1. Home
  2. Kannada
  3. ಫ್ಲಿಪ್‌ಕಾರ್ಟ್ ಪೇ ಲೇಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ – ಶಾಪಿಂಗ್ ಮಾಡಲು ಅತ್ಯಂತ ಅನುಕೂಲಕರ ಮತ್ತು ವಿಶ್ವಾಸಾರ್ಹ ಮಾರ್ಗ!

ಫ್ಲಿಪ್‌ಕಾರ್ಟ್ ಪೇ ಲೇಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ – ಶಾಪಿಂಗ್ ಮಾಡಲು ಅತ್ಯಂತ ಅನುಕೂಲಕರ ಮತ್ತು ವಿಶ್ವಾಸಾರ್ಹ ಮಾರ್ಗ!

0
Read this article in বাংলা | English | ગુજરાતી | हिन्दी | தமிழ் | मराठी

ಫ್ಲಿಪ್‌ಕಾರ್ಟ್ ಪೇ ಲೇಟರ್ ಎನ್ನುವುದು ಶಾಪಿಂಗ್ ಅನ್ನು ಅನುಕೂಲಕರ ಮತ್ತು ಒತ್ತಡ ಮುಕ್ತವಾಗಿಸಲು ಫ್ಲಿಪ್‌ಕಾರ್ಟ್‌ನಿಂದ ಪರಿಚಯಿಸಲಾದ ಒಂದು ಗ್ರಾಹಕ-ಕೇಂದ್ರಿತ ಕ್ರಾಂತಿಕಾರಿ ಉಪಕ್ರಮವಾಗಿದೆ. ಫ್ಲಿಪ್‌ಕಾರ್ಟ್‌ನ ಡೆಬಿಟ್ ಕಾರ್ಡ್ ಇಎಂಐ, ನೋ ಕಾಸ್ಟ್ ಇಎಂಐ ಮತ್ತು ಬೈಬ್ಯಾಕ್ ಗ್ಯಾರಂಟಿ ಶಾಪಿಂಗ್ ಅನ್ನು ಕೈಗೆಟುಕುವಂತೆ ಮಾಡುತ್ತದೆ, ಪೇ ಲೇಟರ್ ಆನ್‌ಲೈನ್ ಶಾಪಿಂಗ್ ಅನ್ನು ನಿಮಗೆ ಸುಲಭ ಮತ್ತು ಅನುಕೂಲಕರವಾಗಿಸುತ್ತದೆ. ಈ ಸೇವೆಯನ್ನು ಆನಂದಿಸಲು ನಿಷ್ಠಾವಂತ ಫ್ಲಿಪ್‌ಕಾರ್ಟ್ ಗ್ರಾಹಕರನ್ನು ಗುರುತಿಸಲಾಗಿದೆ, ಮತ್ತು ಅರ್ಹ ಗ್ರಾಹಕರ ಪಟ್ಟಿ ಪ್ರತೀ ತಿಂಗಳೂ ಬೆಳೆಯುತ್ತಿದೆ. ಫ್ಲಿಪ್‌ಕಾರ್ಟ್ ಪೇ ಲೇಟರ್ ಹೇಗೆ ಕೆಲಸ ಮಾಡುತ್ತದೆ? ಇದೆಲ್ಲವೂ ನಿಮ್ಮ ಅನುಕೂಲಕ್ಕಾಗಿಯಷ್ಟೆ – ನಿಮ್ಮ ಉತ್ಪನ್ನವನ್ನು ಆರಿಸಿ, ಪಾವತಿ ವಿವರಗಳು ಅಥವಾ ಒಟಿಪಿಗಳಿಗಾಗಿ ಪರದಾಡದೆಯೇ ತ್ವರಿತವಾಗಿ ಮತ್ತು ಆರಾಮವಾಗಿ ಚೆಕೌಟ್ ಮಾಡಿ, ಉತ್ಪನ್ನವನ್ನು ಸ್ವೀಕರಿಸಿ, ಅದನ್ನು ಅನುಭವಿಸಿ ಮತ್ತು ಅದುನೀವು ಮುಂದಿನ ತಿಂಗಳು ನಿಮ್ಮ ಎಲ್ಲಾ ಉತ್ಪನ್ನಗಳಿಗೂ ಒಂದೇ ಬಾರಿ ಪಾವತಿಸಬಹುದು. ಸರಳವಲ್ಲವೇ ? ಖಂಡಿತವಾಗಿಯೂ ! ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ಫ್ಲಿಪ್‌ಕಾರ್ಟ್ ಪೇ ಲೇಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದೆಲ್ಲವೂ ಇಲ್ಲಿದೆ.

