ಆಶಿಶ್ ಸೈನಿ ತಮ್ಮ ವ್ಯಾಪಾರವನ್ನು ಆನ್‌ಲೈನ್‌ನಗೆ ತೆಗೆದುಕೊಂಡು ಹೋದಾಗ, ಅವರು ಪ್ರತಿದಿನ 10 ಆರ್ಡರ್‌ಗಳೊಂದಿಗೆ ಪ್ರಾರಂಭಿಸಿದರು. ಇಂದು, ಈ ಫ್ಲಿಪ್‌ಕಾರ್ಟ್ ಮಾರಾಟಗಾರರು ಪ್ರತಿದಿನ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ರವಾನಿಸುತ್ತಾರೆ! ಅವರ ಅಕೌಂಟ್ ಮ್ಯಾನೇಜರ್‌ಗಳು ಅವರಿಗೆ ಸಹಾಯ ಮಾಡುತ್ತಿರುವಾಗ, ಅವರು ಫ್ಲಿಪ್‌ಕಾರ್ಟ್‌ನಲ್ಲಿ ಬೆಳವಣಿಗೆ ಮತ್ತು ಗೋಚರತೆಯ ರಹಸ್ಯಗಳನ್ನು ಕಂಡುಕೊಂಡಿದ್ದಾರೆ. ದಿ ಬಿಗ್ ಬಿಲಿಯನ್ ಡೇಸ್ 2020 ರ ಸಮಯದಲ್ಲಿ, ಅವರ ಶೂ ಬ್ರಾಂಡ್ ಚೆವಿಟ್ ಕೋಟಿಗಳಷ್ಟು ಆದಾಯವನ್ನು ದಾಟಿ ಹೊಸ ದಾಖಲೆಯನ್ನು ನಿರ್ಮಿಸಿತು. ಇದು ಅವರ ಕಥೆ.
ನನ್ನ ಹೆಸರು ಆಶಿಶ್ ಸೈನಿ . ನಾನು ದೆಹಲಿಯಿಂದ ಬಂದವನು ಮತ್ತು ಫ್ಲಿಪ್‌ಕಾರ್ಟ್ ಮಾರಾಟಗಾರನಾಗುವ ಮೊದಲು ನಾನು ಒಂದು ಎಂಎನ್‌ಸಿಯಲ್ಲಿ ಕೆಲಸ ಮಾಡಿದ್ದೇನೆ. ಅದನ್ನು ಬಿಟ್ಟ ನಂತರ, ನಾನು ಪಾದರಕ್ಷೆಗಳ ಉದ್ಯಮಕ್ಕೆ ಕಾಲಿಟ್ಟೆ ಮತ್ತು ನನ್ನ ಕಂಪನಿಯನ್ನು ನಿರ್ಮಿಸಲು ನನ್ನನ್ನು ನಾನೇ ಅರ್ಪಿಸಿಕೊಂಡೆ. ನಾನು ಚೆವಿಟ್ ಎಂಬ ಬ್ರಾಂಡ್ ಹೆಸರಿನಲ್ಲಿ ಪುರುಷರ ಕ್ಯಾಶುಯಲ್ ಮತ್ತು ಕ್ರೀಡಾ ಪಾದರಕ್ಷೆಗಳ ವಿಭಾಗದಲ್ಲಿ ಬೂಟುಗಳನ್ನು ಮಾರಾಟ ಮಾಡುತ್ತೇನೆ.
ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿ ನೋಂದಾಯಿಸಿದಾಗಿನಿಂದ, ನನ್ನ ಬ್ರ್ಯಾಂಡ್ ತುಂಬಾ ಬೆಳವಣಿಗೆ ಕಂಡಿದೆ. ನಮ್ಮ ಯಶಸ್ಸಿನ ಬಹುಪಾಲು ಭಾಗವನ್ನು ನಮ್ಮ ಅಕೌಂಟ್ ಮ್ಯಾನೇಜರ್‌ಗಳು ಮತ್ತು ಫ್ಲಿಪ್‌ಕಾರ್ಟ್ ಬೆಂಬಲ ತಂಡಕ್ಕೆ ನಾವು ಅರ್ಪಿಸುತ್ತೇವೆ. ಮಾರಾಟವನ್ನು ಹೆಚ್ಚಿಸುವುದರಿಂದ ಹಿಡಿದು ನಾವು ಒದಗಿಸುವ ವಿವಿಧ ರೀತಿಯ ಬೂಟುಗಳನ್ನು ಹೆಚ್ಚಿಸುವವರೆಗೆ, Flipkart! ಜೊತೆ ಪಾಲುದಾರಿಕೆ ಮಾಡಿಕೊಂಡಾಗಿನಿಂದ ನಾವು ನಮ್ಮ ಬೆಳವಣಿಗೆಯನ್ನು ಕಣ್ಣು ಮುಚ್ಚಿ ತೆರೆಯುವುದರೊಳಗೆ ಸಾಧಿಸಿರುವಂತೆ ಕಾಣುತ್ತದೆ.
ಫ್ಲಿಪ್‌ಕಾರ್ಟ್ ಅನ್ನು ಕಂಡುಕೊಳ್ಳುವುದು, ಗೋಚರತೆಯನ್ನು ಕಂಡುಕೊಳ್ಳುವುದು
ನಾವು 10 ಆರ್ಡರ್‌ಗಳೊಂದಿಗೆ ಪ್ರಾರಂಭಿಸಿದೆವು ಮತ್ತು ಇಂದು ನಾವು ಪ್ರತಿದಿನ 10,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ರವಾನಿಸುತ್ತೇವೆ. ಹಿಂತಿರುಗಿ ನೋಡಿದಾಗ, ನನ್ನ ಪ್ರಯಾಣವು ಪವಾಡಕ್ಕಿಂತ ಕಡಿಮೆಯೇನಿಲ್ಲ! ಆರಂಭದಲ್ಲಿ, ಇತರ ಪ್ಲಾಟ್‌ಫಾರ್ಮ್‌ಗಳೊಂದಿಗೆ ಇ-ಕಾಮರ್ಸ್ ವ್ಯಾಪಾರದ ಮೂಲಕ ನಮ್ಮ ಹಾದಿಯನ್ನು ನಾವು ಕಂಡುಕೊಳ್ಳಬೇಕಿತ್ತು. ಆದರೆ ಕೆಲವೇ ವರ್ಷಗಳಲ್ಲಿ, ನನ್ನ ಗಮನವು ಉನ್ನತ ದರ್ಜೆಯ ಫ್ಲಿಪ್‌ಕಾರ್ಟ್ ಮಾರಾಟಗಾರನಾಗುವುದರ ಮೇಲೆ ಕೇಂದ್ರೀಕರಿಸಿತು, ಏಕೆಂದರೆ ಫ್ಲಿಪ್‌ಕಾರ್ಟ್‌ನ ಗ್ರಾಹಕರ ಸಂಖ್ಯೆ ಮತ್ತು ಟ್ರಾಫಿಕ್ ಮೂಲಗಳೆರಡೂ ನಿಜವಾಗಿಯೂ ದೊಡ್ಡದಾಗಿದೆ. ಫ್ಲಿಪ್‌ಕಾರ್ಟ್ ತುಂಬಾ ಬಳಕೆದಾರ ಸ್ನೇಹಿಯಾದ ಆಪ್ ಅನ್ನು ಸಹ ಹೊಂದಿದೆ. ನಾವು 2015-16ರಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ನೋಂದಾಯಿಸಿಕೊಂಡರೂ, 2018 ರಲ್ಲಿ ನಾವು ಈ ವೇದಿಕೆಯಲ್ಲಿ ಸಕ್ರಿಯರಾದೆವು ಮತ್ತು 2019 ರಿಂದ ಪ್ರಶಸ್ತಿಗಳನ್ನು ಗೆಲ್ಲಲು ಪ್ರಾರಂಭಿಸಿದೆವು.
