35 ವರ್ಷಗಳ ಹಿಂದೆ ಲಖನೌ ಸಮೀಪವಿರುವ ದೂರದ ಹಳ್ಳಿಯೊಂದರಲ್ಲಿ ಮೇಘದೂತ್ ಹರ್ಬಲ್ ಅನ್ನು ಸ್ಥಾಪಿಸಿದಾಗ, ಹತ್ತಿರದಲ್ಲಿ ವಾಸಿಸುತ್ತಿದ್ದವರಿಗೆ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು. 2020ರ ಆರಂಭದಲ್ಲಿ, ಜಾಗತಿಕ ಸಾಂಕ್ರಾಮಿಕ ರೋಗವೊಂದು ಅದರ ಅಸ್ತಿತ್ವದ ಉದ್ದೇಶಕ್ಕೇ ಅಪಾಯವೊಡ್ಡಿದಾಗ, ಈ ಸಾಂಪ್ರದಾಯಿಕ ಕುಟುಂಬ ಒಡೆತನದ ವ್ಯಾಪಾರ ಮತ್ತು ಈಗ ಫ್ಲಿಪ್‌ಕಾರ್ಟ್ ಸಮರ್ಥ್ ಪಾಲುದಾರರು ಬಿಕ್ಕಟ್ಟಿಗೆ ಹೊಂದಿಕೊಂಡರು ಮತ್ತು ಕಷ್ಟದ ಸಮಯಗಳನ್ನು ಎದುರಿಸಲು ಇ-ಕಾಮರ್ಸ್ ಅನ್ನು ಬಳಸಿಕೊಂಡರು. ಉತ್ತರ ಪ್ರದೇಶ ಸರ್ಕಾರದೊಂದಿಗೆ ಸಹಿ ಹಾಕಿದ ಒಪ್ಪಂದದಡಿ ಫ್ಲಿಪ್‌ಕಾರ್ಟ್ ಸಮರ್ಥ್ ಕಾರ್ಯಕ್ರಮದಿಂದ ಬೆಂಬಲ ಪಡೆದ ವಿಪುಲ್ ಶುಕ್ಲಾ ಅವರ ಕೌಟುಂಬಿಕ ವ್ಯಾಪಾರವು ಇದೇ ರೀತಿಯ ಉದ್ಯಮಗಳಿಗೆ ಪ್ರಾರಂಭ ಮಾಡಲು ಮತ್ತು ಯಶಸ್ಸು ಸಾಧಿಸಲು ದಾರಿ ಮಾಡಿಕೊಟ್ಟಿದೆ. ಅವರ ನಂಬಲಸದೃಶವಾದ ಕಥೆಯನ್ನು ಓದಿ.
1985ರಲ್ಲಿ, ವಿಪುಲ್ ಶುಕ್ಲಾ </ b> ಅವರ ಅಜ್ಜ ತನ್ನೆಲ್ಲಾ ಉಳಿತಾಯಗಳನ್ನು ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಬಳಸಿದರು ಉತ್ತರ ಪ್ರದೇಶದ ಲಕ್ನೋ ನಗರದ ಸಮೀಪ ಆಗ ದೂರವಿದ್ದ ಹಳ್ಳಿಯಲ್ಲಿತ್ತು. ಆ ಸಮಯದಲ್ಲಿ ಮೇಘದೂತ್ ಹರ್ಬಲ್ ಸಾಧಾರಣವಾದ ವ್ಯವಸ್ಥೆಯಾಗಿತ್ತು – ಇದು ಹತ್ತಿರದ ಜನರಿಗೆ ಉದ್ಯೋಗ ನೀಡಲು ಒಂದು ಆಫೀಸ್ ಮತ್ತು ಉತ್ಪಾದನಾ ಘಟಕವನ್ನು ಒಳಗೊಂಡಿತ್ತು. ಶೀಘ್ರದಲ್ಲೇ, ಇದು ಯುಪಿ ಖಾದಿ ಎಂಡ್ ವಿಲೇಜ್ ಇಂಡಸ್ಟ್ರೀಸ್ ಬೋರ್ಡ್ ( UPKVIB). ನಲ್ಲಿ ದಾಖಲಿಸಿಕೊಂಡಿತು
