ಫ್ಲಿಪ್‌ಕಾರ್ಟ್ ಫೌಂಡೇಶನ್: ಉತ್ತಮ ಭಾರತಕ್ಕೆ ದಾರಿದೀಪ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಫ್ಲಿಪ್‌ಕಾರ್ಟ್ ಗ್ರೂಪ್‌ನ ಆರಂಭಿಕ ಉಪಕ್ರಮಗಳನ್ನು ಮುಂದುವರಿಸಲು ಫ್ಲಿಪ್‌ಕಾರ್ಟ್ ಫೌಂಡೇಶನ್ ಅನ್ನು 2022 ರಲ್ಲಿ ಪ್ರಾರಂಭಿಸಲಾಯಿತು. ಇದು ದೇಶದ ವಿವಿಧ ರಾಜ್ಯಗಳಾದ್ಯಂತ ಆನ್-ಗ್ರೌಂಡ್ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುವುದರಿಂದ, ಫೌಂಡೇಶನ್ ಪರಿಣಾಮಕಾರಿ ಕೆಲಸ ಮಾಡುತ್ತಿರುವ ಅನೇಕ ಎನ್‌ಜಿಒಗಳೊಂದಿಗೆ ಸಹಯೋಗ ಹೊಂದಿದೆ. ವಿಕಲಚೇತನ ಮಕ್ಕಳಿಗೆ ಬೆಂಬಲವಾಗಿ ನಿಲ್ಲುವುದರಿಂದ ಹಿಡಿದು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಹಿಳೆಯರ ಸಬಲೀಕರಣದವರೆಗೆ, ಈ ಉಪಕ್ರಮಗಳು ಭಾರತದಲ್ಲಿ ಸಾವಿರಾರು ಜನರ ಜೀವನವನ್ನು ಪರಿವರ್ತಿಸುತ್ತಿವೆ. ಅನೇಕರ ಜೀವನವನ್ನೇ ಬದಲಾಯಿಸಿದ ಕ್ಷಣಗಳ ಫಲಪ್ರದ ಸಹಯೋಗಗಳ ಒಂದು ನೋಟ ಇಲ್ಲಿದೆ.

Flipkart Foundation

ಫ್ಲಿಪ್‌ಕಾರ್ಟ್‌ನಲ್ಲಿ, ವ್ಯಕ್ತಿಗಳನ್ನು ಸಬಲಗೊಳಿಸುವ ಮತ್ತು ಸಮಾಜಕ್ಕೆ ಹಿಂತಿರುಗಿಸುವ ಅಭಿಯಾನವು ನಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಮುಖ್ಯ ಭಾಗವಾಗಿದೆ. ‘ಭಾರತವನ್ನು ಒಟ್ಟಾಗಿ ನಿರ್ಮಿಸುವ’ ಈ ಪ್ರಯತ್ನಗಳನ್ನು ಸಾಂಸ್ಥಿಕಗೊಳಿಸುವ ಸಲುವಾಗಿ, ಫ್ಲಿಪ್‌ಕಾರ್ಟ್ 2022 ರಲ್ಲಿ ಫ್ಲಿಪ್‌ಕಾರ್ಟ್ ಫೌಂಡೇಶನ್ ಅನ್ನು ಭಾರತದಲ್ಲಿ ಅಂತರ್ಗತ, ಸಮಾನ, ಸಶಕ್ತ ಮತ್ತು ಸುಸ್ಥಿರ ಸಮಾಜವನ್ನು ಒದಗಿಸುವ ದೃಷ್ಟಿಯೊಂದಿಗೆ ಸ್ಥಾಪಿಸಿತು.


ಫ್ಲಿಪ್‌ಕಾರ್ಟ್ ಫೌಂಡೇಶನ್ ಬಗ್ಗೆ ಇನ್ನಷ್ಟು ತಿಳಿಯಲು ವೀಕ್ಷಿಸಿ:


ಕಳೆದ ವರ್ಷದಲ್ಲಿ, ತಳಮಟ್ಟದ ಬದಲಾವಣೆಯನ್ನು ತರಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ,ಫ್ಲಿಪ್‌ಕಾರ್ಟ್‌ ಫೌಂಡೇಶನ್ಗೀವ್‌ ಫೌಂಡೇಶನ್‌ ನ ಪಾಲುದಾರಿಕೆದೊಂದಿಗೆ ಪಶ್ಚಿಮ ಬಂಗಾಳ, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಾದ್ಯಂತ ಐದು ವಿಶ್ವಾಸಾರ್ಹ ಸರ್ಕಾರೇತರ ಸಂಸ್ಥೆಗಳೊಂದಿಗೆ (ಎನ್‌ಜಿಒ) ಜೊತೆಗೂಡಿದೆ. ನಮ್ಮ ಎನ್‌ಜಿಒ ಪಾಲುದಾರರಾದಆಶ್ರಯ ಆಕೃತಿ, Shramik Bharti, ಮುಕ್ತಿ, ದೀಪಾಲಯ ಮತ್ತು ಆರತಿ ಫಾರ್‌ ಗರ್ಲ್ಸ್‌ ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸುಸ್ಥಿರ ಬದಲಾವಣೆಗೆ ದಾರಿ ಮಾಡಿಕೊಡುವಲ್ಲಿ ಗುರುತಿಸಲ್ಪಟ್ಟಿವೆ.