ಫ್ಲಿಪ್‌ಕಾರ್ಟ್ ಪೇ ಲೇಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ – ಶಾಪಿಂಗ್ ಮಾಡಲು ಅತ್ಯಂತ ಅನುಕೂಲಕರ ಮತ್ತು ವಿಶ್ವಾಸಾರ್ಹ ಮಾರ್ಗ!
0

ನೀವು ಭಾರತದ ಯಾವ ಭಾಗದಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಮನೆಗೆ ಉತ್ಪನ್ನಗಳನ್ನು ತಲುಪಿಸುವ ಮತ್ತು ನಿಮ್ಮ ವಹಿವಾಟುಗಳನ್ನು ರಿಜಿಸ್ಟರ್‌ನಲ್ಲಿ ಇರಿಸಿಕೊಳ್ಳುವ ಒಂದು ನೆರೆಹೊರೆಯ ಕಿರಾಣಿ ಅಂಗಡಿ ನಿಮಗೆ ಖಂಡಿತವಾಗಿಯೂ ಪರಿಚಯವಿರುತ್ತದೆ. ನಿಮಗೆ ಸಮಯ ಸಿಕ್ಕಾಗ ನಿಮ್ಮ ಬಾಕಿಗಳನ್ನು ನೀವು ಪಾವತಿಸುತ್ತೀರಿ ಮತ್ತು ಈ ವ್ಯವಸ್ಥೆ ಮುಂದುವರಿಯುತ್ತದೆ. ಇದು ವಿಶ್ವಾಸ ಮತ್ತು ನಿಷ್ಠೆಯ ಮೇಲೆ ನಡೆಯುತ್ತದೆ. ಭಾರತೀಯ ಗ್ರಾಹಕರನ್ನು ಕ್ಯಾಶ್ ಆನ್ ಡಿಲಿವರಿ, ಹಾಗೂ ನೋ ಕಾಸ್ಟ್ ಇಎಮ್‌ಐಗೆ ಪರಿಚಯಿಸಿದ ನಂತರ and Buyback Guarantee, ಫ್ಲಿಪ್‌ಕಾರ್ಟ್ ಇನ್ನೊಂದು ವಿಶಿಷ್ಟವಾದ ಗ್ರಾಹಕ-ಕೇಂದ್ರಿತ ನಾವೀನ್ಯತೆಯನ್ನು ಪರಿಚಯಿಸುತ್ತಿದೆ — ಫ್ಲಿಪ್‌ಕಾರ್ಟ್ ಪೇ ಲೇಟರ್.

ಫ್ಲಿಪ್‌ಕಾರ್ಟ್ ಪೇ ಲೇಟರ್ ಎಂದರೇನು?

