ಭಾರತೀಯ ವಾಯುಸೇನೆಯಿಂದ ನಿವೃತ್ತರಾದ ಇಕ್ರಮುಲ್ಲ ಖಾನ್ ಅವರಿಗೆ ವ್ಯಾಪಾರಿಯಾಗಬೇಕು ಎಂಬ ತಮ್ಮ ಕನಸನ್ನು ಈಡೇರಿಸಲು ನಿವೃತ್ತಿಯು ಸಮರ್ಪಕವಾದ ಅವಕಾಶವನ್ನು ಒದಗಿಸಿತು. ಅವರು ಒಬ್ಬ ಫ್ಲಿಪ್ಕಾರ್ಟ್ ಮಾರಾಟಗಾರರಾಗಿ ಅವರಿಗೆ ಒದಗಿಬಂದ ಸವಾಲುಗಳನ್ನು ಹೇಗೆ ನಿಭಾಯಿಸಿದರು ಮತ್ತು ತಮಗಿದ್ದ ವ್ಯಾಪಾರಿಯಾಗುವ ಕನಸು ಮೇಲಕ್ಕೇರಲು ಹೇಗೆ ರೆಕ್ಕೆಗಳನ್ನು ಕಟ್ಟಿದರು ಎನ್ನುವ ವಿಷಯ ಇಲ್ಲಿದೆ.
ಭಾರತೀಯ ವಾಯುಸೇನೆಯಿಂದ ನಿವೃತ್ತಿ ಹೊಂದಿದ್ದು ಮಾಜಿ ಸೈನಿಕರಾದ ಇಕ್ರಮುಲ್ಲ ಖಾನ್’ ಅವರ ಬದುಕಿನಲ್ಲಿ ಎರಡನೆಯ ಘಟ್ಟದ ಮುನ್ನುಡಿ ಮಾತ್ರವಾಗಿತ್ತು. ೨೦ ವರ್ಷಗಳು ದೇಶಕ್ಕೆ ಸೇವೆ ಸಲ್ಲಿಸಿ ಸಾರ್ಜೆಂಟ್ ಪದವಿ ಹೊಂದಿ ನಿವೃತ್ತರಾದ ಇವರು ದೆಹಲಿಯ ಒಕ್ಲ ಪ್ರದೇಶದ ನಿವಾಸಿಯಾಗಿದ್ದರು. ಅವರಿಗೆ ಉದ್ಯಮ ತಮ್ಮ ಜೀವನದ ಗುರಿ ಎಂದು ತಿಳಿದಿತ್ತು.
ನಿವೃತ್ತಿಯ ನಂತರ ಕೆಲವು ವರ್ಷಗಳು ಇಕ್ರಮುಲ್ಲ ಇವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರು, ಆದರೆ ಉದ್ಯಮ ಅವರ ಆತ್ಯಂತಿಕ ಗುರಿಯಾಗಿತ್ತು. ಇವರು ಆರಂಭದಲ್ಲಿ ಒಂದು ಹೋಟೆಲು ಮತ್ತು ಒಂದು ಚಿಲ್ಲರೆ ವ್ಯಾಪಾರವನ್ನು ನಡೆಸಿದರೂ ಅವು ಇವರು ನಿರೀಕ್ಷಿಸಿದ ರೀತಿಯಲ್ಲಿ ಸಾಗಲಿಲ್ಲ, ಆದರೆ ಈ ಮಾಜಿ ಸೈನಿಕ ತಮ್ಮ ಕನಸನ್ನು ನನಸು ಮಾಡುವುದರ ದಿಕ್ಕಿನಲ್ಲಿ ಸತತ ಪರಿಶ್ರಮಪಟ್ಟರು.
ಅವರ ಕತೆಯನ್ನು ಗಮನಿಸಿ : ಆಕಾಶದ ಎತ್ತರದ ಕನಸುಗಳು
ಅವರ ಪರಿಶ್ರಮ ಮತ್ತು ದೃಢನಿಶ್ಚಯ ೨೦೧೯ರಲ್ಲಿ ಅವರು ತಮ್ಮ ಸ್ವಂತ ಕಂಪನಿಯೊಂದನ್ನು ಈ-ಕಾಮರ್ಸ್‌ನ ಯಶಸ್ಸನ್ನು ಗಳಿಸುವ ಆಶಯದಿಂದ ನೊಂದಾಯಿಸಿದಾಗ ಸಫಲವಾದವು. ಅವರು ಫ್ಲಿಪ್ಕಾರ್ಟ್‌ನ ಮೂಲಕ “ಭಾರತದಾದ್ಯಂತ ನನ್ನ ಉತ್ಪನ್ನಗಳನ್ನು ಮಾರಲು ಒಂದು ವೇದಿಕಯನ್ನು ಕಂಡುಕೊಂಡೆ” ಎಂದು ಹೇಳುತ್ತಾರೆ. ಅವರು ತಮ್ಮ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ನ್ನು ೨೦೨೧ರಲ್ಲಿ ಶುರುಮಾಡಿದರು.
