ನಿಮಗೆ ಫ್ಲಿಪ್ಕಾರ್ಟ್‌ನ ಉತ್ಪನ್ನಗಳನ್ನು ಹಿಂದಿರುಗಿಸುವ ನೀತಿಯ ಬಗ್ಗೆ ಪ್ರಶ್ನೆಗಳಿವೆಯೆ? ಈ ಸರಳವಾದ ಮಾರ್ಗಸೂಚಿಯು ಫ್ಲಿಪ್ಕಾರ್ಟ್‌ನ ಉತ್ಪನ್ನಗಳನ್ನು ಹಿಂದಿರುಗಿಸುವ ಪ್ರಕ್ರಿಯೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಖರೀದಿ ಮತ್ತು ಹಿಂದಿರುಗಿಸುವಿಕೆಯ ಅನುಭವ ಸುಗಮ ಮತ್ತು ಅನುಕೂಲಕರವಾಗಿರುತ್ತದೆ.
ಆನ್ಲೈನ್ನಲ್ಲಿ ಖರೀದಿಯು ಸರಳ ಮತ್ತು ಶೀಘ್ರವಾಗಿ ನಡೆಯುತ್ತದೆ. ನೀವು ನಿಮ್ಮ ಅಚ್ಚುಮೆಚ್ಚಿನ ಉತ್ಪನ್ನಗಳನ್ನು ಕೆಲವು ಕ್ಲಿಕ್ಕುಗಳು ಅಥವ ಮೆಲ್ಲಗೆ ತಟ್ಟುವುದರಿಂದ ಖರೀದಿಮಾಡುವ ಆರಾಮ ಮತ್ತು ಅನುಕೂಲವನ್ನು ಅನುಭವಿಸಬಹುದು. ಆದರೆ, ಕೆಲವೊಮ್ಮೆ ನೀವು ಗೊತ್ತುಮಾಡಿದ ಉತ್ಪನ್ನ ಬಂದಾಗ ಅದು ನೀವು ಏನನ್ನು ನಿರೀಕ್ಷಿದಿರೊ ಅಷ್ಟು ನಿಖರವಾಗಿಲ್ಲದಿರಬಹುದು. ಅದು ಸರಿಯಾದ ಗಾತ್ರ ಅಥವ ಬಣ್ಣದ್ದಾಗಿಲ್ಲದಿರಬಹುದು, ಅಥವ ಅಪರೂಪದ ಪ್ರಕರಣಗಳಲ್ಲಿ ಅದು ದೋಷಪೂರಿತವಾಗಿರಬಹುದು ಅಥವ ಹಾನಿಗೊಂಡಿರಬಹುದು. ಈಗ ಏನು ಮಾಡುವುದು? ಇಂತಹ ಸಂದರ್ಭದಲ್ಲೇ ಫ್ಲಿಪ್ಕಾರ್ಟ್‌ನ ಉತ್ಪನ್ನ ಹಿಂದಿರುಗಿಸುವಿಕೆಯ ಪ್ರಕ್ರಿಯೆ ನಿಮ್ಮ ಬದುಕನ್ನು ಸುಲಭಗೊಳಿಸುತ್ತದೆ.
ಫ್ಲಿಪ್ಕಾರ್ಟ್‌ನ ಉತ್ಪನ್ನ ಹಿಂದಿರುಗಿಸುವಿಕೆಯ ಪ್ರಕ್ರಿಯೆಯ ವಿವರಣೆ
ಈ ಉಪಯುಕ್ತವಾದ ಆಕರ ಮಾರ್ಗದರ್ಶಕವು ಫ್ಲಿಪ್ಕಾರ್ಟ್‌ನ ಉತ್ಪನ್ನಗಳನ್ನು ಹಿಂದಿರುಗಿಸುವ ಪ್ರಕ್ರಿಯೆ ಹೇಗೆ ಕೆಲಸಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ –
ಫ್ಲಿಪ್ಕಾರ್ಟ್‌ನ ಫ್ಲಿಪ್ಕಾರ್ಟ್‌ನ ಉತ್ಪನ್ನಗಳನ್ನು ಹಿಂದಿರುಗಿಸುವ ಪ್ರಕ್ರಿಯೆ ಹೇಗೆ ಕೆಲಸಮಾಡುತ್ತದೆ ಎನ್ನುವ ವಿಚಾರ ಇಲ್ಲಿದೆ
- ಫ್ಲಿಪ್ಕಾರ್ಟ್‌ಗೆ ಲಾಗಿನ್ ಮಾಡಿ ನಿಮ್ಮ ಗೊತ್ತುಮಾಡಿದ ಪದಾರ್ಥಗಳ ಕೀಲಿಗೆ ಹೋಗಿ. ಒಂದು ವಿನಂತಿಯನ್ನು ಉಂಟುಮಾಡಲು ಹಿಂದಿರುಗಿಸು ಎಂಬ ಕೀಲಿಯ ಮೇಲೆ ತಟ್ಟಿ ಅಥವ ಕ್ಲಿಕ್ ಮಾಡಿ .
