ಐಟಿ ಉದ್ಯೋಗದಲ್ಲಿದ್ದಾಗ ಜಗತ್ತಿನಾದ್ಯಂತ ಪ್ರಯಾಣಿಸಿದ ನಂತರ ಹಸನ್ ತಲೆಗೆ ಹೊಕ್ಕಿದ್ದು ಉದ್ಯಮಶೀಲತೆಯ ಹುಳ. ಬಹಳ ದಿನಗಳ ಹಿಂದೆಯೆ ಅವರು ಸ್ವಂತ ವ್ಯವಹಾರ ಪ್ರಾರಂಭಿಸುವುದಕ್ಕಾಗಿ ಮರಳಿದರು ಮತ್ತು ತಮ್ಮ ಕನಸು ನನಸಾಗಿಸಲು ಇ-ಕಾಮರ್ಸ್ ಮೊರೆ ಹೋದರು. ಈ ಲೋಕಸಂಚಾರಿ ಹೇಗೆ ಫ್ಲಿಪ್ ಕಾರ್ಟ್ ನಲ್ಲಿ ತಮ್ಮ 'ದೇಶೀ’ ಹಿತಾಸಕ್ತಿಗೆ ತಕ್ಕ ವಾತಾವರಣ ಪಡೆದರು ಮತ್ತು ತಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದರು ಎಂಬುದನ್ನು ಓದಿ!
ಈ ಕತೆಯಲ್ಲಿ: ಈ #Sellfmade ಮಾರಾಟಗಾರ ಫ್ಲಿಪ್ ಕಾರ್ಟ್ ಅಡ್ವರ್ಟೈಸಿಂಗ್ ಉಪಯೋಗಿಸಿಕೊಂಡು ಈ ವ್ಯವಹಾರದಲ್ಲಿ ಅಪ್ರತಿಮ ಪ್ರಗತಿ ಸಾಧಿಸಿದರು!
ಎಮ್y name is ಹಸನ್ ಮತ್ತು ನಾನು ಫಾಸ್ಟ್ ಕಲರ್ಸ್ ನಿರ್ದೇಶಕನಾಗಿದ್ದೇನೆ. ನನ್ನ ಕಂಪನಿ ಮಹಿಳೆಯರ ಉಡುಪುಗಳನ್ನು ಮಾರುತ್ತದೆ ಆದರೆ ಕೆಲವು ವರ್ಷಗಳ ಕೆಳಗೆ ನಾವು ಪುರುಷರ ಉಡುಗಳನ್ನು ಕೂಡ ಮಾರಲು ಪ್ರಾರಂಭಿಸಿದೆವು.
ನಾನು ಫ್ಲಿಪ್ ಕಾರ್ಟ್ ಮಾರಾಟಗಾರನಾಗುವ ಮೊದಲು, ನಾನು — ಯೂರೋಪ್, ಯುಎಸ್, ಮಧ್ಯ ಪೂರ್ವ, ಮತ್ತು ಸಿಂಗಾಪೂರ್ ಒಳಗೊಂಡು ಜಗತ್ತಿನಾದ್ಯಂತ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಕೊನೆಗೆ, ನನ್ನದೇ ಆದ ವ್ಯವಹಾರ ಪ್ರಾರಂಭಿಸಬೇಕೆಂದುಕೊಂಡೆ ಮತ್ತು ಇ-ಕಾಮರ್ಸ್ ಉದ್ಯಮದಿಂದ ನನ್ನ ಕನಸುಗಳನ್ನು ನನಸಾಗಿಸಿದೆ. ಪ್ರಾರಂಭದಲ್ಲಿ ನಾನು ವಿಭಿನ್ನ ಆನ್ ಲೈನ್ ಮಾರಾಟ ಸ್ಥಳಗಳಲ್ಲಿ ಉತ್ಪನ್ನಗಳನ್ನು ಮಾರಿದೆ ಮತ್ತು ಎಲ್ಲವೂ ಚೆನ್ನಾಗಿ ನಡೆಯಿತು. ಆದರೆ ಫ್ಲಿಪ್ ಕಾರ್ಟ್ ನಮ್ಮ ಶೈಲಿಗೆ ಸರಿಹೊಂದುತ್ತದೆ ಎಂದು ತಿಳಿದುಕೊಂಡೆ. ಆದ್ದರಿಂದ, ನಾವು ನಮ್ಮ ಉಪಸ್ಥಿತಿಯನ್ನು ಕ್ರೋಢೀಕರಿಸಿದೆವು ಮತ್ತು ಕೇವಲ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಮಾಡಿದೆವು. ನಾನು ಆಫ್ ಲೈನ್ ನಲ್ಲಿ ಉಪಸ್ಥಿತಿ ಹೊಂದಿಲ್ಲ, ಆದರೆ ಫ್ಲಿಪ್ ಕಾರ್ಟ್ ನಮ್ಮನ್ನ ಸದಾ ವ್ಯಸ್ತವಾಗಿರಿಸುತ್ತದೆ.
