#FightFraudWithFlipkart – ಒಟಿಪಿ ವಂಚನೆಯಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಇದನ್ನು ಓದಿ

Read this article in বাংলা | English | தமிழ் | मराठी | हिन्दी | ગુજરાતી

ದಿನನಿತ್ಯದ ಆನ್‌ಲೈನ್ ಖರೀದಿದಾರರಿಗೆ, ಒಟಿಪಿಗಳು ಪ್ರಕ್ರಿಯೆಯ ಮತ್ತೊಂದು ಭಾಗವಾಗಿವಷ್ಟೇ, ಆದರೆ ಈ ಸೀಕ್ರೆಟ್‌ ಕೋಡ್‌ಗಳು ನಿಮ್ಮ ಅಮೂಲ್ಯ ಡೇಟಾವನ್ನು ರಕ್ಷಿಸುತ್ತವೆ! ಒಟಿಪಿ ಸಂರಕ್ಷಣೆ ಬಗ್ಗೆ ನಾವು ತಿಳಿದುಕೊಳ್ಳುವ ಮೂಲಕ ಮತ್ತು ಅಂತಹ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ, ನಾವು ಆನ್‌ಲೈನ್ ಕಳ್ಳತನ, ವಂಚನೆ ಮತ್ತು ಸೂಕ್ಷ್ಮ ಮಾಹಿತಿಯ ನಷ್ಟದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ನಿಮ್ಮ ಒಟಿಪಿಯನ್ನು ಹಂಚಿಕೊಳ್ಳುವುದು ಏಕೆ ಅಪಾಯಕಾರಿ ಮತ್ತು ಅಗತ್ಯವಿದ್ದಾಗ ನೀವು ಅದನ್ನು ಹೇಗೆ ಸುರಕ್ಷಿತವಾಗಿಸಿಕೊಳ್ಳಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.

OTP

At ನಿಮ್ಮ ಸಾಕಷ್ಟು ಸೂಕ್ಷ್ಮ ಮಾಹಿತಿಗಳು ಡಿಜಿಟೈಸ್ ಆಗಿರುವುದರಿಂದ, ಪ್ರಸ್ತುತ ನಿಮ್ಮ ಬಹುತೇಕ ಎಲ್ಲಾ ಡಿಜಿಟಲ್‌ ವಹಿವಾಟುಗಳಿಗೆ ಒಟಿಪಿ ಅಗತ್ಯವಿರುತ್ತದೆ, ಈ ಸೀಕ್ರೆಟ್‌ ಕೋಡ್‌ಗಳ ಬಗ್ಗೆ ನಾವು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಇದು ಈಗ ವಿಶೇಷವಾಗಿ ಪ್ರಸ್ತುತವಾಗಿದೆ, ಹೀಗೆ ಡೇಟಾ ತೋರಿಸುತ್ತದೆಒಟಿಪಿ ವಂಚನೆ 2017 ರಿಂದ ಕ್ರಮೇಣವಾಗಿ ಹೆಚ್ಚುತ್ತಿದೆ, 2020 ರಲ್ಲಿ 1,091 ಪ್ರಕರಣಗಳು ದಾಖಲಾಗಿವೆ.

ನಿಮ್ಮ Flipkart ಖಾತೆಗೆ ಲಾಗ್ ಇನ್ ಮಾಡಲು, ಹಣ ಪಾವತಿಸಲು, ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು, ನಿಮ್ಮ ಇಮೇಲ್ ಮಾಹಿತಿಯನ್ನು ಬದಲಾಯಿಸಲು ಅಥವಾ ನಿಮ್ಮ ಪಾಸ್‌ವರ್ಡ್‌ ರಿಸೆಟ್‌ ಮಾಡಲು ನೀವು ನೀವು ಒಟಿಪಿಯನ್ನು ಸ್ವೀಕರಿಸುತ್ತೀರಿ, ಈ ಎಲ್ಲಾ ಒಟಿಪಿಗಳು ಹೆಚ್ಚು ಸೂಕ್ಷ್ಮವಾದ ಅಧಿಕೃತ ಕೋಡ್‌‌ಗಳಾಗಿವೆ. ಇವು ನಿಗದಿತ ಒಂದು ಸೆಷನ್ ಅಥವಾ ವಹಿವಾಟಿಗೆ ಮಾತ್ರ ಮಾನ್ಯವಾಗಿರುತ್ತವೆ, ಅವು ನಿಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಬಳಸುವ 2 ಅಂಶಗಳ ಅಥವಾ 2FA ದೃಢೀಕರಣ ಕಾರ್ಯವಿಧಾನದ ಪ್ರಮುಖ ಭಾಗವಾಗಿವೆ, ಅಥವಾ 2FA.

