ವಜ್ರದಂತೆ ಹೊಳೆ : ಫ್ಲಿಪ್ಕಾರ್ಟ್‌ ಮಾರಾಟಗಾರ ಕಮ್ಲೇಶ್‌ ಸೆಲದಿಯ ಅವರ ಯಶಸ್ಸಿನ ಕತೆ. ೨೫ ವರ್ಷಗಳಿಂದ ನಡೆಯುತ್ತಿದೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಕಮ್ಲೇಶ್‌ ಸೆಲದಿಯ ಅವರಂತಹ ಫ್ಲಿಪ್ಕಾರ್ಟ್‌ ಮಾರಾಟಗಾರರಿಗೆ ʼದ ಬಿಗ್‌ ಬಿಲಿಯನ್‌ ಡೇಸ್‌ʼ ನಂತಹ ಮಾರಾಟದ ಕಾರ್ಯಕ್ರಮಗಳು ಫ್ಲಿಪ್ಕಾರ್ಟ್‌ನಲ್ಲಿ ಈ-ಕಾಮರ್ಸ್‌ನ ಅತಿಹೆಚ್ಚಿನ ಪ್ರಯೋಜನ ಪಡೆಯುವ ಒಂದು ಅವಕಾಶ, ಮತ್ತು ಅದು ದೇಶದ ಪ್ರತಿಯೊಂದು ಮೂಲೆಗೂ ತಡೆಯಿಲ್ಲದೆ ತಲುಪುವುದರ ಪ್ರಯೋಜನ ಪಡೆಯುವ ಅವಕಾಶ. ಅವರು ಹೇಗೆ ಶುರುಮಾಡಿದರು, ತಮ್ಮ ವ್ಯಾಪಾರವನ್ನು ಆನ್ಲೈನ್‌ಗೆ ತೆಗೆದುಕೊಂಡು ಹೋದರು ಮತ್ತು ಆನ್ಲೈನ್‌ ಕ್ಷೇತ್ರದಲ್ಲಿ ಈಗ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ತಿಳಿದುಕೊಳ್ಳು ಓದಿ.

Big Billion Days

ವರಿಗಿಂತ ಹಿಂದೆ ಇದ್ದ ಅನೇಕರಂತೆ,ಕಮ್ಲೇಶ್‌ ಸೆಲದಿಯ ಫ್ಲಿಪ್ಕಾರ್ಟ್‌ ಮತ್ತು ಅದರ ʼದಿ ಬಿಗ್‌ ಬಿಲಿಯನ್‌ ಡೇಸ್‌ʼ ಮಾರಾಟದಂತಹ ಅಗ್ರಗಣ್ಯ ಕಾರ್ಯಕ್ರಮಗಳಲ್ಲಿ ಅವಕಾಶ ಮತ್ತು ಸಾಮರ್ಥ್ಯವನ್ನು ಕಂಡರು. ಅವರಿಗೆ ಆಫ್ಲೈನ್‌ನಲ್ಲಿ ಆಭರಣಗಳ ವ್ಯಾಪಾರದಲ್ಲಿ ಸುಮಾರು ೨೫ ವರ್ಷಗಳ ಅನುಭವ ಇರುವುದರಿಂದ ಅವರು ಫ್ಲಿಪ್ಕಾರ್ಟ್‌ನ ಜೊತೆ ಆನ್ಲೈನ್‌ ಮಾರುಕಟ್ಟೆಗೆ ಸುಲಭವಾಗಿ ಬದಲಾದರು.

ಹಲವು ವರ್ಷಗಳ ಅವಧಿಯಲ್ಲಿ ಫ್ಲಿಪ್ಕಾರ್ಟ್‌ ತನ್ನ ಮಾರಾಟಗಾರರ ಸಮುದಾಯಗಳನ್ನು, ಅವು ಯಾವುದೆ ಉದ್ಯಮದಲ್ಲಿ ಕಾರ್ಯ ನಿರ್ವಹಿಸಲಿ, ಸಕ್ರಿಯವಾಗಿ ಸಬಲೀಕರಿಸಲು ಕೆಲಸಮಾಡಿದೆ. ಫ್ಲಿಪ್ಕಾರ್ಟ್‌ನ ಮಾರಾಟಗಾರ ಕಮ್ಲೇಶ್‌ ಸೆಲದಿಯ ಮತ್ತು ಅವರ ಉದ್ದಿಮೆ ಧರಮ್‌ ಜ್ಯುವೆಲ್ಸ್‌ಗೆ ಈ ವೇದಿಕೆಯು ಬೆಳವಣಿಗೆಯ ಮಿತಿಯನ್ನು ಏರಿಸಿತು.