ಫ್ಲಿಪ್‌ಕಾರ್ಟ್ ಪೇ ಲೇಟರ್ ಎನ್ನುವುದು ಫ್ಲಿಪ್‌ಕಾರ್ಟ್‌ನಿಂದ ಪರಿಚಯಿಸಲಾದ ಗ್ರಾಹಕ-ಕೇಂದ್ರಿತ ನಾವೀನ್ಯತೆಯಾಗಿದ್ದು ಅದು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಕೈಗೆಟಕುವಿಕೆ ಹಾಗೂ ಅನುಕೂಲದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಇಡೀ ತಿಂಗಳುದ್ದಕ್ಕೂ ನಿಮ್ಮ ಮೆಚ್ಚಿನ ಎಲ್ಲಾ ವಸ್ತುಗಳಿಗಾಗಿ ಶಾಪಿಂಗ್ ಮಾಡಲು ಪೇ ಲೇಟರ್ ನಿಮಗೆ 5000 ರೂ.ಗಳವರೆಗಿನ ಸಾಲವನ್ನು ನೀಡುತ್ತದೆ. ಇಲ್ಲಿ ಅನುಕೂಲವೆಂದರೆ ನಿಮ್ಮ ಎಲ್ಲಾ ಖರೀದಿಗಳಿಗೆ ಒಂದೇ ಬಿಲ್ ಪಡೆಯುವುದು, ತ್ವರಿತ ಒಂದು ಕ್ಲಿಕ್ ಚೆಕೌಟ್ ಮತ್ತು ತಿಂಗಳ ಕೊನೆಯಲ್ಲಿ ನಿಮ್ಮ ಬಿಲ್ ಪಾವತಿಸುವುದಾಗಿದೆ
ಮತ್ತು ಅತ್ಯುತ್ತಮವಾದ ಭಾಗ ಇಲ್ಲಿದೆ – ನಿಮ್ಮ ಉತ್ಪನ್ನಗಳನ್ನು ನೀವು ಅನುಭವಿಸಿದ ನಂತರ ಅವುಗಳಿಗೆ ಪಾವತಿಸಬಹುದು.

ಇದರಲ್ಲಿ ನಿಮಗೇನಿದೆ?

ಪಾವತಿ ಆಯ್ಕೆಯಾಗಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಅನ್ನು ಬಳಸುವುದು ನಿಮಗೆ ಮೂರು ಪ್ರಮುಖ ವೈಶಿಷ್ಟ್ಯಗಳಿಗೆ ಪ್ರವೇಶ ನೀಡುತ್ತದೆ:
ಕ್ರೆಡಿಟ್ ಲೈನ್: ನೀವು 5,000 ರೂ.ವರೆಗೆ ಸಾಲ ಪಡೆದು, ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಿ, ನಿಮ್ಮ ಉತ್ಪನ್ನಗಳನ್ನು ಆನಂದಿಸಬಹುದು ಮತ್ತು ನಂತರ ಮುಂದಿನ ತಿಂಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾವತಿಸಬಹುದು. ನಂತರ ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮುಂದಿನ ತಿಂಗಳ 5 ರೊಳಗೆ ನಿಮ್ಮ ಬಿಲ್ ಪಾವತಿಸಬಹುದು.

ತಕ್ಷಣದ ಖರೀದಿ: ಚೆಕೌಟ್ ಪ್ರಕ್ರಿಯೆಯಲ್ಲಿ ಅನೇಕ ವಿವರಗಳನ್ನು ನೀಡದೇ ನೀವು ಅಕ್ಷರಶಃ ಗುಂಡಿಯನ್ನು ಕ್ಲಿಕ್ ಮಾಡುವುದರ ಮೂಲಕ ಉತ್ಪನ್ನಗಳನ್ನು ಖರೀದಿಸಬಹುದು.

ಪಾವತಿಗಳನ್ನು ಒಟ್ಟಾಗಿಸಿ : > ನೀವು ಒಂದೇ ಸಮಯದಲ್ಲಿ ಅನೇಕ ವಹಿವಾಟುಗಳಿಗಾಗಿ ಶಾಪಿಂಗ್ ಮಾಡಬಹುದು ಮತ್ತು ನಂತರ ಎಲ್ಲದಕ್ಕೂ ಒಟ್ಟಿಗೇ ಪಾವತಿಸಬಹುದು.

