ಲೋಹದ ಮೇಲೆ ಪೆಡಲ್: ಲಾಕ್‌ಡೌನ್ ಮಧ್ಯೆ, ಈ ಜೀವ್ಸ್ ತಂತ್ರಜ್ಞರು ಒಬ್ಬರು ಗ್ರಾಹಕರಿಗೆ ಸಹಾಯ ಮಾಡಲು 25 ಕಿ.ಮೀ. ಕ್ರಮಿಸಿದರು

Read this article in বাংলা | English | ગુજરાતી | हिन्दी | தமிழ் | मराठी

ಸಾಂಕ್ರಾಮಿಕ ರೋಗವೂ ಕೂಡ ಜೀವ್ಸ್ ತಂತ್ರಜ್ಞರಾದ ಅಯಾನ್ ಗುಹತಕುರ್ತಾ ಅವರನ್ನು ಅಗತ್ಯವಿರುವ ಗ್ರಾಹಕರಿಗೆ ಸಹಾಯ ಮಾಡಲು ಹೋಗುವುದನ್ನು ತಡೆಯಲಾಗಲಿಲ್ಲ.

Jeeves technician main banner

ಕೋವಿಡ್‌-19 ಲಾಕ್‌ಡೌನ್ ಪ್ರಾರಂಭವಾಗುವ ಕೆಲವು ದಿನಗಳ ಹಿಂದಷ್ಟೇ, ಅಯಾನ್ ಗುಹತಕುರ್ತಾ ತನ್ನ ಹಳೆಯ, ಚೆನ್ನಾಗಿ ಸವಾರಿ ಮಾಡಿದ್ದ, ಆದರೆ ಈಗ ತೊಂದರೆ ನೀಡಲು ಪ್ರಾರಂಭಿಸಿದ್ದ ಬೈಸಿಕಲ್ ಬದಲಿಸಿ ಹೊಸ ಬೈಸಿಕಲ್ ಅನ್ನು ಖರೀದಿಸಿದರು. ಒಬ್ಬ ಜೀವ್ಸ್ ತಂತ್ರಜ್ಞರಾಗಿ, ಅಯಾನ್ ಅವರ ಕೆಲಸವು ಗ್ರಾಹಕರ ಸೇವಾ ವಿನಂತಿಗಳನ್ನು ನೋಡಿಕೊಳ್ಳಲು ಅವರನ್ನು ಪ್ರತಿ ದಿನ ಭೇಟಿ ಮಾಡುವುದನ್ನು ಒಳಗೊಂಡಿರುತ್ತದೆ. ಆ ಸಮಯದಲ್ಲಿ, ಶೀಘ್ರದಲ್ಲೇ ಅವರ ಹೊಸ ಸೈಕಲ್ ಹತ್ತಿರ ಮತ್ತು ದೂರದಲ್ಲಿರುವ ಗ್ರಾಹಕರನ್ನು ತಲುಪುವ ಅವರ ಏಕೈಕ ಮಾರ್ಗವಾಗಲಿದೆಯೆಂದು ಎಂದು ಅವರಿಗೆ ತಿಳಿದಿರಲಿಲ್ಲ.

ಜೂನ್ 3, 2020 ರಂದು, ಕೋಲ್ಕತಾದ ಫ್ಲಿಪ್‌ಕಾರ್ಟ್ ಗ್ರಾಹಕರಾದ ಸುಮಂತ ಚಟ್ಟೋಪಾಧ್ಯಾಯ ಅವರು ಅವರು ಇದೀಗ ಖರೀದಿಸಿದ್ದ ಮೊಬೈಲ್ ಫೋನ್‌ನಲ್ಲಿನ ಸಮಸ್ಯೆಯನ್ನು ಪರಿಹರಿಸಲು ಒಂದು ಸೇವಾ ವಿನಂತಿಯನ್ನು ದಾಖಲಿಸಿದರು. ಲಾಕ್‌ಡೌನ್ ಜಾರಿಯಲ್ಲಿತ್ತು ಮತ್ತು ಅವರ ನಗರದಲ್ಲಿನ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿತ್ತು. ಸ್ವಾಭಾವಿಕವಾಗಿಯೇ, ಲಾಕ್‌ಡೌನ್ ಅನ್ನು ತೆಗೆದುಹಾಕುವವರೆಗೂ ತಾನು ಸಹಾಯ ಪಡೆಯುತ್ತೇನೆಂದು ಸುಮಂತ ಅವರು ನಿರೀಕ್ಷಿಸಿರಲಿಲ್ಲ. ಆದರೆ, ಅವರಿಗೆ ಅಚ್ಚರಿ ಮತ್ತು ಸಂತೋಷವಾಗುವ ಹಾಗೆ, ಜೀವ್ಸ್ ತಂತ್ರಜ್ಞರು ಕೆಲವೇ ಗಂಟೆಗಳಲ್ಲಿ ಅವರ ಫೋನ್ ಅನ್ನು ಖುದ್ದಾಗಿ ಪರೀಕ್ಷಿಸಲು ಬಂದರು. ಅದು ಅಯಾನ್ ಆಗಿತ್ತು.

