ದೀರ್ಘಕಾಲದವರೆಗೆ, ಧವಲ್ ಪಟೇಲ್ ಗುಜರಾತ್‌ನ ನುರಿತ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳಾದ ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದರು. ಅವರು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವ ಲಾಭಗಳ ಕುರಿತು ಆನ್‌ಲೈನ್‌ನಲ್ಲಿ ವೀಡಿಯೊಗಳನ್ನು ನೋಡಿದಾಗ, ಅವರಿಗೆ ಒಂದು ಅದ್ಭುತವಾದ ಆಲೋಚನೆ ಬಂದಿತು! ಅವರು ತನ್ನ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮಹಿಳಾ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಬಯಸಿದರು ಮತ್ತು ಅವರು #SellfMade ಫ್ಲಿಪ್‌ಕಾರ್ಟ್ ಮಾರಾಟಗಾರರಾಗಿ ಅದನ್ನು ಮಾಡುವ ಮಾರ್ಗವನ್ನು ಕಂಡುಕೊಂಡರು! ನವರಂಗ್ ಹಾಂಡಿಕ್ರಾಫ್ಟ್ಸ್ ಮತ್ತು ಅದರ ಕುಶಲಕರ್ಮಿಗಳಿಗೆ ತಮ್ಮ ಕಲ್ಪನೆಯನ್ನು ಮೀರಿ ಗ್ರಾಹಕರನ್ನು ತಲುಪಲು ಇ-ಕಾಮರ್ಸ್ ಹೇಗೆ ಸಹಾಯ ಮಾಡುತ್ತಿದೆಯೆಂದು ಓದಿ.
ನನ್ನ ಹೆಸರು ಧವಳ್ ಪಟೇಲ್. ನಾನು ನವರಂಗ್ ಹಾಂಡಿಕ್ರಾಫ್ಟ್ಸ್ ಅನ್ನು ನಡೆಸುತ್ತಿದ್ದೇನೆ ಮತ್ತು ನಾನು ಫ್ಲಿಪ್‌ಕಾರ್ಟ್‌ನಲ್ಲಿ ಒಬ್ಬ #SellfMade ಸಮರ್ಥ್ ಮಾರಾಟಗಾರನಾಗಿದ್ದೇನೆ. ನಾವು ಗುಜರಾತ್‌ನ ರಾಜ್‌ಕೋಟ್ ಮತ್ತು ವೀರ್‌ಪುರದಲ್ಲಿ ನೆಲೆಸಿದ್ದೇವೆ. ನಾವು ಒಣ ಹಣ್ಣಿನ ಪೆಟ್ಟಿಗೆಗಳು, ಲೆಟರ್‌ಬಾಕ್ಸ್ ಗಳು, ಮರದ ಸ್ಟೂಲ್‌ಗಳು, ಮೌತ್ ಫ್ರೆಶ್‌ನರ್‌ಗಳಿಗಾಗಿ ಪೆಟ್ಟಿಗೆಗಳು, ಮರದ ಸ್ಟ್ಯಾಂಡ್‌ಗಳು ಮತ್ತು ಇತರ ಉಡುಗೊರೆ ವಸ್ತುಗಳಂಥ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಈ ವಸ್ತುಗಳನ್ನು ಹೊರತುಪಡಿಸಿ, ನಾವು ಟವೆಲ್‌ಗಳನ್ನೂ ಸಹ ಮಾರಾಟ ಮಾಡುತ್ತೇವೆ.
ನಾನು ಫ್ಲಿಪ್‌ಕಾರ್ಟ್ ಸಮರ್ಥ್ ಮಾರಾಟಗಾರನಾಗುವ ಮೊದಲು, ನಾನು ಈ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೆ. ನಂತರ ನಾನು YouTube ನಲ್ಲಿ ಅನೇಕ ಫ್ಲಿಪ್‌ಕಾರ್ಟ್ ವೀಡಿಯೊಗಳನ್ನು ನೋಡಲು ಪ್ರಾರಂಭಿಸಿದೆ ಮತ್ತು ಆನ್‌ಲೈನ್ ಮಾರಾಟದ ಪ್ರಯೋಜನಗಳ ಬಗ್ಗೆ ತಿಳಿದುಕೊಂಡೆ. 2018ರಲ್ಲಿ , ನಾನು ಫ್ಲಿಪ್‌ಕಾರ್ಟ್ ನೊಂದಿಗೆ ಜೊತೆಯಾದೆ ಮತ್ತು ಇಲ್ಲಿಯವರೆಗಿನ ಪ್ರಯಾಣವು ಅದ್ಭುತವಾಗಿದೆ.
