22 ರ ಹರೆಯದಲ್ಲಿ, ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ದಿಶೆಯಲ್ಲಿ ಪ್ರಯತ್ನಿಸುವುದಕ್ಕಾಗಿ ವಿವೇಕ್ ಮಾಲ್ವಿಯಾ ಅವರು ಮುಂಬಯಿಯಿಂದ ಗುಜರಾತ್‌ನ ರಾಜ್‌ಕೋಟ್‌ಗೆ ಸ್ಥಳಾಂತರಗೊಂಡರು. ಒಮ್ಮೆ ಅವರು ಫ್ಲಿಪ್‍ಕಾರ್ಟ್ ಮಾರಾಟಗಾರರಾದ ಬಳಿಕ ಮತ್ತು ಬಿಗ್ ಬಿಲಿಯನ್ ದಿನಗಳ ಮಾರಾಟಗಳಲ್ಲಿ ಭಾಗವಹಿಸಿದ ಬಳಿಕ, ಅವರು ಇ-ವಾಣಿಜ್ಯದ ಮತ್ತು ಫ್ಲಿಪ್‍ಕಾರ್ಟ್‌ನ ಪಾನ್-ಇಂಡಿಯಾ ಸಂಪರ್ಕದ ನೈಜ ಸಾಮರ್ಥ್ಯವನ್ನು ಮನಗಂಡರು. ಅಡುಗೆ ಪರಿಕರಗಳ ತನ್ನ ಸಂಸ್ಥೆಯ 5X ವರ್ಷಾನು-ವರ್ಷದ ಬೆಳವಣಿಗೆಯನ್ನು ಕಣ್ಣಾರೆ ಕಂಡದ್ದನ್ನೂ ಹೊರತುಪಡಿಸಿ, ತಾನು ಊಹಿಸಿಯೇ ಇರದ ರೀತಿಗಳಲ್ಲಿ ಅವರು ತನ್ನ ಜೀವನವನ್ನು ರೂಪಾಂತರಗೊಳಿಸಿಕೊಳ್ಳಲು ಸಮರ್ಥರಾದರು. ಅವರ #SellfMade ಕಥೆಯನ್ನು ಓದಿರಿ.
ಯಶಸ್ಸನ್ನು ಸಾಧಿಸುವ ಆಶಯಗಳೊಂದಿಗೆ ದೇಶದಾದ್ಯಂತ ಕನಸುಗಾರರನ್ನು ತನ್ನ ಕಿನಾರೆಗಳತ್ತ ಕೈಬೀಸಿ ಕರೆಯುವುದು, ಕನಸುಗಳ ನಗರಿಯೆಂದೇ ಖ್ಯಾತವಾಗಿರುವ ಮುಂಬಯಿ ಮಹಾನಗರವೆಂಬುದು ಸರ್ವೇಸಾಮಾನ್ಯವಾಗಿ ವಿಧಿತವಾಗಿರುವ ಸಂಗತಿ. ಆದಾಗ್ಯೂ, ವಿವೇಕ್ ರಾಘವ್‌ಭಾಯಿ ಮಾಲ್ವಿಯಾ ಅವರ ವಿಚಾರದಲ್ಲಿ ಅದೊಂದು ಬೇರೆಯೇ ರೀತಿಯ ಕಥೆ. “ನಾನು ಫ್ಲಿಪ್‍ಕಾರ್ಟ್‌ಗಾಗಿ ಮುಂಬಯಿಯಿಂದ ರಾಜ್‌ಕೋಟ್‌ಗೆ ಸ್ಥಳಾಂತರಗೊಂಡೆ” ಎಂದು ಅವರು ಮುಗುಳ್ನಗೆಯೊಂದಿಗೆ ಹೇಳುತ್ತಾರೆ. ಮುಂಬಯಿಯವರಾದ ವಿವೇಕ್ ಅವರು ಪಾಕಶಾಲೆಗೆ ಸಂಬಂಧಿಸಿದ ಪ್ಲಾಸ್ಟಿಕ್ ಮತ್ತು ಗಾಜಿನ ಪರಿಕರಗಳ ಫ್ಲಿಪ್‍ಕಾರ್ಟ್ ಮಾರಾಟಗಾರರಾಗುವುದಕ್ಕಾಗಿ ತನ್ನ ಚಾರ್ಟರ್ಡ್ ಅಕೌಂಟೆಂಟ್ ಕೆಲಸವನ್ನು ಕೈಬಿಟ್ಟರು.
