ಹಗರಣ ಸಲಹೆ: ಫ್ಲಿಪ್ ಕಾರ್ಟ್‌ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ವಂಚಕ ಸೈಟ್ ಗಳು ಮತ್ತು ನಕಲಿ ಕೊಡುಗೆಗಳ ಬಗ್ಗೆ ಎಚ್ಚರದಿಂದಿರಿ

Read this article in हिन्दी | English | বাংলা | தமிழ் | ગુજરાતી | मराठी

ನಿಮಗೆ ನಂಬಲಸಾಧ್ಯವಾದ ಬೆಲೆಗಳನ್ನು ಮತ್ತು ರಿಯಾಯ್ತಿಗಳನ್ನು ನೀಡುವ ಅನಧಿಕೃತ ವೆಬ್ ಸೈಟ್ ಗಳು ಮತ್ತು ಮೆಸೇಜ್ ಗಳಿಂದ ದೂರವಿರಿ. ಸುರಕ್ಷಿತ ಶಾಪಿಂಗ್ ಮಾಡಲು ಇಲ್ಲಿದೆ ಸಲಹೆಗಳ ಪಟ್ಟಿ.

fraudulent

ಫ್ಲಿಪ್ ಕಾರ್ಟ್‌ನಿಂದ ನಂಬಲಾಗದಷ್ಟು ರಿಯಾಯ್ತಿಗಳನ್ನು ಮತ್ತು ಕೊಡುಗೆಗಳನ್ನು ನೀಡುತ್ತೇವೆಂದು ಹೇಳುವ ಇಮೇಲ್, ಕರೆ, ಎಸ್‌ಎಮ್‌ಎಸ್, ವಾಟ್ಸ್‌ಆಪ್ ಮೆಸೇಜ್, ಅಥವಾ ಬೇರೆ ಯಾವುದೇ ಸಾಮಾಜಿಕ ಜಾಲತಾಣದ ಮೆಸೇಜ್‌ಗಳನ್ನು ಇತ್ತೀಚೆಗೆ ಸ್ವೀಕರಿಸಿದ್ದೀರಾ? ಈ ಮೆಸೇಜ್ ಗಳು ಅಧಿಕೃತ ಫ್ಲಿಪ್ ಕಾರ್ಟ್‌ನ ಯಾವುದೇ ಮಾಧ್ಯಮಗಳಿಂದ ಕಳುಹಿಸಲಾಗಿರುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ, ಆದರೆ ನಿಮಗೆ ಮೋಸ ಮಾಡುವ ಉದ್ದೇಶದಿಂದ ವಂಚಕರು ಮತ್ತು ಹಗರಣ ಮಾಡುವವರು ಈ ಮೆಸೇಜ್ ಗಳನ್ನು ಕಳುಹಿಸುತ್ತಾರೆ. ನೀವು ಎಚ್ಚರವಹಿಸದಿದ್ದರೆ, ನೀವು ಮೋಸ ಹೋಗಬಹುದು. ಫ್ಲಿಪ್ ಕಾರ್ಟ್‌ನ ಜನಪ್ರಿಯ ಮತ್ತು ವಿಶ್ವಾಸಾರ್ಹ ಹೆಸರನ್ನು ಬಳಸಿಕೊಂಡು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ವಂಚಕರು ಈ ರೀತಿ ಮಾಡುತ್ತಾರೆ. ನಿಮ್ಮ ಹಣ, ಅಥವಾ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನು ಈ ವಂಚಕ ವ್ಯಕ್ತಿಗಳೊಂದಿಗೆ ಅಥವಾ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಬೇಡಿ. ಯಾವಾಗಲು ಅಧಿಕೃತ ಮತ್ತು ನಿಜವಾದ ಫ್ಲಿಪ್ ಕಾರ್ಟ್ ಮೂಲಗಳನ್ನು ಗಮನಿಸಿ ಖಚಿತಪಡಿಸಿಕೊಳ್ಳಿ.


YouTube player

ಆದ್ದರಿಂದ ನೀವು ಸಂಶಯಾಸ್ಪದವಾದ ಮೋಸದ್ದಂತೆ ಕಾಣುವ ಪ್ರಚಾರದ ಮೆಸೇಜ್ ನೋಡಿದರೆ ಏನು ಮಾಡಬೇಕು? ಯಾವುದೇ ಹಿಂಜರಿಕೆಯಿಲ್ಲದೇ, ದಯವಿಟ್ಟು 1800 208 9898 ಟೋಲ್ ಫ್ರೀ ಫ್ಲಿಪ್ ಕಾರ್ಟ್ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಅದನ್ನು ಮಾಡಿ ತಕ್ಷಣ ವರದಿ ಮಾಡಿ. ಸಾಧ್ಯವಾದಷ್ಟು ವಿವರಗಳನ್ನು ಫ್ಲಿಪ್ ಕಾರ್ಟ್ ಗ್ರಾಹಕ ಸೇವಾ ಪ್ರತಿನಿಧಿಗೆ ನೀಡಿ ಸಹಕರಿಸಿ. ಹೀಗೆ ಮಾಡುವುದರಿಂದ ಸಮಸ್ಯೆಯ ಆಳಕ್ಕಿಳಿಯಲು ಮತ್ತು ನಿಮ್ಮಂತಹ ಇತರ ಗ್ರಾಹಕರನ್ನು ರಕ್ಷಿಸಲು ನಮಗೆ ಸಹಾಯವಾಗುತ್ತದೆ.

ಈ ಲೇಖನ, ನೀವು ಫ್ಲಿಪ್ ಕಾರ್ಟ್‌ನಲ್ಲಿ ಹೇಗೆ ಸುರಕ್ಷಿತವಾಗಿ ಖರೀದಿ ಮಾಡಬಹುದು ಮತ್ತು ವಂಚಕರ ಮತ್ತು ಹಗರಣಕೋರರ ಜಾಲಕ್ಕೆ ಸಿಲುಕದಂತೆ ಹೇಗೆ ಅತ್ಯುತ್ತಮ ಡೀಲ್‌ಗಳನ್ನು ಪಡೆಯಬಹುದು ಎಂಬುದನ್ನು ತಿಳಿಸುತ್ತದೆ.. ಸಂಭಾವ್ಯ ವಂಚನೆಗಳನ್ನು ಹೇಗೆ ತಡೆಗಟ್ಟಬಹುದು ಮತ್ತು ವರದಿ ಮಾಡಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.


ಫ್ಲಿಪ್ ಕಾರ್ಟ್ ವಂಚಕ ಜಾಹೀರಾತು ಮತ್ತು ನಕಲಿ ಕೊಡುಗೆಗಳನ್ನು ನಾನು ಹೇಗೆ ಗುರುತಿಸಬಹುದು?