ಫ್ಲಿಪ್‌ಕಾರ್ಟ್ ಮಾರಾಟಗಾರನಾದಾಗಿನಿಂದ, ಬೆಲೆಗಳನ್ನು ಕಡಿಮೆ ಮಾಡುವುದು ಆರ್ಡರ್‌ಗಳನ್ನು ಪಡೆಯಲು ಅಥವಾ ಗೋಚರತೆಯನ್ನು ಪಡೆಯುವ ಮಾರ್ಗವಲ್ಲ ಎಂದು ನಾನು ಕಲಿತಿದ್ದೇನೆ. ಹೆಸರು ಮಾಡಲು ನೀವು ಉತ್ತಮ ಸೇವೆಯನ್ನು ಒದಗಿಸಬೇಕು. ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ, ಕೇವಲ ಬೆಲೆ ಕಡಿಮೆ ಮಾಡಿದರೆ ಅದು ಸಾಕಾಗಬಹುದಾದರೂ, ಫ್ಲಿಪ್‌ಕಾರ್ಟ್‌ನಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ.
ಫ್ಲಿಪ್‌ಕಾರ್ಟ್‌ನಲ್ಲಿ ಗೋಚರತೆಯನ್ನು ಹೆಚ್ಚಿಸಲು ಅಕೌಂಟ್ ಮ್ಯಾನೇಜರ್‌ಗಳು ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಬರುವ ಟ್ರಾಫಿಕ್ ಪ್ರಮಾಣದೊಂದಿಗೆ, ಅದು ನಮಗೆ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡಿದೆ. ಕಳೆದ ವರ್ಷ, ನಾವು ನಮ್ಮ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದೆವು ಮತ್ತು ಮಾರಾಟ ಮತ್ತು ಗೋಚರತೆಯ ದೃಷ್ಟಿಯಿಂದ TBBD 2020 ನನ್ನ ಕಂಪನಿಗೆ ಒಳ್ಳೆಯ ಉತ್ತೇಜನ ನೀಡಿತು. ಇಂದು, ನೀವು ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಶುಯಲ್ ಬೂಟುಗಳನ್ನು ಹುಡುಕಿದಾಗ, ನೀವು ಚೆವಿಟ್ ಬೂಟುಗಳನ್ನು ಮೊದಲ ಪುಟದಲ್ಲೇ ನೋಡಲು ಸಾಧ್ಯವಾಗುತ್ತದೆ!
ಫ್ಲಿಪ್‌ಕಾರ್ಟ್‌ನ ಒಳನೋಟಗಳೊಂದಿಗೆ ಹೆಚ್ಚಿನ ಮಾರಾಟ
ನನ್ನಂತಹ ಮಾರಾಟಗಾರರಿಗೆ ಕೆಲವೊಮ್ಮೆ ಇ-ಕಾಮರ್ಸ್ ಅನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ ಮತ್ತು ಅಕೌಂಟ್ ಮ್ಯಾನೇಜರ್‌ಗಳು ಈ ಅಂತರವನ್ನು ತುಂಬುತ್ತಿದ್ದು ಇದು ನಮಗೆ ಊಹೆಗಳು ಮಾರಾಟಗಳು, ಪ್ರಮಾಣಗಳು ಹಾಗೂ ಹೆಚ್ಚು ಮಾರಾಟವಾಗುವ ದಿನಗಳ ಬಗ್ಗೆ ಯೋಚಿಸಲು ಸಹಾಯ ಮಾಡುತ್ತದೆ. ಅವರ ಪ್ರತಿಕ್ರಿಯೆಗಳ ಪ್ರಕಾರ, ನಾವು ನಮ್ಮ ದಾಸ್ತಾನು, ಪ್ಯಾಕೇಜಿಂಗ್ ವಸ್ತುಗಳು ಮತ್ತು ಸ್ಟಾಕ್ ಅನ್ನು ನಿರ್ವಹಿಸುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಸಹ ನೇಮಿಸಿಕೊಳ್ಳುತ್ತೇವೆ. ಅವರು ಮಾರುಕಟ್ಟೆ ಪ್ರವೃತ್ತಿಗಳನ್ನು ಸಹ ವಿಶ್ಲೇಷಿಸಿ, ಗ್ರಾಹಕರು ಖರೀದಿಸಬಹುದಾದ ಉತ್ಪನ್ನಗಳನ್ನು ಒದಗಿಸಲು ನಮಗೆ ಸಹಾಯ ಮಾಡುತ್ತಾರೆ.
