ಇಂದಿನ ಆಧುನಿಕ ಭಾರತದಲ್ಲಿ ಸ್ವಾತಂತ್ರ್ಯ – ಉದ್ಯಮಿ ಬಿಟ್ಟು ದತ್ತ ಅವರ ಕತೆ

Read this article in বাংলা | English | தமிழ் | ગુજરાતી | मराठी | हिन्दी | తెలుగు

ಭಾರತದಲ್ಲಿ ಬಿಟ್ಟು ದತ್ತ ಅವರಂತಹ ಉದ್ಯಮಿಗಳು ಸಮುದಾಯದ ಸ್ತಂಭಗಳು ಮತ್ತು ಉದಯೋನ್ಮುಖ ತಾರೆಗಳೂ ಸಹ ಆಗಿದ್ದಾರೆ. ಶಾಲೆಯ ವಿದ್ಯಾಭ್ಯಾಸ ಮುಗಿದ ತಕ್ಷಣ ಬಿಟ್ಟು ಗಿರಾಕಿ ಬಯಸಿದಂತೆ ತಯಾರಿಸುವ ಹತ್ತಿ ಮತ್ತು ರೇಷ್ಮೆ ಸೀರೆಗಳ ತಮ್ಮ ಕುಟುಂಬದ ವ್ಯಾಪಾರವನ್ನು ಬೆಳೆಸುವುದರ ಜೊತೆಗೆ ಇತರ ಫ್ಲಿಪ್ಕಾರ್ಟ್‌ನಲ್ಲಿ ೩೦೦ಕ್ಕೂ ಹೆಚ್ಚು ಜನಾಂಗೀಯ ಉಡುಪುಗಳವರೆಗೆ ಪಟ್ಟಿಯನ್ನು ಬೆಳೆಸಿದರು. ಅವರ ಯಶಸ್ಸಿನ ಕತೆ ಬೆಳಗುವುದಕ್ಕೆ ಮುನ್ನ ಹೇಗೆ ಸಾಮಾನ್ಯವಾದ ಆರಂಭ ಹೊಂದಿತ್ತೆಂದು ತಿಳಿಯಲು ಮುಂದೆ ಓದಿ.

India

ಭಾರತದಲ್ಲಿ ಕುಶಲಕರ್ಮಿಗಳು ಮತ್ತು ನೇಕಾರ ಸಮುದಾಯಗಳು ದೇಶವಿಡಿ ಹರಡಿಕೊಂಡಿದ್ದಾರೆ ಮತ್ತು ಶತಮಾನಗಳಷ್ಟು ಹಿಂದಿನ ಪರಂಪರೆಯನ್ನು ತಮ್ಮ ಹತ್ತಿರ ಹೊಂದಿದ್ದಾರೆ. ತಮ್ಮ ತಂದೆತಾಯಿಯಂದಿರು ಮತ್ತು ಅಜ್ಜ-ಅಜ್ಜಿಯರಿಂದ ಕಲಿತು, ಈ ಪ್ರತಿಭಾವಂತ ವ್ಯಕ್ತಿಗಳು ಹಾಗು ಕುಟುಂಪಗಳು ತಮ್ಮ ಜೀವನೋಪಾಯಕ್ಕಾಗಿ ತಮ್ಮ ಕೈಕಸುಬನ್ನು ಅವಲಂಬಿಸಿದ್ದಾರೆ. ಆದರೆ ಭಾರತಕ್ಕೆ ಇದು ಸಂಸ್ಕೃತಿ ಮತ್ತು ಪೂರ್ವಜರ ಆಸ್ತಿಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ದಾಟಿಸುವ ಕರ್ತವ್ಯವಾಗಿದೆ. ಭಾರತದಲ್ಲಿ ಕುಶಲಕರ್ಮಿಗಳು ಈ ಜವಾಬ್ದಾರಿಯನ್ನು ಯಾವಾಗಲೂ ಹೊತ್ತಿದ್ದಾರೆ ಮತ್ತು ತಮ್ಮ ಕೌಶಲ್ಯದ ಬಗ್ಗೆ ಹೆಮ್ಮೆಪಡುತ್ತಾರೆ. ಬಿಟ್ಟು ದತ್ತ ಅಂತಹ ಕೆಲವೇ ಪ್ರತಿಭಾವಂತರಲ್ಲಿ ಒಬ್ಬರಾಗಿದ್ದು ಪಶ್ಚಿಮ ಬಂಗಾಳದ ನಾದಿಯ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇವರು ಕೈಮಗ್ಗ ಮತ್ತು ವಿದ್ಯುಚ್ಚಾಲಿತ ಮಗ್ಗದ ಹತ್ತಿ ಸೀರೆಗಳಲ್ಲಿ ನಿಷ್ಣಾತರು ಮತ್ತು ತಮ್ಮ ಕುಟುಂಬದ ವ್ಯಾಪಾರದ ಆಡಳಿತ ಸೂತ್ರವನ್ನು ಹಿಡಿದಿರುವ ಮುಂದಿನ ಪೀಳಿಗೆಯ ಉದ್ಯಮಿಯಾಗಿದ್ದಾರೆ.
ತಮ್ಮ ತಂದೆಯವರಿಂದ ವ್ಯಾಪಾರವನ್ನು ೨೦೧೩ರಲ್ಲಿ ವಹಿಸಿಕೊಂಡು ಅಡಗಿರುವ ಸಾಮರ್ಥ್ಯವನ್ನು ಬೇಗನೆ ಗುರುತಿಸಿ ತಮ್ಮ ಮುಂದೆ ಇದ್ದ ಅವಕಾಶಗಳ ಲಾಭ ಪಡೆದುಕೊಂಡರು. ಅವರ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಅವರು ಫ್ಲಿಪ್ಕಾರ್ಟ್‌ನ ಸಮರ್ಥ ಕಾರ್ಯಕ್ರಮದ ಜೊತೆ ಪಾಲುದಾರರಗಿ ಈಗ ದತ್ತ ಸ್ಯಾರಿ ಘರ್‌ ಅನ್ನು ಆನ್ಲೈನ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಬಿಟ್ಟು ದತ್ತ ಅವರಂತಹ ವ್ಯಾಪಾರಿಗಳಿಗೆ ೨೦೧೯ರಲ್ಲಿ ಫ್ಲಿಪ್ಕಾರ್ಟ್‌ ಶುರುಮಾಡಿದ ಸಮರ್ಥ್ ಕಾರ್ಯಕ್ರಮವು ದೊಡ್ಡ ಬದಲಾವಣೆಗೆ ನಾಂದಿಯಾಯಿತು.