ಫ್ಲಿಪ್‌ಕಾರ್ಟ್ ಪೇ ಲೇಟರ್ ಪಾವತಿ ಆಯ್ಕೆಯನ್ನು ಯಾರು ಬಳಸಬಹುದು?

ಫ್ಲಿಪ್‌ಕಾರ್ಟ್ ವಿಶ್‌ಮಾಸ್ಟರ್ ನಿಮ್ಮ ಬಾಗಿಲಲ್ಲಿ ಕಾಯುತ್ತಿರುವಾಗ ನೀವು ಹಣಕ್ಕಾಗಿ ಪರದಾಡಲು ಇಷ್ಟಪಡದವರೇ? ಪಾವತಿಗಾಗಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ 2-ಫ್ಯಾಕ್ತರ್ ಧೃಢೀಕರಣ ಕೋಡ್‌ಗಳನ್ನು ಹಾಕಲು ಸಮಯವಿಲ್ಲವೇ? ಫ್ಲಿಪ್‌ಕಾರ್ಟ್ ಪೇ ಲೇಟರ್ ನಿಮಗೆಂದೇ ತಯಾರಿಸಲ್ಪಟ್ಟಿದೆ. ಇದು ಶಾಪಿಂಗ್ ಅನುಭವವನ್ನು ಅನುಕೂಲಕರ ಮತ್ತು ಬಹಳ ಸರಳಗೊಳಿಸುತ್ತದೆ! ನಿಮ್ಮ ಖರೀದಿಯನ್ನು ಮಾಡಿ, ನಿಮ್ಮ ಡೆಲಿವರಿ ಪಡೆಯಿರಿ ಮತ್ತು ಉತ್ಪನ್ನವನ್ನು ಬಳಸಿ. ನಂತರ, ನೀವು ಮುಂದಿನ ತಿಂಗಳು ಪಾವತಿ ಮಾಡಬಹುದು.
ಫ್ಲಿಪ್‌ಕಾರ್ಟ್ ಪೇ ಲೇಟರ್

 

ನೀವು ಅನೇಕ ಕಾರ್ಡ್‌ಗಳನ್ನು ಹೊಂದಿದ್ದರೂ ಅಥವಾ ಯಾವುದೂ ಇಲ್ಲದಿದ್ದರೂ, ಫ್ಲಿಪ್‌ಕಾರ್ಟ್ ಪೇ ಲೇಟರ್ ಒಂದು ಅನುಕೂಲಕರ ಶಾಪಿಂಗ್ ಪರ್ಯಾಯವಾಗಿದೆ.

ಫ್ಲಿಪ್‌ಕಾರ್ಟ್ ಪೇ ಲೇಟರ್

 

ನೀವು ಫ್ಲಿಪ್‌ಕಾರ್ಟ್ ಪೇ ಲೇಟರ್‌ಗೆ ಅರ್ಹರಾಗಿದ್ದೀರಾ? </ h3>
ಫ್ಲಿಪ್‌ಕಾರ್ಟ್ ಪೇ ಲೇಟರ್

ನೀವು ಕೇವಲ 30 ಸೆಕೆಂಡುಗಳಲ್ಲಿ ಫ್ಲಿಪ್‌ಕಾರ್ಟ್ ಪೇ ಲೇಟರ್‌ಗೆ ಅರ್ಜಿ ಸಲ್ಲಿಸಬಹುದು! ಅರ್ಜಿ ಸಲ್ಲಿಸಲು ನೀವು ಮಾಡಬೇಕಾಗಿರುವುದೆಂದರೆ ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸುವುದು, ನಿಮ್ಮ ದಾಖಲೆಗಳನ್ನು ಪರಿಶೀಲಿಸುವುದು, 30 ಸೆಕೆಂಡುಗಳ ಕಾಲ ಕಾಯುವುದು ಮತ್ತು ನಂತರ ಫ್ಲಿಪ್‌ಕಾರ್ಟ್ ಪೇ ಬಳಸಿ ಶಾಪಿಂಗ್ ಪ್ರಾರಂಭಿಸುವುದು!