ಮೊದಲು, ಈ ಮಾಜಿ ಸೈನಿಕ ದೆಹಲಿಯ ಸ್ಥಳೀಯ ಮಾರುಕಟ್ಟೆಗಳಿಗೆ ಹೋಗಿ ಅಲ್ಲಿಂದ ಪುರುಷರ ಮತ್ತು ಮಹಿಳೆಯರ ಕ್ರೀಡಾ ಉಡುಪುಗಳನ್ನು ತರುತ್ತಿದ್ದರು. ಆದರೆ, ಅವರ ಉದ್ದಿಮೆಯ ಬೆಳವಣಿಗೆಗಾಗಿ ತಮ್ಮ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಬೇಕು ಮತ್ತು ತಮ್ಮ ಸ್ವಂತ ತಯಾರಿಕೆಯ ಘಟಕವನ್ನು ಸ್ಥಾಪಿಸಬೇಕೆಂದು ಕಂಡುಕೊಂಡರು.
“ಈ ವೇದಿಕೆಗೆ ಯಾವುದೆ ವಯೋಮಿತಿಯಿಲ್ಲ. ನಿಮಗೆ ಇದರ ಬಗ್ಗೆ ಉತ್ಕಟ ಒಲವು ಮತ್ತು ಶ್ರದ್ಧೆಯಿದ್ದು ಏನನ್ನಾದರೂ ಸಾಧಿಸಬೇಕೆಂಬ ಛಲವಿರಬೇಕು. ನಿಮ್ಮ ವ್ಯಾಪಾರವನ್ನು ಆರಂಭಿಸಲು ಬಂಡವಾಳವೂ ತಡೆಯಲ್ಲ, ಏಕೆಂದರೆ ಫ್ಲಿಪ್ಕಾರ್ಟ್‌ನಲ್ಲಿ ಸಣ್ಣ ಬಂಡವಾಳದಿಂದಿಗೆ ನೀವು ಶುರುಮಾಡಬಹುದು” ಎನ್ನುತ್ತಾರೆ ಇಕ್ರಮುಲ್ಲ.
ಫ್ಲಿಪ್ಕಾರ್ಟ್‌ನಲ್ಲಿ ಮಾರುಕಟ್ಟೆಯ ಪ್ರವೃತ್ತಿ ಮತ್ತು ಮಾರಾಟದ ಪ್ರಮಾಣವನ್ನು ತಮ್ಮ ಲೆಕ್ಕ ವ್ಯವಸ್ಥಾಪಕರನ್ನು ಪಕ್ಕದಲ್ಲಿ ಇಟ್ಟುಕೊಂಡು ಅವರು ಗಮನಿಸುತ್ತಿರುತ್ತಾರೆ, ಮತ್ತು ಈ ಹೆಮ್ಮೆಯ ಮಾಜಿ ಸೈನಿಕರಿಗೆ ತಮ್ಮ ಯಶಸ್ಸಿಗೆ ಆಕಾಶವೂ ಮಿತಿಯಲ್ಲ ಎಂದು ತಿಳಿದಿದೆ. “ಒಂದು ಉದ್ದಿಮೆಯನ್ನು ನಡೆಸುವುದು ಮತ್ತು ಬೆಳೆಸುವುದರಲ್ಲಿ ನನ್ನ ವಾಯುಸೇನೆಯ ಅನುಭವ ಸಹಾಯಕಾರಿಯಾಗಿದೆ” ಎನ್ನುತ್ತಾರೆ. ಏಕ ಸೈನಿಕನಿರುವ ಸೈನ್ಯದಂತಿರುವ ಇವರು ಉತ್ಪನ್ನಗಳ ಪಟ್ಟಿ, ಬೇಡಿಕೆಗಳು, ವಸ್ತುಗಳ ದಾಸ್ತಾನು, ಕಂತೆಕಟ್ಟುವುದು ಮತ್ತು ರವಾನೆ, ಎಲ್ಲವನ್ನೂ ತಾವೇ ನಿಭಾಯಿಸುತ್ತಾರೆ.
“ನಿವೃತ್ತಿಯ ಬಳಿಕ ನಾನು ವಿವಿಧ ರೀತಿಯ ಕೆಲಸಗಳನ್ನು ಮಾಡಿದೆ. ಒಬ್ಬ ಉದ್ಯಮಿ, ಒಬ್ಬ ವ್ಯಾಪಾರಿಯಾಗಬೇಕೆಂಬ ನನ್ನ ಕನಸು ಫ್ಲಿಪ್ಕಾರ್ಟ್‌ನಿಂದ ಮಾತ್ರ ನನಸಾಗಲು ಸಾಧ್ಯವಾಯಿತು” ಎನ್ನುತ್ತಾರೆ ಈ #ಸ್ವಯಂ-ನಿರ್ಮಿತ ಫ್ಲಿಪ್ಕಾರ್ಟ್ ಮಾರಾಟಗಾರ. ಅವರು ತಮ್ಮ ಕನಸನ್ನು ಪ್ರತಿ ಕ್ಷಣವೂ ನನಸಾಗಿಸಿ ಬದುಕುತ್ತಿದ್ದಾರೆ.
ಇಂತಹ #ಭಾರತದಲ್ಲಿ ತಯಾರಾದದ್ದು ಎಂಬ ಯಶಸ್ಸಿನ ಕತೆಗಳನ್ನು ಓದಲು ಇಲ್ಲಿ ಒತ್ತಿhere.