ಅಭೂತಪೂರ್ವ ಬೆಳವಣಿಗೆ
ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿ, ನಾನು 2 ರಿಂದ 3 ವರ್ಷಗಳಲ್ಲಿ 10x ಬೆಳವಣಿಗೆಯನ್ನು ನೋಡಿದ್ದೇನೆ. 2018 ರಲ್ಲಿ, ಫ್ಲಿಪ್‌ಕಾರ್ಟ್‌ನಲ್ಲಿ ನಾವು ದಿನಕ್ಕೆ 1,500-2,000 ಆರ್ಡರ್‌ಗಳನ್ನು ಹೊಂದಿದ್ದೆವು. ಅದು 2019 ರಲ್ಲಿ ದಿನಕ್ಕೆ 5,000-6,000 ಆರ್ಡರ್‌ಗಳಿಗೆ ಏರಿತು ಮತ್ತು ಇಂದು ನಾವು ಪ್ರತಿದಿನ 10,000 ಆರ್ಡರ್‌ಗಳನ್ನು ನಿರ್ವಹಿಸುತ್ತೇವೆ. ನಾವು ಸಾಕಷ್ಟು ಕಾಂಬೊ ಡೀಲ್‌ಗಳನ್ನು ನೀಡುವುದರಿಂದ ನೀವು ರವಾನೆಯಾದ ಜೋಡಿಗಳ ಸಂಖ್ಯೆಯನ್ನು ಎಣಿಸಿದರೆ, ಆ ಸಂಖ್ಯೆ ದಿನಕ್ಕೆ 40,000 ಕ್ಕಿಂತ ಹೆಚ್ಚಾಗುತ್ತದೆ.
ಬಿಗ್ ಬಿಲಿಯಾನ್ ಡೇಸ್ 2020 ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿ ನನಗೆ ತುಂಬಾ ಅದ್ಭುತವಾಗಿ ಕೆಲಸ ಮಾಡಿದೆ. ನಾವು ಕೇವಲ 7-8 ದಿನಗಳಲ್ಲಿ ₹ 5 ಕೋಟಿಗಿಂತ ಹೆಚ್ಚು ಗಳಿಸಿದೆವು. ಚೆವಿಟ್ ಬೂಟುಗಳು ಫ್ಲಿಪ್‌ಕಾರ್ಟ್‌ನ ಮುಖಪುಟದಲ್ಲೂ ಬಂದವು, ಅಲ್ಲಿ ಹೆಚ್ಚು ಮಾರಾಟವಾಗುವ ಉತ್ಪನ್ನಗಳು ಕಂಡುಬರುತ್ತವೆ.