ಫ್ಲಿಪ್ ಕಾರ್ಟ್ ಹೆಚ್ಚು ದೇಶೀ ಶೈಲಿ ಹೊಂದಿದೆ! ನಾನೊಬ್ಬ ಡೇಟಾ-ಆಧರಿಸಿ ವ್ಯವಹಾರ ಮಾಡುವ ವ್ಯಕ್ತಿ ಮತ್ತು ನನ್ನದು ತಂತ್ರಜ್ಞಾನದ ಹಿನ್ನೆಲೆ. ಫ್ಲಿಪ್ ಕಾರ್ಟ್ ನೊಂದಿಗೆ 6 ವರ್ಷಗಳನ್ನು ಕಳೆದ ನಂತರ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನಾನು ತಿಳಿದಿದ್ದೇನೆ.
ಇತರ ಮಾರಾಟ ಸ್ಥಳಗಳಲ್ಲಿ, ಈ ರೀತಿ ಮುಂದೆ ಏನಾಗುತ್ತದೆ ಎಂಬುದನ್ನು ಊಹಿಸುವುದು ಸಾಧ್ಯವಿಲ್ಲ. ಅವರೆಲ್ಲ ಬಹಳ ಮುಕ್ತವಾಗಿರುವುದಾಗಿ ಹೇಳಿಕೊಳ್ಳುತ್ತಾರೆ, ಆದರೆ ಹಾಗಿರುವುದಿಲ್ಲ. ಒಬ್ಬ ಹೊಸ ಮಾರಾಟಗಾರ ಮಾರಾಟ ಮಾಡುವುದು ಮತ್ತು ಈ ವಾತಾವರಣಕ್ಕೆ ಹೊಮದಿಕೊಳ್ಳುವುದು ಸುಲಭದ ಕೆಲಸವಲ್ಲ. ಫ್ಲಿಪ್ ಕಾರ್ಟ್ ಹಾಗಲ್ಲ. ಅಕೌಂಟ್ ಮ್ಯಾನೇಜರ್ ಗಳು ಚೆನ್ನಾಗಿದ್ದಾರೆ ಮತ್ತು ಮೌಲ್ಯಯುತ ಸಲಹೆ ನೀಡುತ್ತಾರೆ, ಈ ಮೂಲಕ ನಿಮಗೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಇವತ್ತು, ಫ್ಲಿಪ್ ಕಾರ್ಟ್ ನಲ್ಲಿ ನನ್ನ ವರ್ಗದ ಮಟ್ಟಿಗೆ ನಾನು ನಂಬರ್ 1 ಮಾರಾಟಗಾರನಾಗಿದ್ದೇನೆ, ಮತ್ತು ಒಟ್ಟಾರೆ 2ನೇ ಸ್ಥಾನದಿಂದ 4ನೇ ಸ್ಥಾನದಲ್ಲಿದ್ದೇನೆ.
