ಗುಜರಾತ್‌ನಲ್ಲಿ ಓರ್ವ ಫ್ಲಿಪ್ಕಾರ್ಟ್‌ ಸಮರ್ಥ್‌ನ ಮಾರಾಟಗಾರ ರಾಜಿಮಾಡಿಕೊಳ್ಳದ ಗುಣಮಟ್ಟದಿಂದ ಯಶಸ್ಸನ್ನು ಹೆಣೆಯುತ್ತಾರೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಯಂತ್ರಗಳು ಹೇಳಿದ್ದನ್ನು ಮಾತ್ರ ಮಾಡುತ್ತವೆ, ಆದರೆ ಕುಶಲಕರ್ಮಿಗಳು ಪ್ರತಿಯೊಂದು ದಾರ, ಪ್ರತಿಯೊಂದು ಹೊಲಿಗೆಯನ್ನು ಮಾಡುವಾಗಲೂ ಅದಕ್ಕೆ ತಮ್ಮ ಕೌಶಲ್ಯವನ್ನು ಸೇರಿಸುತ್ತಾರೆ ಎಂದು ಗುಜರಾತ್‌ನ ಸೂರತ್‌ಗೆ ಸೇರಿದ ಫ್ಲಿಪ್ಕಾರ್ಟ್‌ ಮಾರಾಟಗಾರ ವಿಜಯ್‌ ಭಾಯ್‌ ಹೇಳುತ್ತಾರೆ. ತಮ್ಮ ಕಛೇರಿಯಲ್ಲು ಕುಳಿತು ಅವರು ವಿವಿಧ ಹರಹಿನ ಸೂಕ್ಷ್ಮವಾದ ಕಸೂತಿ ಹಾಕಿದ ಸೀರಗಳನ್ನು ಮಾಡುವ ಪ್ರಕ್ರಿಯೆಯ ಬಗ್ಗೆ ನಮಗೆ ವಿವರಿಸುತ್ತಾರೆ; ಮತ್ತು, ಅವರ ವ್ಯಾಪಾರ ಸೂರತ್‌ನಲ್ಲಿ ಒಂದು ಅಂಗಡಿಯಿಂದ ಈಗ ಫ್ಲಿಪ್ಕಾರ್ಟ್‌ನ ಮೂಲಕ ದೇಶದಾದ್ಯಂತ ಬೇಡಿಕೆಗಳನ್ನು ರವಾನಿಸುವುದರ ಬಗ್ಗೆ ವಿವರಿಸುತ್ತಾರೆ. ಇದೆಲ್ಲವನ್ನೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಡೆಸಿದ್ದಾರೆ.

Gujarat

ಈ ಕತೆಯಲ್ಲಿ ಗುಜರಾತ್‌ನ ಸೂರತ್‌ ನಗರದ ಫ್ಲಿಪ್ಕಾರ್ಟ್‌ ಮಾರಾಟಗಾರ ವಿಜಯ್‌ ಭಾಯ್‌ ಸ್ಥಳೀಯ ಕುಶಲಕರ್ಮಿಗಳನ್ನು ಸಬಲೀಕರಿಸಿದರು ಎಂದು ಓದಿ; ಅವರು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಭಾರತದ ಪೂರ್ತಿ ವ್ಯಾಪಿಸಿರುವ ಮಾರುಕಟ್ಟೆಗೆ ಮಾರಲು ಸಹಾಯಮಾಡಿದರು.

ನಾನು ಮನೆಯನ್ನೂ ಖರೀದಿಸಬೇಕು, ಗಾಡಿಯನ್ನೂ ಕೊಂಡುಕೊಳ್ಳಬೇಕು, ಸುತ್ತಾಡಲೂ ಹೇಗಬೇಕು,” ಎಂದುವಿಜಯ್‌ ಭಾಯ್‌, ಗುಜರಾತ್‌ನ ಸೂರತ್‌ ನಗರದ ಫ್ಲಿಪ್ಕಾರ್ಟ್‌ ಮಾರಾಟಗಾರ ಹೇಳುತ್ತಾರೆ. ವಿಜಯ್‌ ಭಾಯ್‌ ಸೂರತ್‌ನಲ್ಲಿ ತಮ್ಮ ತಂದೆ, ತಾಯಿ, ಹೆಂಡತಿ ಮತ್ತು ಮೂರು ವರ್ಷದ ಮಗನ ಜೊತೆ ವಾಸಿಸುತ್ತಿದ್ದಾರೆ. ವ್ಯಾಪಾರಿಗಳ ಕುಟುಂಬಕ್ಕೆ ಸೇರಿದ ಅವರು ಅದರ ಬಗ್ಗೆ ಗಾಢವಾದ ಅನುರಕ್ತಿಯೊಂದಿಗೆ ಬೆಳೆದರು. ಅವರ ತಂದೆ ವಜ್ರದ ವ್ಯಾಪರ ನಡೆಸುತ್ತಿದ್ದರು, ಆದರೆ ವಿಜಯ್‌ ತಾವೇ ಏನನ್ನಾದರೂ ಮಾಡಲು ಬಯಸಿದರು.

