#ಸೆಲ್ಫ್ ಮೇಡ್ – ಫ್ಲಿಪ್‌ಕಾರ್ಟ್ ಈ ಮಾರಾಟಗಾರ್ತಿಗೆ ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಿತು. ಈಗ, ಅವರು ತನ್ನಂತಹ ಇತರ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದಾರೆ

Read this article in हिन्दी | English | বাংলা | தமிழ் | ગુજરાતી | मराठी

ಈ ಗೃಹಿಣಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನ ಡಿಸೈನ್‌ಗಳನ್ನು ಮಾರಾಟ ಮಾಡಿ ತನ್ನ ಫ್ಯಾಷನ್ ಡಿಸೈನ್ ತರಬೇತಿಯನ್ನು ಮುಂದುವರಿಸಲು ನಿರ್ಧರಿಸಿದರು. ಮತ್ತು ಆ ದಾರಿಯಲ್ಲಿ ಅವರು ಇನ್ನೂ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲು ಒಂದು ಮಾರ್ಗವನ್ನು ಕಂಡುಕೊಂಡರು. ಅವರ ಕಥೆಯನ್ನು ಅವರದೇ ಮಾತಿನಲ್ಲಿ ಓದಿ ಮತ್ತು ಸ್ಫೂರ್ತಿ ಪಡೆಯಿರಿ.

seller

ನೀತಿ ವೈಷ್ಣವ, ಜೈಪುರದ ಫ್ಲಿಪ್‌ಕಾರ್ಟ್‌ ಮಾರಾಟಗಾರ್ತಿ

ಜಿಷ್ಣು ಮುರಳಿಗೆ ಹೇಳಿದಂತೆ


ಮೊದಲ ಬಾರಿಗೆ ಫ್ಲಿಪ್‌ಕಾರ್ಟ್ ನಲ್ಲಿ 2015ರಲ್ಲಿ ಮಾರಾಟಗಾರಳಾಗಿ ನೋಂದಾಯಿತಳಾದೆ. ಆದರೆ ನಾನು ಆಗ ಗರ್ಭಿಣಿಯಾಗಿದ್ದೆ, ಆದ್ದರಿಂದ ನಾನು ನನ್ನ ಮಗುವಿನ ಮೇಲೆ ಗಮನ ನೀಡಲು ನಿರ್ಧರಿಸಿದೆ. ನವೆಂಬರ್ 2018ರಲ್ಲಿ, ನಾನು ಫ್ಲಿಪ್‌ಕಾರ್ಟ್‌ನಲ್ಲಿ ನನ್ನ ಉತ್ಪನ್ನಗಳನ್ನು ಮತ್ತೆ ಮಾರಲು ನಿರ್ಧರಿಸಿದೆ.

ನಾನು ಮಹಿಳೆಯರ ಉಡುಪುಗಳ ವಸ್ತುಗಳನ್ನು ಮಾರುತ್ತೇನೆ ಮತ್ತು ನಾನು ಸಾಂಪ್ರದಾಯಿಕ ಉಡುಗೆಗಳಲ್ಲಿ ಪರಿಣತಿ ಹೊಂದಿದ್ದೇನೆ. </ Span> ಉದ್ಯೋಗದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾನು ಕೆಲಸ ಮಾಡುವುದನ್ನು ಮುಂದುವರಿಸಿದೆ. ಆದರೆ ನಾನು ಎರಡನೇ ಬಾರಿ ಗರ್ಭಿಣಿಯಾದಾಗ, ನನಗೆ ಕೈತುಂಬ ಕೆಲಸವಿತ್ತು. ಉದ್ಯಮಿಯಾಗಬೇಕೆನ್ನುವುದು ನನ್ನ ಹಳೆಯ ಕನಸಾಗಿತ್ತು. ಆದರೆ ನಾನು ಪೂರ್ಣಾವಧಿ ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಮನೆಯಿಂದ ಆನ್‌ಲೈನ್‌ನಲ್ಲಿ ಕೆಲಸ ಮಾಡುವುದು ನನ್ನ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಅದೇ ಸಮಯದಲ್ಲಿ ನನ್ನ ಮಕ್ಕಳನ್ನು ನೋಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.