 

ಫ್ಲಿಪ್‌ಕಾರ್ಟ್ ಪೇ ಲೇಟರ್

 

ಫ್ಲಿಪ್‌ಕಾರ್ಟ್ ಪೇ ಲೇಟರ್‌ನಲ್ಲಿ, ತುಂಬಾ ಲಾಭಗಳಿವೆ!

ನೀವು ಫ್ಲಿಪ್‌ಕಾರ್ಟ್ ಪೇ ಲೇಟರ್ ಆಯ್ಕೆಯನ್ನು ಬಳಸುವಾಗ, ನಿಮಗೆ ಈ ಲಾಭವಾಗುತ್ತದೆ.
ನೀವು ಸಿದ್ಧರಿದ್ದಾಗ ಪಾವತಿಸಿ: ನಿಮ್ಮ ನೆರೆಹೊರೆಯ ದಿನಸಿ ಅಂಗಡಿಗಳಲ್ಲಿ ನಿಮ್ಮ ಖಾತೆಯನ್ನು ತಿಂಗಳ ಕೊನೆಯಲ್ಲಿ ಹೊಂದಿಸುವಂತೆಯೇ ಇಲ್ಲೂ ನಿಮ್ಮ ಪಾವತಿಯನ್ನು ಮಾಡಲು ನಿಮಗೆ ಅವಕಾಶವಿದೆ. ಪೂರ್ವನಿಯೋಜಿತವಾಗಿ, ಪಾವತಿ ಬಾಕಿಯ ದಿನಾಂಕ ಮುಂದಿನ ತಿಂಗಳ 5 ಆಗಿರುತ್ತದೆ. ಸಹಜವಾಗಿಯೇ ನಿಮಗೆ ಸಮಯ, ಹಣ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ ಇದ್ದಾಗಲೆಲ್ಲಾ ನೀವು ಯಾವಾಗ ಬೇಕಾದರೂ ಸರಿಯಾದ ಮೊತ್ತವನ್ನು ಪಾವತಿಸಬಹುದು.

ಪ್ರಯತ್ನಿಸಿ, ನಂತರ ಖರೀದಿಸಿ: ಉತ್ಪನ್ನಕ್ಕೆ ಮುಂಗಡವಾಗಿ ಪಾವತಿಸುವ ಬದಲು, ನೀವು ಮೊದಲು ಉತ್ಪನ್ನವನ್ನು ಪಡೆದು, ಅದನ್ನು ಬಳಸಿ ನೋಡಿ ನಂತರ ಪಾವತಿಸಲು ಅವಕಾಶವಿದೆ.

ಕ್ಲಬ್ ವಹಿವಾಟುಗಳು: > ನೀವು ಒಂದೇ ತಿಂಗಳಲ್ಲಿ ಫ್ಲಿಪ್‌ಕಾರ್ಟ್‌ನಿಂದ ಒಂದು ಕಾರ್ ಮೊಬೈಲ್ ಚಾರ್ಜರ್, ವ್ಯಾಲೆಟ್ ಮತ್ತು ಒಂದು ಜೋಡಿ ಸನ್‌ಗ್ಲಾಸ್‌ಗಳನ್ನು ಖರೀದಿಸಿದ್ದೀರಾ? ತೊಂದರೆಯಿಲ್ಲ. ನೀವು ಈ ಪಾವತಿ ಆಯ್ಕೆಯನ್ನು ಆರಿಸಿದಾಗ, ನೀವು ಎಲ್ಲಾ ಮೂರು ಆರ್ಡರ್‌ಗಳಿಗೆ ಆರಾಮವಾಗಿ ಒಂದೇ ಬಾರಿ ಪಾವತಿಸಬಹುದು.

