ಸಂಕಷ್ಟದ ಮೇಲೆ ಜಯ ಸಾಧಿಸಿದ್ದು : ಒಂದು ಚಿಕ್ಕ ವ್ಯಾಪಾರದ ಮಾಲೀಕರಿಂದ ಪ್ರೇರಣಾದಾಯಕ ಯಶಸ್ಸಿನ ವರೆಗೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಚಾರು ಗುಪ್ತ ತನ್ನ ಸಣ್ನ ವ್ಯಾಪಾರವನ್ನು ಕೇವಲ ಐದು ಸಾವಿರ ರೂಪಾಯಿ ತಮ್ಮ ಬಳಿ ಇದ್ದಾಗ ಶುರುಮಾಡಿದರು. ಅವರು ಚೇತರಿಸಿಕೊಳ್ಳುವಿಕೆಯ ಶಕ್ತಿಗೆ ಸಾಕ್ಷಿಯಾಗಿದ್ದಾರೆ. ಅವರು #ಸ್ವಯಂ-ನಿರ್ಮಿಸಿದ ಯಶಸ್ಸಿಗೆ ಪಯಣ ಮಾಡುವಾಗ ಹೇಗೆ ಸವಾಲುಗಳನ್ನು ನಿಭಾಯಿಸಿದರು ಎನ್ನುವುದು ಇಲ್ಲಿದೆ.

Small Business

ಧೈರ್ಯ ಮತ್ತು ಪ್ರಮಾಣಿಕ ಶ್ರಮದಿಂದ ಮಾತ್ರ ತಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯ ಎಂಬ ತಮ್ಮ ನಂಬಿಕೆಗೆ ಬದ್ಧರಾಗಿದ್ದು ಫ್ಲಿಪ್ಕಾರ್ಟ್‌ ಮಾರಾಟಗಾರರಾದ ಚಾರು ಗುಪ್ತ ಕಠಿಣ ಪರಿಶ್ರಮಕ್ಕೆ ಅಪರಿಚಿತರೇನಲ್ಲ. ಅವರು ಒಂದು ಸಣ್ಣ ವ್ಯಾಪಾರದ ಮಾಲೀಕರಾಗುವ ಮೊದಲು ಅನೇಕ ಕಡೆ ನೌಕರಿಯಲ್ಲಿದ್ದರು. ಆದರೆ, ಕೌಟುಂಬಿಕ ಬಿಕ್ಕಟ್ಟಿನಿಂದಾಗಿ ಪರಿಸ್ಥತಿ ಹದಗೆಟ್ಟಾಗ ಅವರಿಗಿದ್ದ ಒಂದೇ ದಾರಿ ಅವರು ಒಂದೊಂದು ಹೆಜ್ಜೆ ಮುಂದೆ ಇಡುವುದು ಎಂದು ಅವರಿಗೆ ತಿಳಿದಿತ್ತು. ೨೦೧೫ರಲ್ಲಿ ಅವರ ಕೈಯಲ್ಲಿ ಕೇವಲ ಐದು ಸಾವಿರ ರೂಪಾಯಿಗಳು ಇದ್ದಾಗ ಚಾರು ತಮ್ಮ ಸಣ್ಣ ವ್ಯಾಪಾರವನ್ನು ಶುರುಮಾಡಿದರು. ಅವರು ಪರಿವಾರ ಮತ್ತು ಫ್ಲಿಪ್ಕಾರ್ಟ್‌ನ ಒಳನೋಟಗಳ ಮಾರ್ಗದರ್ಶನದಿಂದ ಅವರು ತಮ್ಮ ಸಣ್ಣ ವ್ಯಾಪಾರವನ್ನು ಒಂದು ಮೆರೆಯುತ್ತಿರುವ ಉದ್ದಿಮೆಯಾಗಿ ರೂಪಾಂತರಿಸಿದರು.


ಫ್ಲಿಪ್ಕಾರ್ಟ್‌ ಮಾರಾಟಗಾರರಾದ ಚಾರು ಗುಪ್ತ ಅವರ ಕತೆಯನ್ನು ನೋಡಿ :