“ಏನಾದರೂ ಹೊಸದನ್ನು ಮಾಡುವುದು ಯಾವಾಗಲೂ ಸಂಭ್ರಮದ ಕೆಲಸ ಮತ್ತುಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೇಗಿದ್ದರೂ, ನೀವು ಪಡುವಷ್ಟು ಶ್ರಮಕ್ಕೆ ಅನುಗುಣವಾಗಿ ನಿಮಗೆ ಪ್ರತಿಫಲ ದೊರೆಯುತ್ತದೆ. ಈ ಸತ್ಯವನ್ನು ನಾನು ಹಿಂದೆ ೨೦೧೯ರಲ್ಲಿ ಫ್ಲಿಪ್ಕಾರ್ಟ್‌ ಅನ್ನು ಸೇರಿಕೊಂಡ ಕ್ಷಣದಿಂದ ಅರಿತುಕೊಂಡೆ. ನನ್ನ ಯಶಸ್ಸು ಮತ್ತು ನನ್ನ ಪಯಣವು ಫ್ಲಿಪ್ಕಾರ್ಟ್‌ನಿಂದ ಎಂದು ನಾನು ಗುರುತಿಸುತ್ತೇನೆ. ಈ ವೇದಿಕೆಯುನನ್ನ ಪರಿಶ್ರಮ ಮತ್ತು ಕೌಶಲ್ಯಗಳು ಪ್ರಗತಿ ಹೊಂದಲು ಒಂದು ಅವಕಾಶವನ್ನು ಕಲ್ಪಿಸಿದೆ”.

ಇವತ್ತು, ಧರಮ್‌ ಜ್ಯುವೆಲ್ಸ್‌ ಆನ್ಲೈನ್‌ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಬೆಳೆದಿದೆ, ಮತ್ತು ಅದು ದೇಶದ ಎಲ್ಲ ಅಂಚೆ ಪಿನ್‌ ಕೋಡ್‌ ಇರುವ ಕ್ಷೇತ್ರಗಳಿಂದಲೂ ಗಿರಾಕಿಗಳನ್ನು ಆಕರ್ಷಿಸಿದೆ. ಕಮ್ಲೇಶ್‌ ಈಗಾಗಲೆ ದಕ್ಷಿಣ ಭಾರತದಲ್ಲಿ ಭರವಸೆಯ ಗಿರಾಕಿಗಳ ವಲಯವನ್ನು ನಿರ್ಮಿಸಿದ್ದಾರೆ ಮತ್ತು ಅವರ ವ್ಯಾಪಾರದ ವಿಸ್ತೀರ್ಣವನ್ನು ಇನ್ನೂ ಹೆಚ್ಚಿಸಲು ಯೋಚಿಸುತ್ತಿದ್ದಾರೆ. ʼದಿ ಬಿಗ್‌ ಬಿಲಿಯನ್‌ ಡೇಸ್‌ ೨೦೨೨ʼ ಸಮೀಪದಲ್ಲೇ ನಡೆಯಲಿರುವುದರಿಂದ, ಅವರು ತಮ್ಮ ಗಮನವನ್ನು ಹೊಸ ಗುರಿಗಳ ಮೇಲೆ ಇಟ್ಟಿದ್ದಾರೆ ಮತ್ತು ಈ ಹಬ್ಬಗಳ ಕಾಲದಲ್ಲಿ ತಮ್ಮ ವ್ಯಾಪಾರವನ್ನು ಬೆಳೆಸಲು ಎದುರು ನೋಡುತ್ತಿದ್ದಾರೆ.

