ಗುಣಮಟ್ಟ? ಪರೀಕ್ಷಿಸಲಾಗಿದೆ! ಫ್ಲಿಪ್ ಕಾರ್ಟ್ ನ 2GUD ನವೀಕರಣಗೊಂಡ ಶಾಪಿಂಗ್ ನಲ್ಲಿ ಮತ್ತೆ ವಿಶ್ವಾಸ ಮೂಡುವಂತೆ ಮಾಡುತ್ತದೆ

Read this article in हिन्दी | English | বাংলা | தமிழ் | ગુજરાતી | मराठी

ನೀವು ಮೇಲಿಂದ ಮೇಲೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಅಪ್ ಗ್ರೇಡ್ ಮಾಡಲು ಬಯಸಿದರೆ, ಲ್ಯಾಪ್ ಟಾಪ್ ಬದಲಾಯಿಸಲು ಇಷ್ಟಪಟ್ಟರೆ, ಅಥವಾ ವಸ್ತುವೊಂದು ಒಳ್ಳೆಯ ಬೆಲೆಗೆ ಸಿಗುತ್ತಿದ್ದರೆ ಖರೀದಿಸಲೇಬೇಕು ಎನಿಸುತ್ತಿದ್ದರೆ, ಫ್ಲಿಪ್ ಕಾರ್ಟ್ ನ ಹೊಚ್ಚಹೊಸ ಇ-ಕಾಮರ್ಸ್ ವೇದಿಕೆ 2GUD ನಿಮಗೆ ತಕ್ಕುದಾಗಿದೆ . 2GUD ನ ನವೀಕರಣಗೊಳಿಸಿದ ಸರಕುಗಳು ಹೊಸ ಸರಕುಗಳಷ್ಟೇ ಉತ್ತಮವಾಗಿರುತ್ತವೆ - ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿರುತ್ತದೆ ಮತ್ತು ಅವು ತಮ್ಮದೇ ಆದ ವಾರಂಟಿ ಹೊಂದಿರುತ್ತವೆ. ಕುತೂಹಲ ಹೆಚ್ಚಾಯಿತೆ? 2GUD ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ಅದನ್ನು ನಿಮ್ಮ ಫೋನ್ ನಲ್ಲಿ ಈಗಲೇ ಬುಕ್ ಮಾರ್ಕ್ ಮಾಡಿ ಏನಿದೆ ಎಂಬುದನ್ನು ಖುದ್ದಾಗಿ ನೋಡಿ.

2gud

ವೀಕರಿಸಿದ ಉತ್ಪನ್ನಗಳನ್ನು ಖರೀದಿಸುವುದು ಯಾವಾಗಲೂ ತಲೆನೋವಿನ ಕೆಲಸ – ಅವುಗಳ ಗುಣಮಟ್ಟದ ಬಗ್ಗೆ ಸಂದೇಹಗಳು, ನೀವು ಎಲ್ಲಿ ಅಗತ್ಯಕ್ಕಿಂತ ಹೆಚ್ಚು ಬೆಲೆ ಕೊಡುತ್ತಿದ್ದೀರೋ ಎಂಬ ಚಿಂತೆ, ಅಥವಾ ಆ ಉತ್ಪನ್ನವು ಉತ್ತಮವಾದದ್ದೇ ಎಂಬ ಪ್ರಶ್ನೆ, ಇಂತಹ ಅನೇಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬಂದು ಹೋಗುತ್ತವೆ. ಈ ಎಲ್ಲ ಸಂಗತಿಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದ್ದರೆ ಮಾತ್ರ ನೀವು ಯಾವುದೇ ಚಿಂತೆಯಿಲ್ಲದೇ, ನಿಮಗಿಷ್ಟವಾದ ವಸ್ತುಗಳನ್ನು, ಅದೂ ನಂಬಲಸಾಧ್ಯವಾದ ಬೆಲೆಗೆ ಖರೀದಿಸಿ ಆನಂದಿಸಲು ಸಾಧ್ಯವಾಗುವುದು. 2GUD ಮಾತು ನಂಬುವುದು ಹೇಗೆ ಎನ್ನುತ್ತೀರಾ?