ಆರಂಭದಲ್ಲಿ, ಅವರು ಗುಜರಾತ್‌ನ ರಾಜ್‌ಕೋಟ್‌ನ ತನ್ನ ಸೋದರ ಸಂಬಂಧಿಯೊಡನೆ ಸೇರಿಕೊಂಡರು, ಮತ್ತು ಕಟ್ಟಕಡೆಗೆ ಇಸವಿ 2017 ರಲ್ಲಿ ಸ್ವತಂತ್ರ ಸಂಸ್ಥೆಯನ್ನು ರೂಪಿಸಿದರು. ತೈಲ ವಿತರಕಗಳು, ನೀರಿನ ಬಾಟಲಿಗಳು, ಜಾಡಿಗಳು, ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳ ಶ್ರೇಣಿಯೊಂದನ್ನು ಮಾರಲು ವಿವೇಕ್ ಅವರು ಫ್ಲಿಪ್‍ಕಾರ್ಟ್‌ನೊಂದಿಗೆ ಪಾಲುದಾರರಾದದ್ದು ಇಲ್ಲಿಯೇ.
ಬಿಗ್ ಬಿಲಿಯನ್ ದಿನಗಳು 2021 ಕ್ಕೆ ಅವರು ಅಣಿಗೊಳ್ಳುತ್ತಿರುವಂತೆಯೇ, ಅವರ ಸಾಟಿಯಿಲ್ಲದ ಕಥೆಯನ್ನು ತಿಳಿದುಕೊಳ್ಳುವುದಕ್ಕಾಗಿ ಇದನ್ನು ಓದಿರಿ
.
ಹೊತ್ತಿಕೊಂಡ ಕಿಡಿ
ವಿವೇಕ್ ಅವರು ಕಾಲೇಜಿನ ತನ್ನ ಮೂರನೆಯ ವರ್ಷವನ್ನು ಪೂರ್ಣಗೊಳಿಸಿದ್ದರು ಮತ್ತು ಆಗಷ್ಟೇ ಚಾರ್ಟರ್ಡ್ ಅಕೌಂಟೆನ್ಸಿ ತರಬೇತಿಗೆ ಸೇರ್ಪಡೆಗೊಂಡಿದ್ದರು. ಆವಾಗಲೇ ಅವರು ತಾನೋರ್ವ ವಾಣಿಜ್ಯೋದ್ಯಮಿಯಾಗುವ ಕನಸು ಕಾಣುತ್ತಿದ್ದರು. ಚಿಲ್ಲರೆ ವ್ಯಾಪಾರ ಅಥವಾ ಆಫ್‌ಲೈನ್ ವ್ಯಾಪಾರಕ್ಕಿಂತಲೂ ಮಿಗಿಲಾಗಿ, ಇ-ವಾಣಿಜ್ಯದತ್ತ ಅವರ ತುಡಿತವು ಹೆಚ್ಚಾಗಿದ್ದಿತು. “ಆಫ್‌ಲೈನ್ ಪರಿಸರದಲ್ಲಿ, ಯಾರಾದರೊಬ್ಬರು ಗ್ರಾಹಕರು ನನ್ನ ಬಳಿ ಬರುವರೋ ಮತ್ತು ನಾವು ಮಾರುತ್ತಿರುವ ಯಾವುದಾದರೊಂದು ಉತ್ಪನ್ನವನ್ನು ಕೊಳ್ಳುವರೋ ಎಂಬ ಒಂದು ಮಿತಿಯಿರುತ್ತದೆ. ಮತ್ತು ಆನ್‌ಲೈನ್ ವ್ಯವಹಾರಗಳಲ್ಲಿ, ನಾನು ಗ್ರಾಹಕರನ್ನು ಅರಸಿಕೊಂಡೂ ಹೋಗಬೇಕಾದ ಪ್ರಮೇಯವಿಲ್ಲ. ಗ್ರಾಹಕರು ಉತ್ಪನ್ನಕ್ಕಾಗಿ ಹುಡುಕಬಹುದು, ಮತ್ತು ಆನ್‌ಲೈನ್ ಜಾಹೀರಾತಿನ ಮೂಲಕ, ನೇರವಾಗಿ ಉತ್ಪನ್ನಗಳನ್ನು ಮತ್ತು ನಮ್ಮನ್ನು ತಲುಪಬಹುದು!” ಎನ್ನುತ್ತಾರೆ ಅವರು.