ಯಾವ ವಿಷಯವನ್ನೂ ಬಿಡದೆ ಇರುವುದು

ಕಮ್ಲೇಶ್‌ ಸೆಲದಿಯ ಅವರು ನಕಲಿ ಆಭರಣಗಳ ಮಾರುಕಟ್ಟೆಗೆ ಬರುವ ಮುಂಚೆ ವಜ್ರದ ಉದ್ಯಮದಲ್ಲಿ ಕೆಲಸಮಾಡಿದ್ದರು. ನಂತರ ಅವರು ನಕಲಿ ಆಭರಣಗಳ ವಲಯಕ್ಕೆ ಬಂದು ನೆಕ್ಲೇಸ್‌ಗಳಿಂದ ಸರಗಳವರೆಗೆ ಸುಂದರವಾದ ಉತ್ಪನ್ನಗಳನ್ನು ತಯಾರಿಸಲು ಶುರುಮಾಡಿದರು. ಅವರು ಯಾಕೆ ತಮ್ಮ ಮಾರ್ಗವನ್ನು ಬದಲಿಸಿದರು ಎಂದು ನೆನಪಿಸಿಕೊಳ್ಳುತ್ತ ಹೀಗೆ ಹೇಳುತ್ತಾರೆ : “ನನಗೆ ಈ ವ್ಯಾಪಾರದ ಬಗ್ಗೆ ಆಕರ್ಷಣೆಯಿತ್ತು, ಮತ್ತು ಈ ರೀತಿಯ ಕೆಲಸದಲ್ಲಿ ಬಹಳ ಸಾಧ್ಯತೆಯಿದೆ. ನಾನು ವಜ್ರದ ವ್ಯಾಪಾರಿಯಾಗಿದ್ದೆ. ನಾನು ೨೫ ವರ್ಷಗಳ ಹಿಂದೆ ಕೆಲಸ ಆರಂಭಿಸಿದೆ, ಮತ್ತು ಆ ಕೆಲಸ ಸುಲಭವಾಗಿರಲಿಲ್ಲ. ನಾನು ತಯಾರಿಕೆಯನ್ನು ನೋಡಿಕೊಳ್ಳುತ್ತಿದ್ದೆ. ನನ್ನ ಕೆಲಸದ ಸ್ವಲ್ಪ ಭಾಗದಲ್ಲಿ ಮಾರಾಟಗಾರರು ಮತ್ತು ಸಗಟು ವ್ಯಾಪಾರಿಗಳ ಜೊತೆ ವ್ಯವಹರಿಸಬೇಕಾಗುತ್ತಿತ್ತು. ಅವರು ಈ ಉತ್ಪನ್ನವನ್ನು ಮುಂದೆ ಮಾರುಕಟ್ಟೆಗೆ ಸಾಗಿಸುತ್ತಿದ್ದರು”.

ಕಮ್ಲೇಶ್‌ ಈ ಕಾಲದಲ್ಲಿ ಹೇರಳವಾದ ಅನುಭವವನ್ನು ಪಡೆದುಕೊಂಡರು, ಮತ್ತು ಮಾರುಕಟ್ಟೆಯ ಪ್ರವೃತ್ತಿಗಳ ಬಗ್ಗೆ ನೇರವಾದ ಜ್ಞಾನವನ್ನು ಗಳಿಸಿದರು. ಇದರಲ್ಲೇ ಅವಕಾಶ ಅಡಗಿದೆ ಎಂದು ಅರಿತ ಅವರು, ಗಿರಾಕಿಗಳ ಜೊತೆ ನೇರವಾಗಿ ವ್ಯವಹರಿಸುವ ಸಮಯ ಬಂದಿದೆ ಎಂದು ನಿರ್ಧರಿಸಿದರು. ಕೋವಿಡ್‌-೧೯ ಸಾಂಕ್ರಾಮಿಕ ರೋಗ ಅಪ್ಪಳಿಸಿದ ಹೊತ್ತಿನಲ್ಲೇ ಕಮ್ಲೇಶ್‌ ತಮ್ಮ ನಿರ್ಧಾರವನ್ನು ಕೈಗೊಂಡರು ಮತ್ತು ಅದರಿಂದಾಗಿ ವ್ಯಾಪಾರ ಇಳಿಮುಖವಾಗುತ್ತ ಹೋಯಿತು.