- ನಿಮ್ಮ ಹಿಂದಿರುಗಿಸುವಿಕೆಗೆ ಕಾರಣ ವನ್ನು ಆರಿಸಿಕೊಳ್ಳಿ – ಅದನ್ನು ಆಧರಿಸಿ, ಎಲ್ಲಿ ಅನ್ವಯವಾಗುತ್ತದೆಯೊ, ಅಲ್ಲಿ ವಿನಿಮಯದ ಆಯ್ಕೆ ಕಾಣಿಸಿಕೊಳ್ಳುತ್ತದೆ. ಮೂರು ಆಯ್ಕೆಗಳು ದೊರೆಯುತ್ತದೆ –
- ವಿನಿಮಯ – ನಿಮ್ಮ ಗೊತ್ತುಮಾಡಿದ ಉತ್ಪನ್ನವನ್ನು ಬೇರೆ ಗಾತ್ರ ಅಥವ ಬಣ್ಣದ ಅದೇ ತರಹದ ಒಂದು ಹೊಸ ಉತ್ಪನ್ನಕ್ಕೆ ಬದಲಾಯಿಸಿಕೊಡಲಾಗುತ್ತದೆ.
- ಬದಲಾವಣೆ – ನೀವು ಗೊತ್ತುಮಾಡಿದ ಉತ್ಪನ್ನ ಹಾನಿಯಾಗಿದ್ದರೆ (ಒಡೆದಿದ್ದರೆ ಅಥವ ಹಾಳಾಗಿದ್ದರೆ) ಅಥವ ದೋಷಯುಕ್ತವಾಗಿದ್ದರೆ (ಅದು ಕೆಲಸಮಾಡದೆ ಇರಲು ಕಾರಣವಾದ ಕಾರ್ಯನಿರ್ವಹಣೆಯ ತೊಂದರೆ ಇದ್ದರೆ) ಅದನ್ನು ತದ್ರೂಪವಾದ ಉತ್ಪನ್ನದಿಂದ ಬದಲಾಯಿಸಿಕೊಡಲಾಗುತ್ತದೆ.
- ಮರುಪಾವತಿ – ನಿಮಗೆ ಬೇಕಾದ ಉತ್ಪನ್ನ ನಿಮ್ಮ ಬಯಕೆಯ ಗಾತ್ರ ಅಥವ ಬಣ್ಣ ಅಥವ ಮಾದರಿಯಲ್ಲಿ ಲಭ್ಯವಿಲ್ಲದಿದ್ದರೆ, ಅಥವ ಅದರ ದಾಸ್ತಾನು ಇಲ್ಲದಿದ್ದರೆ, ನಿಮಗೆ ನಿಮ್ಮ ಹಣ ವಾಪಸ್ಸು ಬೇಕೆಂದು ನೀವು ನಿರ್ಧರಿಸಬಹುದು. ಇಂತಹ ಸನ್ನಿವೇಶದಲ್ಲಿ ನೀವು ಮರುಪಾವತಿ ಸೌಲಭ್ಯವನ್ನು ಬಳಸಿ ನಿಮ್ಮ ಹಣವನ್ನು ಹಿಂದಕ್ಕೆ ಪಡೆಯಬಹುದು (ನೋಡಿ ವಿಧಾನ ೬)
- ನೀವು ಯಾವ ರೀತಿಯ ಉತ್ಪನ್ನವನ್ನು ಹಿಂದಿರುಗಿಸಲು ಬಯಸುತ್ತೀರೊ ಅದರಂತೆ ನಿಮ್ಮ ಕೋರಿಕೆ ಒಂದು ಪರಿಶೀಲನಾ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ
- ಪರಿಶೀಲನೆಯ ನಂತರ, ಗೊತ್ತುಮಾಡಿದ ಉತ್ಪನ್ನದ ವರ್ಗದ ಮೇರೆಗೆ ನೀವು ನಿಮ್ಮ ನಿರ್ಣಯವನ್ನು ಖಚಿತಪಡಿಸಬೇಕಾಗುತ್ತದೆ.
- ಮರುಪಾವತಿಯ ಪ್ರಕ್ರಿಯೆ ಸುಗಮವಾಗಿ ನಡೆಯಲು ಅಗತ್ಯವಾದ ಎಲ್ಲ ವಸ್ತುಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ – ಬೆಲೆಯ ಚೀಟಿ, ಮೂಲದ ಹೊದಿಕೆ, ಬೆಲೆಯ ಪಟ್ಟಿ, ಉಚಿತ ಕೊಡುಗೆಗಳು, ಪರಿಕರಗಳು ಇತ್ಯಾದಿ. .
- ನಿಮ್ಮ ಆರ್ಡರ್‌ನ ಪಡೆದುಕೊಳ್ಳುವುದು ಮತ್ತು ತಲುಪಿಸುವುದರ ಸಮಯ ನಿಗಿಮಾಡಲಾಗುತ್ತದೆ ಮತ್ತು ವಿನಿಮಯಗಳು ಮತ್ತು ಬದಲಾಯಿಸುವಿಕೆಗಳಿದ್ದರೆ ಅವುಗಳ ವಿವರಗಳನ್ನು ನಿಮಗೆ ತಿಳಿಸಲಾಗುತ್ತದೆ.
