ಫ್ಲಿಪ್ಕಾರ್ಟ್‌ನ ಅಂತರ್ಜಾಲ ತಾಣವೆಂದು ಸೋಗುಹಾಕುವ ನಕಲಿ ಅಂತರ್ಜಾಲ ತಾಣದಲ್ಲಿ ಖರೀದಿಸುವುದರಿಂದ ನೀವು ನಿಮ್ಮ ದತ್ತಾಂಶ ಮತ್ತು ಹಣವನ್ನು ಕಳೆದುಕೊಳ್ಳಬಹುದು. ಆದರೆ, ಸರಿಯಾದ ಮುನ್ನೆಚ್ಚರಿಕೆಯಿಂದ ನೀವು ಸೈಬರ್ ಮೋಸವನ್ನು ತಡೆಗಟ್ಟಬಹುದು. ಒಂದು ಮೋಸದ ಅಂತರ್ಜಾಲ ತಾಣ ಅಥವ ಆಪ್‌ನ್ನು ಗುರುತಿಸುವ ಸರಳವಾದ ಮಾರ್ಗಗಳು ಇಲ್ಲಿವೆ ಮತ್ತು ಪ್ರತಿಬಾರಿಯೂ ನೀವು ನಿರಾತಂಕದಿಂದ ಖರೀದಿಸಬಹುದು.
ಎಂದಾದರೂ ನೀವು ಫ್ಲಿಪ್ಕಾರ್ಟ್‌ನ ಅಂತರ್ಜಾಲ ತಾಣದ ಹಾಗೆ ಕಾಣುವ ಅಂತರ್ಜಾಲ ತಾಣದ ಮೇಲೆ ಕ್ಲಿಕ್ ಮಾಡಿ, ಅದು ಸರಿ ಹೊಂದುತ್ತಿಲ್ಲವೆಂಬ ಪೀಡಿಸುವ ಅನಿಸಿಕೆ ಹೊಂದಿದ್ದರೆ? ಹೌದು, ಅಂತಹ ಒಂದು ಸ್ವಾಭಾವಿಕವಾದ ಅನಿಸಿಕೆ ಒಂದು ಒಳ್ಳೆಯ ಸೂಚನೆ. ಆದರೆ ನಿಮ್ಮ ಸಹಜ ಪ್ರವೃತ್ತಿ ವಿಫಲವಾದಾಗ, ಒಂದು ನಕಲಿ ಅಂತರ್ಜಾಲ ತಾಣ ಅಥವ ಆಪ್‌ನ್ನು ಪತ್ತೆ ಹಚ್ಚಲು ಕೆಲವು ಸರಳವಾದ ಮಾರ್ಗಗಳು ಇಲ್ಲಿವೆ. ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ದತ್ತಾಂಶವನ್ನು ಸುರಕ್ಷಿತವಾಗಿಟ್ಟುಕೊಂಡು ಚಿಂತೆಯಿಲ್ಲದೆ ಖರೀದಿಮಾಡಬೇಕೆಂದಿದ್ದರೆ ಮುಂದೆ ಓದಿ!
