#ಸೆಲ್ಫ್ ಮೇಡ್: ಶಿಶುವಿಹಾರದ ಶಿಕ್ಷಕಿಯಿಂದ ಆನ್‌ಲೈನ್ ಉದ್ಯಮಿಯವರೆಗೆ, ರಾಕೆಟ್ ಸಿಂಗ್‌ನಿಂದ ಸ್ಫೂರ್ತಿ ಪಡೆದವರು!

Read this article in हिन्दी | English | বাংলা | தமிழ் | ગુજરાતી | मराठी

ಸುಮೀತ್ ಕೌರ್ ಶಿಶುವಿಹಾರದ ಶಿಕ್ಷಕಿಯಾಗಿ ತನ್ನ ಕೆಲಸವನ್ನು ಇಷ್ಟಪಡುತ್ತಿದ್ದರು. ಆದರೆ ಬಾಲಿವುಡ್ ಚಲನಚಿತ್ರವಾದ ರಾಕೆಟ್ ಸಿಂಗ್ : ಸೇಲ್ಸ್‌ಮ್ಯಾನ್ ಆಫ್ ದಿ ಇಯರ್ ಅನ್ನು ನೋಡಿದ ನಂತರ ಅವರ ಜೀವನ ಗಮನಾರ್ಹವಾಗಿ ಬದಲಾಯಿತು. ಇದರಿಂದ ಪ್ರೇರಿತರಾಗಿ ಅವರು ತಮ್ಮ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ ನಂತರ, ಸುಮೀತ್‌ರ ಅದೃಷ್ಟ ಗಗನಕ್ಕೇರಿತು. ಮತ್ತು ಅವರು ತನ್ನ ಕಂಪನಿಗೆ ಏನು ಹೆಸರಿಸಿಟ್ಟಿದ್ದಾರೆಂದು ಗೊತ್ತೇ? ರಾಕೆಟ್ ಸೇಲ್ಸ್ ಕಾರ್ಪ್! ಧೈರ್ಯ ಮತ್ತು ದೃಢನಿಶ್ಚಯದ ಈ ಕಥೆಯಿಂದ ಪ್ರೇರಣೆ ಪಡೆಯಿರಿ.

Flipkart seller

ಸುಮೀತ್ ಕೌರ್, ದೆಹಲಿಯ ಫ್ಲಿಪ್‌ಕಾರ್ಟ್‌ ಮಾರಾಟಗಾರ್ತಿ

ಜಿಷ್ಣು ಮುರಳಿಯವರಿಗೆ ಹೇಳಿದಂತೆ


ನಾನು 2013ರಲ್ಲಿ ಫ್ಲಿಪ್‌ಕಾರ್ಟ್ ಮಾರಾಟಗಾರನಾದೆ. ಇಲ್ಲಿಯವರೆಗಿನ ಪ್ರಯಾಣವು ಅದ್ಭುತವಾಗಿದೆ. ನನ್ನ ವ್ಯವಹಾರವನ್ನು ವಿಸ್ತರಿಸಲು ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಜನರು ಸಾಮಾನ್ಯವಾಗಿ ಆನ್‌ಲೈನ್ ವ್ಯವಹಾರಗಳನ್ನು ಪ್ರಾರಂಭಿಸಿದಷ್ಟೇ ಬೇಗ ಅವುಗಳನ್ನು ಮುಚ್ಚುತ್ತಾರೆ. ಆದರೆ ನಾನು ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಮತ್ತು ನಾನು ಕಷ್ಟದಲ್ಲಿದ್ದೇನೆಂದು ನನಗೆ ಅನಿಸಿಲ್ಲ. ನಾನು ಹೊಸ ವರ್ಗಗಳನ್ನು ಪ್ರಾರಂಭಿಸಿದೆ ಮತ್ತು ಹೊಸ ಉತ್ಪನ್ನಗಳನ್ನು ಸೇರಿಸಿದೆ – ಆನ್‌ಲೈನ್ ಮಾರಾಟವು ನನಗೆ ವಿವಿಧ ವಿಭಾಗಗಳಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಿದೆ.

