ನಿಮಗೆ ಪ್ರೀತಿಪಾತ್ರರಾದವರು ಒಂದು ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ ಉಡುಗೊರೆ ವೌಚರ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರೆ ಅಥವ ನೀವು ಅದನ್ನು ಫ್ಲಿಪ್ಕಾರ್ಟ್‌ನಲ್ಲಿ ಸುಲಭವಾದ ಪರಿಶೀಲನೆಗಾಗಿ ಖರೀದಿಸಿದ್ದರೆ ಅಥವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ನೀವು ಗೆದ್ದಿದ್ದರೆ ಸಹ, ಇನ್ನೂ ಹೆಚ್ಚು ಖರೀದಿಯನ್ನು ಮಾಡಬೇಕಾಗಿದೆ! ಇನ್ನೇನು ಮತ್ತೆ, ನೀವು ಫ್ಲಿಪ್ಕಾರ್ಟ್ ಇಜಿವಿಗಳನ್ನು ಬಡುಗಳಿಂದಲೇ ನಮ್ಮ ಭೌತಿಕ ಪಾಲುದಾರರಿಂದ ದೇಶದಾದ್ಯಂತ ಕೊಂಡುಕೊಳ್ಳಬಹುದು. ನಿಮ್ಮ ಉಡುಗೊರೆಯ ಕಾರ್ಡನ್ನು ಅತ್ಯುತ್ತಮವಾಗಿ ಬಳಸಬೇಕೆ? ನಿಮ್ಮ ಫ್ಲಿಪ್ಕಾರ್ಟ್ ಇಜಿವಿಯನ್ನು ಉಪಯೋಗಿಸುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದೆಲ್ಲವೂ ಇಲ್ಲಿದೆ.
ನೀವು ಫ್ಲಿಪ್ಕಾರ್ಟ್‌ನ ಅನೇಕ ಸ್ಪರ್ಧೆಗಳನ್ನು ಆಡಿದ್ದರೆಫ್ಲಿಪ್ಕಾರ್ಟ್ ಸ್ಪರ್ಧೆಗಳು ಮತ್ತು ಗೆದ್ದಿದ್ದರೆ ಅಥವ ನಿಮ್ಮ ಪ್ರೀತಿಪಾತ್ರರು ಸ್ವಲ್ಪ ಹೆಚ್ಚಾಗಿಯೆ ಧಾರಾಳತನವನ್ನು ಅನುಭವಿಸುತ್ತಿದ್ದರೆ, ನಿಮಗೆ ಬಹುಶಃ ಒಂದುಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ ಉಡುಗೊರೆ ವೌಚರ್ (ಅಥವ ಎರಡು!) ಖರ್ಚುಮಾಡಲು ಇರಬಹುದು. ಅದನ್ನು ಹೇಗೆ ಪರಿವರ್ತಿಸಿಕೊಳ್ಳುವುದೆಂದು ಯೋಚಿಸುತ್ತಿದ್ದೀರಾ? ಫ್ಲಿಪ್ಕಾರ್ಟ್ ಇಜಿವಿಗಳನ್ನು ಉಪಯೋಗಿಸುವುದರ ಬಗ್ಗೆ ನೀವು ತಿಳಿಸಿಕೊಳ್ಳಬೇಕಾದದ್ದೆಲ್ಲವೂ ಇಲ್ಲಿದೆ.
ಫ್ಲಿಪ್ಕಾರ್ಟ್ ಇಜಿವಿಗಳು ಅಷ್ಟು ರೋಮಾಂಚನಕಾರಿಯಾಗಲು ಕಾರಣವೇನು?