ನಿಮ್ಮ ಒಟಿಪಿಯನ್ನು ನೀವು ಏಕೆ ಗೌಪ್ಯವಾಗಿ ಇಟ್ಟುಕೊಳ್ಳಬೇಕು?

ನಿಮ್ಮ ಫ್ಲಿಪ್‌ಕಾರ್ಟ್‌ ಖಾತೆಯು ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಇಮೇಲ್ ಐಡಿ, ವಿಳಾಸಗಳು ಮತ್ತು ಪಾವತಿ ಮಾಹಿತಿಯಂತಹ ವಿವರಗಳನ್ನು ಒಳಗೊಂಡಿದೆ. ಈ ಮಾಹಿತಿಗೆ ಅನಧಿಕೃತ ಪ್ರವೇಶವು ಅಪಾಯವನ್ನು ಉಂಟುಮಾಡಬಹುದು, ಅಂತಹ ಅಪಾಯಗಳಲ್ಲಿ ಕೆಲವು ವೈಯಕ್ತಿಕ ಮಾಹಿತಿ ಕಳ್ಳತನ, ಹಣಕಾಸಿನ ನಷ್ಟ, ಡಿಜಿಟಲ್ ಸ್ಕ್ಯಾಮ್‌ ಗಳ ಹೆಚ್ಚಳ ಅಥವಾ ಕಿರುಕುಳವನ್ನು ಒಳಗೊಂಡಿರುತ್ತದೆ.

ಅದೇ ರೀತಿ, ಹಣಕಾಸಿನ ವಹಿವಾಟಿನ ಸಂದರ್ಭದಲ್ಲಿ ನಿಮ್ಮ ಒಟಿಪಿಯನ್ನು ಬಹಿರಂಗಗೊಳ್ಳುವ ಸಾಧ್ಯತೆಯೂ ಇದೆ. ಈ ಕೋಡ್‌ ಅನ್ನು ಬಳಸುವ ಮೂಲಕ, ವಂಚಕನು ಈ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್‌ ಪ್ರತಿನಿಧಿಗಳು ಎಂದಿಗೂ ಕರೆ ಅಥವಾ ಮೆಸೇಜ್ ಮೂಲಕ ಪಾವತಿ ಒಟಿಪಿಗಳನ್ನು ಕೇಳುವುದಿಲ್ಲ. ಖರೀದಿ ಅಥವಾ ವಹಿವಾಟನ್ನು ಪೂರ್ಣಗೊಳಿಸಲು ಇದು ಶಿಫಾರಸು ಮಾಡಲಾದ ವಿಧಾನವಾಗಿದೆ ಎಂಬ ನೆಪವೊಡ್ಡಿ ವಂಚಕರು ಹಾಗೆ ಮಾಡಲು ಪ್ರಯತ್ನಿಸಬಹುದು. ನಿಮ್ಮ ಒಟಿಪಿಯನ್ನು ನೀವು ಇತರರಿಗೆ ತಿಳಿಸಿದ್ದೇ ಆದಲ್ಲಿ, ವಂಚಕರು ನಿಮ್ಮ ಖಾತೆಯನ್ನು ಬಳಸಬಹುದು. ಹಾಗಾಗಿ ದುರುದ್ದೇಶಗಳಿಗೆ ಬಳಸಬಹುದಾದಂತಹ ಇಂತಹ ತಂತ್ರಗಳ ಬಗ್ಗೆ ಜಾಗರೂಕರಾಗಿರಿ.

ಫ್ಲಿಪ್‌ಕಾರ್ಟ್‌ನಿಂದ‌ ಕಳುಹಿಸಲ್ಪಡುವ ವಿವಿಧ ಒಟಿಪಿಗಳು ಯಾವುವು?