ಅಂಗಡಿಯನ್ನು ಆಫ್‌ಲೈನ್‌ನಲ್ಲಿ ಸ್ಥಾಪಿಸುವುದು ದುಬಾರಿಯಾಗಿತ್ತು. ಬಾಡಿಗೆ ಮತ್ತು ವಸ್ತುಗಳ ವೆಚ್ಚಗಳೇ ಬಹಳಷ್ಟಾಗುತ್ತಿತ್ತು. ಹಾಗಾಗಿ ನನಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಯೋಚನೆ ಬಂದಿತು. ಒಬ್ಬ ಆನ್‌ಲೈನ್ ಗ್ರಾಹಕನಾಗಿ ಇದೆಲ್ಲವೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ನಿಜವಾಗಿಯೂ ಕುತೂಹಲವಿತ್ತು. ನಾನು ಈಗಾಗಲೇ ಆನ್‌ಲೈನ್ ವ್ಯವಹಾರಗಳನ್ನು ನಡೆಸುತ್ತಿರುವ ಜನರನ್ನು ಭೇಟಿಯಾಗಿ ಅವರಿಂದ ಕಲಿತೆ. ಆಫ್‌ಲೈನ್ ಅಂಗಡಿಯನ್ನು ನಡೆಸುವುದಕ್ಕೆ ಹೋಲಿಸಿದರೆ ಆನ್‌ಲೈನ್ ಮಾರಾಟಕ್ಕೆ ಮಾರಾಟಗಾರರಿಂದ ಕಡಿಮೆ ಪ್ರಯತ್ನ ಸಾಕು. ನನಗೆ ನಿಜವಾಗಿಯೂ ಇಡೀ ರಾಷ್ಟ್ರವು ನನ್ನ ಮಾರುಕಟ್ಟೆಯಾಗಬಹುದೆಂದು ಅನಿಸಿತು.

ನಾನು ಆರಂಭದಲ್ಲಿ ಸೌಂದರ್ಯ ಉತ್ಪನ್ನಗಳು ಮತ್ತು ಡಿಯೋಡ್ರೆಂಟ್‌ಗಳೊಂದಿಗೆ ಪ್ರಾರಂಭಿಸಿದೆ, ಇವುಗಳನ್ನು ನಾನು ಸುಲಭವಾಗಿ ಮತ್ತು ಕಡಿಮೆ ಬೆಲೆಗೆ ಸಂಗ್ರಹಿಸಬಹುದಾಗಿತ್ತು. ನಂತರ ನಾನು ಸುಗಂಧ ದ್ರವ್ಯಗಳು, ಕಲೋನ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ ಮತ್ತು ನಂತರ ಆರೋಗ್ಯ ಮತ್ತು ಯೋಗಕ್ಷೇಮ ವಿಭಾಗದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ, ಏಕೆಂದರೆ ನಿಮ್ಮ ಉತ್ಪನ್ನಗಳಲ್ಲಿ ವೈವಿಧ್ಯತೆಯಿದ್ದಷ್ಟೂ ನಿಮ್ಮ ಮಾರಾಟ ಸುಧಾರಿಸುತ್ತದೆಂದು ನಾನು ಕಂಡುಕೊಂಡೆ. ಹಾಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದೆ. ಇತ್ತೀಚೆಗೆ, ನಾನು ಇವುಗಳನ್ನು ಕೂಡ ಮಾರಾಟ ಮಾಡಲು ಪ್ರಾರಂಭಿಸಿದೆ ಗೃಹೋಪಯೋಗಿ ವಸ್ತುಗಳು.

ನನಗೆ ತೊಂದರೆಯಾದಾಗಲೆಲ್ಲಾ ಫ್ಲಿಪ್‌ಕಾರ್ಟ್ ಯಾವಾಗಲೂ ಸಹಾಯ ಮಾಡಲು ಮುಂದೆ ಬಂದಿದೆ. ನನಗೆ ಗೊತ್ತಿಲ್ಲದ ವಿವಿಧ ವಿಷಯಗಳ ಬಗ್ಗೆ ಜ್ಞಾನ ಪಡೆಯಲು ನಾನು ವೆಬಿ‌ನಾರ್‌ಗಳಿಗೆ ಹೋಗುತ್ತೇನೆ. ನಾನು ಫ್ಲಿಪ್‌ಕಾರ್ಟ್‌ನ ಮಾರಾಟ ಸಲಹೆಗಳು ಮತ್ತು ವರ್ಗ ವ್ಯವಸ್ಥೆಗಳನ್ನು ಅನುಸರಿಸಲು ಪ್ರಾರಂಭಿಸಿದಾಗಿನಿಂದಲೂ ನಾನು ಗೋಲ್ಡ್ ಸೆಲ್ಲರ್ ಆಗಿದ್ದೇನೆ. ನನ್ನ ಆಫೀಸ್ ಸರ್ಟಿಫಿಕೇಟ್‌ಗಳಿಂದ ತುಂಬಿಹೋಗಿದೆ.

