ಪಾಣಿಪತ್ನ ಫ್ಲಿಪ್ಕಾರ್ಟ್ ಮಾರಾಟಗಾರರೊಬ್ಬರು ಹೇಗೆ ಯಶಸ್ಸನ್ನು ಕಂಡುಕೊಂಡರು ಮತ್ತು ಭಾರತೀಯ ಗ್ರಾಹಕರಿಗೆ ಮೌಲ್ಯವನ್ನು ಸೃಷ್ಟಿಸಿದರು
ಸಾಂಕ್ರಾಮಿಕದ ಮಧ್ಯೆ ಹೆಚ್ಚು ಗ್ರಾಹಕರು ಇ-ಕಾಮರ್ಸ್ನತ್ತ ಮುಖ ಮಾಡುವ ಜೊತೆ, ಆನ್ಲೈನ್ ಮಾರಾಟಗಾರರು ಬೇಡಿಕೆಯನ್ನು ಪೂರೈಸಲು ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಪೂವ ರ್ಯೋಜನೆ ಮತ್ತು ಯಶಸ್ವಿಯಾಗುವ ದೃಢನಿಶ್ಚಯದಿಂದ, # ಸೆಲ್ಫ್ ಮೇಡ್ ಫ್ಲಿಪ್ಕಾರ್ಟ್ ಮಾರಾಟಗಾರರಾದ ಪುನೀತ್ ಜೈನ್ ಅವರು ದಿ ಬಿಗ್ ಬಿಲಿಯನ್ ಡೇಸ್ 2020 ಮಾರಾಟದ ಸಮಯದಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸಿದ್ದಲ್ಲದೇ ಅವರ ಸಿಬ್ಬಂದಿ ಮತ್ತು ಪೂರೈಕೆದಾರರನ್ನು ಲಾಭದಾಯಕವಾಗಿ ಕೆಲಸ ಮಾಡುವಂತೆ ಮಾಡಿದರು. ಪಾಣಿಪತ್ನ ಈ ಉದ್ಯಮಿ ಯಶಸ್ಸನ್ನು ಕಂಡುಕೊಳ್ಳುವ ಪ್ರಯತ್ನವನ್ನು ಹೇಗೆ ಹೆಚ್ಚಿಸಿದರು ಎಂಬುದನ್ನು ಓದಿ.