ಸಂಕ್ಷಿಪ್ರವಾಗಿ ಹೇಳುವುದಾದರೆ, ಇಜಿವಿಗಳು ಅಥವ ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್‌ಗಳು ನೀವು ಒಂದು ಅಂಗಡಿಯಲ್ಲಿ ಪರಿವರ್ತಿಸಿಕೊಳ್ಳುವ ವೌಚರ್‌ಗಳಿಗೆ ಸದೃಶವಾಗಿರುತ್ತವೆ. ಉದಾಹರಣೆಗೆ, ನೀವು ರೂ.೫೦೦ರ ಉಡುಗೊರೆ ಕಾರ್ಡ್ ಅನ್ನು ಗೆದ್ದಿದ್ದರೆ, ನೀವು ರೂ.೫೦೦ರಷ್ಟು ಮೌಲ್ಯದ ಖರೀದಿ ಮಾಡಿ ಫ್ಲಿಪ್ಕಾರ್ಟ್ ಇಜಿವಿಗಳನ್ನು ಬಳಸಿ ಪಾವತಿಮಾಡಬಹುದು.
ಒಂದು ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್ ಮುಂಪಾವತಿ ಮಾಡಿದ ಮೌಲ್ಯದ ಶೇಖರಣೆಯ ಖಾತೆ. ಅದನ್ನು ಫ್ಲಿಪ್ಕಾರ್ಟ್‌ನ ಪೂರ್ತಿ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬಳಸಬಹುದು. ನೀವು ಅದನ್ನು ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ನೀಡುವ ಆಯ್ಕೆಯಾಗಿ ಬಳಸಬಹುದು ಅಥವ ಪ್ರೀತಿ ಮತ್ತು ಮೆಚ್ಚುವಿಕೆಯ ದ್ಯೋತಕವಾಗಿ ಬಳಸಬಹುದು.
ಅಲ್ಲದೆ, ನೀವು ಬಯಸಿದರೆ, ಅದನ್ನು ಒಂದು ವಾಲೆಟ್‌ನ ರೀತಿಯಲ್ಲಿ ತ್ವರಿತವಾದ ಮತ್ತು ಸುಲಭವಾದ ಪಾವತಿಯ ಅನುಕೂಲಕ್ಕಾಗಿ ಒಂದು ಪಾವತಿಯ ಸಾಧನವನ್ನಾಗಿ ಉಪಯೋಗಿಸಬಹುದು.
ನಾನು ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್‌ಗಳನ್ನು ಹೇಗೆ ಕೊಳ್ಳಬಹುದು?
ನೀವು ಗೆದ್ದಿದ್ದು ಅಥವ ಒಬ್ಬರಿಂದ ಫ್ಲಿಪ್ಕಾರ್ಟ್ ಇಜಿವಿ ಕೊಡಲ್ಪಡುವುದಲ್ಲದೆ, ನೀವು ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್ ಅಂಗಡಿಗೆ ಆನ್ಲೈನ್‌ನಲ್ಲಿ ಹೋಗಿ ಅಥವ ದೇಶದಾದ್ಯಂತ ಹರಡಿರುವ ೯೦೦೦ಕ್ಕೂ ಹೆಚ್ಚಿನ ನಮ್ಮ ಭೌತಿಕ ಪಾಲುದಾರರ ಅಂಗಡಿಗಳಿಂದ ನೇರವಾಗಿ ಖರೀದಿಸಬಹುದು.
ಹೆಚ್ಚಿನ ಉಪಯುಕ್ತತೆ ಮತ್ತು ಅನುಕೂಲಕ್ಕಾಗಿ, ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್‌ಗಳು ಅಥವ ಇಜಿವಿಗಳು ಈಗ ಸಕ್ರಿಯ ಮೊತ್ತಗಳಲ್ಲಿಯೂ ದೊರೆಯುತ್ತವೆ, ಅಂದರೆ ಇಜಿವಿಗಳನ್ನು ಮೊದಲೆ ನಮೂದಿಸಿದ ಮೊತ್ತಗಳ ಜೊತೆಗೆ ಗ್ರಾಹಕರಿಗೆ ತಮಗೆ ಇಷ್ಟವಾದ ಮೊತ್ತಗಳಿಗೂ ದೊರೆಯುತ್ತವೆ. ಗ್ರಾಹಕರ ಇಷ್ಟಾನುಸಾರದ ಮೊತ್ತಗಳು ರೂ.೨೫ರಿಂದ ರೂ.೧೦,೦೦೦ದ ವರೆಗೂ ವ್ಯಾಪಿಸಬಹುದು.