ನಮ್ಮ ಮಾರಾಟವು ರಾಕೆಟ್‌ನಂತೆ ಮೇಲಕ್ಕೆ ಹೋಗಬೇಕೆಂದು ನಾನು ಬಯಸಿದ್ದೆ ಮತ್ತು ನಾವು ಸಿಖ್ ಸಮುದಾಯಕ್ಕೆ ಸೇರಿದವರಾದ್ದರಿಂದ ನಾವು ಪ್ರಾಮಾಣಿಕವಾಗಿ ಮತ್ತು ಪರಿಶ್ರಮಪಟ್ಟು ಕೆಲಸ ಮಾಡುತ್ತೇವೆ. ಬಾಲಿವುಡ್ ಚಲನಚಿತ್ರವಾದ ‘ರಾಕೆಟ್ ಸಿಂಗ್: ಸೇಲ್ಸ್‌ಮ್ಯಾನ್ ಆಫ್ ದಿ ಇಯರ್’ ಒಬ್ಬ ಸಿಖ್ ವ್ಯಕ್ತಿ ಕೆಳಹಂತದಿಂದ ಪ್ರಾರಂಭಿಸಿ ತನ್ನ ಯಶಸ್ಸಿನ ಕಥೆಯನ್ನು ಬರೆದ ಕಥೆಯನ್ನು ಹೊಂದಿದ್ದು ಅದು ನನ್ನ ಕಂಪನಿಗೆ ರಾಕೆಟ್ ಸೇಲ್ಸ್ ಕಾರ್ಪ್ ಎಂದು ಹೆಸರಿಡಲು ಪ್ರೇರಣೆ ನೀಡಿತು.

ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿ ನಾನು ನೋಡಿದ ಬೆಳವಣಿಗೆ ನಂಬಲಸಾಧ್ಯವಾಗಿದೆ. ನಾನು ಕೇವಲ ₹10,000 ದೊಂದಿಗೆ ಪ್ರಾರಂಭಿಸಿದೆ ಮತ್ತು ಈ ಗ ನನ್ನ ವಹಿವಾಟು ಕೋಟಿಗಳಲ್ಲಿದೆ.

ಈ ಗ ನಾನು ಹೆಚ್ಚೂ ಕಡಿಮೆ ಎಲ್ಲಾ ಆನ್‌ಲೈನ್ ವೇದಿಕೆಗಳಲ್ಲೂ ನನ್ನ ಉತ್ಪನ್ನವನ್ನು ಪಟ್ಟಿ ಮಾಡಿದ್ದೇನೆ . ನಾನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭಿಸಿದೆ ಮತ್ತು ಅವರು ನನ್ನ ಸಂಪೂರ್ಣ ಆನ್‌ಲೈನ್ ಉದ್ಯಮದ ಪ್ರಯಾಣದಲ್ಲಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರು ನಾನಿದ್ದಲ್ಲೂ ಬಂದು ನನ್ನ ವ್ಯಾಪಾರ ಸ್ಥಾಪಿಸಲು ನನಗೆ ಸಹಾಯ ಮಾಡಿದರು.

ಈ ವರ್ಷದದಿ ಬಿಗ್ ಬಿಲಿಯನ್ ಡೇ ಸೇಲ್‌ </ a> ಸಲುವಾಗಿ ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ. ನಾನು ಇತ್ತೀಚೆಗೆ ಗೃಹೋಪಯೋಗಿ ವಿಭಾಗದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ್ದೇನೆ ಮತ್ತು ನನಗೆ ಸಾಧ್ಯವಾದಷ್ಟೂ ಉತ್ಪನ್ನಗಳನ್ನು ಪಟ್ಟಿ ಮಾಡುವ ಯೋಜನೆ ಹೊಂದಿದ್ದೇನೆ. ನಾನು ಈ ವರ್ಷ ವ್ಯವಹಾರದ ಗುರಿಯನ್ನು ಹೊಂದಿದ್ದು ಅದು ಗೃಹೋಪಯೋಗಿ ವಿಭಾಗದಲ್ಲಿ ಮಾರಾಟವನ್ನು ವಿಸ್ತರಿಸಲಾಗಿದೆ.