ತ್ವರಿತ ಪಾವತಿ: ನೀವು ನಿಮ್ಮ ಪಾವತಿಯನ್ನು ಮಾಡಿದಾಗ, ಪಾವತಿಯನ್ನು ಪೂರ್ಣಗೊಳಿಸಲು ನೀವು ಹಲವಾರು ಹಂತಗಳನ್ನು ದಾಟಿ ಹೋಗಬೇಕಾಗಿಲ್ಲ. ವಹಿವಾಟಿನಲ್ಲಿ ಒಂದು ಕ್ಲಿಕ್ ಪಾವತಿಯನ್ನು ಆನಂದಿಸಿ.

ಎಂದಿಗೂ ನಿಮಗಾಗಿ: ನಿಮ್ಮ ಪಾವತಿ ಆಯ್ಕೆಯಾಗಿ ಫ್ಲಿಪ್‌ಕಾರ್ಟ್ ಪೇ ಲೇಟರ್ ಅನ್ನು ನೀವು ಆರಿಸಿದಾಗ, ನೀವು ಬಹುತೇಕ ಯಾವಾಗಲೂ 100% ಯಶಸ್ಸಿನ ಭರವಸೆ ಇಟ್ಟುಕೊಳ್ಳಬಹುದು.

ಹೆಚ್ಚುವರಿ ಅನುಕೂಲಗಳೊಂದಿಗೆ ಉತ್ತಮ ಪ್ರಯೋಜನಗಳು

ಫ್ಲಿಪ್‌ಕಾರ್ಟ್ ಪೇ ಲೇಟರ್

ಫ್ಲಿಪ್‌ಕಾರ್ಟ್ ಪೇ ಲೇಟರ್

ಫ್ಲಿಪ್‌ಕಾರ್ಟ್ ಪೇ ಲೇಟರ್ ನಗದುರಹಿತ, ಕಾಗದರಹಿತ ಸೌಲಭ್ಯವಾಗಿದೆ ಮತ್ತು ಅದನ್ನು ನಿರ್ವಹಿಸಲು ಮತ್ತು ಚಾಲನೆಯಲ್ಲಿಡಲು ನೀವು ಯಾವುದೇ ನಿರ್ವಹಣಾ ಶುಲ್ಕಗಳನ್ನು ನೀಡಬೇಕಾಗಿಲ್ಲ. ಈ ಪಾವತಿ ಆಯ್ಕೆಯನ್ನು ಬಳಸುವುದು ಹೇಗೆ ಸರಳವಾಗಿದೆ, ಆದರೆ ಪ್ರಯೋಜನಗಳಿಂದ ತುಂಬಿದೆ ಎಂದು ನೋಡೋಣ.

ನಿಮ್ಮ ಆರ್ಡರ್ ರದ್ದುಗೊಳಿಸಿದಾಗ ಅಥವಾ ಉತ್ಪನ್ನವನ್ನು ಹಿಂದಿರುಗಿಸಿದಾಗ ಅದು ತ್ವರಿತ ಮರುಪಾವತಿಯನ್ನು ನೀಡುತ್ತದೆ.

ಕ್ರೆಡಿಟ್ ಕಾರ್ಡ್‌ಗಳಿಗೆ ಹೋಲಿಸಿದರೆ ಶೂನ್ಯ ಬಡ್ಡಿ ಶುಲ್ಕಗಳು ಅಥವಾ ಖಾತೆ ನಿರ್ವಹಣಾ ಶುಲ್ಕಗಳು ಫ್ಲಿಪ್‌ಕಾರ್ಟ್ ಪೇ ಲೇಟರ್ ಅನ್ನು ಹೆಚ್ಚು ಆಕರ್ಷಕ ಹಣಕಾಸು ಆಯ್ಕೆಯಾಗಿಸುತ್ತವೆ. ಕ್ರೆಡಿಟ್ ಕಾರ್ಡ್‌ಗಳನ್ನೂ ಒಳಗೊಂಡಂತೆ ಯಾವುದೇ ಆನ್‌ಲೈನ್ ಪಾವತಿಯ ವಿಧಾನವನ್ನು ಬಳಸಿಕೊಂಡು ನೀವು ಮರುಪಾವತಿ ಮಾಡಬಹುದು.