ಫ್ಲಿಪ್ ಕಾರ್ಟ್ ಸಾಧನಗಳ ಸಹಾಯದಿಂದ ಪ್ರಗತಿಯನ್ನು ಇಮ್ಮಡಿಗೊಳಿಸುವುದು
ನಿರ್ದಿಷ್ಟವಾಗಿ ಫ್ಲಿಪ್ ಕಾರ್ಟ್ ಅಡ್ವರ್ಟೈಸಿಂಗ್ ವಿಭಾಗದಲ್ಲಿ ಹೆಚ್ಚು ಪ್ರಗತಿ ಸಾಧಿಸುವುದು ಸಾಧ್ಯವಾಗುವಂತೆ ಮಾಡಲು ನಾವು ಹೆಚ್ಚು ಜನರನ್ನು ನೇಮಿಸಿಕೊಂಡಿದ್ದೇವೆ. ಪ್ರಾರಂಭದಲ್ಲಿ ನಮ್ಮ ವ್ಯವಹಾರ ಬಹಳ ಚೆನ್ನಾಗಿ ನಡೆಯಿತು, ಆದರೆ ಮಧ್ಯದಲ್ಲಿ, 3 ರಿಂದ 4 ವರ್ಷಗಳ ನಂತರ, ನಮ್ಮ ಪ್ರಗತಿ ನಿಂತುಹೋಯಿತು. ಆಗ ಅಕೌಂಟ್ ಮ್ಯಾನೇಜರ್ ಫ್ಲಿಪ್ ಕಾರ್ಟ್ ಜಾಹೀರಾತು ತಯಾರಿಕೆಗೆ ಒತ್ತು ನೀಡಿದರು.
ನಾವು ಅದಕ್ಕೆ ಸಂಪೂರ್ಣ ಪ್ರಯತ್ನ ಪಟ್ಟೆವು ಮತ್ತು ಅದರಿಂದ ಅತ್ಯುತ್ತಮ ತಿರುವು ದೊರೆಯಿತು. . ಕೊನೆಗೆ, ನಾವು ಅದರಲ್ಲಿ ನಿಪುಣರಾದೆವು! ನಾವು ಮೊದಲಿಗೆ ಫ್ಲಿಪ್ ಕಾರ್ಟ್ ಅಡ್ವರ್ಟೈಸಿಂಗ್ ಗೆ ಕೈ ಹಾಕಿದಾಗ, ವ್ಯಾಪಕ ಪ್ರಮಾಣದಲ್ಲಿ ಮಾಡಿದೆವು, ಮತ್ತು ಸಾರಿಗೆ ದರಗಳನ್ನು ಮನ್ನಾ ಮಾಡುವ ಮೂಲಕ ಫ್ಲಿಪ್ ಕಾರ್ಟ್ ಸಹಾಯ ಹಸ್ತ ಚಾಚಿತು, ಹಾಗೂ, ನಮಗೆ ವಿಧಿಸಿದ ಬಾಡಿಗೆ ಕೂಡ ಕಡಿಮೆಯಾಗಿತ್ತು.
2020 ಪುನರಾವಲೋಕನ
2020 ರಲ್ಲಿ ಅದ್ಭುತ ವ್ಯಾಪಾರ ಮಾಡಿದೆವು, ಎಷ್ಟು ಬೇಡಿಕೆ ಇತ್ತೆಂದರೆ, ನಮ್ಮ ಬಳಿ ಸ್ಟಾಕ್ ಉಳಿಯಲಿಲ್ಲ! ವಿಶೇಷವಾಗಿ ದಿ ಬಿಗ್ ಬಿಲಿಯನ್ ಡೇಸ್ ಸೇಲ್ 2020 ಕಂಡರಿಯದಷ್ಟು ಯಶಸ್ಸು ತಂದುಕೊಟ್ಟಿತು ನಮಗೆ. ನಾವು ನಮ್ಮ ಅಕೌಂಟ್ ಮ್ಯಾನೇಜರ್ ಗಳ ಸಹಾದೊಂದಿಗೆ ಅದಕ್ಕಾಗಿ ಮುಂಚಿತವಾಗಿ ಯೋಜನೆ ಹಾಕಿಕೊಂಡೆವು, ಇಷ್ಟು ಮಾರಾಟವಾಗುವುದು ಎಂದು ಅಂದಾಜು ಲೆಕ್ಕ ಮಾಡಿದೆವು, ಮತ್ತು ಮಾರಾಟ ಮಾತ್ರ ನಮ್ಮ ನಿರೀಕ್ಷೆಗೂ ಮೀರಿತ್ತು.