ಒಂದು ನಕಲಿ ಅಂತರ್ಜಾಲ ತಾಣವನ್ನು ಗುರುತಿಸುವುದು ಹೇಗೆ
ನೋಡಲು ಹಾಗೇ ಇರುತ್ತದೆ, ಆದರೆ ಡೊಮೈನ್‌ನ ಹೆಸರು ತಪ್ಪಾಗಿರುತ್ತದೆ
ಸೈಬರ್ ಅಪರಾಧಿಗಳು ಒಂದು ನಕಲಿ ಜಾಲತಾಣವನ್ನು ಸೃಷ್ಟಿಸಿದಾಗ, ಅದು ಫ್ಲಿಪ್ಕಾರ್ಟ್‌ನ ಜಾಲತಾಣದಂತೆಯೇ ನಿಖರವಾಗಿ ಕಾಣಿಸುವಂತೆ ನೋಡಿಕೊಳ್ಳುತ್ತಾರೆ. ನೀವು ಆ ನಕಲಿ ಜಾಲತಾಣದಲ್ಲಿ ದ ಬಿಗ್ ಬಿಲಿಯನ್ ಡೇಸ್‌ನ ಲಾಂಛನದಂತಹ ಫ್ಲಿಪ್ಕಾರ್ಟ್‌ನ ಲಾಂಛನ ಮತ್ತು ಅಧಿಕೃತ ಕಲಾಕೃತಿ ಹಾಗು ವ್ಯಾಪಾರ ಮುದ್ರೆಗಳನ್ನು ನೋಡಬಹುದು. ಅಂತಹ ಸಂದರ್ಭಗಳಲ್ಲಿ ನೀವು ಎರಡು ಕೆಲಸಮಾಡಬಹುದು –
ಫೋಟೊಶಾಪ್‌ನಿಂದ ತಿರುಚಲಾಗಿರುವ ಛಾಯೆಗಳಿಗೆ ಹುಡುಕಿ- ಉದಾಹರಣೆಗೆ, ಮಾರಾಟದ ದಿನಗಳು ತಪ್ಪಾಗಿರುತ್ತದೆ, ಪಠ್ಯದಲ್ಲಿ ಬೇರೆ ಅಕ್ಷರ ಶೈಲಿಯಿರುತ್ತದೆ, ʼಲೈಟ್ʼ ಎಂಬಂತಹ ಹೆಚ್ಚಿನ ಪದ ಇರುತ್ತದೆ, ಅಥವ ಛಾಯೆಗಳನ್ನು ಚಿತ್ತುಮಾಡಿರುವುದು ನಿಮ್ಮ ಗಮನಕ್ಕೆ ಬರುತ್ತದೆ.
ಯುಆರ್‌ಎಲ್ ಅನ್ನು ಪರಿಶೀಲಿಸಿ – ʼಫ್ಲಿಪ್ಕಾರ್ಟ್.ಕಾಂʼ ಎಂಬ ಡೊಮೈನ್‌ಗೆ ಫ್ಲಿಪ್ಕಾರ್ಟ್ ಮಾತ್ರ ಒಡೆತನ ಪಡೆದಿದೆ. ಫ್ಲಿಪ್ಕಾರ್ಟ್‌ನಂತೆ ಕಾಣುವ ನಕಲಿ ವಿದ್ಯುನ್ಮಾನ ವಾಣಿಜ್ಯ ತಾಣಗಳು ಸದೃಶವಾದ ಯುಆರ್‌ಎಲ್‌ಗಳನ್ನು ಬಳಸಬಹುದು. ಉದಾಹರಣೆಗೆ –
- Flipkart.dhamaka-offers.com/
- Flipkart-bigbillion-sale.com/
- http://flipkart.hikhop.com/
ಅಥವ ಆ ಜಾಲತಾಣದಲ್ಲಿ ʼ.ಕಾಂʼಗೆ ಬದಲಾಗಿ ಇನ್ನೇನೊ ಇರುತ್ತದೆ. ಉದಾಹರಣೆಗೆ –
- Flipkart.biz
- Flipkart.org
- Flipkart.info
ಕೆಲವೊಮ್ಮೆ, ಒಂದು ನಕಲಿ ಫ್ಲಿಪ್ಕಾರ್ಟ್ ಜಾಲತಾಣ ಸದೃಶವಾಗಿ ಮಾತ್ರ ಕಾಣುತ್ತದೆ, ಆದರೆ ಅದರ ಯುಆರ್‌ಎಲ್ ಸಂಪೂರ್ಣವಾಗಿ ಸಂಬಂಧಪಡದೆ ಇರುವುದಾಗಿರುತ್ತದೆ. ಉದಾಹರಣೆಗೆ –
- 60dukan.xyz
- Offernoffer.xyz
- big-saving-days.xyz
೨. ನಂಬಲಾರದಂತಹ ಕೊಡುಗೆಗಳು ಮತ್ತು ರಿಯಾಯಿತುಗಳು
ಖರೀದಿಸುವವರನ್ನು ಆಕರ್ಷಿಸಲು ಒಂದು ನಕಲಿ ಜಾಲತಾಣವು ಕಲ್ಪನಾತೀತವಾದ ವ್ಯವಹಾರಗಳನ್ನು ನೀಡುತ್ತದೆ. ಉದಾಹರಣೆಗೆ –
- ಗ್ಯಾಲಕ್ಸಿ ನೋಟ್ ೮ರ ಮೇಲೆ ೯೮% ರಿಯಾಯಿತಿ
- ರೂ.೨,೪೯೯ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ೧೦+
- ರೂ.೧೦,೦೦೦ಕ್ಕೆ ಐಫೋನ್ ೧೧
ಈ ಅಸಂಬದ್ಧ ಬೆಲೆಗಳು ಹಾಸ್ಯಾಸ್ಪದ ಮಾತ್ರವಲ್ಲ, ಅವು ಅನೈತಿಕ ಮತ್ತು ಕಾನೂನುಬಾಹಿರ ಕೂಡ. ಅಂತಹ ಕೊಡುಗೆಗಳಿಂದ ಮತ್ತು ಜಾಲತಾಣಗಳಿಂದ ದೂರವಿರಿ.