ಒಟಿಪಿಯು ಏಕ ವಹಿವಾಟು ಅಥವಾ ಲಾಗಿನ್ ಸೆಶನ್‌ಗೆ ಮಾತ್ರ ಮಾನ್ಯವಾಗಿರುವುದರಿಂದ, ನಿಮ್ಮ ಕಡೆಯಿಂದ ಪ್ರಾರಂಭಿಸಿದ ಕ್ರಿಯೆಯನ್ನು ಆಧರಿಸಿ ಫ್ಲಿಪ್‌ಕಾರ್ಟ್‌ ವಿಭಿನ್ನ ಒಟಿಪಿಗಳನ್ನು ಕಳುಹಿಸುತ್ತದೆ. ಫ್ಲಿಪ್‌ಕಾರ್ಟ್‌ನಿಂದ ಏನನ್ನು ನಿರೀಕ್ಷಿಸಬಹುದು ಮತ್ತು ಫ್ಲಿಪ್‌ಕಾರ್ಟ್‌ನಿಂದ ಕಳುಹಿಸಲಾದ ನಂಬಬಹುದಾದ ಸಂದೇಶಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ನಿಮಗೆ ಉತ್ತಮವಾದ ಕಲ್ಪನೆಯನ್ನು ನೀಡಲು, ಒಟಿಪಿ ಸಂದೇಶಗಳ ಕೆಲವು ಉದಾಹರಣೆಗಳು ಇಲ್ಲಿವೆ.

1. ನಿಮ್ಮ ಫ್ಲಿಪ್‌ಕಾರ್ಟ್‌ ಖಾತೆಗೆ ಲಾಗ್ ಇನ್ ಮಾಡಲು ನೀವು ಸ್ವೀಕರಿಸುವ ಒಟಿಪಿ ಸಂದೇಶ:

OTP

2. ಫ್ಲಿಪ್‌ಕಾರ್ಟ್‌ ಖಾತೆಯಲ್ಲಿ ನಿಮ್ಮ ಫೋನ್ ನಂಬರ್‌ ಅನ್ನು ಅಪ್ಡೇಟ್‌ ಮಾಡಲು ನೀವು ಸ್ವೀಕರಿಸುವ ಒಟಿಪಿ ಸಂದೇಶ:

OTP

2. ಫ್ಲಿಪ್‌ಕಾರ್ಟ್‌ ಖಾತೆಯ ಪಾಸ್ವರ್ಡ್‌ ರಿಸೆಟ್‌ ಮಾಡಲು ನೀವು ಸ್ವೀಕರಿಸುವ ಒಟಿಪಿ ಸಂದೇಶ:

OTP

ಒಟಿಪಿಯೊಂದಿಗೆ ನಿಮ್ಮ ನೋಂದಾಯಿತ ಇಮೇಲ್‌ ವಿಳಾಸಕ್ಕೆ ನೀವು ಇಮೇಲ್ ಅನ್ನು ಸಹ ಸ್ವೀಕರಿಸಬಹುದು.

OTP

4: ಫ್ಲಿಪ್‌ಕಾರ್ಟ್‌ ಖಾತೆಗಾಗಿ ನಿಮ್ಮ ಇಮೇಲ್ ವಿಳಾಸವನ್ನು ಅಪ್ಡೇಟ್‌ ಮಾಡಲು ಒಟಿಪಿ ಸಂದೇಶದೊಂದಿಗೆ ಕಳುಹಿಸಲಾಗುವ ಇಮೇಲ್:

OTP

5: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್‌ ಬ್ಯಾಂಕಿಂಗ್‌ ಬಳಸಿಕೊಂಡು ಉತ್ಪನ್ನವನ್ನು ಆರ್ಡರ್ ಮಾಡಲು ನೀವು ಸ್ವೀಕರಿಸುವ ಒಟಿಪಿ:

OTP

ನೀವು ಒಟಿಪಿಯನ್ನು ಯಾವಾಗ ಮತ್ತು ಯಾರೊಂದಿಗೆ ಹಂಚಿಕೊಳ್ಳಬಹುದು?

ಹೆಚ್ಚಿನ ಒಟಿಪಿಗಳು ನಿಮ್ಮ ಬಳಕೆಗೆ ಮಾತ್ರ, ಆದರೆ, ಕೆಲವನ್ನು ನೀವು ಅಧಿಕೃತ ಸಿಬ್ಬಂದಿಗಳೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ಅಂತಹ ಕೆಲವು ನಿದರ್ಶನಗಳಿವೆ:

  • ಹೆಚ್ಚಿನ ಮೌಲ್ಯದ ಉತ್ಪನ್ನಗಳ ವಿತರಣೆಯ ಸಂದರ್ಭದಲ್ಲಿ.
    ನೀವು ಸಂದೇಶವನ್ನು ಸ್ವೀಕರಿಸುತ್ತೀರಿ ಮತ್ತು ವಿತರಣೆಯನ್ನು ಪೂರ್ಣಗೊಳಿಸಲು ಫ್ಲಿಪ್‌ಕಾರ್ಟ್‌ ವಿಶ್‌ ಮಾಸ್ಟರ್ ಜೊತೆಗೆ ಒಟಿಪಿಯನ್ನು ಹಂಚಿಕೊಳ್ಳಬೇಕಾಗುತ್ತದೆ.