ಆಶ್ರಯ್‌ ಆಕೃತಿಯಲ್ಲೇ, ಭವಿಷ್ಯ ಅಡಗಿದೆ

Flipkart Foundation

1996 ರಲ್ಲಿ ಪ್ರಾರಂಭವಾದ ಆಶ್ರಯ್‌ ಆಕೃತಿಯು ನಿರ್ಲಕ್ಷಿತ ಸಮುದಾಯಗಳ ವಿಕಲಚೇತನ ಮಕ್ಕಳ ಅಗತ್ಯತೆಗಳ ಮೇಲೆ ಕೇಂದ್ರೀಕೃತವಾಗಿದೆ. ಪ್ರಾರಂಭದಿಂದಲೂ, ಈ ಸಂಸ್ಥೆಯು 250 ಕ್ಕೂ ಹೆಚ್ಚು ಶ್ರವಣದೋಷವುಳ್ಳ ಮಕ್ಕಳು ಮುಖ್ಯವಾಹಿನಿಯ ಕಾಲೇಜುಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸೇರಲು ಅನುವು ಮಾಡಿಕೊಟ್ಟಿದೆ.

2022 ರಲ್ಲಿ, ಫ್ಲಿಪ್‌ಕಾರ್ಟ್ ಫೌಂಡೇಶನ್ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಆಶ್ರಯ್ ಆಕೃತಿಯ ಶ್ರೀನಗರ ಕಾಲೋನಿ ಶಾಖೆಯ ವಿದ್ಯಾರ್ಥಿಗಳಿಗೆ ಶ್ರವಣ ಸಾಧನಗಳನ್ನು ಒದಗಿಸಲು ಎನ್‌ಜಿಒ ಜೊತೆಗೆ ಸಹಯೋಗದೊಂದಿಗೆ 3 ತಿಂಗಳ ಕಾಲ ಸ್ಪೀಚ್ ಥೆರಪಿ ಮತ್ತು ಆಡಿಟರಿ ತರಬೇತಿಗೆ ಪ್ರವೇಶವನ್ನು ನೀಡಿತು. ತರಬೇತಿಯ ಅಲ್ಪ ಅವಾಧಿಯಲ್ಲೇ ಅಭ್ಯರ್ಥಿಗಳು ಗಮನಾರ್ಹ ಪ್ರಗತಿಯನ್ನು ತೋರಿಸಿದರು ಮತ್ತು ಈಗ ತಮ್ಮ ದಿನನಿತ್ಯದ ಸಂವಹನವನ್ನು ನಡೆಸಲು ಉತ್ತಮವಾಗಿ ಸಜ್ಜುಗೊಂಡಿದ್ದಾರೆ.

“ನಾವು ಫ್ಲಿಪ್‌ಕಾರ್ಟ್ ಫೌಂಡೇಶನ್ ಮೂಲಕ ಗಿವ್ ಸಹಭಾಗಿತ್ವದಲ್ಲಿ ಸಹಾಯ ಪಡೆದಿದ್ದೇವೆ. ಆಶ್ರಯ ಆಕೃತಿಯ ವಿಶೇಷ ಮಕ್ಕಳಿಗೆ 9 ಶ್ರವಣ ಸಾಧನಗಳನ್ನು ಉಚಿತವಾಗಿ ನೀಡಿದ್ದು, ನಿಜಕ್ಕೂ ದೊಡ್ಡ ಬದಲಾವಣೆಯನ್ನೇ ತಂದಿದೆ” ಎಂದು ಆಶ್ರಯ ಆಕೃತಿಯ ಕಾರ್ಯಕ್ರಮಗಳ ನಿರ್ವಾಹಕರಾದ ಅನುದಾ ನಂದಂ ಹೇಳುತ್ತಾರೆ. “ಫ್ಲಿಪ್‌ಕಾರ್ಟ್ ತಂಡದಿಂದ ಶ್ರವಣ ಸಾಧನಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ತುಂಬಾ ಸಂತೋಷಪಟ್ಟರು. ಇದು ಅವರಿಗೆ ಮಾತನಾಡಲು ಮತ್ತು ಶಿಕ್ಷಣದಲ್ಲಿ ಸುಧಾರಿಸಲು ಸಹಾಯ ಮಾಡುತ್ತದೆ.”

