ಖಾತೆಯ ಸುಸ್ಥಿತಿಗೆ ಸಲಹೆಗಳು – ನಿಮ್ಮ ಫ್ಲಿಪ್‌ಕಾರ್ಟ್‌‌ ಖಾತೆಯ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ಒತ್ತಡ ಮುಕ್ತವಾಗಿ ಶಾಪಿಂಗ್ ಮಾಡಿ!

Read this article in हिन्दी | English | বাংলা | தமிழ் | ગુજરાતી | मराठी | తెలుగు

ಬಿಗ್ ಬಿಲಿಯನ್ ಡೇಸ್ 2022 ಸೇಲ್‌ ನಲ್ಲಿ ಉತ್ತಮ ಮೌಲ್ಯಕ್ಕಾಗಿ ನಿರಂತರ ಶಾಪಿಂಗ್ ಮಾಡುತ್ತಿದ್ದೀರಾ? ನಾವೂ ಕೂಡ! ಹಬ್ಬದ ಸಂದರ್ಭದಲ್ಲಿ ಹೆಚ್ಚಿನದನ್ನು ಮಾಡಲು ನಿಮಗೆ ಸಹಾಯ ಮಾಡಲು, ಈ ತ್ವರಿತ ಸಲಹೆಗಳನ್ನು ನೋಡಿ ಮತ್ತು ನಿಮ್ಮ ಆನ್‌ಲೈನ್ ಶಾಪಿಂಗ್ ಅನುಭವವನ್ನು ಹೆಚ್ಚಿಸಿಕೊಳ್ಳಿ. ಸುಲಭ ಪಾವತಿ ಆಯ್ಕೆಗಳಿಂದ ಹಿಡಿದು ನಿಮ್ಮ ಆರ್ಡರ್ ಅನ್ನು ಟ್ರ್ಯಾಕ್ ಮಾಡುವವರೆಗೆ, ಸರಳ ಮತ್ತು ಸುಲಭವಾದ ಈ ಸಲಹೆಗಳನ್ನು ನಾವು ನಿಮಗೆ ಒದಗಿಸಿದ್ದೇವೆ. ಇನ್ನಷ್ಟು ತಿಳಿಯಲು ಮುಂದೆ ಓದಿ.

Wನೀವು ಬಿಗ್ ಬಿಲಿಯನ್ ಡೇಸ್ 2022 ಸೇಲ್‌ ನಲ್ಲಿ ಅಥವಾ ವರ್ಷದ ಯಾವುದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿರಲಿ, ನೀವು ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯನ್ನು ಸಾಕಷ್ಟು ಬಳಸುತ್ತೀರಿ ಎಂದು ನಾವು ಭಾವಿಸುತ್ತೇವೆ. ನಿಮ್ಮ ಆನ್‌ಲೈನ್ ಶಾಪಿಂಗ್ ಅನುಭವವನ್ನು ಲಾಭದಾಯಕ ಮತ್ತು ಹೆಚ್ಚು ಸಂತೋಷಮಯವಾಗಿ ಮಾಡಲು ನೀವು ಅದರ ಹಲವು ವೈಶಿಷ್ಟ್ಯಗಳನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ನಿಮ್ಮ ನೆಚ್ಚಿನ ಉತ್ಪನ್ನಗಳಿಗೆ ಬಂದಾಗ ನಿಮ್ಮ ಬೆರಳನ್ನು ಹಿಡಿತದಲ್ಲಿ ಇರಿಸಲು ಇದನ್ನು ಬಳಸಿ. ಇದಕ್ಕಿಂತ ಹೆಚ್ಚಾಗಿ, ನೀವು ವಿಶೇಷ ಬಹುಮಾನಗಳನ್ನು ಅನ್‌ಲಾಕ್‌ ಮಾಡಬಹುದು ಮತ್ತು ನಿಮ್ಮ ಖಾತೆಯ ಮೂಲಕ ಇವುಗಳನ್ನು ಸುಲಭವಾಗಿ ತೆರೆಯಬಹುದು.

ಈ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಮತ್ತು ಫ್ಲಿಪ್‌ಕಾರ್ಟ್‌ ನಲ್ಲಿ ನಿಮ್ಮ ಅನುಭವವನ್ನು ಉತ್ತಮಗೊಳಿಸಲು ನಿಮಗೆ ಸಹಾಯ ಮಾಡಲು ಇಲ್ಲಿ ಕೆಲವು ಸಲಹೆಗಳಿವೆ.

ಮುಂದೆ ಯೋಜಿಸಿ ಮತ್ತು ನಿಮ್ಮ ವಿಶ್‌ಲಿಸ್ಟ್‌ ಗೆ ಸೇರಿಸಿ

ನೋಡಿ, ನೀವು ವಸ್ತುವನ್ನು ಇಷ್ಟಪಡುತ್ತೀರಿ, ಆದರೆ ಕಾಯಲು ಬಯಸುವಿರಾ? ಅದನ್ನು ನಿಮ್ಮ ವಿಶ್‌ಲಿಸ್ಟ್‌ ಗೆ ಸೇರಿಸಿ! ಫ್ಲಿಪ್‌ಕಾರ್ಟ್‌ನ ವಿಶ್‌ಲಿಸ್ಟ್ ವೈಶಿಷ್ಟ್ಯದೊಂದಿಗೆ, ನೀವು ಇಷ್ಟಪಡುವ ವಿಷಯಗಳನ್ನು ನೀವು ಉಳಿಸಿಕೊಳ್ಳಬಹುದು ಮತ್ತು ನೀವು ಬಯಸಿದಾಗ ಅವುಗಳನ್ನು ಕಾರ್ಟ್‌‌ ‌ಗೆ ಸೇರಿಸಬಹುದು. ನೀವು ವಿವಿಧ ವರ್ಗಗಳಲ್ಲಿ ಬಹು ವಿಶ್‌ಲಿಸ್ಟ್‌ ಗಳನ್ನು ರಚಿಸಬಹುದು ಮತ್ತು ನಿಮ್ಮ ಆಯ್ಕೆಗಳ ಮೂಲಕ ಸುಲಭವಾಗಿ ವಿಂಗಡಿಸಬಹುದು. ಬಿಗ್ ಬಿಲಿಯನ್ ಡೇಸ್ 2022 ರ ಹಬ್ಬದ ಸೇಲ್‌ ಸಮಯದಲ್ಲಿ ಇದು ನಿಜಕ್ಕೂ ಉಪಯುಕ್ತವಾಗಿದೆ.

ನಿಮ್ಮ ವಿಶ್‌ಲಿಸ್ಟ್‌ ಮತ್ತು ಅದರ ವೈಶಿಷ್ಟ್ಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಬ್ಲಾಗ್ ಓದಿ.

ಆರಾಮವಾಗಿ ಪಾವತಿಸಿ ಮತ್ತು ಉತ್ತಮ ಮೌಲ್ಯವನ್ನು ಪಡೆಯಿರಿ

YouTube player

ಫ್ಲಿಪ್‌ಕಾರ್ಟ್‌ ನ ಗ್ರಾಹಕ-ಕೇಂದ್ರಿತ ಆವಿಷ್ಕಾರಗಳು ಪ್ರತಿಯೊಬ್ಬ ಭಾರತೀಯನು ಹಬ್ಬದ ಸೀಸನ್‌ ನಲ್ಲಿ ಮತ್ತು ವರ್ಷಪೂರ್ತಿ ಉತ್ತಮ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸದುದ್ದೇಶ ಹೊಂದಿದೆ. ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಬಹು ಪಾವತಿ ನಿಬಂಧನೆಗಳಾದವಿತರಣೆಯಲ್ಲಿ QR-ಕೋಡ್ ಪಾವತಿ, ಪೇ ಲೇಟರ್‌ ‌ಸೇರಿದಂತೆ ಹಬ್ಬದ ಸಂದರ್ಭಗಳಲ್ಲಿ ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಿ.

ಆ ಎಲೆಕ್ಟ್ರಾನಿಕ್‌ ಗಿಫ್ಟ್‌ ವೋಚರ್(EGV)ಗಳನ್ನು ಉತ್ತಮವಾಗಿ ಬಳಸಿ

ಫ್ಲಿಪ್‌ಕಾರ್ಟ್‌ ನ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್‌ ಗಳು ಬಳಸಲು ಮತ್ತು ಪಡೆಯಲು ಸುಲಭವಾಗಿವೆ. ಈ EGVಗಳೊಂದಿಗೆ ನೀವು ಪಾವತಿಯ ಸಮಯದಲ್ಲಿ ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಕೆಲವೇ ಕ್ಲಿಕ್‌ ಗಳಲ್ಲಿ, ನಿಮ್ಮ ಆರ್ಡರ್‌ಗೆ ತಕ್ಕ ಮೌಲ್ಯವನ್ನು ನೀವು ಪಡೆದುಕೊಳ್ಳಬಹುದು ಮತ್ತು ಸುಲಭವಾಗಿ ಶಾಪಿಂಗ್ ಮಾಡಬಹುದು. ಎಲ್ಲಕ್ಕಿಂತ ಉತ್ತಮವಾಗಿ, ನೀವು ಕೆಲವು ಫ್ಲಿಪ್‌ಕಾರ್ಟ್‌ ಸ್ಪರ್ಧೆಗಳಲ್ಲಿ ಭಾಗವಹಿಸಲು EGV ಗಳನ್ನು ಪಡೆಯಬಹುದು ಅಥವಾ ಭಾರತದಾದ್ಯಂತ ಬಹು ಪಾಲುದಾರ ಸ್ಟೋರ್‌ ಗಳಲ್ಲಿ ಅವುಗಳನ್ನು ಖರೀದಿಸಬಹುದು.

ನೀವು EGV ಗಳನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಈ ಬ್ಲಾಗ್ ಓದಿ.

ಫ್ಲಿಪ್‌ಕಾರ್ಟ್‌ ಸೂಪರ್‌ ಕಾಯಿನ್ಸ್‌ ನೊಂದಿಗೆ ಸೂಪರ್ ಸೇವಿಂಗ್ಸ್‌ ಆನಂದಿಸಿ

YouTube player

ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್‌ಗಳು ಒಂದು ರೀತಿಯ ಬಹು-ಬ್ರಾಂಡ್ ರಿವಾರ್ಡ್‌ಗಳಾಗಿವೆ, ಅದು ನಿಮಗೆ ಉತ್ತಮ ಮೌಲ್ಯವನ್ನು ಆನಂದಿಸಲು ಮತ್ತು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಅದ್ಭುತ ವೋಚರ್‌ ‌ಗಳನ್ನು ಅನ್‌ಲಾಕ್‌ ಮಾಡಲು ಅನುಮತಿಸುತ್ತದೆ. ಈ ಸೂಪರ್‌ ಕಾಯಿನ್ಸ್‌ ಗಳಿಸಲೂ ಸುಲಭ ಮತ್ತು ರಿಡೀಮ್ ಮಾಡಿಕೊಳ್ಳಲೂ ಸುಲಭವಾಗಿದ್ದು, ನಿಮ್ಮ ಶಾಪಿಂಗ್ ಮತ್ತಷ್ಟು ಲಾಭದಾಯಕವಾಗುವಂತೆ ಮಾಡುತ್ತವೆ.

ಸೂಪರ್‌ ಕಾಯಿನ್ಸ್‌ ನಿಂದ ನೀವು ಪಡೆಯುವ ಪ್ರಯೋಜನಗಳು ಮತ್ತು ಅವುಗಳನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

ಬೋನಸ್: #ನಿಮಗಿದು ಗೊತ್ತೇ?
ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯತ್ವದೊಂದಿಗೆ ನೀವು ಎರಡು ಪಟ್ಟು ಹೆಚ್ಚು ಸೂಪರ್‌ ಕಾಯಿನ್‌ ಗಳನ್ನು ಗಳಿಸಬಹುದು!

ನಿಮ್ಮ ಫ್ಲಿಪ್‌ಕಾರ್ಟ್ ಆರ್ಡರ್ ಅನ್ನು ಟ್ರ್ಯಾಕ್ ಮಾಡಿ

YouTube player
YouTube player

ನಿಮ್ಮ ಫ್ಲಿಪ್‌ಕಾರ್ಟ್‌ ಆರ್ಡರ್ ಅನ್ನು ಇರಿಸಿದ ನಂತರ ನೀವು ಡೆಲಿವರಿಗಾಗಿ ಕುತೂಹಲದಿಂದ ಕಾಯುತ್ತಿರುವವರಾಗಿದ್ದರೆ, ನಿಮಗೆ ಫ್ಲಿಪ್‌ಕಾರ್ಟ್‌ ನಲ್ಲಿ ಲಭ್ಯವಿರುವ ಟ್ರ್ಯಾಕ್ ಆರ್ಡರ್ ವೈಶಿಷ್ಟ್ಯವು ನಿಮಗೆ ಸೂಕ್ತ ಎನಿಸುತ್ತದೆ. ಪ್ರತಿ ಬಾರಿ ನಿಮ್ಮ ಆರ್ಡರ್‌ ನ ಪ್ರಗತಿಯ ಕುರಿತು ಅಪ್‌ಡೇಟ್‌ಗಳನ್ನು ಪಡೆಯಿರಿ ಮತ್ತು ಅದು ನಿಮಗೆ ಸಮೀಪಿಸಿದಾಗ ಮತ್ತು ನೀವು ʻಆರ್ಡರ್‌ ದೃಢೀಕರಿಸಿ’ ಕ್ಲಿಕ್ ಮಾಡಿದ ಕ್ಷಣದಿಂದ ಈ ವೈಶಿಷ್ಟ್ಯವನ್ನು ಆನಂದಿಸಿ.

ನೀವು ಆರ್ಡರ್‌ ಗಳನ್ನು ಮಾಡಿದಷ್ಟೇ ಸುಲಭವಾಗಿ ರಿಟರ್ನ್‌ ಮಾಡಿ

YouTube player

ನೀವು ಬಿಗ್ ಬಿಲಿಯನ್ ಡೇಸ್ 2022 ಸೇಲ್‌ ನಂತಹ ಹೆಚ್ಚಿನ ಈವೆಂಟ್‌ಗಳನ್ನು ಮಾಡಿದಾಗ, ನೀವು ಬಹು ಉತ್ಪನ್ನಗಳಿಗೆ ಆರ್ಡರ್ ಮಾಡಿರುವ ಸಾಧ್ಯತೆಗಳಿರುತ್ತದೆ. ಆದರೆ ಅದು ನಿಮಗೆ ಸರಿ ಎನಿಸದಿದ್ದರೆ ಅಥವಾ ನೀವು ನಿರೀಕ್ಷಿಸಿದಂತೆ ಆಗದಿದ್ದರೆ ಏನಾಗುತ್ತದೆ? ಫ್ಲಿಪ್‌ಕಾರ್ಟ್‌ ನ, ಸುಲಭವಾದ ರಿಟರ್ನ್‌ ಪಾಲಿಸಿಯಿಂದಾಗಿ ನೀವು ಈ ನಿಶ್ಚಿಂತೆಯಿಂದ ಇರಬಹುದು. ಆರ್ಡರ್ ಮಾಡುವ ಮೊದಲು ನಿರ್ದಿಷ್ಟ ಉತ್ಪನ್ನದ ಪಾಲಿಸಿಯನ್ನು ಪರೀಕ್ಷಿಸಲು ಮರೆಯದಿರಿ.

ಫ್ಲಿಪ್‌ಕಾರ್ಟ್ ರಿಟರ್ನ್ ಪಾಲಿಸಿ ಮತ್ತು ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಈ ಬ್ಲಾಗ್ ಓದಿ.

ಈ ಸರಳ ಸಲಹೆಗಳೊಂದಿಗೆ, ನೀವು ಬಿಗ್ ಬಿಲಿಯನ್ ಡೇಸ್ 2022 ಸೇಲ್‌ನ ಹೆಚ್ಚಿನ ಲಾಭವನ್ನು ಪಡೆಯಬಹುದು ಮತ್ತು ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯಿಂದ ಸಂಪೂರ್ಣ ಮೌಲ್ಯವನ್ನು ಪಡೆಯಬಹುದು.

ಈ ರೀತಿಯ ಹೆಚ್ಚಿನ ಶಾಪಿಂಗ್ ಸಲಹೆಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

Enjoy shopping on Flipkart