Jeeves technician 1
ಜೀವ್ಸ್ ತಂತ್ರಜ್ಞರಾದ ಅಯಾನ್ (ಆರ್) ಸಂತೃಪ್ತ ಗ್ರಾಹಕರಾದ ಸುಮಂತಾ ಚಟ್ಟೋಪಾಧ್ಯಾಯ ಅವರೊಂದಿಗೆ

ತನ್ನ ಮನೆಗೆ ಇಷ್ಟು ಬೇಗ ಬರಲು ಹೇಗೆ ಸಾಧ್ಯವಾಯಿತೆಂದು ಸುಮಂತ ಅವರು ಅಯಾನ್ ಅವರನ್ನು ಕೇಳಿದಾಗ, ಅಯಾನ್ ಅವರ ವಿನಂತಿಯನ್ನು ಪೂರೈಸಲು ತನ್ನ ಸೈಕಲ್ ಮೇಲೆ ಒಂದು ಬದಿಗೆ 25 ಕಿಲೋಮೀಟರ್ ಅಂತರದ ದಾರಿಯಲ್ಲಿ ಸವಾರಿ ಮಾಡಿದ್ದನ್ನು ಕೇಳಿ ಅವರಿಗೆ ಆಘಾತವಾಯಿತು. ಫ್ಲಿಪ್‌ಕಾರ್ಟ್ ಗ್ರಾಹಕರು ತುಂಬಾ ಕೃತಜ್ಞರಾಗಿಗಿದ್ದರು.

“ಅವರ ಕರ್ತವ್ಯದ ಬಗೆಗಿನ ಅವರ ಪ್ರಾಮಾಣಿಕತೆಯು ನನ್ನಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಿತು” ಎಂದು ಸುಮಂತ ಹೇಳುತ್ತಾರೆ, ಅವರು ಜೀವ್ಸ್ ತಂತ್ರಜ್ಞರ ಬಗೆಗಿನ ಮೆಚ್ಚುಗೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ ಅವರು ನನ್ನ ಕಡೆಯಿಂದ ಅಪಾರ ಗೌರವವನ್ನು ಪಡೆದುಕೊಂಡಿದ್ದಾರೆ. ದೇವರು ಅವರು ಅರ್ಹವಾದ ಎಲ್ಲಾ ಯಶಸ್ಸನ್ನು ಅವರಿಗೆ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ”

 


ಈ ಕಥೆಯನ್ನು ಆನಂದಿಸುತ್ತಿದ್ದೀರಾ? ಜತೆಯಲ್ಲಿರುವ ಪಾಡ್‌ಕ್ಯಾಸ್ಟ್ ಅನ್ನು ಪರಿಶೀಲಿಸಿ!

 

ಅಯಾನ್‌ಗೆ, ಅಸಾಧಾರಣವಾದ ಕರ್ತವ್ಯ ಪ್ರಜ್ಞೆಯು ಅವರ ಎರಡನೆಯ ಸ್ವಭಾವವಾಗಿದೆ. ಸೇವಾ ಉದ್ಯಮದಕ್ಕೆ ಸೇರಿಕೊಳ್ಳುವಂತೆ ಸ್ನೇಹಿತರೊಬ್ಬರು ಶಿಫಾರಸು ಮಾಡಿದ ನಂತರ 2018 ರಲ್ಲಿ ಅವರು ಜೀವ್ಸ್‌ ಅನ್ನು ಸೇರಿಕೊಂಡಾಗ ಅವರಿಗೆ 19 ವರ್ಷವಾಗಿತ್ತು.

