ನಿಮ್ಮ ಪ್ರೀತಿಪಾತ್ರರು ನಿಮಗೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್ ಅನ್ನು ಉಡುಗೊರೆಯಾಗಿ ನೀಡಿದ್ದರೆ, ಅಥವಾ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನೀವು ಅದನ್ನು ಗೆದ್ದಿದ್ದರೆ, ನೀವು ಹೆಚ್ಚಿನ ಶಾಪಿಂಗ್ ಮಾಡಬಹುದಾಗಿರುತ್ತದೆ! ನಿಮ್ಮ ದೊಡ್ಡ ಗೆಲುವನ್ನು ಅನುಭವಿಸುವಲ್ಲಿ ತೊಂದರೆ ಆಗುತ್ತಿದೆಯೆ? ನಿಮ್ಮ ಫ್ಲಿಪ್‌ಕಾರ್ಟ್ EGV ಬಳಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಸಂಗತಿಗಳು ಇಲ್ಲಿವೆ.
ನೀವು ಅನೇಕ ಫ್ಲಿಪ್‌ಕಾರ್ಟ್ ಸ್ಪರ್ಧೆಗಳನ್ನು ಆಡಿದ್ದರೆ ಮತ್ತು ಗೆದ್ದಿದ್ದರೆ ಅಥವಾ ಪ್ರೀತಿಪಾತ್ರರೊಬ್ಬರು ಸ್ವಲ್ಪ ಉದಾರ ಮನಸ್ಸು ತೋರುತ್ತಿದ್ದರೆ, ನೀವು ಬಹುಶಃ ಒಂದು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ವೋಚರ್ (ಅಥವಾ ಎರಡು!) ಖರ್ಚು ಮಾಡಲು ಅವಕಾಶವಿರಬಹುದು.
ಅದನ್ನು ಹೇಗೆ ರಿಡೀಮ್ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಫ್ಲಿಪ್‌ಕಾರ್ಟ್ EGV ಗಳನ್ನು ಬಳಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿಯೂ ಇಲ್ಲಿದೆ.
ಫ್ಲಿಪ್‌ಕಾರ್ಟ್ EGV ಗಳು ಇಷ್ಟು ರೋಮಾಂಚನ ಏಕೆ ಉಂಟುಮಾಡುತ್ತದೆ?
ಸಂಕ್ಷಿಪ್ತವಾಗಿ ಹೇಳುವುದಾದರೆ, EGV ಗಳು ಅಥವಾ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳು ನೀವು ಅಂಗಡಿಯಲ್ಲಿ ರಿಡೀಮ್ ಮಾಡುವ ವೋಚರ್ ಗಳಂತೆಯೇ ಇರುತ್ತವೆ. ಉದಾಹರಣೆಗೆ, ನೀವು ₹ 500 ಮೌಲ್ಯದ ಉಡುಗೊರೆ ಕಾರ್ಡ್ ಗೆದ್ದಿದ್ದರೆ, ನೀವು ₹ 500 ಮೌಲ್ಯದ ಶಾಪಿಂಗ್ ಮಾಡಬಹುದು ಮತ್ತು ಪಾವತಿಸಲು ಫ್ಲಿಪ್‌ಕಾರ್ಟ್ EGV ಗಳನ್ನು ಬಳಸಬಹುದು.
