ಕಿರಾನ ಕಾರ್ಯಕ್ರಮ ಹೇಗೆ ಒಳಗೊಳ್ಳುವ ಬೆಳವಣಿಗೆ ಮತ್ತು ತಲುಪುವಿಕೆಯನ್ನು ಪೋಷಿಸುತ್ತಿದೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಕಿರಾಣಿ ಅಂಗಡಿಗಳು ಹಲವು ತಲೆಮಾರುಗಳಿಗೆ ಭಾರತೀಯ ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಬೆನ್ನೆಲುಬಾಗಿವೆ. ಅವುಗಳು ನಮ್ಮ ಅಜ್ಜಿ-ತಾತಂದಿರು ನಮಗೆ ಹೇಳುವ ಕತೆಗಳನ್ನು ಪ್ರವೇಶಿಸುತ್ತೆ; ಅವರು ಹಂಬಲದ ನೆನಪುಗಳಿಂದ ಕೆಲವೇ ಆಣೆಗಳಿಗೆ ತಿಂಗಳಿನ ದಿನಸಿ ಸಿಗುತ್ತಿದ್ದನ್ನು ಹೇಳುತ್ತಾರೆ. ಈಗ ಕೆಲವೇ ಹಿರಿಯರು ಆಣೆಯನ್ನು ನೆನಪಿಸಿಕೊಳ್ಳಬಲ್ಲರು. ಕಿರಾಣಿ ಅಂಗಡಿಗಳು ಅಷ್ಟೆ ಪ್ರಮಾಣದಲ್ಲಿ ಭಾರತದ ಚಿಲ್ಲರೆ ವ್ಯಾಪಾರದ ಇತಿಹಾಸದ ಭಾಗವಾಗಿವೆ, ಏಕೆಂದರೆ ಅವು ವರ್ತಮಾನದಲ್ಲಿ ಅತ್ಯಂತ ದೊಡ್ಡ ಮಹಾನಗರಗಳಿಂದ ಹಿಡಿದು ಅತಿಚಿಕ್ಕ ಹಳ್ಳಿಗಳವರೆಗೆ ಹಬ್ಬಿಕೊಂಡಿವೆ. ಫ್ಲಿಪ್ಕಾರ್ಟ್‌ನ ಕಿರಾನ ಕಾರ್ಯಕ್ರಮ ಈ ದೀರ್ಘಾವಧಿ ಬಾಳಿರುವ ಸಂಸ್ಥೆಗಳ ಶಕ್ತಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸೇರಿಸಿ ಅಂಗಡಿ ಮಾಲಿಕರಿಗೆ ಬೆಳವಣಿಗೆ ಮತ್ತು ಗಿರಾಕಿಗಳಿಗೆ ಬೇಕಾದದ್ದು ಎಟುಕುವಂತಹ ಸೌಲಭ್ಯ ಸೃಷ್ಟಿಮಾಡುತ್ತದೆ. ಭಾರತದಾದ್ಯಂತ ಹರಡಿರುವ ನಮ್ಮ ನಾಲ್ಕು ಕಿರಾನ ಪಾಲುದಾರರ ಬದುಕನ್ನು ನಾವು ಅನುಸರಿಸುವಾಗ ನೀವೂ ನಮ್ಮ ಜೊತೆ ಅವರ ಬಗ್ಗೆ ಓದಿ -

Flipkart Kirana Program Story

ಕಿರಾಣಿ ಅಂಗಡಿಗಳು ಕುಟುಂಬಗಳು ನಡೆಸುವ ವ್ಯವಸ್ಥೆಗಳಾಗಿದ್ದು ಭಾರತದ ಅತ್ಯಂತ ವಿಶ್ವಾಸಾರ್ಹ ಚಿಲ್ಲರೆ ವ್ಯಾಪಾರದ ಮಾದರಿಯಾಗಿವೆ. ಒಂದು ರೀತಿಯಲ್ಲಿ ಹೇಳುವುದಾದರೆ, ಅಪೇಕ್ಷೆಯ ಪಟ್ಟಿಗಳು ಮತ್ತು ಕೊಳ್ಳುವ ಕೈಗಾಡಿಗಳನ್ನು ಕಿರಾಣಿ ಅಂಗಡಿ ಮಾಲಿಕರು ಅವರು ಕಾರ್ಯನಿರ್ವಹಿಸುತ್ತಿದ್ದ ಸಮುದಾಯಗಳಲ್ಲಿ ಇಡುವುದರಲ್ಲಿ ಮೊದಲಿಗರಾಗಿದ್ದರು – ಅವರು ತಮ್ಮ ಗ್ರಾಹಕರನ್ನು ಮತ್ತು ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ, ಮತ್ತು ಅವರಿಗೆ ಏನು ಬೇಕೊ ಅದನ್ನು ಯಾವಾಗಲೂ ಶೇಖರಿಸಿಡುವುದರಿಂದ ಅವರಲ್ಲಿ ಒಂದು ಬಗೆಯ ನಂಬಿಕೆಯನ್ನು ಉಂಟುಮಾಡುತ್ತಾರೆ.

ಭಾರತದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ವಿಕಾಸವಾದಂತೆ ಒಂದು ಬಿಲಿಯನ್ನಿಗೂ ಹೆಚ್ಚಿನ ಜನಸಂಖ್ಯೆಯ ಖರೀದಿಸುವ ಅಭ್ಯಾಸಗಳೂ ವಿಕಾಸವಾದವು.

೨೦೧೯ರಲ್ಲಿ ಫ್ಲಿಪ್ಕಾರ್ಟ್‌ ಕಾರ್ಯಕ್ರಮವನ್ನು ಭಾರತದ ಅತ್ಯಂತ ಪ್ರಾಚೀನ ಚಿಲ್ಲರೆ ವ್ಯಾಪಾರದ ನಮೂನೆಯ ಸದಸ್ಯರನ್ನು ಈ-ಕಾಮರ್ಸ್‌ನ ತೆಕ್ಕೆಗೆ ಒಳಪಡಿಸಲು ಶುರುಮಾಡಲಾಯಿತು. ಅವರು ತಮ್ಮ ಸ್ಥಾಪಿತವಾದ ಅಂಗಡಿಗಳನ್ನು, ಅಂದರೆ ಅಮ್ಮ-ಮತು-ಅಪ್ಪ ಅಂಗಡಿಗಳು, ಹೊಲಿಗೆ ಅಂಗಡಿಗಳು, ಬೇಕರಿಗಳು, ದಿನಸಿ ಅಂಗಡಿಗಳು ಮುಂತಾದವನ್ನು ಯಶಸ್ವಿಯಾಗಿ ನಡೆಸುವುದನ್ನು ಮುಂದುವರೆಸುತ್ತಿರುವಾಗ, ಈ ಕಾರ್ಯಕ್ರಮ ಅವರು ಫ್ಲಿಪ್ಕಾರ್ಟ್‌ನ ಕಿರಾನ ಪಾಲುದಾರರಾಗಿ ಒಂದು ಪೂರಕವಾದ ವರಮಾನವನ್ನೂ ಸಂಪಾದಿಸಲು ಅನುವುಮಾಡಿಕೊಡುತ್ತದೆ. ಜೊತೆಗೆ, ಈ ಕಾರ್ಯಕ್ರಮವು ಫ್ಲಿಪ್ಕಾರ್ಟ್‌ನ ಗಿರಾಕಿಗಳು ಅನೇಕ ರೀತಿಯ ಉತ್ಪನ್ನಗಳನ್ನು ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಅಪೇಕ್ಷೆಯ ಪಟ್ಟಿಗಳನ್ನು ಪೂರೈಸಲು ಪರ್ವತಗಳನ್ನು ಜರುಗಿಸುವಷ್ಟು ಪ್ರಯತ್ನ

ಹುಲುಸಾದ ಹಸಿರಿನಿಂದ ತುಂಬಿದ ಉತ್ತರಾಖಂಡಿನ ದೆಹರಾಧುನ್‌ನ ಗೌರವ್‌ ರಾಹಿ ಮತ್ತು ಫೈಜ಼ನ್‌ ಸಿದ್ದೀಕಿ, ಇಬ್ಬರೂ ಫ್ಲಿಪ್ಕಾರ್ಟ್‌ ಪಾಲುದಾರರು, ಫ್ಲಿಪ್ಕಾರ್ಟ್‌ನ ತಂತ್ರಜ್ಞಾನ ತಮ್ಮ ಕುಟುಂಬಗಳಿಗೆ ಉತ್ತಮ ಬದುಕನ್ನು ಉಂಟುಮಾಡಿದೆ ಎನ್ನುವುದರ ಜೊತೆಗೆ ಅವರ ಸುತ್ತಮುತ್ತಲಿನಲ್ಲಿರುವವರಿಗೆ ಅವರನ್ನು ತಲುಪಲು ಸಹ ಸಾಧ್ಯವಾಗಿಸಿದೆ ಎನ್ನುವ ಬಗ್ಗೆ ಹೆಮ್ಮೆಪಡುತ್ತಾರೆ. ಭಾರತದಾದ್ಯಂತ ಗಿರಾಕಿಗಳು ತಮ್ಮ ಕಟ್ಟುಗಳನ್ನು ಸ್ವೀಕರಿಸಿದಾಗ ಸಂತೋಷವನ್ನು ಬೀರುವ ನಗುವಿನ ಮುಖಗಳನ್ನು ನೋಡುವುದು ಅವರಿಗೆ ಅಪಾರ ತೃಪ್ತಿ ನೀಡುತ್ತದೆಂದು ಹೇಳುತ್ತಾರೆ.