” ನಮಗೆ ಟಿಕೆಟ್ ನಿಯೋಜಿಸಿದಾಗ, ನಮಗೆ ಗ್ರಾಹಕರಷ್ಟೇ ಮುಖ್ಯವಾಗುತ್ತಾರೆ “ಎಂದು ಈ ಯುವ ತಂತ್ರಜ್ಞ ಹೇಳುತ್ತಾರೆ, ಎಂದು ಲಾಕ್‌ಡೌನ್ ಹೊರತಾಗಿಯೂ ಗ್ರಾಹಕರನ್ನು ಭೇಟಿ ಮಾಡಲು ತಾನು ದೀರ್ಘ ಸವಾರಿಯನ್ನು ಮಾಡುವಂತೆ ಪ್ರೇರೇಪಿಸಿದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತ ಅವರು ಹೇಳುತ್ತಾರೆ“ ದೂರ ಮುಖ್ಯವಲ್ಲದ ಕಾರಣ ನಾನು ಪ್ರಯಾಣ ಮಾಡುವ ಮೊದಲು ನಿಜವಾಗಿಯೂ ಅದರ ಬಗ್ಗೆ ಚಿಂತಿಸಲಿಲ್ಲ. ಇದಲ್ಲದೆ, ರೈಲುಗಳು ಚಲಿಸುತ್ತಿರಲಿಲ್ಲ ಮತ್ತು ಹವಾಮಾನವು ಅದ್ಭುತವಾಗಿತ್ತು, ಆದ್ದರಿಂದ ನಾನು ಗ್ರಾಹಕರ ಸ್ಥಳಕ್ಕೆ ಸವಾರಿ ಮಾಡಿ ಹೋಗಲು ನಿರ್ಧರಿಸಿದೆ. ”

Ayan Jeeves Technician from Howrah

ತನ್ನ ಹೆತ್ತವರ ಏಕೈಕ ಪುತ್ರನಾದ ಅಯಾನ್, ಕೋಲ್ಕತ್ತಾದ ಹೌರಾದಲ್ಲಿ ವಾಸಿಸುತ್ತಾರೆ. ಅವರ ಪೋಷಕರಿಗೆ ಇ-ಕಾಮರ್ಸ್ ಪರಿಚಯವಿಲ್ಲದಿದ್ದರೂ, ಅವರು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ತುಂಬಾ ಹೆಮ್ಮೆಯಿದೆಯೆಂದು ಅವರು ಹೇಳುತ್ತಾರೆ.

ಒಂದು ಸಾಧಾರಣ ದಿನದಲ್ಲಿ, ಅಯಾನ್ ತನ್ನ ಮನೆಗೆ ಹತ್ತಿರವಿರುವ ಗ್ರಾಹಕರ ಭೇಟಿಗಳಿಗೆ ಸೈಕಲ್‌ನಲ್ಲಿ ಹೋಗುತ್ತಾರೆ. ದೂರದ ಪ್ರಯಾಣಗಳಿಗಾಗಿ, ಅವರು ಸ್ಥಳೀಯ ರೈಲಿನಲ್ಲಿ ಹೋಗುತ್ತಾರೆ. ಲಾಕ್‌ಡೌನ್ ಪ್ರಾರಂಭವಾದಾಗ, ಎಲ್ಲಾ ರೈಲು ಸೇವೆಗಳನ್ನು ನಿಲ್ಲಿಸಲಾಯಿತು. ಆಗಲೇ ಅವರ ಹಳೆಯ ಬೈಸಿಕಲ್ ಲಾಕ್ ಡೌನ್ ಆಗುವ ಮೊದಲೇ ಕೈಕೊಟ್ಟಿತು ಮತ್ತು ಅವರು ಹೊಸದನ್ನು ಖರಿದಿಸಬೇಕಾಯಿತು.

“ಗ್ರಾಹಕರಿಗೆ ನನ್ನ ಅಗತ್ಯವಿದೆಯೆಂದು ನನಗೆ ತಿಳಿದಿತ್ತು, ಹಾಗಾಗಿ ನಾನು ಹೊಸ ಬೈಸಿಕಲ್ ಅನ್ನು ಖರೀದಿಸಿದೆ ಏಕೆಂದರೆ ಸಾರಿಗೆ ನನ್ನ ಕರ್ತವ್ಯದ ಹಾದಿಯಲ್ಲಿ ಅಡ್ಡ ಬರುವುದು ನನಗೆ ಇಷ್ಟವಿರಲಿಲ್ಲ” ಎಂದು ಅವರು ಹೇಳುತ್ತಾರೆ. ಇದು ಫಲಪ್ರದವಾದ ನಿರ್ಧಾರವಾಗಿ ಪರಿಣಮಿಸಿತು.