ಈ ಕಂಪನಿ ಮತ್ತು ಅದರ ಅನೇಕ ಗಿಡಮೂಲಿಕೆಗಳ ಸಂಯೋಜನೆಗಳು ಈಗ ಮೂರು ತಲೆಮಾರುಗಳಿಂದ ಹಳ್ಳಿಯ ಮತ್ತು ಕುಟುಂಬದ ಭಾಗವಾಗಿದ್ದು, ಈ ವ್ಯಾಪಾರವನ್ನು ಅಜ್ಜನಿಂದ ತಂದೆಗೆ ಹಸ್ತಾಂತರಿಸಲಾಯಿತು ಮತ್ತು ಈಗ ವಿಪುಲ್ ಮತ್ತು ಅವರ ಸಹೋದರ ವಿಶ್ವಾಸ್, ಅದರ ದೈನಂದಿನ ವ್ಯಾಪಾರವನ್ನು ನಡೆಸುತ್ತಿದ್ದಾರೆ.
ಇ-ಕಾಮರ್ಸ್ ಬಗ್ಗೆ ಅವರು ಹೊಂದಿದ್ದ ಅನೇಕ ಅನುಮಾನಗಳ ಹೊರತಾಗಿಯೂ, ಅಂತಿಮವಾಗಿ ಗಿಡಮೂಲಿಕೆಗಳು ಮತ್ತು ಇತರ ನೈಸರ್ಗಿಕ ಉತ್ಪನ್ನಗಳು ಮತ್ತು ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದ್ದ ಸಾಂಪ್ರದಾಯಿಕ ಕೌಟುಂಬಿಕ ವ್ಯಾಪಾರವನ್ನು ಆನ್‌ಲೈನ್‌ನಲ್ಲಿ ಕೊಂಡೊಯ್ದಿದ್ದು ವಿಪುಲ್ ಅವರಾಗಿತ್ತು. ಮೇಘದೂತ್ ಹರ್ಬಲ್ ಕೇವಲ ಒಂದು ವರ್ಷದ ಹಿಂದೆ ಫ್ಲಿಪ್‌ಕಾರ್ಟ್ ಸಮರ್ಥ್ ಪಾಲುದಾರನಾಯಿತು.
Delighted to sign an MoU with @UPGovt @UP_KVIB on the occasion of #GandhiJayanti to support Khadi industry in UP. Sincere thanks to Hon'ble CM @myogiadityanath , Pr. Secy @navneetsehgal3 for the support to @Flipkart as we bring khadi weavers & artisans online. #खादी_महोत्सव2019 pic.twitter.com/7ZWYcumNU1
— Rajneesh Kumar (@rajneeeshkumar) October 2, 2019
ದೇಶದ ಗ್ರಾಮೀಣ ಮತ್ತು ಕೆಳಸ್ತದರದ ಸಮಾಜದ ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಫ್ಲಿಪ್‌ಕಾರ್ಟ್ ಸಮರ್ಥ್ ಇಂದು ಭಾರತದಾದ್ಯಂತ 500,000 ಕ್ಕೂ ಹೆಚ್ಚು ಕುಶಲಕರ್ಮಿಗಳು, ನೇಕಾರರು ಮತ್ತು ಸೂಕ್ಷ್ಮ ಉದ್ಯಮಗಳ ಜೀವನೋಪಾಯವನ್ನು ಬೆಂಬಲಿಸುತ್ತದೆ.
