#OneInABillion: ವೃತ್ತಿಪರ ಫುಟ್‌ಬಾಲ್ ಆಟಗಾರ, ತರಬೇತುದಾರ, ಫ್ಲಿಪ್ಕಾರ್ಟ್ ಕಿರಾಣ ಪಾಲುದಾರ – ನೋವಾ ರೊಜಾರಿಯೊ ನಿಜಕ್ಕೂ ಅಜೇಯ

Read this article in हिन्दी | English | বাংলা | தமிழ் | ગુજરાતી | मराठी | తెలుగు

ನೋವಾ ಅಗಸ್ಟೀನ್ ರೊಜಾರಿಯೊ ಅನೇಕ ಪ್ರತಿಭೆಯಿರುವ ವ್ಯಕ್ತಿ. ಸ್ಠೋರ್‌-ಮಾಲೀಕ, ಟೈಲರ್, ಭದ್ರತಾ ಮೇಲ್ವಿಚಾರಕ, ವೃತ್ತಿಪರ ಫುಟ್ಬಾಲ್ ಆಟಗಾರ ಮತ್ತು ತರಬೇತುದಾರ - ಹೀಗೆ ನೋಹ್ ಎಲ್ಲವನ್ನೂ ಮಾಡಿದ್ದಾರೆ. ಆದರೆ ಅವರಿಗೆ, ಒಬ್ಬ ವ್ಯಕ್ತಿಯಾಗಿ ಅವರು ಮಾಡುವ ಕೆಲಸಗಳು ನಿಜವಾಗಿಯೂ ವ್ಯತ್ಯಾಸ ತರುತ್ತವೆ ಎಂದು ನಂಬುತ್ತಾರೆ. ಅವರು ಜೀವನದಲ್ಕಂಲಿ ಹೇಗೆ ಯಶಸ್ಸನ್ನು ಪಡೆಯುತ್ತಾರೆ ಎಂಬುದನ್ನು ತಿಳಿಯಲು ಅವರ ಸ್ಪೂರ್ತಿದಾಯಕ ಕಥೆಯನ್ನು ಓದಿ!

ನಾನು ಶಸ್ತ್ರಚಿಕಿತ್ಸೆಯಲ್ಲಿ ನನ್ನ ಕಾಲನ್ನು ಬಹುತೇಕ ಕಳೆದುಕೊಂಡೆ.

ನಾನು 6 ವರ್ಷದವನಾಗಿದ್ದಾಗ ಫುಟ್‌ಬಾಲ್ ಆಡಲು ಪ್ರಾರಂಭಿಸಿದೆ. ಹವ್ಯಾಸಕ್ಕಿಂತ ಹೆಚ್ಚಾಗಿ ಅದು ನನ್ನ ನಿರಂತರ ಉತ್ಸಾಹವಾಗಿತ್ತು. ನಾನು ಈ ಹಿಂದೆ ತಮಿಳುನಾಡು, ಕರ್ನಾಟಕ ಮತ್ತು ನಮ್ಮ ದೇಶವನ್ನು ವಿವಿಧ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ್ದೇನೆ. ಇಂದು, ನಾನು ಫುಟ್ಬಾಲ್ ಕೋಚ್ ಕೂಡ ಆಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಎರಡು ತಂಡಗಳಿಗೆ ತರಬೇತಿ ನೀಡುತ್ತೇನೆ.

ಆದರೆ ನಾನು ಈ ವೃತ್ತಿಗೆ ಬರಲು ಪ್ರಯತ್ನಿಸುತ್ತಿರುವಾಗ, ಆ ಪಯಣ ಸುಗಮವಾಗಿರಲಿಲ್ಲ.