ನಾವಿರುವಂತಹ ಕ್ಷೇತ್ರದಲ್ಲಿ, ನಾವು ಎಲ್ಲದಕ್ಕೂ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ — ಬಣ್ಣ ಕಲೆಸುವುದು ಮತ್ತು ಹೊಲಿಗೆ ಹಾಕುವುದರಿಂದ ಹಿಡಿದು ಉತ್ಪಾದಿಸುವವರೆಗೆ ಎಲ್ಲವೂ. ಒಂದೇ ದಿನದಲ್ಲಿ ನಾವು ಉತ್ಪನ್ನಗಳನ್ನು ತಯಾರಿಸುವುದು ಅಸಾಧ್ಯ. ಆದಾಗ್ಯೂ, ನಾವು ಎಷ್ಟೇ ತಯಾರಿ ಮಾಡಿಕೊಂಡರೂ, ಮಾರಾಟದ 5 ನೇ ದಿನ ನಮ್ಮ ಸ್ಟಾಕ್ ಗಳೆಲ್ಲ ತೀರಿ ಹೋದವು. ಹಬ್ಬದ ಸೀಸನ್ ನಲ್ಲಿ ಕೂಡ ನಮ್ಮ ನಿರೀಕ್ಷೆಗೂ ಮೀರಿ ಮಾರಾಟವಾಯಿತು.
ಮುಖ್ಯವಾಗಿ ಬಿಗ್ ಬಿಲಿಯನ್ ಡೇಸ್ ಮಾರಾಟದ ಮೊದಲ ಮತ್ತು ಕೊನೆಯ ದಿನ ನಮಗೆ ಮರೆಯಲಾಗದ ಅನುಭವ ನೀಡಿದವು. ನಾವು ಸಾಮಾನ್ಯವಾಗಿ ಪಡೆಯುತ್ತಿದ್ದುದಕ್ಕಿಂತ 5x ಹೆಚ್ಚು ಆರ್ಡರ್ ಗಳು ಮತ್ತು ಮಾರಾಟ ನಮಗೆ ಸಿಕ್ಕಿತು. ಕೋವಿಡ್-ಪೂರ್ವ ಸಮಯದಲ್ಲಿ ಕೂಡ – ಮಾರ್ಚ್-2020 ಕ್ಕೆ ಮೊದಲಿನ ದಿನಗಳಲ್ಲಿ – ನಾವು ಚೆನ್ನಾಗಿ ಪ್ರಗತಿ ಸಾಧಿಸಿದೆವು. ಕೋವಿಡ್-19 ರ ನಂತರ, ಅದು ಇನ್ನಷ್ಟು ಹೆಚ್ಚಾಯ್ತು ಮತ್ತು ಕೋವಿಡ್-ನಂತರದ ಮಾರಾಟ 5 ಪಟ್ಟು ಹೆಚ್ಚಾಯ್ತು. ಹೆಚ್ಚು ಜನರು ಇ-ಕಾಮರ್ಸ್ ಉಪಯೋಗಿಸಲು ಪ್ರಾರಂಭಿಸಿದ ಕಾರಣ ಬೇಡಿಕೆ ಅತ್ಯಧಿಕವಾಯಿತು.
ಫ್ಲಿಪ್ ಕಾರ್ಟ್ ನಮಗೆ ಸಾಕಷ್ಟು ಬೆಂಬಲ ನೀಡಿದೆ ಮತ್ತು ನಾವು ಒಟ್ಟಿಗೆ ಸೇರಿಕೊಂಡು ನಮ್ಮ ಮಾರಾಟದ ಗುರಿಗಳನ್ನು ನಿರ್ಧರಿಸಿದ್ದೇವೆ, ಸಾಧಿಸಿದ್ದೇವೆ, ಮತ್ತು ನಿರೀಕ್ಷೆ ಮೀರಿ ಫಲಿತಾಂಶ ಪಡೆದಿದ್ದೇವೆ!
ಇನ್ನಷ್ಟು #Sellfmade ಕತೆಗಳನ್ನು ಇಲ್ಲಿ ಓದಿ