ಎಲ್ಲವೂ ವಿಜೇತರ ಪಾಲಿಗೆ ಸೇರಿದ್ದು – ನೀವು ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳನ್ನು ಹೇಗೆ ಬಳಸಬಹುದು
ನಿಮ್ಮ ಫ್ಲಿಪ್‌ಕಾರ್ಟ್ EGVಗಳನ್ನು ನೀವು ಇಟ್ಟುಕೊಂಡಿದ್ದರೆ ನೀವು ಅವುಗಳನ್ನು ಉತ್ತಮ ಬಳಕೆಗೆ ತರುವುದು ತುಂಬ ಸರಳ. ನೀವು ಮಾಡಬೇಕಾಗಿರುವುದಿಷ್ಟೆ, ಫ್ಲಿಪ್‌ಕಾರ್ಟ್‌ಗೆ ಲಾಗ್ ಇನ್ ಮಾಡಿ, ನೀವು ಖರೀದಿಸಲು ಬಯಸುವ ವಸ್ತುಗಳನ್ನು ಆಯ್ಕೆ ಮಾಡಿ ಮತ್ತು ಅವುಗಳನ್ನು ನಿಮ್ಮ ಕಾರ್ಟ್‌ಗೆ ಸೇರಿಸಿ. ನಂತರ, ನೀವು ಸಾಮಾನ್ಯವಾಗಿ ಮಾಡುವಂತೆ ‘ಪ್ರೊಸೀಡ್ ಟು ಪೇ’ ಕ್ಲಿಕ್ ಮಾಡಿ. ನಿಮ್ಮ ಪಾವತಿ ಆಯ್ಕೆಯಾಗಿ ಕ್ಯಾಶ್ ಆನ್ ಡೆಲಿವರಿ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ಆಯ್ಕೆ ಮಾಡುವ ಬದಲು, ‘ಪೇ ಬೈ ಗಿಫ್ಟ್ ಕಾರ್ಡ್’ ಕ್ಲಿಕ್ ಮಾಡಿ. ಫ್ಲಿಪ್‌ಕಾರ್ಟ್ EGVಗಳು ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್‌ನಂತೆಯೇ 16-ಅಂಕಿಯ ಕಾರ್ಡ್ ನಂಬರ್ ಅನ್ನು ಮತ್ತು 6-ಅಂಕಿಯ ಪಿನ್ ಅನ್ನು ಹೊಂದಿರುತ್ತವೆ. ಈ ಎರಡೂ ನಂಬರ್ ಗಳು ನಿಮಗೆ EGV ವಿವರಗಳೊಂದಿಗೆ ಇಮೇಲ್‌ನಲ್ಲಿ ಸಿಗುತ್ತದೆ. ನಿಮ್ಮ ಆರ್ಡರ್ ಅನ್ನು ಪಾವತಿಸಲು ಅವುಗಳನ್ನು ನಮೂದಿಸಿ.
ನಿಮ್ಮ ಒಟ್ಟು ಮೊತ್ತವು ಫ್ಲಿಪ್‌ಕಾರ್ಟ್ EGVಗಳ ಮೌಲ್ಯವನ್ನು ಮೀರಿದರೆ, ನಿಮ್ಮ ಆಯ್ಕೆಯ ಪಾವತಿ ವಿಧಾನದ ಮೂಲಕ ಬಾಕಿ ಹಣವನ್ನು ಪಾವತಿಸಿ. ಇದು ಅಷ್ಟು ಸುಲಭ.
ಬಹಳಷ್ಟು ಫ್ಲಿಪ್‌ಕಾರ್ಟ್ EGVಗಳು ಸಿಕ್ಕಿದೆಯೇ? ಅವುಗಳ ಟ್ರಾಕ್ ಅನ್ನು ಹೇಗೆ ಇಡುವುದು ಎನ್ನುವುದು ಇಲ್ಲಿದೆ
ನೀವು ಅದೃಷ್ಟಶಾಲಿಯಾಗಿದ್ದೀರಿ ಮತ್ತು ಅನೇಕ ಫ್ಲಿಪ್‌ಕಾರ್ಟ್ EGVಗಳನ್ನು ಹೊಂದಿದ್ದೀರಿ ! ಒಳ್ಳೆಯದು. ತುಂಬ ವೋಚರ್ ಗಳನ್ನು ಬಳಸಿಕೊಂಡು ನೀವು ಒಂದು ದೊಡ್ಡ ಖರೀದಿ ಮಾಡಲು ಬಯಸಿದರೆ, ನೀವು ಖಂಡಿತವಾಗಿ ಮಾಡಬಹುದು.
ನಿಮ್ಮ ಎಲ್ಲಾ ಫ್ಲಿಪ್‌ಕಾರ್ಟ್ EGVಗಳನ್ನು ಬಳಸಲು ನೀವು ಬಯಸಿದರೆ, ಪರದೆಯ ಮೇಲಿನ ಎಡಭಾಗದಲ್ಲಿರುವ ಡ್ರಾಪ್ ಡೌನ್ ಮೆನು ಕ್ಲಿಕ್ ಮಾಡಿ -> ಗಿಫ್ಟ್ ಕಾರ್ಡ್ಕ್ಲಿಕ್ ಮಾಡಿ -> ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಾಲೆಟ್ ಗೆ ಗಿಫ್ಟ್ ಕಾರ್ಡ್ ಸೇರಿಸಿಕ್ಲಿಕ್ ಮಾಡಿ. ಗಿಫ್ಟ್ ಕಾರ್ಡ್ ನಂಬರ್ ಮತ್ತು ಗಿಫ್ಟ್ ಕಾರ್ಡ್ ಪಿನ್ ಗಾಗಿ ನಿಮ್ಮ ಫ್ಲಿಪ್‌ಕಾರ್ಟ್ EGVಗಳ ಇಮೇಲ್ ಪರಿಶೀಲಿಸಿ -> ವಿವರಗಳನ್ನು ನಮೂದಿಸಿ -> ಅಪ್ಲೈ ಕ್ಲಿಕ್ ಮಾಡಿ, ಮತ್ತು ನೀವು ಮುಗಿಸಿದ್ದೀರಿ!
