ಈ ಮಹತ್ವಾಕಾಂಕ್ಷೆಯ ಇಂಜಿನಿಯರ್ ಧೈರ್ಯಮಾಡಿ ಒಬ್ಬ ಉದ್ಯಮಿಯಾಗಲು ತಮ್ಮ ಕೆಲಸವನ್ನು ಬಿಟ್ಟರು. ಅವರ ಕುಟುಂಬದವರು ಅವರಿಗೆ ಇದರ ಬಗ್ಗೆ ಮತ್ತೆ ಯೋಚಿಸಲು ಹೇಳಿದರು, ಆದರೆ ಅವರು ಯಶಸ್ವಿಯಾಗಲು ನಿರ್ಧಸಿದಿದ್ದರು. ಇವತ್ತು, ಅಭಿಷೇಕ್ ಗೋಯಲ್ #ಸ್ವಯಂನಿರ್ಮಿತ ಫ್ಲಿಪ್ಕಾರ್ಟ್ ಮಾರಾಟಗಾರರಾಗಿದ್ದು ಆನ್ಲೈನ್‌ನಲ್ಲಿ ಖರೀದಿಸುವವರಿಗೆ ಒಂದು ಅಗತ್ಯವಾದ ವಸ್ತು ಸುಲಭವಾಗಿ ಮತ್ತು ಎಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡುತ್ತಿದ್ದಾರೆ. ಈ ಪ್ರೇರಣಾದಾಯಕ ಕತೆಯನ್ನು ಓದಿ ಮತ್ತು ಇಂದು ಕೋವಿಡ್-೧೯ರ ಬಿಕ್ಕಟ್ಟಿಗೆ ಅವರ ವ್ಯಾಪಾರ ಹೇಗೆ ಹೊಂದಿಕೊಂಡಿದೆ ಎಂದು ತಿಳಿದುಕೊಳ್ಳಿ.
ನನ್ನ ಹೆಸರು ಅಭಿಷೇಕ್ ಗೋಯಲ್ ಮತ್ತು ನಾನು ಫ್ಲಿಪ್ಕಾರ್ಟ್‌ನ್ನು ಒಬ್ಬ ಮಾರಾಟಗಾರನಾಗಿ ೨೦೧೫ರಲ್ಲಿ ಸೇರಿಕೊಂಡೆ. ನಾನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿಧರ ಮತ್ತು ನನ್ನ ಕಂಪನಿಯ ಹೆಸರು ಡಿಜಿವೆ ಇನ್ಫೋಕಾಂ. ನಾನು ಒಬ್ಬ ಇಂಜಿನಿಯರ್ ಆಗಿ ೨೦೦೭ರಲ್ಲಿ ಕೆಲಸ ಮಾಡಲು ಆರಂಭಿಸಿದೆ, ಮತ್ತು ನಾನು ನನ್ನ ಕೆಲಸವನ್ನು ೨೦೧೯ರ ಆಗಸ್ಟ್‌ನಲ್ಲಿ ಬಿಟ್ಟೆ. ನಾನು ಒಬ್ಬ ಉದ್ಯಮದ ಮಾಲೀಕನಾಗಬೇಕು ಎಂಬ ನನ್ನ ಕನಸನ್ನು ಈಡೇರಿಸಲು ಒಂದು ತಯಾರಿಕಾ ವ್ಯಾಪಾರವನ್ನು ಶುರುಮಾಡಿದೆ. ಎಕ್ಟೆನ್ಷನ್ ಕಾರ್ಡಗಳು ಮತ್ತು ಸರ್ಜ್‌ರಕ್ಷಕಗಳಂತಹ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನುತಯಾರುಮಾಡಿ ಫ್ಲಿಪ್ಕಾರ್ಟ್‌ನಲ್ಲಿ ಮಾರಲು ಶುರುಮಾಡಿದೆ.