”fraudulent"

ಫ್ಲಿಪ್ ಕಾರ್ಟ್ ಭಾರತದ ಅತ್ಯಂತ ದೊಡ್ಡ ಇ-ಕಾಮರ್ಸ್ ಮಾರುಕಟ್ಟೆಯಾಗಿದ್ದು, 100 ದಶಲಕ್ಷ ಕ್ಕೂ ಹೆಚ್ಚು ನೋಂದಾಯಿತ ಗ್ರಾಹಕರನ್ನು ಹೊಂದಿದೆ. ನಮ್ಮ ಪಾಲಿಗೆ, ಗ್ರಾಹಕರ ಸುರಕ್ಷತೆ ಮತ್ತು ಭದ್ರತೆಯೇ ಪ್ರಥಮ ಪ್ರಾಶಸ್ತ್ಯ. ನಮ್ಮ ದತ್ತಾಂಶ ಕೇಂದ್ರವು PCI:DSS ನಂತಹ ಅಂತಾರಾಷ್ಟ್ರೀಯ ಭದ್ರತಾ ಮಾನದಂಡಗಳನ್ನು ಪಾಲಿಸುತ್ತದೆ. ದತ್ತಾಂಶಗಳನ್ನು ಅತ್ಯುತ್ಕೃಷ್ಟ ಮಟ್ಟದ ಭದ್ರತಾ ನಿಯಂತ್ರಣಗಳಡಿ ಶೇಖರಿಸಿಡಲಾಗುತ್ತದೆ. ಅಲ್ಲದೇ, ನಮ್ಮ ಇನ್ಫಾರ್ಮೇಶನ್ ಸಿಸ್ಟಮ್ ಗಳು ಸುವವ್ಯಸ್ಥಿತ ಭದ್ರತಾ ಕ್ರಮಗಳಿಂದ ರಕ್ಷಿಸಲ್ಪಟ್ಟಿದ್ದು, ದತ್ತಾಂಶಗಳ ಗೌಪ್ಯತೆ ಎಂದಿಗೂ ಬಹಿರಂಗವಾಗದಂತೆ, ವಿರೂಪಗೊಳಿಸದಂತೆ, ಅಥವಾ ಅನಧಿಕೃತ ವ್ಯಕ್ತಿಗಳೊಂದಿಗೆ ಅಥವಾ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳದಂತೆ ತಡೆಯುತ್ತದೆ. ಜೊತೆಗೆ ನಮ್ಮ ಗ್ರಾಹಕರು ಹೇಗೆ ತಮ್ಮ ಸ್ವಂತ ದತ್ತಾಂಶವನ್ನು ರಕ್ಷಿಸಿಕೊಳ್ಳಬಹುದು ಮತ್ತು ದುಷ್ಕರ್ಮಿಗಳ ಕೈಗೆ ಸೇರದಂತೆ ಹೇಗೆ ನೋಡಿಕೊಳ್ಳಬಹುದು ಎಂಬುದರ ಬಗ್ಗೆ ನಿರಂತರ ಶಿಕ್ಷಣ ಮತ್ತು ಮಾಹಿತಿ ನೀಡುತ್ತೇವೆ.

ಕೆಲವು ವಂಚಕರು ಮತ್ತು ಹಗರಣಕೋರರು ಆನ್ ಲೈನ್ ಶಾಪಿಂಗ್ ಮಾಡುವವರನ್ನು ಮೋಸ ಮಾಡಲೆಂದು ಮತ್ತು ದಾರಿ ತಪ್ಪಿಸಲೆಂದೇ ಫ್ಲಿಪ್ ಕಾರ್ಟ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅವರು ಭಾರತದಲ್ಲಿ ಫ್ಲಿಪ್ ಕಾರ್ಟ್ ಘನತೆಗೆ ಮತ್ತು ಆನ್ ಲೈನ್ ಶಾಪಿಂಗ್ ಸುರಕ್ಷತೆಗಳೆರಡಕ್ಕೂ ಅಪಾಯಕಾರಿಯಾಗಿದ್ದಾರೆ. ಅವರೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಳ್ಳದಂತೆ ನಿಮಗೆ ಧೃಢವಾಗಿ ಸಲಹೆ ನೀಡಲಾಗುತ್ತದೆ.

ಈ ವ್ಯಕ್ತಿಗಳು ಅಥವಾ ಏಜೆನ್ಸಿಗಳು ಕಳುಹಿಸುವ ಮೋಸದ ಮೆಸೇಜ್ ಗಳ/ಕರೆಗಳ ವಿಷಯವು ಫ್ಲಿಪ್ ಕಾರ್ಟ್‌ನಲ್ಲಿ ಆಸೆ ಹುಟ್ಟಿಸುವ ಬೆಲೆಗಳನ್ನು, ರಿಯಾಯ್ತಿಗಳನ್ನು ಮತ್ತು ಕೊಡುಗೆಗಳನ್ನು ಒಳಗೊಂಡಿರಬಹುದು. ಫ್ಲಿಪ್ ಕಾರ್ಟ್‌ನ ಲೋಗೊಗಳು, ಟೈಪ್ ಫೇಸ್ ಗಳು ಮತ್ತು ಬ್ರಾಂಡ್ ಬಣ್ಣಗಳನ್ನು ಒಳಗೊಂಡಂತೆ ಅಧಿಕೃತ ಟ್ರೇಡ್ ಮಾರ್ಕ್‌ಗಳನ್ನು ನಿಕಟವಾಗಿ ಹೋಲುವಂತಹ ರೀತಿಯಲ್ಲಿ ಈ ಮೆಸೇಜ್ ಗಳನ್ನು ವಿನ್ಯಾಸಗೊಳಿಸಿರಬಹುದು. ಕೆಲವು ನಕಲಿ ವೆಬ್ ಸೈಟ್ ಗಳು ತಮ್ಮ URL ಅಥವಾ ಲೋಗೊದಲ್ಲಿ ‘ಫ್ಲಿಪ್ ಕಾರ್ಟ್’ ಎಂಬ ಪದವನ್ನು ಕೂಡ ಒಳಗೊಂಡಿರಬಹುದು.

ವಂಚಕರು ನಿಮ್ಮನ್ನು ಸಂಪರ್ಕಿಸಲು ಉಪಯೋಗಿಸುವ ಕೆಲವು ಮಾರ್ಗಗಳು ಇಲ್ಲಿ ನೀಡಿದ್ದೇವೆ:

fraudulent

ನಕಲಿ ವೆಬ್ ಸೈಟ್ ಗಳು: ಇತರೆ ಹೆಸರುಗಳ ಜೊತೆಗೆ ಈ ವೆಬ್ ಸೈಟ್ ಗಳು flipkart.dhamaka-offers.com, flipkart-bigbillion-sale.com ನಂತಹ ಹೆಸರುಗಳನ್ನು ಮತ್ತು ಇಂಟರ್ನೆಟ್ ವಿಳಾಸಗಳನ್ನು (URLಗಳು) ಹೊಂದಿರಬಹುದು. ಇಂತಹ ವೆಬ್ ಸೈಟ್ ಗಳು ಅದೇ ರೀತಿ ಕಾಣುವ ಮತ್ತು ಕೇಳಿಸುವ ಹೆಸರುಗಳನ್ನು ಉಪಯೋಗಿಸಿಕೊಂಡು ಫ್ಲಿಪ್ ಕಾರ್ಟ್ ಜೊತೆ ಸಂಬಂಧವಿರುವಂತೆ ನಟಿಸುತ್ತವೆ. ಆದಾಗ್ಯೂ, ಅವುಗಳು ಫ್ಲಿಪ್ ಕಾರ್ಟ್ ನಿಂದ ಅಧಿಕೃತಗೊಂಡಿರುವುದಿಲ್ಲ.