೩. ವಿಳಾಸದ ಪಟ್ಟಿಯಲ್ಲಿ ʼಸುರಕ್ಷಿತವಲ್ಲʼ
ಫ್ಲಿಪ್ಕಾರ್ಟ್‌ನ ಅಧಿಕೃತ ಜಾಲತಾಣ ಸುರಕ್ಷಿತವಾಗಿದೆ ಮತ್ತು ಪರಿಶೀಲಿಸಲ್ಪಟ್ಟಿದೆ. ಅದರ ಯುಆರ್‌ಎಲ್ ‘https://’ ದ ಶುರುವಾಗುತ್ತದೆ. ಅದರಲ್ಲಿರುವ ʼಎಸ್ʼ ಸುರಕ್ಷಿತ ಎಂದು ಸೂಚಿಸುತ್ತದೆ ಮತ್ತು ‘https’ ಇದ್ದರೆ ನೀವು ವರ್ಗಾಯಿಸುವ ದತ್ತಾಂಶ ಮರೆಮಾಚಲಾಗಿದೆ ಎಂದರ್ಥ. ಜಾಲತಾಣ ಸುರಕ್ಷಿತವಾಗಿದೆ ಎಂದು ನಿಮ್ಮ ಬ್ರೌಸರ್ ಒಂದು ಬೀಗದ ಚಿಹ್ನೆಯ ಮೂಲಕ ಸೂಚಿಸಬಹುದು. ಒಂದು ನಕಲಿ ಫ್ಲಿಪ್ಕಾರ್ಟ್‌ನ ಜಾಲತಾಣವು ʼಸುರಕ್ಷಿತವಲ್ಲʼ ಎಂದು ಶುರುವಾಗಿ ಹಣ ಪಾವತಿಯ ಹಂತದಲ್ಲಿ ʼಸುರಕ್ಷಿತʼ ಎಂದು ತೋರಬಹುದು. ಇದು ಏಕೆಂದರೆ ಅವರು ಬಳಸುವ ಪಾವತಿಯ ಮಾಧ್ಯಮ ಸುರಕ್ಷಿತವಾದದ್ದಾಗಿರುತ್ತದೆ. ಆದರೆ, ಫ್ಲಿಪ್ಕಾರ್ಟ್‌ನ ಅಧಿಕೃತ ಜಾಲತಾಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
೪. ನೀವು ನಿರೀಕ್ಷಿಸಿದಂತೆ ಜಾಲತಾಣ ಕೆಲಸಮಾಡುವುದಿಲ್ಲ
ಒಂದು ನಕಲಿ ಫ್ಲಿಪ್ಕಾರ್ಟ್‌ನ ಜಾಲತಾಣವು ಈ ಕೆಳಗಿನ ಒಂದು ಅಥವ ಎಲ್ಲ ಅಂಶಗಳನ್ನು ಹೊಂದಿರುತ್ತದೆ –
- ಸಾಮಾನು ಆರಿಸಿಕೊಳ್ಳುವ ಕೈಗಾಡಿಯ ಮೇಲೆ ಕ್ಲಿಕ್ ಮಾಡಲಾಗುವುದಿಲ್ಲ, ಆದರೆ ಕೈಗಾಡಿ ಮೊದಲೆ ತುಂಬಿದೆ
- ಸೈನ್ ಇನ್ ಮಾಡಲು ಯಾವುದೆ ಸೂಚನೆ ಇಲ್ಲ
- ಕೆಲವು ಲಿಂಕ್‌ಗಳು ಕ್ರಿಯಾಶೀಲವಾಗಿಲ್ಲ
- ಹ್ಯಾಂಬರ್ಗರ್‌ನ ತಿನಿಸುಪಟ್ಟಿ ಕ್ರಿಯಾಶೀಲವಾಗಿಲ್ಲ
