ಸಾಮಾನ್ಯವೆನಿಸುವ ಸಂತೋಷದ ವಿಷಯಗಳು ಫ್ಲಿಪ್‌ ಕಾರ್ಟ್ ವಿಶ್‌ ಮಾಸ್ಟರ್ ಅಭಿಜಿತ್ ಆರ್ ಕೆ ಅವರ #OneInABillion ಕ್ಷಣಗಳಿಗೆ ಸಾಕ್ಷಿಯಾಗಿವೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಕೇರಳದ ಕೊಲ್ಲಂನಲ್ಲಿರುವ ಪಾರಿಪಲ್ಲಿ ಎಂಬ ರಮಣೀಯ ಪಟ್ಟಣದಲ್ಲಿ, ಫ್ಲಿಪ್‌ ಕಾರ್ಟ್ ವಿಶ್‌ ಮಾಸ್ಟರ್ ಅಭಿಜಿತ್ ಆರ್ ಕೆ ತಮ್ಮದೇ ಆದ ಸಂತೋಷಭರಿತ ಮತ್ತು ಅರ್ಥಪೂರ್ಣ ಜಗತ್ತನ್ನು ಸೃಷ್ಟಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಹಿಡಿದು ಪಾರಿಪಲ್ಲಿಯ ಶಾಖೆಯಲ್ಲಿ ಗಾದ ಸ್ನೇಹವನ್ನು ಸಂಪಾದಿಸುವವರೆಗೆ, ಅಭಿಜಿತ್ ಕೆಲಸದ ಜೊತೆ ಜೊತೆಗೆ ತಮ್ಮ ಪ್ರಿಯ ಬಂಧುಬಾಂಧವರೊಂದಿಗೆ ಆನಂದದಿಂದ ಕಾಲ ಕಳೆಯುವುದಕ್ಕೂ ಆದ್ಯತೆ ನೀಡುತ್ತಾರೆ. ಪ್ರತಿಕ್ಷಣವನ್ನೂ ಸಂತಸದಿಂದ ಕಳೆಯುವ ಈ ವಿಶ್‌ ಮಾಸ್ಟರ್‌ #OneInABillion ಕಥೆಯನ್ನು ಓದಿರಿ.

One In A Billion

ಕೊಲ್ಲಂಅಭಿವೃದ್ಧಿ ಹೊಂದಲು ಒಂದು ಸೂಕ್ತ ಸ್ಥಳವಾಗಿದೆ – ನಮ್ಮ ಮನೆಯು ಕಡಪ್ಪುರಂ(ಕಡಲತೀರ) ದಿಂದ ದೂರವೇನೂ ಅಲ್ಲ ಪಾರಿಪಲ್ಲಿಯಲ್ಲಿದೆ. ಇಲ್ಲಿ ನಿವಸಿಸುವ ಮುಖ್ಯ ವಿಷಯವೆಂದರೆ ನಮಗಿಲ್ಲಿ ಯಾವಾಗಲೂ ತಾಜಾ ಮೀನು ಮತ್ತಿತರ ಸಮುದ್ರದ ಹಾರ ಲಭ್ಯವಾಗುತ್ತದೆ. ಪ್ರತಿದಿನ ಬೆಳಿಗ್ಗೆ, ಸ್ಥಳೀಯ ಮೀನುಗಾರರು ತಾವು ಹಿಡಿದ ಮೀನುಗಳನ್ನು ತರುತ್ತಾರೆ. ನಾನು ಸಮುದ್ರತೀರಕ್ಕೆ ಅವನ್ನು ಖರೀದಿಸಲು ಹೋಗುವುದನ್ನು ಬಹಳ ಆನಂದಿಸುತ್ತೇನೆ. ತಾಜಾ ಸೀ ಫುಡ್ ಭಕ್ಷ್ಯಗಳ ರುಚಿಯನ್ನು ಬೇರಾವುದೂ ಸರಿಗಟ್ಟಲಾರದು!

ನಾನಿಲ್ಲಿ ನನ್ನ ಪೋಷಕರು, ನನ್ನ ಅವಳಿ ಸೋದರ ಮತ್ತು ನಮ್ಮ ಪಾಲುದಾರರೊಂದಿಗೆ ವಾಸಿಸುತ್ತಿದ್ದೇನೆ. ನನ್ನ ತಂದೆ ತಾಯಿ ಇಬ್ಬರೂ ಎಲ್‌ಐಸಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಾರೆ. ನನ್ನ ಹೆಂಡತಿ ಅಕೌಂಟೆಂಟ್ ಆಗಿದ್ದಾರೆ. ಅವಳು ಪಬ್ಲಿಕ್ ಸರ್ವಿಸ್ ಕಮಿಷನ್ (PSC) ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾಳೆ. ಅವಳ ಯಶಸ್ಸಿನ ಕುರಿತು ನನಗೆ ಬಹಳಷ್ಟು ಭರವಸೆ ಇದೆ.