ಅವರ ಕೆಲವು ಸ್ನೇಹಿತರು ವಸ್ತ್ರೋದ್ಯಮದಲ್ಲಿದ್ದರು. ಆ ಉತ್ಪನ್ನಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅಕ್ಷರಶಃ ಅವರ ಜೊತೆ ಸೇರಿಕೊಳ್ಳಲು ನಿರ್ಧರಿಸಿದರು. ಜೊತೆಗೆ, ಅವುಗಳನ್ನು ನವೀಕರಿಸಬಹುದು ಮತ್ತು ತಮ್ಮದೇ ಸ್ವಂತ ವ್ಯಾಪಾರವನ್ನು ಶುರುಮಾಡಬಹುದು ಎಂದು ತಿಳಿದುಕೊಳ್ಳುವುದೂ ಇತ್ತು. ಅವರು ತಮ್ಮ ಸ್ವಂತ ಬ್ರಾಂಡ್‌ನ್ನು ಆರಂಭಿಸುವ ಮುನ್ನ ಕಸೂತಿ ಕೆಲಸವನ್ನು ಕಲಿತುಕೊಂಡು ವಿವಿಧ ಚಿತ್ತಾರಗಳನ್ನು ಮತ್ತು ಬಣ್ಣದ ವಿನ್ಯಾಸಗಳನ್ನು ಪ್ರಯೋಗಮಾಡಿದರು.

ಪ್ರಸ್ತುತ, ವಿಜಯ್‌ ಭಾಯ್‌ ಅವರ ವ್ಯಾಪಾರ ಸಂಸ್ಥೆಗೆ ಪ್ರತಿದಿನ ಸೀರೆಗಳಿಗೆ ಕಸೂತಿ ಮಾಡಲು ಏಳು ಕುಶಲಕರ್ಮಿಗಳು ಬರುತ್ತಾರೆ. “ಇಲ್ಲಿ ವಾತಾವರಣ ಬಹಳ ಚೆನ್ನಾಗಿದೆ” ಎಂದು ಹೇಳಿ ಅವರು ಕಳೆದ ಒಂದು ದಶಕದಲ್ಲಿ ಅದೇ ಕುಶಲಕರ್ಮಿಗಳು ಅವರ ಬಳಿ ಕೆಲಸಮಾಡುತ್ತಿದ್ದಾರೆ ಎಂದು ಬೀಗುತ್ತ ಘೊಷಿಸುತ್ತಾರೆ.

ಕಾರ್ಯಸ್ಥಳದಲ್ಲಿ ಅಗತ್ಯವಾದ ಎಲ್ಲ ಕಚ್ಚ ಪದಾರ್ಥಗಳನನು ಇಡಲಾಗಿದೆ. ಕುಶಲಕರ್ಮಿಗಳು ಸುತ್ತಲೂ ಕೂತು ಜೊತೆಯಲ್ಲಿ ಕೆಲಸಮಾಡಿ ಒಂದು ಕಸೂತಿ ಇರುವ ಸೀರೆಯನ್ನು ತಯಾರಿಸುತ್ತಾರೆ. ಹುಶಾರಾಗಿ ಆಯ್ದ ರಚನೆಗಳು ಮತ್ತು ಬಣ್ಣಗಳುಳ್ಳ ಒಂದು ಸೀರೆಯನ್ನು ತಯಾರಿಸಲು ಮೂರು ಕುಶಲಕರ್ಮಿಗಳು ಬೇಕಾಗುತ್ತಾರೆ. ದಟ್ಟವಾದ ಮತ್ತು ಹೆಚ್ಚು ಗಹನವಾದ ವಿನ್ಯಾಸಗಳನ್ನುಳ್ಳ ಬಟ್ಟೆಗೆ ಮಾಯದಂತಹ ಸೌಂದರ್ಯ ತುಂಬಲು ಮೂರು ಕುಶಲಕರ್ಮಿಗಳು ಹದಿನೈದು ಗಂಟೆಗಳಿಗೂ ಮಿಗಿಲಾಗಿ ಕೆಲಸ ಮಾಡಬೇಕಾಗುತ್ತದೆ.