ಪ್ರವೇಶ ಮತ್ತು ಅವಕಾಶ: ಹರ್ಷವರ್ಧಿನಿಯ ಕಥೆ

ಹರ್ಷವರ್ಧಿನಿ ಅವರ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬದಲ್ಲಿ ದುಡಿಯುವ ಏಕೈಕ ಸದಸ್ಯರಾಗಿದ್ದಾರೆ, ಅವರ ತಾಯಿ ಅವರ ಮನೆಯನ್ನು ನೋಡಿಕೊಳ್ಳುತ್ತಾರೆ. ಆಶ್ರಯ್ ಆಕೃತಿಯಲ್ಲಿ ಶ್ರವಣ ಸಾಧನವನ್ನು ಪಡೆದ ಅನೇಕ ವಿದ್ಯಾರ್ಥಿಗಳಲ್ಲಿ ಅವಳೂ ಕೂಡ ಒಬ್ಬಳು. ಉತ್ತಮ ಅವಕಾಶಗಳಿಗಾಗಿ ಹೈದರಾಬಾದ್‌ಗೆ ವಲಸೆ ಬಂದ ಹರ್ಷವರ್ಧಿನಿ ಅವರ ರೋಗನಿರ್ಣಯವು ಕುಟುಂಬಕ್ಕೆ ಒಂದು ಸವಾಲಾಗಿತ್ತು.

ಶಾಲೆಯಲ್ಲಿ, ವಿಕಲಚೇತನ ಮಕ್ಕಳಿಗೆ ಸಂಪನ್ಮೂಲಗಳ ಕೊರತೆಯಿದ್ದ ಕಾರಣ, ಹರ್ಷವರ್ಧಿನಿಯ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರಾಗುತ್ತಿತ್ತು. ಆಶ್ರಯ್‌ ಆಕೃತಿ ಸಂಸ್ಥೆಯು ವಿಕಲಚೇತನ ಮಕ್ಕಳಿಗಾಗಿ ಮಾಡುತ್ತಿರುವ ಕಾರ್ಯದ ಬಗ್ಗೆ ಆಕೆಯ ಪೋಷಕರಿಗೆ ತಿಳಿದಾಗ, ಅಲ್ಲಿ ಪ್ರವೇಶಕ್ಕೆ ಪ್ರಯತ್ನಿಸಿದರು. ಇಂದು, ಹರ್ಷವರ್ಧಿನಿ ಜೀವನಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತಿದ್ದು, ಅಲ್ಲಿನ ಉತ್ತಮ ಸೌಲಭ್ಯಗಳು ಉತ್ತಮ ಅವಕಾಶಗಳಿಗೆ ಅನುವು ಮಾಡಿಕೊಡುತ್ತಿದೆ.

ಶ್ರಮಿಕ್ ಭಾರ್ತಿಯೊಂದಿಗೆ ನೈಸರ್ಗಿಕ ಕೃಷಿ ವಿಧಾನ

Flipkart Foundation

ಶ್ರಮಿಕ್ ಭಾರ್ತಿಯು 1986 ರಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಸಮಾಜದ ಗ್ರಾಮೀಣ ಮತ್ತು ನಗರದ ಆರ್ಥಿಕವಾಗಿ ಹಿಂದುಳಿದ ವರ್ಗಗಳೊಂದಿಗೆ ಪೂರ್ವಭಾವಿಯಾಗಿ ಕೆಲಸ ಮಾಡುತ್ತಿದ್ದಾರೆ. 2015 ರಿಂದ, ಅವರು ರೈತರನ್ನು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ನೈಸರ್ಗಿಕ ಕೃಷಿ ವಿಧಾನಗಳಿಗೆ ಪರಿವರ್ತಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಲಾಭೋದ್ದೇಶವಿಲ್ಲದ ಸಂಸ್ಥೆಯು ಕನಿಷ್ಠ 5,000 ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಕ್ರಿಯಗೊಳಿಸಿದೆ.

ಫ್ಲಿಪ್‌ಕಾರ್ಟ್ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದವರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಪ್ರಮುಖ ಮೌಲ್ಯವನ್ನು ಹೊಂದಿದ್ದು, ಸಹಯೋಗಕ್ಕಾಗಿ ಶ್ರಮಿಕ್‌ ಭಾರ್ತಿ ಸಂಸ್ಥೆಯನ್ನು ಭೇಟಿ ಮಾಡಿತು. ಇದರ ಫಲವಾಗಿ ಲಕ್ನೋದ ವೃಂದಾವನ ಕಾಲೋನಿಯಲ್ಲಿ ಮೂರು ದಿನಗಳ “ದಿ ಸೇಫ್ ಫುಡ್ ಫೆಸ್ಟ್ ಮತ್ತು ಎಕ್ಸಿಬಿಷನ್” ಕಾರ್ಯಕ್ರಮ ನಡೆಯಿತು. ಅಲ್ಲಿ 1,000 ಕ್ಕೂ ಹೆಚ್ಚು ರೈತರು, ಅದರಲ್ಲೂ ಮಹಿಳೆಯರು, ಗ್ರಾಮೀಣ ಮತ್ತು ನಿರ್ಲಕ್ಷಿತ ಸಮುದಾಯಗಳ ನೈಸರ್ಗಿಕ ಉತ್ಪನ್ನಗಳನ್ನು ಮಾರಾಟಕ್ಕೆ ಪ್ರದರ್ಶಿಸಲಾಯಿತು.