ಅಕ್ಟೋಬರ್ 2, 2019 ರಂದು, ದ ಫ್ಲಿಪ್‌ಕಾರ್ಟ್ ಗ್ರೂಪ್ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದು ಇದು ಉತ್ತರ ಪ್ರದೇಶ್ ಖಾದಿ ಎಂಡ್ ವಿಲೇಜ್ ಇಂಡಸ್ಟ್ರೀಸ್ ಬೋದ್ ಜೊತೆಗಿದ್ದು, ಇದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ, ಮಂಡಳಿಯಡಿಯಲ್ಲಿ ನೋಂದಾಯಿಸಿಕೊಂಡಿರುವ ರಾಜ್ಯದ ನೇಕಾರರು ಮತ್ತು ಗ್ರಾಮ ಕೈಗಾರಿಕೆಗಳ ಸಬಲೀಕರಣಕಾಗಿ ಇದನ್ನು ಮಾಡಲಾಗಿದೆ
” ನಮ್ಮ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸುವುದು ತಡವಾಗಿದೆಯೆಂದು ನಾನು ಒಪ್ಪಿಕೊಳ್ಳುತ್ತೇನೆ “ಎಂದು ಆನ್‌ಲೈನ್ ಕ್ಷೇತ್ರದಲ್ಲಿ ಸ್ವಯಂ-ಘೋಷಿತ ಹವ್ಯಾಸಿಯಾದ ವಿಪುಲ್ ಹೇಳುತ್ತಾರೆ,“ ನೇರವಾಗಿ ಹೇಳಬೇಕೆಂದರೆ, ನಾವು ಪಡೆಯಬಹುದಾದ ಎಲ್ಲ ಬೆಂಬಲವೂ ನಮಗೆ ಬೇಕು. ನಾವು ಮೂಲಭೂತ ಅಂಶಗಳನ್ನಷ್ಟೇ ಕಲಿಯುತ್ತಿದ್ದೇವೆ. ”
ಸಾಂಕ್ರಾಮಿಕ ರೋಗವನ್ನು ಎದುರಿಸುವುದು </ h3>
ಕೊರೋನಾ ವೈರಸ್ ಸಾಂಕ್ರಾಮಿಕದ ಗಂಭೀರತೆಯ ಸುದ್ದಿಯನ್ನು ನಾವು ಕೇಳಲು ಪ್ರಾರಂಭಿಸಿದೆವೆಂದು ವಿಪುಲ್ ವಿವರಿಸುತ್ತಾರೆ. ವ್ಯಾಪಾರಗಳು ಮತ್ತು ಗ್ರಾಹಕರಿಬ್ಬರಿಗೂ ಮುಂಬರುವ ಸವಾಲಿನ ಸಮಯಗಳನ್ನು ಗ್ರಹಿಸಿದ ತಂಡವು, ಈವರೆಗೆ ತಾನು ಪ್ರಾರಂಭಿಸುವ ಯಾವುದೇ ಯೋಜನೆಗಳನ್ನು ಹೊಂದಿರದ ಒಂದು ಉತ್ಪನ್ನವನ್ನು ತ್ವರಿತವಾಗಿ ಪರಿಚಯಿಸಲು ನಿರ್ಧರಿಸಿತು.