ಇಸವಿ 2017 ರಲ್ಲಿ, ಅವಕಾಶವು ಕದ ತಟ್ಟಿದಾಗ, ವಿವೇಕ್ ಅವರು ಹಿಂಜರಿಯಲಿಲ್ಲ. ಅವರ ಸೋದರ ಸಂಬಂಧಿಯು ತನ್ನ ಸ್ಟಾರ್ಟ್‌ಅಪ್‌ನೊಡನೆ ತನಗೆ ಯಾರಾದರೂ ಸಹಕರಿಸುವರೋ ಎಂದು ಎದುರು ನೋಡುತ್ತಿದ್ದರು ಮತ್ತು ರಾಜ್‌ಕೋಟ್, ಅಡುಗೆಮನೆಗೆ ಸಂಬಂಧಿಸಿದ ಎಲ್ಲ ಪರಿಕರಗಳ ಹಬ್ ಎನ್ನುವುದನ್ನು ವಿವೇಕ್ ಅವರು ಕಂಡುಕೊಂಡಾಗ, ಅವರು ಅಲ್ಲಿಗೆ ಸ್ಥಳಾಂತರಗೊಂಡರು. “ಮುಂಬಯಿಯಲ್ಲಿ ವಾಸ್ತವ್ಯದ ಅರ್ಥವೆಂದರೆ ನನ್ನ ಸಾಗಾಣಿಕೆಯ ಮತ್ತು ಅಂಚೆ ವೆಚ್ಚಗಳ ಹೆಚ್ಚಳವೆಂದೇ ನನಗೆ ತಿಳಿದಿತ್ತು, ಹಾಗಾಗಿ ನಾನು ಗುಜರಾತ್‌ಗೆ ಸ್ಥಳಾಂತರಗೊಂಡೆ.”
ಆರು ತಿಂಗಳುಗಳ ಬಳಿಕ, ವಿವೇಕ್ ಅವರು ತನ್ನದೇ ಉದ್ಯಮವನ್ನು ಆರಂಭಿಸಿದಾಗ, ಅವರು ಅನೇಕ ಆನ್‌ಲೈನ್ ವೇದಿಕೆಗಳಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಿದರು. ಜಾಹೀರಾತಿನಿಂದ ಪಟ್ಟಿಗಳ ತಯಾರಿಕೆಯವರೆಗೂ, ದಾಸ್ತಾನು ಮಳಿಗೆಗಳಿಂದ ಮಾರಾಟ ಪೋರ್ಟಲ್‌ಗಳ ನಿರ್ವಹಣೆಯವರೆಗೂ, ಮುಂದುವರೆಯುವುದು ಅಷ್ಟೇನೂ ಸುಲಭದ್ದಾಗಿರಲಿಲ್ಲ ಮತ್ತು ಅಲ್ಲಿ ಕಲಿಯಲು ಸಾಕಷ್ಟು ಇದ್ದಿತು. ಆದರೆ ತಾನು ಇದಿರು ನೋಡುತ್ತಿರುವ ಮಾರುಕಟ್ಟೆಯ ಪಾಲನ್ನು ಪಡೆಯಲು ಆನ್‌ಲೈನ್ ಮಾರಾಟವೇ ತನಗೆ ನೆರವಾಗಲಿರುವುದು ಎನ್ನುವ ಅಂಶವು ವಿವೇಕ್ ಅವರಿಗೆ ಗೊತ್ತಿತ್ತು.