“ಈವೆಂಟ್ ಯಶಸ್ವಿಯಾಗಿದೆ. ಇದು ನೈಸರ್ಗಿಕ ಕೃಷಿ ಮಾಡುವ ರೈತರಿಗೆ (ರೈತ ಉತ್ಪಾದಕ ಸಂಸ್ಥೆಗಳ ಅಡಿಯಲ್ಲಿ ಸಂಘಟಿತವಾಗಿದೆ) ನಗರ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಗೃಹಿಣಿಯರು, ನಾಯಕರು, ರಾಜಕಾರಣಿಗಳು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ತಾವು ನೈತಿಕವಾಗಿ ಬೆಳೆದ ಸುರಕ್ಷಿತ ಆಹಾರವನ್ನು ಪ್ರದರ್ಶಿಸಲು ಸಹಾಯ ಮಾಡಿದೆ” ಎಂದು ಕಾರ್ಯಕ್ರಮದ ಸಂಯೋಜಕರಾದನೀಲಮಣಿ ಗುಪ್ತಾ ಹೇಳುತ್ತಾರೆ. “ಆಹಾರ, ಕೃಷಿ ಮತ್ತು ನೈಸರ್ಗಿಕ ಕೃಷಿ ತಜ್ಞರು ನಡೆಸಿಕೊಟ್ಟ ಅರಿವು ಕಾರ್ಯಕ್ರಮವು ನಗರ ಸಮುದಾಯಗಳಲ್ಲಿ ಸುರಕ್ಷಿತ ಆಹಾರದ ಬಗ್ಗೆ ಜಾಗೃತಿ ಮೂಡಿಸಿದವು.”

ಬೆಳವಣಿಗೆಯ ಬೀಜಗಳನ್ನು ಬಿತ್ತುವುದು – ರಾಮ್ ಕುಮಾರಿಯವರ ಕಥೆ

2016 ರಲ್ಲಿ, ಕಾನ್ಪುರದ ಶಿವರಾಜ್‌ಪುರದ ಛಬ್ಬಾ ನಿವಾಡ ಗ್ರಾಮದ ನಿವಾಸಿ ರಾಮ್ ಕುಮಾರಿ, ಪ್ರಸಿದ್ಧ ಕೃಷಿಕ ಸುಭಾಷ್ ಪಾಲೇಕರ್ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ರಾಸಾಯನಿಕ ಅಥವಾ ಸಾವಯವ ಗೊಬ್ಬರವನ್ನು ಬಳಸದೆ ಬೆಳೆಗಳನ್ನು ಬೆಳೆಯುವ ನೈಸರ್ಗಿಕ ಕೃಷಿಯ ಬಗ್ಗೆ ಇದೇ ಮೊದಲ ಬಾರಿಗೆ ಅವರು ತಿಳಿಯಲು ಬಂದಿದ್ದರು. ಇದನ್ನು ಅನುಸರಿಸಿ, ರಾಮ್ ಕುಮಾರಿ ಮತ್ತು ಅವರ ಪತಿ ಒಂದು ಸಣ್ಣ ತುಂಡು ಭೂಮಿಯಲ್ಲಿ ಪ್ರೀಮಿಯಂ ಭತ್ತದ ತಳಿಯಾದ ರಾಮ್‌ಭೋಗ್‌ ಅನ್ನು ಬೆಳೆಯಲು ಪ್ರಾರಂಭಿಸಿದರು. ಇದು ಅವರ ಜೀವನವನ್ಗೆನೇ ಬದಲಾಯಿಸಿತು!

ಇಂದು, ರಾಮ್ ಕುಮಾರಿ ಅವರು ಏಕತಾ ನೇಚರ್ ಫಾರ್ಮಿಂಗ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನ ಒಂದು ಭಾಗವಾಗಿದ್ದಾರೆ. ಅಲ್ಲಿ 600 ಮಹಿಳಾ ರೈತರು ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಒಟ್ಟುಗೂಡಿಸಿ, ಸಂಸ್ಕರಿಸಿ, ಮಾರಾಟ ಮಾಡುತ್ತಾರೆ. ಶ್ರಮಿಕ್ ಭಾರ್ತಿ ಮತ್ತು ಫ್ಲಿಪ್‌ಕಾರ್ಟ್ ಫೌಂಡೇಶನ್ ಆಯೋಜಿಸಿದ ಮೂರು ದಿನಗಳ ಉತ್ಸವದಲ್ಲಿ ಅವರ ಬೆಳೆ ಉತ್ಪನ್ನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು ಮತ್ತು ಮಾರಾಟ ಮಾಡಲಾಯಿತು.