“ ನಾವು ಫೆಬ್ರವರಿ ಕೊನೆಯಲ್ಲಿ ಸ್ಯಾನಿಟೈಜರ್‌ಗಳನ್ನು ಒಂದು ಉತ್ಪನ್ನವಾಗಿ ಸೇರಿಸಿದೆವು ಆ ಸಮಯದಲ್ಲಿ ನಮಗೆ ಇಲ್ಲೊಂದು ಅಲ್ಲೊಂದು ಪ್ರತಿಕ್ರಿಯೆ ಸಿಕ್ಕಿದರೂ ಮಾರ್ಚ್ ಆರಂಭದಲ್ಲಿ ಆನ್‌ಲೈನ್‌ನಲ್ಲಿ ಅದರ ಬೇಡಿಕೆ ಸ್ಫೋಟಗೊಂಡಿತು, ”ಎಂದು ಅವರು ನೆನಪಿಸಿಕೊಳ್ಳುತ್ತಾರೆ,“ ಸ್ಯಾನಿಟೈಜರ್ಸ್ ಮಾರುಕಟ್ಟೆಯಲ್ಲಿ ಪೂರೈಸದೇ ಇದ್ದ ಅಗತ್ಯಗಳನ್ನು ನಾವು ಪೂರೈಸಿದೆವು. ”
” ಮಾರ್ಚ್‌ನಲ್ಲಿ ಒಂದು ಹಂತದಲ್ಲಿ, ಒಂದೇ ದಿನದಲ್ಲಿ ನಾವು ಮಾಡಿದ ಮಾರಾಟವು ನಾವು ಇಡೀ ತಿಂಗಳಲ್ಲಿ ಮಾಡುವಷ್ಟಿತ್ತು “ಎಂದು ಅವರು ಹೇಳುತ್ತಾರೆ, ಹಾಗೂ ಸಕ್ರಿಯ ವ್ಯಾಪಾರಗಳ ಕಡಿಮೆ ಸಂಖ್ಯೆ ಮತ್ತು ಇ-ಕಾಮರ್ಸ್ ದೊಡ್ಡ ಮಟ್ಟದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವ ಅವಕಾಶಗಳ ಬಾಗಿಲು ತೆರೆಯಿತು, ಹಾಗೂ ಅವರೆಲ್ಲರೂ ತಮ್ಮ ಬ್ರ್ಯಾಂಡ್ ಬಗ್ಗೆ ತಿಳಿದುಕೊಂಡರೆಂದು ಅವರು ಹೇಳುತ್ತಾರೆ.
ಯಾವುದೇ ವ್ಯಾಪಾರದಲ್ಲೂ ಮಾರಾಟವು ಆದ್ಯತೆಯಾಗಿದ್ದರೂ, ಹತ್ತಿರದಲ್ಲಿ ಕೆಲಸ ಮಾಡುವ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದೂ ಮೇಘದೂತ್ ಹರ್ಬಲ್‌ನ ಉದ್ದೇಶವಾಗಿದೆ. ಅದರ ಕಾರ್ಖಾನೆಯ ಬಹುಪಾಲು ಉದ್ಯೋಗಿಗಳು 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುತ್ತಾರೆ. ಉತ್ಪಾದನಾ ಘಟಕವು ನೆರೆಹೊರೆಯಿಂದ 300 ಜನರನ್ನು ನೇಮಿಸಿಕೊಂಡಿದೆ, ಇವರಲ್ಲಿ ಸುಮಾರು 40% ಮಹಿಳೆಯರು, ಹಾಗೂ ಅವರು ಹೆಚ್ಚಾಗಿ ಪ್ಯಾಕೇಜಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಎಂಎಸ್‌ಸಿ ಅಥವಾ ಇತರ ಸ್ನಾತಕೋತ್ತರ ಪದವಿ ಪಡೆದವರು ಲ್ಯಾಬ್‌ನಲ್ಲಿ ಅಥವಾ ಉತ್ಪಾದನೆಯಲ್ಲಿ ಕೆಲಸ ಮಾಡುತ್ತಾರೆ.
” ನಮ್ಮ ಉತ್ಪನ್ನಗಳು ಕೈಯಿಂದ ತಯಾರಾಗುತ್ತವೆ ಮತ್ತು ಕೈಯಿಂದ ಪ್ಯಾಕೇಜ್ ಮಾಡಲ್ಪಡುತ್ತವೆ “ಎಂದು ವಿಪುಲ್ ವಿವರಿಸುತ್ತಾರೆ.