10 ನೇ ತರಗತಿ ನಂತರ, ನಾನು ಪಾಲಿಟೆಕ್ನಿಕ್ ಮೆಕ್ಯಾನಿಕಲ್ ಕೋರ್ಸ್ ಮಾಡಿದೆ. ಕೊಲ್ಲಂನ ಕಂಪನಿಯೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡಿದೆ. ನಂತರ ಉತ್ತಮ ಉದ್ಯೋಗಾವಕಾಶದ ಶೋಧದಲ್ಲಿ ಎರಡು ವರ್ಷ ಕುವೈತ್ ಗೆ ಹೋಗಿದ್ದೆ. ದುರದೃಷ್ಟವಶಾತ್, ಸಾಂಕ್ರಾಮಿಕ ರೋಗದ ಸಮಯದಲ್ಲಿ ನನ್ನ ಕೆಲಸ ಕಳೆದುಕೊಂಡೆ. ಹೀಗೆ ತಾಯ್ನಾಡಿಗೆ ಹಿಂತಿರುಗಬೇಕಾಯಿತು.

ಲಾಕ್‌ಡೌನ್ ಸಮಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಲಿಪ್‌ ಕಾರ್ಟ್ ವಿಶ್‌ ಮಾಸ್ಟರ್‌ ಗಾಗಿ ಉದ್ಯೋಗವೊಂದನ್ನು ಪೋಸ್ಟ್ ಮಾಡಿರುವುದನ್ನು ನೋಡಿದೆ. ನನ್ನ ಸೋದರನೂ ಕೆಲಸಕ್ಕಾಗಿ ಹುಡುಕುತ್ತಿದ್ದ. ಹೀಗಾಗಿ ನಾವಿಬ್ಬರೂ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಂಡೆವು.
One In A Billion

ಈಗ ಫ್ಲಿಪ್ ಕಾರ್ಟ್ ವಿಶ್ ಮಾಸ್ಟರ್ ಆಗಿ ಕೆಲಸ ಮಾಡುತ್ತಾ 2.5 ವರ್ಷಗಳಾಗಿದೆ.

ನಾನು ಕೊಲ್ಲಂನ ಮುಖ್ಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದೆ, ನಂತರ ಪಾರಿಪಲ್ಲಿ ಶಾಖೆಗೆ ವರ್ಗಾಯಿಸಲಾಯಿತು. ಅಲಲ್ಲಿ ಸಕಾರಾತ್ಮಕ ಮತ್ತು ಸ್ನೇಹಪರ ವಾತಾವರಣವಿದೆ. ಇತರ ವಿಶ್‌ ಮಾಸ್ಟರ್‌ ಗಳು ಮತ್ತು ತಂಡದ ಸದಸ್ಯರೊಂದಿಗೆ ನಾನು ಗಾಢವಾದ ಸ್ನೇಹವನ್ನು ಹೊಂದಿದ್ದೇನೆ.

ಪ್ರತಿ ವಾರ, ಕೆಲಸದ ಅವಧಿ ಮುಗಿದ ನಂತರ, ಒಗ್ಗೂಡಿ ಫುಟ್‌ಬಾಲ್ ಅಥವಾ ಕ್ರಿಕೆಟ್ ಆಡಲು ಅನುಕೂಲಕರ ದಿನವನ್ನು ಆಯ್ಕೆಮಾಡಿಕೊಳ್ಳುತ್ತೇವೆ. ಸಂಬಂಧ ವೃದ್ಧಿಗೆ ಇದು ಒಂದು ಮೋಜಿನ ಮಾರ್ಗವಾಗಿದೆ. ನಾವು ಒಟ್ಟಿಗೆ ಹೊರಗೆ ಊಟಕ್ಕೆ ಹೋಗಲು ಕೂಡಾ ಪ್ರಯತ್ನಿಸುತ್ತೇವೆ.