ಮುಕ್ತಿಯಲ್ಲಿ, ʻಗೋ ಗ್ರೀನ್‌ʼನಿಂದ ಆರ್ಥಿಕವಾಗಿ ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣ

Flipkart Foundation

2003 ರಿಂದ ಸಕ್ರಿಯವಾಗಿರುವ ʻಮುಕ್ತಿʼಯು ಒಂದು ಸಾಮಾಜಿಕ-ಆರ್ಥಿಕ ಉದ್ಯಮವಾಗಿದ್ದು, ಮುಖ್ಯವಾಗಿ ಸುಂದರ್‌ ಬನ್ಸ್‌ ಡೆಲ್ಟಾ ಪ್ರದೇಶದಲ್ಲಿ ಮತ್ತು ಪಶ್ಚಿಮ ಬಂಗಾಳದ 10 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಿರ್ಲಕ್ಷಿತ ಸಮುದಾಯಗಳ ಮಹಿಳೆಯರಿಗೆ ತಮ್ಮ ಸೆಣಬಿನ ಉತ್ಪನ್ನಗಳ ಮೂಲಕ ಸುಸ್ಥಿರ ಜೀವನ ನಡೆಸಲು ಅನುವು ಮಾಡಿಕೊಡಲು ಫ್ಲಿಪ್‌ಕಾರ್ಟ್‌ ಫೌಂಡೇಶನ್ ʻಮುಕ್ತಿʼಯೊಂದಿಗೆ ಕೈಜೋಡಿಸಿತು. “Hasthshilp – ಲೆಟ್ಸ್ ಗೋ ಗ್ರೀನ್ ವಿತ್‌ ಮುಕ್ತಿ & ಫ್ಲಿಪ್‌ಕಾರ್ಟ್ ಫೌಂಡೇಶನ್” ಅನ್ನು ಜುಲೈ 2022 ರಲ್ಲಿ ಕೋಲ್ಕತ್ತಾದ ನ್ಯೂ ಟೌನ್‌ನ ಜಟ್ರಗಚಿಯಲ್ಲಿ ಎನ್‌ಜಿಒ ಪ್ರಾರಂಭಿಸಲಾಯಿತು, ಈ ಸಮಯದಲ್ಲಿ 24 ಮಹಿಳೆಯರಿಗೆ ಸೆಣಬಿನ ಗೊಂಬೆ ತಯಾರಿಕೆ ಮತ್ತು ಸ್ಯಾಂಡಲ್ ತಯಾರಿಕೆಯ ಪ್ರಕ್ರಿಯೆಗಳಲ್ಲಿ ತರಬೇತಿ ನೀಡಲಾಯಿತು. ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಲಭ್ಯವಿರುವ ಮತ್ತು ಪರಿಸರ ಸ್ನೇಹಿಯಾದ ಸೆಣಬು ಸಹ ಸುಸ್ಥಿರ ಭೂಮಿಗೆ ಕೊಡುಗೆ ನೀಡಲು ಅವರನ್ನು ಶಕ್ತಗೊಳಿಸುತ್ತದೆ.

“ಮುಕ್ತಿಯಲ್ಲಿ ನಾವು ಫ್ಲಿಪ್‌ಕಾರ್ಟ್‌ ಫೌಂಡೇಶನ್‌ನೊಂದಿಗೆ ಪಾಲುದಾರರಾಗಲು ಇದೊಂದು ಉತ್ತಮ ಅವಕಾಶ ಮತ್ತು ಗೌರವವೆಂದು ಭಾವಿಸುತ್ತೇವೆ ಮತ್ತು ಇದು ಹಲವಾರು ವಂಚಿತ ಮಹಿಳೆಯರು, ವಿಶೇಷವಾಗಿ ಗೃಹಿಣಿಯಾಗಿದ್ದು, ಮನೆ ಕೆಲಸ ಮಾಡುತ್ತಿರುವವರು ಅಥವಾ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ಜೀವನದಲ್ಲಿ ಅಪೇಕ್ಷಿತ ಬದಲಾವಣೆಯನ್ನು ತರುತ್ತದೆ ಎಂದು ಭಾವಿಸುತ್ತೇವೆ. ಈ ಉಪಕ್ರಮವು ಅವರನ್ನು ಸ್ವಾವಲಂಬಿಗಳಾಗಿರಲು ಉತ್ತೇಜಿಸುತ್ತದೆ ಮತ್ತು ಅವರ ಕುಟುಂಬವನ್ನು ಬೆಂಬಲಿಸಲು ಸಾಧ್ಯವಾಗುವಂತೆ ಮಾಡುತ್ತದೆ” ಎಂದು ಅಂಕಿತಾ ಕೊಥಿಯಾಲ್, ಲೀಡ್ ಸಿಆರ್‌ಎಸ್‌, ಮುಕ್ತಿ, ಗಮನಿಸುತ್ತಾರೆ.