”2gud"

ಫ್ಲಿಪ್ ಕಾರ್ಟ್ ನ 2GUD ನವೀಕರಿಸಿದ ಸರಕುಗಳ ಶಾಪಿಂಗ್ ಅನ್ನು ಬೇರೆ ಹಂತಕ್ಕೆ ಒಯ್ಯುತ್ತದೆ. ಪ್ರತಿಯೊಂದು ವಸ್ತುವನ್ನು ವೆಬ್ ಸೈಟ್ ನಲ್ಲಿ ತೋರಿಸುವ ಮುಂಚೆ, ಅದನ್ನು ಕಾಳಜಿಪೂರ್ವಕವಾಗಿ ನವೀಕರಿಸಿ, ಅತ್ಯುತ್ತಮವಾಗಿ ಅಲ್ಲದಿದ್ದರೂ ಉತ್ತಮವಾಗಿ ಕಾಣುವಂತೆ ಮಾಡಿ ನಿಮಗಾಗಿ ಪ್ರಸ್ತುತಪಡಿಸಲಾಗುತ್ತದೆ. ನಿರಾಶೆಗಳೂ ಇಲ್ಲ, ದೋಷಗಳೂ ಇಲ್ಲ. ಕೇವಲ ನಿಮ್ಮ ಬಜೆಟ್ ಗೆ ತಕ್ಕ ಮತ್ತು ಸುಲಭವಾಗಿ ದೊರೆಯುವ ಉತ್ತಮ ಗುಣಮಟ್ಟದ ಉತ್ಪನ್ನಗಳು ನಿಮಗಾಗಿ. ಇನ್ನಷ್ಟು ಸಿಹಿ ಸುದ್ದಿ ಏನಂದರೆ, 2GUD ಫ್ಲಿಪ್ ಕಾರ್ಟ್ ಉದ್ಯಮವಾಗಿದ್ದು, ನೀವಿದನ್ನು ನಂಬಬಹುದು ಮತ್ತು ನಿಮಗೆ ಅನುಕೂಲಕರ ಅನುಭವ ಸಿಗುವುದು ಖಚಿತ.

ಇದನ್ನೆಲ್ಲ ಕೇಳಿ, ಈಗಲೇ ಖರೀದಿಸಲು ಶುರುಮಾಡಬೇಕು ಎಂದು ಕಾತುರರಾಗಿದ್ದರೆ, ನೀವು ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ.

 

2GUD ನಲ್ಲಿರುವ ಕೊಡುಗೆಗಳೇನು?

2GUD ಕೊಡುಗೆಗಳ ಮೊದಲ ಸಾಲಿನಲ್ಲಿ ನವೀಕರಿಸಿದ ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ವಿದ್ಯುತ್ ಉಪಕರಣಗಳ ಭಂಡಾರವಿದೆ. ಶೀಘ್ರದಲ್ಲೇ ಟೆಲಿವಿಷನ್ ಗಳು, ಟ್ಯಾಬ್ಲೆಟ್ ಗಳು, ಮತ್ತು ಅಪ್ಲಯನ್ಸ್ ಕೂಡ ಲಭ್ಯವಾಗಲಿವೆ. ಒಟ್ಟಾರೆ, ನೀವು 400 ಕ್ಕಿಂತ ಅಧಿಕ ವರ್ಗಗಳಿಂದ ನವೀಕರಿಸಿದ ಉತ್ಪನ್ನಗಳನ್ನು ಶೋಧಿಸುವುದು ಸಾಧ್ಯವಾಗುತ್ತದೆ.

