ಒಂದು ನಕಲಿ ಸಂದೇಶ ಅಥವಾ ಕರೆಗೆ ಒಂದೇ ಗುರಿಯಿರುತ್ತದೆ: ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೋಚುವುದು ಮತ್ತು ನಿಮ್ಮ ಸೂಕ್ಷ್ಮ ಡೇಟಾವನ್ನು ಕದಿಯುವುದು. ಅಂತಹ ಸಂದೇಶಗಳು ವೈರಲ್ ಆಗುತ್ತವೆ ಮತ್ತು ಅಂತಹ ಕರೆಗಳು ನಿಜವೆಂದೇ ತೋರುತ್ತವೆ. ಆದರೆ, ಇವರ ಬಲೆಗೆ ಬೀಳುವ ಬದಲು, ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಇದನ್ನು ವಿರೋಧಿಸುವುದು ಮತ್ತು ವರದಿ ಮಾಡುವುದಾಗಿದೆ. ಪರಿಣಿತರಂತೆ ನಕಲಿ ಸಂದೇಶವನ್ನು ಹೇಗೆ ನಿಭಾಯಿಸುವುದು ಅಥವಾ ಕರೆ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.
“ಆತ್ಮೀಯ ಫ್ಲಿಪ್‌ಕಾರ್ಟ್ ಗ್ರಾಹಕರೇ, ಅಭಿನಂದನೆಗಳು! ನೀವು ಗೆದ್ದಿದ್ದೀರಿ… ”- ಈ ರೀತಿಯ ನಕಲಿ ಸಂದೇಶವು ಆಕರ್ಷಕವಾಗಿ ಕಾಣಿಸಬಹುದಾದರೂ ಇದು ಕೇವಲ ಒಂದು ಬಲೆಯಾಗಿದೆ. ಇ-ಕಾಮರ್ಸ್ ಹೆಚ್ಚು ಜನಪ್ರಿಯವಾಗುತ್ತಿರುವ ಹಾಗೆ, ಫ್ಲಿಪ್‌ಕಾರ್ಟ್‌ನ ವಿಶ್ವಾಸಾರ್ಹ ಹೆಸರನ್ನು ಬಳಸಿಕೊಂಡು, ಸ್ಕ್ಯಾಮರ್‌ಗಳು ಗ್ರಾಹಕರನ್ನು ಮೋಸ ಮಾಡಲು ಮತ್ತು ವೇಗವಾಗಿ ಹಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಚಿಂತಿಸಬೇಡಿ! ಕ್ಲಿಕ್ ಮಾಡುವುದನ್ನು ತಪ್ಪಿಸಿ. ವಿವರಗಳನ್ನು ನೀಡುವುದನ್ನು ತಪ್ಪಿಸಿ. ಫಾರ್ವರ್ಡ್ ಮಾಡುವುದನ್ನು ತಪ್ಪಿಸಿ. ನಕಲಿ ಸಂದೇಶ ಅಥವಾ ಕರೆಯ ಮೂಲಕ ನೀಡಲಾಗುವ ಪ್ರಲೋಭನೆಯನ್ನು ನೀವು ವಿರೋಧಿಸಿದರೆ ಸಾಕು, ಸ್ಕ್ಯಾಮರ್‌ಗಳು ನಿಮ್ಮನ್ನು ಎಂದಿಗೂ ಮೋಸ ಮಾಡಲು ಸಾಧ್ಯವಿಲ್ಲ.
ಸುಲಭವೆನಿಸುತ್ತದೆಯೇ? ಇದು ಸುಲಭವೇ. ನೀವು ನಕಲಿ ಸಂದೇಶ ಅಥವಾ ಕರೆ ಪಡೆದರೆ ಅನುಸರಿಸಬೇಕಾದ ಕೆಲವು ಉತ್ತಮ ಅಭ್ಯಾಸಗಳನ್ನು ಪಟ್ಟಿ ಮಾಡಿದ ಶೀಘ್ರ ಮಾರ್ಗದರ್ಶಿ ಇಲ್ಲಿದೆ.
ನಕಲಿ ಸಂದೇಶವನ್ನು ಕಳುಹಿಸುವಾಗ ಸ್ಕ್ಯಾಮರ್‌ಗಳು ಬಳಸುವ ತಂತ್ರಗಳು
ಅಜಾಗರೂಕವಾದ ಗ್ರಾಹಕರು ತಮ್ಮ ಬಲೆಗೆ ಬಲಿಯಾಗಲು ವಂಚಕರು ತಮಗೆ ಸಾಧ್ಯವಾದಷ್ಟೂ ಪ್ರಯತ್ನ ಮಾಡುತ್ತಾರೆ. ಅವರು ಬಳಸುವ ಸಾಮಾನ್ಯ ತಂತ್ರಗಳು ಇಲ್ಲಿವೆ.
