#ಸೆಲ್ಫ್ ಮೇಡ್ – ಡೆಸ್ಕ್ ಜಾಬ್‌ನಿಂದ “ನೆಚ್ಚಿನ” ಕೆಲಸದವರೆಗೆ, ಈ ಫ್ಲಿಪ್‌ಕಾರ್ಟ್ ಮಾರಾಟಗಾರರು ಇದನ್ನು ಸ್ವಲ್ಪ ಪ್ರೀತಿ ಮತ್ತು ನಂಬಿಕೆಯಿಂದ ಸಾಧಿಸಿದರು

Read this article in हिन्दी | English | বাংলা | தமிழ் | ગુજરાતી | मराठी

ಗುಜರಾತ್‌ನ ಫ್ಲಿಪ್‌ಕಾರ್ಟ್ ಮಾರಾಟಗಾರ ಯಶ್ ದೇವ್‌ ಗೆ ನಾವು ನಿಮ್ಮನ್ನು ಪರಿಚಯಿಸುತ್ತೇವೆ, ಅವರು ಸ್ವತಃ ನಂಬಿಕೆಯಿಟ್ಟು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಒಳ್ಳೆಯ ಸಂಬಳದ ಕೆಲಸವನ್ನು ಬಿಟ್ಟರು. ಅವರನ್ನು ಮುಂದುವರಿಸಿದ್ದೇನು? ಅವರ ಪ್ರೀತಿಪಾತ್ರ ಪತ್ನಿಯ ಬೆಂಬಲ ಮತ್ತು ಸ್ವತಃ ನಂಬಿಕೆ. ಅವರ ಹೃದಯಸ್ಪರ್ಶಿ ಕಥೆಯನ್ನು ಓದಿ.

Flipkart seller

ಜಿಷ್ಣು ಮುರಳಿಯವರಿಗೆ ಹೇಳಿದಂತೆ

ಯಶ್ ದೇವ್, ಗುಜರಾತ್‌ನ ನಾಡಿಯಾಡ್‌ನಿಂದ ಫ್ಲಿಪ್‌ಕಾರ್ಟ್ ಮಾರಾಟಗಾರರು

ನಾನು ಏಪ್ರಿಲ್ 2016 ರಲ್ಲಿ ಫ್ಲಿಪ್‌ಕಾರ್ಟ್ ಮಾರಾಟಗಾರನಾದೆ ಮತ್ತು ಕಳೆದ 3 ವರ್ಷಗಳಿಂದ ನನ್ನ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದೇನೆ . ನಾನು ಉದ್ಯಮಿಯಾಗಲು ನಿರ್ಧರಿಸುವ ಮೊದಲು ನನಗೊಂದು ಕಾರ್ಪೊರೇಟ್ ಉದ್ಯೋಗವಿತ್ತು. ನಾನು ಏರ್‌ಕ್ರಾಫ್ಟ್ ಎಂಜಿನಿಯರಿಂಗ್‌ನಲ್ಲಿ ಅಂಡರ್‌ಗ್ರಾಜ್ಯುಯೇಟ್ ಆಗಿದ್ದೇನೆ ಮತ್ತು ನಂತರ ತಕ್ಷಣ ನನ್ನ ಎಂಬಿಎ ಮುಗಿಸಿದೆ.