- ಹಣ ಮರುಪಾವತಿಯನ್ನು ಆರಂಭಿಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ, ಅನ್ವಯವಾಗುವುದಾದರೆ
- ನಿಮ್ಮ ಕೋರಿಕೆಯನ್ನು ಫ್ಲಿಪ್ಕಾರ್ಟ್‌ನ ಹಿಂದಿರುಗಿಸುವಿಕೆ/ಬದಲಾಯಿಸುವಿಕೆಯ ಖಾತರಿಯ ಪ್ರಕಾರ ನೆರವೇರಿಸಲಾಗುವುದು
ಫ್ಲಿಪ್ಕಾರ್ಟ್‌ನ ಉತ್ಪನ್ನ ಹಿಂದಿರುಗಿಸುವಿಕೆಯ ಪ್ರಕ್ರಿಯೆ ಎಷ್ಟು ಕಾಲ ತೆಗೆದುಕೊಳ್ಳುತ್ತದೆ?
ನೀವು ಹಿಂದಿರುಗಿಸುವಿಕೆಯ ಕೋರಿಕೆಯನ್ನು ನೀಡಿದ ತಕ್ಷಣ ನೀವು ನಿಮ್ಮ ನೊಂದಾಯಿತ ವಿದ್ಯುದಂಚೆಯ ವಿಳಾಸದಲ್ಲಿ ಒಂದು ವಿದ್ಯುದಂಚೆ ಪಡೆಯುವಿರಿ ಮತ್ತು ನಿಮ್ಮ ನೊಂದಾಯಿತ ಚರವಾಣಿಯ ಸಂಖ್ಯೆಯಲ್ಲಿ ಒಂದು ಎಸ್‌ಎಂಎಸ್ ಅನ್ನು ಪಡೆಯುವಿರಿ. ನೀವು ನಿಮ್ಮ ಲ್ಯಾಪ್‌ಟಾಪ್‌ನಿಂದ ಅಥವ ಸ್ಮಾರ್ಟ್ ಚರವಾಣಿಯಲ್ಲಿ ʼನನ್ನ ಆರ್ಡ್ರ್ಗಳುʼ ಎಂಬುದರ ಮೇಲೆ ಕ್ಲಿಕ್ಕಿಸುವುದರಿಂದ ʼನನ್ನ ಖಾತೆʼಯ ಪುಟಕ್ಕೆ ಹೋಗಿ ಈ ಪ್ರಕ್ರಿಯೆಯ ಜಾಡನ್ನು ಸಹ ಹಿಡಿಯಬಹುದು. ನೀವು ವಿನಿಮಯವನ್ನು ಆಯ್ಕೆಮಾಡಿಕೊಂಡಿದ್ದರೆ, ಬಹುತೇಕ ಪ್ರಕರಣಗಳಲ್ಲಿ ನಿಮ್ಮ ಉತ್ಪನ್ನವನ್ನು ತೆಗೆದುಕೊಂಡುಹೋಗುವಷ್ಟೆ ಸಮಯದಲ್ಲಿ ನಿಮ್ಮ ಬದಲಾಯಿಸಿದ ಉತ್ಪನ್ನವನ್ನು ನಿಮಗೆ ತಲುಪಿಸಲಾಗುತ್ತದೆ. ಇಟ್ಟುಕೊಳ್ಳಲು ನೆನಪಿನಲ್ಲಿಡಿ tracking your order.
ಇಲ್ಲಿ ಕ್ಲಿಕ್ಕಿಸಿ ಫ್ಲಿಪ್ಕಾರ್ಟ್‌ನ ಉತ್ಪನ್ನ ಹಿಂದಿರುಗಿಸುವಿಕೆಯ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು.
ವಿಭಿನ್ನ ಉತ್ಪನ್ನ ವರ್ಗಗಳಿಗೆ ಫ್ಲಿಪ್ಕಾರ್ಟ್‌ನ ಉತ್ಪನ್ನ ಹಿಂದಿರುಗಿಸುವಿಕೆಯ ನೀತಿ
ಹಿಂದಿರುಗಿಸುವಿಕೆಯು ನೇರವಾಗಿ ಆಯಾ ಮಾರಾಟಗಾರರು ನೀಡುವ ಸೌಲಭ್ಯ. ಈ ನೀತಿಯ ಷರತ್ತುಗಳ ಪ್ರಕಾರ ಬದಲಾಯಿಸುವಿಕೆ ಮತ್ತು/ಅಥವ ಹಣ ಮರುಪಾವತಿಯ ಆಯ್ಕೆಯನ್ನು ಆಯಅ ಮಾರಾಟಗಾರರು ನಿಮಗೆ ನೀಡುತ್ತಾರೆ.
ನಮ್ಮ ನಿಯತ್ತಿನ ಗಿರಾಕಿಗಳ ತಳಹದಿಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದಿರುಗಿಸುವಿಕೆಯ ನೀತಿಯು ಅನೇಕ ಬದಲಾವಣೆಗಳನ್ನು ತರುತ್ತದೆ. ಒಂದು ಸಣ್ಣ ಎಚ್ಚರಿಕೆ, ಒಂದು ನಿರ್ದಿಷ್ಟ ವರ್ಗದ ಅಡಿಯಲ್ಲಿ ಪಟ್ಟಿಮಾಡಲಾಗಿರುವ ಎಲ್ಲ ಉತ್ಪನ್ನಗಳಿಗೂ ಅದೇ ಹಿಂದಿರುಗಿಸುವಿಕೆಯ ನೀತಿ ಇಲ್ಲದಿರಬಹುದು.