ಫ್ಲಿಪ್‍ಕಾರ್ಟ್ ಸೌಲಭ್ಯದ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುವುದು
ಓರ್ವ ಫ್ಲಿಪ್‍ಕಾರ್ಟ್ ಮಾರಾಟಗಾರನಾಗಿ ನೋಂದಾಯಿಸಿಕೊಂಡ ವಿವೇಕ್ ಅವರನ್ನು ಅವರು ಬಯಸಿದ ರೀತಿಯ ಪರಿಸರವ್ಯವಸ್ಥೆಗೆ ಮತ್ತು ಅವರ ವಿಲೇವಾರಿಗೆ ನಿಲುಕುವಂತಹ ವಿವಿಧ ಬಗೆಯ ಸಲಕರಣೆಗಳಿಗೆ ಅವರನ್ನು ತೆರವುಗೊಳಿಸಿತು. ಫ್ಲಿಪ್‍ಕಾರ್ಟ್ ವೆಬಿನಾರ್‌ಗಳೊಂದಿಗೆ ಮತ್ತು ವೀಡಿಯೋಗಳೊಂದಿಗೆ, ಹಾಗೂ ಖಾತಾ ವ್ಯವಸ್ಥಾಪಕರುಗಳ ನೆರವಿನೊಂದಿಗೆ, ವಿವೇಕ್ ಅವರು ಕಂಚಿನಿಂದ ಬೆಳ್ಳಿಯತ್ತ, ಹಾಗೂ ಇದೀಗ ಸ್ವರ್ಣ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವತ್ತ ಬೆಳೆದಿದ್ದಾರೆ. ಒಂದು ವೇದಿಕೆಯ ರೂಪದಲ್ಲಿ ಫ್ಲಿಪ್‍ಕಾರ್ಟನ್ನು ವಿವೇಕ್ ಅವರು ಚೆನ್ನಾಗಿ ಅರ್ಥಮಾಡಿಕೊಂಡ ಬಳಿಕ, ಮತ್ತೆ ಹಿಂತಿರುಗಿ ನೋಡುವ ಪ್ರಶ್ನೆಯೇ ಬರಲಿಲ್ಲ. ಅವರ ಚೊಚ್ಚಲ ಬಿಗ್ ಬಿಲಿಯನ್ ದಿನಗಳ ಮಾರಾಟದ ಅವಧಿಯಲ್ಲಿ ಅವರ ಯಶಸ್ಸು ಪ್ರಥಮ ಮೈಲಿಗಲ್ಲನ್ನು ತಲುಪಿತು. “ಇಸವಿ 2017 ರಲ್ಲಿನ ನನ್ನ ಮೊದಲನೆಯ ಟಿಬಿಬಿಡಿ ಯನ್ನು ನಾನು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದೇನೆ. ನಾನು ಪಡೆದುಕೊಂಡಷ್ಟು ಸಂಖ್ಯೆಯ ಆರ್ಡರ್ ಗಳನ್ನು ಪಡೆದುಕೊಳ್ಳುವೆನೆಂದು ನಾನು ನಿರೀಕ್ಷಿಸಿರಲಿಲ್ಲ! ಮತ್ತು ಇಸವಿ 2017ರಿಂದ ಇಸವಿ 2020 ರವರೆಗೂ ಪ್ರತೀ ಅನುಕ್ರಮ ವರ್ಷದಲ್ಲಿ, ಆರ್ಡರ್ ಗಳು ಘಾತೀಯವಾಗಿ ಬೆಳೆಯುವ ರೀತಿಯಲ್ಲಿ ಆರ್ಡರ್ ಗಳನ್ನು ತರುವ ಮಾರಾಟಗಳೊಂದಿಗೆ, ನಾನು 5X ವರ್ಷಾನುವರ್ಷದ ಬೆಳವಣಿಗೆಯನ್ನು ಸಾಧಿಸಿದೆ. ಈ ವರ್ಷ, ಬಿಗ್ ಬಿಲಿಯನ್ ದಿನಗಳು 2021 ಕ್ಕಾಗಿ, ನಾನು ದಿನವೊಂದಕ್ಕೆ 5,000 ಆರ್ಡರ್ ಗಳನ್ನು ವಿತರಿಸಬೇಕೆಂದಿದ್ದೇನೆ.”