ಗೌರವ್‌ ಹೇಳುತ್ತಾರೆ, “ಫ್ಲಿಪ್ಕಾರ್ಟ್‌ ಕಿರಾನ ಎಂದರೆ ಯಶಸ್ಸಿನ ಮೊದಲ ಹೆಜ್ಜೆ (ಫ್ಲಿಪ್ಕಾರ್ಟ್‌ಕಿರಾನ ಯಶಸ್ಸಿನ ಕಡೆಗೆ ಮೊದಲ ಹೆಜ್ಜೆ.)”

Flipkart Kirana Program Story Gaurav

ಪದವಿ ಪಡೆದ ನಂತರ ಗೌರವ್‌ ಅನೇಕ ಕೆಲಸಗಳಿಗೆ ಅರ್ಜಿ ಹಾಕಿದರು. ಆ ಪ್ರದೇಶದಲ್ಲಿ ಅವಕಾಶಗಳು ಕಮ್ಮಿ ಇದ್ದದ್ದರಿಂದ ಅವರು ತಮ್ಮ ತಂದೆಯವರ ಹೊಲಿಯುವ ವ್ಯಾಪಾರವನ್ನು ಸೇರಿಕೊಳ್ಳಲು ನಿರ್ಧರಿಸಿದರು. ಏಳು ಜನರಿದ್ದ ಅವರ ಕುಟುಂಬವನ್ನು ನಿರ್ವಹಿಸಲು ಅದರಿಂದ ಬರುವ ವರಮಾನ ಸಾಲುವುದಿಲ್ಲವೆಂದು ಅವರು ಕಂಡುಕೊಂಡಾಗ ಅವರು ಫ್ಲಿಪ್ಕಾರ್ಟ್‌ನ ಕಿರಾನ ಕಾರ್ಯಕ್ರಮವನ್ನು ಸೇರಿಕೊಳ್ಳಲು ನಿರ್ಧರಿಸಿದರು.

ಇವತ್ತು, ಅವರು ಫ್ಲಿಪ್ಕಾರ್ಟ್‌ಗಾಗಿ ಸಿದ್ಧಪಡಿಸಿದ ಉಡುಪುಗಳನ್ನು ತಲುಪಿಸುವುದು, ಹೊಲಿಯುವುದು ಮತ್ತು ಸಂಜೆ ತಮಗಾಗಿ ವಿಹರಿಸುವುದರಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಅವರು ಸ್ವಂತ ಮನೆ ಕೊಂಡುಕೊಳ್ಳುವ ಕನಸು ಹೊಂದಿದ್ದಾರೆ, ಮತ್ತು ಫ್ಲಿಪ್ಕಾರ್ಟ್‌ನಿಂದ ಬರುವ ವರಮಾನ ಅವರಿಗೆ ಈ ನಿಟ್ಟಿನಲ್ಲಿ ಸಹಾಯಕವಾಗಿರುತ್ತದೆಂದು ವಿಶ್ವಾಸದಿಂದಿದ್ದಾರೆ.

ಅವರು ಹೇಳುತ್ತಾರೆ, “ಇವತ್ತು, ನನಗೆ ಹಲವು ಕೆಲಸದ ಅವಕಾಶಗಳು ದೊರೆತರೂ, ನಾನು ಫ್ಲಿಪ್ಕಾರ್ಟ್‌ ಅನ್ನು ಬಿಡುವ ಯೋಚನೆ ಎಂದಿಗೂ ಮಾಡಲಾರೆ, ಏಕೆಂದರೆ ಅದು ಮಾಹಾಮಾರಿಯ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿತು ಮತ್ತು ನಮಗೆ ಮಹತ್ವವಾದ ಸಹಾಯದ ವ್ಯವಸ್ಥೆಯನ್ನು ನೀಡಿತು”. ಜೊತೆಗೆ, “ಫ್ಲಿಪ್ಕಾರ್ಟ್‌ನ ಸಹಾಯದಿಂದ ನಾನು ಬಹಳ ದೂರ ಸಾಗಿ ಬಂದಿದ್ದೇನೆ. ಈಗ ನಾನು ನನ್ನ ತಂಗಿಯ ಮದುವೆಗಾಗಿ ಹಣ ಉಳಿಸುತ್ತಿದ್ದೇನೆ”. ಇದೆಲ್ಲವೂ ಫ್ಲಿಪ್ಕಾರ್ಟ್‌ನಿಂದ ಸಾಧ್ಯವಾಯಿತು. (ಇದೆಲ್ಲವೂ ಫ್ಲಿಪ್ಕಾರ್ಟ್‌ನಿಂದಾಗಿ ಸಾಧ್ಯವಾಯಿತು).”