fraudulent

ವಾಟ್ಸ್‌ಆಪ್, ಫೇಸ್ ಬುಕ್ ಮೆಸೆಂಜರ್‍ ಮತ್ತು/ಅಥವಾ ಇತರ ಸಾಮಾಜಿಕ ಮೆಸೇಜಿಂಗ್ ವೇದಿಕೆಗಳು: ವಂಚಕರು ಈ ಪರಿಚಿತ ಮೆಸೇಜಿಂಗ್ ವೇದಿಕೆಗಳ ಮೂಲಕ ನಿಮಗೆ ಮೆಸೇಜ್ ಗಳನ್ನು ಕಳುಹಿಸಲು ಪ್ರಯತ್ನಿಸಬಹುದು. ಇದೇ ತರಹದ ಮೆಸೇಜ್ ಗಳನ್ನು ಸ್ವೀಕರಿಸಿರುವುದಾಗಿ ಅನೇಕ ಫ್ಲಿಪ್ ಕಾರ್ಟ್ ಗ್ರಾಹಕರು ವರದಿ ಮಾಡಿದ್ದಾರೆ.

  • ಹಸರು, ಮೊಬೈಲ್ ಸಂಖ್ಯೆ, ವಿಳಾಸ, ಬ್ಯಾಂಕ್ ವಿವರಗಳು ಇಂತಹ ವೈಯಕ್ತಿಕ ವಿವರಗಳನ್ನು ನೀಡುವಂತೆ ನಿಮ್ಮನ್ನು ಕೇಳಲಾಗುತ್ತದೆ.
  • ಆಕರ್ಷಕ ಬಹುಮಾನಗಳನ್ನು ಗೆಲ್ಲುವುದಕ್ಕಾಗಿ ಈ ವಂಚಕ ಮೆಸೇಜ್ ಗಳನ್ನು ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಇತರ ವ್ಯಕ್ತಿಗಳೊಂದಿಗೆ ಅಥವಾ ಗುಂಪುಗಳೊಂದಿಗೆ ಹಂಚಿಕೊಳ್ಳುವಂತೆ ಕೇಳಲಾಗುತ್ತದೆ
  • ನಿಮಗೆ ನಂಬಲಾಸಾಧ್ಯವಾದ ಮತ್ತು ಅತ್ಯಂತ ಆಕರ್ಷಕ ಬೆಲೆಗಳಿಗೆ ಉತ್ಪನ್ನಗಳ ಕೊಡುಗೆಯ ಅಮಿಷ ನೀಡಲಾಗುತ್ತದೆ (ಉದಾ. ಒಂದು 32 GB ಪೆನ್ ಡ್ರೈವ್‌ಗೆ ರೂ. 25)
  • ಫ್ಲಿಪ್ ಕಾರ್ಟ್‌ನಂತೆಯೇ ಕಾಣುವ ವೆಬ್ ಸೈಟ್ ನತ್ತ ನಿಮ್ಮನ್ನು ಆಕರ್ಷಿಸಲಾಗುತ್ತದೆ
  • ಉಚಿತ ಕಾಣಿಕೆಯನ್ನು ಪಡೆಯುವುದಕ್ಕಾಗಿ ಸಾರಿಗೆ ಅಥವಾ ತೆರಿಗೆಗಳನ್ನು ತುಂಬಲು ಆನ್ ಲೈನ್ ವಾಲೆಟ್ ಗಳ ಮೂಲಕ, ಬ್ಯಾಂಕ್ ಟ್ರಾನ್ಸ್ ಫರ್ ಮೂಲಕ ಅಥವಾ ಬೇರೆ ಮೂಲಗಳ ಮೂಲಕ ಹಣ ಪಾವತಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ.

ಈ ಕೊಡುಗೆಗಳು ಎಷ್ಟೇ ಆಕರ್ಷಕವಾಗಿ ಕಂಡುಬಂದರೂ ದಯವಿಟ್ಟು ಫ್ಲಿಪ್ ಕಾರ್ಟ್ ಬಳಿ ಅವುಗಳ ಪ್ರಾಮಾಣಿಕತೆಯನ್ನು ಪರೀಕ್ಷಿಸದೇ ಈ ಮೆಸೇಜ್ ಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವುಗಳಲ್ಲಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಫ್ಲಿಪ್ ಕಾರ್ಟ್ ಈ ಮೋಸದ ಸಂದೇಶಗಳನ್ನು ಕಳುಹಿಸುವವರೊಂದಿಗೆ ಯಾವುದೇ ಸಂಪರ್ಕ ಹೊಂದಿರುವುದಿಲ್ಲ ಮತ್ತು ನೀವು ಅವರೊಂದಿಗೆ ಹಂಚಿಕೊಳ್ಳುವ ಯಾವುದೇ ಮಾಹಿತಿಯ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ. ಫ್ಲಿಪ್ ಕಾರ್ಟ್ ಎಂದು ಹೇಳಿಕೊಂಡು ಕೆಲಸ ಮಾಡುವ ಈ ಮೋಸದ ಸಂದೇಶ ಕಳುಹಿಸುವವರಿಗೆ ನೀವು ಕಳುಹಿಸುವ ಯಾವುದೇ ವಿವರಗಳು ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನು ಅಪಾಯಕ್ಕೆ ಒಡ್ಡಬಹುದು. ಒಮ್ಮೆ ಈ ಖಾತೆಗಳಿಗೆ ಹಣ ಪಾವತಿಸಿದರೆ ಅದನ್ನು ಮರಳಿ ಪಡೆಯಲಾಗದು ಅಥವಾ ವ್ಯವಹಾರ ರದ್ದುಗೊಳಿಸಲಾಗದು, ಮತ್ತು ನೀವು ಬೆವರು ಸುರಿಸಿ ದುಡಿದ ಹಣ ಕೈಬಿಟ್ಟು ಹೋಗಬಹುದು.


fraudulent

 