ಆರಂಭದಲ್ಲಿ, ನಾವು ಪ್ರತಿದಿನ ಸುಮಾರು 20-25 ಆರ್ಡರ್‌ಗಳನ್ನು ಪಡೆಯುತ್ತಿದ್ದೆವು , ಆದರೆ ಈಗ, ಆ ಸಂಖ್ಯೆ ದಿನಕ್ಕೆ 80 ಆರ್ಡರ್‌ಗಳಿಗೆ ಏರಿದೆ. ನಾವು ಈ ಹಿಂದೆ ಕೇಳಿರದ ನಗರಗಳಿಂದಲೂ ನಾವು ಆರ್ಡರ್‌ಗಳನ್ನು ಪಡೆಯುತ್ತಿದ್ದೇವೆ! ನಮ್ಮ ಉತ್ಪನ್ನಗಳು ದೇಶದಾದ್ಯಂತ ಹೊಸ ಗ್ರಾಹಕರನ್ನು ತಲುಪುತ್ತಿವೆーಇದು ನನ್ನಂಥ ಮಾರಾಟಗಾರರಿಗೆ ಫ್ಲಿಪ್‌ಕಾರ್ಟ್ ನೀಡಿದ ಅತ್ಯಂತ ಒಳ್ಳೆಯ ಕೊಡುಗೆಯಾಗಿದೆಯೆಂದು ನನಗನಿಸುತ್ತದೆ. ನಾನೀಗ ಒಬ್ಬ ಸಿಲ್ವರ್ ಸೆಲ್ಲರ್ ಆಗಿದ್ದೇನೆ ಮತ್ತು ನನಗೆ ತುಂಬಾ ಸಂತೋಷವಾಗಿದೆ.
ಇ-ಕಾಮರ್ಸ್ ಸಹಾಯದೊಂದಿಗೆ, ನನ್ನ ಕಂಪನಿಯು ನಮ್ಮ ಸುತ್ತಮುತ್ತಲಿನ ಕುಶಲಕರ್ಮಿ ಸಮುದಾಯಗಳಿಗೆ ಕೈಲಾದಷ್ಟು ಒಳ್ಳೆಯದನ್ನು ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ನಮ್ಮಲ್ಲಿ ಮಹಿಳಾ ಕುಶಲಕರ್ಮಿಗಳು ಸುಂದರವಾದ ಕರಕುಶಲ ವಸ್ತುಗಳನ್ನು ತಯಾರಿಸುವ ಗ್ರಾಮಗಳಿರುವ ಅನೇಕ ಪ್ರದೇಶಗಳಿವೆ. ನನ್ನ ಕೆಳಗೆ ಸುಮಾರು 35-40 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹದಿನೈದು ಜನರು ನನ್ನ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಾರೆ ಮತ್ತು ಇತರರು ಮನೆಯಿಂದ ಕೆಲಸ ಮಾಡುತ್ತಾರೆ.
