನ್ನು ಮತ್ತು ಸರಳತೆಯನ್ನು ಸ್ವೀಕರಿಸಿದರು ಮತ್ತು ಅಂದಿನಿಂದ ಅವರು ಹಿಂತಿರುಗಿ ನೋಡಲಿಲ್ಲ! ಬಿಗ್ ಬಿಲಿಯನ್ ಡೇಸ್ 2020ರ ಸಮಯದಲ್ಲಿ , ಈ ಭರ್ಜರಿ ಜೋಡಿ ತಮ್ಮ ಮಾರಾಟದಲ್ಲಿ ಏಳ್ಗೆ ಕಂಡಿತು! ಅವರ ಸ್ಪೂರ್ತಿದಾಯಕ ಕಥೆಯನ್ನು ಓದಿ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಅವರ ಕನಸನ್ನು ಅವರು ಹೇಗೆ ನನಸು ಮಾಡಿಕೊಂಡರೆಂದು ಕಂಡುಕೊಳ್ಳಿ

Flipkart sellers

ಈ ಕಥೆಯಲ್ಲಿ: ಈ ಗಂಡ-ಹೆಂಡತಿ ಜೋಡಿ ಹೇಗೆ ವ್ಯಾಪಾರ ಪಾಲುದಾರರಾದರು ಮತ್ತು #Sellfmade ಫ್ಲಿಪ್‌ಕಾರ್ಟ್‌ ಮಾರಾಟಗಾರರಾಗಿ ತಮ್ಮ ಕನಸನ್ನು ಹೇಗೆ ನನಸು ಮಾಡಿಕೊಂಡರೆಂದು ನೋಡಿ.


ನನ್ನ ಹೆಸರು ರಿತೇಶ್ ಕುಮಾರ್ ಶರ್ಮಾ. ನಾನು ಸೈನ್ಯದ ಹಿನ್ನೆಲೆಯಿಂದ ಬಂದವನು – ನನ್ನ ತಂದೆ ಸಶಸ್ತ್ರ ಪಡೆಗಳಲ್ಲಿದ್ದರು – ಮತ್ತು ಕುಟುಂಬದಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದವರಲ್ಲಿ ನಾನು ಮೊದಲನೆಯವನು. ನಾನು ಎಲ್ಆರ್ ರಿಟೇಲ್ ಎಂಬ ಕಂಪನಿಯನ್ನು ನಡೆಸುತ್ತಿದ್ದೇನೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ನಮ್ಮ ಬ್ರ್ಯಾಂಡ್ ಮೋಕ್ಷಿ ಎಂದಾಗಿದೆ. ನಾನು ಜನವರಿ 2016ರಿಂದ ಫ್ಲಿಪ್‌ಕಾರ್ಟ್‌ ಮಾರಾಟಗಾರನಾಗಿದ್ದೇನೆ .

ನಾನು ಉದ್ಯಮಿಯಾಗುವ ಮೊದಲು, ನಾನು ಸೇವಾ ವಲಯದಲ್ಲಿ ಕೆಲಸ ಮಾಡುತ್ತಿದ್ದರೂ ನಾನು ನನ್ನ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಬಯಸುತ್ತೇನೆಂದು ನನಗೆ ಶೀಘ್ರದಲ್ಲೇ ಅರಿವಾಯಿತು. ಆಗಲೇ ನನಗೆ ನನ್ನ ವ್ಯಾಪಾರ ಪಾಲುದಾರರು ಯಾರಾಗುತ್ತಾರೆಂದು ತಿಳಿದಿತ್ತು – ಅದು ನನ್ನ ಪತ್ನಿಯಾಗಿದ್ದಳು ಹಾಗೂ ಈಗ ಅವಳು ಎಲ್‌ಆರ್ ರೀಟೇಲ್‌ನ ಮಾಲಕಿಯಾಗಿದ್ದಾಳೆ.