OTP

  • COD ಆರ್ಡರ್‌ ಸಂದರ್ಭದಲ್ಲಿ ರಿಟರ್ನ್ ರಿಕ್ವೆಸ್ಟ್‌ ಕಳುಹಿಸಲು.
    ನೀವು ಒಟಿಪಿಯನ್ನು ಸ್ವೀಕರಿಸುತ್ತೀರಿ, ಅದನ್ನು ಕರೆಯ ಮೂಲಕ ಹಂಚಿಕೊಳ್ಳಬೇಕು.

 

ಹೆಚ್ಚಿನ ಮೌಲ್ಯದ ಉತ್ಪನ್ನಗಳ ವಿತರಣೆಯ ಸಂದರ್ಭದಲ್ಲಿ, ನೀವು ಅಧಿಕೃತ ಫ್ಲಿಪ್‌ಕಾರ್ಟ್‌ Wishmaster ಜೊತೆಗೆ ಒಟಿಪಿಯನ್ನು ಹಂಚಿಕೊಳ್ಳುತ್ತೀದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅವರು ನಿಮ್ಮ ಒಟಿಪಿಯನ್ನು ದೃಢೀಕರಿಸಬೇಕು ಮತ್ತು ಉತ್ಪನ್ನವನ್ನು ನಿಮಗೆ ಹಸ್ತಾಂತರಿಸಬೇಕು. ಹಿಂತಿರುಗಿಸುವ ಸಂದರ್ಭದಲ್ಲಿ, ಹಿಂತಿರುಗಿಸಲು ಉತ್ಪನ್ನದ ವಿವರಗಳನ್ನು ದೃಢೀಕರಿಸುವ ಮೂಲಕ ಸ್ವೀಕರಿಸಿದ ಒಟಿಪಿಯನ್ನು ಹಂಚಿಕೊಳ್ಳಿ. ಬೇರೆ ಯಾವುದೇ ಸಂದರ್ಭದಲ್ಲಿ ನಿಮ್ಮ ಒಟಿಪಿಯನ್ನು ಹಂಚಿಕೊಳ್ಳಬೇಡಿ. ಫ್ಲಿಪ್‌ಕಾರ್ಟ್‌ ಸಿಬ್ಬಂದಿಯು ನಿಮ್ಮ ಲಾಗಿನ್ ಒಟಿಪಿ, ಪಾಸ್‌ವರ್ಡ್ ರಿಸೆಟ್ ಒಟಿಪಿ ಅಥವಾ ಹಣಕಾಸಿನ ವಹಿವಾಟಿನ ಒಟಿಪಿಯನ್ನು ಕೇಳಲು ಗ್ರಾಹಕರನ್ನು ಕರೆ ಅಥವಾ ಸಂದೇಶದ ಮೂಲಕ ಸಂಪರ್ಕಿಸುವುದಿಲ್ಲ.

ಉತ್ತಮ ನೈರ್ಮಲ್ಯ ಅಭ್ಯಾಸಗಳು ಯಾವುವು?

ನಿಮ್ಮ ಸೂಕ್ಷ್ಮ ಮಾಹಿತಿ ಮತ್ತು ನಿಮ್ಮ ರಹಸ್ಯ ಒಟಿಪಿ ಕೋಡ್‌ ಗಳನ್ನು ರಕ್ಷಿಸುವ ವಿಚಾರದಲ್ಲಿ ಸರಿಯಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು, ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