ಅದೃಷ್ಟವು ಪ್ರಯತ್ನದಿಂದಲಷ್ಟೇ ಕೈಗೂಡುವುದೇ ಹೊರತು ಆಕಸ್ಮಿಕದಿಂದಲ್ಲ
ಯಶಸ್ಸಿಗೆ ಸಂಬಂಧಿಸಿದ ಹಾಗೆ ವಿವೇಕ್ ಅವರ ಪಾಕ ವಿಧಾನದಲ್ಲಿ ಪರಿಶ್ರಮವು ಒಂದು ಅಗತ್ಯದ ಘಟಕವಾಗಿದ್ದರೂ ಕೂಡ, ಅವರು ಕೈಗೊಂಡ ಚಾಲಾಕಿನ ನಡೆಗಳು ಅವರ ಆನ್‌ಲೈನ್ ವ್ಯಾಪಾರವನ್ನು ಬೆಳೆಸಲು ಅವರಿಗೆ ನೆರವಾದವು. 600 ಚದರ ಅಡಿಯ ಉಗ್ರಾಣದಿಂದ 1,500 ಅಡಿಗಳಷ್ಟು ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟ ವಿಶಾಲವಾದ ಉಗ್ರಾಣಕ್ಕೆ ತನ್ನ ಉಗ್ರಾಣವನ್ನು ಮೇಲ್ದರ್ಜೆಗೇರಿಸಿಕೊಂಡದ್ದು ಮಾತ್ರ ಅವರ ಅತ್ಯಂತ ಗಮನಾರ್ಹ ನಡೆಯಾಗಿತ್ತು. ಆರ್ಡರ್ ಗಳನ್ನು ತ್ವರಿತವಾಗಿ ಕಳುಹಿಸಿಕೊಡುವುದಕ್ಕಾಗಿ ಅನುಕೂಲವಾಗುವ ರೀತಿಯಲ್ಲಿ ದಾಸ್ತಾನು ಪ್ರದೇಶವನ್ನು ವಿಸ್ತರಿಸಿದ್ದನ್ನೂ ಹೊರತುಪಡಿಸಿ, ಬೆಳವಣಿಗೆಗೆ ತಾನು ಇನ್ನಷ್ಟು ಹೆಚ್ಚು ಸಾಧ್ಯತೆಯನ್ನು ಕಾಣುವ ದಕ್ಷಿಣದ ನಗರಗಳಿಗೆ ಗುರಿ-ಕೇಂದ್ರಿತ ಜಾಹೀರಾತುಗಳನ್ನು ಪಸರಿಸುವುದನ್ನೂ ಅವರ ತಯಾರಿಯು ಒಳಗೊಂಡಿತ್ತು.
