ಆಶಿಶ್ ಕುಕ್ರೇಜ ಅವರದು ʼಮೇಕ್ ಇನ್ ಇಂಡಿಯʼವಿನ ಯಶಸ್ಸಿನ ಕತೆ! ಮನೆಯಲ್ಲಿ ತಮ್ಮ ಹೆಂಡತಿ ಮತ್ತು ತಾಯಿಯ ಬೆಂಬಲದೊಂದಿಗೆ ನಡೆಸುತ್ತಿದ್ದ ಒಂದು ಸಣ್ಣ ವ್ಯಾಪಾರ ದಿಂದ ೫೦ ಕೋಟಿಯಷ್ಟು ವಹಿವಾಟಿಗೆ ಅವರ ವ್ಯಾಪಾರ ಬೆಳೆಯಿತು. ಈ ಫ್ಲಿಪ್ಕಾರ್ಟ್ ಮಾರಾಟಗಾರ ತಮ್ಮ ಕನಸನ್ನು ಹೇಗೆ ನನಸಾಗಿಸಿದರೆಂದು ತಿಳಿಯಲು ಓದಿ. ಈಗ ಅವರು ತಮ್ಮ ಪರಿಸರ ಸ್ನೇಹಿಯಾಗುವ ಉಪಕ್ರಮಗಳಿಂದ ಸಮಾಜಕ್ಕೆ ಮರುಪಾವತಿಸುತ್ತಿದ್ದಾರೆ.
ʼಮೇಕ್ ಇನ್ ಇಂಡಿಯʼ ಎಂಬ ಮಂತ್ರದಿಂದ ಪ್ರೇರಿತರಾಗಿ, ವ್ಯಾಪಾರದ ಮಾಲೀಕರಾದ ಮತ್ತುಫ್ಲಿಪ್ಕಾರ್ಟ್ ಮಾರಾಟಗಾರರಾದ ಆಶಿಶ್ ಕುಕ್ರೇಜ ದೊಡ್ಡದಾಗಿ ಕನಸು ಕಂಡರು; ಅವರು ಯಶಸ್ಸನ್ನು ಸಾಧಿಸಲು ತಮ್ಮಗಿದ್ದ ಸಾಮರ್ಥ್ಯಕ್ಕೆ ಯಾವತ್ತೂ ಮಿತಿ ಹಾಕಿಕೊಳ್ಳಲಿಲ್ಲ. ರೂಪಕಾತ್ಮಕವಾಗಿ ವರ್ಣಿಸುವುದಾದರೆ ಅವರು ಚಂದ್ರನನ್ನು ಎಟುಕಲು ಜಿಗಿದರು ಮತ್ತು ತಾರೆಗಳ ಮಧ್ಯೆ ತಮ್ಮನ್ನು ಕಂಡುಕೊಂಡರು. ಒಂದು ಮನೆಯಲ್ಲಿ ನಡೆಸುತ್ತಿದ್ದ ವ್ಯಾಪಾರವಾಗಿ ಶುರುಮಾಡಿ ತಮ್ಮ ಸತತ ಪರಿಶ್ರಮ ಹಾಗು ತಮ್ಮ ತಾಯಿ ಮತ್ತು ಸೋದರಿಯ ಬೆಂಬಲದಿಂದ ಅದನ್ನು ೫೦ ಕೋಟಿಗಳ ವಹಿವಾಟು ಮಾಡುವ ವಿಜೃಂಭಿಸುತ್ತಿರುವ ಉದ್ಯಮವಾಗಿ ಬೆಳೆಸಿದರು. ಅವರ #ಭಾರತದಲ್ಲಿ ತಯಾರಿಸಿ ಕತೆಯು ಇಡೀ ಯುಗಕ್ಕೆ ವಿಶೇಷವಾದ ಕತೆಯಾಗಿದೆ.
ಅವರ ಕತೆಯನ್ನು ಕೆಳಗೆ ನೋಡಿ :
”ನಾನು ಒಂದು ಸಾಮಾನ್ಯ ಮಧ್ಯಮ ವರ್ಗದ ಪರಿವಾರಕ್ಕೆ ಸೇರಿದವನು. ನಾನು ಒಂದು ಮನೆ ಮತ್ತು ಒಂದು ಕಾರಿನ ಮಾಲೀಕನಾಗಬೇಕೆಂಬ ದೊಡ್ಡ ಕನಸುಗಳನ್ನು ಹೊತ್ತುಕೊಂಡಿದ್ದೆ, ಆದರೆ ಅವುಗಳನ್ನು ಹೇಗೆ ನನಸಾಗಿಸಬೇಕೆಂದು ನನಗೆ ಗೊತ್ತಿರಲಿಲ್ಲ” ಎಂದು ಅವರು ಹೇಳುತ್ತಾರೆ. ಅವರು ತಮ್ಮ ಪಾದರಕ್ಷೆಗಳ ಬ್ರ್ಯಾಂಡ್ ಕ್ರಾಸ ಅನ್ನು ಶುರುಮಾಡುವುದಕ್ಕೆ ಮುನ್ನ ೨೦೧೪ರ ಮೊದಲನೆಯ ಭಾಗದ ಕಾಲವನ್ನು ನೆನಪಿಸಿಕೊಳ್ಳುತ್ತ ಹೀಗೆ ಹೇಳುತ್ತಾರೆ.