16 ವರ್ಷದೊಳಗಿನವರ ವಿಭಾಗದಲ್ಲಿ ಸ್ಥಾನ ಗಳಿಸಲು ಪ್ರಯತ್ನಿಸುವಾಗ ನಾನು ಆಯ್ಕೆಯಾಗಲಿಲ್ಲ. ಅದಕ್ಕೆ ಬದಲಾಗಿ ಆ ಸಮಯದಲ್ಲಿ, ನನ್ನ ತಂದೆ ನನಗೆ ಕೆಲಸ ಹುಡುಕುವಂತೆ ಹೇಳಿದರು – ಇದರಿಂದ ನಾನು ಉದ್ಯೋಗದಲ್ಲಿರಲು ಮತ್ತು ನನ್ನನ್ನು ಸ್ವಾವಲಂಬಿಯಾಗುತ್ತೇನೆ ಎಂಬುದು ಅವರ ಆಲೋಚನೆಯಾಗಿತ್ತು. ಆಗಷ್ಟೇ ಎಸ್ ಎಸ್ ಎಲ್ ಸಿ ಮುಗಿಸಿ ಮೆಕ್ಯಾನಿಕ್ ಆಗಿ ಕೆಲಸ ಆರಂಭಿಸಿದ್ದೆ. ಇತರ ಕೆಲಸಗಳಲ್ಲಿ ಕಾರ್ಯನಿರ್ವಹಿಸುವಾಗಲೂ, ನಾನು ಫುಟ್ಬಾಲ್‌ ಮಾತ್ರ ಬಿಟ್ಟಿರಲಿಲ್ಲ, ನನ್ನ ಸ್ನೇಹಿತರೊಂದಿಗೆ ಆಡುತ್ತಿದ್ದೆ. ಕ್ರಮೇಣ, ನಾನು ಟೈಲರಿಂಗ್, ಫ್ಯಾಬ್ರಿಕೇಶನ್ ಕೆಲಸ, ಭದ್ರತಾ ಅಧಿಕಾರಿ ಮತ್ತು ಮೇಲ್ವಿಚಾರಕನಾಗಿ ಕೆಲಸ ಮಾಡಿದೆ. ನಂತರ ವೃತ್ತಿಪರ ಫುಟ್‌ಬಾಲ್‌ನಲ್ಲಿ ಪ್ರಗತಿ ಸಾಧಿಸಿದೆ.

ಭಾರತದ ಪ್ರಮುಖ ಲೀಗ್‌ನ ತಂಡದ ನಾಯಕರೊಬ್ಬರು ಆಫ್-ಸೀಸನ್ ಪಂದ್ಯದ ಸಮಯದಲ್ಲಿ ನನ್ನನ್ನು ಗುರುತಿಸಿದರು. ಆಗ ನನ್ನ ವಯಸ್ಸು 27. ಅವರು ನನ್ನನ್ನು ತಂಡಕ್ಕೆ ಸೇರುವಂತೆ ಕೇಳಿದರು ಆದರೆ ನಾನಾಗ ಕೆಲಸ ಮಾಡುತ್ತಿದ್ದ ಕಾರಣ ತಂಡಕ್ಕೆ ಸೇರುವುದು ಸಂಶಯವಿತ್ತು. ಆದರೆ ಅವರು ಎರಡನ್ನೂ ಮಾಡಲು ನನ್ನನ್ನು ಪ್ರೇರೇಪಿಸಿದರು. ಹೀಗಾಗಿ ನಾನು ನನ್ನ ಕೆಲಸ ಮತ್ತು ನನ್ನ ಪ್ಯಾಷನ್‌ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯವನ್ನು ಬೆಳೆಸಿಕೊಂಡೆ. ನಾನು ವಾಸ್ತವಿಕ ಗುರಿಗಳನ್ನು ಹೊಂದಿದ್ದರಿಂದ ನನ್ನ ಉದ್ಯೋಗದಾತ ಮತ್ತು ನನ್ನ ತಂಡದ ನಾಯಕನಿಗೆ ಅದರ ಬಗ್ಗೆ ಮುಕ್ತವಾಗಿ ತಿಳಿಸಿದ್ದೆ.

ನಾನು ವೃತ್ತಿಪರ ಫುಟ್ಬಾಲ್ ಆಡುತ್ತಿದ್ದಾಗ, ನನಗೆ ಅಪಘಾತ ಆಯ್ತು. ಎದುರಾಳಿ ತಂಡದ ಸದಸ್ಯರೊಬ್ಬರು ನನ್ನ ಮೇಲೆ ಓಡಿದ್ದರಿಂದ ನನ್ನ ಕಾಲಿಗೆ ಗಾಯವಾಯಿತು. ನಾನು ಸರಿಯಾದ ಚಿಕಿತ್ಸೆಯನ್ನು ಪಡೆಯದಿದ್ದರೆ ಆರೋಗ್ಯ ಹದಗೆಡುವ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್, ನಾನು ಗುಣಮುಖನಾದೆ. ಆದರೆ ದೀರ್ಘಕಾಲದವರೆಗೆ ಆಡುವುದನ್ನೇ ನಿಲ್ಲಿಸಬೇಕಾಯಿತು. ನಂತರ ಕೋಚ್‌ ಆಗಿ ಹಿಂತಿರುಗಿದೆ.
Kirana Partner