ಆಕರ್ಷಿಸಲು ಬಳಸುವ ಅವರ ಟೆಕ್ಸ್ಟ್ ಮೆಸೇಜ್‌ಗಳು: ವಂಚಕರು ನಂಬಲಸಾಧ್ಯವಾದ ಆಫರ್‌ಗಳು ಅಥವಾ ಸುದ್ದಿಗಳೊಂದಿಗೆ ಸಂದೇಶಗಳನ್ನು ಕಳುಹಿಸಿ ಗ್ರಾಹಕರನ್ನು ತಮ್ಮ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಅಥವಾ ಅವರು ಕೇಳುವ ವಿವರಗಳನ್ನು ಒದಗಿಸುವಂತೆ ಮಾಡಿ ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ನಕಲಿ ಸಂದೇಶದಲ್ಲಿ ನೀವು ನೋಡಬಹುದಾದ ಪಠ್ಯದ ಉದಾಹರಣೆಗಳು ಇಲ್ಲಿವೆ:
- “ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಉಚಿತ ಉಡುಗೊರೆಯನ್ನು ಈಗಲೇ ಪಡೆದುಕೊಳ್ಳಿ!”
- “ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ರೂ .10,000 ಉಡುಗೊರೆ ಕಾರ್ಡ್ ಅನ್ನು ಪಡೆಯಿರಿ”
ಅವರು ನೈಜವಾದವರಂತೆ ಕಾಣಲು ಪ್ರಯತ್ನಿಸುತ್ತಾರೆ: ವಂಚಕರು ಅಧಿಕೃತ ಫ್ಲಿಪ್‌ಕಾರ್ಟ್ ಪ್ರತಿನಿಧಿಗಳಂತೆ ಕಾಣಲು ಪ್ರಯತ್ನಿಸುತ್ತಾರೆ. ಆದ್ದರಿಂದ, ನಕಲಿ ಎಸ್‌ಎಂಎಸ್ ‘ಗ್ರಾಹಕ ಬೆಂಬಲ’ ಸಂಖ್ಯೆಯನ್ನು ಹೊಂದಿರಬಹುದು, ಮತ್ತು ನಕಲಿ ಕರೆಯ ಇನ್ನೊಂದು ಬದಿಯಲ್ಲಿರುವ ವಂಚಕ ತನ್ನನ್ನು ತಾನು ನಿಮ್ಮ ‘ಫ್ಲಿಪ್‌ಕಾರ್ಟ್ ಅಕೌಂಟ್ ಮ್ಯಾನೇಜರ್’ ಎಂದು ಗುರುತಿಸಿಕೊಳ್ಳಬಹುದು. ನೀವು ಗೆದ್ದ ಉಚಿತ ಉಡುಗೊರೆಯನ್ನು ನಿಮಗೆ ತಲುಪಿಸಲು ಒಂದು ಸಣ್ಣ ಮೊತ್ತವನ್ನು ವರ್ಗಾಯಿಸುವಂತೆ ಸಹ ನಿಮ್ಮನ್ನು ಕೇಳಬಹುದು.
ಅವರಿಗೆ ನಿಮ್ಮ ಸೂಕ್ಷ್ಮ ಡೇಟಾ ಬೇಕಿರುತ್ತದೆ: ವಂಚಕರು ತಮ್ಮ ನಕಲಿ ಸಂದೇಶದ ಮೂಲಕ ನಿಮ್ಮಿಂದ ಸಾಧ್ಯವಾದಷ್ಟೂ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅವರ ಲಿಂಕ್‌ಗಳು ನಿಮ್ಮ ಡೇಟಾವನ್ನು ಸೆರೆಹಿಡಿಯುವ ಫಾರ್ಮ್‌ಗಳನ್ನು ಒಳಗೊಂಡಿರುವ ನಕಲಿ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗೆ ನಿಮ್ಮನ್ನು ನಿರ್ದೇಶಿಸಬಹುದು. ನಿಮ್ಮನ್ನು ಕೆಟ್ಟ ವಹಿವಾಟು ನಡೆಸುವಂತೆಯೂ ಸಹ ನಿರ್ದೇಶಿಸಬಹುದಾಗಿದ್ದು, ಮತ್ತು ಅವರ ಲಿಂಕ್‌ಗಳು ನಿಮ್ಮ ಸಾಧನಕ್ಕೆ ಸೋಂಕು ತಗಲಿಸುವ ದ್ವಾರಗಳಾಗಿರಬಹುದು.