ನನ್ನ ಫ್ಲಿಪ್‌ಕಾರ್ಟ್ ಪ್ರಯಾಣವು ಏಳು ಬೀಳುಗಳ ದಾರಿಯಾಗಿದೆ. ಮೊದಲಿಗೆ ನಾನು ಕೇವಲ ಒಂದೇ ರೀತಿಯ ಬಟ್ಟೆಗಳನ್ನು ಮಾರಾಟಕ್ಕಿಟ್ಟೆ: ಒಂದು ಜೋಡಿ ಪೈಜಾಮಾ. ಆ ವಾರ, ನನಗೆ ತುಂಬಾ ಆರ್ಡರ್‌ಗಳು ಬಂದವು ಮತ್ತು ನನ್ನ ಸ್ಟಾಕ್ ಅನ್ನು ನಾನು ಮತ್ತೆ ಭರ್ತಿ ಮಾಡಬೇಕಾಯಿತು. ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಇದರಿಂದ ಸ್ಫೂರ್ತಿ ಪಡೆದ ನಾನು ಕುರ್ತಿಗಳು ಮತ್ತು ಇತರ ಹೆಂಗಸರ ಉಡುಪುಗಳಂತಹ ಹೆಚ್ಚಿನ ಉತ್ಪನ್ನಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದೆ. ಈ ಅನುಭವವು ನಾನು ಹೆಚ್ಚಿನದನ್ನು ಬಯಸುವಂತೆ ಮಾಡಿದೆ.

ನನಗೆ ಸಹಾಯ ಮಾಡುವ ಕೈಗಳಿವೆ – ಪೂರ್ಣಾವಧಿ ಕೆಲಸ ಮಾಡಲು ಸಾಧ್ಯವಿಲ್ಲದ ನನ್ನಂಥ 3-4 ಹೆಂಗಸರ ತಂಡವು ನನ್ನ ಜೊತೆಗಿದೆ. ಈ ಬೆಳವಣಿಗೆಯನ್ನು ನೋಡಿ ನಾವು ಎಷ್ಟೆಲ್ಲ ಸಾಧಿಸಬಹುದು ಎಂದು ನೋಡಿದ ನನ್ನ ತಂಡದ ಸದಸ್ಯರು ಸಹ ನನ್ನಿಂದ ಪ್ರೇರಣೆ ಪಡೆದಿದ್ದಾರೆ. ಅವರು ಸೇರಿಕೊಂಡಾಗ, ಅವರಿಗೆ ಇ-ಕಾಮರ್ಸ್‌ನಲ್ಲಿ ಯಾವುದೇ ಅನುಭವವಿಲ್ಲ. ಆದರೆ ತಂಡದೊಂದಿಗೆ ಸ್ವಲ್ಪ ಕೆಲಸ ಮಾಡಿದ ನಂತರ, ಅವರು ತುಂಬಾ ಕಲಿತಿದ್ದಾರೆ. ಈ ಗ ಬೇಡಿಕೆಗಳ ಸುರಿಮಳೆಯಾದಾಗ ಅವರು ಯಾವ ಉತ್ಪನ್ನ ಹೆಚ್ಚು ಮಾರಾಟವಾಗುತ್ತಿದೆ ಮತ್ತು ಆ ಬೇಡಿಕೆಗಳನ್ನು ಹೇಗೆ ಪೂರೈಸಬಹುದು ಎಂಬುದನ್ನು ಕಂಡುಹಿಡಿಯಲು ಅವಿರತವಾಗಿ ಕೆಲಸ ಮಾಡುತ್ತಾರೆ. ಅವರು ತಮ್ಮ ವೃತ್ತಿಜೀವನದ ಮಾರ್ಗದಲ್ಲಿ ನಂಬಿಕೆಯಿಡಲು ಪ್ರಾರಂಭಿಸಿದ್ದಾರೆ. ಅವರಲ್ಲಿ ಒಂದಿಬ್ಬರು ನಮ್ಮಿಂದ ಬೇರೆಯಾಗಿ ಅವರದ್ದೇ ಉದ್ಯಮವನ್ನೂ ಪ್ರಾರಂಭಿಸಿದ್ದಾರೆ. ಇದು ಉತ್ತಮ ಕಲಿಕೆ, ದೃಢನಿಶ್ಚಯ ಮತ್ತು, ಮುಖ್ಯವಾಗಿ, ನಂಬಿಕೆಯನ್ನು ತೋರಿಸುತ್ತದೆ ಎಂದು ನನಗನಿಸುತ್ತದೆ.