ಅದು ಭಾರತದಲ್ಲಿರುವ ಇಂತಹ ಉದ್ಯಮಗಳಿಗೆ ತಮ್ಮ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವ ಅವಕಾಶವನ್ನು ಕಲ್ಪಿಸಿತು. ಜೊಗೆತೆ, ಕುಶಲಕರ್ಮಿಗಳು, ನೇಕಾರರು ಮತ್ತು ಇತರರನ್ನು ಒಳಗೊಂಡಂತೆ ಸ್ಥಳೀಯ ಕೆಲಸಗಾರರ ಸಬಲೀಕರಣಕ್ಕೆ ಅನುಕೂಲ ಮಾಡಿತು. ಅಲ್ಲದೆ, ಇವರು ವಿದ್ಯುನ್ಮಾನ ವಾಣಿಜ್ಯವನ್ನು ಗರಿಷ್ಠ ಮಟ್ಟಕ್ಕೆ ಅಳವಡಿಸಿಕೊಳ್ಳಲು ಅವಕಾಶ ನೀಡಿತು. ಈ ಕಾರ್ಯಕ್ರಮವನ್ನು ಶುರುಮಾಡಿದಾಗಿನಿಂದ ಇದು ಐದು ಪಟ್ಟು ವೃದ್ಧಿಯಾಗಿದ್ದು ಇಂದು ೧.೫ ದಶಲಕ್ಷ ಮನೆತನಗಳ ಮೇಲೆ ಪ್ರಭಾವ ಬೀರುತ್ತಿದೆ. ಸಮರ್ಥ್‌ನ ಪಾಲುದಾರರನ್ನು ಪ್ರದರ್ಶಿಸುವ ʼಭಾರತದಿಂದ ತಯಾರಾದದ್ದುʼ ಎಂಬ ಮಾರಾಟಕ್ಕೆ ಮುಂಚೆ, ಬಿಟ್ಟು ದತ್ತ ಇನ್ನೊಂದು ಸಮೃದ್ಧವಾದ ಅವಧಿಯನ್ನು ಸ್ವಾಗತಿಸುವುದಕ್ಕೆ ಸಿದ್ಧರಾಗಿದ್ದಾರೆ.

