#Sellfmade: ದಿನಕ್ಕೆ 5 ಆರ್ಡರ್‌ಗಳಿಂದ 700 ಆರ್ಡರ್‌ಗಳವರೆಗೆ ಹೋದ ಈ ಮಹಿಳಾ ಉದ್ಯಮಿ ಫ್ಲಿಪ್‌ಕಾರ್ಟ್ ತನ್ನ ವ್ಯವಹಾರದ ಅತ್ಯುತ್ತಮ ನಿರ್ಧಾರವಾಗಿತ್ತೆಂದು ಹೇಳುತ್ತಾರೆ!

Read this article in हिन्दी | English | ગુજરાતી | मराठी | বাংলা | தமிழ்

ಅವರದೇ ಸ್ವಂತ ವೆಬ್‌ಸೈಟ್‌ನಲ್ಲಿ ಅವರ ಎಲೆಕ್ಟ್ರಾನಿಕ್ಸ್ ವ್ಯವಹಾರವು ಸುಧಾರಿಸದಿದ್ದಾಗ, ಚಿತ್ರಾ ವ್ಯಾಸ್ ತನ್ನ ಮಾರಾಟವನ್ನು ಸುಧಾರಿಸಲು ಫ್ಲಿಪ್‌ಕಾರ್ಟ್‌ ಅನ್ನು ಬಳಸಿಕೊಂಡರು. ಶೀಘ್ರದಲ್ಲೇ, ಅವರ ವ್ಯಾಪಾರದಲ್ಲಿ ಗ್ರಾಹಕರ ಆರ್ಡರ್‌ಗಳಲ್ಲಿ ಏರಿಕೆಯಾಯಿತು. ಕೋವಿಡ್‌-19 ಆಘಾತವಾದಾಗಲೂ ಕೂಡ, ಅವರು ಅದಕ್ಕೆ ಹೊಂದಿಕೊಂಡರು ಮತ್ತು ಅಭಿವೃದ್ಧಿ ಸಾಧಿಸಿದರು. ಚಿಕ್ಕದಾಗಿ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಮಾರಾಟಗಾರ್ತಿಯು "ಅತ್ಯುತ್ತಮ ಉದ್ಯಮಿ" ಪ್ರಶಸ್ತಿಯನ್ನು ಹೇಗೆ ಗೆದ್ದರೆಂದು ತಿಳಿಯಲು ಮುಂದೆ ಓದಿ.

entrepreneur

ನ್ನ ಹೆಸರು ಚಿತ್ರಾ ವ್ಯಾಸ್. 5 ವರ್ಷಗಳ ಹಿಂದೆ ನಾನು ಫ್ಲಿಪ್‌ಕಾರ್ಟ್ ಮಾರಾಟಗಾರ್ತಿಯಾದೆ. ನಾನು ಎಲೆಕ್ಟ್ರಾನಿಕ್ಸ್ ಮಾರಾಟ ಮಾಡುವ ಉದ್ಯಮಿಯಾಗಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ನನ್ನ ಪತಿ ಈ ಹಿಂದೆ ಇ-ಕಾಮರ್ಸ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಿದ್ದರಿಂದ ನಾವು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಬಗ್ಗೆ ಯಾವುದೇ ಸಂದೇಹವಿರಲಿಲ್ಲ.