”2gud"

ಅತ್ಯುತ್ತಮ ಬೆಲೆಗೆ ಸೂಕ್ತ ಗುಣಮಟ್ಟ

ಹಿಂದೆ ಬೇರೆಯವರ ಸ್ವತ್ತಾಗಿದ್ದ ‌ಉತ್ಪನ್ನವನ್ನು ಖರೀದಿಸುವಾಗ ಮೋಸ ಹೋಗಿಬಿಟ್ಟರೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ, ಇನ್ನು ಮುಂದೆ ಭಯ ಪಡುವ ಅಗತ್ಯವಿಲ್ಲ. 2GUD ನಲ್ಲಿರುವ ಪ್ರತಿಯೊಂದು ಉತ್ಪನ್ನವೂ ಉತ್ತಮ ಸ್ಥಿತಿಯಲ್ಲಿರುತ್ತದೆ ಮತ್ತು ನಿಮ್ಮ ನಿರೀಕ್ಷೆಗೆ ತಕ್ಕಂತಿರುತ್ತದೆ. ಫ್ಲಿಪ್ ಕಾರ್ಟ್ ನದ್ದೇ ಆದ F1 ಇನ್ಫೋ ಸಲ್ಯೂಷನ್ಸ್ ಉತ್ಪನ್ನಗಳನ್ನು ನವೀಕರಿಸುತ್ತದೆ ಮತ್ತು ಪ್ರತಿಯೊಂದು ಉತ್ಪನ್ನದ ಗುಣಮಟ್ಟವನ್ನು 40 ವಿವಿಧ ಅಂಶಗಳ ಮೂಲಕ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ.

ನೀವು ಒಂದು ಸ್ಮಾರ್ಟ್ ಫೋನ್ ಖರೀದಿಸಬೇಕೆಂದು 2GUD ಗೆ ಭೇಟಿ ನೀಡುತ್ತೀರಿ ಎಂದುಕೊಳ್ಳೋಣ. ನೀವು ಯಾವಾಗಲೂ ಖರೀದಿಸಬೇಕು ಎಂದು ಕನಸು ಕಾಣುತ್ತಿದ್ದ ಮಾಡಲ್ ನಿಮಗೆ ಸಿಕ್ಕಿದೆಯಾದರೂ ಅದನ್ನು ನಿಮ್ಮ ಕಾರ್ಟ್ ಗೆ ಸೇರಿಸುವುದೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದೀರಿ. ನಿಮ್ಮ ಈ ಹಿಂಜರಿಕೆಯನ್ನು ನಿವಾರಿಸುವ ಸಂಗತಿಯೊಂದು ಇಲ್ಲಿದೆ ನೋಡಿ: ಅತ್ಯುತ್ಕೃಷ್ಟ ಮಾನದಂಡಗಳನ್ನು ಅನುಸರಿಸುವ ಫ್ಲಿಪ್ ಕಾರ್ಟ್ ತಜ್ಞರು ಸ್ಮಾರ್ಟ್‌ಫೋನಿನ ಕ್ಯಾಮರಾ, ಸ್ಕ್ರೀನ್, ಬ್ಯಾಟರಿ ಕಾರ್ಯಕ್ಷಮತೆ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಒಳಗೊಂಡಂತೆ 40 ಅಂಶಗಳನ್ನು ಪರೀಕ್ಷಿಸುತ್ತಾರೆ!

ಆದ್ದರಿಂದ ಈ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಉತ್ಪನ್ನಗಳು ಮಾತ್ರ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತವೆ. ಇನ್ನೂ ಮುಖ್ಯವಾದ ವಿಷಯವೆಂದರೆ 2GUD ಶಾಪಿಂಗ್ ನೀವು ನೀಡುವ ಬೆಲೆಗೆ ತಕ್ಕ ಅನುಭವ ನೀಡುತ್ತದೆ. ಇನ್ನೂ ಬಾಕ್ಸ್ ನಿಂದ ಹೊರತೆಗೆದಿರದ ಮತ್ತು ಹೊಚ್ಚಹೊಸ ಉತ್ಪನ್ನಗಳ ಮೇಲೆ ಕೂಡ ರಿಯಾಯಿತಿಗಳನ್ನು ಪಡೆಯುತ್ತೀರಿ.