ಬಿಟ್ಟು ಯಾವ ರೀತಿಯಲ್ಲಿ ಕುಟುಂಬದ ವ್ಯಾಪಾರಕ್ಕೆ ಧುಮುಕಿದರು ಮತ್ತು ಅದನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು ಎಂದು ತಿಳಿಯಲು ಇನ್ನೂ ಓದಿ.

ವಾಣಿಜ್ಯೋದ್ಯಮ – ಒಬ್ಬ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಪ್ರವೇಶಪತ್ರ

ಒಂದು ವ್ಯಾಪಾರವನ್ನು ನಡೆಸುವುದೆಂದರೆ ಬೇರೆಬೇರೆಯವರಿಗೆ ಬೇರೆಬೇರೆ ಅರ್ಥಕೊಡುತ್ತದೆ. ಬಿಟ್ಟು ದತ್ತರವರಿಗೆ ಅದು ಕೊಡುವ ಅರ್ಥ ಸ್ವಾತಂತ್ರ್ಯ. ಅವರು ಶಾಲೆಯಲ್ಲಿದ್ದ ಮೊದಲಿನ ವರ್ಷಗಳಿಂದಲೂ ವಾಣಿಜ್ಯೋದ್ಯಮದ ಶಕ್ತಿಯನ್ನು ಅರಿತಿದ್ದರು. ಒಬ್ಬ ವಾಣಿಜ್ಯೋದ್ಯಮಿಯಾಗಿ ತನ್ನದೇ ವ್ಯಾಪಾರವನ್ನು ನಡೆಸುವುದಕ್ಕಿಂತ ಮಿಗಿಲಾದ ಬೇರೆ ಯಾವ ಸ್ವಾತಂತ್ರ್ಯವೂ ಇಲ್ಲ ಎಂದು ಅವರು ನಂಬಿದ್ದಾರೆ. ಇದು ನಿಜವೇ, ಏಕೆಂದರೆ ಅವರ ಪಯಣದ ದಾರಿ ಅವರ ಹಿಡಿತದಲ್ಲಿದೆ ಮತ್ತು ಅವರದೇ ಅರ್ಹತೆಯಿಂದ ಅವರು ತಮ್ಮ ಹಣಕಾಸಿನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬಲ್ಲವರಾಗಿದ್ದಾರೆ.

ಇವತ್ತು, ಅವರು ತಮ್ಮ ಬಾಲ್ಯದಿಂದಲೂ ಕಾತರರಾಗಿದ್ದ ಸ್ವಾತಂತ್ರ್ಯವನ್ನು ತಾವು ಕುಟುಂಬದ ವ್ಯಾಪಾರವನ್ನು ನಡೆಸುವುದರಿಂದ ದೊರೆತಿದೆ ಎಂದು ಮನಗಂಡಿದ್ದಾರೆ. ಆದರೆ, ಬಿಟ್ಟು ಅವರಿಗೆ ಇದು ಆರಂಭವಷ್ಟೆ. ದೀರ್ಘಾವಧಿಯ ಪ್ರಯಾಣಕ್ಕೆ ಬೆಳವಣಿಗೆ ಅವರ ಗುರಿ, ಮತ್ತು ಅವರು ಹಿಂದೆ ೨೦೧೩ರಲ್ಲಿ ವ್ಯಾಪಾರವನ್ನು ವಹಿಸಿಕೊಂಡಾಗಿನಿಂದ ಆ ಧ್ಯೇಯಕ್ಕೆ ಬದ್ಧರಾಗಿದ್ದಾರೆ. ಅವರು ಚಿಕ್ಕದಾಗಿ ಮನೆಯಲ್ಲಿ ಅಂಗಡಿ ಮುಂಭಾಗದಿಂದ ಆರಂಭಿಸಿದರು. ಇಂದು ಅವರು ಫ್ಲಿಪ್ಕಾರ್ಟ್‌ನ ಸಮರ್ಥ್‌ ಪಾಲುದಾರರಾಗಿ ೩೦೦ರಕ್ಕೂ ಹೆಚ್ಚು ವಸ್ತುಗಳ ಪಟ್ಟಿ ಹೊಂದಿದ್ದಾರೆ.