ಫೈಜ಼ನ್‌ ಸಿದ್ದೀಕಿ, ಇವರೂ ದೆಹರಾಧುನ್‌ ಅಲ್ಲಿರುವ ಫ್ಲಿಪ್ಕಾರ್ಟ್‌ನ ಪಾಲುದಾರರು. ಇವರೂ ಕೂಡ ತಮ್ಮ ಪರಿವಾರದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಫ್ಲಿಪ್ಕಾರ್ಟ್‌ನ ಜೊತೆ ಕೆಲಸಮಾಡಲು ಆಯ್ಕೆಮಾಡಿಕೊಂಡರು.

ಬೆಟ್ಟಗಳ ಪ್ರದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ಬಹಳ ಕಷ್ಟಪಡಬೇಕಾಯಿತು. ಅವರು ಅನೇಕ ಕೆಲಸಗಳನ್ನು ಮಾಡಲು ಪ್ರಯತ್ನಿಸಿ, ಕೊನೆಗೆ ಕಿರಾನ ಕಾರ್ಯಕ್ರಮವನ್ನು ಆರಿಸಿಕೊಂಡರು. ಅವರು ತಮ್ಮ ಸಹೋದರನ ಜೊತೆ ದಿನಸಿ ಅಂಗಡಿಯಲ್ಲಿ ಕೆಲಸಮಾಡುವುದರೊಂದಿಗೆ ಸಮಾನುಗಳನ್ನು ತಲುಪಿಸಲೂ ಕೂಡ ಸಮಯಾವಕಾಶ ಮಾಡಿಕೊಳ್ಳುತ್ತಾರೆ. ಫ್ಲಿಪ್ಕಾರ್ಟ್‌ನಲ್ಲಿ ತಮ್ಮದೇ ಸಮಯವನ್ನು ಆಯ್ದುಕೊಳ್ಳಬಹುದೆಂಬ ಸಂಗತಿಯನ್ನು ಅವರು ಮೆಚ್ಚುತ್ತಾರೆ. ಜೊತೆಗೆ, ಅವರು ತಮಗೆ ಇಷ್ಟವಾದ ಪ್ರದೇಶದಲ್ಲಿ ತಲುಪಿಸುವ ಕೆಲಸಮಾಡಬಹುದು.

Flipkart Kirana Program Story Faizan

ಫೈಜ಼ನ್‌ ಹೇಳುತ್ತಾರೆ, “ನಅನು ಒಂದು ಕೂಡು ಕುಟುಂಬದಲ್ಲಿ ಬಾಳುತ್ತೇನೆ ಮತ್ತು ಕುಟುಂಬದ ಅಂಗಡಿಯನ್ನು ನನ್ನ ಸಹೋದರನ ಜೊತೆ ನಿರ್ವಹಿಸುತ್ತೇನೆ”. ಜೊತೆಗೆ, “ವರಮಾನ ಸೀಮಿತವಾಗಿತ್ತು ಮತ್ತು ಮೂಲಭೂತ ಖರ್ಚುಗಳನ್ನು ಮಾತ್ರ ತೂಗಿಸಲು ಸಾಕಾಗುತ್ತಿತ್ತು. ಅನೇಕ ವರ್ಷಗಳ ಶ್ರಮದ ನಂತರ ಈಗ ನಾನು ನನ್ನ ಕುಟುಂಬಕ್ಕೆ ಒಂದು ತುಂಡು ಭೂಮಿಯನ್ನು ಖರೀದಿಸಲು ಸಾಧ್ಯವಾಗಿದೆ. ಇವತ್ತು, ನನಗೆ ಬೇಕಾದಂತೆ ಹೊಂದಿಕೊಳ್ಳಬಹುದಾಗಿದೆ ಮತ್ತು ನನ್ನ ಸಮಯದ ಮೇಲೆ ನನಗೆ ನಿಯಂತ್ರಣವಿದೆ. ನಾನು ಹಿಂದೆಂದೂ ಅನುಭವಿಸದಂತಹ ಸ್ವಾತಂತ್ರ್ಯವನ್ನು ಫ್ಲಿಪ್ಕಾರ್ಟ್‌ ಕಿರಾನ ನನಗೆ ಕೊಟ್ಟಿದೆ”. ಅಲ್ಲದೆ, ಅವರು ಹೇಳುತ್ತಾರೆ, “ಈಗ ನಾನು ನನ್ನ ಮರ್ಜಿಯ ಮಾಲಿಕ. (ನಾನೇ ನನ್ನ ಮಾಲಿಕ)”.

