ಶಿಶುವಿಹಾರದ ಶಾಲಾ ಶಿಕ್ಷಕರು ಮೊಜೊ ಎ ಲಾ ರಾಕೆಟ್ ಸಿಂಗ್ ತರಹವೇ ತನ್ನಒಳಗಡೆಯಿರುವ ಮಾರಾಟಗಾರರನ್ನು ಕಂಡುಹಿಡಿಡಿದ್ದರಿಂದ, ಅಡೆತಡೆಗಳನ್ನು ಜಯಿಸಿದ ಮತ್ತು ಆ ದಾರಿಯಲ್ಲಿ ಅವಳಂತಹ ಮಹಿಳೆಯರನ್ನು ಸಬಲೀಕರಣಗೊಳಿಸಿದ ಗೃಹಿಣಿಯವರೆಗೆ, ಈ ಫ್ಲಿಪ್‌ಕಾರ್ಟ್ ಮಾರಾಟಗಾರರು ಭಾರತದ ಇ-ಕಾಮರ್ಸ್ ಉದ್ಯಮಕ್ಕೆ ಒಂದು ಸಂದೇಶ ಕಳಿಸಿದ್ದಾರೆ. ಅವರು ಇಲ್ಲೇ ಇರುತ್ತಾರೆ. ಅವರು ಇಲ್ಲಿ ಸ್ಫೂರ್ತಿ ನೀಡಲು ಬಂದಿದ್ದಾರೆ. ಫ್ಲಿಪ್‌ಕಾರ್ಟ್‌ನಲ್ಲಿ ಯಶಸ್ಸು ಕಂಡುಕೊಂಡು ತಮ್ಮ ಕನಸುಗಳನ್ನು ಈಡೇರಿಸಿಕೊಂಡ ನಮ್ಮ ವಿಶೇಷ #ಸೆಲ್ಫ್ ಮೇಡ್ ಮಾರಾಟಗಾರರ ಬಗ್ಗೆ ಓದಿ.
ಕೆಲವರಿಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಅವಕಾಶವೆಂದರೆ ಸಬಲೀಕರಣವಾಗಿತ್ತು. ಇತರರಿಗೆ, ಇದು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಬೆಂಬಲಿಸುವ ಸಾಧನವಾಗಿದೆ. ಆದರೆ ಅವರೆಲ್ಲರಲ್ಲೂ ಸಮಾನವಾದ ಸಂಗತಿಯೆಂದರೆ, ಅವರೆಲ್ಲರಿಗೂ ಒಂದೇ ಅವಕಾಶ ಕಂಡಿತ್ತು. ಫ್ಲಿಪ್‌ಕಾರ್ಟ್ ಮಾರಾಟಗಾರರಾಗಿ ಇಡೀ ಭಾರತೀಯ ಆನ್‌ಲೈನ್ ಶಾಪರ್‌ಗಳ ಮಾರುಕಟ್ಟೆಗೆ ಲಭ್ಯತೆ ಪಡೆಯುವ ಅವಕಾಶ. ಈ ಫ್ಲಿಪ್ಕಾರ್ಟ್ ಮಾರಾಟಗಾರರಿಗೆ ಯಶಸ್ಸು ನೀಡಿದ ದೃಢನಿಶ್ಚಯ, ಧೈರ್ಯ ಮತ್ತು ನಂಬಿಕೆಯ ಈ ಮನಮುಟ್ಟುವ ಕಥೆಗಳನ್ನು ಓದಿ.
