ಸಾಂಕ್ರಾಮಿಕದ ಮಧ್ಯೆ ಹೆಚ್ಚು ಗ್ರಾಹಕರು ಇ-ಕಾಮರ್ಸ್‌ನತ್ತ ಮುಖ ಮಾಡುವ ಜೊತೆ, ಆನ್‌ಲೈನ್ ಮಾರಾಟಗಾರರು ಬೇಡಿಕೆಯನ್ನು ಪೂರೈಸಲು ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಪೂವ ರ್ಯೋಜನೆ ಮತ್ತು ಯಶಸ್ವಿಯಾಗುವ ದೃಢನಿಶ್ಚಯದಿಂದ, # ಸೆಲ್ಫ್ ಮೇಡ್ ಫ್ಲಿಪ್‌ಕಾರ್ಟ್ ಮಾರಾಟಗಾರರಾದ ಪುನೀತ್ ಜೈನ್ ಅವರು ದಿ ಬಿಗ್ ಬಿಲಿಯನ್ ಡೇಸ್ 2020 ಮಾರಾಟದ ಸಮಯದಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸಿದ್ದಲ್ಲದೇ ಅವರ ಸಿಬ್ಬಂದಿ ಮತ್ತು ಪೂರೈಕೆದಾರರನ್ನು ಲಾಭದಾಯಕವಾಗಿ ಕೆಲಸ ಮಾಡುವಂತೆ ಮಾಡಿದರು. ಪಾಣಿಪತ್‌ನ ಈ ಉದ್ಯಮಿ ಯಶಸ್ಸನ್ನು ಕಂಡುಕೊಳ್ಳುವ ಪ್ರಯತ್ನವನ್ನು ಹೇಗೆ ಹೆಚ್ಚಿಸಿದರು ಎಂಬುದನ್ನು ಓದಿ.
ಈ ಕಥೆಯಲ್ಲಿ: # ಬಿಗ್ ಬಿಲಿಯನ್ ಡೇಸ್ 2020 ಮಾರಾಟದ ಸಮಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದ ಹಿಂದಿನ ರಹಸ್ಯವನ್ನು ಸೆಲ್ಫ್ ಮೇಡ್ ಫ್ಲಿಪ್‌ಕಾರ್ಟ್ ಮಾರಾಟಗಾರರಾದ ಪುನೀತ್ ಜೈನ್ ಬಹಿರಂಗಪಡಿಸಿದ್ದಾರೆ. </ em>
ನನ್ನ ಹೆಸರು ಪುನೀತ್ ಜೈನ್ ಮತ್ತು ನಾನು ಹರಿಯಾಣದ ಪಾಣಿಪತ್ ಮೂಲದವನು. ನಾನು 2012 ರಲ್ಲಿ ಉದ್ಯಮಿಯಾಗಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ, ಅದಕ್ಕೂ ಮೊದಲು ನಾನು ಒಂದು ಸಾಧಾರಣ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದೆ. ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಸಾಧ್ಯತೆಗಳನ್ನು ನಾನು ನೋಡಿದ್ದೆ ಮತ್ತು ಮುಂಬರುವ ದಶಕದಲ್ಲಿ ಇದು ಇನ್ನೂ ಬೆಳೆಯಲಿದೆಯೆಂದು ನನ್ನ ಅನುಭವವು ಸೂಚಿಸುತ್ತಿತ್ತು. ಈ ಕ್ಷೇತ್ರದಲ್ಲಿ ನಾನು ನನ್ನ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದಿದ್ದು ನನ್ನ ಕುಟುಂಬಕ್ಕೆ ಆಶ್ಚರ್ಯವೇನಾಗಿರಲಿಲ್ಲ.
ಪಾಣಿಪತ್ ಮನೆ ಪೀಠೋಪಕರಣ ತಯಾರಕರ ಒಂದು ಪ್ರಸಿದ್ಧ ಕೇಂದ್ರವಾಗಿದೆ. ಸ್ವಲ್ಪ ಸಂಶೋಧನೆ ಮಾಡಿದ ನಂತರ, ಕೈಗೆಟುಕುವ ಗೃಹೋಪಯೋಗಿ ಪೀಠೋಪಕರಣಗಳಲ್ಲಿ ನಾನು ಮಾಲಕತ್ವ ಹೊಂದಬಹುದಾದ ಒಂದು ವರ್ಗವಿರುವುದನ್ನು ನಾನು ಕಂಡುಕೊಂಡೆ, ಅದು ಅಲ್ಲಿಯವರೆಗೆ ಪ್ರೀಮಿಯಂ ಎನ್ನುವ ಹಣೆಪಟ್ಟಿಯನ್ನು ಹೊಂದಿತ್ತು.
ನಾನು ಈ ಬ್ರಾಂಡ್ ಹೆಸರಿನಲ್ಲಿ ಅನೇಕ ಗ್ರಹ ಪೀಠೋಪಕರಣಗಳು, ಬೆಡ್‌ಶೀಟ್‌ಗಳು ಹಾಗೂ ಪರದೆಗಳನ್ನು ಪ್ರಾರಂಭಿಸಿದೆ ಹೋಂ ಕ್ಯಾಂಡಿ, ಹಾಗೂಫ್ಲಿಪ್‌ಕಾರ್ಟ್‌ನಲ್ಲಿ ಒಬ್ಬ #ಸೆಲ್ಫ್ ಮೇಡ್ ಮಾರಾಟಗಾರನ ಆಗುವ ಮೊದಲು ಅನೇಕ ಇ-ಕಾಮರ್ಸ್ ವೇದಿಕೆಗಳಲ್ಲಿ ಪ್ರಯೋಗ ಮಾಡಿ ನೋಡಿದೆ.
ಫ್ಲಿಪ್‌ಕಾರ್ಟ್‌ನ ವ್ಯಾಪ್ತಿ ಮತ್ತು ಮಾರಾಟಗಾರರ ಸಂಪನ್ಮೂಲಗಳು ಪ್ರಾರಂಭಿಸುವುದನ್ನು ನನಗೆ ಸಾಧ್ಯವಾಗಿಸಿತು ಮತ್ತು ನಾನು ಇಲ್ಲಿಯವರೆಗೆ ಎಲ್ಲಾ ಬಿಗ್ ಬಿಲಿಯನ್ ದಿನಗಳ ಮಾರಾಟದಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತದೆ!
ಆದರೆ, ಬಿಗ್ ಬಿಲಿಯನ್ ಡೇಸ್ 2020 ಮಾರಾಟವು ಸ್ವಲ್ಪ ವಿಭಿನ್ನವಾಗಿತ್ತು. ಬಿಗ್ ಬಿಲಿಯನ್ ಡೇಸ್ 2020 ಮಾರಾಟ ಪ್ರಾರಂಭವಾಗುವ ಹೊತ್ತಿಗೆ ಆಫ್‌ಲೈನ್ ಮಾರಾಟ ಕೂಡ ಚೇತರಿಸಿಕೊಳ್ಳಲು ಪ್ರಾರಂಭಿಸಿದ್ದರಿಂದ ನನಗೆ ಅದರಲ್ಲಿ ಸಾಧ್ಯತೆಗಳು ಕಾಣುತ್ತಿದ್ದವು. ಸಾಂಕ್ರಾಮಿಕದಿಂದಾಗಿ, ಇ-ಕಾಮರ್ಸ್‌ನ ವ್ಯಾಪ್ತಿಯು ತುಂಬಾ ಹೆಚ್ಚಾಯಿತೆಂದು ನಾನು ನಂಬುತ್ತೇನೆ. ಮುಂದಿನ ದಶಕದಲ್ಲಿ, ಇದು ಸಂಪೂರ್ಣ ಹೊಸ ಪ್ರಪಂಚವಾಗಲಿದ್ದು, ಹೆಚ್ಚಿನ ಮನೆಗಳಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಸ್ವಭಾವಜನ್ಯವಾಗಿರುತ್ತದೆ. ಅದನ್ನು ಹೇಳಿದ ಮೇಲೆ, ನನ್ನ ತಂಡ ಮತ್ತು ನಾನು ಹಿಂದೆಂದೂ ಇಲ್ಲದ ರೀತಿಯಲ್ಲಿ ದಿ ಬಿಗ್ ಬಿಲಿಯನ್ ಡೇಸ್ 2020 ಮಾರಾಟಕ್ಕೆ ಮಾಡುವ ತಯಾರಿಯನ್ನು ಆರಂಭಿಸಿದೆವು.
ಮೊದಲು, ನಮ್ಮ ಎಲ್ಲ ಉದ್ಯೋಗಿಗಳಿಗೆ ಮಾಸ್ಕ್ ಗಳನ್ನು ವಿತರಿಸುವ ಮೂಲಕ, ಸ್ಯಾನಿಟೈಜ್ ಮಾಡುವ ಮೂಲಕ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಇತರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಾವು ನಮ್ಮ ಗೋದಾಮಿನೊಳಗೆ ಸುರಕ್ಷತೆಯನ್ನು ಪಾಲಿಸಿದ್ದೇವೆ. ಉತ್ಪಾದನೆಯಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಿದ ನಮ್ಮ ಸರಬರಾಜುದಾರರು ಮತ್ತು ಉತ್ಪಾದನಾ ಸಿಬ್ಬಂದಿಗಳು ನಮ್ಮನ್ನು ತುಂಬಾ ಬೆಂಬಲಿಸಿದರು. ನಾವು ಸಾಕಷ್ಟು ದೊಡ್ಡ ತಂಡವನ್ನು ಹೊಂದಿದ್ದೇವೆ ಮತ್ತು ನಾವೆಲ್ಲರೂ ಒಟ್ಟಾಗಿ ಶ್ರಮಿಸಿದ್ದೇವೆ.
ಎರಡನೆಯದಾಗಿ, ದಿ ಬಿಗ್ ಬಿಲಿಯನ್ ಡೇಸ್ 2020 ಮಾರಾಟದ ಯೋಜನೆಯಲ್ಲಿ ಫ್ಲಿಪ್‌ಕಾರ್ಟ್ ನಮಗೆ ಬೆಂಬಲ ನೀಡಿತು. ನಾನು ಬಿಸಿನೆಸ್ ಅವರ್ಸ್ ಈವೆಂಟ್‌ಗೆ ಹಾಜರಾಗಿದ್ದೇನೆ, 2020 ರಲ್ಲಿ ವರ್ಚ್ಯೂಲ್ ಆಗಿ ಸಂಘಟಿಸಿದ್ದೇನೆ ಮತ್ತು ಆಯೋಜಿಸಿದ್ದೇನೆ, ಇದು ಇದ್ದಕ್ಕಿದ್ದಂತೆ ಹೆಚ್ಚಾಗುವ ಮಾರಾಟವನ್ನು ಅರ್ಥಮಾಡಿಕೊಳ್ಳಲು ಮತ್ತು ಫೋಟೋಗಳು ಆನ್‌ಲೈನ್ ಶಾಪಿಂಗ್ ಅನುಭವದ ಮೇಲೆ ಎಷ್ಟು ಗಾಢವಾಗಿ ಪರಿಣಾಮ ಬೀರುತ್ತದೆಂದು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು.
ನನ್ನ ಅಕೌಂಟ್ ಮ್ಯಾನೇಜರ್ ನನಗೆ ಬೆಲೆಗಳ ಬಗ್ಗೆ ಒಳನೋಟಗಳನ್ನು ನೀಡಿದರು, ದಾಸ್ತಾನುಗಳನ್ನು ನಿರ್ವಹಿಸಲು ಮತ್ತು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಗುರಿಯ ಸಂಖ್ಯೆಯನ್ನು ಹೇಳಿದರು. ಫ್ಲಿಪ್‌ಕಾರ್ಟ್ ನನಗೆ ಅತ್ಯುತ್ತಮ ತಂತ್ರವನ್ನು ನೀಡಿತು ಮತ್ತು ದಿ ಬಿಗ್ ಬಿಲಿಯನ್ ಡೇಸ್ 2020 ಮಾರಾಟವು ಚೆನ್ನಾಗಿ ನಡೆಯಿತು.
ವಾಸ್ತವವಾಗಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ದಿ ಬಿಗ್ ಬಿಲಿಯನ್ ಡೇಸ್ 2020 ಮಾರಾಟದ ಸಮಯದಲ್ಲಿ ನಾವು ಅತ್ಯಂತ ಹೆಚ್ಚಿನ ಸಂಖ್ಯೆಯನ್ನು ಸಾಧಿಸಿದ್ದೇವೆ! ಈ ಯಶಸ್ಸು ಕಳೆದ ಕೆಲವು ವರ್ಷಗಳಿಂದ ಪಡೆದ ಒಳ್ಳೆಯ ಕಲಿಕೆಯೊಂದಿಗೆ ಬಂದಿದೆ. ಈ ಬಾರಿ, ನಾವು ಉತ್ತಮ ಯೋಜನೆಯೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಕೆಲವು ಸಾಹಸಗಳನ್ನು ಕೂಡ ಮಾಡಿದ್ದೇವೆ! ಇದಕ್ಕಾಗಿಯೇ ನಾವು ಉತ್ತಮ ಫಲಿತಾಂಶಗಳನ್ನು ಪಡೆದುಕೊಂಡಿದ್ದೇವೆ.
ಪೂರೈಕೆ ಸರಪಳಿಯ ಜೊತೆಗೂ ನಾವು ತುಂಬಾ ಲಾಭದಾಯಕ ಅನುಭವವನ್ನು ಹೊಂದಿದ್ದೇವೆ – ಇಲ್ಲಿ ಹೆಚ್ಚು ಪಿನ್ ಕೋಡ್‌ಗಳಿಗೆ ಈ ವರ್ಷ ಸೇವೆ ನೀಡಬೇಕಿತ್ತು ಮತ್ತು ನಮ್ಮ ಪಿಕ್-ಅಪ್‌ಗಳು ಸಹ ಸರಾಗವಾಗಿ ಸಾಗಿದವು. ಸಾಂಕ್ರಾಮಿಕದ ನಡುವೆಯೂ ಲಾಜಿಸ್ಟಿಕ್ಸ್ ಅನ್ನು ಚೆನ್ನಾಗಿ ನಡೆಸಲಾಯಿತು!
ಬಿಗ್ ಬಿಲಿಯನ್ ಡೇಸ್ 2020 ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುವುದೇ ಒಂದು ದೊಡ್ಡ ಕಾರ್ಯಕ್ರಮವಾಗಿತ್ತು. ನನ್ನ ಗೋದಾಮು 24X7 ಕಾರ್ಯನಿರ್ವಹಿಸುತ್ತಿತ್ತು. ನನ್ನ ಸಿಬ್ಬಂದಿ ಪಾಳಿಯಲ್ಲಿ ಕೆಲಸ ಮಾಡಿದರು ಮತ್ತು ಅವರು ಮಾಡಿದ ಅಪಾರ ಪ್ರಯತ್ನದಿಂದಾಗಿ, ನಾವು ಮಾರಾಟದ ಎಲ್ಲಾ 6 ದಿನಗಳಲ್ಲೂ ಹಾಗೂ ಹಬ್ಬದ ಋತುವಿನಲ್ಲಿ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಯಿತು.
ಕೋವಿಡ್-19 ಕಾರಣದಿಂದಾಗಿ ನಾವೆಲ್ಲರೂ ಸ್ವಲ್ಪಕಾಲ ಸಿಕ್ಕಿಹಾಕಿಕೊಂಡಿದ್ದರೂ, ದೇವರ ದಯೆಯಿಂದ ಪಾಣಿಪತ್ ಮೇಲೆ ಹೆಚ್ಚು ಪರಿಣಾಮವಾಗಿರಲಿಲ್ಲ. ನನ್ನ ಕುಟುಂಬವೂ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಕೆಲಸಕ್ಕೆ ಮರಳಲು ನನಗೆ ಬೆಂಬಲ ನೀಡಿತು . ಈಗ, ಮುಂದಿನ ದೊಡ್ಡ ಮಾರಾಟಕ್ಕಾಗಿ ನಾನು ಈಗಾಗಲೇ ಯೋಜಿಸುತ್ತಿದ್ದೇನೆ!
ಇದನ್ನೂ ಓದಿ: ಒಗ್ಗಟ್ಟಿನಲ್ಲಿ ಬಲ – ಈ ಗಂಡ-ಹೆಂಡತಿ ಜೋಡಿ ಫ್ಲಿಪ್‌ಕಾರ್ಟ್ ಮಾರಾಟಗಾರರಾಗಿ ತಮ್ಮ ಅದ್ಭುತವಾದ ಮೈಲಿಗಲ್ಲನ್ನು ಸಾಧಿಸಿದರು!