ದೊಡ್ಡದಾಗಿ ಕನಸು ಕಾಣುವುದು, ಉತ್ತಮವಾದ ಸೇವೆ ನೀಡುವುದುr

ಭಾರತದಲ್ಲಿ ಅಂದಾಜು ೧೨ ದಶಲಕ್ಷ ಕಿರಾಣಿ ಅಂಗಡಿಗಳಿವೆ. ಇವತ್ತು, ಫ್ಲಿಪ್ಕಾರ್ಟ್‌ನ ಎಲ್ಲ ಪದಾರ್ಥಗಳ ತಲುಪಿಸುವಿಕೆಯಲ್ಲಿ ಸುಮಾರು ಮೂರರಲ್ಲಿ ಒಂದು ಭಾಗ ಈ ವ್ಯಾಪಾರಿ ಸಮುದಾಯದ ಸದಸ್ಯರಿಂದ ನಡೆಯುತ್ತದೆ. ಪೂರಕವಾದ ಆದಾಯದ ಖಾತರಿ ಮತ್ತು ಬೇಕಾದಂತೆ ಹೊಂದಿಕೊಳ್ಳುವ ಗುಣದೊಂದಿಗೆ – ಇವೆರಡೂ ಬೆಳವಣಿಗೆಗೆ ಅನುಕೂಲಕರ – ಫ್ಲಿಪ್ಕಾರ್ಟ್‌ ಕಿರಾನ ಕಾರ್ಯಕ್ರಮ ತನ್ನ ಪಾಲುದಾರರಿಗೆ ಹೆಚ್ಚುವರಿ ಪ್ರೋತ್ಸಾಹಕ ಸಂಗತಿಗಳನ್ನೂ ಪರಿಚಯಿಸಿದೆ. ಇವುಗಳಲ್ಲಿ ಬೇರೆಯವರನ್ನು ಪರಿಚಯಿರುವ ಪ್ರೋತ್ಸಾಹಕ ಕೊಡುಗೆ, ರೂಪಾಯಿ ೫ ಲಕ್ಷದ ವೈಯಕ್ತಿಕ ಅಪಘಾತ ವಿಮೆ ಮುಂತಾದ ಅನೇಕ ಪ್ರಯೋಜನಗಳು ಸೇರಿವೆ.

ಸುರೇಶ್, ಕರ್ನಾಟಕದ ಬೆಂಗಳೂರಿನಲ್ಲಿ ಫ್ಲಿಪ್ಕಾರ್ಟ್‌ನ ಪಾಲುದಾರರು ಹಿಂದೆ ದೀರ್ಘಾವಧಿ ದುಡಿಯಬೇಕಿದ್ದ ಮತ್ತು ಅಸ್ಥಿರ ಸಂಬಳದ ಅನೇಕ ಕೆಲಸಗಳಲ್ಲಿ ತೊಡಗಿದ್ದರು. ಸುರೇಶ್‌ ಅವರ ಕುಟುಂಬದವರು ಅವರನ್ನು ಬೇರೆ ಆಯ್ಕೆಗಳನ್ನು ಹುಡುಕಲು ಪ್ರೋತ್ಸಾಹಿಸಿದರು. ಅವರು ತೆರೆದ ಕಿರಾಣಿ ಅಂಗಡಿ ಕಾಲಕ್ರಮೇಣ ಅವರ ಆದಾಯದ ಪ್ರಾಥಮಿಕ ಮೂಲವಾಯಿತು. ಬೇಗನೆ, ಸುರೇಶ್‌ ಫ್ಲಿಪ್ಕಾರ್ಟ್‌ನ ಡೆಲಿವರಿ ಪಾಲುದಾರರಾಗಿ ನೊಂದಾಯಿಸಿಕೊಂಡರು. ಅದರಿಂದ ಅವರಿಗೆ ಪೂರಕ ಆದಾಯ ಸಂಪಾದಿಸಲು ಸಾಧ್ಯವಾಯಿತು. ಸುರೇಶ್‌ ಅವರಿಗೆ ಕಿರಾನ ಪಾಲುದಾರರಾಗುವುದರ ಜೊತೆ ಅವರಿಗೆ ಸಿಗುವ ಬೇಕಾದಂತೆ ಹೊಂದಿಕೊಳ್ಳಬಹುದಾದ ಅವಕಾಶ ಈ ಕಾರ್ಯಕ್ರಮದ ನಿರ್ಣಾಯಕ ಗುಣಗಳಲ್ಲೊಂದು.