YouTube player

ಎಂತಹದೇ ಸವಾಲಿದ್ದರೂ ಹಿಂದೆ ಸರಿಯಲು ಮನಸ್ಸಿಲ್ಲದೆ, ಚಾರು “ಧೈರ್ಯ ಮತ್ತು ಸತತ ಪ್ರಯತ್ನ” ವೆಂಬ ತಮ್ಮ ಮಂತ್ರಕ್ಕೆ ನಿಷ್ಠೆಯಿಂದ ಇದ್ದರು. ಈಗ ಐದು ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುವ ಅವರು ಹಿಂದೆ ತಿರುಗಿ ೨೦೧೫ರಲ್ಲಿ ತಮಗೆ ಎಲ್ಲವೂ ಬದಲಾಗಿದ್ದನ್ನು ನೋಡದೆ ಇರಲಾರರು. ಅವರು ಆಗ ಇಟ್ಟ ಒಂದೊಂದು ಹೆಜ್ಜೆಯೂ ಅವರ ಕಬ್ಬಿಣದಂತಹ ಆತ್ಮಸ್ಥೈರ್ಯವನ್ನು ಎತ್ತಿ ತೋರಿಸುತ್ತದೆ. ಅವರು ತಮ್ಮ ಮಿತಿಗಳನ್ನು ನವೀಕರಿಸುವುದಲ್ಲದೆ ತಾವು ಓರ್ವ ಮಹಿಳಾ ಉದ್ಯಮಿ ಎಂದು ಸಮಾಜ ಅವರಿಗೆ ನಿಗದಿ ಪಡಿಸಿದ ಮಿತಿಗಳನ್ನೂ ಅವರು ಮೀರಿದರು.

ಸಗಟು ವ್ಯಾಪಾರಿಗಳು ಅವರು ಸಮಯ ನೀಡದೆ ಇದ್ದಾಗ, ಅವರು ಮತ್ತೆಮತ್ತೆ ಅವರ ವ್ಯಾಪಾರದ ಯೋಜನೆಯನ್ನು ಹೊಂದಿಸಿಕೊಳ್ಳಬೇಕಾಗಿದ್ದಾಗ ಮತ್ತು ಅವರು ಈ-ಕಾಮರ್ಸ್‌ ಬಗ್ಗೆ ಶುರುವಿನಿಂದ ಕಲಿಯಬೇಕಾಗಿದ್ದಾಗ – ಅವರು ತಮ್ಮ ಯಶಸ್ಸಿನ ದಾರಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರು. ಆದರೆ, ಅವರು ಫ್ಲಿಪ್ಕಾರ್ಟ್‌ ಮಾರಾಟಗಾರರಾದ ಮೇಲೆ ಅವರು ಒಂದು ಕೋಟಿ ರೂಪಾಯಿಗಳ ವಹಿವಾಟನ್ನು ದಾಟುವುದರಲ್ಲಿ ಹೆಚ್ಚು ಸಮಯ ಹಿಡಿಯಲಿಲ್ಲ – ಮತ್ತು ಅದಾದ ಒಂದು ವರ್ಷದಷ್ಟೆ ಸಮಯದಲ್ಲಿ ಅವರ ವ್ಯಾಪಾರ ೪೦೦ ಪ್ರತಿಶತದಷ್ಟು ವೃದ್ಧಿಯಾಯಿತು!

ಅವರ ಯಶಸ್ಸಿನ ಕತೆಯಲ್ಲಿ ಅವರ ಕಂಪನಿ ಸೈಕರ ಕಲೆಕ್ಷನ್ಸ್‌ ಒಂದು ವ್ಯಾಪಾರವಷ್ಟೆ ಅಲ್ಲ, ಮತ್ತು ಫ್ಲಿಪ್ಕಾರ್ಟ್‌ ಒಂದು ವೇದಿಕೆಯಷ್ಟೆ ಅಲ್ಲ. ಅದು ಚಾರು ತಮ್ಮ ನಿಜವಾದ ಸಾಮರ್ಥ್ಯವನ್ನು ಸಾಧಿಸಿದ ಸ್ಥಳವಾಯಿತು. ಆಲ್ಲದೆ, ಅವರು ತಮ್ಮಂತೆ ಬೇರೆ ಮಹಿಳೆಯರಿಗೂ ಕೆಲಸ ನೀಡಿ ಅವರೂ ತಮ್ಮ ಕನಸುಗಳನ್ನು ನನಸಾಗಿಸಲು ಅನುವು ಮಾಡಿಕೊಟ್ಟಿತು.


ಇದನ್ನೂ ವೀಕ್ಷಿಸಿ : ಚಿನ್ನೈ ಸೂಪರ್‌ ಕ್ವೀನ್ಸ್‌ : ಈ ಫ್ಲಿಪ್ಕಾರ್ಟ್‌ನ ಕೇಂದ್ರದಲ್ಲಿ ಕೇವಲ ಮಹಿಳೆಯರಿರುವ ಒಂದು ತಂಡ ಸರಬರಾಜು ಸರಪಳಿಯಲ್ಲಿ ಇತಿಹಾಸವನ್ನು ರಚಿಸುತ್ತಿದೆ!

Enjoy shopping on Flipkart