seller

ನಾನು ಫ್ಯಾಷನ್ ಡಿಸೈನಿಂಗ್‌ನಲ್ಲಿ ತರಬೇತಿ ಪಡೆದಿದ್ದೇನೆ. ಮತ್ತು ನನಗೆ ಯಾವಾಗಲೂ ಮಹಿಳೆಯರ ಉಡುಗೆಗಳತ್ತ ಒಲವಿದೆ, ಏಕೆಂದರೆ ನನ್ನ ಪ್ರಕಾರ ಅಲ್ಲಿ ಸಾಕಷ್ಟು ಸೃಜನಶೀಲ ಅವಕಾಶಗಳಿವೆ. ನಾನು ನನ್ನ ಕೌಶಲ್ಯಗಳನ್ನು ಬಳಸಬಯಸುತ್ತೇನೆ. ಆನ್‌ಲೈನ್ ಮಾರಾಟವು ಭಾರತದಾದ್ಯಂತದ ಗ್ರಾಹಕರಿಗೆ ಪ್ರಾದೇಶಿಕ ಸಾಂಪ್ರದಾಯಿಕ ಉಡುಗೆಗಳನ್ನು ಮಾರಾಟ ಮಾಡುವ ಅವಕಾಶವನ್ನು ಸಹ ನೀಡಿತು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೆಚ್ಚು ಜಾಗತಿಕವಾಗುತ್ತಿದ್ದಾರೆ – ಪ್ರಾದೇಶಿಕ ಪ್ರವೃತ್ತಿಗಳು ಆನ್‌ಲೈನ್ ಮಾರಾಟದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಹೊಂದಿಲ್ಲವೆಂದು ನನಗನಿಸುತ್ತದೆ. ಇಲ್ಲಿ ಮುಖ್ಯವಾಗುವುದು ವಯೋಮಾನ ಮತ್ತು ಆನ್‌ಲೈನ್ ಶಾಪರ್‌ಗಳ ಸಿದ್ಧಾಂತಗಳಾಗಿವೆ. ಚೆನ್ನೈನಲ್ಲಿ ಯಾರಾದರೂ ಇಷ್ಟಪಡುವದನ್ನು ದೆಹಲಿಯಲ್ಲೂ ಯಾರಾದರೂ ಖರೀದಿಸುತ್ತಾರೆ. ಭಾರತದಾದ್ಯಂತ ಇರುವ ಫ್ಲಿಪ್‌ಕಾರ್ಟ್ ವ್ಯಾಪ್ತಿಯಿಂದಾಗಿ, ಗ್ರಾಹಕರ ವಾಸಸ್ಥಳಕ್ಕೆ ಈ ಗ ಪ್ರಾಮುಖ್ಯತೆಯಿಲ್ಲ.

seller

ಫ್ಲಿಪ್‌ಕಾರ್ಟ್ ನಾನು ಆರಿಸಿಕೊಳ್ಳಬೇಕಾದ ಕ್ಷೇತ್ರವೆಂದು ನನಗೆ ಮೊದಲಿನಿಂದಲೂ ಸ್ಪಷ್ಟವಾಗಿತ್ತು. ಮೊದಲು 2015ರಲ್ಲಿ, ನಾನು ಆನ್‌ಲೈನ್ ಮಾರಾಟಕ್ಕೆ ಕೈಹಾಕಿದಾಗ, ನಾನು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಸ್ನ್ಯಾಪ್‌ಡೀಲ್‌ನಂತಹ ಅನೇಕ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿದ್ದೆ. ಫ್ಲಿಪ್‌ಕಾರ್ಟ್‌ನಿಂದ ನನಗೆ ದೊರೆತ ಪ್ರತಿಕ್ರಿಯೆ ಅದ್ಭುತವಾಗಿತ್ತು ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳಿಗಿಂತ ಉತ್ತಮವಾಗಿತ್ತು.