ಗ್ರಾಹಕರಿಗೆ ನಕಲಿ ಕರೆಗಳು ಅಥವಾ ಎಸ್ಎಮ್‌ಎಸ್: ಕೆಲವೊಮ್ಮೆ, ಗ್ರಾಹಕರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರಬಹುದು. ಕರೆ ಮಾಡುವವರು ಇಂಗ್ಲಿಷ್, ಹಿಂದಿ ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಮಾತನಾಡಬಹುದು. ನೀವು ಉಚಿತ ಕಾಣಿಕೆಗಳನ್ನು ಗೆದ್ದಿದ್ದೀರಿ ಅಥವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಕ್ಕಿ ಡ್ರಾಗೆ ಆಯ್ಕೆ ಮಾಡಲಾಗಿದೆ ಇತ್ಯಾದಿ ಹೇಳಿ ಅವರು ನಿಮ್ಮನ್ನು ಆಕರ್ಷಿಸಲು ಪ್ರಯತ್ನಿಸಬಹುದು. ಈ ಕಾಣಿಕೆಗಳನ್ನು ಪಡೆದುಕೊಳ್ಳುವುದಕ್ಕಾಗಿ ನಿಮಗೆ ನಿಮ್ಮ ಗುಪ್ತ ಮತ್ತು ಸಂವೇದನಾಶೀಲ ವೈಯಕ್ತಿಕ ಅರ್ಥಿಕ ಮಾಹಿತಿಯನ್ನು ನೀಡುವಂತೆ ಅಥವಾ ಬ್ಯಾಂಕ್ ಖಾತೆಯ ಸಂಖ್ಯೆಗಳನ್ನು, ಎಲೆಕ್ಟ್ರಾನಿಕ್ ವಾಲೆಟ್ ವಿವರಗಳನ್ನು, ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ, CVV, PIN ಅಥವಾ OTP ನೀಡುವಂತೆ ಕೇಳಲಾಗುತ್ತದೆ. ಫ್ಲಿಪ್ ಕಾರ್ಟ್‌ನಂತೆಯೇ ಕಾಣುವಂತಹ ವೆಬ್ ಸೈಟ್ ಗೆ ಭೇಟಿ ನೀಡುವಂತೆ ನಿಮ್ಮನ್ನು ಮನವೊಲಿಸಬಹುದು ಅಥವಾ ಒಂದು ನಕಲಿ ಪ್ರಮಾಣ ಪತ್ರವನ್ನು ನಿಮಗೆ ಕಳುಹಿಸಬಹುದು. ಅವರು ಫ್ಲಿಪ್ ಕಾರ್ಟ್ ನೌಕರರು, ಅಥವಾ ಫ್ಲಿಪ್ ಕಾರ್ಟ್ ಪಾಲುದಾರರು ಎಂದು ಕೂಡ ಹೇಳಿಕೊಳ್ಳಬಹುದು, ಮತ್ತು ಗುರುತಿಗಾಗಿ ನಕಲಿ ಗುರುತಿನ ಚೀಟಿಗಳನ್ನು ತೋರಿಸಬಹುದು. ಅಂತಹ ನಕಲಿ ದಾಖಲೆಗಳನ್ನು ಪ್ರಸ್ತುತಪಡಿಸಿ ಅವು ನಿಜವಾದ ದಾಖಲೆಗಳೆಂದು ನಿಮ್ಮನ್ನು ನಂಬಿಸುವುದು ಅವರಿಗೆ ತುಂಬಾ ಸುಲಭದ ಕೆಲಸ. ಬಹುಮಾನಗಳನ್ನು ಅಥವಾ ಕಾಣಿಕೆಗಳನ್ನು ಪಡೆದುಕೊಳ್ಳಲು ಕೆಲವು ಡಿಜಿಟಲ್ ವಾಲೆಟ್ ಗಳಿಗೆ ಹಣ ಕಳುಹಿಸುವಂತೆ ಕೂಡ ನಿಮ್ಮನ್ನು ಕೇಳಬಹುದು. ಈ ಖಾತೆಗಳನ್ನು ಫ್ಲಿಪ್ ಕಾರ್ಟ್ ನಿರ್ವಹಿಸುತ್ತಿಲ್ಲ. ಇವುಗಳನ್ನು ನಿರ್ವಹಿಸುವವರು ನಿಮಗೆ ಮೋಸ ಮಾಡುವ ಉದ್ದೇಶವುಳ್ಳ ವಂಚಕರು ಎಂಬುದು ನಿಮಗೆ ತಿಳಿದಿರಲಿ.

 

fraudulent

 

ಫಿಷಿಂಗ್ (ನಕಲಿ ಇಮೇಲ್ ಗಳು): ಒಂದು ಎಲೆಕ್ಟ್ರಾನಿಕ್ ಸಂಪರ್ಕದಲ್ಲಿ ವಿಶ್ವಾಸಾರ್ಹ ಸಂಸ್ಥೆಯಂತೆ ವೇಷ ಮರೆಸಿಕೊಂಡು, ಸ್ವಾರ್ಥದ ಉದ್ದೇಶದೊಂದಿಗೆ ಸಂವೇದನಾಶೀಲ ಮಾಹಿತಿಯಾದ ಬಳಕೆದಾರರ ಹೆಸರುಗಳು, ಪಾಸ್ ವರ್ಡ್‌ಗಳು, ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದುಕೊಳ್ಳುವ ಮೋಸದ ಪ್ರಯತ್ನವನ್ನು ಫಿಷಿಂಗ್ ಎನ್ನುತ್ತಾರೆ. . ಫಿಷಿಂಗ್ ಇಮೇಲ್ ಗಳನ್ನು ವಂಚಕರು ಕಳುಹಿಸುತ್ತಾರೆ. ಅಪಾಯಕಾರಿ ಲಿಂಕ್ ಗಳಿಗೆ ಭೇಟಿ ನೀಡುವಂತೆ ಕೇಳಿಕೊಳ್ಳುವ ಇಮೇಲ್ ಗಳನ್ನು ನಿಮಗೆ ಕಳುಹಿಸಲಾಗುತ್ತದೆ. ಇಮೇಲ್‌ಗಳು ನಿಮಗೆ ದುರುದ್ದೇಶಪೂರಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಕೇಳಬಹುದು ಹಾಗೂ ಆ ಮೂಲಕ ಅವು ನಿಮ್ಮ ವೈಯಕ್ತಿಕ ಮತ್ತು/ಅಥವಾ ಆರ್ಥಿಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಪರವಾನಗಿ ಇಲ್ಲದೇ ಅವುಗಳನ್ನು ಬಳಸಿ ಮೋಸದ ಆರ್ಥಿಕ ವ್ಯವಹಾರ ನಡೆಸಬಹುದು. ನೀವು ಹಣ, ವೈಯಕ್ತಿಕ ಮತ್ತು ಸಂವೇದನಶೀಲ ಮಾಹಿತಿಯನ್ನು ಕಳೆದುಕೊಳ್ಳಬಹುದು ಮತ್ತು ಇಂಥ ಇಮೇಲ್‌ಗಳಲ್ಲಿನ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ತೆರೆದಾಗನಿಮ್ಮ ಸಿಸ್ಟಮ್ ಗಳಾದ — ಡೆಸ್ಕ್ ಟಾಪ್ ಕಂಪ್ಯೂಟರ್ ಗಳು, ಲ್ಯಾಪ್ ಟಾಪ್ ಗಳು ಅಥವಾ ಮೊಬೈಲ್ ಗಳು ಅಂತಹ ಮೇಲ್ ಗಳಲ್ಲಿರುವ ಮಾಲ್ವೇರ್/ವೈರಸ್ ಗಳಿಂದಾಗಿ ಅವುಗಳನ್ನು ಅಪಾಯಕ್ಕೆ ಗುರಿ ಮಾಡಬಹುದು.