ಕೋವಿಡ್-೧೯ನಿಂದ ನನ್ನ ನೌಕರರು ಮತ್ತು ನಾನು ನಮ್ಮ ವ್ಯಾಪಾರವನ್ನು ನಡೆಸುವ ರೀತಿ ಬದಲಾಗಿದೆ. ನಾನು ನಮ್ಮ ನೌಕರರಿಗೆ ಹೆಚ್ಚಿನ ಸುರಕ್ಷತೆಗಾಗಿ ಥರ್ಮಲ್ ಸ್ಕ್ಯಾನ್‌ಗಳು ಮತ್ತು ಕೈಗವಸುಗಳನ್ನು ನೀಡಿದ್ದೇವೆ. ನಮ್ಮ ಕಾರ್ಯಸ್ಥಳವನ್ನು ನಿಯಮಿತವಾಗಿ ಸ್ಯಾನಿಟೈಜ಼್ ಮಾಡಲಾಗುತ್ತದೆ. ವೈಯಕ್ತಿಕವಾಗಿ ನನಗೆ ಈ ಮಹಾಮಾರಿಯ ಸಮಯದಲ್ಲಿ ವ್ಯಾಪಾರದ ಅವಧಿ ಅನುಕೂಲಕರವಾಗಿದೆ. ಈಗ ನಾನು ಸಂಜೆ ಏಳು ಗಂಟೆಗೆ ಮನೆಗೆ ಹೋಗುತ್ತೇನೆ. ಆದ್ದರಿಂದ ನನಗೆ ಕುಟುಂಬದ ಜೊತೆ ಒಳ್ಳೆಯ ಸಮಯ ಕಳೆಯಲು ಸಾಧ್ಯವಾಗಿದೆ.
ನಾನು ಮೆಚ್ಚುತ್ತೇನೆ ಈ ಮಹಾಮಾರಿಯ ಸಮಯದಲ್ಲಿ ಫ್ಲಿಪ್ಕಾರ್ಟ್ ತನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿರುವುದನ್ನು ಅಗತ್ಯವಿರುವವರಿಗೆ ಉತ್ಪನ್ನಗಳನ್ನು ತಲುಪಿಸುವ ಮೂಲಕ ದೇಶದ ಪ್ರತಿಯೊಂದು ಪಿನ್ಕೋಡ್‌ನ ಜಾಗದಲ್ಲಿರುವ, ಮತ್ತು ಈ ಕಷ್ಟದ ಸಮಯದಲ್ಲಿ ಅವರು ಸಾಧಿಸಿ ತೋರಿಸಿದ್ದಾರೆ.
ಮೇಲಿನ ವಾಕ್ಯ ಈ ಕ್ರಮದಲ್ಲಿರಬೇಕು –
ದೇಶದ ಪ್ರತಿಯೊಂದು ಪಿನ್ಕೋಡ್‌ನ ಜಾಗದಲ್ಲಿರುವ ಅಗತ್ಯವಿರುವವರಿಗೆ ಉತ್ಪನ್ನಗಳನ್ನು ತಲುಪಿಸುವ ಮೂಲಕ ಈ ಮಹಾಮಾರಿಯ ಸಮಯದಲ್ಲಿ ಫ್ಲಿಪ್ಕಾರ್ಟ್ ತನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿರುವುದನ್ನು ನಾನು ಮೆಚ್ಚುತ್ತೇನೆ.
ಗಿರಾಕಿಗಳ ಈಗಿನ ಬೇಡಿಕೆಯನ್ನು ಪೂರೈಸಲು ನಾವು ಸುರಕ್ಷಾ ಗವಸುಗಳನ್ನು ಒಂದು ಹೊಸ ಉತ್ಪನ್ನವಾಗಿ ನಮ್ಮ ಪಟ್ಟಿಯಲ್ಲಿ ಒಂದು ತಿಂಗಳ ಹಿಂದೆ ಸೇರಿಸಿದೆವು. ವರ್ತಮಾನದ ಪರಿಸ್ಥಿತಿಯನ್ನು ಪರಿಗಣಿಸಿ ನಾನು ಗವಸುಗಳನ್ನು ಮಾರುವ ಈ ಕ್ರಮವನ್ನು ತೆಗೆದುಕೊಂಡೆ. ಈ ಪತ್ಪನ್ನವನ್ನು ಆಮದು ಮಾಡಿಕೊಳ್ಳುವ ಒಬ್ಬ ವ್ಯಾಪಾರಿಯೊಂದಿಗೆ ಸಂಪರ್ಕ ಬೆಳೆಸಿದೆ ಮತ್ತು ಈಗ ಸದೃಢವಾದ ಸರಬರಾಜನ್ನು ಕಾಪಾಡುವ ದಾರಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಉತ್ಪನ್ನವನ್ನು ಎಟುಕುವ ದರದಲ್ಲಿ ನಮ್ಮ ಗಿರಾಕಿಗಳಿಗೆ ಸುಲಭವಾಗಿ ದೊರಕುವಂತೆ ನೋಡಿಕೊಂಡಿದ್ದೇನೆ.