ಗುಣಮಟ್ಟಕ್ಕೆ ಆದ್ಯತೆ

ಸ್ಮಾರ್ಟ್ ಗ್ರೇಡಿಂಗ್ ಸಿಸ್ಟಮ್ ನಿಂದಾಗಿ 2GUD ನಲ್ಲಿರುವ ಪ್ರತಿಯೊಂದು ಉತ್ಪನ್ನದ ನಿಖರವಾದ ಪರಿಸ್ಥಿತಿ ನಿಮಗೆ ಗೊತ್ತಾಗುತ್ತದೆ. ಉತ್ಪನ್ನಗಳನ್ನು ಹೇಗೆ ವಿಂಗಡಿಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

2gud

Like New: ಇವು ಈಗಷ್ಟೇ ಬಾಕ್ಸ್ ನಿಂದ ಹೊರ ತೆಗೆಯಲಾದ ಹೊಚ್ಚ ಹೊಸ ಉತ್ಪನ್ನಗಳು. Like New ಎಂದು ಗುರುತಿಸಲಾದ ಉತ್ಪನ್ನವು ಎಂದೂ ಉಪಯೋಗಿಸಿರದ, ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ತಜ್ಞರಿಂದ ಪ್ರಮಾಣೀಕರಿಸಲಾದ ಉತ್ಪನ್ನವಾಗಿರುತ್ತದೆ.

2gud

ಅದ್ಭುತ: ಈ ರೇಟಿಂಗ್ ನಿಮಗೆ ತಿಳಿಸುವುದೇನೆಂದರೆ, ಈ ವಸ್ತುವನ್ನು ಕಡಿಮೆ ಉಪಯೋಗಿಸಲಾಗಿದೆ, ಅದು ಬ್ರಾಂಡ್ ವಾರಂಟಿ ಹೊಂದಿರುತ್ತದೆ, ಅದರ ಕಾರ್ಯಕ್ಷಮತೆ ಪ್ರಮಾಣಿತವಾಗಿದೆ, ಅದರ ಮೇಲೆ ಗೀರುಗಳಿರುವುದಿಲ್ಲ, ಕಂಪನಿಯಿಂದಲೇ ಅದಕ್ಕೆ 3-ತಿಂಗಳ ವಾರಂಟಿ ಇದೆ, ಮತ್ತು ಅದನ್ನು ಸುಲಭವಾಗಿ ಮರಳಿಸಬಹುದು!

2gud

ಅತ್ಯುತ್ತಮ: ಈ ರೇಟಿಂಗ್ ನಿಮಗೆ ತಿಳಿಸುವುದೇನೆಂದರೆ, ಈ ವಸ್ತುವನ್ನು ಕಡಿಮೆ ಸಲ ಉಪಯೋಗಿಸಲಾಗಿದೆ, ಅದರ ಕಾರ್ಯಕ್ಷಮತೆ ಪ್ರಮಾಣಿತವಾಗಿದೆ, ಮತ್ತು ನಿರ್ಲಕ್ಷಿಸಬಹುದಾದಷ್ಟು ಗೀರುಗಳನ್ನು ಹೊಂದಿದೆ. ಎಲ್ಲದಕ್ಕೂ ಮುಖ್ಯ ಸಂಗತಿ ಎಂದರೆ ಉತ್ಪನ್ನದ ಕಾರ್ಯಕ್ಷಮತೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಾಗಿದೆ ಮತ್ತು ಚೆನ್ನಾಗಿ ಪರೀಕ್ಷಿಸಲಾಗಿದೆ.

