ಮರುಗುವುದಕ್ಕಿಂತ ಸುರಕ್ಷಿತವಾಗಿರುವುದು ಲೇಸು-ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯನ್ನು ಸುರಕ್ಷಿತಗೊಳಿಸುವುದು ಹೇಗೆ

Read this article in हिन्दी | English | বাংলা | தமிழ் | ગુજરાતી | मराठी

ನೀವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ನಿಮ್ಮ ವೈಯಕ್ತಿಕ ಮಾಹಿತಿಗಳು ಮತ್ತು ಬ್ಯಾಂಕ್ ವಿವರಗಳು, ಅಕೌಂಟ್ ನಂಬರ್ ಗಳು, ಪಾಸ್‌ವರ್ಡ್‌ಗಳು ಮುಂತಾದ ಡೇಟಾ ಸುರಕ್ಷಿತವಾಗಿರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ಡೇಟಾ ವಂಚಕರ ಕೈಗೆ ಸೇರಿದರೆ ಅವರು ಅದನ್ನು ದುರುಪಯೋಗಪಡಿಸಿಕೊಳ್ಳಲು ಹಿಂಜರಿಯುವುದಿಲ್ಲ. ಆದರೆ ಚಿಂತಿಸಬೇಡಿ! ನಿಮ್ಮ ಖಾತೆಯನ್ನು ವಂಚಕರಿಂದ ಸುರಕ್ಷಿತವಾಗಿರಿಸುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯ ಪಾಸ್‌ವರ್ಡ್ ಫೂಲ್‌ಪ್ರೂಫ್ ಆಗಿದೆ ಎಂದು ನೀವು ಖಚಿತಪಡಿಸಿಕೊಂಡಿದ್ದೀರಾ? ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳಲು ಮುಂದೆ ಓದಿ.

How to Secure Your Flipkart Account

ನೀವು ಫ್ಲಿಪ್ ಕಾರ್ಟ್ನಲ್ಲಿ ಆಗಾಗ್ಗೆ ಶಾಪಿಂಗ್ ಮಾಡುವ ಆನ್‌ಲೈನ್ ಶಾಪರ್‌ ಆಗಿದ್ದರೆ, ಸುಲಭ ಮತ್ತು ಅನುಕೂಲಕರ ವಹಿವಾಟುಗಳಿಗಾಗಿ ಆನ್‌ಲೈನ್‌ನಲ್ಲಿ ನಿಮ್ಮ ಬ್ಯಾಂಕ್ ವಿವರಗಳನ್ನು ನಮೂದಿಸಿರಬಹುದು ಮತ್ತು ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿರಬಹುದು. ಹಾಗೆ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ, ನಿಮ್ಮ ಗೌಪ್ಯ ಬ್ಯಾಂಕ್ ವಿವರಗಳನ್ನು ಮತ್ತು ಪಾಸ್‌ವರ್ಡ್‌ಗಳನ್ನು ವಂಚಕರ ಕಣ್ಣುಗಳಿಂದ ರಕ್ಷಿಸಲು ನೀವು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಆನ್‌ಲೈನ್ ನಲ್ಲಿ ಸುರಕ್ಷಿತ ಮತ್ತು ಅಡೆತಡೆಗಳಿಲ್ಲದ ಶಾಪಿಂಗ್ ಮಾಡಲು ನೀವು ಫ್ಲಿಪ್‌ಕಾರ್ಟ್‌ಗೆ ಲಾಗಿನ್ ಆದಾಗ, ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ನೀವು ಎಲ್ಲ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಮಾರ್ಗದರ್ಶಿ ಸೂತ್ರಗಳ ಸಮಗ್ರ ಪಟ್ಟಿ ಇಲ್ಲಿದೆ:

  1. ನಿಮ್ಮ ಫ್ಲಿಪ್‌ಕಾರ್ಟ್ ಮೊಬೈಲ್ ಅಪ್ಲಿಕೇಶನ್ ಅನ್ನು iOSನಲ್ಲಿನ ಇತ್ತೀಚಿನ ಆವೃತ್ತಿ(ವರ್ಷನ್)ಗೆ ಅಥವಾ ಆಂಡ್ರಾಯ್ಡ್ಗೆ ಅಪ್ಡೇಟ್ ಮಾಡಿ
  2. ನಿಮ್ಮ ನೋಂದಾಯಿತ ಇಮೇಲ್ ಮತ್ತು / ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಜೊತೆಗೆ ಪಾಸ್‌ವರ್ಡ್‌ ಬಳಸಿ ಡೆಸ್ಕ್‌ಟಾಪ್, ಆಪ್ ಅಥವಾ ಎಂ-ಸೈಟ್‌ನಲ್ಲಿ ನಿಮ್ಮ ಫ್ಲಿಪ್‌ಕಾರ್ಟ್ ಖಾತೆಗೆ ನೀವು ಲಾಗ್ ಇನ್ ಆಗಬಹುದು.
  3. ನೀವು ಸರಿಯಾದ ಫ್ಲಿಪ್‌ಕಾರ್ಟ್ ಸೈಟ್‌ಗೆ ಲಾಗ್ ಇನ್ ಆಗುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಡೆಸ್ಕ್‌ಟಾಪ್ / ಲ್ಯಾಪ್‌ಟಾಪ್‌ನಲ್ಲಿ ವೆಬ್ ಬ್ರೌಸರ್ ಬಳಸಿ ಅಥವಾ ಫ್ಲಿಪ್‌ಕಾರ್ಟ್ ಎಂ-ಸೈಟ್‌ಗೆ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ನಂತಹ ಮೊಬೈಲ್ ಸಾಧನವನ್ನು ಬಳಸಿಕೊಂಡು ನಿಮ್ಮ ಫ್ಲಿಪ್‌ಕಾರ್ಟ್ ಖಾತೆಗೆ ಲಾಗ್ ಇನ್ ಆಗುತ್ತಿದ್ದರೆ, ನೀವು ಖಚಿತಪಡಿಸಿಕೊಳ್ಳಬೇಕಾದ URL https://www.flipkart.com.
    ನಿಮ್ಮ URL ನಲ್ಲಿ “https” ಗಾಗಿ ಹುಡುಕುವುದು ಬಹಳ ಮುಖ್ಯ, ಏಕೆಂದರೆ ಇದರರ್ಥ ವೆಬ್‌ಸೈಟ್ ಮಾನ್ಯ ಮಾಡಲ್ಪಟ್ಟ ಭದ್ರತಾ ಪ್ರಮಾಣಪತ್ರವನ್ನು ಹೊಂದಿದೆ ಆದ್ದರಿಂದ ವಿಶ್ವಾಸಾರ್ಹವಾಗಿದೆ. ಕೆಲವು ಬ್ರೌಸರ್‌ಗಳಲ್ಲಿ, ಸೈಟ್ ಸುರಕ್ಷಿತವಾಗಿದೆ ಎಂದು ಸೂಚಿಸಲು ಅಡ್ರೆಸ್ ಬಾರ್ “ಕ್ಲೋಸ್ಡ್ ಲಾಕ್” ಚಿಹ್ನೆಯನ್ನು ತೋರಿಸಬಹುದು. ಹಲವಾರು ನಕಲಿ ವೆಬ್‌ಸೈಟ್‌ಗಳು ಬಳಕೆದಾರರನ್ನು ದಾರಿ ತಪ್ಪಿಸಲು ಮತ್ತು ಅವರ ಡೇಟಾ ಕದಿಯಲು ನಮ್ಮ ಅನುಮತಿಯಿಲ್ಲದೆ ಫ್ಲಿಪ್‌ಕಾರ್ಟ್ ನ ಅಧಿಕೃತ ಲೋಗೊ ಗಳನ್ನು ಕಾನೂನುಬಾಹಿರವಾಗಿ ಬಳಸುತ್ತವೆ, ಆದ್ದರಿಂದ ನೀವು ನಿಮ್ಮ ಫ್ಲಿಪ್‌ಕಾರ್ಟ್ ಖಾತೆಗೆ ಸೈನ್ ಇನ್ ಮಾಡುವ ಮೊದಲು ಈ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಈ ವಂಚಕರ ವಿರುದ್ಧ ಕಾನೂನುಬದ್ಧ ಕ್ರಮ ತೆಗೆದುಕೊಳ್ಳಲು ನಾವು ಕಾನೂನು ಜಾರಿಗೊಳಿಸುವ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಈ ಮಧ್ಯೆ, ನೀವು ಸ್ವಲ್ಪ ಎಚ್ಚರಿಕೆ ವಹಿಸಿದರೆ ನಿಮ್ಮ ಶಾಪಿಂಗ್ ಅನುಭವ ಆಹ್ಲಾದಕರ ಮತ್ತು ಸುರಕ್ಷಿತವಾಗಿರುತ್ತದೆ.
  4. ಸ್ಟ್ರಾಂಗ್ ಪಾಸ್ ವರ್ಡ್ ಅನ್ನು ಸೆಟ್ ಮಾಡಿ. ನಿಮ್ಮ ಪಾಸ್‌ವರ್ಡ್ ಅನ್ನು ಫೂಲ್-ಪ್ರೂಫ್ ಮಾಡುವುದು ಮತ್ತು ವಂಚಕರಿಗೆ ಊಹಿಸಲು ಕಷ್ಟವಾಗುವಂತೆ ಮಾಡುವುದು ಸಹ ಮುಖ್ಯ. ನೀವು ಅದನ್ನು ಹೀಗೆ ಮಾಡಬಹುದು:

ನಿಮ್ಮ ಫ್ಲಿಪ್‌ಕಾರ್ಟ್ ಖಾತೆ ಸುರಕ್ಷಿತಗೊಳಿಸುವುದು ಹೇಗೆ - ಈ ಸಲಹೆಗಳನ್ನು ಅನುಸರಿಸಿ

  • ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರ್ ಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರ(ಸ್ಪೆಷಲ್ ಕ್ಯಾರೆಕ್ಟರ್ )ಗಳನ್ನು ಹೊಂದಿರುವ ಸ್ಟ್ರಾಂಗ್ ಪಾಸ್‌ವರ್ಡ್ ಅನ್ನು ಆಯ್ಕೆಮಾಡಿ
  • ನಿಮ್ಮ ಫ್ಲಿಪ್‌ಕಾರ್ಟ್ ಪಾಸ್‌ವರ್ಡ್ ಅನ್ನು ಬೇರೆ ಯಾವುದೇ ಖಾತೆಗೆ ಬಳಸಬೇಡಿ
  • ನಿಮ್ಮ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
  • ಅದನ್ನು ಎಲ್ಲಿಯೂ ಬರೆಯಬೇಡಿ
  • ಪಾಸ್‌ವರ್ಡ್ ಗಳನ್ನು ಇಮೇಲ್ / ವಾಟ್ಸಾಪ್ / SMS ಮೂಲಕ ಎಂದಿಗೂ ಹಂಚಿಕೊಳ್ಳಬೇಡಿ
  • ಪ್ರತಿ ತಿಂಗಳು ತಪ್ಪದೇ ನಿಮ್ಮ ಪಾಸ್‌ವರ್ಡ್ ಬದಲಾಯಿಸಿ. ಹಳೆಯ ಪಾಸ್‌ವರ್ಡ್‌ಗಳನ್ನು ಎಂದಿಗೂ ಮರುಬಳಕೆ ಮಾಡಬೇಡಿ
  • ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಅಥವಾ ಹುಟ್ಟಿದ ದಿನಾಂಕವನ್ನು ನಿಮ್ಮ ಪಾಸ್‌ವರ್ಡ್ ಆಗಿ ಬಳಸಬೇಡಿ
  • ನಿಮ್ಮ ಪಾಸ್‌ವರ್ಡ್ ನಿಮಗೆ ನೆನಪಿಲ್ಲದಿದ್ದರೆ, ಅದನ್ನು ಮರಳಿ ಪಡೆಯಲು ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಅಥವಾ ಆಪ್ ನಲ್ಲಿನ “ಫರ್ಗಾಟ್ ಪಾಸ್‌ವರ್ಡ್” ಆಯ್ಕೆಯನ್ನು ಬಳಸಿ. ನಿಮ್ಮ ಖಾತೆಗೆ ಮರಳಿ ಪ್ರವೇಶವನ್ನು ಪಡೆಯಲು ಇದು ಅತ್ಯಂತ ಸುರಕ್ಷಿತ ವಿಧಾನವಾಗಿದೆ
  • ನೀವು ಸಾರ್ವಜನಿಕ ಕಂಪ್ಯೂಟರ್‌ಗಳಿಂದ ಅಥವಾ ಬೇರೊಬ್ಬರ ಮೊಬೈಲ್ ಡಿವೈಸ್ ನಿಂದ ಫ್ಲಿಪ್‌ಕಾರ್ಟ್‌ಗೆ ಲಾಗ್ ಇನ್ ಆಗುತ್ತಿದ್ದರೆ, “ರಿಮೆಂಬರ್ ಮಿ” ಬಾಕ್ಸ್ ಅನ್ನು ಅನ್ ಚೆಕ್ ಮಾಡಿದೆ ಎಂದು ಖಚಿತಪಡಿಸಿಕೊಳ್ಳಿ </ em>
  • ನಿಮ್ಮ ಖಾತೆಯನ್ನು ಮರಳಿ ಪಡೆಯಲು ನೀವು ಸ್ವೀಕರಿಸುವ ಯಾವುದೇ OTPಯನ್ನು (ಒನ್ ಟೈಮ್ ಪಾಸ್‌ವರ್ಡ್‌ಗಳು) ಯಾರೊಂದಿಗೂ ಹಂಚಿಕೊಳ್ಳಬೇಡಿ
  • ನೀವು ಸೈಬರ್-ಕೆಫೆ ಅಥವಾ ಸಾರ್ವಜನಿಕ ಇಂಟರ್ನೆಟ್ ಬ್ರೌಸಿಂಗ್ ಕೇಂದ್ರದಲ್ಲಿರುವ ಕಂಪ್ಯೂಟರ್‌ನಿಂದ ಅಥವಾ ನಿಮ್ಮ ಆಫೀಸ್ ಕಂಪ್ಯೂಟರ್‌ನಿಂದ ಫ್ಲಿಪ್‌ಕಾರ್ಟ್‌ಗೆ ಲಾಗ್ ಇನ್ ಆಗುತ್ತಿದ್ದರೆ, ನಿಮ್ಮ ಖಾತೆಯಿಂದ ನೀವು ಲಾಗ್ ಔಟ್ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ನಿಮ್ಮ ಬ್ರೌಸರ್ ಸಂಗ್ರಹ(ಕ್ಯಾಶೆ) ವನ್ನು ಕ್ಲಿಯರ್ ಮಾಡಿ ಮತ್ತು ನೀವು ಹೊರಡುವ ಮೊದಲು ಬ್ರೌಸರ್ ವಿಂಡೋ ಮುಚ್ಚಿ. ನಿಮ್ಮ ಮೇಜಿನಿಂದ ನೀವು ದೂರದಲ್ಲಿರುವಾಗ, ನಿಮ್ಮ ಡೆಸ್ಕ್‌ಟಾಪ್ ಅನ್ನು ಲಾಕ್ ಮಾಡಲು ಮರೆಯದಿರಿ
  • ನಿಮ್ಮ ಮೊಬೈಲ್ ಫೋನ್‌ಗಳನ್ನು ಯಾವಾಗಲೂ PIN ಕೋಡ್ ಲಾಕ್‌ಗಳು, ಫಿಂಗರ್‌ಪ್ರಿಂಟ್ ಲಾಕ್‌ಗಳು ಅಥವಾ ಟಚ್‌ID (ಐಫೋನ್ ಬಳಕೆದಾರರಿಗಾಗಿ) ನೊಂದಿಗೆ ಲಾಕ್ ಮಾಡಿ, ಏಕೆಂದರೆ ನಿಮ್ಮ ಫೋನ್‌ನಲ್ಲಿ ಫ್ಲಿಪ್‌ಕಾರ್ಟ್ ಆಪ್ ಸೇರಿದಂತೆ ಪ್ರಮುಖ ಆಪ್ ಗಳಿಗೆ ವಂಚಕರು ಪ್ರವೇಶಿಸುವುದನ್ನು ಇದು ತಡೆಯುತ್ತದೆ.
  • ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ ಅಥವಾ CVV (ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ) ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಧಿಕೃತ ಫ್ಲಿಪ್‌ಕಾರ್ಟ್ ಏಜೆಂಟರು ನಿಮಗೆ ಎಂದಿಗೂ ಕರೆ ಮಾಡಿ ಈ ವಿವರಗಳನ್ನು ಕೇಳುವುದಿಲ್ಲ. </ li>