ಈಗ ನೀವು ನಿಮ್ಮ ಉಡುಗೊರೆ ಕಾರ್ಡ್ ಅನ್ನು ನಿಮ್ಮ ವಾಲೆಟ್ ಗೆ ಸೇರಿಸಿದ್ದೀರಿ, ಮುಂದಿನ ಬಾರಿ ನೀವು ಫ್ಲಿಪ್‌ಕಾರ್ಟ್‌ನಲ್ಲಿ ಏನನ್ನಾದರೂ ಖರೀದಿಸಿದಾಗ ಈ ಪಾವತಿ ವಿಧಾನವನ್ನು ಸರಳವಾಗಿ ಬಳಸಿ.
ಬಹು ಖರೀದಿಗಳಿಗಾಗಿ ಒಂದು ಫ್ಲಿಪ್‌ಕಾರ್ಟ್ EGVಗಳನ್ನು ಬಳಸಿ
ಉದಾಹರಣೆಗೆ, ನಿಮ್ಮ ಫ್ಲಿಪ್‌ಕಾರ್ಟ್ EGV ಮೌಲ್ಯವು ₹ 500 ಆಗಿದ್ದರೆ ಮತ್ತು ನೀವು ₹ 300 ಮೌಲ್ಯದ ಪರ್ಫ್ಯೂಮ್ ಅನ್ನು ಮಾತ್ರ ಖರೀದಿಸಲು ಬಯಸಿದರೆ, ಚಿಂತಿಸಬೇಡಿ. ನೀವು ಎಲ್ಲವನ್ನೂ ಒಂದೇ ಬಾರಿಗೆ ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಬ್ಯಾಲೆನ್ಸ್ ₹200 ಸುರಕ್ಷಿತ ಮತ್ತು ಭದ್ರವಾಗಿದೆ. ಅಂತೆಯೇ, ನೀವು ಆರ್ಡರ್ ಅನ್ನು ನೀಡಿ ಅದನ್ನು ರದ್ದುಗೊಳಿಸಿದರೆ, ಮೊತ್ತವು ನೇರವಾಗಿ ನಿಮ್ಮ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗೆ ಹೋಗುತ್ತದೆ.
ನಿಮ್ಮ ಫ್ಲಿಪ್‌ಕಾರ್ಟ್ EGV ಬ್ಯಾಲೆನ್ಸ್ ಪರಿಶೀಲಿಸಿ
ಫ್ಲಿಪ್‌ಕಾರ್ಟ್‌ನಲ್ಲಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ನಿಮ್ಮ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಸ್ಕ್ರೀನ್ ಮೇಲಿನ ಎಡಭಾಗದಲ್ಲಿರುವ ಡ್ರಾಪ್ ಡೌನ್ ಮೆನುವಿನಿಂದ, ‘ಗಿಫ್ಟ್ ಕಾರ್ಡ್‌ಗಳು’ ಕ್ಲಿಕ್ ಮಾಡಿ. ನಂತರ, ‘ಚೆಕ್ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್’ ಕ್ಲಿಕ್ ಮಾಡಿ. ನಿಮ್ಮ ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್ ನಂಬರ್ ಮತ್ತು ಪಿನ್ ಅನ್ನು ನಮೂದಿಸಿ, ಅಷ್ಟೆ! ನೀವು ಖರ್ಚು ಮಾಡಬಹುದಾದ ಬಾಕಿ ಮೊತ್ತವನ್ನು ನೀವು ನೋಡಬಹುದು.
ನಿಮ್ಮ ಕಾರ್ಟ್ ಅನ್ನು ಕ್ಯುರೇಟ್ ಮಾಡಲು ಮತ್ತು ಇನ್ನೂ ಕೆಲವು ಶಾಪಿಂಗ್ ಮಾಡಲು ಫ್ಲಿಪ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳನ್ನು ನೀಡಿದ ದಿನಾಂಕದಿಂದ ನಿಮಗೆ 12 ತಿಂಗಳವರೆಗೆ ಸಮಯಾವಕಾಶವಿದೆ. ಆದ್ದರಿಂದ
ಫ್ಲಿಪ್‌ಕಾರ್ಟ್‌ಗೆ ಲಾಗ್ ಇನ್ ಮಾಡಿ ಮತ್ತು ಯಾವುದೇ ಅಳುಕಿಲ್ಲದೇ, ನಿಮಗೆ ತೃಪ್ತಿಯಾಗುವಷ್ಟು ಶಾಪಿಂಗ್ ಮಾಡಿ!
ನವೀಕರಿಸಿದ FAQ ಅನ್ನು ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್ ಗಳು