ಅವರು ಪ್ರಸ್ತುತಪಡಿಸುವ ಉತ್ಪನ್ನಗಳು ನಾಜೂಕಾಗಿ ಕೈಯಿಂದ ನೇಯ್ದ ಹತ್ತಿ ಮತ್ತು ರೇಶ್ಮೆ ಸೀರೆಗಳಿಂದ ಹಿಡಿದು ಇತರ ಜನಾಂಗೀಯ ಉಡುಪುಗಳವರೆಗೆ ವಿಸ್ತರಿಸಿದ್ದು ಭಾರತದಾದ್ಯಂತ ಅಂಗಡಿಯವರ ಬೇಡಿಕೆಯನ್ನು ಪೂರೈಸುವಷ್ಟು ಭಾರಿ ಪ್ರಮಾಣದಲ್ಲಿ ತಯಾರಾಗುತ್ತವೆ. ಬಿಟ್ಟು ಸುಮಾರು ೨೫ ನೇಕಾರರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಅವರೆಲ್ಲರೂ ಬಿಟ್ಟು ಅವರ ಸ್ಥಳೀಯ ಸಮುದಾಯದ ಉದ್ದಗಲಕ್ಕೂ ಹರಡಿಕೊಂಡಿರುವವರು ಮತ್ತು ಅತ್ಯಂತ ಉನ್ನತ ಗುಣಮಟ್ಟವನ್ನು ಕೊಡುವಂತೆ ತರಬೇತಾಗಿರುವವರು. ಬಿಟ್ಟು ದತ್ತ ನೇಕಾರರಿಗೆ ಸಮರ್ಥವಾಗಿ ಮಾರ್ಗದರ್ಶನ ನೀಡುವಷ್ಟು ಪ್ರಾಯೋಗಿಕ ಜ್ಞಾನ ಹೊಂದಿದ್ದಾರೆ.

ಸಮರ್ಥ್‌ಗೆ ಸೇರಿಕೊಂಡಿದ್ದು – ಒಂದು ಬದುಕು ಬದಲಿಸುವ ಪ್ರಯಾಣ

ಫ್ಲಿಪ್ಕಾರ್ಟ್‌ನ ಸಮರ್ಥ್‌ ಕಾರ್ಯಕ್ರಮದ ಆರಂಭದಿಂದಲೂ ಬಿಟ್ಟು ಅವರಂತಹ ವಾಣಿಜ್ಯೋದ್ಯಮಿಗಳು ಸ್ಥಳೀಯ ಕುಶಲಕರ್ಮಿಗಳಿಗೆ ಜೀವನೋಪಾಯವನ್ನು ಗಳಿಸಲು ಅವಕಾಶ ಮಾಡಿಕೊಟ್ಟಿದೆ. ಕುಶಲಕರ್ಮಿಗಳು ತಮ್ಮ ಕೌಶಲ್ಯಗಳನ್ನು ಉಳಿಸಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಲು ಸಹಾಯಮಾಡಿದೆ. ಸಮರ್ಥ್‌ ಕಾರ್ಯಕ್ರಮ ವಾಣಿಜ್ಯೋದ್ಯಮಿಗಳಿಗೂ ಸಹಾಯ ಮಾಡುತ್ತದೆ. “ನಾನು ಫ್ಲಿಪ್ಕಾರ್ಟ್‌ನಿಂದಾಗಿ ವಿದ್ಯುನ್ಮಾನ ವಾಣಿಜ್ಯದ ತೆಕ್ಕೆಗೆ ಅನಾಯಾಸವಾಗಿ ಪ್ರಯಾಣ ಬೆಳೆಸಿದೆ” ಎಂದು ನಗುತ್ತ ಬಿಟ್ಟು ಹೇಳಿದರು.