ನಿಮ್ಮ ಫ್ಲಿಪ್‌ಕಾರ್ಟ್ ಖಾತೆಗೆ ಲಾಗಿನ್ ಆಗಲು ಸಾಧ್ಯವಿಲ್ಲವೇ? ಭಯಪಡಬೇಡಿ! ಏನು ಮಾಡಬೇಕೆಂಬುದು ಇಲ್ಲಿದೆ

ನಿಮ್ಮ ಡೇಟಾ ಮತ್ತು ಪ್ರವೇಶ ವಿವರಗಳನ್ನು ಸುರಕ್ಷಿತವಾಗಿರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಿಮ್ಮ ಪಾಸ್‌ವರ್ಡ್ ಅನ್ನು ನವೀಕರಿಸಲು( ಅಪ್ಡೇಟ್ ಮಾಡಲು) ನೀವು ಮರೆತರೂ ಸಹ, ಅದನ್ನು ನವೀಕರಿಸಲು ನಾವು ನಿಮಗೆ ನೆನಪಿಸುತ್ತೇವೆ. ಆದ್ದರಿಂದ, ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯನ್ನು ಸುರಕ್ಷಿತವಾಗಿರಿಸಲು, ನೀವು ಪಾಸ್‌ವರ್ಡ್ ಅನ್ನು ನವೀಕರಿಸಿಕೊಳ್ಳಲು ಕಾಲಕಾಲಕ್ಕೆ ನಿಮ್ಮನ್ನು ಕೇಳಲಾಗುವುದು.

