ಮೀಟ್ ವಿಜ್ ಫ್ಲಿಪ್‌ಕಾರ್ಟ್ ಮಾರಾಟಗಾರರಾದಾಗ, ದಿ ಬಿಗ್ ಬಿಲಿಯನ್ ಡೇಸ್ 2020 ಸಮಯದಲ್ಲಿ ಏರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಅವರು ಸಿದ್ಧರಾಗಿರಬೇಕೆಂದು ಅವರಿಗೆ ತಿಳಿಸಲಾಯಿತು. ಖಂಡಿತವಾಗಿಯೂ, ಮೀತ್ ಮತ್ತು ಅವರ ಉದ್ಯೋಗಿಗಳು ತಮ್ಮಲ್ಲಿದ್ದ ದಾಸ್ತಾನುಗಳನ್ನು ಭರ್ತಿಮಾಡಿಕೊಂಡರು ಮತ್ತು ಮಾರಾಟದ ಸಮಯದಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಕಾರ್ಯಾಚರಣೆಗಳನ್ನು ಉನ್ನತ ಮಟ್ಟದಲ್ಲಿಟ್ಟುಕೊಂಡರು. ಆದರೆ ಮಾರಾಟ ಪ್ರಾರಂಭವಾಗಿ ಆರ್ಡರ್‌ಗಳು ಬರಲು ಪ್ರಾರಂಭಿಸಿದಾಗ, ಮೀತ್ ಇದು ಹಿಂದೆಂದೂ ಆಗಿರದಂತಹ ಅನುಭವವಾಗಿದೆಯೆನ್ನುವುದನ್ನು ಅರಿತುಕೊಂಡರು! ಅವರ #Sellfmade ಕಥೆಯನ್ನು ಓದಿ
ನನ್ನ ಹೆಸರು ಮೀತ್ ವಿಜ್. </ B> ನಾನು ಚೆರ್ರಿ ಎಂಟರ್‌ಪ್ರೈಸ್‌ನ ಮಾಲೀಕನಾಗಿದ್ದೇನೆ ಮತ್ತು ನಾನು ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ವಿಭಾಗದಲ್ಲಿ ಮಾರಾಟ ಮಾಡುತ್ತಿದ್ದೇನೆ. ದಿ ಬಿಗ್ ಬಿಲಿಯನ್ ಡೇಸ್ ಮಾರಾಟದ ಭಾಗವಾಗಿ ಇದು ನನ್ನ ಮೊದಲ ಅನುಭವವಾಗಿತ್ತು, ಮತ್ತು ಇದು ನಮಗೆ ನಿಜವಾಗಿಯೂ ಒಳ್ಳೆಯದಾಗಿತ್ತು. ನಮ್ಮ ಸಾಮಾನ್ಯ ಆರ್ಡರ್‌ಗಳಿಗೆ ಹೋಲಿಸಿದರೆ, ಮಾರಾಟದ ಸಮಯದಲ್ಲಿ ನಮ್ಮ ಉತ್ಪನ್ನಗಳಿಗಿನ ಬೇಡಿಕೆ ಐದು ಪಟ್ಟು ಹೆಚ್ಚಾಗಿತ್ತು! ನಮ್ಮ ಗ್ರಾಹಕರಿಂದ ದೊರಕಿದ ಪ್ರತಿಕ್ರಿಯೆಯಿಂದ ಇಲ್ಲಿ ಎಲ್ಲರಿಗೂ ತುಂಬಾ ಸಂತೋಷವಾಯಿತು. ಇಲ್ಲಿಯವರೆಗೂ, ನಾವು ಬಿಗ್ ಬಿಲಿಯನ್ ಡೇಸ್‌ನ一 ಮಾರಾಟಗಾರರ ಕಥೆಗಳು ಇದನ್ನು ಮಾತ್ರ ಕೇಳಿದ್ದು ಇದು ಅವರು ಮಾಡಿದ ಸಾಧನೆ, ಮಾರಾಟದ ಭವ್ಯತೆಯ ಬಗೆಗಿನ ಕಥೆಗಳು ಮತ್ತು ಈ ಸಮಯದಲ್ಲಿ ಗ್ರಾಹಕರು ಶಾಪಿಂಗ್ ಮಾಡುವ ಪ್ರಮಾಣದ ಬಗ್ಗೆ ಹೇಳುತ್ತದೆ! ಇದು ನಮ್ಮ ಯಾವುದೇ ನಿರೀಕ್ಷೆಗಳನ್ನು ಮೀರಿತ್ತು.