ನಾನು ಮ್ಯಾನೇಜೇರಿಯಲ್ ಪ್ರೊಫೈಲ್‌ನಲ್ಲಿ ಜಸ್ಟ್‌ಡಯಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಆರಂಭದಲ್ಲಿ ಈ ಕೆಲಸ ನಾನು ಬಯಸಿದ ಹಾಗೇ ಇತ್ತು. ಆದರೆ ಕ್ರಮೇಣ ಅದು ಏಕತಾನತೆಯಾಯಿತು. ನನಗೆ ಕೆಲಸದ-ಜೀವನ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಕೆಲಸದಲ್ಲಿ ಹೆಚ್ಚುತ್ತಿದ್ದ ಒತ್ತಡದಿಂದಾಗಿ, ನಾನು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತಿದ್ದೆ ಮತ್ತು ನನ್ನ ಕುಟುಂಬದ ಜೊತೆ ಸಮ ಯ ಕಳೆಯಲು ನನಗೆ ಸಾಧ್ಯವಾಗುತ್ತಿರಲಿಲ್ಲ ಮತ್ತು ನನಗೆ ಬಹ ಳ ಅಸಮಾಧಾನವಾಗುತ್ತಿತ್ತು. ಆಗಲೇ ನಾನು ಫ್ಲಿಪ್‌ಕಾರ್ಟ್‌ ಮಾರಾಟಗಾರನಾಗುವ ಅವಕಾಶದ ಬಗ್ಗೆ ತಿಳಿದುಕೊಂಡೆ.

ನನ್ನ ಕುಟುಂಬದಲ್ಲಿ ನನ್ನ ಪೋಷಕರು ಮತ್ತು ನನ್ನ ಹೆಂಡತಿಯಿದ್ದಾರೆ. ನನ್ನ ಕುಟುಂಬದ ಸದಸ್ಯರು ಒಂದೋ ಕಾರ್ಪೊರೇಟ್ ಉದ್ಯೋಗಗಳಲ್ಲಿದ್ದಾರೆ ಅಥವಾ ಹೆಚ್ಚು ಸಂಬಳ ಬರುವ ಸರ್ಕಾರಿ ಉದ್ಯೋಗಗಳಲ್ಲಿದ್ದಾರೆ. ಹಾಗಾಗಿ ವ್ಯಾಪಾರ ಪ್ರಾರಂಭಿಸುವ ನನ್ನ ಆಸೆಯನ್ನು ಅ ವರೊಂದಿಗೆ ಹಂಚಿಕೊಂಡಾಗ, ಒಳ್ಳೆಯ ಸಂಬಳ ಬರುವ ಕೆಲಸ ಬಿಡುವ ಯೋಚನೆ ಯಾರಿಗೂ ಇಷ್ಟವಾಗಲಿಲ್ಲ.

ವ್ಯವಹಾರವನ್ನು ನಡೆಸುವಲ್ಲಿನ ಅನಿಶ್ಚಿತತೆಗಳು ಮತ್ತು ಅಪಾಯಗಳನ್ನು ಪರಿಗಣಿಸಿ, ನನ್ನ ಕುಟುಂಬವು ನನ್ನ ಒಳ್ಳೆಯ ಸಂಬಳದ ಕೆಲಸವನ್ನು ಬಿಡದಂತೆ ನನಗೆ ಸಲಹೆ ನೀಡಿತು. ಆದರೆ ನನ್ನ ಯಶಸ್ಸು ಬೇರೆಡೆಯಿದೆಯೆಂದು ನಾನು ಬಲವಾಗಿ ನಂಬಿದ್ದೆ ಮತ್ತು ಅದನ್ನು ನಂಬುವುದನ್ನು ನಾನು ಯಾವತ್ತೂ ಬಿಡಲಿಲ್ಲ. ನನ್ನ ಪತ್ನಿ ಮಾತ್ರ ನನಗೆ ಬೆಂಬಲ ನೀಡಿದಳು. ಅವಳು ನನ್ನನ್ನು ಪ್ರೇರೇಪಿಸಿ ನನ್ನ ಕನಸುಗಳನ್ನು ಎಂದಿಗೂ ಕೈಬಿಡದಂತೆ ಹೇಳಿದಳು. ಪ್ಯಾಕಿಂಗ್‌ನಂತಹ ವ್ಯವಹಾರ ಕಾರ್ಯಾಚರಣೆಗಳಲ್ಲೂ ಅವಳು ನನ್ನನ್ನು ಬೆಂಬಲಿಸಿದಳು.