  • ಯಾವುದೇ ಹಣಕಾಸು ಸಂಸ್ಥೆ ಅಥವಾ ಇ-ಕಾಮರ್ಸ್ ಸೇವಾ ಪೂರೈಕೆದಾರರು ನಿಮ್ಮ ಒಟಿಪಿಯನ್ನು ಹೇಳುವಂತೆ ನಿಮ್ಮನ್ನು ಕೇಳುವುದಿಲ್ಲ. ಅವರು ಹಾಗೆ ಮಾಡಿದಲ್ಲಿ, ಅವರ ಸೂಚನೆಯನ್ನು ಅನುಸರಿಸಬೇಡಿ ಮತ್ತು ಕರೆಯನ್ನು ಕಟ್ ಮಾಡಿ.
  • ನೀವು ಫೋನ್ ಕರೆ ಮೂಲಕ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಉತ್ಪನ್ನ ಅಥವಾ ಸೇವೆಯನ್ನು ಬುಕ್ ಮಾಡುತ್ತಿದ್ದರೆ, ನಿಮ್ಮ ಕೀಪ್ಯಾಡ್ ಬಳಸಿ ಒಟಿಪಿ ಕೋಡ್ ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಕರೆಯಲ್ಲಿ ಒಟಿಪಿಯನ್ನು ಹೇಳಬೇಡಿ ಅಥವಾ ಓದಬೇಡಿ.
  • ಅಪರಿಚಿತ ಸಂಖ್ಯೆಗಳಿಂದ SMS ಮೂಲಕ ಕಳುಹಿಸಲಾದ ಲಿಂಕ್‌ಗಳನ್ನು ನಿರ್ಲಕ್ಷಿಸಿ. ಇವುಗಳು ನಿಮ್ಮ ಸಾಧನವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಖಾಸಗಿ ಮಾಹಿತಿಯನ್ನು ಪಡೆಯುವ ಪ್ರಯತ್ನಗಳಾಗಿರುತ್ತವೆ.
  • ಒಟಿಪಿ ಹೊಂದಿರುವ‌ ಮೆಸೇಜ್‌ ಅಥವಾ ಸಂದೇಶಗಳನ್ನು ಯಾರಿಗೂ forward ಮಾಡಬೇಡಿ.
  • ಒಟಿಪಿ ನಮೂದಿಸುವ ಮೊದಲು ಡೆಬಿಟ್ ಆಗುವ ಮೊತ್ತವನ್ನು ಖಚಿತಪಡಿಸಿಕೊಳ್ಳಿ ಮತ್ತು ಎರಡು ಬಾರಿ ಪರಿಶೀಲಿಸಿ. ಒಟಿಪಿ ಸಂದೇಶದಲ್ಲಿ ವ್ಯಾಪಾರಿಯ ಹೆಸರು ಮತ್ತು ಇತರ ಯಾವುದೇ ಮಾಹಿತಿಯನ್ನು ಪರೀಕ್ಷಿಸಲು ಮರೆಯದಿರಿ. ಯಾವುದೇ ಹೊಂದಾಣಿಕೆಗಳಿಲ್ಲದಿದ್ದರೆ, ವಹಿವಾಟನ್ನು ರದ್ದುಗೊಳಿಸಿ.

ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಫ್ಲಿಪ್ಕಾರ್ಟ್‌ನಲ್ಲಿ ಮಾತ್ರವಲ್ಲದೆ ಇತರ ಯಾವುದೇ ಡಿಜಿಟಲ್ ವಹಿವಾಟುಗಳನ್ನು ನಡೆಸುವಾಗ ಸುರಕ್ಷಿತವಾಗಿ ಶಾಪಿಂಗ್ ಮಾಡಬಹುದು. ನಿಮ್ಮ ಒಟಿಪಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ಮತ್ತು ಯಾವುದೇ ತೊಂದರೆಗಳು ಅಥವಾ ಚಿಂತೆಗಳಿಲ್ಲದೆ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಆನ್‌ಲೈನ್ ಶಾಪಿಂಗ್ ಆನಂದಿಸಿ!

a href=”https://stories.flipkart.com/safe-commerce/” target=”_blank” rel=”noopener”>ಸುರಕ್ಷಿತ ವ್ಯವಹಾರದ ಕುರಿತಾದ ಇಂತಹ ಉಪಯುಕ್ತ ಸಲಹೆಗಳನ್ನು ಮತ್ತು ಇತರ ಉಪಯುಕ್ತ ಸಂಪನ್ಮೂಲಗಳನ್ನು ಹುಡುಕಲು ನಮ್ಮ ಬ್ಲಾಗ್‌ಗಳನ್ನು ಓದಿ

Enjoy shopping on Flipkart