ನಕಲಿ ಸಂದೇಶಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದು
ನೀವು ನಕಲಿ ಸಂದೇಶವನ್ನು ಎಸ್‌ಎಮ್‌ಎಸ್ ಮೂಲಕವೂ ಪಡೆಯಬಹುದಾದರೂ ಅದು ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್, ಟೆಲಿಗ್ರಾಮ್ ಅಥವಾ ಇತರ ಸಾಮಾಜಿಕ ಸಂದೇಶ ಪ್ಲ್ಯಾಟ್‌ಫಾರ್ಮ್‌ಗಳಲ್ಲಿಯೂ ಸಹ ಕಾಣಬಹುದು. ವಾಟ್ಸಾಪ್ ಅಥವಾ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಹೆ ಸಂಬಂಧಿಸಿದಂತೆ, ಸ್ಕ್ಯಾಮರ್ ನಕಲಿ ಇನ್‌ವಾಯ್ಸ್ ಪ್ರತಿಯನ್ನು ಅಪ್‌ಲೋಡ್ ಮಾಡಬಹುದು ಅಥವಾ ನಿಜವೆಂದು-ಕಾಣುವ ಬ್ರ್ಯಾಂಡಿಂಗ್‌ನೊಂದಿಗೆ ಸಂದೇಶವನ್ನು ಕಳುಹಿಸಬಹುದು, ಇದೆಲ್ಲವನ್ನೂ ಅವರು ಅಧಿಕೃತವೆನಿಸುವಂತೆ ಕಾಣಲು ಮಾಡುತ್ತಾರೆ. ಅವರು ಖೋಟಾ ಫ್ಲಿಪ್‌ಕಾರ್ಟ್ ಐಡಿಯನ್ನು ಪುರಾವೆಯಾಗಿ ನೀಡಬಹುದು.
ಒಂದು ವೇಳೆ ನೀವು ನಕಲಿ ಸಂದೇಶವನ್ನು ಪಡೆದರೆ ಅಥವಾ ಅದರ ಸತ್ಯಾಸತ್ಯತೆಯನ್ನು ಅನುಮಾನಿಸಿದರೆ, ಈ ಸಲಹೆಗಳನ್ನು ಅನುಸರಿಸಿ:
- ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
- ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಒದಗಿಸಬೇಡಿ
- ಆ ಸಂಖ್ಯೆಗೆ ಮರಳಿ ಕರೆ ಮಾಡಬೇಡಿ
- ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ
ನೀವು ಮಾಡಬೇಕಾದದ್ದೇನೆಂದರೆ ಈ ಮೋಸದ ಬಗ್ಗೆ ಫ್ಲಿಪ್‌ಕಾರ್ಟ್ ಅನ್ನು ಎಚ್ಚರಿಸುವುದು ಅಥವಾ ಟೋಲ್-ಫ್ರೀ ಗ್ರಾಹಕ ಕಾಳಜಿ ಸಂಖ್ಯೆ (1800 208 9898) ಯನ್ನು ಸಂಪರ್ಕಿಸುವುದು ಅಥವಾ ಫ್ಲಿಪ್‌ಕಾರ್ಟ್ ಬೆಂಬಲಕ್ಕೆ ಟ್ವಿಟ್ಟರ್‌ನಲ್ಲಿ ನೇರ ಸಂದೇಶವನ್ನು (ಡಿಎಮ್) (@flipkartsupport) ಕಳುಹಿಸುವ ಮೂಲಕ ನಿಮ್ಮ ಅನುಮಾನಗಳನ್ನು ನಿವಾರಿಸಿಕೊಳ್ಳಬೇಕು. ಹಾಗೆ ಮಾಡುವಾಗ, ವಂಚಕರ ಫೋನ್ ಸಂಖ್ಯೆ ಮತ್ತು ಸ್ವೀಕರಿಸಿದ ಅನುಮಾನಾಸ್ಪದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳಂತಹ ವಿವರಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಿ.
