#Sellfmade -ಈ ಫ್ಲಿಪ್‌ಕಾರ್ಟ್ ಮಾರಾಟಗಾರ್ತಿ ತನ್ನ ಹವ್ಯಾಸವನ್ನು ಯಶಸ್ವಿ ಆನ್‌ಲೈನ್ ವ್ಯವಹಾರವನ್ನಾಗಿ ಪರಿವರ್ತಿಸಿದರು!

Read this article in বাংলা | English | हिन्दी | தமிழ் | ગુજરાતી | मराठी

ಮೈಕ್ರೋಬಯಾಲಜಿ ಪದವೀಧರೆಯಾದ ಸೃಷ್ಟಿ ಮಿಶ್ರಾ ಮದುವೆಯಾದ ನಂತರ ಮುಂಬೈಗೆ ಬಂದಾಗ, ಯೂಟ್ಯೂಬ್ ವೀಡಿಯೊಗಳನ್ನು ನೋಡುತ್ತ ಅವರು ಆಭರಣ ತಯಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಶೀಘ್ರದಲ್ಲೇ ಅವರು ಅದನ್ನು ಹವ್ಯಾಸವಾಗಿ ಬೆಳೆಸಿಕೊಂಡು ಅದರಿಂದ ಸಂಪಾದಿಸಲು ನಿರ್ಧರಿಸಿದರು. ಆಗ ಅವರು #Sellfmade ಫ್ಲಿಪ್‌ಕಾರ್ಟ್‌ ಮಾರಾಟಗಾರ್ತಿಯಾಗಿ ಸೈನ್ ಅಪ್ ಮಾಡಿದರು. ಅವರ ಸ್ಪೂರ್ತಿದಾಯಕ ಕಥೆಯನ್ನು ಓದಿ.

successful online business

ನ್ನ ಹೆಸರು ಸೃಷ್ಟಿ ಮಿಶ್ರಾ </ b>. ನಾನು ಡೆಹ್ರಾಡೂನ್ ಮೂಲದವಳು ಮತ್ತು ನಾನೊಂದು ಯಶಸ್ವಿ ಆನ್‌ಲೈನ್ ವ್ಯಾಪಾರವನ್ನು ನಡೆಸುತ್ತಿದ್ದೇನೆ. ನಾನು ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದೇನೆ ಮತ್ತು ನನ್ನ ವ್ಯಾಪಾರವನ್ನು ಪ್ರಾರಂಭಿಸುವ ಮೊದಲು ನಾನು ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮದುವೆಯಾದಾಗ ನಾನು ಮುಂಬೈಗೆ ಬಂದೆ. ಒಂದು ದಿನ, ನಾನು ಕೆಲವು ಯೂಟ್ಯೂಬ್ ವೀಡಿಯೊಗಳನ್ನು ಆನಂದಿಸುತ್ತಿದ್ದಾಗ, ನಾನು ಆಭರಣ ತಯಾರಿಸಲು ಕಲಿಯಬಹುದೇ ಎಂದು ನಾನು ಯೋಚಿಸಿದೆ. ನನಗೆ ಅಗತ್ಯವಿರುವ ವೀಡಿಯೊಗಳನ್ನು ನಾನು ಕಂಡುಕೊಂಡೆ ಮತ್ತು ಹವ್ಯಾಸವಾಗಿ ಆಭರಣ ತಯಾರಿಕೆಯನ್ನು ಕಲಿತೆ.

ನಾನು ಕಿವಿಯೋಲೆಗಳು ಮತ್ತು ಬಳೆಗಳನ್ನು ತಯಾರಿಸುತ್ತೇನೆ. ವಿನ್ಯಾಸ ಮಾಡುವಾಗ ನಾನು ಅನೇಕ ಕಚ್ಚಾ ವಸ್ತುಗಳನ್ನು ಬಳಸುತ್ತೇನೆ. ನಾನು ಅದನ್ನು ತ್ವರಿತವಾಗಿ ಕಲಿತುಕೊಂಡೆ ಮತ್ತು ನಾನು ಅದರಲ್ಲಿ ಸಾಕಷ್ಟು ಪರಿಣಿತಿ ಗಳಿಸಿದ್ದೇನೆ. ನಂತರ ಒಂದು ದಿನ, ನಾನು ಮಾಲ್‌ನಲ್ಲಿ ಕೆಲವು ಆಭರಣಗಳನ್ನು ನೋಡುತ್ತಿದ್ದಾಗ, ಅವುಗಳಲ್ಲಿ ನಾನು ಮಾಡಿದಂತಹ ವಿನ್ಯಾಸಗಳನ್ನು ನೋಡಿದೆ. ಮತ್ತು ಅಲ್ಲಿದ್ದ ಇತರ ಗ್ರಾಹಕರು ಆ ವಿನ್ಯಾಸಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದನ್ನು ಗಮನಿಸಿದೆ. ಆಗಲೇ ನಾನು ತಯಾರಿಸುವ ಆಭರಣಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ನಾನು ನಿರ್ಧರಿಸಿದೆ. ನಾನು 2017 ರಲ್ಲಿ ಜೆಬಿಎನ್‌ಫ್ಯಾಷನ್ ಗ್ಯಾಲರಿ ಕಂಪನಿಯನ್ನು ಪ್ರಾರಂಭಿಸಿದೆ ಮತ್ತು ಫ್ಲಿಪ್‌ಕಾರ್ಟ್‌ ಜೊತೆಗೆ ಪಾಲುದಾರಿಕೆ ಹೊಂದಿದೆ.