ನನ್ನ ಹೆಂಡತಿ ಮತ್ತು ನಾನು ನಮ್ಮ ವ್ಯಾಪಾರವನ್ನು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ಅದರಿಂದ ಬಹಳಷ್ಟು ಕಲಿತಿದ್ದೇವೆ. ನಾವು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರೆ ನಾವು ಹೆಚ್ಚಿನ ಗ್ರಾಹಕರನ್ನು ತಲುಪಬಹುದು ಮತ್ತು ನಮ್ಮ ವ್ಯಾಪಾರವನ್ನು ಬೆಳೆಸಬಹುದೆಂದು ನಾವು ಅರಿತುಕೊಂಡ ನಂತರ, ನಾವು ಫ್ಲಿಪ್‌ಕಾರ್ಟ್‌ ಮಾರಾಟಗಾರರಾಗಿ ನೋಂದಣಿ ಮಾಡಿಕೊಂಡೆವು. ನಾವು ಮಾರಾಟ ಮಾಡಲಿರುವ ಗ್ರಾಹಕರ ನೆಲೆಯನ್ನು ನೋಡಿದಾಗ ನಾವು ಸರಿಯಾದ ಆಯ್ಕೆ ಮಾಡಿದ್ದೇವೆಂದು ನಮಗೆ ಅರಿವಾಯಿತು. ಒಮ್ಮೆ ನಾವು ಪ್ರಾರಂಭಿಸಿದ ಮೇಲೆ, ನಾವು ದಿನಕ್ಕೆ 10-20 ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದೆವು ಮತ್ತು ಶೀಘ್ರದಲ್ಲೇ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು. ನಾವು 35-40 ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆವು ಮತ್ತು ಇಂದು ನಾವು ಒಂದು ದಿನದಲ್ಲಿ ಕನಿಷ್ಠ 100 ಆರ್ಡರ್‌ಗಳನ್ನು ಪಡೆಯುತ್ತೇವೆ .

ಇಲ್ಲಿಯವರೆಗೆ ಈ ಅನುಭವವು ಅದ್ಭುತವಾಗಿದೆ. ನಮ್ಮ ಎಲ್ಲಾ ಗಮನ ಮತ್ತು ಪ್ರಯತ್ನಗಳು ಈಗ ಫ್ಲಿಪ್‌ಕಾರ್ಟ್‌ ಗ್ರಾಹಕರಿಂದ ಬರುತ್ತಿರುವ ಆರ್ಡರ್‌ಗಳ ಮೇಲೆ ಕೇಂದ್ರೀಕೃತವಾಗಿವೆ ಮತ್ತು ನಾವು ಹಿಂದಿರುಗಿ ನೋಡಿಲ್ಲ. ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರಿಕೆ ಮಾಡಿದಾಗಿನಿಂದ ನಮ್ಮ ವ್ಯಾಪಾರದ ಮೇಲೆ ಉಂಟಾದ ಪರಿಣಾಮವು ಅಗಾಧವಾಗಿದೆ!

ಈ ವರ್ಷ ಬಿಗ್ ಬಿಲಿಯನ್ ಡೇಸ್ ಮಾರಾಟದ ಮೊದಲು ನಾವು ಎಲ್ಲವನ್ನೂ ವಿವರವಾಗಿ ಯೋಜಿಸಿದ್ದೆವು – ನಮ್ಮ ಗ್ರಾಹಕರಿಗೆ ಆಫರ್‌ಗಳು, ಲಿಸ್ಟ್ ಮಾಡಬೇಕಾದ ಉತ್ಪನ್ನಗಳು, ಪ್ಯಾಕೇಜಿಂಗ್ ವಸ್ತುಗಳನ್ನು ಪಡೆಯುವುದು, ಗೋದಾಮಿನ ಸ್ಥಳ ನಿರ್ವಹಣೆ ಮತ್ತು ಗ್ರಾಹಕರ ಬೇಡಿಕೆಯನ್ನು ಪೂರೈಸುವುದು. ಗೋದಾಮಿನ ಸ್ಥಳ, ಲಾಜಿಸ್ಟಿಕ್ಸ್ ಮತ್ತು ಫ್ಲಿಪ್‌ಕಾರ್ಟ್‌ ಮಾರಾಟಗಾರರ ತಂಡದ ಎಲ್ಲ ಬೆಂಬಲಗಳ ಬಗ್ಗೆ ಫ್ಲಿಪ್‌ಕಾರ್ಟ್‌ನಿಂದ ಬಂದ ಸಂವಹನವು ನಮಗೆ ನಿಜವಾಗಿಯೂ ಪ್ರಯೋಜನವಾಯಿತು.

ಈ ಪ್ರಯತ್ನಗಳಿಂದಾಗಿ, ನಮ್ಮ ಗುರಿಯನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾದೆವು. ಈ ವರ್ಷದ ಮಾರಾಟದಲ್ಲಿ ನಾವು ಪ್ರತಿದಿನ ಸುಮಾರು 70,000 ಉತ್ಪನ್ನಗಳನ್ನು ಮಾರಾಟ ಮಾಡಿದೆವು .