ಆಗ ನಾನು ಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನ ಶಾಲೆಯೊಂದರಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ಆಗುವವರೆಗೂ ಎಲ್ಲವೂ ಚೆನ್ನಾಗಿತ್ತು. ಬಳಿಕ ಗುತ್ತಿಗೆ ನೌಕರರು ತೀವ್ರ ವೇತನ ಕಡಿತವನ್ನು ಅನುಭವಿಸಿದರು ಮತ್ತು ತಮ್ಮ ಖರ್ಚುಗಳನ್ನು ನಿರ್ವಹಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಯಿತು. ಫ್ಲಿಪ್‌ಕಾರ್ಟ್‌ ಕಿರಾಣಾ ಪಾಲುದಾರನಾಗಿ ಸಮೀಪದ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತನೊಂದಿಗೆ ಈ ಬಗ್ಗೆ ಮಾತನಾಡಿದೆ. ನಾನು ಕೂಡ ಒಂದು ಸಣ್ಣ ಸ್ಟೇಷನರಿ ಅಂಗಡಿಯನ್ನು ಹೊಂದಿದ್ದರಿಂದಾಗಿ ನಾನೂ ಆ ಕಾರ್ಯಕ್ರಮಕ್ಕೆ ಸೇರಿಕೊಂಡೆ. ಆನ್‌ಬೋರ್ಡಿಂಗ್ ಪ್ರಕ್ರಿಯೆ ಅತ್ಯಂತ ಸುಗಮವಾಗಿತ್ತು. ನನ್ನ ನಿರ್ಧಾರವೂ ಸರಿಯಾಗಿತ್ತು.

ಇಂದು, ಶಾಲೆಗಳು ಪುನರಾರಂಭಗೊಂಡ ನಂತರ ಮತ್ತು ನನ್ನ ಕೋಚಿಂಗ್‌ ಸೆಷನ್‌ಗಳು ಉತ್ತಮವಾಗಿ ನಡೆಯುತ್ತಿದ್ದರೂ ಸಹ, ನಾನು ನನ್ನ ಕಿರಾಣದ ಕೆಲಸವನ್ನು ಬಿಟ್ಟುಬಿಡಲು ಉದ್ದೇಶಿಸುವುದಿಲ್ಲ. ಏಕೆಂದರೆ ನನಗೆ ಬೆಂಬಲದ ಅಗತ್ಯವಿದ್ದಾಗ ಫ್ಲಿಪ್‌ಕಾರ್ಟ್ ನನ್ನ ಬೆಂಬಲಕ್ಕೆ ನಿಂತು ಸಹಕರಿಸಿದೆ. ಹಾಗಾಗಿ ಈಗ ನಾನು ಫ್ಲಿಪ್‌ಕಾರ್ಟ್‌ನೊಂದಿಗೆ ನಿಲ್ಲಲು ನಿರ್ಧರಿಸಿದೆ.