 

seller

 

ಆಗ ಆನ್‌ಲೈನ್‌ ಮಾರಾಟವು ಹೇಗೆ ಕೆಲಸ ಮಾಡುತ್ತದೆಂದು ನನಗೆ ತಿಳಿದಿರಲಿಲ್ಲ. ಡ್ಯಾಶ್‌ಬೋರ್ಡ್ ಕೆಲಸ ಮಾಡುವುದು ಹೇಗೆ? ನನ್ನ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಮತ್ತು ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದು ಹೇಗೆ? ಫ್ಲಿಪ್‌ಕಾರ್ಟ್ ಇದೆಲ್ಲವನ್ನೂ ಅರ್ಥಮಾಡಿಕೊಳ್ಳುವುದನ್ನು ನನಗೆ ತುಂಬಾ ಸುಲಭವಾಗಿಸಿತು, ಆದ್ದರಿಂದ ಫ್ಲಿಪ್‌ಕಾರ್ಟ್‌ನೊಂದಿಗಿನ ನನ್ನ ಸಂಬಂಧವನ್ನು ಮುಂದುವರಿಸಲು ಮತ್ತು ಆ ಮೂಲಕ ನನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ನಾನು ಒಲವು ತೋರಿದೆ.

ಫ್ಲಿಪ್‌ಕಾರ್ಟ್‌ನ ಡ್ಯಾಶ್‌ಬೋರ್ಡ್ ನನ್ನಂತಹ ಮಾರಾಟಗಾರರಿಗೆ ಬಹಳವೇ ಸಹಾಯವಾಗುತ್ತದೆ. ಇದು ನಿಮ್ಮ ಹೆಚ್ಚಿನ ಕೆಲಸಗಳನ್ನು ಮಾಡುತ್ತದೆ. ಇದು ನನ್ನ ವ್ಯವಹಾರವನ್ನು ನೋಡಿಕೊಳ್ಳಲು ಫ್ಲಿಪ್‌ಕಾರ್ಟ್‌ನ ಒಬ್ಬ ನಿಯೋಜಿತ ವ್ಯಕ್ತಿ ಕುಳಿತುಕೊಂಡಂತಿದೆ. ನನ್ನ ಯಾವ ಉತ್ಪನ್ನಗಳು ಮಾರಾಟವಾಗುತ್ತಿವೆ ಮತ್ತು ಯಾವುದು ಆಗುತ್ತಿಲ್ಲ ಎಂಬುದನ್ನು ಇದು ಗಮನಿಸುತ್ತದೆ ಮತ್ತು ಶಾಪಿಂಗ್ ಅನುಭವವನ್ನು ಸುಧಾರಿಸಲು ನಾನು ನಿವಾರಿಬಹುದಾದ ನ್ಯೂನತೆಗಳನ್ನು ತೋರಿಸುತ್ತದೆ. ಇದು ನನ್ನ ವ್ಯವಹಾರವನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ ಮತ್ತು ನಾನು ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದು.
seller

ನನ್ನ ಗ್ರಾಹಕರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಅವರು ಏನನ್ನು ಹುಡುಕುತ್ತಿದ್ದಾರೆಂದು ನಿಖರವಾಗಿ ಅರ್ಥಮಾಡಿಕೊಳ್ಳಲು ಡ್ಯಾಶ್‌ಬೋರ್ಡ್ ನನಗೆ ಸಹಾಯ ಮಾಡುತ್ತದೆ. ಈ ಹಿಂದೆ, ನಾನು 20 ಕುರ್ತಿಗಳನ್ನು ತಯಾರಿಸಿದರೆ, ಅಲ್ಲಿ ಬರುವ ಮೊದಲ ಪ್ರಶ್ನೆ “ಅವುಗಳು ಮಾರಾಟವಾಗುತ್ತವೆಯೇ?” ಅಲ್ಲಿ ಅನಿಶ್ಚಿತತೆಯಿತ್ತು. ಆದರೆ ಈ ಗ, ನಾನೊಂದು ಹೊಸ ಡಿಸೈನ್ ಮಾರಾಟ ಮಾಡಬಯಸಿದರೆ, ನಾನು 50 ಕುರ್ತಿಗಳನ್ನು ತಯಾರಿಸುತ್ತೇನೆ ಮತ್ತು ಅವುಗಳು ಮಾರಾಟವಾಗುತ್ತವೆಂದು ನನಗೆ ತಿಳಿದಿದೆ.