ಆ ದಿನಗಳಲ್ಲಿ, ನಾನು ನನ್ನ ಉದ್ಯೋಗಿಗಳ ಜೊತೆ ಕುಳಿತುಕೊಂಡು ಶೂಗಳನ್ನು ಪ್ಯಾಕ್ ಮಾಡುತ್ತಿದ್ದೆ. ನಾನು ಇನ್‌ವಾಯ್ಸ್ ಗಳನ್ನು ಕೂಡ ಒಂದೊಂದಾಗಿ ನಾನೇ ಮಾಡುತ್ತಿದ್ದೆ. ಇಂದು, ನನ್ನ ವ್ಯಾಪಾರದಲ್ಲಿ 150ಕ್ಕೂ ಹೆಚ್ಚು ಜನರ ತಂಡ ಕೆಲಸ ಮಾಡುತ್ತಿದೆ. ನಮ್ಮ ಅಕೌಂಟ್ ಮ್ಯಾನೇಜರ್ ಅವರ ಸಲಹೆಯೊಂದಿಗೆ ನಾವು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಿಸಿದ್ದೇವೆ ಹಾಗೂ ಈಗ ಪ್ಯಾಕಿಂಗ್ ರಿಟರ್ನ್‌ಗಳು ಡಿಸ್ಪ್ಯಾಚ್‌ಗಳು ಇನ್‌ವಾಯ್ಸ್ ಗಳಿಗಾಗಿ ಬೇರೆಬೇರೆ ತಂಡಗಳನ್ನು ಹೊಂದಿದ್ದೇವೆ. ಪ್ರತಿ ವಿಭಾಗದಲ್ಲಿ ಮೇಲ್ವಿಚಾರಕರನ್ನು ಇರಿಸಿಕೊಂಡು ನಾವು ದಕ್ಷತೆಯನ್ನು ಸಾಧಿಸುತ್ತೇವೆ. ಉತ್ತಮ ಗ್ರಾಹಕ ವಿಮರ್ಶೆಗಳು ಮತ್ತು ರೇಟಿಂಗ್‌ಗಳಿಗಾಗಿ ನಾವು ಯಾವಾಗಲೂ ಪ್ರಯತ್ನಿಸುತ್ತೇವೆ.
ಚೆವಿಟ್ ವ್ಯಾಪಾರ-ಸಿದ್ಧರಾಗಿರುವ ದೃಷ್ಟಿಯಿಂದ, ನಮ್ಮ ವಿಧಾನವು, ವಿಶೇಷವಾಗಿ ದಿ ಬಿಗ್ ಬಿಲಿಯನ್ ಡೇಸ್ 2020 ರ ಸಮಯದಲ್ಲಿ, ಹೆಚ್ಚು ದಾಸ್ತಾನನ್ನು ಇಟ್ಟುಕೊಳ್ಳುವುದಾಗಿತ್ತು. ನಮ್ಮಲ್ಲಿ 20 ಲಕ್ಷಕ್ಕೂ ಹೆಚ್ಚು ಪಾದರಕ್ಷೆಗಳ ಸಂಗ್ರಹವಿದೆ ಮತ್ತು ಪ್ರತಿದಿನ ನಾವು 30,000-40,000 ವಸ್ತುಗಳನ್ನು ಚಲಾವಣೆಯಲ್ಲಿಡುತ್ತೇವೆ.
ಸುರಕ್ಷತೆ ಮೊದಲು
ನಾವು ಕೋವಿಡ್‌ಗೂ- ಸಹ ಸಿದ್ಧರಾಗಿದ್ದೇವೆ! ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿ, ನಾನು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿರಲಿಲ್ಲ: ನನ್ನ ಸಿಬ್ಬಂದಿಯ ಎಲ್ಲ ಸದಸ್ಯರು ಫೇಸ್ ಮಾಸ್ಕ್ ಜೊತೆ ಕೆಲಸಕ್ಕೆ ಬರಬೇಕು. ಪ್ರತಿ 1.5 ಗಂಟೆಗಳಿಗೊಮ್ಮೆ, ನಿಯೋಜಿತ ಸಿಬ್ಬಂದಿ ಸದಸ್ಯರೊಬ್ಬರು ಪ್ರತಿ ಫ್ಲೋರ್‌ನಲ್ಲಿನ ನೈರ್ಮಲ್ಯೀಕರಣವನ್ನು ನೋಡಿಕೊಳ್ಳುತ್ತಾರೆ. ನಮ್ಮ ಸಾನಿಟೈಸೇಶನ್ ಪ್ರೋಟೋಕಾಲ್‌ಗಳ ಲಾಗ್ ಅನ್ನು ಇರಿಸಿಕೊಳ್ಳಲು ಒಂದು ಟೈಮಿಂಗ್ ರಿಜಿಸ್ಟರ್ ನಮಗೆ ಸಹಾಯ ಮಾಡುತ್ತದೆ ಮತ್ತು ಸಿಬ್ಬಂದಿ ಕೆಲಸಕ್ಕೆ ಬರುವ ಮೊದಲು, ಅವರು ಊಟಕ್ಕೆ ಹೊರಡುವಾಗ ಮತ್ತು ಅವರು ಮನೆಗೆ ಹಿಂದಿರುಗಿದಾಗ ನಾವು ಆ ಪ್ರದೇಶಗಳನ್ನು ಸೋಂಕುರಹಿತಗೊಳಿಸುತ್ತೇವೆ. ನಮ್ಮ ಡಾಕ್ ಪ್ರದೇಶವನ್ನು ದಿನಕ್ಕೆ 3 ಬಾರಿ ಸ್ವಚ್ಛಗೊಳಿಸಲಾಗುತ್ತದೆ.