ನೀವು ಫ್ಲಿಪ್‌ಕಾರ್ಟ್ ಅನ್ನು ಸಂಪರ್ಕಿಸಬಹುದಾದ ವಿಧಾನಗಳು ಇಲ್ಲಿವೆ. < / a>
ನಕಲಿ ಕರೆಗಳು ಮತ್ತು ನೀವು ಅದನ್ನು ಪಡೆದಾಗ ಏನು ಮಾಡಬೇಕು
ಸ್ಕ್ಯಾಮರ್‌ಗಳು ಅಪರಿಚಿತ ಸಂಖ್ಯೆಗಳಿಂದ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ನೈಜತೆಯುಳ್ಳವರಂತೆ ಕಾಣಿಸಿಕೊಳ್ಳಲು, ಫ್ಲಿಪ್‌ಕಾರ್ಟ್ ಅಥವಾ ಅದರ ಸಮೂಹ ಕಂಪನಿಗಳಾದ ಮೈಂತ್ರಾ, ಜಬಾಂಗ್, ಜೀವ್ಸ್ ಅಥವಾ ಫೋನ್‌ಪೇಯನ್ನು ಪ್ರತಿನಿಧಿಸುವಂತೆ ನಟಿಸಬಹುದು. ಅವರು ನಿಮ್ಮೊಂದಿಗೆ ಇಂಗ್ಲಿಷ್, ಹಿಂದಿ ಅಥವಾ ನಿಮ್ಮ ಆಯ್ಕೆಯ ಪ್ರಾದೇಶಿಕ ಭಾಷೆಯಲ್ಲೂ ಮಾತನಾಡಬಹುದು. ಅವರ ಸಂಭಾಷಣೆಯು ಬಹುಶಃ ನೀವು ಅರ್ಹರಾಗಿರುವ ಒಂದು ಅದ್ಭುತವಾದ ಡೀಲ್ ಅಥವಾ ಕೆಲವು ನಿಮ್ಮ ಖಾತೆಯ ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಇರಬಹುದು.
ಇವುಗಳ ಬಗ್ಗೆ ಮಾತನಾಡುವ ಕರೆಗಳ ಬಗ್ಗೆ ಎಚ್ಚರದಿಂದಿರಿ:
- ನೀವು ಗೆದ್ದಿರುವ ಉಚಿತ ಉಡುಗೊರೆಗಳು
- ನೀವು ಅದೃಷ್ಟ ಡ್ರಾದಲ್ಲಿ ವಿಜೇತರಾಗಿರುವುದು
- ನಿಮ್ಮ ಫ್ಲಿಪ್‌ಕಾರ್ಟ್ ಖಾತೆಯ ಬಗ್ಗೆ ಗಮನ
ಅಂತಹ ಕರೆಗಳನ್ನು ಎದುರಿಸಲು ಉತ್ತಮ ಮಾರ್ಗವೆಂದರೆ:
- ಸಂಪರ್ಕ ಕಡಿತಗೊಳಿಸುವುದು
- ಯಾವುದೇ ವಿವರಗಳನ್ನು ಒದಗಿಸಬೇಡಿ (ಸಿವಿವಿ, ಪಿನ್, ಒಟಿಪಿ, ಇ-ವ್ಯಾಲೆಟ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆಗಳು)
- ಸ್ಪಷ್ಟೀಕರಣಕ್ಕಾಗಿ ಅಧಿಕೃತ ಗ್ರಾಹಕ ಬೆಂಬಲ ಲೈನ್‌ಗಳಿಗೆ 1800 208 9898 ಗೆ ಕರೆ ಮಾಡಿ
ನಕಲಿ ಇಮೇಲ್‌ಗಳು ಮತ್ತು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು
ನೀವು ಇಮೇಲ್ ಮೂಲಕ ನಕಲಿ ಸಂದೇಶವನ್ನು ಸ್ವೀಕರಿಸಬಹುದು. ಈ ತಂತ್ರವನ್ನು ಫಿಶಿಂಗ್ ಎಂದು ಕರೆಯಲಾಗುತ್ತದೆ. ಈ ಇಮೇಲ್‌ನ ಹಿಂದಿರುವ ಮೋಸಗಾರರ ಗುರಿ, ಮತ್ತೊಮ್ಮೆ, ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಕದಿಯುವುದು ಮತ್ತು ಬಹುಶಃ ನಿಮ್ಮನ್ನು ಪಾವತಿ ಮಾಡುವಂತೆ ಮಾಡುವುದೂ ಆಗಿರುತ್ತದೆ. ಹಾಗೆ ಮಾಡಲು, ಇಮೇಲ್ ನಿಮಗೆ ಒಂದು ಆಕರ್ಷಕ ಕೂಪನ್ ಅನ್ನು ನೀಡಬಹುದು ಅಥವಾ ಒಂದು ಅತ್ಯಾಕರ್ಷಕ ಡೀಲ್ ಬಗ್ಗೆ ನಿಮ್ಮ ಗಮನ ಸೆಳೆಯಬಹುದು (ಉದಾ. 32 ಜಿಬಿ ಪೆನ್-ಡ್ರೈವ್ ರೂ. 25ಕ್ಕೆ).