Flipkart Kirana Program Story Suresh

“ನಾನು ಸಂಪಾದಿಸುವ ಹಣ ನನ್ನ ಕುಟುಂಬವನ್ನು ಪಾಲಿಸು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳ ಸಹಾಯಕವಾಗಿದೆ” ಎಂದು ಸುರೇಶ್‌ ಹೇಳುತ್ತಾರೆ. “ನಾನು ಫ್ಲಿಪ್ಕಾರ್ಟ್‌ನ ಕಿರಾನ ಕಾರ್ಯಕ್ರಮವನ್ನು ಸೇರಿಕೊಂಡಾಗ ನನಗೆ ಬ್ಯಾಂಕ್‌ನಿಂದ ಸಾಲ ಬೇಕೆ ಎಂದು ದೂರವಾಣಿ ಕರೆಗಳು ಬಂದವು, ಆದರೆ ನಾನು ಕಿರಾನ ಕಾರ್ಯಕ್ರಮದಿಂದ ಹಣ ಗಳಿಸುತ್ತಿದ್ದೇನೆ ಎಂದು ಹೇಳಿ ಅವುಗಳನ್ನು ನಿರಾಕರಿಸುತ್ತಿದ್ದೆ. ಮನೆಯಲ್ಲಿ ಹಬ್ಬವೊ ಅಥವ ಅಂತಹ ಇನ್ಯಾವುದಾದರೂ ಸಂದರ್ಭವಿದ್ದಾಗ ಫ್ಲಿಪ್ಕಾರ್ಟ್‌ ಕಿರಾನದಿಂದ ನನಗೆ ಬರುವ ವರಮಾನ ಉಪಯುಕ್ತವಾಗುತ್ತದೆ”.

ಶ್ರೀಕಾಂತ್ , ಬೆಂಗಳೂರಿನ ಇನ್ನೊಬ್ಬರು ಕಿರಾನ ಪಾಲುದಾರರು, ತಾವು ಫ್ಲಿಪ್ಕಾರ್ಟ್‌ ಕಿರಾನ ಪಾಲುದಾರರಾಗಲು ಸೇರಿಕೊಂಡಾಗಿನಿಂದ ಅವರ ಬದುಕಿನಲ್ಲಾಗಿರುವ ಬದಲಾವಣಿಯನ್ನು ವಿವರಿಸುತ್ತಾರೆ. ಮೊದಲು ತಗಡು ಹಲಗೆಯ ಮನೆಯಲ್ಲಿ ವಾಸಿಸುತ್ತಿದ್ದವರು ಈಗ ತಮ್ಮ ಕುಟುಂಬಕ್ಕಾಗಿ ಒಂದು ಮನೆಯನ್ನು ಭೋಗ್ಯಕ್ಕೆ ಪಡೆದಿರುವುದಾಗಿ ನಗುವಿನೊಂದಿಗೆ ನುಡಿಯುತ್ತಾರೆ.