ಒಮ್ಮೆ ನಮಗೆ ಸಮಸ್ಯೆಯುಂಟಾಗಿ ನಮ್ಮ ಖಾತೆಯನ್ನು ತಡೆಹಿಡಿಯಲಾಗಿತ್ತು. ಆದರೆ ನಾವು ಶೀಘ್ರದಲ್ಲೇ ಕಂಡುಕೊಂಡಂತೆ, ನಮಗೆ ಚಿಂತೆ ಮಾಡುವ ಅಗತ್ಯವಿರಲಿಲ್ಲ. ನಾವು ಫ್ಲಿಪ್‌ಕಾರ್ಟ್ ಮಾರಾಟಗಾರರ ಬೆಂಬಲ ತಂಡವನ್ನು ತಲುಪಿದ ಕೂಡಲೇ, ಅವರು ಇದರ ಮೇಲೆ ಕೆಲಸ ಮಾಡಿದರು ಮತ್ತು ಅದನ್ನು ಕೇವಲ ಎರಡು ಗಂಟೆಗಳಲ್ಲಿ ಪರಿಹರಿಸಿದರು. ಅದಕ್ಕಾಗಿ ನಾನು ಫ್ಲಿಪ್‌ಕಾರ್ಟ್‌ಗೆ ಧನ್ಯವಾದಗಳನ್ನು ಹೇಳುತ್ತೇನೆ!
ಇದು ನಮ್ಮ ಮೊದಲ ಬಿಗ್ ಬಿಲಿಯನ್ ಡೇಸ್ ಅನುಭವವಾಗಿದ್ದರೂ, ನಮ್ಮ ತಯಾರಿಯೇನೂ ಕಡಿಮೆಯಿರಲಿಲ್ಲ. ಮಾರಾಟ ಪ್ರಾರಂಭವಾಗುವ ಮೊದಲೇ ನಾವು ಯಾವ ರೀತಿಯ ಗ್ರಾಹಕರ ಬೇಡಿಕೆಯನ್ನು ನಿರೀಕ್ಷಿಸಬಹುದು ಮತ್ತು ಅದನ್ನು ಹೇಗೆ ಪೂರೈಸಬೇಕೆನ್ನುವುದನ್ನೂ ಒಳಗೊಂಡಂತೆ ಫ್ಲಿಪ್‌ಕಾರ್ಟ್ ನಮಗೆ ನಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡಿತು. ಆದ್ದರಿಂದ ನಾವು ನಮ್ಮ ದಾಸ್ತಾನುಗಳನ್ನು ತಯಾರಿಟ್ಟುಕೊಂಡು ಬರಬಹುದಾದ ಆರ್ಡರ್‌ಗಳನ್ನು ಎದುರಿಸಲು ಸಿದ್ಧರಿರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಕಾರ್ಯಾಚರಣೆಗಳನ್ನು ಅಣಿ ಮಾಡಿಕೊಂಡೆವು. ನಾವು ಸಿದ್ಧರಾಗಿದ್ದರಿಂದ, ನಮ್ಮ ಸಂಪೂರ್ಣ ಅನುಭವವು ಸಕಾರಾತ್ಮಕವಾಗಿತ್ತು! ನನ್ನ ಉದ್ಯೋಗಿಗಳು ಮತ್ತು ಫ್ಲಿಪ್‌ಕಾರ್ಟ್‌ನ ಬೆಂಬಲದಿಂದ, ಈ ಸಮಯದಲ್ಲಿ ನಾವು ಹೊಸ ಎತ್ತರ ಏರಲು ಸಾಧ್ಯವಾಯಿತು, ಹಾಗೂ ಇದು ಪ್ರಥಮ-ಬಾರಿ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುತ್ತಿದ್ದವರ ಟಾಪ್ 3 ಪಟ್ಟಿಯಲ್ಲಿ ನಾವು ಮೊದಲ ಸ್ಥಾನ ಪಡೆಯುವಂತೆ ಮಾಡಿತು! ನಮ್ಮ ಉತ್ಪನ್ನಗಳನ್ನು ಜಾಹೀರಾತು ಮಾಡುವಲ್ಲಿ ಫ್ಲಿಪ್‌ಕಾರ್ಟ್‌ನ ನಮಗೆ ಸಾಕಷ್ಟು ಸಹಾಯ ಮಾಡಿತು. ಅವರ ಸಹಾಯದಿಂದ, ನಮ್ಮ ಬ್ರ್ಯಾಂಡ್ ಗೋಚರತೆ ಪಡೆದುಕೊಂಡಿತು ಮತ್ತು ನಮಗೆ ಅದ್ಭುತ ಪ್ರತಿಕ್ರಿಯೆ ದೊರಕಿತು.
ಫ್ಲಿಪ್‌ಕಾರ್ಟ್ ಪ್ರತಿಯೊಬ್ಬ ಮಾರಾಟಗಾರರ ಕಾಳಜಿ ವಹಿಸುತ್ತದೆ ಮತ್ತು ಅವರು ಯಾವಾಗಲೂ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ! ಈ ಬಿಬಿಡಿಯ ಭಾಗವಾಗಿರುವುದು ಅತ್ಯಂತ ಸಂತೋಷಕರ ವಿಚಾರವಾಗಿದೆ ಮತ್ತು ಮುಂದಿನ ವರ್ಷಗಳಲ್ಲಿ ನಾನು ಇನ್ನೂ ಹೆಚ್ಚಿನದನ್ನು ಎದುರು ನೋಡುತ್ತಿದ್ದೇನೆ.
ಜಿಷ್ಣು ಮುರಳಿ ಅವರಿಗೆ ಹೇಳಿದಂತೆ ಪಲ್ಲವಿ ಸುಧಾಕರ್ ಅವರಿಂದ ಹೆಚ್ಚುವರಿ ಕೊಡುಗೆಗಳೊಂದಿಗೆ