ನಮಗೆ ಹೂಡಿಕೆದಾರರ ಅಗತ್ಯವಿತ್ತು ಮತ್ತು ನಾವು ಅದಕ್ಕಾಗಿ ಹೆಚ್ಚು ಹುಡುಕಬೇಕಾಗಲಿಲ್ಲ. ನನ್ನ ಚಿಕ್ಕಪ್ಪ ವ್ಯಾಪಾರದಲ್ಲಿ ಹೂಡಿಕೆ ಮಾಡಿದರು ಮತ್ತು ಶೀಘ್ರದಲ್ಲೇ, ನಾವು ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಮ್ಮದೇ ಆದ ವೆಬ್‌ಸೈಟ್ ಅನ್ನು ತಯಾರಿಸಿದೆವು. ಆದರೆ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ಪ್ರಚಾರ ಮಾಡಲು ನಮಗೆ ಸರಿಯಾದ ಮಾರ್ಗದರ್ಶನವಿರಲಿಲ್ಲ. ಆಗ ನಾವು ಫ್ಲಿಪ್‌ಕಾರ್ಟ್‌ ಅನ್ನು ಆರಿಸಿಕೊಂಡೆವು. ನಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ, ನಾವು ಉತ್ತಮ ಫಲಿತಾಂಶಗಳನ್ನು ಪಡೆಯುವ ಆಸೆ ಹೊಂದಿದ್ದೆವು.

entrepreneur

Flipkart ಅನ್ನು ಸೇರಿಕೊಂಡ ತಕ್ಷಣ ನಮ್ಮ ಮಾರಾಟದಲ್ಲಿ ಹೆಚ್ಚಳವುಂಟಾಯಿತು. ಒಂದೇ ವಾರದೊಳಗೆ, ನಮಗೆ 100 ಆರ್ಡರ್‌ಗಳು ಬಂದವು! ಫ್ಲಿಪ್‌ಕಾರ್ಟ್‌ ನಮ್ಮ ಗ್ರಾಹಕರ ನೆಲೆಯನ್ನು ವಿಸ್ತರಿಸಲು ನಮಗೆ ಬೇಕಾದ ಮಾರ್ಗದರ್ಶನ ನೀಡಿತು. ನಮ್ಮ ವ್ಯಾಪಾರದಲ್ಲಿ ಸಹಾಯ ಮಾಡಲು ಒಬ್ಬ ಅಕೌಂಟ್ ಮ್ಯಾನೇಜರ್ ಅನ್ನು ಕೊಡಲಾಯಿತು ಮತ್ತು ನಮ್ಮ ಲಿಸ್ಟಿಂಗ್‌ಗಳಿಗೆ ಹೆಚ್ಚಿನ ವರ್ಗಗಳನ್ನು ಸೇರಿಸುವಂತೆ ಅವರು ನಮಗೆ ಸಲಹೆ ನೀಡಿದರು. ಆಗ ನಾವು ಫ್ಯಾಷನ್ ವಿಭಾಗದಲ್ಲಿ ನಮ್ಮ ಅವಕಾಶಗಳನ್ನು ಅನ್ವೇಷಿಸಲು ಪ್ರಾರಂಭಿಸಿದೆವು.

ನಮ್ಮ ನಮ್ಮ ಅಕೌಂಟ್ ಮ್ಯಾನೇಜರ್ ವಿವರವಾಗಿ ಹೇಳುತ್ತಿದ್ದರು – ಅವರು ನಮ್ಮನ್ನು ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೆ ತಯಾರು ಮಾಡಿದರು ಫ್ಲಿಪ್‌ಕಾರ್ಟ್ ಗ್ರಾಹಕರು ನೀಡಿದ ಆರ್ಡರ್‌ಗಳ ಮಹಾಪೂರವನ್ನು ಪೂರೈಸಲು ನಮ್ಮ ದಾಸ್ತಾನುಗಳನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕೆಂದು ತೋರಿಸಿದರು. ಕೋವಿಡ್‌-19 ಸಾಂಕ್ರಾಮಿಕವು ನಮ್ಮ ವ್ಯಾಪಾರಕ್ಕೆ ಹಾನಿಯನ್ನುಂಟುಮಾಡಿದರೂ, ನಾವು ನಮ್ಮ ಮಾರಾಟವನ್ನು ಮತ್ತೆ ಸರಿದಾರಿಗೆ ತರಲು ಅವರು ನಮ್ಮ ಜೊತೆ ಕೈ ಜೋಡಿಸಿದರು. ಫ್ಲಿಪ್‌ಕಾರ್ಟ್‌ನಲ್ಲಿನ ಅಕೌಂಟ್ ಮ್ಯಾನೇಜರ್‌ ಬಹಳ ಸಹಾಯಕ ಮಾಡುತ್ತಾರೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವ ಒಂದು ಪ್ರಮುಖ ವಿಷಯವೆಂದರೆ – ನಾವು ಎಲ್ಲಾದರೂ ಸಿಲುಕಿಕೊಂಡರೆ, ಅಥವಾ ಯಾವುದೇ ಸಮಸ್ಯೆಯಿದ್ದಲ್ಲಿ, ನಾವು ಅವರಿಗೆ ಮೆಸೇಜ್ ಕಳುಹಿಸುತ್ತೇವೆ ಮತ್ತು ಅವರು ನಮಗೆ ಸಹಾಯ ಮಾಡುತ್ತಾರೆ.

ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್‌ ನಮಗೆ ಭರವಸೆ ನೀಡಿತು. ಆ ಸಮಯದಲ್ಲಿ ಪಾದರಕ್ಷೆಗಳು ನಮ್ಮ ಪ್ರಾಥಮಿಕ ವರ್ಗವಾಗಿದ್ದವು ಮತ್ತು ನಾವು ಆಗ ತಾನೇ ಆಹಾರ ಮತ್ತು ಪೌಷ್ಟಿಕಾಂಶ ವಿಭಾಗದಲ್ಲಿ ಒಣ ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದೆವು.

ಲಾಕ್‌ಡೌನ್‌ ಮೊದಲು, ಒಣ ಹಣ್ಣುಗಳಿಗಾಗಿ ನಾವು 20-30 ಆರ್ಡರ್‌ಗಳನ್ನು ಪಡೆಯುತ್ತಿದ್ದೆವು, ಹಾಗೂ ನಮ್ಮ ಹೆಚ್ಚಿನ ಮಾರಾಟವು ಪಾದರಕ್ಷೆಗಳಿಂದ ಬರುತ್ತಿತ್ತು. ಆದರೆ ಕೋವಿಡ್‌-19 ರ ನಂತರ ಅದು ಬದಲಾಯಿತು – ನಮ್ಮ ಪಾದರಕ್ಷೆಗಳ ವರ್ಗದ ಬಗ್ಗೆ ಮತ್ತು ನಮ್ಮ ವ್ಯಾಪಾರವು ಹೇಗೆ ಉಳಿಯುತ್ತದೆನ್ನುವ ಬಗ್ಗೆ ನಾವು ಚಿಂತಿತರಾಗಿದ್ದೆವು. ಆದರೆ ಫ್ಲಿಪ್‌ಕಾರ್ಟ್‌ ಒಣ ಹಣ್ಣುಗಳು ಮತ್ತು ಪಡಿತರ ವರ್ಗದ ಕುರಿತು ನಮಗೆ ಒಳನೋಟಗಳನ್ನು ನೀಡಿತು. ಲಾಕ್‌ಡೌನ್ ನಂತರದ ಮೊದಲನೇ ದಿನದಲ್ಲೇ, ನಮ್ಮ ಒಣ ಹಣ್ಣುಗಳಿಗೆ 400-500 ಆರ್ಡರ್‌ಗಳು ಬಂದವು!