ಫ್ಲಿಪ್‌ಕಾರ್ಟ್ ಪೇ ಲೇಟರ್ ಬಳಸುವಾಗ ನೆನಪಿಡಬೇಕಾದ

ವಿಷಯಗಳು
ಫ್ಲಿಪ್‌ಕಾರ್ಟ್ ಪೇ ಲೇಟರ್ ಆಯ್ಕೆಯು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವುದನ್ನು ಹೆಚ್ಚು ಲಾಭದಾಯಕವಾಗಿಸುವ ಹಲವಾರು ಪ್ರಯೋಜನಗಳನ್ನು ಒದಗಿಸುವುದರ ಜೊತೆಗೆ ನೀವು ನೆನಪಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ. ನಿಮ್ಮ ಬ್ಯಾಲೆನ್ಸ್ ನೀಡಲು ನೀವು ಭಾಗಶಃ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ನೆನಪಿಡಿ. ನೀವು ಹೆಚ್ಚಿನ ಮೊತ್ತವನ್ನೂ ಪಾವತಿಸಲು ಸಾಧ್ಯವಿಲ್ಲ – ಈ ಸೌಲಭ್ಯವು ನೀವು ಹೆಚ್ಚುವರಿ ಹಣವನ್ನು ನಿಲುಗಡೆ ಮಾಡುವ ವಾಲೆಟ್ ಅಲ್ಲ. ನೀವು ಯಾವುದೇ ಬಾಕಿಯಿರುವ ಮೊತ್ತವನ್ನು ಹೊಂದಿದ್ದರೆ, ನಿಮ್ಮ ಬಾಕಿ ಹಣವನ್ನು ತೆರವುಗೊಳಿಸಲು ನೀವು ಪೂರ್ಣ ಮೊತ್ತವನ್ನು ಪಾವತಿಸಬೇಕು ಮತ್ತು ನಂತರ ಫ್ಲಿಪ್‌ಕಾರ್ಟ್ ಪೇ ಲೇಟರ್‌ನ ಪ್ರಯೋಜನವನ್ನು ಆನಂದಿಸಬೇಕು ಎಂದು ನಿಮಗೆ ಸೂಚನೆ ನೀಡಲಾಗುತ್ತದೆ. ಈ ಪಾವತಿ ಆಯ್ಕೆಯು ಪ್ರಸ್ತುತ ಮೊಬೈಲ್ ಅಪ್ಲಿಕೇಶನ್ ಮತ್ತು ಮೊಬೈಲ್ ಸೈಟ್‌ನಲ್ಲಿ ಲಭ್ಯವಿದೆ, ಮತ್ತು ಶೀಘ್ರದಲ್ಲೇ ಡೆಸ್ಕ್‌ಟಾಪ್ ಸೈಟ್‌ಗೂ ವಿಸ್ತರಿಸಲಾಗುವುದು.

ಮರುಪಾವತಿ ಮಾಡುವುದು ಹೇಗೆ?

ತ್ವರಿತವಾದ ಒಂದು ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ:
1. ನಿಮ್ಮ ಫ್ಲಿಪ್‌ಕಾರ್ಟ್ ಪೇ ಲೇಟರ್ ಸ್ಟೇಟ್‌ಮೆಂಟ್ ಅನ್ನು ನೀವು ಪರಿಶೀಲಿಸಿದರೆ ಅಲ್ಲಿ ನಿಮ್ಮ ಕೊನೆಯ ದಿನಾಂಕವು ಕಾಣುತ್ತದೆ.