ಫ್ಲಿಪ್ ಕಾರ್ಟ್ ನ ಉತ್ತಮ ಗುಣಗಳಿಂದ ತುಂಬಿದೆ

ನೀವು ಮಾಡಬೇಕಾಗಿರುವುದಿಷ್ಟೆ, 2GUD ನಲ್ಲಿ ಖಾತೆ ಹೊಂದಿರದಿದ್ದರೆ, ಒಂದು ಖಾತೆಯನ್ನು ಸೃಷ್ಟಿಸಿ ಅಥವಾ ನಿಮ್ಮ ಫ್ಲಿಪ್ ಕಾರ್ಟ್ ಲಾಗಿನ್ ಮತ್ತು ಪಾಸ್ ವರ್ಡ್ ನಿಂದ ಸೈನ್ ಇನ್ ಮಾಡಿ. ಆಮೇಲೆ ಎಲ್ಲವೂ ಸರಳ ಸುಲಭ. ನಿಮಗೆ ಬೇಕಾದ ಉತ್ಪನ್ನವನ್ನು ಹುಡುಕಿ. ಪ್ರತಿಯೊಂದು ಉತ್ಪನ್ನಕ್ಕೆ ಸಂಬಂಧಿಸಿದ ಗ್ರೇಡಿಂಗ್, ವಾರಂಟಿ, ಮುಖ್ಯ ಲಕ್ಷಣಗಳು, ವಸ್ತು ನಿಮ್ಮನ್ನು ತಲಪುವ ವೇಳೆ, ಹಣ ಪಾವತಿಸುವ ಆಯ್ಕೆಗಳು ಮತ್ತು ಇನ್ನೂ ಅನೇಕ ಅಂಶಗಳನ್ನು ನೀವು ನೋಡಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲದೇ, ಅದೇ ತರಹದ ಮಾಡಲ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಹೊಸ ಉತ್ಪನ್ನವಾಗಿ ಖರೀದಿಸಬೇಕಾದರೆ ಅದರ ಬೆಲೆ ಎಷ್ಟಾಗುತ್ತದೆ ಎಂಬುದನ್ನು ಕೂಡ ನೀವು ನೋಡಬಹುದು. ನಿಮ್ಮ ಕಾರ್ಟ್ ನಲ್ಲಿ ಉತ್ಪನ್ನಗಳನ್ನು ತುಂಬಿದ ನಂತರ ನೀವು ಚೆಕ್ ಔಟ್ ಮಾಡಬಹುದು ಮತ್ತು ನಿಮಗಿಷ್ಟವಾದ ರೀತಿಯಲ್ಲಿ ಹಣ ಪಾವತಿಸಬಹುದು. ನೀವು ಇ ಎಮ್ ಐ ಗಳ ಮೂಲಕ ಕೂಡ ಪಾವತಿಸಬಹುದು!

2GUD ಗುಣಮಟ್ಟದ ಭರವಸೆ

ಉತ್ಪನ್ನಗಳನ್ನು ನವೀಕರಿಸಿದ ಮಾತ್ರಕ್ಕೆ ಅವುಗಳ ಭವ್ಯತೆ ಮೂಲೆ ಗುಂಪಾಯಿತು ಎಂದರ್ಥವಲ್ಲ. ಫ್ಲಿಪ್ ಕಾರ್ಟ್ ಈ ವಿಷಯವನ್ನು ಚೆನ್ನಾಗಿ ಅರಿತಿದ್ದು, ಅದಕ್ಕಾಗಿಯೇ ಪ್ರತಿಯೊಂದು ಉತ್ಪನ್ನವನ್ನು ಪರಿಶೀಲಿಸುವ ತಜ್ಞರ ತಂಡವನ್ನು ಹೊಂದಿದೆ. ಇನ್ನೂ ಹೇಳುವುದಾದರೆ, ನಿಮಗೆ ಗುಣಮಟ್ಟದ ಉತ್ಪನ್ನ ದೊರೆಯುವಂತೆ ಮಾಡಲು ಅದರ ಗ್ರೇಡಿಂಗ್ ವ್ಯವಸ್ಥೆ ಪೂರ್ತಿ ಪಾರದರ್ಶಕವಾಗಿದೆ. ಇದನ್ನು ಬಲಪಡಿಸುವುದಕ್ಕಾಗಿ ಬ್ರಾಂಡ್ ವಾರಂಟಿ ಹೊಂದಿರದ ಉತ್ಪನ್ನಗಳಿಗಾಗಿ ಕೂಡ ಫ್ಲಿಪ್ ಕಾರ್ಟ್ ವಾರಂಟಿ ನೀಡುತ್ತದೆ. ದೇಶದಾದ್ಯಂತ ಹರಡಿಕೊಂಡಿರುವ ನಮ್ಮ ಸೇವಾ ಕೇಂದ್ರಗಳಿಂದಾಗಿ ನೀವು ಎದುರಿಸುವ ಯಾವುದೇ ಸಮಸ್ಯೆಗೆ ತಕ್ಷಣ ಪರಿಹಾರ ಪಡೆಯುವಿರಿ.