ನನ್ನ ಇಂದಿನ ದಿನಚರಿ ಹೀಗಿದೆ: ನಾನು ನನ್ನ ಶಾಲಾ ತಂಡಗಳಲ್ಲಿ ಒಂದಕ್ಕೆ ಬೆಳಿಗ್ಗೆ ಬೇಗನೆ ತರಬೇತಿ ನೀಡಲು ಪ್ರಾರಂಭಿಸುತ್ತೇನೆ, ಅದು 8:30 ಕ್ಕೆ ಕೊನೆಗೊಳ್ಳುತ್ತದೆ. ಬೆಳಿಗ್ಗೆ 9 ಗಂಟೆಗೆ, ನಾನು ಫ್ಲಿಪ್‌ಕಾರ್ಟ್ ಹಬ್‌ಗೆ ಹೋಗಿ, ದಿನದ ಪ್ಯಾಕೇಜ್‌ಗಳನ್ನು ಸಂಗ್ರಹಿಸಿದೆ. ಅದರ ನಂತರ ನಾನು ನನ್ನ ಅಂಗಡಿಗೆ ಹೊರಟೆ. ನಾನು ಸುಮಾರು ಬೆಳಿಗ್ಗೆ 9:45 ಕ್ಕೆ ತಲುಪಿ, ಪ್ಯಾಕೇಜ್‌ಗಳನ್ನು ಪ್ರತ್ಯೇಕಿಸುತ್ತೇನೆ ಮತ್ತು ಅದಕ್ಕೆ ಅನುಗುಣವಾಗಿ ನನ್ನ ವಿತರಣೆಗಳನ್ನು ಯೋಜಿಸುತ್ತೇನೆ. ನಾನು ವಾಸ್ತವಿಕವಾಗಿ ಮಾಡಬಹುದೆಂದು ನನಗೆ ತಿಳಿದಿರುವ ಡೆಲಿವರಿಗಳ ಸೆಟ್ ಸಂಖ್ಯೆಯನ್ನು ಹೊಂದಿದ್ದೇನೆ. ನಾನು ಯಾವಾಗಲೂ ಅದನ್ನು ಅನುಸರಿಸುತ್ತೇನೆ. ಮಧ್ಯಾಹ್ನ 2:30 ರ ಹೊತ್ತಿಗೆ, ನಾನು ನನ್ನ ಗುರಿಗಳನ್ನು ಸಾಧಿಸಿದ್ದೇನೆಯೇ ಎಂದು ಖಚಿತಪಡಿಸಿಕೊಳ್ಳುತ್ತೇನೆ ನಂತರ ಸಂಜೆ ತರಬೇತಿ ಸೆಷನ್‌ ತೆಗೆದುಕೊಳ್ಳಲು ನನ್ನ ಮುಂದಿನ ಶಾಲೆಗೆ ತೆರಳುತ್ತೇನೆ.

ನಾನು ಕಿರಾಣ ಪಾಲುದಾರನಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ, ನನ್ನ ಕುಟುಂಬದಲ್ಲಿ ಮೂಗುಮುರಿದಿದ್ದವರೇ ಹೆಚ್ಚು. ಆದರೀಗ, ಅವರಲ್ಲಿ ಹಲವರು ಅರ್ಜಿ ಸಲ್ಲಿಸುವ ಬಗ್ಗೆ ನನ್ನ ಬಳಿ ಕೇಳಿ ತಿಳಿಯುತ್ತಿದ್ದಾರೆ.

ನಾನು ನನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಹೆಂಡತಿ ಐಟಿ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್. ಅವಳಿಗೆ ಸಾಧ್ಯವಾದಾಗಲೆಲ್ಲಾ ಅಂಗಡಿಯಲ್ಲಿ ನನಗೆ ಸಹಾಯ ಮಾಡುತ್ತಾಳೆ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡವನು ಯುಎಇಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಕಿರಿಯವನು ಶಾಲೆಯಲ್ಲಿ ಓದುತ್ತಿದ್ದಾನೆ. ನನ್ನ ಹಿರಿಯ ಮಗಳು ರಾಜ್ಯ ಮಟ್ಟದ ಥ್ರೋಬಾಲ್ ಆಟಗಾರ್ತಿ ಮತ್ತು ನನ್ನ ಕಿರಿಯ ಮಗಳು ಆಹಾರಪ್ರಿಯೆ!

ನಾನು ನನ್ನ ಏರಿಯಾದಲ್ಲಿ ಡೆಲಿವರಿ ಮಾಡುತ್ತೇನೆ, ಹಾಗೇ ಇಲ್ಲಿನ ಸಾಕಷ್ಟು ಗ್ರಾಹಕರು ನನ್ನ ಪರಿಚಯಸ್ಥೂ ಹೌದು. ನಾನು ಅವರನ್ನು ವರ್ಷಗಳಿಂದ ಬಲ್ಲೆ. ಹಾಗಾಗಿ ಡೆಲಿವರಿಗಳನ್ನು ಮಾಡಲು ನನಗೆ ಸುಲಭವಾಗುತ್ತದೆ, ಆದರೆ ಹೌದು, ವೈಯಕ್ತಿಕ ಕಾರಣಗಳಿಂದ ಗ್ರಾಹಕರು ಲಭ್ಯವಿಲ್ಲದಿರುವಾಗ ಮತ್ತು ಅದು ನನ್ನ ಕೆಲಸದ ಹರಿವಿನ ಮೇಲೆ ಪರಿಣಾಮ ಬೀರುವ ಸಂದರ್ಭಗಳಿವೆ. ಆದರೆ ಅದನ್ನು ಲೆಕ್ಕಿಸದೆ, ನಾನು ಈ ಬಾಕಿ ಇರುವ ವಿತರಣೆಗಳನ್ನು ಸರಿಯಾಗಿ ನಿರ್ವಹಿಸುತ್ತೇನೆ.