ಲಾಕ್‌ಡೌನ್ ಸಮಯದಲ್ಲಿ, ನಾವು ಖಂಡಿತವಾಗಿಯೂ ಮಾರಾಟದಲ್ಲಿ ಕುಸಿತವನ್ನು ನೋಡಿದ್ದೇವಾದರೂ ಆರ್ಥಿಕತೆಯು ತೆರೆದುಕೊಂಡಂತೆ ಮತ್ತು ಫ್ಲಿಪ್‌ಕಾರ್ಟ್‌ನ ಪ್ರತಿಕ್ರಿಯೆಗಳು ಮತ್ತು ಊಹೆಗಳೊಂದಿಗೆ, ನಾವು ಬೆಳವಣಿಗೆಯನ್ನು, ವಿಶೇಷವಾಗಿ ದಿ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕಾಗಿ, ನೋಡುತ್ತಿದ್ದೇವೆ. ಅದಕ್ಕಾಗಿಯೇ ಇತರ ಫ್ಲಿಪ್‌ಕಾರ್ಟ್ ಮಾರಾಟಗಾರರಿಗೆ ನನ್ನ ಸಲಹೆ ಹೀಗಿದೆ: ನೀವು ದಾಸ್ತಾನು ಸಂಗ್ರಹಿಸಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಅಕೌಂಟ್ ಮ್ಯಾನೇಜರ್ ಹೇಳುವುದನ್ನು ಕೇಳಿ ಮತ್ತು ಅವರಿಂದ ಕಲಿಯಿರಿ! </ em>
ವೈಯಕ್ತಿಕವಾಗಿ, ನನ್ನ ಕುಟುಂಬವು ಫ್ಲಿಪ್‌ಕಾರ್ಟ್ ಮತ್ತು ದಿ ಬಿಗ್ ಬಿಲಿಯನ್ ಡೇಸ್‌ಗಳ ಬಗ್ಗೆ ಬಹಳ ಉತ್ಸಾಹ ಹೊಂದಿದೆ. ನಾನು ಆಗಾಗ್ಗೆ ನನ್ನ ಜೀವನ ಮತ್ತು ಶಿಕ್ಷಣದ ಬಗ್ಗೆ ಯೋಚಿಸುತ್ತೇನೆ. ನಾನು ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಕಾಂ (ಆನರ್ಸ್) ಪದವಿ ಪಡೆದಾಗ, ನನ್ನ ಕುಟುಂಬವು ನನ್ನನ್ನು ಎಂಜಿನಿಯರಿಂಗ್ ಕೂಡ ಮಾಡುವಂತೆ ಮಾಡಿತು. ಆದರೆ ಆ ಎರಡೂ ಪದವಿಗಳು ನನಗಾಗಿ ಕೆಲಸ ಮಾಡಲಿಲ್ಲ – ಫ್ಲಿಪ್‌ಕಾರ್ಟ್ ಮಾರಾಟಗಾರನಾಗಿರುವುದು ಮಾತ್ರ ಉಪಯೋಗಕ್ಕೆ ಬಂದಿತು!