ಹಬ್ಬಗಳಲ್ಲಿ ನನ್ನ ಮಾರಾಟ ಹೆಚ್ಚಾಗುತ್ತದೆ. ಇತ್ತೀಚಿಗೆ ಇದು ರಂಜಾನ್‌ನಲ್ಲಿ ಆಯಿತು, ಒಂದು ನಿರ್ದಿಷ್ಟ ಉತ್ಪನ್ನದ ಆರ್ಡರ್‌ಗಳು ಎರಡು ಪಟ್ಟಾಗಿದ್ದನ್ನು ನಾನು ನೋಡಿದೆ. ನಿಜ ಹೇಳಬೇಕೆಂದರೆ, ಹಬ್ಬ ಹತ್ತಿರ ಬಂದಾಗ, ಮಾರಾಟದಲ್ಲಿ 200% ಹೆಚ್ಚಳವಾಗುತ್ತದೆಂದು ನಾನು ನಿರೀಕ್ಷಿಸುತ್ತೇನೆ. ಇದು ನನಗೆ ಉತ್ಪನ್ನಗಳ ಹೊಸ ಡಿಸೈನ್‌ಗಳ ಮೇಲೆ ಕೆಲಸ ಮಾಡಲು ಸ್ಫೂರ್ತಿ ನೀಡಿದೆ ಮತ್ತು ಆನ್‌ಲೈನ್ ಟ್ರೆಂಡ್‌ಗಳನ್ನು ಅಧ್ಯಯನ ಮಾಡಲು ನಾನು ಸಮಯವನ್ನು ಮೀಸಲಿಟ್ಟಿದ್ದೇನೆ.

ನಾನು ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿದ್ದರಲ್ಲಿ ನನ್ನ ಕುಟುಂಬಕ್ಕೆ ಸಂಪೂರ್ಣ ನಂಬಿಕೆಯಿದೆ! ನನ್ನ ಬೆಳವಣಿಗೆ ಮತ್ತು ಸ್ವಾತಂತ್ರ್ಯವನ್ನು ನೋಡಿದ ನಂತರ, ಅವರೀಗ ಇನ್ನೂ ಹೆಚ್ಚು ಬೆಂಬಲ ನೀಡುತ್ತಿದ್ದಾರೆ. ಈ ಮೊದಲು, ನನ್ನ ಕುಟುಂಬ ಮತ್ತು ನನ್ನ ಪತಿಗೆ ನಾನು ಕೆಲಸ ಮಾಡುವುದು ಇಷ್ಟವಿರಲಿಲ್ಲ. ನನ್ನ ಗಮನವು ನನ್ನ ನವಜಾತ ಶಿಶುವಿನ ಮೇಲಿರಬೇಕು ಎಂದು ಅವರು ನಂಬಿದ್ದರು. ಈವತ್ತಿಗೆ ಫಾಸ್ಟ್ ಫಾರ್ವರ್ಡ್ ಮಾಡಿದಾಗ, ನನ್ನ ಪತಿ ನನಗಾಗಿ ಪ್ಯಾಕೇಜ್‌ಗಳನ್ನೂ ಕೊಟ್ಟು ಬರುತ್ತಾರೆ ಮತ್ತು ಎಲ್ಲಾ ರೀತಿಯಲ್ಲೂ ನನ್ನನ್ನು ಬೆಂಬಲಿಸಲು ಪ್ರಯತ್ನಿಸುತ್ತಾರೆ. ನನ್ನ ಸಾಮರ್ಥ್ಯದ ಸದುಪಯೋಗಪಡಿಸಿಕೊಳ್ಳಲು ಅವರು ತುಂಬಾ ಉತ್ಸಾಹದಿಂದ ನನಗೆ ಸಹಾಯ ಮಾಡುತ್ತಾರೆ.

ನೀವು ಒಂದೇ ಸ್ಥಳದಲ್ಲಿ ಕುಳಿತಿದ್ದರೂ ಫ್ಲಿಪ್‌ಕಾರ್ಟ್ ಇಡೀ ದೇಶಕ್ಕೆ ಒಂದು ಕಿಟಕಿಯಾಗಿದೆ.


ಇದನ್ನೂ ಓದಿ: ಮಾರಾಟಗಾರರ ಯಶಸ್ಸಿನ ಕಥೆಗಳು : ಪ್ರತಿದಿನ ಭಾರತೀಯರ ವಿಜಯ

Enjoy shopping on Flipkart