ನಮ್ಮ ಹಿಂದಿರುಗಿಸುವಿಕೆಯ ನೀತಿಯನ್ನು ಅರ್ಥಮಾಡಿಕೊಳ್ಳಲು ನಾಲ್ಕು ವಿಭಾಗಗಳನ್ನು ಪರಿಶೀಲಿಸಿ
- ಏಳು ದಿನಗಳು
ನೀವು ಎಲ್ಲ ಎಲೆಕ್ಟ್ರಾನಿಕ್ (ದೊಡ್ಡ ಉಪಕರಣಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು) ಮತ್ತು ಜೀವನಶೈಲಿಯ ಕೆಲವು ಸಮಗ್ರ ಪದಾರ್ಥಗಳನ್ನು ತಲುಪಿಸಲಾದ ೭ ದಿನಗಳ ಒಳಗೆ ಬದಲಾಯಿಸಲು ಕೋರಬಹುದು. ಇಲ್ಲಿ ಕ್ಲಿಕ್ಕಿಸಿ ಹೆಚ್ಚು ವಿವರಗಳಿಗಾಗಿ. ಕೆಲವು ಬ್ರಾಂಡ್‌ಗಳ ನೀತಿಯ ಅನುಸಾರ, ಉತ್ಪನ್ನ ದೋಷಯುಕ್ತವಾಗಿರುವ ವಿಷಯಗಳಿಗೆ ಸಂಬಂಧಪಟ್ಟಂತೆ, ನಿಮ್ಮನ್ನು ಹತ್ತಿರದ ಅಧಿಕೃತ ಸೇವಾ ಕೇಂದ್ರಕ್ಕೆ ಭೇಟಿನೀಡಲು ಸೂಚಿಸಬಹುದು.
- ಹತ್ತು ದಿನಗಳು
ದೊಡ್ಡ ವರ್ಗದ ಮತ್ತು ಪೀಠೋಪಕರಣಗಳ ವರ್ಗದ ಉತ್ಟನ್ನಗಳನ್ನು ತಲುಪಿಸಲಾದ ೧೦ ದಿನಗಳ ಒಳಗೆ ಮಾತ್ರ ನೀವು ಬದಲಾಯಿಸುವಿಕೆಗೆ ಕೋರಬಹುದು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ವಿವರಗಳಿಗಾಗಿ.
ಸೂಚನೆ – ಮೇಲಿನ ಎರಡು ವಿಭಾಗಗಳಿಗೆ ಫ್ಲಿಪ್ಕಾರ್ಟ್‌ನ ಹಿಂದಿರುಗಿಸುವಿಕೆಯ ನೀತಿಯು ಪದಾರ್ಥಗಳು ಉಪಯೋಗಿಸದೆ, ಹಾನಿಯಾಗದೆ ಮತ್ತು ಮೂಲದ ಎಲ್ಲ ದರಪಟ್ಟಿಗಳು ಹಾಗು & ಅವುಗಳನ್ನು ಕಟ್ಟಿರುವ ಹೊದಿಕೆ ಸಮರ್ಪಕವಾಗಿದ್ದಲ್ಲಿ ಅನ್ವಯವಾಗುವುದೆಂದು ನಿಮಗೆ ತಿಳಿದಿರಲಿ.
ಇದನ್ನೂ ಗಮನಿಸಿ, ತೆರೆದ ಡಬ್ಬಿಯ ತಲುಪಿಸುವಿಕೆಯ ಸಂದರ್ಭದಲ್ಲಿ ತಲುಪಿಸುವಿಕೆಯ ಯಶಸ್ವಿ ಸಮಾರೋಪದ ನಂತರ ಹಾನಿ/ಕಾಣಿಯಾಗಿರುವಿಕೆ/ತಪ್ಪಾದ ರವಾನೆಗಳ ಕೋರಿಕೆಗಳನ್ನು ಮಾನ್ಯಮಾಡಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ದಯವಿಟ್ಟು ಹೊಸಿಲಿನಲ್ಲೇ ಉತ್ಪನ್ನವನ್ನು ಪೂರ್ಣವಾಗಿ ಪರಿಶೀಲಿಸಿ.
- ಹಿಂದಿರುಗಿಸುವಿಕೆ ಇಲ್ಲ
ಕೆಲವು ಉತ್ಪನ್ನಗಳನ್ನು ಹಿಂದಿರುಗಿಸಲಾಗುವುದಿಲ್ಲ. ಈ ಪಟ್ಟಿಯನ್ನು ನೋಡಿಇಲ್ಲಿ.
ಉತ್ಪನ್ನಗಳ ಹಿಂದಿರುಗಿಸುವಿಕೆಗಳು – ಸಮಾನ್ಯವಾದ ಸನ್ನಿವೇಶಗಳು
ನಿಮ್ಮ ಆರ್ಡರ್ ಯಾವಾಗ ಉತ್ಪನ್ನದ ಹಿಂದಿರುಗಿಸುವಿಕೆ, ವಿನಿಮಯ, ಬದಲಾಯಿಸುವಕೆ ಅಥವ ಹಣ ಮರುಪಾವತಿಗೆ ಅರ್ಹವಾಗಿರುತ್ತದೆ?