ತಮ್ಮ ವ್ಯಾಪಾರವನ್ನು ಆನ್ಲೈನ್‌ಗೆ ತೆಗೆದುಕೊಂಡು ಹೋದಾಗ ಆತಂಕದಲ್ಲಿದ್ದದ್ದನ್ನು ಬಿಟ್ಟು ನೆನಪಿಸಿಕೊಳ್ಳುತ್ತಾರೆ. ಅವರ ಅನಿಸಿಕೆಗಳು ಬೇಗನೆ ನಂಬಿಕೆ ಮತ್ತು ಹರ್ಷಕ್ಕೆ ಮಾರ್ಪಟ್ಟವು, ಏಕೆಂದರೆ ಅವರಿಗೆ ಫ್ಲಿಪ್ಕಾರ್ಟ್‌ನ ಲೆಕ್ಕಪತ್ರಗಳ ವ್ಯವಸ್ಥಾಪಕರು ಮತ್ತು ಇತರ ಸಿಬ್ಬಂದಿಯ ಸಹಾಯ ಹಸ್ತ ದೊರೆಯಿತು. ಇಂದು ಫ್ಲಿಪ್ಕಾರ್ಟ್‌ನಲ್ಲಿ ಅವರು ೩೦೦ರಕ್ಕೂ ಹೆಚ್ಚು ಪದಾರ್ಥಗಳು ಪಟ್ಟಿಮಾಡಲ್ಪಟ್ಟಿವೆ, ಮತ್ತು ಅವರು ತಮಗೆ ಯಾವಾಗಲೂ ಸಿಕ್ಕಿರುವ ಬೆಂಬಲದ ಬಗ್ಗೆ ಬಹಳ ಸಂತೋಷವಾಗಿದ್ದಾರೆ. ಫ್ಲಿಪ್ಕಾರ್ಟ್‌ ತಮ್ಮನ್ನು ಬೆಂಬಲಿಸುತ್ತದೆ ಎಂಬ ಆತ್ಮವಿಶ್ವಾಸ ಅವರಿಗೆ ಇದೆ.

ಈ ಆತ್ಮವಿಶ್ವಾಸವೇ ಮುಂಬರಲಿರುವ ʼಭಾರತದಿಂದ ತಯಾರಾದದ್ದುʼ ಎನ್ನುವ ಮಾರಾಟಕ್ಕೆ ಮುಂದೆ ಸಾಗಲು ಉತ್ತೇಜನ ನೀಡುತ್ತಿದೆ, ಮತ್ತು ಅವರು ಇದಕ್ಕಾಗಿ ಹಲವು ವಾರಗಳಿಂದ ತಯಾರಿ ನಡೆಸುತ್ತಿದ್ದಾರೆ. ಒಂದು ಕ್ಷಣದ ಸೂಚನೆಯ ಮೇರೆಗೆ ರವಾನಿಸಲು ದಾಸ್ತಾನು ಸಿದ್ಧವಾಗಿದ್ದು, ಅವರು ಫ್ಲಿಪ್ಕಾರ್ಟ್‌ ಸಮರ್ಥ್‌ ಕಾರ್ಯಕ್ರಮವನ್ನು ಇನ್ನೇನು ನಡೆಯಲಿರುವ ಬಿಗ್‌ ಬಿಲ್ಲಿಯನ್‌ ಡೇಸ್‌ ಸೇಲ್‌ನಷ್ಟೇ ಹುರುಪಿನಿಂದ ಎದುರು ನೋಡುತ್ತಿದ್ದಾರೆ.

ಬಿಟ್ಟು ದತ್ತ ಅವರಂತಹ ವಾಣಿಜ್ಯೋದ್ಯಮಿಗಳು ಅವರ ಯಶಸ್ಸಿನಿಂದ ಮಾತ್ರವಲ್ಲದೆ, ಭಾರತದಲ್ಲಿ ತಮ್ಮ ಸಮುದಾಯದ ಮೇಲೆ ಅವರು ಬೀರುವ ಪರಿಣಾಮದಿಂದಾಗಿ ಅವರು ಸ್ಫೂರ್ತಿದಾತರಾಗಿದ್ದಾರೆ. ನಾದಿಯ ಜಿಲ್ಲೆಯ ಕುಶಲಕರ್ಮಿಗಳಿಗೆ ಬಿಟ್ಟು ದತ್ತ ಆಶಾಕಿರಣವಾಗಿದ್ದಾರೆ. ಅವರು ಬೆಳವಣಿಗೆಯ ಬಗ್ಗೆ ಶ್ರದ್ಧೆ ವಹಿಸಿರುವುದರಿಂದ ನೇಕಾರರ ಜೀವನೋಪಾಯ ಸಾಗುತ್ತಿದೆ ಮತ್ತು ಫ್ಲಿಪ್ಕಾರ್ಟ್‌ ಅವರ ಬೆಂಬಲಕ್ಕಿರುವಾಗ ಅವರು ಶ್ರೇಷ್ಠತೆಯನ್ನು ಸಾಧಿಸಲು ಅಣಿಯಾಗಿದ್ದಾರೆ.

ಭಾರತದಲ್ಲಿ ಇಂತಹ ಇನ್ನೂ ಅನೇಕ ಕತೆಗಳನ್ನು ಓದಲು ಇಲ್ಲಿ ಒತ್ತಿ .

Enjoy shopping on Flipkart