ನಾನು ಫ್ಲಿಪ್‌ಕಾರ್ಟ್ ಜೊತೆ ಮಾಡುತ್ತಿರುವ ಕೆಲಸದಲ್ಲಿ ನನ್ನ ಕುಟುಂಬವೂ ಕೂಡ ಸಕ್ರಿಯವಾಗಿ ಆಸಕ್ತಿ ವಹಿಸಿದೆ. ನನ್ನ ಪತಿಯದ್ದು ಕನ್‌ಸ್ಟ್ರಕ್ಷನ್ ವ್ಯವಹಾರವಿತ್ತು. ನಾನು ನನ್ನದೇ ಸ್ವಂತ ವ್ಯವಹಾರ ಮಾಡಲು ನಾನು ನಿರ್ಧರಿಸಿದಾಗ ಅವರು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಮಕ್ಕಳೂ ಸಹ ಅವರದೇ ಪುಟ್ಟ ರೀತಿಯಲ್ಲಿ ನನಗೆ ಸಹಾಯ ಮಾಡಿದರು. ಅವರು ನಾನು ಕೆಲಸ ಮಾಡುವಾಗ ನನಗೆ ತೊಂದರೆಯಾಗದಂತೆ ಖಚಿತಪಡಿಸಿಕೊಳ್ಳುತ್ತಿದ್ದರು ಮತ್ತು ಸ್ವಲ್ಪ ಹೆಚ್ಚು ತಮ್ಮನ್ನು ತಾವು ನೋಡಿಕೊಳ್ಳಲು ಪ್ರಾರಂಭಿಸಿದರು, ಇದು ನನ್ನ ಕನಸಿನ ಮೇಲೆ ಕೇಂದ್ರೀಕರಿಸಲು ನನಗೆ ಹೆಚ್ಚು ಅವಕಾಶ ನೀಡಿತು. ಸ್ವಲ್ಪ ಸಮಯದ ನಂತರ, ನನ್ನ ಪತಿ ತನ್ನ ವ್ಯಾಪಾರ ಮುಚ್ಚಿ ನನಗೆ ಪೂರ್ಣಾವಧಿ ಸಹಾಯ ಮಾಡಲು ಪ್ರಾರಂಭಿಸಿದರು. ನಾವೀಗ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುತ್ತಿರುವ ಇನ್ಫಿನಿಟಿ ಗ್ರೂಪ್ಸ್ ಎಂಬ ಇನ್ನೊಂದು ಕಂಪನಿಯನ್ನು ಹೊಂದಿದ್ದೇವೆ.

ಶಿಕ್ಷಕರಾಗಿರುವುದು ತೃಪ್ತಿದಾಯಕ ಕೆಲಸವಾಗಿತ್ತು. ಆದರೆ ಶಿಶುವಿಹಾರದಲ್ಲಿ ಕಲಿಸುವುದರಿಂದ ನನ್ನೆಲ್ಲಾ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು. ಹಾಗಾಗಿ ನಾನು ನನ್ನದೇ ಆ ದ ಏನನ್ನಾದರೂ ಪ್ರಾರಂಭಿಸಲು ನಿರ್ಧರಿಸಿದೆ ಮತ್ತು ಫ್ಲಿಪ್‌ಕಾರ್ಟ್ ಮಾರಾಟಗಾರನಾಗುವುದು ನನಗೆ ಹೊಳೆದ ಅತ್ಯುತ್ತಮ ಆಲೋಚನೆಯಾಗಿತ್ತು.


ಇದನ್ನೂ ಓದಿ: #ಸೆಲ್ಫ್ ಮೇಡ್ ಗೃಹಿಣಿಯಿಂದ ಯಶಸ್ವೀ ಉದ್ಯಮಿಯವರೆಗೆ — ಈ ಫ್ಲಿಪ್‌ಕಾರ್ಟ್ ಮಾರಾಟಗಾರ್ತಿ ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಅಡೆತಡೆಗಳನ್ನು ಮೆಟ್ಟಿನಿಂತರು

Enjoy shopping on Flipkart