ಶಾಪಿಂಗ್ ಪ್ರಾರಂಭಿಸಿ, ಈಗಲೇ!

2gud

2GUD ನ ಪ್ರಾಮಾಣಿಕ ಕೆಲಸಗಾರರು ಅದರ ಪ್ರಯೋಜನಗಳನ್ನು ನಿಮಗೆ ತಲುಪಿಸುವ ಉತ್ಸಾಹದೊಂದಿಗೆ ಇ-ಕಾಮರ್ಸ್ ವೆಬ್ ಸೈಟ್ ಪ್ರಾರಂಭಿಸಿದ್ದು, ಅದನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದಾಗಿದೆ. ಶೀಘ್ರದಲ್ಲೇ ನೀವು ಅಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಲ್ಲಿ ಆಪ್ ಮೂಲಕ ಮತ್ತು ನಿಮ್ಮ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ನಲ್ಲಿ ಕೂಡ ಖರೀದಿಸಬಹುದು.

ನೀವು ನವೀಕರಿಸಲಾದ ಉತ್ಪನ್ನಗಳನ್ನು ಖರೀದಿಸುವ ವೇಳೆ ಜಾಹೀರಾತುಗಳಲ್ಲಿ ಹುಡುಕುವುದು ಅಥವಾ ಒಳ್ಳೆಯ ಬೆಲೆಗಾಗಿ ಅವುಗಳ ಮಾಲೀಕರೊಂದಿಗೆ ಚೌಕಾಸಿ ಮಾಡುವ ಅಗತ್ಯ ಇನ್ನಿಲ್ಲ. 2GUD ನಲ್ಲಿ ಸೂಕ್ತ ಬೆಲೆ ದೊರೆಯುತ್ತದೆ ಮತ್ತು ಫ್ಲಿಪ್ ಕಾರ್ಟ್ ಭರವಸೆಯ ಗುಣಮಟ್ಟ ಸಿಗುತ್ತದೆ. ಆದ್ದರಿಂದ ನೀವು ಬ್ಲೂಟೂತ್ ಬೋಸ್ ಸ್ಪೀಕರ್ ಅಥವಾ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8 ಖರೀದಿಸುವ ಇರಾದೆ ಹೊಂದಿರಬಹುದು, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಬಿಟ್ಟುಬಿಡಿ ಮತ್ತು ಹೊಸದನ್ನು ಖರೀದಿಸಲು ಶಾಪಿಂಗ್ ಶುರು ಮಾಡಿ!


ಇನ್ನೂ ಓದಿ: ’ನವೀಕರಿಸಿದ’ ಎಂಬುದನ್ನು ‌ಒಳ್ಳೆಯ ಪದ ಎಂದು ತೋರಿಸುವುದು – 2GUD ಕಥೆ/a>

 

Enjoy shopping on Flipkart