ನೀವು ಫ್ಲಿಪ್ಕಾರ್ಟ್‌ನಲ್ಲಿ ಖರೀದಿಮಾಡಿದಾಗ ಮಾಹಿತಿ ಹೊಂದಿದ್ದು ಆಯ್ಕೆಮಾಡಲು ಮತ್ತು ಮನಃಶಾಂತಿಯನ್ನು ಅನುಭವಿಸಲು ಕೆಲವು ಸನ್ನವೇಶಗಳನ್ನು ಪರಿಶೀಲಿಸಿದರೆ ಚೆನ್ನಾಗಿ ಅರ್ಥವಾಗುತ್ತದೆ.
- ನಿಮ್ಮ ಆರ್ಡರ್ ಹಾನಿಯಾಗಿದ್ದು, ದೋಷಪೂರಿತವಾಗಿದ್ದರೆ ಅಥವ ಅಕ್ರಮವಾಗಿ ತಿರುಚಲಾಗಿದ್ದರೆ
ಮೊದಲು, ನೀವು ಗೊತ್ತುಮಾಡಿ ತರಿಸಿದ ಉತ್ಪನ್ನಕ್ಕೆ ಏನಾದರೂ ಹಾನಿಯಾಗಿದೆಯೆ ಎಂದು ಪರಿಶೀಲಿಸಿ. ಕೆಲವೊಮ್ಮೆ, ಹೊರಗಿನ ಕಟ್ಟು ಸಾಗಿಸುವಾಗ ಮತ್ತು ಕೈಯಾಡಿಸುವುದರಿಂದ ಹಾನಿಯಾದಂತೆ ತೋರಬಹುದು, ಆದರೆ ಹೊದಿಕೆಯ ಒಳಗಿರುವ ಉತ್ಪನ್ನ ಚೆನ್ನಾಗಿರಬಹುದು. ಆದರೆ, ನಿಮ್ಮ ಉತ್ಪನ್ನದ ಕಟ್ಟನ್ನು ಅಕ್ರಮವಾಗಿ ತಿರುಚಲಾಗಿದೆ ಅಥವ ಅದನ್ನು ಅದರ ಪೆಟ್ಟಿಗೆಯೊಳಗೆ ಸರಿಯಾಗಿ ಮುಚ್ಚಿಲ್ಲವೆಂದು ಗಮನಿಸಿದರೆ, ನೀವು ನಿಮ್ಮ ಆರ್ಡರ್ ಅನ್ನು ಆ ಸ್ಥಳದಲ್ಲೇ ತಿರಸ್ಕರಿಸಬಹುದು. ನೀವು ಪೊಟ್ಟಣವನ್ನು ಸ್ವೀಕರಿಸಿದ ನಂತರ ಇದನ್ನು ಗಮನಿಸಿದರೆ, ʼಹಿಂದಿರುಗಿಸುವಿಕೆʼ ಕೋರಿಕೆಯನ್ನು ನೀಡಬೇಕಾಗುತ್ತದೆ. ಹಿಂದಿರುಗಿಸುವಿಕೆಯ ಆಯ್ಕೆಯನ್ನು ಕಂಡುಹಿಡಿಯಲು ಫ್ಲಿಪ್ಕಾರ್ಟ್‌ನ ಮೊಬೈಲ್ ಆಪ್‌ನಲ್ಲಿ ಅಥವ ಡಸ್ಕ್‌ಟಾಪ್‌ನ ಸೈಟ್‌ನಲ್ಲಿ ಆರ್ಡರ್ಸ್ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದನ್ನು ಆಯ್ಕೆಮಾಡಿ ಮತ್ತು ಪ್ರಕ್ರಿಯೆಯ ಮುಂದಿನ ಹಂತಗಳನ್ನು ಪಾಲಿಸಿ. ಇಲ್ಲಿಂದ ಫ್ಲಿಪ್ಕಾರ್ಟ್ ಉತ್ಪನ್ನ ಹಿಂದಿರುಗಿಸುವಿಕೆಯ ತಂಡ ಈ ವಿಷಯವನ್ನು ವಹಿಸಿಕೊಳ್ಳುತ್ತದೆ.
ನೀವು ಗೊತ್ತುಮಾಡಿ ತರಿಸಿದ ಉತ್ಪನ್ನದ ವರ್ಗಕ್ಕೆ ಅನುಗುಣವಾಗಿ ನೀವು ಬದಲಾಯಿಸುವಿಕೆ ಅಥವ ಹಣ ಮರುಪಾವತಿಗೆ ಆಯ್ಕೆಮಾಡಬಹುದು.