- ನೀವು ತಪ್ಪಾದ ಅಥವ ಅಪೂರ್ಣವಾದ ಮಾಹಿತಿಯನ್ನು ನಮೂದಿಸಿ ಮುಂದುವರೆಸಬಹುದು
ಒಂದು ನಕಲಿ ಫ್ಲಿಪ್ಕಾರ್ಟ್‌ನ ಆಪ್‌ನ್ನು ಪತ್ತಹಚ್ಚುವುದು ಹೇಗೆ
ಆಪ್‌ನ ಹೆಸರನ್ನು ಗಮನವಿಟ್ಟು ಓದಿ
ಆಪ್‌ನ ಹೆಸರು ಸಂದೇಹಾಸ್ಪದವಾಗಿರಬಹುದು ಅಥವ ಕಾಗುಣಿತ ತಪ್ಪಾಗಿರಬಹುದು. ಉದಾಹರಣೆಗೆ – ಫ್ಲಿಪ್ಕಾರ್ಟಿನ ಆನ್ಲೈನ್ ಖರೀದಿಯ ಆಪ್‌ನ ಬದಲಾಗಿ ಲೈಟ್ ಎಂದು ನಮೂದಿಸಿರುವುದು. ಈ ಆಪ್ ಫ್ಲಿಪ್ಕಾರ್ಟ್ ಎಂಬ ಪದವನ್ನು ಉಪಯೋಗಿಸದೆ ಅದು ಮೂಲದ್ದು ಎಂಬ ಭಾವನೆಯನ್ನು ಉಂಟುಮಾಡುತ್ತದೆ.
ಲಾಂಛನವನ್ನು ಪರೀಕ್ಷಿಸಿ
ಫ್ಲಿಪ್ಕಾರ್ಟ್‌ನ ಆನ್ಲೈನ್ ಖರೀದಿ ಆಪ್ ಮತ್ತು ಫ್ಲಿಪ್ಕಾರ್ಟ್ ಮಾರಾಟ ಹಬ್ ಮತ್ತು ಫ್ಲಿಪ್ಕಾರ್ಟ್ ನಕಲಿ ಆಪ್‌ನಂತಹ ಫ್ಲಿಪ್ಕಾರ್ಟ್‌ನ ಇತರ ಅಧಿಕೃತ ಆಪ್‌ಗಳು ಫ್ಲಿಪ್ಕಾರ್ಟ್‌ನ ವ್ಯಾಪಾರ ಗುರುತನ್ನು ಅಣಕಿಸಲು ಪ್ರಯತ್ನಿಸುತ್ತವೆ, ಆದರೆ ವ್ಯತ್ಯಾಸಗಳನ್ನು ಗುರುತಿಸುವುದು ಸುಲಭ.
ಯಾರು ಅಭಿವೃದ್ಧಿಪಡಿಸಿದರೆಂದು ಪರಿಶೀಲಿಸಿ
ಫ್ಲಿಪ್ಕಾರ್ಟ್‌ನ ಅಧಿಕೃತ ಆಪ್‌ನ್ನು ಫ್ಲಿಪ್ಕಾರ್ಟ್ ಅಭಿವೃದ್ಧಿಪಡಿಸಿದೆ, ಮತ್ತು ಅಭಿವೃದ್ಧಿಪಡಿಸಿದವರ ವಿಭಾಗದಲ್ಲಿ ಅಧಿಕೃತವಾದ ಜಾಲತಾಣಕ್ಕೆ ಸಂಪರ್ಕ ನೀಡಲಾಗಿದೆ ಮತ್ತು ಪ್ರತಿಕ್ರಿಯೆಗಾಗಿ @flipkart.com ಇಂದ ಕೊನೆಗೊಳ್ಳುವ ಒಂದು ವಿದ್ಯುದಂಚೆಯ ವಿಳಾಸ ಕೊಟ್ಟಿರುವುದನ್ನು ನೀವು ಗಮನಿಸಬಹುದು.