 

fraudulent

ಆನ್ ಲೈನ್ ಆಟಗಳು/ವೆಬ್ ಸೈಟ್ ಗಳು (ರಿಯಾಯ್ತಿ ಕೂಪನ್ ಗಳು/ಗಿಫ್ಟ್ ವೋಚರ್ ಗಳು/ಕೊಡುಗೆಗಳು/ಆನ್ ಲೈನ್ ಆಟಗಳು): ಈ ಪ್ರಕಾರದ ಆನ್ ಲೈನ್ ಹಗರಣಗಳು ಗ್ರಾಹಕರನ್ನು ತಲಪುತ್ತವೆ ಮತ್ತು ‘ಚಕ್ರ ತಿರುಗಿಸಿ’, ಇಂತಹ ಆಟಗಳನ್ನು ಆಡಿ ಉಚಿತ ಬಹುಮಾನಗಳನ್ನು, ನಗದು ಬಹುಮಾನಗಳನ್ನು ಮತ್ತು ಇತರ ಆಕರ್ಷಕ ಕೊಡುಗೆಗಳನ್ನು ಗೆಲ್ಲುವಂತೆ ಕೇಳುತ್ತವೆ. . ಹೆಚ್ಚಿನ ಸಂದರ್ಭಗಳಲ್ಲಿ ಬಹುಮಾನ ಗೆಲ್ಲಲು ತಮ್ಮ ಸಂಪರ್ಕದಲ್ಲಿರುವವರೊಂದಿಗೆ ಆಟವನ್ನು ಹಂಚಿಕೊಳ್ಳುವಂತೆ ಆಟಗಾರರನ್ನು ಕೇಳಲಾಗುತ್ತದೆ. ಆದರೆ ಬಹುಮಾನ ದೊರೆಯುವುದು ಕನಸಿನ ಮಾತಷ್ಟೆ. ಬಳಕೆದಾರರು ತಮ್ಮ ಸಂವೇದನಶೀಲ ವೈಯಕ್ತಿಕ ಮಾಹಿತಿಯಾದ ಇಮೇಲ್ ಐಡಿ, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಮಾಡಲಾಗುತ್ತದೆ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಮೋಸ ಹೋಗುವ ಅಪಾಯವಿರುತ್ತದೆ. ದಯವಿಟ್ಟು ನಕಲಿ ಆನ್ ಲೈನ್ ಆಟಗಳ ಬಗ್ಗೆ ಇರುವ ಲೇಖನವನ್ನು ಓದಿ ಹೆಚ್ಚಿನ ಮಾಹಿತಿ ಪಡೆಯಿರಿ.

 

fraudulent

ಮಾರುಕಟ್ಟೆಯ ಮಾರಾಟಗಾರರಿಂದ: ನೀವು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದ ಉತ್ಪನ್ನವನ್ನೇ ಪಡೆದರೂ ನೀವು ಅದರಲ್ಲಿ ಒಂದು ಕಿರುಹೊತ್ತಿಗೆ ಅಥವಾ ಜಾಹೀರಾತು ಹಾಳೆಗಳನ್ನು ಸ್ವೀಕರಿಸಬಹುದು. ಇವುಗಳು ಹೆಚ್ಚಿನ ರಿಯಾಯ್ತಿ ಪಡೆಯುವುದಕ್ಕಾಗಿ ಭವಿಷ್ಯದಲ್ಲಿ ಬೇರೆ ಆನ್ ಲೈನ್ ಶಾಪಿಂಗ್ ಸೈಟ್ ಅಥವಾ ಪೋರ್ಟಲ್ ನಲ್ಲಿ ಉತ್ಪನ್ನ ಖರೀದಿಸಿ ಎಂದು ಕೇಳಬಹುದು. ಅದೇ ರೀತಿ, ಮಾರಾಟಗಾರರು/ಕರೆ ಮಾಡುವವರಂತೆ ನಟಿಸಿ, ನೇರವಾಗಿ ಅವರೊಂದಿಗೆ ಆರ್ಡರ್ ಮಾಡುವಂತೆ ಮತ್ತು ಅವರಿಗೇ ಹಣ ಪಾವತಿಸುವಂತೆ ಕೇಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಅವರು ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ಅನ್ನು ರದ್ದುಗೊಳಿಸುವಂತೆ ಕೇಳಿಕೊಳ್ಳಬಹುದು. ನೀವೇನಾದರೂ ಈ ವಂಚಕ ಮಾರಾಟಗಾರರ ಮಾತಿಗೆ ಮಾರು ಹೋದರೆ, ನೀವು ಅವರೊಂದಿಗೆ ಹಂಚಿಕೊಳ್ಳುವ ಯಾವುದೇ ಮಾಹಿತಿಯ ಮೇಲೆ ಫ್ಲಿಪ್ ಕಾರ್ಟ್ ನಿಯಂತ್ರಣ ಹೊಂದಿರುವುದಿಲ್ಲ. ನೀವು ಅಂತಹ ಕೊಡುಗೆಗಳನ್ನು ಸ್ವೀಕರಿಸಿದರೆ, ಮೋಸ ಹೋಗುವ ಅಪಾಯವಿರುತ್ತದೆ.

 

fraudulent

ಆಫ್ ಲೈನ್ ಮಾಧ್ಯಮ: ಇಂತಹ ಹಗರಣಗಳು ಸ್ವಲ್ಪ ಕಮಿಶನ್/ಶುಲ್ಕ ಭರಿಸಿದರೆ ಉದ್ಯೋಗ ನೀಡುವಂತಹ ಸುದ್ದಿಗಳನ್ನು ಒಳಗೊಂಡಿದ್ದು, ವಿಶೇಷವಾಗಿ ಸುದ್ದಿಪತ್ರಿಕೆಗಳ ಜಾಹೀರಾತುಗಳಲ್ಲಿ ಮತ್ತು ಉದ್ಯೋಗದ ಪೋರ್ಟಲ್ ಗಳಲ್ಲಿ ಪ್ರಕಟಗೊಳ್ಳಬಹುದು. ಉದ್ಯೋಗಕ್ಕಾಗಿ ಅಥವಾ ಗುತ್ತಿಗೆಗಾಗಿ ಸಂಭಾವ್ಯ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸುವಂತೆ ಫ್ಲಿಪ್ ಕಾರ್ಟ್ ಯಾವತ್ತೂ ಕೇಳುವುದಿಲ್ಲ, ಮತ್ತು ಯಾವುದೇ ಮೂರನೇ ವ್ಯಕ್ತಿಗೆ ಅಂತಹ ಹಕ್ಕನ್ನೂ ನೀಡಿಲ್ಲ (ಹೆಚ್ಚಿನ ಮಾಹಿತಿಗಾಗಿ Fake Flipkart job offers ಎಂಬ ಲೇಖನ ಓದಿ).