ಸ್ವಲ್ಪ ಸಂಶೋಧನೆ ಮಾಡಿದ ನಂತರ, ಆಫ್‌ಲೈನ್ ವ್ಯವಹಾರಕ್ಕಿಂತ ಆನ್‌ಲೈನ್ ವ್ಯವಹಾರ ಮಾಡುವುದೇ ಹೆಚ್ಚು ಅನುಕೂಲಕರವಾಗಿದೆ ಎಂದು ನಾನು ಕಂಡುಕೊಂಡೆ, ಏಕೆಂದರೆ ನನ್ನ ಗ್ರಾಹಕರು ಕೇವಲ ಒಂದೇ ಸ್ಥಳಕ್ಕೆ ಸೀಮಿತವಾಗಿಲ್ಲ. ನಾನು ನನ್ನಉತ್ಪನ್ನಗಳನ್ನು ಇಡೀ ದೇಶಕ್ಕೆ ಮಾರಾಟ ಮಾಡಬೇಕಿತ್ತು.

ನಾನು ಮೊಬೈಲ್ ಅಕ್ಸೆಸರಿಗಳನ್ನು ಮಾರಾಟ ಮಾಡುವ ಮೂಲಕ ಪ್ರಾರಂಭಿಸಿದೆ – ಮೊದಲು ಹೆಡ್‌ಸೆಟ್‌ಗಳು, ಏಕೆಂದರೆ ಈ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ನಾನು ಕೆಳಹಂತದಿಂದ ಪ್ರಾರಂಭಿಸುತ್ತಿದ್ದೆ ಮತ್ತು ಮೊಬೈಲ್ ಅಕ್ಸೆಸರಿಗಳನ್ನು ಪಟ್ಟಿ ಮಾಡಲು ಕಡಿಮೆ ಹೂಡಿಕೆ ಸಾಕಾಗಿತ್ತು. ಈ ಗ ನಾನು ಫ್ಲಿಪ್‌ಕಾರ್ಟ್‌ನಲ್ಲಿ 17ಕ್ಕೂ ಹೆಚ್ಚು ವಿಭಾಗಗಳಲ್ಲಿ ಮಾರಾಟ ಮಾಡುತ್ತೇನೆ – ಮೊಬೈಲ್ ಅಕ್ಸೆಸರಿಗಳು, ಕಂಪ್ಯೂಟರ್ ಅಕ್ಸೆಸರಿಗಳು, ಸ್ನಾನದ ಅಗತ್ಯ ವಸ್ತುಗಳು, ಮಹಿಳೆಯರ ಕೈಚೀಲಗಳು, ಮಹಿಳೆಯರ ಉಡುಗೆ, ಪುರುಷರ ಉಡುಪು, ಗೃಹಾಲಂಕಾರ ವಸ್ತುಗಳು ಇತ್ಯಾದಿ.

ನಾನು ಮಾರಾಟ ಮಾಡುತ್ತಿರುವಾಗ, ನನ್ನ ಉತ್ಪನ್ನಗಳನ್ನು ದೇಶಾದ್ಯಂತ ಇರುವ ಭಾರತೀಯರು ಖರೀದಿಸುತ್ತಿರುವುದನ್ನು ನೋಡಿ ನಾನು ಹೆಚ್ಚು ವಿಶ್ವಾಸ ಬೆಳೆಸಿಕೊಂಡೆ.