ಆರಂಭದ ದಿನಗಳಲ್ಲಿ ಅವರು ತಮ್ಮ ಸಾಧಾರಣವಾದ ಮನೆಯಿಂದ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದರು. ಬೇಡಿಕೆಗಳು ಬಂದಾಗ ಅವುಗಳ ಕಂತು ಕಟ್ಟಲು ಅವರ ತಾಯಿ ಮತ್ತು ಹೆಂಡತಿ ಸಹಾಯ ಮಾಡುತ್ತಿದ್ದರು. ಆಶಿಶ್ ಅವರ ಹತ್ತಿರ ಬರೀ ದೊಡ್ಡ ವಿಚಾರಗಳು ಮತ್ತು ೫೦,೦೦೦ ರೂಪಾಯಿಗಳ ಮಿತವಾದ ಬಂಡವಾಳವಿತ್ತು. ಆರಂಭದಲ್ಲಿ ಅವರಿಗೆ ಹಣಕಾಸಿನ ಅಡೆತಡೆಗಳು ಒದಗಿ ಬಂದರೂ ಅವರು ಒಂದರ ನಂತರ ಮತ್ತೊಂದು ಹೆಜ್ಜೆ ಇಡುತ್ತ ಬಂದರು.
ಇವತ್ತು ಈ #ಸ್ವಯಂನಿರ್ಮಿತ ಫ್ಲಿಪ್ಕಾರ್ಟ್ ಮಾರಾಟಗಾರರು ಅವರ ಉದ್ಯಮದ ಪಯಣದಲ್ಲಿ ಅನೇಕ ಮೈಲಿಗಲ್ಲುಗಳನ್ನು ದಾಟಿದ್ದಾರೆ ಮತ್ತು ನೂರಾರು ಭಾರತೀಯ ಕುಟುಂಬಗಳು ತಮ್ಮ ಕನಸುಗಳನ್ನು ನನಸಾಗಿಸಲು ಬೆಂಬಲ ನೀಡುವಂತಹ ಸಾಮುದಾಯಿಕ ನಾಯಕರೂ ಆಗಿದ್ದಾರೆ.
ಮಾರುಕಟ್ಟೆಯಲ್ಲಿ ಭದ್ರವಾದ ಹೆಜ್ಜೆಯನ್ನಿಟ್ಟಿರುವ ಇವರು ನೂರು ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸಬೇಕೆಂಬ ತಮ್ಮ ಮುಂದಿನ ಮೈಲಿಗಲ್ಲನ್ನು ತಲುಪುವುದನ್ನು ಎದುರು ನೋಡುತ್ತಿದ್ದಾರೆ. ಅಷ್ಟೆ ಅಲ್ಲದೆ ಅವರು ಸಕಾರಾತ್ಮಕ ಪರಿಣಾಮವನ್ನೂ ಮಾಡಲು ಬಯಸುತ್ತಾರೆ.
ಅವರು ತಮ್ಮ ಪರಿಸರ ಸ್ನೇಹಿಯಾಗು ಎನ್ನುವ ಉಪಕ್ರಮವನ್ನು ಸಾಧಿಸಲು ಕೆಲಸಮಾಡುತ್ತಿದ್ದಾರೆ. ಅವರ ಪಾದರಕ್ಷೆಗಳ ಬ್ರ್ಯಾಂಡ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಮ್ಮಿಮಾಡಿ ಅದನ್ನು ಸೊಗಸಾದ ಶೂಗಳಾಗಿ ಉನ್ನತೀಕರಿಸಬೇಕೆಂದಿದ್ದಾರೆ. ಫ್ಲಿಪ್ಕಾರ್ಟ್ ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಅವರ ಜೊತೆಗಿರುವುದರಿಂದ, ಆಶಿಶ್ ಅವರಿಗೆ ಸಮಾಜಕ್ಕೆ ಮರುಪಾವತಿಮಾಡಬೇಕೆಂಬ ನವೀಕರಿಸಿದ ದೃಷ್ಟಿಯಿದೆ. ಅದನ್ನು ಅವರು ಸುಸ್ಥಿರ ಮೌಲ್ಯ ಸರಪಳಿಯನ್ನು ನಿರ್ಮಿಸುವುದರ ಮೂಲಕ ಅಥವ ತಮ್ಮಂತಹ ಬೇರೆ ಕನಸುಗಾರರಿಗೆ ಉದ್ಯೋಗ ನೀಡುವ ಮೂಲಕ ಸಾಧಿಸಬೇಕೆಂದಿದ್ದಾರೆ.