- ಅನಿರೀಕ್ಷಿತವಾದ ಬಣ್ಣ, ಹೊಂದುವಿಕೆ ಅಥವ ಶೈಲಿ
ನೀವು ಒಂದು ಜೊತೆ ಓಡುವಾಗ ಹಾಕಿಕೊಳ್ಳುವ ಶೂಗಳನ್ನು ಆರ್ಡರ್ ಮಾಡಿ ಅವು ಸರಿಯಾಗಿ ಹೊಂದುವುದಿಲ್ಲವೆಂದು ಕಂಡುಕೊಂಡಿರೇನು? ಚಿಂತೆಪಡಬೇಡಿ. ನಿಮ್ಮ ಫ್ಲಿಪ್ಕಾರ್ಟ್ ಖಾತೆ ಒಳಗೆ ಹೋಗಿ, ನನ್ನ ಆರ್ಡರ್ಸ್ ಟ್ಯಾಬ್‌ಗೆ ಹೋಗಿ, ಹಿಂದಿರುಗಿಸುವಿಕೆಯ ಮೇಲೆ ಕ್ಲಿಕ್ ಮಾಡಿ, ಕಾರಣವನ್ನು ಗಾತ್ರ ಹೊಂದುವಿಕೆಯ ವಿಷಯ ಎಂದು ಆಯ್ಕೆಮಾಡಿ ಮತ್ತು ವಿನಿಮಯ ಆಯ್ಕೆಯನ್ನು ಆರಿಸಿ. ಗಾತ್ರ ನಿಮಗೆ ಹೊಂದದೆ ಹೋದಲ್ಲಿ ಅಥವ ಉತ್ಪನ್ನದ ಬಣ್ಣ ಇಷ್ಟವಾಗದೆ ಇದ್ದಾಗ ವಿನಿಮಯ ಆಯ್ಕೆಯಾಗುತ್ತದೆ.
- ದಾಸ್ತಾನು ಇಲ್ಲದ ಉತ್ಪನ್ನಗಳ ವಿಷಯದಲ್ಲಿ ಹಿಂದಿರುಗಿಸುವಿಕೆ ಮತ್ತು ಬದಲಾಯಿಸುವಿಕೆ
ನೀವು ಒಂದು ಟಿ-ಶರ್ಟನ್ನು ಆರ್ಡರ್ ಮಾಡಿ ಅದರ ಗಾತ್ರ ನಿಮಗೆ ಹೊಂದುವುದಿಲ್ಲವೆಂದು ಕಂಡುಕೊಂಡಿರೇನು? ಆ ಗಾತ್ರದಲ್ಲಿ ಅದಕ್ಕೆ ಬದಲಾವಣೆಯಿಲ್ಲದಿದ್ದರೆ ಏನು ಮಾಡುವುದು?
ಅದೇ ನನ್ನ ಆರ್ಡರ್ಗಳು ಟ್ಯಾಬ್‌ನಿಂದ ನೀವು ನಿಮ್ಮ ಟಿ-ಶರ್ಟಿಗೆ ಪೂರ್ತಿ ಹಣ ಮರುಪಾವತಿ ಪಡೆಯಬಹುದು. ಹಾಗೆ ನೋಡಿದರೆ, ಜೀವನಶೈಲಿಯ ವರ್ಗದ ಯಾವುದೆ ಉತ್ಪನ್ನಕ್ಕೆ ನೀವು ಹಣ ಮರುಪಾವತಿಪಡೆಯಬಹುದು.
ಆದರೆ ಆ ಟಿ-ಶರ್ಟ್ ಮತ್ತೆ ದಾಸ್ತಾನಿಗೆ ಯಾವಾಗ ಬರುತ್ತದೆ ಎಂದು ಒಂದು ಕಣ್ಣಿಟ್ಟಿರಬೇಕೆನಿಸಿದರೆ ʼನನಗೆ ಸೂಚಿಸಿʼ ಎನ್ನುವ ಸೌಲಭ್ಯವನ್ನು ಕ್ಲಿಕ್ ಮಾಡಿ. ನಿಮ್ಮ ಅಚ್ಚುಮೆಚ್ಚಿನ ಟಿ-ಶರ್ಟ್ ಫ್ಲಿಪ್ಕಾರ್ಟಿನ ಒಬ್ಬ ಮಾರಾಟಗಾರರ ಬಳಿ ಲಭ್ಯವಾದಾಗ ನಿಮಗೆ ಸೂಚನೆ ಬರುತ್ತದೆ. ಆಗ ನೀವು ನಿಮಗೆ ನಿರ್ದಿಷ್ಟವಾಗಿ ಇಷ್ಟವಾದದ್ದನ್ನು ಖರೀದಿಸಲು ಮತ್ತೊಂದು ಅವಕಾಶ ಸಿಗುತ್ತದೆ.
- ನೀವು ಒಂದನ್ನು ಆರ್ಡರ್ ಮಾಡಿದಿರಿ, ಆದರೆ ಇನ್ನೇನೊ ಸಿಕ್ಕಿತು
ಈಗ ನೀವು ನಿಮ್ಮ ಮೊಟೊ ಜಿಗೆ ಕ್ಯಾಪ್ಟನ್ ಅಮೇರಿಕ ಮೊಬೈಲ್ ಹೊದಿಕೆಯನ್ನು ಆರ್ಡರ್ ಮಾಡಿದಿರಿ, ಆದರೆ ಪೊಟ್ಟಣ ತಲುಪಿದಾಗ ಒಂದು ಗೋಲ್ಡ್ ಐಫೋನ್‌ನ ಹೊದಿಕೆ ಸಿಕ್ಕಿತು. ಇದು ಸಾಮಾನ್ಯವಾಗಿ ನಡೆಯುವ ಸಂಗತಿಯಲ್ಲವಾದರೂ, ಇಂತಹ ವಿಚಾರವನ್ನು ತಕ್ಷಣ ʼಹಿಂದಿರುಗಿಸುವಿಕೆಗಾಗಿʼ ಎಚ್ಚರಿಸಬೇಕು.