ಸ್ವಾವಲಂಬನೆ, ಎಲ್ಲವನ್ನೂ ಮೀರಿದ – ಜುಮಾ ಕಥೆ

ತನ್ನ ಮಗು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದಾಗ, ತನ್ನ ಗಂಡನ ಅಸ್ಥಿರ ಆದಾಯವನ್ನು ಮಾತ್ರ ಅವಲಂಬಿಸಲು ಸಾಧ್ಯವಿಲ್ಲ ಎಂಬುದನ್ನು ಜುಮಾ ಅರಿತುಕೊಂಡರು. ಸ್ವಾವಲಂಬಿಯಾಗಲು ಮಾರ್ಗವನ್ನು ಹುಡುಕುತ್ತಿರುವಾಗ, ಕೋಲ್ಕತ್ತಾದ ನ್ಯೂ ಟೌನ್‌ನಿಂದ ಜುಮಾ ಅವರು ನೆರೆಯವರ ಶಿಫಾರಸಿನ ಮೂಲಕ ʻಮುಕ್ತಿʼ ಸಂಸ್ಥೆಗೆ ಭೇಟಿ ನೀಡಿದರು. ಎನ್‌ಜಿಒ ಮತ್ತು ಫ್ಲಿಪ್‌ಕಾರ್ಟ್ ಫೌಂಡೇಶನ್ ಆಯೋಜಿಸಿದ ʻಹಸ್ತ್‌ ಶಿಲ್ಪ್‌ʼ ಕಾರ್ಯಕ್ರಮವು ಸೆಣಬಿನ ಗೊಂಬೆ ತಯಾರಿಕೆಯ ಕಲೆಯನ್ನು ಕಲಿಯಲು ಆಕೆಗೆ ಅನುವು ಮಾಡಿಕೊಟ್ಟಿತು. ಮೇಳದಲ್ಲಿ 16 ಗೊಂಬೆಗಳನ್ನು ಮಾರಾಟ ಮಾಡಿದ ಅವರು ಈ ಕಲೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೇರಣೆ ಪಡೆದರು. ಈಗ, ಜುಮಾ ಸ್ವತಃ ತಾವೇ ʻಮುಕ್ತಿʼಯೊಂದಿಗೆ ತನ್ನ ಹೊಸ ವ್ಯಾಪಾರ ಆರಂಭಿಸಲು ಯೋಜಿದ್ದಾರೆ.

ದೀಪಾಲಯದೊಂದಿಗೆ ಹೊಸ ಕನಸುಗಳ ಸೃಷ್ಟಿ

Flipkart Foundation

ದೀಪಾಲಯವು 1979 ರಲ್ಲಿ ಸ್ಥಾಪಿತವಾದ ಲಾಭರಹಿತ ಸಂಸ್ಥೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಮೂಲಕ ಆರಂಭವಾಯಿತು. ಇಂದು ಈ ಸಂಸ್ಥೆಯ ಕಾರ್ಯವ್ಯಾಪ್ತಿಯು ಮಹಿಳೆಯರು, ಯುವಕರು ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ವಿಕಲಚೇತನ ಮಕ್ಕಳ ಕಲ್ಯಾಣದವರೆಗೂ ವಿಸ್ತರಿಸಿದೆ.

ಫ್ಲಿಪ್‌ಕಾರ್ಟ್ ಫೌಂಡೇಶನ್ ಹರಿಯಾಣದ ಗುರುಗ್ರಾಮದ‌ನಲ್ಲಿರುವ ನಿರ್ಲಕ್ಷಿತ ಸಮುದಾಯಗಳ ಮಹಿಳೆಯರಿಗೆ ಸಾಬೂನು ತಯಾರಿಕೆಯ ವೃತ್ತಿಯನ್ನು ಕಲಿಯಲು ಅನುವು ಮಾಡಿಕೊಡಲು ಎನ್‌ಜಿ ಜೊತೆ ಕೈಜೋಡಿಸಿತು. ಗುರುಗ್ರಾಮದ ಸೊಹ್ನಾ ಗ್ರಾಮದ ಸುಮಾರು 50 ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಸಮುದಾಯದ ಇತರ ಮಹಿಳೆಯರಿಗೆ ಕೌಶಲ್ಯಗಳನ್ನು ಕಲಿಸುವ ಮೂಲಕ ಸ್ವಸಹಾಯ ಗುಂಪುಗಳನ್ನು (SHGs) ರಚಿಸಲು ಮಹಿಳೆಯರನ್ನು ಒಟ್ಟುಗೂಡಿಸಲಾಯಿತು.

“ಈ ತರಬೇತಿ ಕಾರ್ಯಕ್ರಮವು ಕೌಶಲ್ಯ ಅಭಿವೃದ್ಧಿಯ ಮೂಲಕ ಮಹಿಳಾ ಸಬಲೀಕರಣದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ” ಎಂದು ದೀಪಾಲಯದ ಸಂಪನ್ಮೂಲ ಸಂಗ್ರಹಣಾ ಅಧಿಕಾರಿ ಜ್ಯೋತಿ ಹೇಳುತ್ತಾರೆ. “ ಸಂಪೂರ್ಣ ಒಂದು ವಾರದ ಕಾರ್ಯಾಗಾರದಲ್ಲಿ, ಮಹಿಳೆಯರು ಗಿಡಮೂಲಿಕೆಗಳ ಸಾಬೂನು ತಯಾರಿಕೆಯ ಬಗ್ಗೆ ಕಲಿಯುವ ಅವಕಾಶ ಪಡೆದರು. ಸೋಹ್ನಾದ ರಾಣಿ ಎಂಬ ವಿದ್ಯಾರ್ಥಿನಿ 10 ಸದಸ್ಯರೊಂದಿಗೆ ಸ್ವಸಹಾಯ ಸಂಘವನ್ನು ರಚಿಸಿದರು ಮತ್ತು ಶೀಘ್ರದಲ್ಲೇ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ನಿರಂತರವಾಗಿ ಅಭ್ಯಾಸ ಮಾಡಿ, ಮನೆಯಲ್ಲಿಯೇ ಗಿಡಮೂಲಿಕೆಗಳ ಸಾಬೂನುಗಳನ್ನು ತಯಾರಿಸುತ್ತಿದ್ದಾರೆ.