ನಾವು ಈಗ ಪ್ಯಾಕೇಜಿಂಗ್ ಕೂಡ ಮಾಡುತ್ತೇವೆ ಮತ್ತು ಸಾಫ್ಟ್ ಆರ್ಟ್ ಎಂಬ ನಮ್ಮ ಸ್ವಂತ ಒಣ ಹಣ್ಣುಗಳ ಬ್ರಾಂಡ್ ಅನ್ನು ಪ್ರಾರಂಭಿಸಿದ್ದೇವೆ. ಇದು ಫ್ಲಿಪ್‌ಕಾರ್ಟ್‌ ನಮಗೆ ನೀಡಿರುವ ಅನೇಕ ಅವಕಾಶಗಳಲ್ಲಿ ಒಂದು ಉದಾಹರಣೆಯಾಗಿದೆ. ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಫ್ಲಿಪ್‌ಕಾರ್ಟ್‌ ಲಾಜಿಸ್ಟಿಕ್ಸ್‌ ಗೆ ಉತ್ಪನ್ನಗಳನ್ನು ನೀಡುವುದು ನಮಗೆ ಸಾಧ್ಯವಾಗದಿದ್ದಾಗಲೂ, ಅವರು ತಮ್ಮ ಕೆಲಸದ ವ್ಯಾಪ್ತಿಯನ್ನು ಮೀರಿ ನಮ್ಮ ಮನೆಗೆ ಬಂದು ಅವುಗಳನ್ನು ತೆಗೆದುಕೊಂಡು ಹೋದರು.

entrepreneur

ಕಳೆದ 6 ತಿಂಗಳುಗಳಲ್ಲಿ, ಆನ್‌ಲೈನ್‌ನಲ್ಲಿ ಎಂದಿಗೂ ಶಾಪಿಂಗ್ ಮಾಡದ ನನ್ನ ಕುಟುಂಬದ ಸದಸ್ಯರೂ ಸಹ ಇ-ಕಾಮರ್ಸ್ ಸಹಾಯದಿಂದ ಅಗತ್ಯ ಮತ್ತು ಇತರ ಉತ್ಪನ್ನಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ವ್ಯಾಪಾರಗಳು ಮತ್ತು ಗ್ರಾಹಕರಿಬ್ಬರಿಗೂ ಈಗ ಆನ್‌ಲೈನ್ ಶಾಪಿಂಗ್ ಉತ್ತಮವಾದ ಮತ್ತು ಸುರಕ್ಷಿತವಾದ ಪರಿಹಾರವಾಗಿದೆ.

 

ನಾನು ಇಷ್ಟೊಂದು ಯಶಸ್ವಿ ಉದ್ಯಮಿಯಾಗುತ್ತೇನೆಂದು ನಾನು ಯಾವತ್ತೂ ಊಹಿಸಿರಲಿಲ್ಲ. ಎರಡು ವರ್ಷಗಳ ಹಿಂದೆ ನನಗೆ ಫ್ಲಿಪ್‌ಕಾರ್ಟ್‌ನ ಮಹಿಳಾ ಮಾರಾಟಗಾರ್ತಿಯರಲ್ಲಿ “ಅತ್ಯುತ್ತಮ ಉದ್ಯಮಿ ಪ್ರಶಸ್ತಿ ದೊರಕಿತು. ನೀವು ಐದು ಆರ್ಡರ್‌ಗಳೊಂದಿಗೆ ಪ್ರಾರಂಭಿಸಿ ಈಗ ನೀವು ಪ್ರತಿದಿನ 700 ಆರ್ಡರ್‌ಗಳನ್ನು ಪಡೆಯುವುದು ಒಂದು ಒಳ್ಳೆಯ ಭಾವನೆಯಾಗಿದೆ. ನಾವು ಚಿಕ್ಕದಾಗಿ ಪ್ರಾರಂಭಿಸಿದೆವು ಮತ್ತು ಈಗ ನಮಗೆ ಈಗ ಒಂದು ಸಂಪೂರ್ಣ ಆಫೀಸ್ ಇದೆ. ನಾವು ಇನ್ನೂ ನಮ್ಮ ಪ್ರಯಾಣವನ್ನು ಆನಂದಿಸುತ್ತಿದ್ದೇವೆ.

ಜಿಷ್ಣು ಮುರಳಿ ಅವರಿಗೆ ಹೇಳಿದಂತೆ, ಪಲ್ಲವಿ ಸುಧಾಕರ್ ಅವರ ಹೆಚ್ಚುವರಿ ಕೊಡುಗೆಗಳೊಂದಿಗೆ.

Enjoy shopping on Flipkart