ಉಡುಗೊರೆಯ ಕಾರ್ಡ್‌ನ ಅಂಗಡಿಯು ವಿವಿಧ ಸಂದರ್ಭಗಳಿಗೆ ಬೇರೆಬೇರೆ ವಿಷಯಗಳ ಆಯ್ಕೆಗಳುಳ್ಳ ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್‌ಗಳ ಸಂಕಲನವನ್ನು ಹೊಂದಿದೆ. ವ್ಯಾಲೆನ್ಟೈನ್ಸ್ ದಿನಾಚರಣೆ, ತಂದೆಯರ ದಿನಾಚರಣೆ, ವಿವಾಹ ದಿನಾಚರಣೆ, ಹುಟುಹಬ್ಬ ಇತ್ಯಾದಿ ಸಂದರ್ಭಗಳಿಗೆ ಭೌತಿಕ ಮತ್ತು ಡಿಜಿಟಲ್ ರೂಪಗಳಲ್ಲಿ ದೊರೆಯುತ್ತವೆ.
ಫ್ಲಿಪ್ಕಾರ್ಟ್‌ನಲ್ಲಿರುವ ಉಡುಗೊರೆಯ ಕಾರ್ಡ್‌ನ ಅಂಗಡಿಯು ಪ್ರಮುಖ ಬ್ರಾಂಡ್‌ಗಳು ಮತ್ತು ಅಂಗಡಿಗಳ ೧೨೦ಕ್ಕೂ ಹೆಚ್ಚಿನ ಉಡುಗೊರೆ ಕಾರ್ಡ್‌ಗಳನ್ನು ನಿಮ್ಮ ಆಯ್ಕೆ ಮತ್ತು ಅನುಕೂಲದ ಮೊತ್ತಗಳಲ್ಲಿ ಪ್ರದರ್ಶಿಸಿದೆ.
ಗೆದ್ದವರು ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ – ನೀವು ಫ್ಲಿಪ್ಕಾರ್ಟ್ ಉಡುಗೊರೆಯ ಕಾರ್ಡ್‌ಗಳನ್ನು ಹೇಗೆ ಉಪಯೋಗಿಸಬಹುದು
ನೀವು ನಿಮ್ಮ ಫ್ಲಿಪ್ಕಾರ್ಟ್ ಇಜಿವಿಗಳನ್ನು ಹೇಗೆ ಚೆನ್ನಾಗಿ ಬಳಸುವುದು ಎಂದು ಯೋಚಿಸುತ್ತ ಅವುಗಳನ್ನು ಹಿಡುದುಕೊಂಡಿದ್ದೀರೇನು? ಅದು ಬಹಳ ಸರಳ. ನೀವು ಮಾಡಬೇಕಾದದ್ದಿಷ್ಟೆ, ಫ್ಲಿಪ್ಕಾರ್ಟಿಗೆ ಲಾಗ್ ಆನ್ ಆಗಿ, ನೀವು ಕೊಂಡುಕೊಳ್ಳಬೇಕಾದ ಪದಾರ್ಥಗಳನ್ನು ಆಯ್ಕೆಮಾಡಿ ಮತ್ತು ಅವುಗಳನ್ನು ಕೈಗಾಡಿಗೆ ಹಾಕಿ. ನಂತರ, ಎಂದಿನಂತೆ ʼಪಾವತಿಸಲು