ಹರಿಯಾಣದಲ್ಲಿ, ಹೊಸ ಅವಕಾಶಗಳು ಮತ್ತು ಯಶಸ್ಸನ್ನು ಸಾಧಿಸಿದ ಕಾಜಲ್

ಸೊಹ್ನಾ ಗ್ರಾಮದ ಎರಡು ಮಕ್ಕಳ ತಾಯಿಯಾದ 23 ವರ್ಷದ ಕಾಜಲ್‌ ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ, ಸಾಬೂನು ತಯಾರಿಸುವ ಕಾರ್ಯಕ್ರಮವು ಒಂದು ವರದಾನವಾಯಿತು. ಆಕೆಯ ಪತಿ ಒಮ್ಮ ಸೇಲ್ಸ್‌ಮ್ಯಾನ್‌ ಆಗಿದ್ದು, 6 ಸದಸ್ಯರಿರುವ ಕುಟುಂಬದಲ್ಲಿದ್ದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದರು, ಇದರಲ್ಲಿ ಅವರ ಪೋಷಕರು ಸೇರಿದ್ದಾರೆ. ಅವರಿಗೆ ಬೆಂಬಲವಾಗಿ ನಿಲ್ಲಲು, ಕಾಜಲ್‌ ಕೂಡಾ ಕಾರ್ಯಾಗಾರದಲ್ಲಿ ಭಾಗವಹಿಸಿದಳು. ತನ್ನ ಹೊಸ ಕೌಶಲ್ಯದಿಂದ, ಕಾಜಲ್ ಈಗ ದಿನಕ್ಕೆ ಸುಮಾರು 20 ಸಾಬೂನುಗಳನ್ನು ತಯಾರಿಸುತ್ತಾಳೆ ಮತ್ತು ಅವುಗಳನ್ನು ತನ್ನ ನೆರೆಹೊರೆಯ ಜನರಿಗೆ ಮಾರಾಟ ಮಾಡುತ್ತಾಳೆ. ಅವಳು ಸಂಪಾದಿಸಿದ ಕೌಶಲ್ಯದಿಂದ ತನ್ನದೇ ಆದ ಸಣ್ಣ ವ್ಯಾಪಾರವನ್ನು ತೆರೆಯುವ ಕನಸು ಕಂಡಿದ್ದಾಳೆ.

ಆರತಿ ಫಾರ್‌ ಗರ್ಲ್ಸ್‌ ಜೊತೆ ಆರೋಗ್ಯಕರ ಭವಿಷ್ಯದೆಡೆಗೆ

Flipkart Foundation

ಆಂಧ್ರಪ್ರದೇಶ ಮೂಲದ, ವಿಜಯ್ ಫೌಂಡೇಶನ್ ಟ್ರಸ್ಟ್ (ಅಸೋಸಿಯೇಷನ್), ಆರತಿ ಫಾರ್‌ ಗರ್ಲ್ಸ್ ಎಂದೇ ಜನಪ್ರಿಯವಾಗಿದ್ದು, ಕೈಬಿಡಲಾದ ಹೆಣ್ಣು ಮಕ್ಕಳಿಗೆ ಮನೆ, ಮತ್ತು ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಅಗತ್ಯಗಳನ್ನು ಸಕ್ರಿಯವಾಗಿ ಪೂರೈಸುತ್ತಿದೆ
.
ಫ್ಲಿಪ್‌ಕಾರ್ಟ್‌ ಫೌಂಡೇಶನ್ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಹಾಯ ಮಾಡಲು ಸರ್ಕಾರೇತರ ಸಂಸ್ಥೆಯೊಂದಿಗೆ ಕೈಜೋಡಿಸಿತು. ಕಡಪಾದಲ್ಲಿನ ಆರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ʻಮುಟ್ಟಿನ ನೈರ್ಮಲ್ಯ ನಿರ್ವಹಣೆ (ಎಂಎಚ್‌ಎಂ) ಕುರಿತು ಅರಿವು ಮೂಡಿಸುವುದುʼ ಕಾರ್ಯಕ್ರಮದಲ್ಲಿ, ಗ್ರಾಮೀಣ ಮಹಿಳೆಯರು ಮತ್ತು ಬಾಲಕಿಯರ ಸಮೀಕ್ಷೆ ನಡೆಸಲಾಯಿತು.