#ಸೆಲ್ಫ್ ಮೇಡ್ – ಫ್ಲಿಪ್‌ಕಾರ್ಟ್ ಈ ಮಾರಾಟಗಾರ್ತಿಗೆ ಅವಳ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡಿದೆ. ಈಗ, ಅವರು ತನ್ನಂಥ ಇತರ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದಾರೆ
ಅವರು ಎರಡನೇ ಬಾರಿ ಗರ್ಭಿಣಿಯಾಗಿ ಕೆಲಸ ಮಾಡಲು ಮನೆಯಿಂದ ಹೊರಬರಲು ಸಾಧ್ಯವಾಗದಿದ್ದಾಗ, ನೀತಿ ವೈಷ್ಣವ ತನ್ನ ಡಿಸೈನ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವ ಮೂಲಕ ಫ್ಯಾಷನ್ ಡಿಸೈನ್‌ನಲ್ಲಿನ ತನ್ನ ಆಸಕ್ತಿಗೆ ನೀರೆರೆಯಲು ನಿರ್ಧರಿಸಿದರು. ದಾರಿಯುದ್ದಕ್ಕೂ, ಈ ಫ್ಲಿಪ್‌ಕಾರ್ಟ್ ಮಾರಾಟಗಾರರು ಇನ್ನೂ ಹೆಚ್ಚಿನದನ್ನು ಸಾಧಿಸಿದರು. ತನ್ನಂತಹ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಾರ್ಗವನ್ನು ಅವರು ಕಂಡುಕೊಂಡರು. ಅವರ ಕಥೆಯನ್ನು ಅವರದೇ ಮಾತಿನಲ್ಲಿ ಓದಿ ಮತ್ತು ಸ್ಫೂರ್ತಿ ಪಡೆಯಿರಿ.
#ಸೆಲ್ಫ್ ಮೇಡ್: ಶಿಶುವಿಹಾರ ಶಿಕ್ಷಕಿಯಿಂದ ಆನ್‌ಲೈನ್ ಉದ್ಯಮಿಯವರೆಗೆ, ರಾಕೆಟ್ ಸಿಂಗ್‌ನಿಂದ ಸ್ಫೂರ್ತಿ ಪಡೆದವರು!
ಈ ಶಿಶುವಿಹಾರದ ಶಿಕ್ಷಕಿ ತನ್ನ ಕೆಲಸವನ್ನು ಪ್ರೀತಿಸುತ್ತಿದ್ದರೂ ಅವಳ ಕುಟುಂಬವನ್ನು ನೋಡಿಕೊಳ್ಳಲು ಅದು ಸಾಕಾಗಿರಲಿಲ್ಲ. ಬಾಲಿವುಡ್ ಚಲನಚಿತ್ರವಾದ ರಾಕೆಟ್ ಸಿಂಗ್: ಸೇಲ್ಸ್ ಮ್ಯಾನ್ ಆಫ್ ದಿ ಇಯರ್ ಅನ್ನು ನೋಡಿದ ನಂತರ ಅವರ ಜೀವನ ಗಮನಾರ್ಹವಾಗಿ ಬದಲಾಯಿತು. ಸ್ಫೂರ್ತಿ ಪಡೆದ ಸುಮೀತ್ ಕೌರ್ ತನ್ನ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಿ ಫ್ಲಿಪ್‌ಕಾರ್ಟ್ ಮಾರಾಟಗಾರರಾದರು. ಮತ್ತು ಅವರು ತನ್ನ ಕಂಪನಿಗೆ ಏನು ಹೆಸರಿಸಿಟ್ಟಿದ್ದಾರೆಂದು ಗೊತ್ತೇ? ರಾಕೆಟ್ ಸೇಲ್ಸ್ ಕಾರ್ಪ್! ಧೈರ್ಯ ಮತ್ತು ದೃಢನಿಶ್ಚಯದ ಈ ಕಥೆಯಿಂದ ಪ್ರೇರಣೆ ಪಡೆಯಿರಿ.
#ಸೆಲ್ಫ್ ಮೇಡ್ ಗೃಹಿಣಿಯಿಂದ ಹಾಟ್‌ಶಾಟ್ ಉದ್ಯಮಿಯವರೆಗೆ – ಈ ಫ್ಲಿಪ್‌ಕಾರ್ಟ್ ಮಾರಾಟಗಾರ್ತಿ ತನ್ನ ಕನಸುಗಳನ್ನು ಈಡೇರಿಸಲು ಎಲ್ಲಾ ಅಡೆತಡೆಗಳನ್ನೂ ಮೆಟ್ಟಿನಿಂತರು
ಅನೇಕರಿಗೆ, ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದೆಂದರೆ ಇಡೀ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುವುದಾಗಿದೆ. ಇನ್ನೂ ಕೆಲವರಿಗೆ, ಇದು ಲಿಂಗ ತಾರತಮ್ಯವನ್ನು ಮುರಿಯುವ ಮತ್ತು ಸ್ವಾತಂತ್ರ್ಯದತ್ತ ದೃಢವಾದ ಹೆಜ್ಜೆಯಿಡುವ ಒಂದು ಮಾರ್ಗವಾಗಿದೆ. ಈ ಫ್ಲಿಪ್‌ಕಾರ್ಟ್ ಮಾರಾಟಗಾರ್ತಿ ತನ್ನ ಕನಸಿಗೆ ಏನೂ ಅಡ್ಡ ಬರಲು ಬಿಡಲಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಅಗ್ರಶ್ರೇಣಿಯ ಆನ್‌ಲೈನ್ ಉದ್ಯಮಿಯಾಗುವ ಮೂಲಕ ಹೆಣ್ಣು ಮನೆಯನ್ನು ಮಾತ್ರ ನೋಡಿಕೊಳ್ಳಬೇಕೆನ್ನುವ ಕಟ್ಟುಪಾಡನ್ನು ಮೋನಿಕಾ ಸೈನಿ ಮೆಟ್ಟಿನಿಂತರು.