“ನಾನು ಕಳೆದ ಎರಡು-ಎರಡೂವರೆ ವರ್ಷಗಳಿಂದ ಫ್ಲಿಪ್ಕಾರ್ಟ್‌ ಕಿರಾನ ಕಾರ್ಯಕ್ರಮಕ್ಕೆ ಕೆಲಸಮಾಡುತ್ತಿದ್ದೇನೆ” ಎನ್ನುತ್ತಾರೆ ಶ್ರೀಕಾಂತ್.‌ “ನೀವು ಹೆಚ್ಚಿನ ಉಳಿತಾಯದ ಬಗ್ಗೆ ಮಾತನಾಡುವುದಾದರೆ, ನಾನು ಉಳಿಸಿದ ಹಣದಿಂದ ಒಂದು ಮನೆಯನ್ನು ಭೋಗ್ಯಕ್ಕೆ ಪಡೆದೆ ಮತ್ತು ಮಿಕ್ಕಿದ ಹಣದಿಂದ ನನ್ನ ಹೆಂಡತಿಗೆ ಸ್ವಲ್ಪ ಚಿನ್ನವನ್ನು ಖರೀದಿಸಿದೆ. ಮುಂಚೆ, ನನ್ನ ಮಾವನವರು ಒಂದು ಕೈಗಾಡಿಯಿಂದ ಒಂದು ವ್ಯಾಪಾರವನ್ನು ನಡೆಸುತ್ತಿದ್ದರು. ಈಗ ನಮ್ಮ ಬಳಿ ಒಂದು ಅಂಗಡಿಯಿದೆ. ಅವರು ಅಂಗಡಿಯನ್ನು ನೋಡಿಕೊಳ್ಳುತ್ತಾರೆ, ಮತ್ತು ನಾನು ಕಿರಾನ ಪಾಲುದಾರನಾಗಿ ಕೆಲಸಮಾಡುತ್ತೇನೆ. ನನ್ನ ಕುಟುಂಬ ಬಹಳ ಆರಾಮದಿಂದಿದೆ.”

Flipkart Kirana Program Story Srikanth

ಕರ್ನಾಟಕದ ಮಂಡ್ಯದಲ್ಲಿ ರೈತರಾಗಿರುವ ಅವರ ತಂದೆ-ತಾಯಿಯರಿಗೆ ಆರ್ಥಿಕ ಸಹಾಯ ಕಳುಹಿಸಲು ಸಾಧ್ಯವಾಗುತ್ತಿರುವುದರ ಬಗ್ಗೆ ಶ್ರೀಕಾಂತ್‌ ಹೆಮ್ಮೆಪಡುತ್ತಾರೆ. ಈ ಕಾರ್ಯಕ್ರಮದಿಂದ ಉಳಿಸಿದ ಹಣದಲ್ಲಿ ಅವರ ತಂದೆಗೆ ಒಂದು ಮೊಟರ್‌ಬೈಕನ್ನು ತೆಗೆದುಕೊಟ್ಟಿದ್ದಾರೆ. ಫ್ಲಿಪ್ಕಾರ್ಟ್‌ ಕಿರಾನ ಪಾಲುದಾರರಾಗಿರುವುದರಿಂದ ಅವರಿಗೆ ಬೇಕಾದಂತೆ ಸಮಯವನ್ನು ಹೊಂದಿಸಿಕೊಳ್ಳಬಹುದು. ಅದರಿಂದ ಅವರು ಪ್ರತಿನಿತ್ಯ ತಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದು ಮನೆಯಲ್ಲಿ ಊಟಮಾಡಿಸಲು ಸಾಧ್ಯವಾಗುತ್ತಿದೆ. ಅವರು ತಮ್ಮ ಮಗನಿಗಾಗಿ ಈಗಾಗಲೆ ಯೋಜನೆಯನ್ನು ಸಿದ್ಧಪಡಿಸಿದ್ದಾರೆ; ತಮ್ಮ ಗಳಿಕೆಯ ಒಂದು ಭಾಗವನ್ನು ಮಗನನ್ನು ಇನ್ನೂ ಉತ್ತಮ ಶಾಲೆಯಲ್ಲಿ ಸೇರಿಸಲು ಉಳಿತಾಯ ಮಾಡುತ್ತಿದ್ದಾರೆ.

ಸ್ಥಳೀಯವಾದ ಒಳಗೊಳ್ಳುವ ಬೆಳವಣಿಗೆ

Flipkart Kirana story - Hemant Badri

ಹೇಮಂತ್‌ ಬದರಿ, ಫ್ಲಿಪ್ಕಾರ್ಟ್‌ನಲ್ಲಿ ಗಿರಾಕಿಗಳ ಅನುಭವ ಮತ್ತು ಪೂರೈಸುವಿಕೆಯ ಸರಪಣಿಯ ಹಿರಿಯ ಉಪಾಧ್ಯಕ್ಷರು ಫ್ಲಿಪ್ಕಾರ್ಟ್‌ನ ಕಿರಾನ ಕಾರ್ಯಕ್ರಮವು ಗಿರಾಕಿಗಳ ಮೇಲೆ ಮತ್ತು ಕಿರಾನ ಪಾಲುದಾರರ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸುತ್ತಾರೆ –