ಮುಂಬರುವ ಟಿಬಿಬಿಡಿ ಗಾಗಿ ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವಂತೆಯೇ, ವಿವೇಕ್ ಅವರು ಬಹುತೇಕ ಇತರ ಆನ್‌ಲೈನ್ ವೇದಿಕೆಗಳನ್ನು ಕೈಬಿಟ್ಟು ಫ್ಲಿಪ್‍ಕಾರ್ಟ್ ಮಾರಾಟಗಾರರಾಗುವುದಕ್ಕಾಗಿ ಇಂದು ಸ್ವಯಂ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣಗಳು ಸರಳವಾದವು. “ಸಕಾಲಿಕ ಪಾವತಿ, ನಿಯಮಿತ ಅಪ್ಡೇಟ್‌ಗಳು, ಸರಳ ಮತ್ತು ಸುಲಭವಾಗಿರುವ ಮಾರಾಟ ವೇದಿಕೆ, ಮತ್ತು ಸಕಾಲಿಕ ಒಳನೋಟಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯಿರುವ ಖಾತಾ ವ್ಯವಸ್ಥಾಪಕರುಗಳ ಬೆಂಬಲ – ಇವು ಫ್ಲಿಪ್‍ಕಾರ್ಟನ್ನು ಇತರರಿಂದ ಪ್ರತ್ಯೇಕವಾಗಿಸುತ್ತವೆ. ಆ ಕಾರಣಕ್ಕಾಗಿಯೇ, ಫ್ಲಿಪ್‍ಕಾರ್ಟ್‌ನ ಮೂಲಕ ನಾನು ಯಾವುದೇ ಸಾಮಾನ್ಯ ದಿನದಂದು ಸುಮಾರು 500 ಆರ್ಡರ್ ಗಳನ್ನು ಸಂಸ್ಕರಿಸಲು ಸಮರ್ಥನಾಗಿದ್ದೇನೆ.”
ಈ #SellfMade ಫ್ಲಿಪ್‍ಕಾರ್ಟ್ ಮಾರಾಟಗಾರನ ಪಾಲಿಗೆ, ತನ್ನ ಕನಸುಗಳ ವಿಚಾರದಲ್ಲಿ ಅವರು ಒಮ್ಮೆ ಪ್ರಯತ್ನಿಸಿದೊಡನೆಯೇ ಅವರ ಜೀವನವು ಸಂಪೂರ್ಣವಾಗಿ ರೂಪಾಂತರಗೊಂಡಿತು.
“ಫ್ಲಿಪ್‌ಕಾರ್ಟ್ ಸಂಭವಿಸುವುದಕ್ಕಿಂತ ಮೊದಲು, ನಾನೊಂದು ಸಾಮಾನ್ಯ ಕೆಲಸವನ್ನು ಮಾಡುತ್ತಿದ್ದೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ಮೂರು ವರ್ಷಗಳ ಈ ಅವಧಿಯಲ್ಲಿ, ನಾನು ರಾಜ್‌ಕೋಟ್‌ನಲ್ಲಿ 2ಬಿಹೆಚ್‌ಕೆ ಫ್ಲ್ಯಾಟೊಂದರ ಮಾಲೀಕನಾಗಿದ್ದೇನೆ ಮತ್ತು ಇತ್ತೀಚೆಗಷ್ಟೇ ನಾನೊಂದು ಕಾರನ್ನು ಖರೀದಿಸಿದೆ. ನನ್ನ ಸಹೋದರನೊಂದಿಗೆ ನಾನು ಸಂಸ್ಥೆಯನ್ನು ಆರಂಭಿಸಿದೆ, ಮತ್ತು ಈಗ 5- ಜನ ಸಿಬ್ಬಂದಿಗಳಾಗಿ ಬೆಳೆದಿರುವೆವು. ಎಲ್ಲವೂ ಚೆನ್ನಾಗಿ ಸಾಗುತ್ತಿದೆ, ಮತ್ತು ಈ ಟಿಬಿಬಿಡಿ ಯ ಅವಧಿಯನ್ನು ನಾನು ನನ್ನ ಗುರಿಯನ್ನು ಸಾಧಿಸುವುದನ್ನು ಎದುರು ನೋಡುತ್ತಿದ್ದೇನೆ!” ಎನ್ನುತ್ತಾರೆ ವಿವೇಕ್ ಅವರು.
ಇಲ್ಲಿ ಇನ್ನಷ್ಟು ಸ್ಪೂರ್ತಿದಾಯಕ #Sellfmade ಕಥೆಗಳನ್ನು ಓದಿರಿ
.