ನೀವು ಹಿಂದಿರುಗಿಸುವಿಕೆಗೆ ಸೂಚಿದ ಮೇಲೆ ನಮ್ಮ ತಲುಪಿಸುವ ಸಿಬ್ಬಂದಿ ನಿಮಗೆ ತಲುಪಿಸಲಾದ ಉತ್ಪನ್ನವನ್ನು ತೆಗೆದುಕೊಂಡು ನೀವು ಆರ್ಡರ್ ಮಾಡಿದ ನಿರ್ದಿಷ್ಟವಾದ ಉತ್ಪನ್ನವನ್ನು ಬದಲಾಯಿಸಿಕೊಡುತ್ತಾರೆ. ನಿಮ್ಮ ಉತ್ಪನ್ನದ ವರ್ಣನೆಯಿರುವ ಪುಟದಲ್ಲಿ ಹಿಂದಿರುಗಿಸುವಿಕೆಯ ನೀತಿಯನ್ನು ಓದಲು ನೆನಪಿಡಿ.
ಎಲ್ಲ ಹಿಂದಿರುಗಿಸುವಿಕೆಗಳೂ ಫ್ಲಿಪ್ಕಾರ್ಟ್‌ನ ಬದಲಾಯಿಸುವಿಕೆಯ ಖಾತರಿಯಿಂದ ವ್ಯಾಪಿಸಲ್ಪಟ್ಟಿರುತ್ತವೆ.
ನಿಮ್ಮ ಬದಲಿ ಉತ್ಪನ್ನದಿಂದ ನಿಮಗೆ ತೃಪ್ತಿಯಿಲ್ಲದಿದ್ದರೆ ಅಥವ ನಿಮಗೆ ಬೇಕಾದ ನಿರ್ದಿಷ್ಟ ಉತ್ಪನ್ನ ಅಥವ ಮಾದರಿ ದಾಸ್ತಾನಿನಲ್ಲಿಲ್ಲದಿದ್ದರೆ, ಆಗ ನಮ್ಮ ಗ್ರಾಹಕರ ಬೆಂಬಲ ತಂಡವು ನಿಮಗೆ ಹಣ ಮರುಪಾವತಿಯನ್ನು ಆಯ್ಕೆಮಾಡಿಕೊಳ್ಳಲು ಸಲಹೆ ನೀಡಬಹುದು.
ನನ್ನ ಆರ್ಡರ್‌ಗಳು ಪುಟದಲ್ಲಿ ನಿಮ್ಮ ವಿವರಗಳನ್ನು ತುಂಗಿದ ನಂತರ ಹಿಂದಿರುಗಿಸುವಿಕೆಯ ಕೋರಿಕೆಯನ್ನು ಆಯ್ಕೆ ಮಾಡಿ. ನಿಮ್ಮ ಹಣ ಮರುಪಾವತಿಯನ್ನು ಅಂಗೀಕಾರದ ನಂತರ ಸಂಸ್ಕರಿಸಲಾಗುತ್ತದೆ. ನಿಮ್ಮ ಹಣ ಮರುಪಾವತಿಯನ್ನು ಅಂಗೀಕರಿಸಿದ ಮೇಲೆ, ನಿಮ್ಮ ಹಣವನ್ನು ನಿಮಗೆ ಈ ಮೂರು ರೀತಿಗಳ ಪೈಕಿ ಒಂದು ರೀತಿಯಲ್ಲಿ ನಿಮಗೆ ಸಂದಾಯಮಾಡಲಾಗುತ್ತದೆ –
- ನೀವು ಕ್ಯಾಶ್-ಆನ್-ಡೆಲಿವರಿಯ ಮೂಲಕ ಪಾವತಿಮಾಡಿದ್ದರೆ ನಿಮಗೆ ಐಎಂಪಿಎಸ್ ಮೂಲಕ ವರ್ಗಾಯಿಸಲಾಗುವುದು
- Aನೀವು ಆರ್ಡರ್‌ಗಾಗಿ ಬಳಸಿದ ಅದೇ ಮೂಲದ ಮೂಲಕ ಮರುಪಾವತಿಮಾಡುವುದು (ಬ್ಯಾಕ್ ಟು ಸೋರ್ಸ್ ಎಂದು ಕರೆಯಲಾಗುತ್ತದೆ). ಉದಾಹರಣೆಗೆ, ನೀವು ನಿಮ್ಮ ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್‌ನ ಮೂಲಕ ಪಾವತಿ ಮಾಡಿದ್ದರೆ, ನಿಮ್ಮ ಮರುಪಾವತಿಯನ್ನು ಅದೇ ಖಾತೆಗೆ ಸಲ್ಲಿಸಲಾಗುತ್ತದೆ.
- Vಐಎಂಪಿಎಸ್‌ನ ಮೂಲಕ ಹಿಂದಿರುಗಿಸುವಿಕೆಯನ್ನು ಸೃಷ್ಟಿಸುವಾಗ ನೀವು ನಮೂದಿಸಿದ ಒಂದು ಬ್ಯಾಂಕ್ ಖಾತೆಗೆ, ನೀವು ಮರುಪಾವತಿಯನ್ನು ಬ್ಯಾಕ್ ಟು ಸೋರ್ಸ್‌ಗೆ ಬದಲಾಗಿ ಒಂದು ಬ್ಯಾಂಕ್ ಖಾತೆಗೆ ಪಡೆಯಲು ಆಯ್ಕೆಮಾಡಿದರೆ (ಇದು ಡೆಬಿಟ್ ಕಾರ್ಡ್ ಮತ್ತು ನೆಟ್‌ಬ್ಯಾಂಕಿಂಗ್ ಫರ್ವರ್ಡ್ ಪಾವತಿಗಳಿಗೆ ಲಭ್ಯ).