ಬಿಗ್ ಬಿಲಿಯನ್ ಡೇಸ್ (BBD) ಮಾರಾಟದ ಸಮಯದಲ್ಲಿ ವಿಶೇಷವಾಗಿ ಒಂದು ತಂಡದ ರೂಪದಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ. ವಿತರಣಾ ಪ್ರದೇಶಗಳನ್ನು ಆಧರಿಸಿ ನಮ್ಮನ್ನು ನಾವು ತಂಡಗಗಳಾಗಿ ವಿಂಗಡಿಸಿಕೊಳ್ಳುತ್ತೇವೆ. ಪ್ರತಿ ತಂಡಕ್ಕೆ ಒಬ್ಬ ನಾಯಕನನ್ನು ನೇಮಿಸುತ್ತೇವೆ. ನಮ್ಮ ಮತ್ತು ಪ್ಯಾಕೇಜ್‌ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಂಡವೂ ಹೆಚ್ಚೆಚ್ಚು ವಿತರಣೆ ಮಾಡುವ ಗುರಿಯನ್ನು ಹೊಂದಿರುತ್ತದೆ. ಕಳೆದ 2 ವರ್ಷಗಳಿಂದ ಸತತವಾಗಿ ನನ್ನ ತಂಡ ಗೆದ್ದಿದೆ. ಈ ಚಟುವಟಿಕೆಯು ಒತ್ತಡದ ಸಮಯದಲ್ಲೂ ಮೋಜಿನ ಜೊತೆಗೆ ಪ್ರತಿಯೊಬ್ಬರ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸುರಕ್ಷಿತ ಮತ್ತು ಸಮಯಕ್ಕೆ ಸರಿಯಾದ ವಿತರಣೆಯನ್ನು ಖಚಿತಪಡಿಸುತ್ತದೆ!

ಕೆಲಸದ ಸ್ಥಳವನ್ನು ಮೋಜಿನಿಂದ ಕೂಡಿದ, ಎಲ್ಲರೂ ಪಾಲ್ಗೊಳ್ಳುವಂತಹ ಮತ್ತು ಮಾಹಿತಿ ಒದಗಿಸುವಂತಹ ಸ್ಥಳವನ್ನಾಗಿ ಮಾಡಲು ನಾವು ನಮ್ಮ ಸೃಜನಶೀಲ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ಉದಾಹರಣೆಗೆ, ಎಲ್ಲಾ ವಿಶ್‌ ಮಾಸ್ಟರ್‌ ಗಳಿಗೆ ಸುರಕ್ಷತಾ ಕ್ರಮಗಳನ್ನು ಮನನ ಮಾಡಿಸಲು ಕಳೆದ ವರ್ಷದ BBD ಗಿಂತ ಮುಂಚಿತವಾಗಿ ನಾವು ಹೆಲ್ಮೆಟ್ ಸುರಕ್ಷತೆಯ ಬಗ್ಗೆ ಒಂದು ವೀಡಿಯೊವನ್ನು ಮಾಡಿದ್ದೇವೆ. ಅದೊಂದು ಬಹುದೊಡ್ಡ ಯಶಸ್ಸನ್ನು ಗಳಿಸಿತ್ತು.

ನನ್ನ ರಜೆಯ ದಿನಗಳಲ್ಲಿ, ನಾನು ನನ್ನ ಕುಟುಂಬದೊಂದಿಗೆ ಒಳ್ಳೇ ಸಮಯವನ್ನು ಕಳೆಯುತ್ತೇನೆ. ನಾವು ಆಗಾಗ್ಗೆ ನನ್ನ ತಂದೆ ತಾಯಿ ಮತ್ತು ಪತ್ನಿಯ ಜೊತೆಗೆ ದೇವಸ್ಥಾನಗಳಿಗೆ ಹೋಗುತ್ತೇನೆ. ನಮಗೆ ಸಾಧ್ಯವಾದಾಗ, ನಾವು ಅವಳ ತಂದೆ ತಾಯಿ ಮನೆಗೂ ಹೋಗುತ್ತೇವೆ.

ನನ್ನ ಆತ್ಮೀಯರೊಂದಿಗೆ ದಿನನಿತ್ಯದ ನೆನಪುಗಳನ್ನು ಕೂಡಿಟ್ಟುಕೊಳ್ಳುವುದಾಗಲಿ ಅಥವಾ ಒಂದೊಳ್ಳೆಯ ಊಟವನ್ನು ಆನಂದಿಸುವುದಾಗಲಿ – ಇಂಥ ಸಾಮಾನ್ಯ ಸಂತೋಷದ ಕ್ಷಣಗಳಿಗಾಗಿ ನಾನು ಜೀವನ ನಡೆಸುತ್ತೇನೆ.


ಇದನ್ನೂ ಓದಿರಿ: ಜೈಪುರದಲ್ಲಿ, ಫ್ಲಿಪ್ ಕಾರ್ಟ ಸಮರ್ಥ ಮೂಲಕ ಉದ್ಯಮಿಯೊಬ್ಬರು ತಮ್ಮ ಕುಟುಂಬ ವ್ಯಾಪಾರವನ್ನು ಮತ್ತೆ ನಿರ್ಮಿಸಿದರು

Enjoy shopping on Flipkart