ಮುಂದುವರೆಯಿರಿʼ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ತಲುಪಿದ ನಂತರ ನಗದು ಅಥವ ನೆಟ್ ಬ್ಯಾಂಕಿಂಗ್‌ಗಳನ್ನು ನಿಮ್ಮ ಪಾವತಿಯ ಆಯ್ಕೆಯಾಗಿರುವುದಕ್ಕೆ ಬದಲಾಗಿ ʼಉಡುಗೊರೆ ಕಾರ್ಡ್‌ನ ಮೂಲಕ ಪಾವತಿʼಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಂತೆ ಫ್ಲಿಪ್ಕಾರ್ಟ್ ಇಜಿವಿಗಳು ೧೬ ಅಂಕೆಗಳ ಕಾರ್ಡ್ ಸಂಖ್ಯೆ ಮತ್ತು ೬ ಅಂಕಿಗಳ ಪಿನ್ ಅನ್ನು ಹೊಂದಿರುತ್ತವೆ. ಈ ಎರಡೂ ಸಂಖ್ಯೆಗಳನ್ನು ನೀವು ಇಜಿವಿಯ ವಿವರಗಳ ಜೊತೆಯಲ್ಲಿ ಒಂದು ವಿದ್ಯುದಂಚೆಯಲ್ಲಿ ನೋಡುವಿರಿ. ನಿಮ್ಮ ಆರ್ಡರ್‌ಗಾಗಿ ಪಾವತಿ ಮಾಡಲು ಆ ಸಂಖ್ಯೆಗಳನ್ನು ನಮೂದಿಸಿ, ಅಷ್ಟೆ.
ಒಟ್ಟು ಮೊತ್ತವು ಫ್ಲಿಪ್ಕಾರ್ಟ ಇಜಿವಿಯ ಮೌಲ್ಯನ್ನು ಮೀರಿದರೆ, ಬಾಕಿಯನ್ನು ನಿಮ್ಮ ಆಯ್ಕೆಯ ಪಾವತಿಯ ವಿಧಾನದಿಂದ ಪಾವತಿಮಾಡಿ. ಅದು ಅಷ್ಟು ಸುಲಭವಾದ ವಿಷಯ.
.
ನಿಮ್ಮ ಬಳಿ ಅನೇಕ ಫ್ಲಿಪ್ಕಾರ್ಟ್ ಇಜಿವಿಗಳಿವೆಯೆ? ಅವುಗಳ ಲೆಕ್ಕ ಇಡುವುದು ಹೇಗೆಂದು ಇಲ್ಲಿ ತಿಳಿಸಲಾಗಿದೆ
ಓ, ನೀವು ಅದೃಷ್ಟಶಾಲಿಗಳಾಗಿ ಅನೇಕ ಫ್ಲಿಪ್ಕಾರ್ಟ್ ಇಜಿವಿಗಳನ್ನು ಕೊನೆಗೆ ಪಡೆಯುವಂತಾಯಿತೆ! ಇದು ಒಳ್ಳೆಯ ಸುದ್ದಿ. ಅನೇಕ ವೌಚರ್‌ಗಳನ್ನು ಬಳಸಿಕೊಂಡು ನೀವು ಒಂದು ದೊಡ್ಡ ಖರೀದಿ ಮಾಡಬೇಕೆಂದಿದ್ದರೆ ಅದು ಸಂಪೂರ್ಣವಾಗಿ ಸಾಧ್ಯ.