ವಂಚಕರು ಮೋಸ ಮಾಡಲು ಅನುಸರಿಸುವ ಇತರ ಗೊತ್ತಿರುವ ವಿಧಾನಗಳು

ಗ್ರಾಹಕರು ವಂಚಕರಿಂದ ನಕಲಿ SMS ಅಥವಾ ವಾಟ್ಸ್ ಆಪ್ ಮೆಸೇಜ್ ಗಳನ್ನು ಅಥವಾ ಕರೆಗಳನ್ನು ಸ್ವೀಕರಿಸುವಂತಹ ಇತರ ಕೆಲವು ಮೋಸ ಮಾಡುವ ವಿಧಾನಗಳನ್ನು ನಾವು ಗಮನಿಸಿದ್ದೇವೆ. ಈ ಮೋಸಗಾರರು ತಾವು ಫ್ಲಿಪ್ ಕಾರ್ಟ್ ಅಥವಾ ಅದರ ಸಮೂಹ ಸಂಸ್ಥೆಗಳಾದ ಮಿಂತ್ರಾ, ಜೆಬಾಂಗ್, ಜೀವೇಸ್ ಅಥವಾ ಫೋನ್ ಪೆ ಸಂಸ್ಥೆಗಳ ಪ್ರತಿನಿಧಿಗಳೆಂದು ಹೇಳಿ ಗ್ರಾಹಕರನ್ನು ದಾರಿ ತಪ್ಪಿಸಬಹುದು. ಒಬ್ಬ ವಂಚಕ ನಿಮ್ಮ ಇತ್ತೀಚಿನ ಆರ್ಡರ್ ಸಂಖ್ಯೆಗಳನ್ನು ಓದಿ ಹೇಳಬಹುದು (ಈ ಹಿಂದೆ ನೀವು ಎಸೆದ ಪ್ಯಾಕೇಜಿನ ಲೇಬಲ್ ಗಳಿಂದ ಅಥವಾ ಕವರ್ ಗಳಿಂದ ಅವುಗಳನ್ನು ಪಡೆದುಕೊಳ್ಳಬಹುದು) ಮತ್ತು ಬ್ಯಾಂಕ್ ಟ್ರಾನ್ಸ್ ಫರ್/ವಾಲೆಟ್ ಗಳ ಇತ್ಯಾದಿ ಮೂಲಗಳಿಂದ ಮುಂಗಡ ಹಣ ಪಾವತಿಸುವಂತೆ ಗ್ರಾಹಕರನ್ನು ಕೇಳಬಹುದು, ಅಥವಾ ಅವರು ನಿಮ್ಮ ಬ್ಯಾಂಕ್ ಮತ್ತು/ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ವಿವರಗಳನ್ನು ಮತ್ತು/ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಬಹುದು. ಕೆಲವು ಸಂದರ್ಭಗಳಲ್ಲಿ, ಮೂರನೇ ವ್ಯಕ್ತಿಗಳು ನಡೆಸುವ ಅಪ್ಲಿಕೇಶನ್ ಗಳನ್ನು (ಎನಿಡೆಸ್ಕ್) ಇನ್ ಸ್ಟಾಲ್ ಮಾಡಿಕೊಳ್ಳುವಂತೆ ಗ್ರಾಹಕರನ್ನು ಮತ್ತು ಸಾಮಾನ್ಯ ಜನರನ್ನು ಕೇಳಬಹುದು. ಅಂತಹ ಅಪ್ಲಿಕೇಶನ್ ಗಳು ನಿಮ್ಮ ಮೊಬೈಲ್ ಫೋನ್ ನಿಯಂತ್ರಣ ಪಡೆದುಕೊಳ್ಳಬಹುದು ಮತ್ತು ವೈಯಕ್ತಿಕ ಮಾಹಿತಿಯೊಂದಿಗೆ ನೀವು ಶೇಖರಿಸಿಟ್ಟ ಆರ್ಥಿಕ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ. ಫ್ಲಿಪ್ ಕಾರ್ಟ್ ಅಥವಾ ಅದರ ಅಧಿಕೃತ ಪ್ರತಿನಿಧಿಗಳು ನಿಮ್ಮಿಂದ ಈ ವಿವರಗಳನ್ನು ಎಂದಿಗೂ ಕೇಳುವುದಿಲ್ಲ ಅಥವಾ ಯಾವುದೇ ಇತರೆ ಅಪ್ಲಿಕೇಶನ್ ಗಳನ್ನು ಇನ್ ಸ್ಟಾಲ್ ಮಾಡುವಂತೆ ಕೇಳುವುದಿಲ್ಲ.

ನಿಮಗೆ ಅಂತಹ ಯಾವುದೇ ಕರೆಗಳು ಅಥವಾ ಮೆಸೇಜ್ ಗಳು ಬಂದರೆ, ತಕ್ಷಣ ಡಿಸ್ಕನೆಕ್ಟ್ ಮಾಡಿ ಮತ್ತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ದಯವಿಟ್ಟು ಅಂತಹ ಘಟನೆಗಳನ್ನು ಸಾಧ್ಯವಾದಷ್ಟು ಬೇಗ ನಮ್ಮ ಗಮನಕ್ಕೆ ತನ್ನಿ. ಅದಕ್ಕಾಗಿ ನಮ್ಮ ಗ್ರಾಹಕ ಸೇವಾ ಸಂಖ್ಯೆ (1800 208 9898) ಗೆ ಕರೆ ಮಾಡಿ ಅಥವಾ ಫ್ಲಿಪ್ ಕಾರ್ಟ್ ಸಪೋರ್ಟ್ ಗೆ (@flipkartsupport) ಟ್ವಿಟರ್ ನಲ್ಲಿ ನೇರವಾಗಿ ಮೆಸೇಜ್ (DM) ಮಾಡಿ. ವಂಚಕರ ದೂರವಾಣಿ ಸಂಖ್ಯೆಗಳು, ಅಥವಾ ನೀವು ಸ್ವೀಕರಿಸಿದ ಸಂದೇಹಾಸ್ಪದ ಮೆಸೇಜ್ ಗಳನ್ನು ನಮ್ಮ ಗ್ರಾಹಕ ಸೇವಾ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಿ.