ಅನೇಕ ಗ್ರಾಮೀಣ ಮಹಿಳೆಯರು ಮುಟ್ಟಿನ ಸಂಬಂಧಿತ ಸಮಸ್ಯೆಗಳನ್ನು ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆ ಚರ್ಚಿಸಲು ಕಷ್ಟಕರವಾಗಿದೆ ಮತ್ತು ಉತ್ತಮ ಮುಟ್ಟಿನ ನೈರ್ಮಲ್ಯದ ಬಗ್ಗೆ ಇರುವ ಜ್ಞಾನದ ಕೊರತೆಯ ಬಗ್ಗೆ ಪೂರ್ವ ಜಾಗೃತಿ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಟಿ ವಿಂಧ್ಯಾ, MD ಮತ್ತು ಹೈದರಾಬಾದ್‌ನ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರ ಸಂಘದ ಅಧ್ಯಕ್ಷರು, ಇವರು ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ತಿಳಿಸಿದರು. ಒಂದು ತಿಂಗಳ ನಂತರ ನಡೆಸಿದ ಜಾಗೃತಿಯೋತ್ತರ ಸಮೀಕ್ಷೆಯಲ್ಲಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ವಿಷಯದ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಅರಿವಿನ ಬಗ್ಗೆ ಮಾತನಾಡಿದರು.

“ಡಾ. ವಿಂಧ್ಯಾ ಅವರು ಮುಟ್ಟಿನ ನೈರ್ಮಲ್ಯದ ಮಹತ್ವವನ್ನು ತಿಳಿಸಿದರು. ಅವರು ಋತುಚಕ್ರಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಮತ್ತು ಕಟ್ಟುಕಥೆಗಳನ್ನು ವಿವರಿಸಿದರು, ಇದರಿಂದಾಗಿ ಅನೇಕ ಹುಡುಗಿಯರು ಶಾಲೆಯಿಂದ ಹೊರಗುಳಿಯುತ್ತಾರೆ” ಎಂದು ಸುನೀಲಕಾಂತ್ ರಾಚಮಡುಗು, ಸಲಹೆಗಾರರು, ಆರತಿ ಫಾರ್‌ ಗರ್ಲ್‌, ತಿಳಿಸಿದರು.

ಋತುಸ್ರಾವದ ಸುತ್ತಲಿನ ಮೌಢ್ಯಗಳ ಅನಾವರಣ

ಶಾಲೆಗೆ ಹಾಜರಾಗುವುದರಿಂದ ಹಿಡಿದು ಆಹಾರ ಪದಾರ್ಥಗಳನ್ನು ಮುಟ್ಟುವವರೆಗೆ ನಿರ್ಬಂಧಿತರಾಗಿದ್ದರಿಂದ, 18 ವರ್ಷದ ನಿರ್ಮಲಾ (ಹೆಸರು ಬದಲಾಯಿಸಲಾಗಿದೆ), ಸಾಮಾಜಿಕ ನಿಷೇಧಗಳು ಮತ್ತು ಮುಟ್ಟಿನ ಬಗ್ಗೆ ತಪ್ಪು ಕಲ್ಪನೆಗಳ ಕಾರಣದಿಂದಾಗಿ ತೀವ್ರ ಅನಾನುಕೂಲತೆಯನ್ನು ಎದುರಿಸಿದರು – ಅವರ ಸಮುದಾಯದ ಇತರ ಅನೇಕರಂತೆ, ನಿರ್ಮಲಾ ಮತ್ತು ಆಕೆಯ ತಾಯಿಯೂ ಸಹ ಮುಟ್ಟು ಎಂಬುದು ಒಂದು ಶಾಪ ಎಂದೇ ನಂಬಿದ್ದರು.

ಆದರೆ ಜಾಗೃತಿ ಕಾರ್ಯಕ್ರಮದಿಂದಾಗಿ ನಿರ್ಮಲಾ ಮತ್ತು ಅವರ ತಾಯಿಯು ಮುಟ್ಟಿನ ಸುತ್ತಲಿನ ಅನೇಕ ಮೌಢ್ಯಾಚರಣೆಗಳ ಬಗ್ಗೆ ತಿಳಿಯುವಂತಾಯಿತು ಮತ್ತು ಅವರು ಜ್ಞಾನದ ಸಂಪತ್ತನ್ನು ಗಳಿಸಿದ್ದೇವೆ ಎಂದಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರಿಗೆ ಅಧಿಕಾರ ನೀಡಲು ಮತ್ತು ಉತ್ತಮ ಭಾರತವನ್ನು ನಿರ್ಮಿಸಲು, ಫ್ಲಿಪ್‌ಕಾರ್ಟ್ ಫೌಂಡೇಶನ್ ಬಲವಾದ, ಪ್ರಭಾವಶಾಲಿ ಉಪಕ್ರಮಗಳನ್ನು ಕೈಗೊಳ್ಳುತ್ತದೆ. ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡುವ ವಿವಿಧ ಎನ್‌ಜಿಒಗಳೊಂದಿಗೆ ಹೊಂದಿರುವ ಸಹಯೋಗಗಳಿಂದಾಗಿ, ಫೌಂಡೇಶನ್ ಗರಿಷ್ಠ ಪರಿಣಾಮವನ್ನು ಸೃಷ್ಟಿಸುತ್ತದೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಒಳಗೊಂಡಿದೆ ಎಂಬುದನ್ನು ಖಚಿತಪಡಿಸುತ್ತದೆ.


ಫ್ಲಿಪ್‌ಕಾರ್ಟ್‌ನಲ್ಲಿ ಇನ್ನಷ್ಟು ಯಶೋಗಾಥೆಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

Enjoy shopping on Flipkart