ಈ ವರ್ಷದ ಆರಂಭದಲ್ಲಿ, ಕೋವಿಡ್‌- 19 ಸಾಂಕ್ರಾಮಿಕ ಲಾಕ್‌ಡೌನ್ ಸಮಯದಲ್ಲಿ , ಎಲ್ಲವನ್ನೂ ಮುಚ್ಚಲಾಗಿತ್ತು. ನಮ್ಮ ವ್ಯಾಪಾರವನ್ನು ಮತ್ತೆ ದಡ ಹತ್ತಿಸುವುದು ನಮಗೆ ಸಾಧ್ಯವಾಗದಿರಬಹುದೆಂದು ನಮಗನಿಸುತ್ತಿತ್ತು. ಆದರೆ ನಂತರ ನಮಗೆ ಫ್ಲಿಪ್‌ಕಾರ್ಟ್‌ನಿಂದ ಒಂದು ಕರೆ ಬಂತು ಹಾಗೂ ನಾವು ಮತ್ತೆ ಆನ್‌ಲೈನ್ ಮಾರಾಟವನ್ನು ಪ್ರಾರಂಭಿಸಬಹುದೆಂದು ನಮಗೆ ತಿಳಿಸಲಾಯಿತು. ನೈರ್ಮಲ್ಯೀಕರಣದ ವಿಷಯಕ್ಕೆ ಬಂದಾಗ ನಾವು ಸರ್ಕಾರದ ಎಲ್ಲ ನಿರ್ದೇಶನಗಳನ್ನು ಪಾಲಿಸಿದೆವು ಮತ್ತು ನಾವು ನಮ್ಮ ನೌಕರರ ಬಗ್ಗೆ ಅಪಾರವಾದ ಕಾಳಜಿ ವಹಿಸಿದ್ದೇವೆ.

ವ್ಯಾಪಾರವನ್ನು ಮತ್ತೆ ನಡೆಸುವ ಪ್ರತಿಯೊಂದು ಹಂತದಲ್ಲೂ ನಮ್ಮ ನೌಕರರು ಸಹಕರಿಸಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿನ ನಮ್ಮ ಅಕೌಂಟ್ ಮ್ಯಾನೇಜರ್ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಮತ್ತು ಅವರ ಸೂಚನೆಯಂತೆ ನಾವು ನಮ್ಮ ವ್ಯಾಪಾರ ಕಾರ್ಯಾಚರಣೆಯನ್ನು ಮಾರ್ಪಡಿಸಿದೆವು.

ನಮ್ಮಂತಹ ಮಾರಾಟಗಾರರಿಗೆ ಫ್ಲಿಪ್‌ಕಾರ್ಟ್‌ ತುಂಬಾ ಬೆಂಬಲ ನೀಡುತ್ತದೆ. ಪ್ರಾರಂಭಿಸುವುದು ತುಂಬಾ ಸುಲಭವಾಗಿದೆ ಮತ್ತು ಅವರ ಸಂವಹನವು ಪಾರದರ್ಶಕವಾಗಿರುತ್ತದೆ. ಉತ್ಪನ್ನಗಳನ್ನು ಲಿಸ್ಟ್ ಮಾಡುವ ಮೊದಲು ಎಲ್ಲವನ್ನೂ ಚರ್ಚಿಸಲಾಗುತ್ತದೆ ಮತ್ತು ನಮ್ಮ ಅಕೌಂಟ್ ಮ್ಯಾನೇರ್ ಸೂಚನೆಗಳನ್ನು ಅನುಸರಿಸುವುದು ನಮ್ಮ ಯಶಸ್ಸನ್ನು ಖಚಿತಪಡಿಸುತ್ತದೆಂದು ನಾನು ಗಮನಿಸಿದ್ದೇನೆ!

ಜಿಷ್ಣು ಮುರಳಿ ಅವರಿಗೆ ಹೇಳಿದಂತೆ ಪಲ್ಲವಿ ಸುಧಾಕರ್ ಅವರಿಂದ ಹೆಚ್ಚುವರಿ . ಕೊಡುಗೆಗಳೊಂದಿಗೆ


ಈ ಕಥೆ ಇಷ್ಟವಾಯಿತೇ? ಭಾರತದಾದ್ಯಂತ ಫ್ಲಿಪ್‌ಕಾರ್ಟ್‌ ಮಾರಾಟಗಾರರಿಂದ ಹೆಚ್ಚಿನ ಕಥೆಗಳನ್ನು ಕೇಳಲು ಈ ವಿನೋದ, ಸಂವಾದಾತ್ಮಕ ನಕ್ಷೆಯನ್ನು ನೋಡಿ!

Enjoy shopping on Flipkart