- ಅರ್ಹವಾದ ವಹಿವಾಟುಗಳಿಗೆ, ನೀವು ನಿಮ್ಮ ಮರುಪಾವತಿಯನ್ನು ಮತ್ತೆ ವರ್ಗಾಯಿಸಬಹುದು Flipkart EGVs.
- ಫ್ಲಿಪ್ಕಾರ್ಟ್‌ನಿಂದ ಖಾರೀದಿಸಿದ ಒಂದು ಉತ್ಪನ್ನವು ಅದರ ಖಾತರಿಯ ಅವಧಿಯಲ್ಲಿ ಕಾರ್ಯನಿರ್ವಹಿಸದಿದ್ದರೆ
ಫ್ಲಿಪ್ಕಾರ್ಟ್‌ನ ಬದಲಾಯಿಸುವಿಕೆಯ ಖಾತರಿಯು ಮಾರಾಟಗಾರರ ಹಿಂದಿರುಗಿಸುವಿಕೆಯ ನೀತಿ ಮತ್ತು ಉತ್ಪನ್ನದ ವರ್ಗದ ಪ್ರಕಾರ ನಮೂದಿಸಿದ ಅವಧಿಯವರೆಗೆ ಅನ್ವಯವಾಗುತ್ತದೆ. ಪತ್ಪನ್ನದ ಪುಟದಲ್ಲಿ ಬದಲಾಯಿಸುವಿಕೆಯ ಖಾತರಿಯ ಅವಧಿಯನ್ನು ಮೊದಲು ಪರಿಶೀಲಿಸಿ, ತದನಂತರ ʼಹಿಂದಿರುಗಿಸುವಿಕೆಗೆʼ ಕೇಳುವುದು ಮುಖ್ಯ.
ಯಾವುದೇ ಕಾರಣವಿರಲಿ, ನೀವು ಆರ್ಡರ್ ಮಾಡಿದ ಉತ್ಪನ್ನದಲ್ಲಿ ಖಾತರಿ ಅವಧಿಯ ನಂತರ ಏನೊ ದೋಷವಿದೆ ಅಥವ ಅದು ಕೆಲಸಮಾಡುತ್ತಿಲ್ಲ ಎಂದು ನೀವು ಕಂಡುಕೊಂಡರೆ, ಯಾವ ರೀತಿಯಲ್ಲಿ ನೀವು ಒಬ್ಬ ಆಫ್ಲೈನ್ ಚಿಲ್ಲರೆ ವ್ಯಾಪಾರಿಯ ಬಳಿ ಯಾವುದೆ ಉತ್ಪನ್ನವನ್ನು ಕೊಂಡುಕೊಳ್ಳುವಿರೊ, ಹಾಗೆ ನಿಮ್ಮ ನಗರದಲ್ಲಿರುವ ಆ ಬ್ರಾಂಡ್‌ನ ಅಧಿಕೃತ ಸೇವಾ ಕೇಂದ್ರವನ್ನು ಸಂಪರ್ಕಿಸಿ.
ಈ ಲೇಖನವನ್ನು ಓದಿದ ನಂತರ ಫ್ಲಿಪ್ಕಾರ್ಟ್‌ನಲ್ಲಿ ಉತ್ಪನ್ನಗಳ ಹಿಂದಿರುಗಿಸುವಿಕೆಯ ಬಗ್ಗೆ ನಿಮಗೆ ಆರಾಮವಾಗಿದೆ ಎಂದು ನಾವು ನಂಬಿದ್ದೇವೆ. ನಿಮಗೆ ಇನ್ನೂ ಪ್ರಶ್ನೆಗಳಿದ್ದರೆ, ನೀವು ಫ್ಲಿಪ್ಕಾರ್ಟಿನ ಉತ್ಪನ್ನ ಹಿಂದಿರುಗಿಸುವಿಕೆ ಮತ್ತು ವಿನಿಮಯದ ಬಗ್ಗೆ ಪದೆಪದೆ ಕೇಳುವ ಪ್ರಶ್ನೆಗಳು ಗಮನವಿಟ್ಟು ಓದಲು ಪ್ರೋತ್ಸಾಹಿಸುತ್ತೇವೆ.
ಇನ್ನೂ ಪ್ರಶ್ನೆಗಳಿವೆಯೆ? ಇಲ್ಲಿ ಕ್ಲಿಕ್ ಮಾಡಿ ಫ್ಲಿಪ್ಕಾರ್ಟ್‌ನ ಜೊತೆ ಸಂಪರ್ಕ ಸಾಧಿಸಲು ಇನ್ನೂ ಹೆಚ್ಚು ಮಾಹಿತಿಗಾಗಿ
ಸಾಧನಾ ಪ್ರಸಾದ್ ಅವರಿಂದ ಇನ್ಫೊಗ್ರಾಫಿಕ್| ಫ್ಲಿಪ್ಕಾಟ್‌ನ ಕತೆಗಳು