ನೀವು ಆ ಇಮೇಲ್‌ನ ಸತ್ಯಾಸತ್ಯತೆಯನ್ನು ಅನುಮಾನಿಸಿದರೆ ಅಥವಾ ಅದು ಅನಧಿಕೃತ ಡೊಮೇನ್‌ನಿಂದ ಬರುತ್ತಿದೆ ಎಂದು ಅನಿಸಿದರೆ (Flipkart.com ಅಲ್ಲದ) ಈ ತಂತ್ರಗಳನ್ನು ಬಳಸಿ:
- ಇಮೇಲ್‌ಗೆ ಪ್ರತ್ಯುತ್ತರಿಸಬೇಡಿ
- ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
- ಇಮೇಲ್‌ನಲ್ಲಿನ ಲಿಂಕ್ ಮೂಲಕ ಯಾವುದೇ ಪಾವತಿಗಳನ್ನು ಮಾಡಬೇಡಿ
ಎಂದಿನಂತೆ, ನೀವು ನಕಲಿ ಸಂದೇಶವನ್ನು ಸ್ವೀಕರಿಸಿದ್ದೀರಿ ಎಂದು ನಿಮಗನಿಸಿದರೆ, ಟೋಲ್-ಫ್ರೀ ಸಂಖ್ಯೆ ಅಥವಾ ಟ್ವಿಟರ್ ಮೂಲಕ ಫ್ಲಿಪ್‌ಕಾರ್ಟ್ ಅನ್ನು ಸಂಪರ್ಕಿಸಿ.
ಸಂಕ್ಷಿಪ್ತವಾಗಿ, ಪ್ರತಿರೋಧಿಸುವುದು ಮತ್ತು ವರದಿ ಮಾಡುವುದು ನೀವು ನಕಲಿ ಸಂದೇಶವನ್ನು ಸ್ವೀಕರಿಸಿದಾಗ ನೀವು ಮಾಡಬಹುದಾದ ಎರಡು ಅತ್ಯುತ್ತಮ ಕೆಲಸಗಳಾಗಿವೆ.
ಪ್ರಸ್ತುತ ಡೀಲ್‌ಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಡಿ! ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀವು ಇಲ್ಲಿ ಕಾಣಬಹುದು:
- ಇಲ್ಲಿ ಭೇಟಿ ನೀಡುವುದು https://www.flipkart.com/
- ಇದನ್ನು ಪರೀಕ್ಷಿಸುವುದು https://stories.flipkart.com
- ಇಲ್ಲಿ ಸೂಚನೆಗಳನ್ನು ಸಕ್ರಿಯಗೊಳಿಸುವುದು official Flipkart app
ಅಂತೆಯೇ, ನೀವು ನಕಲಿ ಸಂದೇಶದಲ್ಲಿ ಪಡೆದ ಲಿಂಕ್ ಮೂಲಕ ಖರೀದಿಸುವ ಬದಲು, ಇಲ್ಲಿ ಶಾಪಿಂಗ್ ಮಾಡಿ:
- ಫ್ಲಿಪ್‌ಕಾರ್ಟ್‌ನ ಅಧಿಕೃತ ಡೆಸ್ಕ್ಟಾಪ್ ವೆಬ್ಸೈಟ್
- ಫ್ಲಿಪ್‌ಕಾರ್ಟ್ ಮೊಬೈಲ್ ಶಾಪಿಂಗ್ ಆಪ್ (ಐಓಎಸ್ ಹಾಗೂ ಆಂಡ್ರಾಯ್ಡ್)
- The ಫ್ಲಿಪ್‌ಕಾರ್ಟ್ ಮೊಬೈಲ್ ಸೈಟ್
ಆದ್ದರಿಂದ, ಸುರಕ್ಷಿತವಾಗಿ ಶಾಪಿಂಗ್ ಮಾಡಿ ಮತ್ತು #ಫೈಟ್‌ಫ್ರಾಡ್‌ವಿತ್‌ಫ್ಲಿಕಾರ್ಟ್.
ಹೆಚ್ಚಿನ ಸೈಬರ್ ಸುರಕ್ಷತೆ ಸಲಹೆಗಳಿಗಾಗಿ, ನಮ್ಮ ಮಾಸ್ಟರ್ ಗೈಡ್ ಅನ್ನು ಓದಿ .