ಫ್ಲಿಪ್ ಕಾರ್ಟ್ ಗ್ರಾಹಕ ಸೇವೆಯನ್ನು ಸಂಪರ್ಕಿಸಬೇಕೆ, ಅಥವಾ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕೆ? ಫ್ಲಿಪ್ ಕಾರ್ಟ್ ಅನ್ನು ಸಂಪರ್ಕಿಸಲು ಅತ್ಯಂತ ಅನುಕೂಲಕರ ಮತ್ತು ಸುಲಭವಾದ ಮಾರ್ಗಗಳ ಪಟ್ಟಿ ಇಲ್ಲಿದೆ

ನೀವು ಫ್ಲಿಪ್‌ಕಾರ್ಟ್ ಸಂಪರ್ಕಿಸಲು ಅಥವಾ ನಮ್ಮ ವಿವಿಧ ವಿಭಾಗಗಳೊಂದಿಗೆ ಮಾತನಾಡಲು ಇಷ್ಟಪಡುತ್ತೀರಾ? ಇಲ್ಲಿವೆ ನೋಡಿ ನೀವು ನಮ್ಮನ್ನು ಸಂಪರ್ಕಿಸಲು ವಿವಿಧ ಮಾರ್ಗಗಳು.
ನಮ್ಮನ್ನು ಸಂಪರ್ಕಿಸಲು ಅತ್ಯಂತ ಸುಲಭದ ಮಾರ್ಗವೆಂದರೆ ಸಹಾಯ ಕೇಂದ್ರವನ್ನು ಸಂಪರ್ಕಿಸುವುದು. ನೀವು ಈ ಲಿಂಕ್ ಅನ್ನು ಫ್ಲಿಪ್‌ಕಾರ್ಟ್ ಮೊಬೈಲ್ ಆಪ್ ಮೂಲಕ, ಅಥವಾ ಫ್ಲಿಪ್‌ಕಾರ್ಟ್ ಮೊಬೈಲ್ ವೆಬ್‌ಸೈಟ್ ಅಥವಾ ಡೆಸ್ಕ್‌ಟಾಪ್ ವೆಬ್‌ಸೈಟ್ https://www.flipkart.com ಗೆ ಭೇಟಿ ನೀಡುವ ಮೂಲಕ ಪ್ರವೇಶಿಸಬಹುದು.
Don't call the wrong number. To reach @Flipkart, use the Help Center on the Flipkart mobile app or desktop site. We're always listening to you. Read about other ways to reach us in English, हिन्दी, ಕನ್ನಡ, বাংলা, ગુજરાતી & मराठी https://t.co/FgM5RvYDy9 @flipkartsupport pic.twitter.com/lFO2W84B5s
— Flipkart Stories (@FlipkartStories) February 12, 2021
ಆರ್ಡರ್‌ಗೆ ಸಂಬಂಧಿಸಿದ ಪ್ರಶ್ನೆಗಳಿವೆಯೆ? ನೀವು ಈ ರೀತಿ ಫ್ಲಿಪ್‌ಕಾರ್ಟ್ ಅನ್ನು ಸಂಪರ್ಕಿಸಬಹುದು
ನಮ್ಮೊಂದಿಗೆ ಮಾತನಾಡಬೇಕು ಅಥವಾ ನಿಮ್ಮ ಇತ್ತೀಚಿನ ಆರ್ಡರ್ ಬಗ್ಗೆ ಸಮಸ್ಯೆ ಹಂಚಿಕೊಳ್ಳಲು ಇಷ್ಟಪಡುತ್ತೀರಾ? ‘My Orders’ ಸ್ಕ್ರೀನ್‌ನಲ್ಲಿ ‘Need Help’ ಮೇಲೆ ಟ್ಯಾಪ್/ಕ್ಲಿಕ್ ಮಾಡಿ (ಕೆಳಗೆ ನೀಡಿರುವ ಸ್ಕ್ರೀನ್‌ಶಾಟ್ ನೋಡಿ). ಈ ಸೌಲಭ್ಯವನ್ನು ಉಪಯೋಗಿಸಬೇಕೆಂದರೆ ನೀವು ನಿಮ್ಮ ನೋಂದಾಯಿತ ಇಮೇಲ್/ಮೊಬೈಲ್ ಸಂಖ್ಯೆಯಿಂದ ಫ್ಲಿಪ್‌ಕಾರ್ಟ್‌ಗೆ ಲಾಗ್ ಇನ್ ಆಗಬೇಕು.
ಫ್ಲಿಪ್‌ಕಾರ್ಟ್ ಅನ್ನು ಸಂಪರ್ಕಿಸಲು ಇರುವ ಬೇರೆ ಮಾರ್ಗಗಳಾವುವು?
ನೀವು ಫ್ಲಿಪ್‌ಕಾರ್ಟ್ ಆ್ಯಪ್‌ನಲ್ಲಿ ನಮಗೆ ಇಮೇಲ್ ಕಳುಹಿಸಬಹುದು ಅಥವಾ ನಮ್ಮೊಂದಿಗೆ ಸಂಭಾಷಣೆ ನಡೆಸಬಹುದು (ಸ್ಕ್ರೀನ್‌ಶಾಟ್ ನೋಡಿ).
ಫ್ಲಿಪ್‌ಕಾರ್ಟ್‌ನ ಅಂಚೆ ವಿಳಾಸವೇನು?
ಕೆಳಗೆ ನೀಡಿದ ನಮ್ಮ ಅಂಚೆ ವಿಳಾಸಕ್ಕೆ ಪತ್ರ ಬರೆಯಬಹುದು:
ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈ.ಲಿ.
ಬ್ಲಾಕ್ ಬಿ (ಬೆಗೋನಿಯಾ), ತಳ ಮಹಡಿ, ಎಂಬಸಿ ಟೆಕ್ ವಿಲೇಜ್,
ಔಟರ್ ರಿಂಗ್ ರೋಡ್, ದೇವರಬೀಸನಹಳ್ಳಿ ಗ್ರಾಮ,
ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲೂಕು
ಬೆಂಗಳೂರು ಜಿಲ್ಲೆ, ಕರ್ನಾಟಕ, ಭಾರತ. PIN 560103
ದಯವಿಟ್ಟು ಫ್ಲಿಪ್‌ಕಾರ್ಟ್ ಡೆಸ್ಕ್‌ಟಾಪ್ ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೊಬೈಲ್ ಆ್ಯಪ್‌ನಲ್ಲಿರುವ ಹೆಲ್ಪ್ ಸೆಂಟರ್‌ನಲ್ಲಿ ನಮ್ಮನ್ನು ಸಂಪರ್ಕಿಸುವ ಬೇರೆ ಮಾರ್ಗಗಳನ್ನು ನೋಡಿ.
ಫ್ಲಿಪ್‌ಕಾರ್ಟ್ ಆಪ್ ಅನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು
ಭಾರತದಲ್ಲಿ 10 ಕೋಟಿಗೂ ಹೆಚ್ಚು ಗ್ರಾಹಕರು ಫ್ಲಿಪ್‌ಕಾರ್ಟ್ ಶಾಪಿಂಗ್ ಆಪ್ ಉಪಯೋಗಿಸುತ್ತಾರೆ. ಫ್ಲಿಪ್‌ಕಾರ್ಟ್ ಶಾಪಿಂಗ್ ಆ್ಯಪ್‌ನ ಹೊಸ ಆವೃತ್ತಿಯನ್ನು ನಿಮ್ಮ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗೆ (iOS & Android)ತಕ್ಕಂತೆ ಡೌನ್‌ಲೋಡ್ ಮಾಡಿಕೊಳ್ಳಲು, ಇಲ್ಲಿಂದ ಪ್ರಾರಂಭಿಸಿ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ FAQ ಓದಿ