ಫ್ಲಿಪ್‌ಕಾರ್ಟ್ ಪೇ ಲೇಟರ್

ಫ್ಲಿಪ್‌ಕಾರ್ಟ್ ಪೇ ಲೇಟರ್

2. Pay Bill ಮೇಲೆ ಕ್ಲಿಕ್ ಮಾಡಿ.

3. ಪಾವತಿ ವಿಧಾನವನ್ನು ಆರಿಸಿ.

4. ಅಷ್ಟೇ! ನೀವು ಕೆಲಸ ಮುಗಿಸಿದ್ದೀರಿ.

ನೀವು ಮರೆತುಹೋಗುತ್ತೀರೆನ್ನುವ ಚಿಂತೆ ಬೇಡ. ನಿಮ್ಮ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ತೀರಿಸಲು ಸಹಾಯ ಮಾಡಲು ಫ್ಲಿಪ್‌ಕಾರ್ಟ್ ನಿಮಗೆ ಎಸ್‌ಎಮ್‌ಎಸ್, ಇಮೇಲ್ ಮತ್ತು ಪುಶ್ ನೋಟಿಫಿಕೇಷನ್‌ಗಳ ಮೂಲಕ ಸೌಮ್ಯವಾದ ಜ್ಞಾಪನೆಗಳನ್ನು ಕಳುಹಿಸುತ್ತದೆ. ಅಷ್ಟೇ ಅಲ್ಲದೇ, ನೀವು ಮೈಂತ್ರಾದಲ್ಲಿ ಶಾಪಿಂಗ್ ಮಾಡುವಾಗಲೂ ಪೇ ಲೇಟರ್ ಪ್ರಯೋಜನಗಳನ್ನು ಪಡೆಯಬಹುದು.

ಆದ್ದರಿಂದ, ಇದು ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಆಗಿರಲಿ, ಇತ್ತೀಚಿನ ಟ್ರೆಂಡ್‌ಗಳಾಗಿರಲಿ ಅಥವಾ ಅಡುಗೆಮನೆಗಾಗಿ ಪ್ಯಾನ್‌ಗಳ ಒಂದು ಸೆಟ್ ಆಗಿರಲಿ – ನೀವು ಫ್ಲಿಪ್‌ಕಾರ್ಟ್‌ನಿಂದ ಏನನ್ನು ಖರೀದಿಸಲು ಬಯಸಿದರೂ – ನೀವು ಫ್ಲಿಪ್‌ಕಾರ್ಟ್ ಪೇ ಲೇಟರ್ ಜೊತೆ ಅನುಕೂಲಕರವಾಗಿ ಶಾಪಿಂಗ್ ಮಾಡಬಹುದು! ಈಗಲೇ ಅರ್ಜಿ ಹಾಕಿ!

Enjoy shopping on Flipkart

About the Author

Jishnu Murali
Jishnu Murali

ಜಿಷ್ಣು ಮುರಳಿ ಫ್ಲಿಪ್ಕಾರ್ಟ್ ಕಥೆಗಳೊಂದಿಗೆ ಬರಹಗಾರ. ಪಾಕಪದ್ಧತಿ, ಇತಿಹಾಸ ಮತ್ತು ಸಂಪ್ರದಾಯದ ಮೂಲಕ ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸಲು ಅವರು ಇಷ್ಟಪಡುತ್ತಾರೆ. ಸಂಗೀತ ಮತ್ತು ಹಾಸ್ಯ ಅವನನ್ನು ಜೀವಂತವಾಗಿರಿಸುತ್ತದೆ.

jQuery('.more').click(function(e) { e.preventDefault(); jQuery(this).text(function(i, t) { return t == 'close' ? 'Read More' : 'close'; }).prev('.more-cont').slideToggle() });