ಇದುವರೆಗಿನ ಪ್ರಯಾಣ ಅದ್ಭುತವಾಗಿದೆ. ನನಗೆ ಬಹಳಷ್ಟು ಕಲಿಯಲು ಸಾಧ್ಯವಾಯಿತು ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ. ನಾನು ಮೊದಲೇ ಹೇಳಿದಂತೆ, ನಾನು ವ್ಯಾಪಾರಸ್ಥ ಕುಟುಂಬಕ್ಕೆ ಸೇರಿದವನಲ್ಲ, ಆದ್ದರಿಂದ ಒಂದು ವ್ಯಾಪಾರ ಪ್ರಾರಂಭಿಸುವುದು ದೊಡ್ಡ ಸವಾಲಾಗಿತ್ತು – ಉತ್ಪನ್ನಗಳನ್ನು ಸಂಗ್ರಹಿಸುವುದು, ಸರಿಯಾದ ಮಾರಾಟಗಾರರನ್ನು ಹುಡುಕುವುದು, ಪೋರ್ಟಲ್ ಅನ್ನು ಅರ್ಥಮಾಡಿಕೊಳ್ಳುವುದು, ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಮತ್ತು ಜಿಎಸ್‌ಟಿ ಭರ್ತಿ ಮಾಡುವುದು – ಒಬ್ಬ ಉದ್ಯಮಿಯಾಗಿ ನನ್ನ ಪ್ರಯಾಣದಲ್ಲಿ ಎಲ್ಲವೂ ಸಮಸ್ಯೆಯೆಂದು ಸಾಬೀತಾಗಿದೆ.

ಆದರೆ ದಿನ ಕಳೆದ ಹಾಗೆ, ವಿಷಯಗಳು ಸುಲಭವಾದವು. ನಾನು ನನ್ನ ಉತ್ಪನ್ನಗಳನ್ನು ಇತರ ಶಾಪಿಂಗ್ ಸೈಟ್‌ಗಳಲ್ಲೂ ಪಟ್ಟಿ ಮಾಡಿದ್ದೇನೆ. ಆದರೆ ಫ್ಲಿಪ್‌ಕಾರ್ಟ್‌ನಿಂದ ನನಗೆ ದೊರಕಿದ ಬೆಂಬಲ ಅದ್ಭುತವಾಗಿತ್ತು. ಅವರ ಬೆಂಬಲವು ಎಲ್ಲವನ್ನೂ ತುಂಬಾ ಸುಲಭವಾಗಿಸಿತು.

ದಿ ಬಿಗ್ ಬಿಲಿಯನ್ ಡೇ ಸೇಲ್ ಮಾರಾಟ ಮತ್ತು ಲಾಭಗಳೆರಡರಲ್ಲೂ ನನಗೆ ಯಾವಾಗಲೂ ಒಳ್ಳೆಯದು ಮಾಡಿದೆ. ಕಳೆದ ವರ್ಷ ನಾನು ಸಾಮಾನ್ಯವಾಗಿ ಪಡೆಯುವುದಕ್ಕಿಂತ ನಾಲ್ಕು ಪಟ್ಟು ಆರ್ಡರ್‌ಗಳನ್ನು ಪಡೆದಿದ್ದೇನೆ. ನನ್ನ ಬೆಂಬಲಕ್ಕಾಗಿ ಮೂರು ಜನರನ್ನು ನೇಮಿಸಿಕೊಂಡಿದ್ದರೂ ಮಾರಾಟದ ಸಮಯದಲ್ಲಿ, ಆರ್ಡರ್‌ಗಳನ್ನು ಸಮಯಕ್ಕೆ ಸರಿಯಾಗಿ ಪ್ಯಾಕಿಂಗ್ ಮಾಡಲು ಮತ್ತು ಪ್ರಾಸೆಸ್ ಮಾಡಲು ನಾನು ಹೆಚ್ಚಿನ ಜನರನ್ನು ನೇಮಿಸಿಕೊಳ್ಳಬೇಕಾಗಿತ್ತು. ಈ ವರ್ಷ, ನಾನು ಇನ್ನೂ ಉತ್ತಮ ಅನುಭವವನ್ನು ಎದುರು ನೋಡುತ್ತಿದ್ದೇನೆ!

ಇದನ್ನೂ ಓದಿ:#ಸೆಲ್ಫ್ ಮೇಡ್: ಶಿಶುವಿಹಾರದ ಶಿಕ್ಷಕಿಯಿಂದ ಆನ್‌ಲೈನ್ ಉದ್ಯಮಿಯವರೆಗೆ, ರಾಕೆಟ್ ಸಿಂಗ್‌ನಿಂದ ಸ್ಫೂರ್ತಿ ಪಡೆದವರು!

Enjoy shopping on Flipkart