ಫ್ಲಿಪ್ ಕಾರ್ಟ್ ನಲ್ಲಿ ಹೇಗೆ ಸುರಕ್ಷಿತವಾಗಿ ಖರೀದಿಸುವುದು ಮತ್ತು ಮೋಸದ ಅಪಾಯದಿಂದ ಪಾರಾಗುವುದು

fraudulent

ಫ್ಲಿಪ್ ಕಾರ್ಟ್ ಗ್ರಾಹಕರು ಕೇವಲ ಫ್ಲಿಪ್ ಕಾರ್ಟ್ ನ ಅಧಿಕೃತ ಡೆಸ್ಕ್ ಟಾಪ್ ವೆಬ್ ಸೈಟ್ ನಲ್ಲಿ, ಫ್ಲಿಪ್ ಕಾರ್ಟ್ ಮೊಬೈಲ್ ಶಾಪಿಂಗ್ ಆಪ್ ನಲ್ಲಿ (ಐಓಎಸ್ ಮತ್ತು ಅಂಡ್ರಾಯ್ಡ್), ಮತ್ತು ಫ್ಲಿಪ್ ಕಾರ್ಟ್ ಮೊಬೈಲ್ ಸೈಟ್ ನಲ್ಲಿ ಖರೀದಿಸಬಹುದು. ಇವುಗಳನ್ನು ಬಿಟ್ಟರೆ ಫ್ಲಿಪ್ ಕಾರ್ಟ್ ನಲ್ಲಿನ ಆನ್ ಲೈನ್ ಶಾಪಿಂಗ್ ಅನ್ನು ಬೇರೆ ಯಾವುದೇ ವೆಬ್ ಸೈಟ್ ಅಥವಾ ಆನ್ ಲೈನ್ ಮಾಧ್ಯಮದಲ್ಲಿ ಮಾಡಲು ಸಾಧ್ಯವಿಲ್ಲ.

ಫ್ಲಿಪ್ ಕಾರ್ಟ್ ತನ್ನನ್ನು ಅಥವಾ ತನ್ನ ಸಮೂಹ ಸಂಸ್ಥೆಗಳನ್ನು ಪ್ರತಿನಿಧಿಸಲು ಯಾವುದೇ ಮೂರನೇ ವ್ಯಕ್ತಿಗೆ ಅಧಿಕಾರ ನೀಡಿರುವುದಿಲ್ಲ (ಫ್ಲಿಪ್ ಕಾರ್ಟ್ ಸಮೂಹವು ಮಿಂತ್ರಾ, ಜೆಬಾಂಗ್, ಫೋನ್ ಪೆ, ಜೀವೇಸ್, F1 ಇನ್ಫೊಸಿಸ್ಟಮ್ಸ್ ಮತ್ತು 2GUD.com ಗಳನ್ನು ಒಳಗೊಂಡಿರುತ್ತದೆ). ಹಾಗಾಗಿ ಆ ಮೂರನೇ ಪಕ್ಷಗಳು ಅಥವಾ ವ್ಯಕ್ತಿಗಳು ಫ್ಲಿಪ್ ಕಾರ್ಟ್ ಪರವಾಗಿ ರಿಯಾಯ್ತಿಗಳನ್ನು ಅಥವಾ ಆಕರ್ಷಕ ಬೆಲೆಗಳನ್ನು ನೀಡಲು ಅಧಿಕಾರ ಹೊಂದಿರುವುದಿಲ್ಲ. ನಾವು ಎಚ್ಚರವಹಿಸುವಂತೆ ಸಲಹೆ ನೀಡಿದ ನಂತರವೂ ನೀವು ನಿಮ್ಮ ವೈಯಕ್ತಿಕ/ಆರ್ಥಿಕ ಮಾಹಿತಿ ಅಥವಾ ಹಣ ಕಳೆದುಕೊಂಡರೆ, ದಯವಿಟ್ಟು ಅದಕ್ಕೆ ನೀವೇ ಜಾವಾಬ್ದಾರರು ಎಂದು ತಿಳಿಯಿರಿ.


ಫ್ಲಿಪ್ ಕಾರ್ಟ್‌ನಲ್ಲಿ ಲಭ್ಯವಿರುವ ಕೊಡುಗೆಗಳು, ಆಕರ್ಷಕ ಬೆಲೆಗಳು ಮತ್ತು ರಿಯಾಯ್ತಿಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು?

fraudulent

ಇದು ಒಳ್ಳೆಯ ಪ್ರಶ್ನೆ. ನೀವು ಆಕರ್ಷಕ ಬೆಲೆಗಳು, ರಿಯಾಯ್ತಿಗಳು ಮತ್ತು ಕೊಡುಗೆಗಳಿಂದ ಹೆಚ್ಚು ಲಾಭ ಪಡೆದುಕೊಳ್ಳುವ ಇಚ್ಛೆ ಹೊಂದಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತು, ಆದರೆ ಅವು ಪ್ರಾಮಾಣಿಕವಾಗಿವೆ ಎಂಬುದನ್ನು ಮೊದಲು ನೀವು ಖಚಿತಪಡಿಸಿಕೊಳ್ಳಬೇಕು. ದಯವಿಟ್ಟು https://www.flipkart.com/ ಮತ್ತು https://stories.flipkart.comಗೆ ಭೇಟಿ ನೀಡಿ, ಎಲ್ಲ ಆಕರ್ಷಕ ಬೆಲೆಗಳು, ರಿಯಾಯ್ತಿಗಳು ಮತ್ತು ಕೊಡುಗೆಗಳ ಬಗ್ಗೆ ‌ಇತ್ತೀಚಿನ ಸುದ್ದಿ ಮತ್ತು ಪ್ರಕಟಣೆಗಳನ್ನು ತಿಳಿಯಿರಿ. ಇವು ಅತ್ಯಂತ ನಿಖರವಾದ ಮತ್ತು ವಿಶ್ವಾಸಾರ್ಹ ಮಾಹಿತಿ ಮೂಲಗಳಾಗಿವೆ.

ನಿಮ್ಮ ಫ್ಲಿಪ್ ಕಾರ್ಟ್ ಮೊಬೈಲ್ ಶಾಪಿಂಗ್ ಆಪ್ ನಲ್ಲಿ ನೋಟಿಫಿಕೇಶನ್ ಗಳನ್ನು ಆನ್ ಮಾಡಿಕೊಳ್ಳಿ ಮತ್ತು ಆಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳುವುದನ್ನು ಮರೆಯಬೇಡಿ.

ಫ್ಲಿಪ್ ಕಾರ್ಟ್ ಬಗ್ಗೆ ಇತ್ತೀಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಆನ್ ಲೈನ್ ವೇದಿಕೆಗಳಿಗೆ ಭೇಟಿ ನೀಡಿ:
ಫ್ಲಿಪ್ ಕಾರ್ಟ್ ನ ಅಧಿಕೃತ ಫೇಸ್ ಬುಕ್ ಪೇಜ್
ಫ್ಲಿಪ್ ಕತೆಗಳ ಅಧಿಕೃತ ಫೇಸ್ ಬುಕ್ ಪೇಜ್
ಫ್ಲಿಪ್ ಕಾರ್ಟ್ ನ ಅಧಿಕೃತ ಟ್ವಿಟರ್ ಖಾತೆ</>
ಫ್ಲಿಪ್ ಕತೆಗಳ ಅಧಿಕೃತ ಅಧಿಕೃತ ಟ್ವಿಟರ್ ಖಾತೆ