“ಒಂದು ಸ್ಥಳೀಯ ಸಂಸ್ಥೆಯಾಗಿ ಫ್ಲಿಪ್ಕಾರ್ಟ್‌ ಗುಂಪು ಕಿರಾಣಿಗಳಿಗೆ ತಂತ್ರಜ್ಞಾನದ ಬಳಕೆಯಿಂದ ಸಾಧ್ಯವಾಗುವ ಒಳಗೊಳ್ಳುವ ಬೆಳವಣಿಗೆಯನ್ನು ಸಾಧಿಸುವುದಕ್ಕೆ ಬದ್ಧವಾಗಿದೆ ಮತ್ತು ಭಾರತದಲ್ಲಿ ಕಿರಾಣಿ ಅಂಗಡಿಗಳ ಪರಿಸರವನ್ನು ಬಲಗೊಳಿಸುವುದಕ್ಕೆ ಸಹಾಯಕವಾಗಿ ಕೆಲಸಮಾಡುತ್ತಿದೆ” ಎನ್ನುತ್ತಾರೆ. ಜೊತೆಗೆ, “ಮಹಾಮಾರಿಯ ಕಾಲದಲ್ಲಿ ನಮ್ಮ ಕಿರಾನ ಕಾರ್ಯಕ್ರಮವು ಅಂಗಡಿ ಮಾಲಿಕರಿಗೆ ಒಂದು ಪೂರಕವಾದ ವರಮಾನವನ್ನು ಗಳಿಸಲು, ತಮ್ಮ ಅಗತ್ಯಗಳನ್ನು ಪೂರೈಸಲು ಮತ್ತು ಪರಿವಾರವನ್ನು ಸಾಕಲು ಅನುವು ಮಾಡಿಕೊಟ್ಟಿದೆ.

೨೦೧೯ರಲ್ಲಿ ಫ್ಲಿಪ್ಕಾರ್ಟ್‌ನ ಕಿರಾನ ಕಾರ್ಯಕ್ರಮ ೨೭,೦೦೦ ಪಾಲುದಾರರೊಂದಿಗೆ ಶುರುವಾಯಿತು. ಅಲ್ಲಿಂದ ಮುಂದಕ್ಕೆ ಕಿರಾಣಿ ಅಂಗಡಿಗಳು ಅದರಲ್ಲಿ ಭಾಗವಹಿಸುವುದು ಹೆಚ್ಚುತ್ತಲಿದೆ ಮತ್ತು ೨೦೦,೦೦೦ಕ್ಕೂ ಅಧಿಕ ಪಾಲುದಾರರು ಭಾರತದಾದ್ಯಂತ ಪದಾರ್ಥಗಳನ್ನು ತಲುಪಿಸುತ್ತಿದ್ದಾರೆ. ಈ ಕಾರ್ಯಕ್ರಮವು ಅನೇಕ ಮಹಿಳೆಯರನ್ನು ಒಳಗೊಂಡಿದೆ; ಇದು ಸಮಾನ ಅವಕಾಶ ಒದಗಿಸುವ ಫ್ಲಿಪ್ಕಾರ್ಟ್‌ನ ನೀತಿಗೆ ಅನುಗುಣವಾಗಿದೆ. ಈ ಕಾರ್ಯಕ್ರಮವು ಭಾರತದ ಈಶಾನ್ಯ ರಾಜ್ಯಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ. ಇದರಲ್ಲಿ ತ್ರಿಪು, ಸಿಕ್ಕಿಮ್‌ ಮತ್ತು ಅರುಣಾಚಲ ಪ್ರದೇಶಗಳೂ ಸೇರಿವೆ. ಈ ಪ್ರದೇಶದಲ್ಲಿ ಈ ವರ್ಷದಲ್ಲಿ ೧೫,೦೦೦ಕ್ಕೂ ಹೆಚ್ಚು ಪಾಲುದಾರರನ್ನು ಸೇರಿಸಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಲ್ಲೇ ಫ್ಲಿಪ್ಕಾರ್ಟ್‌ನ ಕಿರಾನ ಪಾಲುದಾರರು ತಮ್ಮ ಮಾಸಿಕ ಆದಾಯದಲ್ಲಿ ಸುಮಾರು ೩೦ ಪ್ರತಿಶತ ಹೆಚ್ಚಳವನ್ನು ಸಾಧಿಸಿದ್ದಾರೆ.


ಇದನ್ನೂ ಓದಿ: # ಒಂದು ಬಿಲಿಯನ್‌ನಲ್ಲಿ ಒಂದು – ಫ್ಲಿಪ್ಕಾರ್ಟ್‌ನ ಪಾಲುದಾರ ಅಮಿತ್‌ ಕುಮಾರ್‌ಗೆ ಕುಟಂಬವೇ ಸರ್ವಸ್ವ

Enjoy shopping on Flipkart