ನಾವು ಉದ್ಯೋಗಿಗಳಿಗೆ ತರಬೇತಿ ನೀಡುತ್ತೇವೆ, ವಿನ್ಯಾಸದ ಮಾದರಿಗಳನ್ನು ವಿವರಿಸುತ್ತೇವೆ ಮತ್ತು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಉತ್ಪನ್ನವನ್ನು ಸರಿಯಾಗಿ ಜೋಡಿಸುವ ಒಂದು ಅಸೆಂಬ್ಲಿಂಗ್ ಯೂನಿಟ್ ಅನ್ನೂ ನಾವು ಹೊಂದಿದ್ದೇವೆ. ನಾನು ಅವರಿಗೆ ಹಣಕಾಸಿನ ಅವಕಾಶಗಳನ್ನು ಒದಗಿಸಲು ಮತ್ತು ಅವರ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಮುದಾಯಕ್ಕೆ ಒಳ್ಳೆಯದನ್ನು ಮಾಡಬಯಸುತ್ತೇನೆ. ಅವರು ಕಲೆಯಲ್ಲಿ ಸಂಕೀರ್ಣ ಕೌಶಲ್ಯಗಳಿರುವುದರಿಂದ, ನಾನು ಅವರನ್ನು ಸಶಕ್ತಗೊಳಿಸಲು ಈ ಉಪಕ್ರಮವನ್ನು ಕೈಗೊಂಡಿದ್ದೇನೆ. ನಾನು ಫ್ಲಿಪ್‌ಕಾರ್ಟ್‌ನಲ್ಲಿ ಸಮರ್ಥ್ ಮಾರಾಟಗಾರನಾಗಿ ನನ್ನ ಅದೃಷ್ಟವನ್ನು ಪ್ರಯತ್ನಿಸಿದೆ ಮತ್ತು ಅದು ಯಶಸ್ವಿಯಾಯಿತು!
ಫ್ಲಿಪ್‌ಕಾರ್ಟ್ ವೇದಿಕೆಗೆ ಬಹಳ ಸುಲಭವಾಗಿ ಹೊಂದಿಕೊಳ್ಳಬಹುದು. ಫ್ಲಿಪ್‌ಕಾರ್ಟ್‌ನಲ್ಲಿನ ಮಾರಾಟಗಾರರ ತಂಡವು ಆನ್‌ಬೋರ್ಡಿಂಗ್ ಅನ್ನು ಸುಲಭವಾಗಿಸಿತು ಮತ್ತು ನಾವು ಅವರೊಂದಿಗೆ ಮಾರಾಟವನ್ನು ಮುಂದುವರಿಸಬಯಸುತ್ತೇವೆ. ಪ್ಲಾಟ್‌ಫಾರ್ಮ್‌ನ ರೇಟಿಂಗ್ ವ್ಯವಸ್ಥೆಯು ಅದಕ್ಕೆ ಅನುಗುಣವಾಗಿ ವ್ಯಾಪಾರ ನಡೆಸುವಲ್ಲಿ ನಮ್ಮ ಮಾನದಂಡಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನನ್ನ ರೇಟಿಂಗ್ 5 ರಲ್ಲಿ 4.5 ಆಗಿದೆ . ಇದರರ್ಥ ನಮ್ಮ ಗ್ರಾಹಕರು ನಮ್ಮ ಉತ್ಪನ್ನಗಳನ್ನು ನಿಜವಾಗಿಯೂ ಇಷ್ಟಪಟ್ಟಿದ್ದಾರೆ! ಈ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ ಮತ್ತು ಮುಂಬರುವ ವರ್ಷಗಳಲ್ಲಿ ಉದ್ಯಮವು ಮುಂದುವರಿಯುತ್ತದೆ. ನಮ್ಮಲ್ಲಿ ಗುಣಮಟ್ಟದ ಉತ್ಪನ್ನಗಳಿವೆ ಮತ್ತು ಇದು ಇದು ಫ್ಲಿಪ್‌ಕಾರ್ಟ್ ಸಹಾಯದಿಂದ ಖಂಡಿತವಾಗಿಯೂ ಭಾರತದಾದ್ಯಂತ ಎಲ್ಲರನ್ನೂ ತಲುಪುತ್ತದೆ!
ನಮ್ಮ ಉತ್ಪನ್ನಗಳನ್ನು ಖರೀದಿಸಿದ್ದಕ್ಕೆ ಮತ್ತು ಭಾರತೀಯ ಕರಕುಶಲ ವಸ್ತುಗಳನ್ನು ಉತ್ತೇಜಿಸಿದ್ದಕ್ಕೆ ನಮ್ಮ ಗ್ರಾಹಕರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ.
ಜಿಷ್ಣು ಮುರಳಿ ಅವರಿಗೆ ಹೇಳಿದಂತೆ ಪಲ್ಲವಿ ಸುಧಾಕರ್ ಅವರಿಂದ ಹೆಚ್ಚುವರಿ . ಕೊಡುಗೆಗಳೊಂದಿಗೆ