ವಿಜಯ್‌ ಭಾಯ್‌ ಕೇವಲ ೧೦ನೇ ತರಗತಿಯವರೆಗೆ ಓದಿದ್ದರೂ ಕೆಲಸಕ್ಕೆ ಮತ್ತು ಜೀವನಕ್ಕೆ ಬೇಕಾದ ಎಲ್ಲವನ್ನೂ ಕಲಿತುಕೊಂಡರು. ಅವರು ತಮ್ಮ ಎಲ್ಲ ಸೀರೆಗಳಿಗೂ ತಪ್ಪುಮಾಡಲು ಸಾಧ್ಯವಿಲ್ಲದ ಮತ್ತು ಸಮಗ್ರವಾದ ಪ್ರಕ್ರಿಯೆಯನ್ನು ಅಳವಡಿಸಿದ್ದಾರೆ. ಅವರು ಒಬ್ಬ ರೇಖಾಚಿತ್ರಕಾರ ಮತ್ತು ಒಬ್ಬ ವಿನ್ಯಾಸಕಾರರ ಜೊತೆ ಕೆಲಸಮಾಡಿ ವಿವಿಧ ಬಣ್ಣಗಳ ಮಿಶ್ರಣಗಳನ್ನು ಪ್ರಯತ್ನಮಾಡಿ ನೋಡಿ ನಂತರ ಅದನ್ನು ಕುಳಕಕರ್ಮಿಗಳಿಗೆ ನೀಡುತ್ತಾರೆ.

“ಈ ಹಿಂದೆ, ನಾನು ಬರೀ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರುತ್ತಿದ್ದೆ” ಎಂದು ಅವರು ಹೇಳುತ್ತಾರೆ. ಅವರು ಒಬ್ಬ ಮಾರಾಟಗಾರರಾಗಿ ಫ್ಲಿಪ್ಕಾರ್ಟ್‌ಗೆ ೨೦೨೧ರಲ್ಲಿ ಸೇರಿಕೊಂಡರು. ಫ್ಲಿಪ್ಕಾರ್ಟ್‌ನ ಸಮರ್ಥ್ ಕಾರ್ಯಕ್ರಮದ ಬಗ್ಗೆ ತಮ್ಮ ಸ್ನೇಹಿತರಿಂದ ತಿಳಿದುಕೊಂಡಿದ್ದರು. ಈ ಕಾರ್ಯಕ್ರಮವನ್ನು ೨೦೧೯ರಲ್ಲಿ ಭಾರತದ ಕುಶಲಕರ್ಮಿಗಳು, ನೇಕಾರರು ಮತ್ತು ಕಲೆಗಾರರನ್ನು ಸಬಲೀಕರಿಸಲು ಶುರುಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳುವುದರಿಂದ ಭಾರತದ ಸಮರ್ಪಕವಾಗಿ ಗುರುತಿಸಲಾಗದಿರುವ ಸಮುದಾಯಗಳ ಸದಸ್ಯರು ಒಂದು ದೇಶದಾದ್ಯಂತ ಹರಡಿರುವ ಮಾರುಕಟ್ಟೆಯನ್ನು ಎಡುಕುವಂತೆ ಆಯಿತು.

ಈ-ಕಾಮರ್ಸ್‌ಗೆ ಹೊಸಬರಾಗಿದ್ದ ವಿಜಯ್‌ ಫ್ಲಿಪ್ಕಾರ್ಟ್‌ನ ಮಾರಾಟಗಾರರಿಗೆ ಬೆಂಬಲವೆಂಬ ವಿಭಾಗವನ್ನು ಸಂಪರ್ಕಿಸಿ ತಮಗಿದ್ದ ಆರಂಭದ ಹಿಂಜರಿಕೆಯನ್ನು ಮೀರಿ ದಿನಕ್ಕೆ ಮೂರು ಅಥವ ನಾಲ್ಕು ಬೇಡಿಕೆಗಳನ್ನು ಕಂತೆ ಕಟ್ಟುತ್ತಾರೆ. ಇವತ್ತು, ಅವರು ಪ್ರತಿದಿನ ೩೦೦ರಿಂದ ೪೦೦ ಸೀರೆಗಳನ್ನು ರವಾನೆ ಮಾಡುತ್ತಾರೆ.