  • ನಿಮ್ಮ ಹಳೆಯ ಪಾಸ್‌ವರ್ಡ್ ಬಳಸಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ನೀವು ಕಂಡುಕೊಂಡರೆ, ನಿಮ್ಮ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡಲು “ಫರ್ಗಾಟ್ ಪಾಸ್‌ವರ್ಡ್ ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. </ li>
  • ನಿಮ್ಮ ಎಲ್ಲಾ ಆರ್ಡರ್ ಗಳ ಗೌಪ್ಯತೆ ಮತ್ತು ಖಾತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಫ್ಲಿಪ್‌ಕಾರ್ಟ್ ಲಾಗಿನ್ ಕ್ರೆಡೆನ್ಷಿಯಲ್ ಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳುತ್ತಿಲ್ಲ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ಗಮನಿಸಿ: ನಿಮಗೆ ಅನೇಕ ಬಾರಿ OTPಗಳು ಅಥವಾ “ಫರ್ಗಾಟ್ ಪಾಸ್‌ವರ್ಡ್ ” ವಿನಂತಿಗಳು ಬಂದರೆ, ಯಾರಾದರೂ ನಿಮ್ಮ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸುವ ಸಾಧ್ಯತೆ ಇದೆ. ಸ್ಟ್ರಾಂಗ್ ಪಾಸ್‌ವರ್ಡ್‌ನೊಂದಿಗೆ ಅದನ್ನು ಸುರಕ್ಷಿತಗೊಳಿಸಲು ಮರೆಯದಿರಿ.


ನಿಮ್ಮ ಖಾತೆಯನ್ನು ಕಾಂಪ್ರೊಮೈಸ್ ಮಾಡಲಾಗಿದೆ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ಸಾಧ್ಯವಿಲ್ಲ ಎಂದು ನೀವು ಅನುಮಾನಿಸಿದರೆ, ದಯವಿಟ್ಟು ಸಂಪರ್ಕದಲ್ಲಿರಿ ಫ್ಲಿಪ್‌ಕಾರ್ಟ್ ಹೆಲ್ಪ್ ಸೆಂಟರ್ ನೊಂದಿಗೆ ಅಥವಾ ಇವರನ್ನು ತಲುಪಿ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್ > ಸಮಸ್ಯೆಯನ್ನು ರಿಪೋರ್ಟ್ ಮಾಡಿ.

ನಿಮ್ಮ ಬ್ಯಾಂಕಿಂಗ್ ಡೇಟಾದ ಯಾವುದೇ ಕಾಂಪ್ರೊಮೈಸ್ ಅನ್ನು ರಿಪೋರ್ಟ್ ಮಾಡಲು (ಅಂದರೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ), ದಯವಿಟ್ಟು ನಿಮ್ಮ ಬ್ಯಾಂಕಿನ ಕಸ್ಟಮರ್ ಸಪೋರ್ಟ್ ಸಹಾಯವಾಣಿಯನ್ನು ಸಂಪರ್ಕಿಸಿ.

ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯನ್ನು ಸುರಕ್ಷಿತವಾಗಿರಿಸುವುದು ಮನಶ್ಶಾಂತಿಯನ್ನು ಆನಂದಿಸಲು ಅಗತ್ಯವಾದ ಹೆಜ್ಜೆಯಾಗಿದೆ. ನಿಮ್ಮ ಪ್ರೀತಿಪಾತ್ರರು ಮತ್ತು ಸ್ನೇಹಿತರು ಸುರಕ್ಷಿತವಾಗಿ ಶಾಪಿಂಗ್ ಮಾಡಲು ಸಹಾಯವಾಗಲೆಂದು ಈ ಲೇಖನವನ್ನುಅವರ ಜೊತೆ ಹಂಚಿಕೊಳ್ಳಿ(ಶೇರ್ ಮಾಡಿ).
ಇದನ್ನೂ ಓದಿ: ಸ್ಕ್ಯಾಮ್ ಸಲಹೆ – ಮೋಸದ ತಾಣಗಳ ಬಗ್ಗೆ ಎಚ್ಚರವಹಿಸಿ ಮತ್ತು ಫ್ಲಿಪ್‌ಕಾರ್ಟ್ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ನಕಲಿ ಕೊಡುಗೆಗಳು

Enjoy shopping on Flipkart