ಬಿಗ್ ಬಿಲಿಯನ್ ಡೇಸ್ ಸೇಲ್ ಸೀಸನ್ ಅದ್ಭುತವಾಗಿದೆ! ನಾನು ಸಾಧ್ಯವಾದಷ್ಟು ಪ್ಯಾಕೇಜ್‌ಗಳನ್ನು ತಲುಪಿಸಲು ಪ್ರಯತ್ನಿಸುತ್ತೇನೆ. ನನ್ನ ಹಬ್‌ನಲ್ಲಿ, ಪ್ರತಿಯೊಬ್ಬರೂ ತುಂಬ ಸಪೋರ್ಟ್‌ ಮಾಡುತ್ತಾರೆ. ನಾವು ಉತ್ತಮ ಮಾರ್ಗದರ್ಶನವನ್ನು ಹೊಂದಿದ್ದು, ಈ ಸೇಲ್ಸ‌ ಸಂದರ್ಭದಲ್ಲಿ ಅನೇಕ ಹೊಸಬರು ನಮ್ಮ ತಂಡವನ್ನು ಸೇರಿದ್ದಾರೆ. ಇಲ್ಲಿನ ಕೆಲಸದ ಸಂಸ್ಕೃತಿ ಹೇಗಿದೆಯೆಂದರೆ ನಾವು ಯಾವಾಗಲೂ ನಮ್ಮ ಸ್ವಂತ ಅನುಭವಗಳಿಂದ ಹೊಸಬರಿಗೆ ಜ್ಞಾನವನ್ನು ವರ್ಗಾಯಿಸುತ್ತೇವೆ. ಇದರಿಂದ ಅವರು ತಮ್ಮ ಕೆಲಸವನ್ನು ಯಾವುದೇ ಅಡೆತಡೆಯಿಲ್ಲದೆ ಸಾಧ್ಯವಾದಷ್ಟು ಸುಗಮವಾಗಿ ನಿರ್ವಹಿಸಬಹುದು.

ಉದ್ಯೋಗದ ಹುದ್ದೆಗಿಂತ ಹೆಚ್ಚಾಗಿ, ಈ ಕ್ಷಣದಲ್ಲಿ ನಾನು ಯಾರು ಮತ್ತು ನನ್ನ ಕೆಲಸವು ನನ್ನ ಜೀವನಕ್ಕೆ ಹೇಗೆ ಮೌಲ್ಯವನ್ನು ನೀಡುತ್ತದೆ ಎಂಬುದು ನನಗೆ ಹೆಚ್ಚು ಮುಖ್ಯವಾಗಿದೆ. ಮತ್ತು ಇದೀಗ, ಎರಡೂ ವೃತ್ತಿಗಳು ಅಂದರೆ – ತರಬೇತುದಾರನಾಗಿ ಮತ್ತು ಕಿರಾಣ ಪಾಲುದಾರನಾಗಿ – ನನ್ನ ಪ್ರಸ್ತುತ ಆವೃತ್ತಿಗೆ ವಿಕಸನಗೊಳ್ಳಲು ನನಗೆ ಸಹಾಯ ಮಾಡುತ್ತಿವೆ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ.


ಇದನ್ನೂ ಓದಿ: #OneInABillion: ಕಳೆದುಹೋದ ಕನಸುಗಳನ್ನು ಫ್ಲಿಪ್‌ಕಾರ್ಟ್‌ನೊಂದಿಗೆ ಸಾಕಾರಗೊಳಿಸುತ್ತಿರುವ ರಂಜನ್ ಕುಮಾರ್

Enjoy shopping on Flipkart