#ಸೆಲ್ಫ್ ಮೇಡ್ – ಡೆಸ್ಕ್ ಜಾಬ್‌ನಿಂದ “ನೆಚ್ಚಿನ” ಜಾಬ್‌ವರೆಗೆ, ಈ ಫ್ಲಿಪ್‌ಕಾರ್ಟ್ ಮಾರಾಟಗಾರರು ಇದನ್ನು ಸ್ವಲ್ಪ ಪ್ರೀತಿ ಮತ್ತು ನಂಬಿಕೆಯಿಂದ ಸಾಧಿಸಿದರು
ಈ ಫ್ಲಿಪ್ಕಾರ್ಟ್ ಮಾರಾಟಗಾರರಿಗೆ ಕೆಲಸದ ಒತ್ತಡದಿಂದಾಗಿ ತನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯಲು ಸಾಧ್ಯವಾಗದಿದ್ದಾಗ, ಅವರು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನ ಮೇಲೆ ನಂಬಿಕೆಯಿಟ್ಟು ತನ್ನದೇ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಚೆನ್ನಾಗಿ ಸಂಬಳ ಬರುವ ಕೆಲಸವನ್ನು ಬಿಟ್ಟರು. ಯಶ್ ಡೇವ್‌ಗೆ ಮುಂದುವರಿಯಲು ಸ್ಫೂರ್ತಿ ನೀಡಿದ್ದೇನು? ಅವರ ಪ್ರೀತಿಪಾತ್ರ ಪತ್ನಿಯ ಬೆಂಬಲ ಮತ್ತು ತನ್ನ ಮೇಲಿನ ನಂಬಿಕೆ. ಅವರ ಈ ಹೃದಯಸ್ಪರ್ಶಿ ಕಥೆಯನ್ನು ಓದಿ.
#ಸೆಲ್ಫ್ ಮೇಡ್: ದುರಂತ ಅವರ ಬದುಕಿನಲ್ಲಿ ಅಪ್ಪಳಿಸಿದಾಗ, ಅವರು ತನ್ನ ಕುಟುಂಬವನ್ನು ಬೆಂಬಲಿಸಲು ಫ್ಲಿಪ್‌ಕಾರ್ಟ್ ಮಾರಾಟಗಾರರಾದರು
ದುರಂತ ಅವರ ಬದುಕಿನಲ್ಲಿ ಅಪ್ಪಳಿಸಿದಾಗ, ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾಭ್ಯಾಸ ನಿಲ್ಲಿಸಿ ಕುಟುಂಬವನ್ನು ಪೋಷಿಸಲು ಉದ್ಯಮಿಯಾಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಅವರು ಅನೇಕ ಸವಾಲುಗಳನ್ನು ಎದುರಿಸಿದರು, ಒಂದೊಂದೇ ಹೆಜ್ಜೆಯಾಗಿ ಮೇಲೇರುತ್ತ ಹೋದರು. ಮತ್ತು ಅವರು ಯಾವತ್ತೂ ಕೈಚೆಲ್ಲಲಿಲ್ಲ! ಯುವ ಫ್ಲಿಪ್‌ಕಾರ್ಟ್ ಮಾರಾಟಗಾರರಾದ ವಿವೇಕ್ ಕುಮಾರ್ ಶರ್ಮಾ ಎಲ್ಲಾ ತೊಂದರೆಗಳನ್ನು ಹೇಗೆ ನಿವಾರಿಸಿದರು? ಓದಿರಿ ಮತ್ತು ಸ್ಫೂರ್ತಿ ಪಡೆಯಿರಿ.