ಲಾಕ್ ಡೌನ್ ಅನ್ನು ಮೊತ್ತ ಮೊದಲ ಬಾರಿ ಘೋಷಿಸಿದಾಗ, ನೌಕರರಿಗೆ ಉತ್ಪಾದನಾ ಘಟಕಕ್ಕೆ ಬರಲು ಸಾಧ್ಯವಾಗಲಿಲ್ಲ. “ಅದು ನಮಗೆ ಒಂದು ಚಿಂತೆಯಾಗಿತ್ತು. ಆದರೆ ನಾವು ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಅಗತ್ಯವಾದ ಪಾಸ್‌ಗಳನ್ನು ಪಡೆಯಲು ಸಾಧ್ಯವಾಯಿತು. ನಮ್ಮ ನೌಕರರು ಮತ್ತೆ ಕೆಲಸಕ್ಕೆ ಬಂದಾಗ ಅವರು ಕಟ್ಟುನಿಟ್ಟಾದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕಾಯ್ದುಕೊಳ್ಳುವುದನ್ನು ನಾವು ಖಚಿತಪಡಿಸಿಕೊಂಡೆವು ”ಎಂದು ವಿಪುಲ್ ಒತ್ತಿ ಹೇಳುತ್ತಾರೆ.
ಸಾಂಕ್ರಾಮಿಕದ ಮಧ್ಯೆ ಹೊಸ ಸಾಮಾನ್ಯಕ್ಕೆ ಹೊಂದಿಕೊಳ್ಳುತ್ತ, ಎಲ್ಲಾ ಉದ್ಯೋಗಿಗಳು ಸೌಲಭ್ಯಕ್ಕೆ ಬರುವ ಮೊದಲು ಅವರನ್ನು ಥರ್ಮಲ್-ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಈಗ ಪ್ರತಿ ಎರಡು ಗಂಟೆಗಳಿಗೊಮ್ಮೆ ಅವರ ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಕೈ ತೊಳೆಯುವುದು ಅವರಿಗೆ ಕಡ್ಡಾಯವಾಗಿದೆ. “ನಮ್ಮ ಎಲ್ಲಾ ಉತ್ಪನ್ನಗಳು 100% ಸುರಕ್ಷಿತವೆಂದು ಗ್ರಾಹಕರು ಭರವಸೆ ಇಡಬಹುದು” ಎಂದು ಅವರು ಒತ್ತಿ ಹೇಳುತ್ತಾರೆ.
ಲಾಕ್‌ಡೌನ್ ಸಮಯದಲ್ಲಿದ್ದ ಚಲನೆಯ ನಿರ್ಬಂಧದಿಂದಾಗಿ, ಮೇಘದೂತ್ ಹರ್ಬಲ್‌ನ ಎಲ್ಲಾ ಉತ್ಪನ್ನಗಳನ್ನು ಪ್ಯಾಕೇಜ್ ಮಾಡಿ ಲಕ್ನೋ ಸ್ಥಾವರದಿಂದ ಭಾರತದಾದ್ಯಂತ ಇರುವ ಗ್ರಾಹಕರಿಗೆ ರವಾನಿಸಲಾಯಿತು. “ನಮ್ಮೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರೂ ಇ-ಕಾಮರ್ಸ್‌ನ ಪರಿಣಾಮಗಳನ್ನು ನೋಡಿ ಸಂತೋಷಪಟ್ಟರು” ಎಂದು ವಿಪುಲ್ ಹೇಳುತ್ತಾರೆ.
ಒಂದು ಸಾಂಪ್ರದಾಯಿಕ ಕೌಟುಂಬಿಕ ವ್ಯಾಪಾರವನ್ನು ಮರುರೂಪಿಸುವುದು
ತಮ್ಮ ಗಿಡಮೂಲಿಕೆಗಳ ಉತ್ಪನ್ನಗಳ ಜನಪ್ರಿಯತೆಯನ್ನು ವಿವರಿಸುತ್ತ ವಿಪುಲ್, ಶೀತ ಅಥವಾ ಕೂದಲುದುರುವಿಕೆಯಂತಹ ಸಾಮಾನ್ಯ ತೊಂದರೆಗಳನ್ನು ಎದುರಿಸಲು ನೈಸರ್ಗಿಕ ಮತ್ತು ಸಾಂಪ್ರದಾಯಿಕ ಪರಿಹಾರೋಪಾಯಗಳನ್ನು ಅವಲಂಬಿಸುವ ಭಾರತೀಯ ಮನೆಗಳಲ್ಲಿನ ಪ್ರಾಚೀನ ಪ್ರವೃತ್ತಿಯನ್ನು ಸೂಚಿಸುತ್ತಾರೆ.