“ನಾನು ಹೀಗೆ ಯೋಚಿಸಿದೆ : ನನ್ನ ಉತ್ಪನ್ನಗಳ ಮಾರಾಟಗಾರರು ನನ್ನ ಉತ್ಪನ್ನಗಳನ್ನು ಆನ್ಲೈನಲ್ಲಿ ಮಾರಬಹುದಾದರೆ ನಾನು ಏಕೆ ಹಾಗೆ ಮಾಡಬಾರದು? ಆದ್ದರಿಂದಲೆ ನಾನು ಚಿಲ್ಲರೆ ವ್ಯಾಪಾರಕ್ಕೆ ಪ್ರವೇಶಿಸಲು ನಿರ್ಧರಿಸಿದೆ ಮತ್ತು ಧರಮ್‌ ಜ್ಯುವೆಲ್ಸ್‌ ಅನ್ನು ಆನ್ಲೈನ್‌ಗೆ ತೆಗೆದುಕೊಂಡು ಹೋಗಲು ಫ್ಲಿಪ್ಕಾರ್ಟ್‌ ಅನ್ನು ವೇದಿಕೆಯಾಗಿ ಆಯ್ಕೆಮಾಡಿದೆ. ನಾನು ೨೦೧೯ರಲ್ಲಿ ಫ್ಲಿಪ್ಕಾರ್ಟ್‌ನ್ನು ಸೇರಿಕೊಂಡೆ ಮತ್ತು ಇದು ಸರಿಯಾದ ನಿರ್ಧಾರ ಎಂದು ಯೋಚಿಸಿದೆ, ಏಕೆಂದರೆ ಫ್ಲಿಪ್ಕಾರ್ಟ್‌ನ ಹೆಸರು ಮಕ್ಕಳಿಂದ ಹಿಡುದು ಎಲ್ಲರಿಗೂ ಗೊತ್ತು!”

ಕಮ್ಲೇಶ್‌ ಸೆಲದಿಯ ಅವರ ಹೆಂಡತಿ ಅವರ ಯೋಜನೆಗಳು ಮತ್ತು ಅವುಗಳ ಅನುಷ್ಠಾನದಲ್ಲಿ ಅವರಿಗೆ ಸಹಾಯಮಾಡುವುದರಿಂದ ಅವರು ತೆಗೆದುಕೊಂಡ ಈ ನಿರ್ಧಾರ ಸರಿಯಾದದ್ದು ಎಂದು ಅವರಿಗೆ ತಿಳಿದಿತ್ತು. ಅವರ ಬಳಿ ತಯಾರಿಕೆಯ ವ್ಯವಸ್ಥೆ ಸಿದ್ಧವಾಗಿತ್ತು, ಅವಕಾಶ ಕೈಯಲ್ಲಿತ್ತು ಮತ್ತು ಶುರುಮಾಡುವುದೊಂದೇ ಉಳಿದಿತ್ತು. ಅವರು ಕೆಲಸ ಆರಂಭಿಸಲು ಫ್ಲಿಪ್ಕಾರ್ಟ್‌ನಿಂದ ಮತ್ತು ಕೆಲವು ಪ್ರೀತಿಪಾತ್ರರಿಂದ ಸ್ವಲ್ಪ ಸಹಾಯವಷ್ಟೆ ಅವರಿಗೆ ಬೇಕಾಗಿತ್ತು.

ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲ

 

big billion days

ಈಗ ಕಮ್ಲೇಶ್‌ ಮತ್ತು ಅವರ ಹೆಂಡತಿ ಧರಮ್‌ ಜ್ಯುವೆಲ್ಸ್‌ನ ಆನ್ಲೈನ್‌ ಅಸ್ತಿತ್ವನ್ನು ನಿಭಾಯಿಸುವುದರಲ್ಲಿ ಈಗ ಸಕ್ಷಮರಾಗಿದ್ದರೂ ಅವರು ಶುರುಮಾಡುವಾಗ ಅವರಿಗೆ ಸಹಾಯ ಬೇಕಾಗಿತ್ತು. ಈ ಸಂದರ್ಭದಲ್ಲೇ ಅವರ ಸಂಬಂಧಿಕರೊಬ್ಬರು ಪ್ರವೇಶ ಮಾಡಿ ಅವರಿಗೆ ಮಾರ್ಗದರ್ಶನ ಮಾಡಿ ಅವರ ಫ್ಲಿಪ್ಕಾರ್ಟ್‌ ಖಾತೆಯನ್ನು ತೆರೆಯಲು ಸಹಾಯ ಮಾಡಿದರು. ನಂತರ ಅವರು ಸೇರಿಕೊಳ್ಳುವ ಪ್ರಕ್ರಿಯೆ ನಡೆಯಿತು, ಮತ್ತುಇದೊಂದು ಸುಸೂತ್ರವಾದ ಅನುಭವವಾಗಿತ್ತು.