ಮಾರಾಟಗಾರರ ಬಗ್ಗೆ ಫ್ಲಿಪ್ಕಾರ್ಟ್‌ನ ನೀತಿಗಳು ನನಗೆ ಬಹಳ ಪ್ರಯೋಜನಕಾರಿಯಾಗಿವೆ. ಇದು ಶ್ರೇಷ್ಠವಾದ ಮಾರಾಟದ ಒಂದು ವೇದಿಕೆ ಮತ್ತು ಮಾರಾಟಗಾರ-ಸ್ನೇಹಿಯಾಗಿದೆ. ಮಾರಾಟಗಾರರ ಬೆಂಬಲದ ತಂಡವು ಬಹಳ ಪಾರದರ್ಶಕವಾಗಿದೆ. ಅಂತೆಯೆ ಬಿಲ್ಲಿಂಗ್‌ನಿಂದ ಹಿಡಿದು ಪಾವತಿಯ ವ್ಯವಸ್ಥೆಯವರೆಗೂ ಎಲ್ಲವೂ ಪಾರದರ್ಶಕವಾಗಿದೆ. ಫ್ಲಿಪ್ಕಾರ್ಟ್ ನ ವಿಸ್ತಾರ ಮತ್ತು ಪ್ರಚಾರ ಬಹಳ ಹೆಚ್ಚಿನದಾಗಿದೆ, ಆದರೆ ಫ್ಲಿಪ್ಕಾರ್ಟ್ ಬೇರೆಲ್ಲದಕ್ಕಿಂತ ಯಾಕೆ ಭಿನ್ನವೆಂದರೆ ಅದು ತಂತ್ರಜ್ಞಾನ ಮತ್ತು ದತ್ತಾಂಶ ಮೇಲೆ ನಿರ್ಮಿಸಲಾಗಿರುವ ಕಂಪನಿ. ಇದರ ಮೂಲಕ ಅವರು ಮಾರಾಟಗಾರರು ಮತ್ತು ಗಿರಾಕಿಗಳನ್ನು ಬಹಳ ಚೆನ್ನಾಗಿ ಜೋಡಿಸಿದ್ದಾರೆ! ಫ್ಲಿಪ್ಕಾರ್ಟ್‌ನಿಂದಾಗಿಯೇ ನಅನು ನನ್ನ ವ್ಯಾಪಾರದಲ್ಲಿ ಹಲವು ಪಟ್ಟು ವೃದ್ಧಿಯನ್ನು ಕಂಡಿದ್ದೇನೆ.
ಕೋವಿಡ್-೧೯ನಿಂದಾಗಿ ಅನೇಕ ಜನ ಹೊರಗೆ ಹೋಗಿ ಖರೀದಿಸಲು ಇಷ್ಟಪಡುವುದಿಲ್ಲ. ಎಲ್ಲವನ್ನೂ ಆನ್ಲೈನ್‌ನ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಮೊದಲು, ನಾನು ಆನ್ಲೈನ್ ಮಾರಾಟವನ್ನು ಶುರುವಿನಿಂದ ಕಲಿತು ಮಾಡಬೇಕೆಂದು ತಿಳಿದಿದ್ದೆ ಮತ್ತು ನಾನು ಒಬ್ಬ ಫ್ಲಿಪ್ಕಾರ್ಟ್ ಮಾರಾಟಗಾರನಾಗಿ ಆರಂಭಿಸಿದ ದಿನಗಳನ್ನು ನೆನೆದುಕೊಂಡೆ! ಆದರೆ ಫ್ಲಿಪ್ಕಾರ್ಟ್ ನನ್ನ ಕೆಲಸವನ್ನು ಸುಲಭಗೊಳಿಸಿತು ಮತ್ತು ಬೇಗನೆ ಕೇವಲ ೨೧ ದಿನಗಳಲ್ಲಿ ನನ್ನ ವ್ಯಾಪಾರ ಮೇಲಕ್ಕೇರಿತು. ನಾವು ೧೦ ಮೇ, ೨೦೨೦ರಂದು ಕೆಲಸಮಾಡಲು ಆರಂಭಿಸಿದೆವು. ಈಗ ಒಂದು ವಿಶೇಷ ಮಾರಾಟ ನಡೆಯುತ್ತಿದೆ, ಮತ್ತು ನಾವು ಬಹಳ ಚೆನ್ನಾಗಿ ವ್ಯಾಪಾರ ಮಾಡುತ್ತಿದ್ದೇವೆ. ನಾನು ಆಶ್ಚರ್ಯಚಕಿತನಾಗಿದ್ದೇನೆ!