ನೀವು ನಿಮ್ಮ ಎಲ್ಲ ಫ್ಲಿಪ್ಕಾರ್ಟ್ ಇಜಿವಿಗಳನ್ನು ಬಳಸಿಕೊಳ್ಳಬೇಕೆಂದರೆ, ಸುಮ್ಮನೆ ಇದರ ಮೇಲೆ ಕ್ಲಿಕ್ ಮಾಡಿ ಮೇಲಿನ ಎಡ ಭಾಗದಲ್ಲಿ ಪದಾರ್ಥಗಳ ಪಟ್ಟಿ, ಇದರ ಮೇಲೆ ಕ್ಲಿಕ್ ಮಾಡಿ ನನ್ನ ಖಾತೆಗಳು, ಕೆಳಗೆ ಸಕ್ರಾಲ್ ಮಾಡಿ ಮತ್ತು ಇದರ ಮೇಲೆ ಕ್ಲಿಕ್ ಮಾಡಿ ನನ್ನ ಕಾರ್ಡ್‌ಗಳು & ವ್ಯಾಲೆಟ್ ಮತ್ತುಫ್ಲಿಪ್ಕಾರ್ಟ್ನ ಉಡುಗೊರೆಯ ಕಾರ್ಡ್‌ನ್ನು ಸೇರಿಸಿ. ನಿಮ್ಮ ಫ್ಲಿಪ್ಕಾರ್ಟ್ ಇಜಿವಿಗಳ ವಿದ್ಯುದಂಚೆಯನ್ನು ಪರಿಶೀಲಿಸಿ ಉಡುಗೊರೆ ಕಾರ್ಡ್ ಸಂಖ್ಯೆಗಾಗಿ ಮತ್ತುಉಡುಗೊರೆಯ ಕಾರ್ಡ್‌ನ ಪಿನ್‌ಗಾಗಿ, ವಿವರಗಳನ್ನು ನಮೂದಿಸಿ, ಕ್ಲಿಕ್ ಮಾಡಿಜಾರಿಗೊಳಿಸಿ, ನಿಮ್ಮ ಕೆಲಸ ಮುಗಿಯಿತು!
ಈಗ ನೀವು ನಿಮ್ಮ ಉಡುಗೊರೆಯ ಕಾರ್ಡ್‌ನ್ನು ನಿಮ್ಮ ವ್ಯಾಲೆಟ್‌ಗೆ ಸೇರಿಸಿರುವುದರಿಂದ, ಮುಂದಿನ ಸಲ ನೀವು ಫ್ಲಿಪ್ಕಾರ್ಟ್‌ನ್ನಲಿ ಏನನ್ನಾದರೂ ಖರೀದಿಸಬೇಕಾದರೆ ಈ ಪಾವತಿಯ ವಿಧಾನವನ್ನು ಬಳಸಿ.
ಒಂದು ಫ್ಲಿಪ್ಕಾರ್ಟ್ ಇಜಿವಿಯನ್ನು ಅನೇಕ ಖರೀದಿಗಳಿಗೆ ಬಳಸುವುದು
ಉದಾಹರಣೆಗೆ, ನಿಮ್ಮ ಫ್ಲಿಪ್ಕಾರ್ಟ್ ಇಜಿವಿ ರೂ.೫೦೦ರ ಮೌಲ್ಯ ಹೊಂದಿದ್ದು ನೀವು ಕೇವಲ ರೂ.೩೦೦ರ ಒಂದು ಸುಗಂಧವನ್ನು ಕೊಂಡುಕೊಳ್ಳಬೇಕಾದರೆ, ಸಿಡುಕ ಬೇಡಿ. ನೀವು ಅಷ್ಟನ್ನೂ ಒಂದೇ ಸಲ ಖರ್ಚುಮಾಡಬೇಕಾಗಿಲ್ಲ. ರೂ.೨೦೦ರ ನಿಮ್ಮ ಬಾಕಿ ಸುರಕ್ಷಿತವಾಗಿದೆ. ಅಂತೆಯೆ, ನೀವು ಒಂದು ಆರ್ಡರ್‌ಅನ್ನು ಕೊಟ್ಟು ಅದನ್ನು ರದ್ದುಮಾಡಿದರೆ, ಅದರ ಮೊತ್ತ ನೇರವಾಗಿ ನಿಮ್ಮ ಫ್ಲಿಪ್ಕಾರ್ಟ್ ಉಡುಗೊರೆ ಕಾರ್ಡ್‌ಗೆ ಹಿಂದಿರುಗುತ್ತದೆ.