ಅನುಮಾನಾಸ್ಪದ ಕ್ರಿಯೆಗಳ ಬಗ್ಗೆ ಎಚ್ಚರಿಕೆಯಿಂದಿರಿ
ನಕಲಿ ಜಾಲತಾಣದಲ್ಲಿ ಈ ವಿಷಯಗಳಿಗಾಗಿ ನೋಡುತ್ತಿರಿ –
- ದೊಡ್ಡದಾದ, ಅವಾಸ್ತವಿಕ ವಹಿವಾಟುಗಳು
- ಕ್ರಿಯಾಶೀಲವಾಗಿಲ್ಲದ ಲಿಂಕ್‌ಗಳು
- ವಿಶ್ವಾಸಾರ್ಹವಲ್ಲದ ವಿಮರ್ಶೆ
ಫ್ಲಿಪ್ಕಾರ್ಟ್‌ನಲ್ಲಿ ಸುರಕ್ಷಿತವಾಗಿ ಖರೀದಿಮಾಡುವುದು ಹೇಗೆ
ನಕಲಿ ಫ್ಲಿಪ್ಕಾರ್ಟ್ ಜಾಲತಾಣ ಅಥವ ಆಪ್‌ಗಳನ್ನು ತಪ್ಪಿಸಿಕೊಳ್ಳಲು ಅತ್ಯುತ್ತಮ ಮಾರ್ಗವೆಂದರೆ ಅಧಿಕೃತ ವೇದಿಕೆಗಳಲ್ಲಿ ಖರೀದಿ ಮಾಡುವುದು. ನೀವು ಬಳಸಬೇಕಾದವು ಇಲ್ಲಿವೆ –
ನೀವು ಇದನ್ನು ಪಾಲಿಸಬಹುದು ಈ ಮಾರ್ಗದರ್ಶಿಯನ್ನು ನಿಮ್ಮ ದೂರವಾಣಿಯಲ್ಲಿ ಆಪ್ ಅನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕೆಂಬ ನಿರ್ದೇಶನಗಳಿಗಾಗಿ ನೋಡಬಹುದು.
ನೀವು ಆನ್ಲೈನ್‌ನಲ್ಲಿ ಖರೀದಿ ಮಾಡುವಾಗ ಮೋಸದ ಚಟುವಟಿಕೆ ಇರಬಹುದೆಂಬ ಅನುಮಾನ ಬಂದರೆ, ಈ ಸಂಖ್ಯೆಗೆ ಕರೆಮಾಡಲು ಹಿಂಜರಿಯಬೇಡಿ ಫ್ಲಿಪ್ಕಾರ್ಟ್ ಗ್ರಾಹಕರ ಬೆಂಬಲ ಉಚಿತ ದೂರವಾಣಿ ಸಂಖ್ಯೆ ೧೮೦೦ ೨೦೮ ೯೮೯೮. ಫ್ಲಿಪ್ಕಾರ್ಟ್‌ನ ಅಧಿಕೃತ ಪ್ರತಿನಿಧಿಗಳು ಪಾಸ್ವರ್ಡ್‌ಗಳು, ಒಟಿಪಿ ಮತ್ತು ಪಿನ್ ಸಂಖ್ಯೆಗಳಂತಹ ಸೂಕ್ಷ್ಮ ಮಾಹಿತಿಯನ್ನು ಎಂದೂ ಕೇಳುವುದಿಲ್ಲವೆಂದು ನೆನಪಿನಲ್ಲಿಡಿ. .
ಒಂದು ನಕಲಿ ಫ್ಲಿಪ್ಕಾರ್ಟ್ ಜಾಲತಾಣವನ್ನು ಅಥವ ಆಪ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬ ತಿಳುವಳಿಕೆಯೊಂದಿಗೆ ನೀವು ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿದೆ ಎಂದು ಅರಿತು, ನಿಮ್ಮ ಆರ್ಡರ್ ಶೀಘ್ರದಲ್ಲೇ ನಿಮ್ಮ ಹೊಸ್ತಿಲಿನಲ್ಲಿರುತ್ತದೆ ಎಂಬ ಭರವಸೆಯೊಂದಿಗೆ ಶಾಂತಿಯಿಂದ ಖರೀದಿ ಮಾಡಬಹುದು!
ಇನ್ನೂ ಹೆಚ್ಚಿನ ಅಂತರ್ಜಾಲ ಸುರಕ್ಷತೆಯ ಸೂಚನೆಗಳಿಗಾಗಿ, ನಮ್ಮ ಪ್ರಮುಖ ಮಾರ್ಗದರ್ಶಿಯನ್ನು ಓದಿ.