“ ಈ ಸಾಂಪ್ರದಾಯಿಕ ನಂಬಿಕೆಯು ಗ್ರಾಹಕರು ನಮ್ಮ ಉತ್ಪನ್ನಗಳತ್ತ ಬರುವಂತೆ ಮಾಡುತ್ತದೆ. ಒಮ್ಮೆ ಅವರು ಫಲಿತಾಂಶಗಳನ್ನು ನೋಡಿದ ನಂತರ ವಿಶ್ವಾಸದ ಸ್ಥಾಪನೆಯಾಗುತ್ತದೆ, ”ಎಂದು ಅವರು ಹೇಳುತ್ತಾರೆ, ಇ-ಕಾಮರ್ಸ್ ನೈಸರ್ಗಿಕ ಉತ್ಪನ್ನ ಮಾರುಕಟ್ಟೆಯ ಸಂಪೂರ್ಣ ಹೊಸ ವಿಭಾಗವನ್ನು ತಲುಪಲು ಸಹಾಯ ಮಾಡಿದೆಯೆಂದೂ ಅವರು ಹೇಳುತ್ತಾರೆ.
” ಈ ಮೊದಲು, ಆಫ್‌ಲೈನ್ ವ್ಯಾಪ್ತಿಯಲ್ಲಿ, ನಮ್ಮ ಉತ್ಪನ್ನಗಳನ್ನು ಹೆಚ್ಚಾಗಿ ಹಿಂದಿ ಮಾತನಾಡುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕ್ಷೇತ್ರಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು” ಎಂದು ಅವರು ವಿವರಿಸುತ್ತಾರೆ. ನಮ್ಮ ಕುಟುಂಬದ ವ್ಯಾಪಾರವು ಆನ್‌ಲೈನ್‌ಗೆ ಹೋದ ನಂತರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಕಾಶ್ಮೀರದ ಗ್ರಾಹಕರಿಂದಲೂ ಮೇಘದೂತ್ ಹರ್ಬಲ್‌ಗೆ ಆರ್ಡರ್‌ಗಳ ಸುರಿಮಳೆಯಾಯಿತು. “ಅದು ನಿಜವಾಗಿಯೂ ಒಳ್ಳೆಯದೆನಿಸಿತು!” ಎಂದು ಅವರು ಹೇಳುತ್ತಾರೆ. “ನಾವು ಈಗ ಭಾರತದ ಎಲ್ಲಾ ಕಡೆಗಳಿಂದಲೂ ನಮ್ಮ ಉತ್ಪನ್ನಗಳಿಗಾಗಿ ಇಮೇಲ್‌ಗಳನ್ನು ಪಡೆಯುತ್ತೇವೆ.”