ನಿಮ್ಮ ಫ್ಲಿಪ್ಕಾರ್ಟ್ ಇಜಿವಿಯಲ್ಲಿರುವ ಬಾಕಿ ಮೊತ್ತವನ್ನು ಪರಿಶೀಲಿಸಿ
ಕೆಳಗಿನ ಕ್ರಮಗಳನ್ನು ಪಾಲಿಸಿದರೆ ನಿಮ್ಮ ಉಡುಗೊರೆಯ ಕಾರ್ಡ್‌ನ ಬಾಕಿ ಮೊತ್ತವನ್ನು ನೀವು ಪರಿಶೀಲಿಸಬಹುದು –
೧) ಉಡುಗೊರೆಯ ಕಾರ್ಡ್‌ಗಳನ್ನು ಈಗಾಗಲೆ ವ್ಯಾಲೆಟ್‌ಗೆ ಸೇರಿಸಿದ್ದರೆ –
ನನ್ನ ಖಾತೆಗಳು ಇದಕ್ಕೆ ಹೋಗಿ > ನನ್ನ ಕಾರ್ಡ್‌ಗಳು& ವ್ಯಾಲೆಟ್> ವಿವರಗಳನ್ನು ವೀಕ್ಷಿಸಿ
೨) ಉಡುಗೊರೆಯ ಕಾರ್ಡ್‌ಗಳನ್ನು ಇನ್ನೂ ವ್ಯಾಲೆಟ್‌ಗೆ ಸೇರಿಸದೆ ಇದ್ದಲ್ಲಿ –
ಇದರ ಮೇಲೆ ಕ್ಲಿಕ್ ಮಾಡಿ ‘flipkart.com/rv/egv‘ -> ʼಫ್ಲಿಪ್ಕಾರ್ಟ್ ಉಡುಗೊರೆಯ ಕಾರ್ಡ್ ಅನ್ನು ಹೊಂದಿರಿʼಗೆ ಹೋಗಿ-> ನಿಮ್ಮ ಕಾರ್ಡ್‌ನ ಸಂಖ್ಯೆ ಮತ್ತು ಪಿನ್ ಅನ್ನು ನಮೂದಿಸಿ.
ಈಗ ನೀವು ಇನ್ನೂ ಖರ್ಚುಮಾಡಬಹುದಾದ ಬಾಕಿ ಮೊತ್ತವನ್ನು ನೋಡಬಹುದು.
ನಿಮ್ಮ ಕೈಗಾಡಿಯನ್ನು ತುಂಬಿಸಿ ಇನ್ನೂ ಸ್ವಲ್ಪ ಖರೀದಿ ಮಾಡಲು ನಿಮಗೆ ಫ್ಲಿಪ್ಕಾರ್ಟ್ ಉಡುಗೊರೆಯ ಕಾರ್ಡ್‌ಗಳನ್ನು ನೀಡಿದ ದಿನಾಂಕದಿಂದ ೧೨ ತಿಂಗಳ ತನಕ ಕಾಲಾವಕಾಶವಿರುತ್ತದೆ. ಆದ್ದರಿಂದ ಫ್ಲಿಪ್ಕಾರ್ಟ್‌ಗೆ ಲಾಗ್ ಆನ್ ಮಾಡಿ ಮತ್ತು ನಿಮಗೆ ತೃಪ್ತಿಯಾಗುವಷ್ಟು, ಪಾಪಪ್ರಜ್ಞೆಯಿಲ್ಲದೆ ಖರೀದಿಸಿ!
ನವೀಕರಿಸಲಾಗಿರುವ ಪದೆಪದೆ ಕೇಳಲಾಗುವ ಪ್ರಶ್ನೆಗಳನ್ನು ಓದಿ ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ ಉಡುಗೊರೆಯ ವೌಚರ್‌ಗಳ ಬಗ್ಗೆ