jeeves technician 2

ಅಯಾನ್‌ರಂತಹ ಬದ್ಧತೆಗೆ ಫ್ಲಿಪ್‌ಕಾರ್ಟ್ ಗುಂಪಿನಲ್ಲಿ, ವಿಶೇಷವಾಗಿ ಜೀವ್ಸ್‌ನಲ್ಲಿ ಹೆಚ್ಚು ಮೌಲ್ಯ ನೀಡಲಾಗುತ್ತದೆ. “ನಮ್ಮ ತಂತ್ರಜ್ಞರು ಈ ಕುಟುಂಬದ ಭಾಗವಾಗಲು ನಮಗೆ ಹೆಮ್ಮೆಯೆನಿಸುವಂತೆ ಮಾಡುತ್ತಾರೆ, ಮತ್ತು ಅವರು ಎಲ್ಲಾ ಅಡೆತಡೆಗಳನ್ನು ಎದುರಿಸಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅದು ನಮಗೆ ಧನ್ಯತೆಯ ಭಾವ ನೀಡುತ್ತದೆ” ಎಂದು ನಿಪುಣ್ ಶರ್ಮಾ , ಉಪಾಧ್ಯಕ್ಷ ಮತ್ತು ಮುಖ್ಯಸ್ಥ, ಜೀವ್ಸ್ ಎಫ್ 1, ಇವರು ಹೇಳುತ್ತಾರೆ. “ಸಾಂಕ್ರಾಮಿಕವಿರಲಿ ಅಥವಾ ಇಲ್ಲದಿರಲಿ, ಗ್ರಾಹಕರೇ ಮೊದಲು ಎನ್ನುವ ತತ್ವವನ್ನು ಅಯಾನ್ ನಿಖರವಾಗಿ ಪ್ರದರ್ಶಿಸಿದ್ದಾರೆ.”

50 ಕಿ.ಮೀ ಬೈಸಿಕಲ್ ಸವಾರಿ ಏನೂ ಅಲ್ಲವಂತೆ ನಡೆದುಕೊಳ್ಳುವ ಅಯಾನ್, ಈ ಮೌಲ್ಯಕ್ಕೆ ಒಂದು ಉದಾಹರಣೆಯಾಗಿದ್ದಾರೆ. ಕೊರೋನವೈರಸ್ ಸಾಂಕ್ರಾಮಿಕವು ಸೇವಾ ಉದ್ಯಮದ ಮುಂದೆ ಅನನ್ಯವಾದ ಮತ್ತು ಅಭೂತಪೂರ್ವ ಸವಾಲುಗಳನ್ನು ಹಾಕಿದರೂ, ಅಯಾನ್ ತಾನು ಮಾಡುತ್ತಿರುವ ಕೆಲಸಕ್ಕೆ ಕೃತಜ್ಞರಾಗಿದ್ದಾರೆ ಮತ್ತು ಅವರ ಸಹೋದ್ಯೋಗಿಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ.

” ಮುಂದಿನ ಸಾಲಿನಲ್ಲಿರುವ ನಾವು ಶಾಂತವಾಗಿರಬೇಕು ಮತ್ತು ಗ್ರಾಹಕರ ಸಮಸ್ಯೆಯನ್ನು ಶ್ರದ್ಧೆಯಿಂದ ಆಲಿಸಬೇಕು” ಎಂದು ಅವರು ಹೇಳುತ್ತಾರೆ, ಹಾಗೂ ತನಗೆ ಏನು ಸ್ಫೂರ್ತಿ ನೀಡುತ್ತದೆಂದು ಹೇಳುತ್ತ ಅವರು ಹೇಳುತ್ತಾರೆ “ಹೀಗೆ ಮಾಡುವುದರಿಂದ, ಅರ್ಧದಷ್ಟು ಯುದ್ಧವನ್ನು ಗೆದ್ದ ಹಾಗೇ ಆಗುತ್ತದೆ, ಮತ್ತು ನಂತರ ನಾವು ಪರಿಹಾರವನ್ನು ಹುಡುಕಬಹುದು.”


ಈ ಕಥೆ ಇಷ್ಟವಾಯಿತೇ? ಚಿಕ್ಕಣ್ಣ, ತನ್ನದೇ ಆದ ಇ-ಬೈಕ್ ನಿರ್ಮಿಸಿದ ಜೀವ್ಸ್ ತಂತ್ರಜ್ಞರು!

Enjoy shopping on Flipkart