“ನನ್ನ ಫ್ಲಿಪ್ಕಾರ್ಟ್‌ ಖಾತೆಯ ವ್ಯವಸ್ಥಾಪಕರು ಸಂಪೂರ್ಣವಾಗಿ ನನಗೆ ಸಹಾಯ ಮಾಡಿದ್ದರಿಂದ ನಾನು ಫ್ಲಿಪ್ಕಾರ್ಟ್‌ಗೆ ಸೇರಿಕೊಳ್ಳುವುದು ಬಹಳ ಸುಲಭವಾಗಿ ನೆರವೇರಿತು. ನನ್ನ ಎಲ್ಲ ಪ್ರಶ್ನೆಗಳಿಗೆ ಅವರ ಬಳಿ ಉತ್ತರಗಳಿದ್ದವು, ಮತ್ತು ಅವರು ಈ ಪರಿವರ್ತನೆಯನ್ನು ಸರಳವಾಗಿ ಮಾಡಲು ಸಹಾಯಕವಾಯಿತು” ಎಂದು ಕಮ್ಲೇಶ್‌ ತಿಳಿಸುತ್ತಾರೆ.

ಎಲ್ಲವೂ ಸಿದ್ಧವಾದ ನಂತರ ಕಮ್ಲೇಶ್‌ ತಮ್ಮ ವ್ಯಾಪಾರವನ್ನು ಆನ್ಲೈನ್‌ಗೆ ತೆಗೆದುಕೊಂಡು ಹೋದರು – ಆದರೆ ಎಲ್ಲವೂ ನಿರೀಕ್ಷಿಸಿದಂತೆ ಸಾಗಲಿಲ್ಲ. ಮೊದಲ ಕೆಲವು ತಿಂಗಳು ವ್ಯಾಪಾರ ನಿಧಾನವಾಗಿ ಸಾಗಿತು. ಒಂದು ದಿನಕ್ಕೆ ಒಂದು ಅಂಕಿಯ ಆರ್ಡರ್‌ಗಳು ದೊರೆಯುತ್ತಿದ್ದದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಈಗ ಅವರಿಗೆ ಪ್ರತಿದಿನ ೧೦೦ರಿಂದ ೧೨೫ ಆರ್ಡರ್ಗಳು ಬರುತ್ತವೆ ಮತ್ತು ಅವರಿಗೆ ಒಂದು ತಿಂಗಳಿಗೆ ಸುಮಾರು ಹದಿನೈದು ಲಕ್ಷಗಳಷ್ಟು ವರಮಾನವಿದೆ.

“ಫ್ಲಿಪ್ಕಾರ್ಟ್‌ನಲ್ಲಿ ನಾನು ಶುರುಮಾಡಿದಾಗ ನನ್ನ ಬಳಿ ಬೆರಳೆಣಿಕೆಯಷ್ಟೆ ಉತ್ಪನ್ನಗಳಿದ್ದವು. ಕಾಲಕ್ರಮೇಣ ನಾವು ನಮ್ಮ ಕ್ಯಾಟೆಲಾಗ್‌ಗೆ ಉತ್ಪನ್ನಗಳನ್ನು ಸೇರಿಸುತ್ತ ಹೋದೆವು. ಈಗ ನಮ್ಮ ಹತ್ತಿರ ಮಾರಾಟಕ್ಕಾಗಿ ಸುಮಾರು ೧೨೦೦ ಉತ್ಪನ್ನಗಳಿವೆ. ಸ್ವಾಭಾವಿಕವಾಗಿಯೆ ನಮ್ಮ ಮಾರಾಟದ ಪ್ರಮಾಣವೂ ಬೆಳೆಯಿತು! ನಾನು ಯಾವಾಗಲೂ ಹೇಳುತ್ತಿರುತ್ತೇನೆ, ನೀವು ಯಾವ ಗುರಿಯಿಟ್ಟು ಕೆಲಸಮಾಡುವಿರೊ ಆ ಫಲಿತಾಂಶ ದೊರಕುತ್ತದೆ, ಮತ್ತು ನನಗೆ ಸಾಧ್ಯವಾದಷ್ಟು ಮಟ್ಟಿಗೆ ವ್ಯಾಪಾರವನ್ನು ಬೆಳೆಸುವುದು ನನ್ನ ಯೋಜನೆಯಾಗಿದೆ. ಅದಕ್ಕೆ ಬೇಕಾದ ಶ್ರಮವನ್ನು ಪಡುವುದಕ್ಕೆ ನಾನು ತಯಾರಾಗಿದ್ದEನೆ. ಫ್ಲಿಪ್ಕಾರ್ಟ್‌ಗೆ ಈ ಧ್ಯೇಯ ಅರ್ಥವಾಯಿತು ಮತ್ತು ನಾನು ಯಶಸ್ವಿಯಾಗಲು ಪ್ರತಿಯೊಂದು ಹೆಜ್ಜಯಲ್ಲೂ ಅದು ಮುಖ್ಯವಾದ ಪಾತ್ರ ವಹಿಸಿದೆ”.

ಈಗ ಒಬ್ಬ #ಸ್ವಯಂ-ನಿರ್ಮಿತ ವ್ಯಾಪಾರಿಯಾಗಿರುವ ಕಮ್ಲೇಶ್‌ ಅವರು ತಮ್ಮ ಗಮನವನ್ನು ಆನ್ಲೈನ್‌ನಲ್ಲಿ ಚಿಲ್ಲರೆ ವ್ಯಾಪಾರದ ಕಡೆಗೆ ಬದಲಾಯಿಸಿದ್ದಾರೆ ಮತ್ತು ಅವರ ಪತ್ನಿ ಅವರ ಉದ್ಯಮದ ತಯಾರಿಕೆಯ ವಿಭಾಗವನ್ನು ನಿಭಾಯಿಸುತ್ತಾರೆ. ಇಬ್ಬರೂ ಜೊತೆಯಾಗಿ ಪರಿಶ್ರಮಪಡುತ್ತಾರೆ ಮತ್ತು ಅವರ ಗಿರಾಕಿಗಳು ತೃಪ್ತರಾಗುದಕ್ಕೋಸ್ಕರ ತಮ್ಮ ಉತ್ಪನ್ನಗಳ ಬಗ್ಗೆ ಅತ್ಯಂತ ಕಾಳಜಿಯನ್ನು ವಹಿಸುತ್ತಾರೆ.

ಕಮ್ಲೇಶ್‌ ಅವರು ʼದಿ ಬಿಗ್‌ ಬಿಲಿಯನ್‌ ಡೇಸ್‌ʼ ಮಾರಾಟವನ್ನು ಆಸಕ್ತಿಯಿಂದ ನಿರೀಕ್ಷಿಸುತ್ತಿದ್ದಾರೆ, ಎಕೆಂದರೆ ಈ ಪ್ರಮುಖ ಘಟನೆಯ ಸಂದರ್ಭದಲ್ಲಿ ಅವರ ಮಾರಾಟ ೪೦ ಪ್ರತಿಶತ ಹೆಚ್ಚಾಗುವುದನ್ನು ಅವರು ಗಮನಿಸಿದ್ದಾರೆ. ಕಮ್ಲೇಶ್‌ ಸೆಲದಿಯ ಅವರು ಈ ಮಾರಾಟದ ಅವಧಿ ತಮ್ಮನ್ನು ತಮ್ಮ ಗುರಿಯ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತದೆಂದು ಆಶಾದಾಯಕವಾಗಿರುವ ಅವರು ಭವಿಷ್ಯದಲ್ಲಿ ಆನ್ಲೈನ್‌ ಕ್ಷೇತ್ರಕ್ಕೆ ಜಿಗಿಯಬೇಕೆಂದಿರುವ ಉದ್ಯಮಿಗಳಿಗೆ ಫ್ಲಿಪ್ಕಾರ್ಟ್‌ನ seller ಒಬ್ಬ ಪ್ರೇರಣಾದಾಯಕ ವ್ಯಕ್ತಿಯಾಗಿದ್ದಾರೆ.


ಇದನ್ನೂ ಓದಿ : ಭಾರತದಲ್ಲಿ ತಯಾರಿಸಿ : ಫ್ಲಿಪ್ಕಾರ್ಟ್‌ನ ಮಾರಾಟಗಾರ ಆಶಿಶ್‌ ಕುಕ್ರೇಜ್‌ ಅವರ ತೀವ್ರಗತಿಯ ಯಶಸ್ಸಿನ ಕತೆ!

Enjoy shopping on Flipkart