ಐಐಟಿ (ಬಿಎಚ್‌ಯು) ಪದವೀಧರರಾದ ವಿಪುಲ್ ಅವರು ಪದವಿ ಗಳಿಸಿದ ಕೂಡಲೇ ಮರಳಿ ಬಂದ ಕೌಟುಂಬಿಕ ವ್ಯಾಪಾರಕ್ಕಾಗಿ ದೊಡ್ಡ ಯೋಜನೆಗಳನ್ನು ಹೊಂದಿದ್ದಾರೆ. “ನಾನು ಐಐಟಿಗೆ ಹೋದ ಏಕೈಕ ಕಾರಣವೆಂದರೆ ಗುಣಮಟ್ಟದ ಶಿಕ್ಷಣ ಪಡೆಯುವುದಾಗಿತ್ತು. 9-5 ಉದ್ಯೋಗವು ನನಗೆ ಎಂದಿಗೂ ಹೊಂದುತ್ತಿರಲಿಲ್ಲ, “ಎಂದು ಅವರು ಹೇಳುತ್ತಾರೆ, ದೇಶದ ಪ್ರಧಾನ ಸಂಸ್ಥೆಗಳಲ್ಲಿ ಒಂದಕ್ಕೆ ಪ್ರವೇಶಿಸಿದ ತಮ್ಮ ಸಾಧನೆಯನ್ನು ಬದಿಗೊತ್ತಿ ಮತ್ತು ಅವರು ತಮ್ಮ ಮನಸ್ಸು ಕರೆಯುತ್ತಿದ್ದ ತಮ್ಮ ಮನೆಗೆ ಬರುವ ಪ್ರಬಲವಾದ ಆಸೆ ಹೊಂದಿದ್ದರು.
ಬೆಳೆಯುತ್ತಿರುವ ಗ್ರಾಹಕ ಸಮೂಹ ಮತ್ತು ಇ-ಕಾಮರ್ಸ್‌ನಲ್ಲಿ ಪ್ರವೇಶದೊಂದಿಗೆ, ಮುಂದಿನ ವರ್ಷಗಳಲ್ಲಿ ಮೇಘದೂತ್ ಹರ್ಬಲ್ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸ ಅವರಿಗಿದೆ. “ಮುಂಚೆ, ಹೆಚ್ಚಾಗಿ 40 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ನಮ್ಮ ಥರದ ಉತ್ಪನ್ನಗಳತ್ತ ಆಕರ್ಷಿತರಾಗುತ್ತದ್ದರು. ಆದರೆ ಈಗ, ನೈಸರ್ಗಿಕ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, 20 ವರ್ಷದಷ್ಟು ವಯಸ್ಸಿನ ಜನರೂ ಅದನ್ನು ಖರೀದಿಸುತ್ತಾರೆ. ಇದು ಒಳ್ಳೆಯ ಚಿಹ್ನೆ – ಸ್ವೀಕಾರದ ಸಂಕೇತ. ”
ಲಾಕ್‌ಡೌನ್ ಮುಗಿದ ನಂತರ, ಎಂದಿನಂತೆ ವ್ಯಾಪಾರಕ್ಕೆ ಹಿಂತಿರುಗುವುದು ಅದರದ್ದೇ ಸವಾಲುಗಳನ್ನು ಒಡ್ಡಿದರೂ, ವಿಪುಲ್ ಫ್ಲಿಪ್‌ಕಾರ್ಟ್‌ನಲ್ಲಿರುವ ತನ್ನ ಪಾಲುದಾರರಿಗೆ ಅವರ ತ್ವರಿತ ಪರಿಹಾರಗಳು ಮತ್ತು ವ್ಯವಸ್ಥಾಪನಾ ಬೆಂಬಲಕ್ಕಾಗಿ ಶ್ಲಾಘಿಸುತ್ತಾರೆ.
” ಫ್ಲಿಪ್‌ಕಾರ್ಟ್ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಸಹಕರಿಸಿದೆ “ಎಂದು ಅವರು ಹೇಳುತ್ತಾರೆ. “ ಯಾವ ದೂರೂ ಇಲ್ಲ. ಏನೇ ಆದರೂ ಒಳ್ಳೆಯದಾಗುತ್ತದೆ.”