ಯಂತ್ರಗಳಿಂದ ತಯಾರಾದ ಸೀರೆಗಳು ಮತ್ತು ಕೈಯಿಂದ ಕಸೂತಿ ಮಾಡಲಾದ ಸೀರೆಗಳಿಗಿರುವ ವ್ಯತ್ಯಾಸವೇನೆಂದು ಕೇಳಿದಾಗ ಅವರು ಹೇಳುತ್ತಾರೆ ಯಂತ್ರಗಳು ಅವುಗಳಿಗೆ ಏನನ್ನು ಹೇಳುತ್ತೇವೊ ಅಷ್ಟನ್ನು ಮಾತ್ರ ಮಾಡುತ್ತವೆ, ಆದರೆ ಕುಶಲಕರ್ಮಿಗಳು ಪ್ರತಿಯೊಂದು ದಾರ, ಪ್ರತಿಯೊಂದು ಹೊಲಿಗೆಯನ್ನು ಅನನ್ಯವಾಗಿ ಮಾಡಲು ತಮ್ಮ ಕೌಶಲ್ಯವನ್ನು ಸೇರಿಸುತ್ತಾರೆ.

ಅವರು ಸಮೀಪದ ಭವಿಷ್ಯದಲ್ಲಿ ಕವಲು ದಾರಿ ಹಿಡಿದು ಕುರ್ತಿಗಳು, ವೈವಿಧ್ಯಮಯ ಅಂಗಿಗಳು ಮತ್ತು ಟಾಪ್‌ಗಳನ್ನು ತಯಾರಿಸಿ ಅವುಗಳನ್ನು ಫ್ಲಿಪ್ಕಾರ್ಟ್‌ನಲ್ಲಿ ಪಟ್ಟಿಮಾಡುವ ಗುರಿ ಹೊಂದಿದ್ದಾರೆ. ಇವುಗಳ ಜೊತೆ, ಅವರ ವೈಯಕ್ತಿಕ ಗುರಿಗಳು ಯಾವುವೆಂದರೆ ಒಂದು ಮನೆ ಮತ್ತು ಒಂದು ಕಾರು ಕೊಳ್ಳುವುದು ಮತ್ತು ಅವರಿಗೆ ತೃಪ್ತಿಯಾಗುವಷ್ಟು ಪ್ರಯಾಣ ಮಾಡುವುದು

“ಫ್ಲಿಪ್ಕಾರ್ಟ್‌ನಲ್ಲಿ ಗಿರಾಕಿಗಳು ಒಳ್ಳೆಯ ಗುಣಮಟ್ಟವನ್ನು ಮೆಚ್ಚುತ್ತಾರೆ. ಆದ್ದರಿಂದ ಈ ವಿಶೇಷ ಮಾರಾಟವು ಅವರು ಭಾರತದಲ್ಲಿ ತಯಾರಾದ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗಲು ಅದ್ಭುತವಾದ ಕಾಲ” ಎಂದು ಅವರು ಹೇಳುತ್ತಾರೆ. ಜೊತೆಗೆ ಅವರು ಹೇಳುತ್ತಾರೆ ಅವರು ಈಗಾಗಲೆ ವಿನ್ಯಾಸ ಮಾಡುವುದು ಮತ್ತು ಗುಣಮಟ್ಟದ ಪರೀಕ್ಷೆಗಳನ್ನು ಶುರುಮಾಡಿಕೊಂಡಿದ್ದಾರೆ. ಇದನ್ನು ಫ್ಲಿಪ್ಕಾರ್ಟ್‌ನಲ್ಲಿ ʼಕ್ರಾಫ್ಟೆಡ್‌ ಬೈ ಭಾರತ್‌ʼ ಎನ್ನುವ ಮಾರಾಟಕ್ಕೆ ಹಲವು ದಿನಗಳ ಹಿಂದಿನಿಂದಲೇ ಆರಂಭಿಸಿದ್ದಾರೆ.

ಭಾರತದಾದ್ಯಂತ ವಿಶೇಷವಾಗಿ ಗಮನಿಸಿ ತಯಾರಿಸಿದ ಕರಕುಶಲ ಉತ್ಪನ್ನಗಳನ್ನು ತೆಗೆದುಕೊಳ್ಳಲು ಫ್ಲಿಪ್ಕಾರ್ಟ್‌ ಆಪ್‌ಗೆ ಲಾಗ್‌ ಆನ್‌ ಮಾಡಿ.

Enjoy shopping on Flipkart