ನನ್ನ ಆಭರಣಗಳನ್ನು ನನ್ನ ಪ್ರದೇಶದಲ್ಲಿರುವ ಅಂಗಡಿಯಲ್ಲಿ ಅಥವಾ ಸ್ಟೋರ್‌ನಲ್ಲಿ ಮಾರಾಟ ಮಾಡಲು ನನಗೆ ಯಾವತ್ತೂ ಆಸಕ್ತಿಯಿರಲಿಲ್ಲ. ವ್ಯಾಪಾರೋದ್ಯಮದ ಮಾಲೀಕರಿಗೆ ಆನ್‌ಲೈನ್ ಉದ್ಯಮವು ತರುವ ವ್ಯಾಪಕವಾದ ಗ್ರಾಹಕರ ನೆಲೆಯ ಬಗ್ಗೆ ನನಗೆ ಆಗಲೇ ತಿಳಿದಿತ್ತು. ಇದಲ್ಲದೆ, ನೀವು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರೆ, ವ್ಯಾಪಾರವನ್ನು ಆಫ್‌ಲೈನ್‌ನಲ್ಲಿ ನಡೆಸಲು ಹೋಲಿಸಿದರೆ ಚಿಂತೆ ಕಡಿಮೆಯಿರುತ್ತದೆ. ನನ್ನ ವ್ಯಾಪಾರವನ್ನು ನಾನು ನನ್ನ ಮನೆಯ ಸೌಕರ್ಯದಿಂದ ನಡೆಸುತ್ತಿದ್ದೇನೆ. ಇಂದು ಎಲ್ಲವೂ ಡಿಜಿಟಲ್ ಆಗಿದೆ ಮತ್ತು ಎಲ್ಲರೂ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಾರೆ. ನಾನು ಕಲಿತ ಇನ್ನೊಂದು ವಿಷಯವೆಂದರೆ, ನೀವೊಂದು ಯಶಸ್ವಿ ಆನ್‌ಲೈನ್ ವ್ಯಾಪಾರವನ್ನು ನಡೆಸುತ್ತಿರುವಾಗ, ನೀವು ಗ್ರಾಹಕರ ಡೇಟಾವನ್ನೂ ಅಧ್ಯಯನ ಮಾಡಬಹುದು ಮತ್ತು ಟ್ರೆಂಡ್‌ಗಳನ್ನೂ ತಿಳಿದುಕೊಳ್ಳಬಹುದು.

ಫ್ಲಿಪ್‌ಕಾರ್ಟ್‌ ನನ್ನ ವ್ಯಾಪಾರದಲ್ಲಿ ನನಗೆ ಬಹಳಷ್ಟು ಸಹಾಯ ಮಾಡುತ್ತದೆ. ಅವರು ನಿಮ್ಮ ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಿಮ್ಮ ವ್ಯಾಪಾರವನ್ನು ಬೆಳೆಸಲು ನಿಮಗೆ ಸಹಾಯ ಮಾಡಲು ಡೇಟಾ ನೀಡುತ್ತಾರೆ . ನನ್ನ ವಿಷಯದಲ್ಲಿ, ನಾನು ಆನ್‌ಲೈನ್‌ನಲ್ಲಿ ಲಿಸ್ಟಿಂಗ್ ಮಾಡುತ್ತಿದ್ದ ವಿವಿಧ ಆಭರಣಗಳನ್ನು ನಾನು ಹೆಚ್ಚಿಸಬೇಕಾಗಿತ್ತು, ಮತ್ತು ನಾನು ಇತರ ಯಾವ ವರ್ಗಗಳಲ್ಲಿ ಲಿಸ್ಟಿಂಗ್ ಮಾಡಬಹುದೆಂದು ಗುರುತಿಸಲು ಅವರು ನನಗೆ ಸಹಾಯ ಮಾಡಿದರು.

ನಾನು ವ್ಯಾಪಾರವನ್ನು ಪ್ರಾರಂಭಿಸಿದಾಗ, ನಾನು ರೂ. 5,000ವನ್ನು ಹೂಡಿಕೆ ಮಾಡಿದೆ. ಈಗ ನಾನು ಪ್ರತಿ ತಿಂಗಳು ₹ 10,000 ಗಳಿಸುತ್ತೇನೆ . ನನ್ನ ಕಳೆದ ಬಿಗ್ ಬಿಲಿಯನ್ ಡೇಸ್ ಮಾರಾಟವು ಒಳ್ಳೆಯ ಅನುಭವವಾಗಿತ್ತು. ಮಹಿಳೆಯರ ಪರಿಕರಗಳಾದ ಕೈಚೀಲಗಳು, ಚೀಲಗಳು, ವಾಲೆಟ್‌ಗಳು ಇತ್ಯಾದಿಗಳಲ್ಲಿ ಹೆಚ್ಚಿನ ವರ್ಗಗಳನ್ನು ಸೇರಿಸುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನನ್ನ ಕುಟುಂಬವು ನನ್ನನ್ನು ಬಹಳಷ್ಟು ಬೆಂಬಲಿಸುತ್ತದೆ. ನಾನು ವ್ಯಾಪಾರವನ್ನು ನಡೆಸುವಲ್ಲಿ ನಮ್ಮ ಕುಟುಂಬದಲ್ಲಿ ಮೊದಲಿಗಳಾಗಿರುವುದರಿಂದ ಅವರಿಗೆ ಹೆಮ್ಮೆಯಿದೆ.

ಜಿಷ್ಣು ಮುರಳಿಯವರಿಗೆ ಹೇಳಿದಂತೆ

ಸೃಷ್ಟಿಯವರಂಥದ್ದೇ ಹೆಚ್ಚಿನ ಕಥೆಗಳನ್ನು ಓದಲು ಬಯಸುವಿರಾ? ಇಲ್ಲಿ ಕ್ಲಿಕ್ಮಾಡಿ.

Enjoy shopping on Flipkart