ಫ್ಲಿಪ್ ಕಾರ್ಟ್ ಅಥವಾ ಅದರ ಅಧಿಕೃತ ಪ್ರತಿನಿಧಿಗಳು ನಿಮ್ಮ ಗೌಪ್ಯ ಮಾಹಿತಿಯಾದ ಪಾಸ್ ವರ್ಡ್ ಗಳು, OTP ಮತ್ತು PIN ಸಂಖ್ಯೆಗಳನ್ನು ನೀಡುವಂತೆ ಎಂದಿಗೂ ಕೇಳುವುದಿಲ್ಲ. ಅನಧಿಕೃತ ವ್ಯಕ್ತಿಗಳಿಗೆ ಅಂತಹ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ನೀವು ಹಣ ಕಳೆದುಕೊಳ್ಳುವ ಮತ್ತುಕಾನೂನುಬಾಹಿರವಾಗಿ ವೈಯಕ್ತಿಕ ಮಾಹಿತಿ ಸಂಗ್ರಹಿಸುವಂತಹ ಅಪಾಯಗಳಿಗೆ ಸಿಲುಕುತ್ತೀರಿ. ನಕಲಿ ಆನ್ ಲೈನ್ ವ್ಯವಹಾರ ಮಾಡುವಂತೆ ಕೂಡ ನಿಮ್ಮನ್ನು ಮರುಳಾಗಿಸಬಹುದು ಅಥವಾ ವಂಚಕರು ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಉಪಯೋಗಿಸಿಕೊಂಡು ನಮ್ಮ ವೆಬ್ ಸೈಟ್ ನಲ್ಲಿ ಮೋಸದ ಕೆಲಸಗಳನ್ನು ಮಾಡಬಹುದು.

ಅಂತಹ ಯಾವುದೇ ಮೋಸಗಳಿಂದಾಗಿ ನೀವು ಹಣ ಕಳೆದುಕೊಂಡಿದ್ದರೆ, ಫ್ಲಿಪ್ ಕಾರ್ಟ್ ಗ್ರಾಹಕ ಸೇವಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ1800 208 9898ಗೆ ಕರೆ ಮಾಡುವ ಮೂಲಕ ತಕ್ಷಣ ನಮಗೆ ತಿಳಿಸಬಹುದು. ಆ ಆರ್ಡರ್ ರದ್ದುಗೊಳಿಸಲು ಮತ್ತು ಹಣವನ್ನು ಮರಳಿಸಲು ಫ್ಲಿಪ್ ಕಾರ್ಟ್‌ನಿಂದ ಎಲ್ಲೆಲ್ಲಿ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡಲಾಗುತ್ತದೆ. ಬೇರೆ ಸಂದರ್ಭಗಳಲ್ಲಿ, ಅಧಿಕೃತ ದೂರು ಸಲ್ಲಿಸುವುದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಗಳನ್ನು ಮತ್ತು ಸೈಬರ್ ಕ್ರೈಮ್ ಪೊಲೀಸ್ ಸ್ಟೇಶನ್ ಗಳನ್ನು ಸಂಪರ್ಕಿಸಬೇಕಾಗುತ್ತದೆ. ನಾವು ತಪ್ಪಿತಸ್ಥ ಖರೀದಿದಾರರ ಯಾವುದೇ ವಿವರಗಳನ್ನು ನಿಮ್ಮೊಂದಿಗೆ ನೇರವಾಗಿ ಹಂಚಿಕೊಳ್ಳುವುದಿಲ್ಲ. ಅವನ್ನು -ಪ್ರಕರಣಗಳ ಆಧಾರದ ಮೇಲೆ ಕಾನೂನು ಜಾರಿಗೊಳಿಸುವ ಏಜೆನ್ಸಿಗಳ ಜೊತೆ ಮಾತ್ರ ಹಂಚಿಕೊಳ್ಳಲಾಗುತ್ತದೆ.

ನೀವು ಬೆಂಬಲ ನೀಡುವುದರಿಂದ ನಿಮ್ಮಂತಹ ಗ್ರಾಹಕರನ್ನು, ಮತ್ತು ಸಾಮಾನ್ಯ ಜನರನ್ನು, ವಂಚನೆಗಳಿಂದ ರಕ್ಷಿಸಲು ಸಹಾಯವಾಗುತ್ತದೆ. ಯಾವುದೇ ಸಂಶಯಾಸ್ಪದ ಚಟುವಟಿಕೆಗಳನ್ನು ಫ್ಲಿಪ್ ಕಾರ್ಟ್ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ 1800 208 9898 ಗೆ ಕರೆ ಮಾಡಿ ತಿಳಿಸಿ. ನೀವು ಫ್ಲಿಪ್ ಕಾರ್ಟ್ ಆಪ್ ನಲ್ಲಿ ಕೂಡ ನಮಗೆ ಇಮೇಲ್/ಮಿಂಚಂಚೆ ಕಳುಹಿಸಬಹುದು ಅಥವಾ ಮಾತನಾಡಬಹುದು (ಸ್ಕ್ರೀನ್ ಶಾಟ್ ನೊಡಿ):

fraudulent

ಫ್ಲಿಪ್ ಕಾರ್ಟ್ ಮಾಹಿತಿ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ನಿರಂತರವಾಗಿ ಅಗತ್ಯ ಕ್ರಮಗಳನ್ನು ಜರುಗಿಸುತ್ತದೆ. ಹಿಂದೆ ನಾವು ಪ್ರಕರಣಗಳನ್ನು ವಿಚಾರಣೆ ಮಾಡಿದ್ದೇವೆ ಮತ್ತು ಮೋಸಗಾರರು, ಹಗರಣ ಮಾಡುವವರು ಮತ್ತು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ. ಜೊತೆಗೆ ನಮ್ಮ ಸಿಸ್ಟಮ್ ಗಳನ್ನು ಮತ್ತು ಪ್ರಕ್ರಿಯೆಗಳನ್ನು ಕೂಡ ಬಲಪಡಿಸಿದ್ದೇವೆ. ಆನ್ ಲೈನ್ ಶಾಪಿಂಗ್ ಮಾಡುವ ಭಾರತದ ಗ್ರಾಹಕರ ದತ್ತಾಂಶ ಭದ್ರತೆಗಾಗಿ ನಾವು ಮಾಡುತ್ತಿರುವ ಪ್ರಯತ್ನದಲ್ಲಿ ದಯವಿಟ್ಟು ಸಹಕರಿಸಿ.


ಇದನ್ನೂ ಓದಿ

ನಕಲಿ ಫ್ಲಿಪ್ ಕಾರ್ಟ್ ಉದ್ಯೋಗಾವಕಾಶಗಳು ಮತ್ತು ಸುಳ್ಳು ಉದ್ಯೋಗ ಏಜೆಂಟ್ ಗಳಿಂದ ಎಚ್ಚರದಿಂದಿರಿ

ಫ್ಲಿಪ್ ಕಾರ್ಟ್ ಬಗ್ಗೆ ಸುಳ್ಳು ವಿಮರ್ಶೆಗಳೇ? ನೀವು ಅವುಗಳನ್ನು ನಂಬುವ ಮುಂಚೆ ಇದನ್ನು ಓದಿ

Enjoy shopping on Flipkart