For years, India’s #artisans have struggled to keep traditional art alive. With #FlipkartSamarth and its NGO partners, they now have access to a pan-India market for their incredible crafts. Read their stories of hope and hard work. @Flipkarthttps://t.co/CbhOLAGstX
— Flipkart Stories (@FlipkartStories) June 24, 2020
ಉತ್ತರ ಪ್ರದೇಶ ಸರ್ಕಾರದ ಬೆಂಬಲದೊಂದಿಗೆ, ಫ್ಲಿಪ್‌ಕಾರ್ಟ್‌ನ ಸಮರ್ಥ್ ಕಾರ್ಯಕ್ರಮವು ವಿಪುಲ್‌ರಂತಹ ಹೆಚ್ಚು ಸಣ್ಣ ಉದ್ಯಮಗಳನ್ನು ವೇದಿಕೆಯ ಸಾಮರ್ಥ್ಯ ಮತ್ತು ಭಾರತದಾದ್ಯಂತ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುವ ಮೂಲಕ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
” ಯುಪಿಕೆವಿಐಬಿ ಮತ್ತು ಫ್ಲಿಪ್‌ಕಾರ್ಟ್ ನಡುವಿನ ಒಪ್ಪಂದವು ಉತ್ತರ ಪ್ರದೇಶದ ಖಾದಿ ಉದ್ಯಮಿಗಳಿಗೆ ಹೆಚ್ಚಿನ ಒಳಗೊಳ್ಳುವಿಕೆ ಮತ್ತು ಮಾರುಕಟ್ಟೆ ಪ್ರವೇಶದ ಮೂಲಕ ನೆಲದ ಮೇಲೆ ನಿಜವಾದ ಬದಲಾವಣೆಯನ್ನು ನೀಡುತ್ತಿದೆಯೆಂದು ನನಗೆ ಸಂತೋಷವಾಗಿದೆ” ಎಂದು ಡಾ. ನವನೀತ್ ಸೆಹಗಲ್</ b > , ಐಎಎಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಎಂಎಸ್ಎಂಇ, ರಫ್ತು ಉತ್ತೇಜನ, ಖಾದಿ ಎಂಡ್; ವಿಲೇಜ್ ಇಂಡಸ್ಟ್ರೀಸ್, ಉತ್ತರ ಪ್ರದೇಶ ಸರ್ಕಾರ, ಇವರು ಹೇಳಿದರು. “ಲಕ್ನೋದ ಉದ್ಯಮಿಯೊಬ್ಬರು ಇಷ್ಟು ಕಡಿಮೆ ಅವಧಿಯಲ್ಲಿ ಫ್ಲಿಪ್‌ಕಾರ್ಟ್ ಸಮರ್ಥ್ ಕಾರ್ಯಕ್ರಮದ ಉನ್ನತ ಮಾರಾಟಗಾರರಾಗಿರುವುದು ವಿಶೇಷವಾಗಿ ಹೃದಯಸ್ಪರ್ಶಿಯಾಗಿದೆ. ಅವರ ಯಶಸ್ಸಿನ ಕಥೆ ಯುಪಿ ಸರ್ಕಾರದ ವಿವಿಧ ಉಪಕ್ರಮಗಳ ಅಡಿಯಲ್ಲಿ ಇ-ಕಾಮರ್ಸ್ ವೇದಿಕೆಗಳೊಂದಿಗೆ ಪಾಲುದಾರಿಕೆ ಹೊಂದುವಂತೆ ಇನ್ನೂ ಅನೇಕರನ್ನು ಪ್ರೇರೇಪಿಸುತ್ತಿದೆ. ರಾಜ್ಯದ ವ್ಯಾಪಾರಗಳು ಮತ್ತು ಅನನ್ಯ ಉತ್ಪನ್ನಗಳ ದೊಡ್ಡ ಪಾಲನ್ನು ನಾವು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಫ್ಲಿಪ್‌ಕಾರ್ಟ್‌ನೊಂದಿಗೆ ಹೆಚ್ಚು ನಿಕಟವಾಗಿ ಪಾಲುದಾರಿಕೆ ಹೊಂದುವುದನ್ನು ನಾವು ಎದುರು ನೋಡುತ್ತಿದ್ದೇವೆ. “
ಫ್ಲಿಪ್‌ಕಾರ್ಟ್ ಸಮರ್ಥ್ ಕಾರ್ಯಕ್ರಮದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅಥವಾ ಪಾಲುದಾರರಾಗಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ .