ಫ್ಲಿಪ್ ಕಾರ್ಟ್‌ನಲ್ಲಿ ನಿಮ್ಮ ಆರ್ಡರ್ ಎಲ್ಲಿಗೆ ತಲುಪಿದೆ ಎಂಬುದನ್ನು ಕಂಡುಹಿಡಿಯುವುದು ಈಗ ಇನ್ನೂ ಸುಲಭ: ಇಲ್ಲಿದೆ ಲಘು ಮಾರ್ಗದರ್ಶಿ!

Read this article in हिन्दी | English | বাংলা | தமிழ் | ગુજરાતી | मराठी

ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ಯಾವಾಗ ನಿಮ್ಮ ಕೈಗೆ ಸೇರುವುದೋ ಎಂದು ಕಾತುರದಿಂದ ಕಾಯುತ್ತಿದ್ದೀರಾ? ಆಪ್ ನಲ್ಲಿ ಅಪ್ಡೇಟ್ ಗಳು ಮತ್ತು ಹೆಚ್ಚುವರಿ ಲಕ್ಷಣಗಳಿಂದಾಗಿ ನಿಮ್ಮ ಆರ್ಡರ್ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು ಇನ್ನೂ ಸುಲಭವಾಗಿದೆ. ಯಾವಾಗ ನಿಮ್ಮ ಡೋರ್ ಬೆಲ್ ಬಾರಿಸುವುದೋ ಎಂದು ಊಹಿಸುತ್ತ ಕೂರಬೇಕಾಗಿಲ್ಲ. ನಿಮಗೆ ಗೊತ್ತಿರಬೇಕಾದ ಸಂಗತಿಗಳು ಇಲ್ಲಿವೆ ನೋಡಿ.

Flipkart order

ಫ್ಲಿಪ್ ಕಾರ್ಟ್ ಮಾರಾಟ ನಡೆದಾಗ ದೊರೆಯುವ ಎಲ್ಲ ಅದ್ಭುತ ಆಕರ್ಷಕ ಬೆಲೆಗಳ ಪ್ರಯೋಜನ ಪಡೆಯುವುದಕ್ಕಿಂತ ರೋಮಾಂಚಕಾರಿ ಅನುಭವ ಇನ್ನೇನಿದೆ? ಇದೆಯಲ್ಲ, ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ನಿಮ್ಮ ಕೈಗೆ ಸೇರುವುದು!

ಫ್ಲಿಪ್ ಕಾರ್ಟ್ ನ ಹೊಸ ಮತ್ತು ಅಪ್ಡೇಟ್ ಮಾಡಲಾದ My Orders ಟ್ಯಾಬ್ ಮೂಲಕ ನಿಮ್ಮ ಮೊಬೈಲ್ ಆಪ್ ನಿಂದಲೇ ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ಎಲ್ಲಿದೆ ಎಂಬುದನ್ನು ಗುರುತಿಸುವುದು ಸುಲಭವಾಗಿದೆ. ನಿಮ್ಮ ಆರ್ಡರ್ ಯಾವಾಗ ಖರೀದಿಸಲಾಯಿತು ಎಂಬುದರಿಂದ ಹಿಡಿದು ಅದು ಪ್ಯಾಕಿಂಗ್ ಮತ್ತು ಶಿಪ್ಪಿಂಗ್ ನ ಯಾವ ಹಂತದಲ್ಲಿದೆ ಎಂಬ ಎಲ್ಲ ವಿವರಗಳು ನಿಮಗೆ ಯಾವಾಗ ಬೇಕಾದರೂ ತಿಳಿಯುತ್ತವೆ. ಉಸಿರು ಬಿಗಿ ಹಿಡಿದು ಪ್ರತಿ ಕ್ಷಣ ಬಾಗಿಲ ಕೀಹೋಲ್ ಮೂಲಕ ನೋಡುವ ಅಥವಾ ಕರೆಗಾಗಿ ಕಾಯುತ್ತ ಕೂಡುವ ಅಗತ್ಯವಿಲ್ಲ!

ಇದು ಹೀಗೆ ಕೆಲಸ ಮಾಡುತ್ತದೆ.

ನಿಮಗೆ ಬೇಕಾದ ವಸ್ತುವನ್ನು ಆರ್ಡರ್ ಮಾಡಿ

ನೀವು ಬಿಗ್ ಬಿಲಿಯನ್ ಡೇ ಸೇಲ್, ವಿವಿಧ ಫ್ಲಾಶ್ ಸೇಲ್ ಗಳು, ಡೀಲ್ಸ್ ಆಫ್ ದಿ ಡೇ, ಅಥವಾ ವರ್ಷದುದ್ದಕ್ಕೂ ಫ್ಲಿಪ್ ಕಾರ್ಟ್ ನೀಡುವ ಕೊಡುಗೆಗಳಿಂದ ಸಾಕಷ್ಟು ಪ್ರಯೋಜನ ಪಡೆದಾಗ, ನೀವು ಫ್ಲಿಪ್ ಕಾರ್ಟ್ ಆಪ್, ಎಮ್-ಸೈಟ್ ಅಥವಾ ಡೆಸ್ಕ್ ಟಾಪ್ ವೆಬ್ ಸೈಟ್ ಗೆ ಲಾಗ್ ಇನ್ ಆದ ತಕ್ಷಣ ನಿಮ್ಮ ಎಲ್ಲ ಆರ್ಡರ್ ಗಳನ್ನು ಸೇವ್ ಮಾಡಿ ಪಟ್ಟಿ ಮಾಡಲಾಗುತ್ತದೆ. ನೀವು ಹಣ ಪಾವತಿಸಲು ಯಾವುದೇ ಪಾವತಿ ಆಯ್ಕೆಯನ್ನು ಆಯ್ದುಕೊಂಡಿರಬಹುದು — ಅದು ನೆಟ್ ಬ್ಯಾಂಕಿಂಗ್ ಇರಬಹುದು, ಕ್ರೆಡಿಟ್/ಡೆಬಿಟ್ ಕಾರ್ಡ್ ಇರಬಹುದು, ಫ್ಲಿಪ್ ಕಾರ್ಟ್ ಪೇ ಲೇಟರ್‍, CoD ಅಥವಾ ಫೋನ್ ಪೆ ವಾಲೆಟ್ ಆಗಿರಬಹುದು — ಆಪ್ ನಿಮ್ಮನ್ನು ನೇರವಾಗಿ ಟ್ರಾಕಿಂಗ್ ಪೇಜ್ ಗೆ ಒಯ್ಯುತ್ತದೆ.


My Orders ಗೆ ಹೋಗಿ

ನೀವು ನಂತರ ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ಎಲ್ಲಿದೆ ಎಂದು ನೋಡಲು ಇಷ್ಟಪಟ್ಟರೆ, ನಿಮ್ಮ ಫ್ಲಿಪ್ ಕಾರ್ಟ್ ಆಪ್, ಎಮ್-ಸೈಟ್ ಅಥವಾ ಡೆಸ್ಕ್ ಟಾಪ್ ನಲ್ಲಿ My Ordersಗೆ ಹೋಗಿ.


ನಿಮ್ಮ ಆರ್ಡರ್ ಆಯ್ದುಕೊಳ್ಳಿ

ನೀವು My Orders ಮೇಲೆ ಟ್ಯಾಪ್ ಮಾಡಿದರೆ ಸಾಕು, ನೀವು ಮಾಡಿದ ಎಲ್ಲ ಆರ್ಡರ್ ಗಳ ಪಟ್ಟಿ ನಿಮಗೆ ದೊರೆಯುತ್ತದೆ. ನೀವು ಫ್ಲಿಪ್ ಕಾರ್ಟ್ ನಿಂದ ಖರೀದಿಸಿದ ಎಲ್ಲ ನೆಚ್ಚಿನ ವಸ್ತುಗಳನ್ನು ನೋಡಲು ಸ್ಕ್ರೋಲ್ ಮಾಡುತ್ತ ಹೋಗಿ. ಉತ್ಪನ್ನದ ಹೆಸರು, ಒಂದು ಚಿತ್ರ, ಮತ್ತು ಅದರ ಕೆಳಗೆ ನಿಮ್ಮ ಆರ್ಡರ್ ಯಾವಾಗ ಬರುವುದು, ಅಥವಾ ಬಂದಿತ್ತು, ಎಂಬುದನ್ನು ತಿಳಿಸುವ ನೋಟಿಫಿಕೇಶನ್ ಇರುತ್ತದೆ.

Flipkart order
ಫ್ಲಿಪ್ ಕಾರ್ಟ್ ಡೆಸ್ಕ್ ಟಾಪ್ ಸೈಟ್ ನಲ್ಲಿ, ನಿಮ್ಮ ಆರ್ಡರ್ ಎಲ್ಲಿದೆ ಎಂಬುದರ ವಿವರಗಳನ್ನು ನೋಡಲು ‘Track’ ಮೇಲೆ ಕ್ಲಿಕ್ ಮಾಡಿ

ಆರ್ಡರ್ ಎಲ್ಲಿದೆ ಎಂಬುದರ ವಿವರಗಳನ್ನು ಪಡೆಯಿರಿ

ಫ್ಲಿಪ್ ಕಾರ್ಟ್ ಮೊಬೈಲ್ ಆಪ್ ನಲ್ಲಿ ನಿಮ್ಮ ಆರ್ಡರ್ ಹೇಗೆ ನಿಮ್ಮನ್ನು ತಲುಪುತ್ತಿದೆ ಎಂಬುದನ್ನು ತೋರಿಸುವ ಉದ್ದ ರೇಖೆ ಕಾಣಿಸುತ್ತದೆ. ಈ ‌ಅನುಕ್ರಮದಲ್ಲಿ ನಾಲ್ಕು ಹಂತಗಳಿರುತ್ತವೆ – ಆರ್ಡರ್ ಮಾಡಲಾಯಿತು & ಅನುಮೋದಿಸಲಾಗಿದೆ, ಪ್ಯಾಕ್ ಮಾಡಲಾಗಿದೆ, ರವಾನಿಸಲಾಗಿದೆ ಮತ್ತು ತಲುಪಿದೆ. ನಿಮ್ಮ ಆರ್ಡರ್ ಯಾವ ಹಂತದಲ್ಲಿದೆ ಎಂಬುದನ್ನು ಆಧರಿಸಿ ಆ ರೇಖೆ ಹಸಿರು ಅಥವಾ ಬೂದು ಬಣ್ಣಕ್ಕೆ ಬದಲಾಗುತ್ತದೆ. ತೀರ ಇತ್ತೀಚಿನ ಹಂತವನ್ನು ವೃತ್ತಾಕಾರದ ಸಂಕೇತದಿಂದ ಗುರುತಿಸಲಾಗಿರುತ್ತದೆ. ಉದಾಹರಣೆಗಾಗಿ, ನಿಮ್ಮ ಆರ್ಡರ್ ಅನ್ನು ರವಾನಿಸಲಾಗಿದ್ದರೆ, ಮೂರನೇ ಹಂತದತ್ತ – ರವಾನಿಸಲಾಗಿದೆ – ಕಡೆಗೆ ನಿಮ್ಮ ಗಮನ ಸೆಳೆಯುವುದಕ್ಕಾಗಿ ಕಡುಬಣ್ಣಕ್ಕೆ ತಿರುಗಿ ಅನಂತರ ಮರೆಯಾಗುವ ವೃತ್ತಾಕಾರ ಕಾಣಿಸುತ್ತದೆ.

Flipkart order
ನಿಮ್ಮ ಫ್ಲಿಪ್ ಕಾರ್ಟ್ ಮೊಬೈಲ್ ಆಪ್ ನಲ್ಲಿ ಪ್ರತಿಯೊಂದು ಆರ್ಡರ್ ಸಂಖ್ಯೆಗೆ ಸಂಬಂಧಿಸಿದಂತೆ ಸಂಪೂರ್ಣ ಟ್ರಾಕಿಂಗ್ ವಿವರಗಳನ್ನು ಪಡೆಯಿರಿ

Flipkart order


ಇನ್ನಷ್ಟು ವಿವರಗಳು

ಇನ್ನಷ್ಟು ವಿವರಗಳು ಬೇಕೆ? ನಾಲ್ಕು ಹಂತಗಳ ಪೈಕಿ ಯಾವುದಾದರೂ ಒಂದು ಹಂತದ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆರ್ಡರ್ ನಿಮ್ಮನ್ನು ತಲುಪುವ ನಿರೀಕ್ಷಿತ ದಿನಾಂಕದೊಂದಿಗೆ ಎಲ್ಲ ವಿವರಗಳೂ ನಿಮಗೆ ದೊರೆಯುತ್ತದೆ. ಉದಾಹರಣೆಗಾಗಿ, ನಿಮ್ಮ ಆರ್ಡರ್ ಅನ್ನು ರವಾನಿಸಲಾಗಿದ್ದರೆ ಅಥವಾ ಶಿಪ್ ಮಾಡಲಾಗಿದ್ದರೆ, ಅದನ್ನು ಎಲ್ಲಿಗೆ ರವಾನಿಸಲಾಗಿದೆ, ಸ್ವೀಕರಿಸಲಾಗಿದೆ ಮತ್ತು ಅಲ್ಲಿಂದ ಕಳುಹಿಸಲಾಗಿದೆ ಎಂಬುದರ ಜೊತೆಗೆ ಪ್ರಸ್ತುತ ದಿನಾಂಕಗಳನ್ನು ನೋಡಬಹುದು. ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಬ್ಯಾಕ್ ಬಟನ್ ಒತ್ತಿ ಮೇನ್ ಮೆನುಗೆ ಮರಳಿ.

Flipkart order
ಫ್ಲಿಪ್ ಕಾರ್ಟ್ ಡೆಸ್ಕ್ ಟಾಪ್ ಸೈಟ್ ನಲ್ಲಿ ಆರ್ಡರ್ ವಿವರಗಳೊಂದಿಗೆ ನಿರೀಕ್ಷಿತ ತಲುಪುವ ದಿನಾಂಕವನ್ನು ಕೂಡ ನೋಡಬಹುದು

ನಿಮ್ಮ ಆರ್ಡರ್ ನಿಂದ ಹೆಚ್ಚಿನ ಪ್ರಯೋಜನ ಪಡೆಯಿರಿ

ನಿಮ್ಮ ಆರ್ಡರ್ ಎಲ್ಲಿದೆ ಎಂದು ನೋಡುವುದರ ಜೊತೆಗೆ ಇನ್ನೂ ಹೆಚ್ಚಿನದನ್ನು ಮಾಡಬೇಕೆಂದುಕೊಂಡಿದ್ದೀರಾ? ಆರ್ಡರ್ ತಲಪುವ ಅಥವಾ ಡೆಲಿವರಿ ಅನುಕ್ರಮದ ಕೆಳಗೆ, ಎರಡು ದೊಡ್ಡ ಟ್ಯಾಬ್ ಗಳು ಕಾಣಿಸುತ್ತವೆ: ‘Cancel’ ಮತ್ತು ‘Need Help?’. ರದ್ದುಗೊಳಿಸಲು ಅದಕ್ಕೆ ಕಾರಣ ನೀಡಿದ ನಂತರ Cancel ಒತ್ತಿ ಮತ್ತು ಈ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಲು ಆ ಪುಟದಲ್ಲಿ ನೀಡಿರುವ ಆಯ್ಕೆಗಳನ್ನು ಆಯ್ದುಕೊಳ್ಳುತ್ತ ಹೋಗಿ.


ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ಗೆ ಸಂಬಂಧಿಸಿದಂತೆ ಸಹಾಯ ಬೇಕೆ?

‘Need Help?’ ಒತ್ತಿ, ಬೇರೆ ಸ್ಕ್ರೀನ್ ಗೆ ಹೋಗಿ ರದ್ದುಗೊಳಿಸುವುದು, ಮರಳಿಸುವುದು, ರಿಯಾಯ್ತಿಗಳು, ಅಥವಾ ಪಾವತಿಗಳು ಹೀಗೆ ಯಾವುದೇ ನಿಮ್ಮ ಆರ್ಡರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಆಯ್ಕೆ ಮಾಡುವ ಮಾಡಬಹುದು. ಇಲ್ಲಿ ‘How do I check if a cashback is applied to my order?’ ಅಥವಾ ‘My order is delayed’ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಸಮಸ್ಯೆಯ ಮೇಲೆ ಕ್ಲಿಕ್ ಮಾಡಿ, ತಕ್ಷಣ ಉತ್ತರ ಪಡೆಯಿರಿ.


ಹೆಚ್ಚಿನ ಸಹಾಯ ಪಡೆಯಲು ಫ್ಲಿಪ್ ಕಾರ್ಟ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ

ನಿಮಗೆ ಹೆಚ್ಚಿನ ಸಹಾಯ ಬೇಕಾಗಿದ್ದರೆ, ಪುಟದ ಕೆಳಗಡೆ ಇರುವ Contact Us ಬಟನ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಪ್ರಶ್ನೆ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ನೀವು ಫ್ಲಿಪ್ ಕಾರ್ಟ್ ತಂಡಕ್ಕೆ ಇಮೇಲ್ ಮಾಡಬಹುದು ಅಥವಾ ಅವರೊಂದಿಗೆ ಮಾತನಾಡಬಹುದು.


ಫ್ಲಿಪ್ ಕಾರ್ಟ್ ಆರ್ಡರ್ ಅಪ್ಡೇಟ್ಸ್ ಸಬ್ ಸ್ಕ್ರೈಬ್ ಮಾಡಿ

ನಿಮ್ಮ ಆರ್ಡರ್ ಎಲ್ಲಿದೆ ಎಂಬುದನ್ನು ಗುರುತಿಸುವುದನ್ನು ಸುಲಭವಾಗಿಸಲು, ಮೇನ್ ಪೇಜ್ ನಲ್ಲಿ ಎರಡು ಹೆಚ್ಚುವರಿ ಲಕ್ಷಣಗಳನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ ಆರ್ಡರ್ ಬಗ್ಗೆ ಆಟೊಮೆಟಿಕ್ ಅಪ್ಡೇಟ್ ಪಡೆಯಲು, ಸಣ್ಣ ನೀಲಿ ಗಂಟೆಯ ಚಿತ್ರವಿರುವ Subscribe to Updates ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡುವ ಮೂಲಕ ಆಪ್ ತೆರೆಯದೆಯೇ ನಿಮ್ಮ ಆರ್ಡರ್ ಬಗ್ಗೆ ಮಾಹಿತಿ ಪಡೆಯಬಹುದು.

Flipkart order
ನಿಮ್ಮ ಫ್ಲಿಪ್ ಕಾರ್ಟ್ ಆಪ್ ನಿಮ್ಮ ಆರ್ಡರ್ ವಿವರಗಳನ್ನು ಹಂತ ಹಂತವಾಗಿ ತಿಳಿಸುತ್ತದೆ
Flipkart order
ಫ್ಲಿಪ್ ಕಾರ್ಟ್ ಡೆಸ್ಕ್ ಟಾಪ್ ಸೈಟ್ ನಲ್ಲಿ ಲಾಗಿನ್ ಆದ ನಂತರ ನಿಮ್ಮ ಆರ್ಡರ್ ‌ಎಲ್ಲಿದೆ ಎಂಬುದನ್ನು ನೋಡಿ

ನಿಮ್ಮ ಫ್ಲಿಪ್ ಕಾರ್ಟ್ ಆರ್ಡರ್ ವಿವರಗಳನ್ನು ಹಂಚಿಕೊಳ್ಳಿ

ಅದೇ ರೀತಿ, Share order details ಒತ್ತುವ ಮೂಲಕ ನೀವು ಇಷ್ಟ ಪಡುವ ಎಲ್ಲ ಲಕ್ಷಣಗಳನ್ನು ಹಂಚಿಕೊಳ್ಳಿ, ಅಂದರೆ ನಿಮ್ಮ ಆರ್ಡರ್ ಎಲ್ಲಿದೆ ಎಂಬುದನ್ನು ನೋಡುವುದು, ಅದನ್ನು ರದ್ದುಗೊಳಿಸುವುದು, ಬೇರೆಯವರೊಂದಿಗೆ ಎಕ್ಸ್ ಚೇಂಜ್ ಮಾಡಿಕೊಳ್ಳುವುದು ಅಥವಾ ಬದಲಾಯಿಸುವುದನ್ನು ಮಾಡಬಹುದು. ಈ ಸೌಕರ್ಯ ನೀವು ಬೇರೆಯವರಿಗಾಗಿ, ಅಂದರೆ ಬೇರೆ ನಗರದಲ್ಲಿರುವ ನಿಮ್ಮ ಸಹೋದರಿಗಾಗಿ ಅಥವಾ ನಿಮ್ಮ ಸ್ನೇಹಿತನಿಗಾಗಿ ಜನ್ಮದಿನದ ಉಡುಗೊರೆ ಖರೀದಿಸುವುದು, ಇವುಗಳಿಗೆ ಅನ್ವಯಿಸುತ್ತದೆ. ನೀವು ಮಾಡಬೇಕಾಗಿರುವುದಿಷ್ಟೆ, ಅವರ ದೂರವಾಣಿ ಸಂಖ್ಯೆ ಮತ್ತು ಹೆಸರು ನಮೂದಿಸಿ ಹಾಗೂ ಅವರ ಆರ್ಡರ್ ಎಲ್ಲಿದೆ ಎಂಬುದು ಅವರಿಗೆ ತಿಳಿಯುವಂತೆ ಮಾಡಲು Share ಮೇಲೆ ಕ್ಲಿಕ್ ಮಾಡಿ ಆರ್ಡರ್ ವಿವರಗಳನ್ನು ಹಂಚಿಕೊಳ್ಳಿ!

Flipkart order
ಮನೆಯಲ್ಲಿ ಇಲ್ಲವೇ? ಸಮಯಕ್ಕೆ ಸರಿಯಾಗಿ ಆರ್ಡರ್ ತಲಪುವಂತೆ ಮಾಡಲು ನಿಮ್ಮ ಆರ್ಡರ್ ವಿವರಗಳನ್ನು ನಿಮ್ಮ ಪರಿವಾರದ ಸದಸ್ಯರೊಂದಿಗೆ ಹಂಚಿಕೊಳ್ಳಿ

ನಿಮ್ಮ ಫ್ಲಿಪ್ ಕಾರ್ಟ್ ಪ್ಲಸ್ ರಿವಾರ್ಡ್‌ಗಳನ್ನು ನೋಡಿ

ಆರ್ಡರ್ ತಲುಪಿಬೇಕಾದವರ ಹೆಸರು ಮತ್ತು ವಿಳಾಸದ ಜೊತೆಗೆ ಅದರ ರವಾನೆಯ ವಿವರಗಳನ್ನು ನೋಡಲು ಮೈನ್ ಪೇಜ್ ನಲ್ಲಿ ಸ್ಕ್ರೋಲ್ ಡೌನ್ ಮಾಡಿ. ಇದರ ಕೆಳಗೆ, ನೀವು ಗೆದ್ದುಕೊಂಡ Flipkart Coins ನಂತಹ ರಿವಾರ್ಡ್ ಗಳು ಕಾಣಿಸುತ್ತವೆ. ಇವು ಫ್ಲಿಪ್ ಕಾರ್ಟ್ ಪ್ಲಸ್ ಪ್ರಯೋಜನಗಳನ್ನು ಒದಗಿಸುತ್ತವೆ. ಲಾಭ ಮರಳಿಸುವ ಅವಧಿಯಲ್ಲಿ ಇವುಗಳನ್ನು ನಿಮ್ಮ ಖಾತೆಗೆ ಸೇರಿಸಲಾಗುತ್ತದೆ.


ಬಿಲ್ಲಿಂಗ್ ವಿವರಗಳನ್ನು ನೋಡಿ

ಇದರ ಕೆಳಗಡೆ, ನಿಮ್ಮ ಆರ್ಡರ್ ಗೆ ಸಂಬಂಧಿಸಿದಂತೆ ಪಟ್ಟಿಯ ಬೆಲೆ, ಮಾರಾಟ ಬೆಲೆ, ರವಾನೆಯ ಶುಲ್ಕ, ಒಟ್ಟು ಮೊತ್ತ, ಕೊಡುಗೆಗಳು ಮತ್ತು ಹಣ ಪಾವತಿಸುವ ವಿಧಾನ ನೋಡಬಹುದು. ಕೊಡುಗೆಯ ಟ್ಯಾಬ್ ನತ್ತ ಗಮನ ನೀಡಿ, ಏಕೆಂದರೆ ನಿಮ್ಮ ಮುಂದಿನ ಖರೀದಿಯ ವೇಳೆ ನಿಮಗೆ ಪ್ರಯೋಜನ ನೀಡುವಂತಹ ಯಾವುದೇ ಕೊಡುಗೆಗಳನ್ನು ಈ ಟ್ಯಾಬ್ ತೋರಿಸುತ್ತದೆ. ಇದು ಹೇಗೆ ಎಂದು ತಿಳಿದುಕೊಳ್ಳಲು Know More ಬಟನ್ ಕ್ಲಿಕ್ ಮಾಡಿ.

ಹೊಸ ಮತ್ತು ಸರಳ ರೀತಿಯಲ್ಲಿ ನಿಮ್ಮ ಆರ್ಡರ್ ಎಲ್ಲಿದೆ ಎಂದು ತಿಳಿದುಕೊಳ್ಳುವ ಮೂಲಕ ಫ್ಲಿಪ್ ಕಾರ್ಟ್ ನಲ್ಲಿ ಶಾಪಿಂಗ್ ಮಾಡುವುದು ಇನ್ನೂ ಹೆಚ್ಚಿನ ಆನಂದ ನೀಡುತ್ತದೆ! ಹಾಗಾದರೆ, ಇವತ್ತು ನಿಮ್ಮ ಇಷ್ಟವಾದ ವಸ್ತುಗಳ ಪಟ್ಟಿಯಲ್ಲಿ ಏನೇನಿದೆ?

Enjoy shopping on Flipkart