ಖಾತೆಯು ಕಳವಿಗೀಡಾಗಿ ಪರಾಧೀನವಾಗುವುದನ್ನು ತಡೆಗಟ್ಟಲು 7 ಮಾರ್ಗೋಪಾಯಗಳು: ನಿಮ್ಮ ಫ್ಲಿಪ್‌‌ಕಾರ್ಟ್ ಖಾತೆಗೆ ಪ್ರವೇಶಾತಿಯನ್ನು ಸುರಕ್ಷಿತವಾಗಿರಿಸಿರಿ

Read this article in हिन्दी | English | বাংলা | मराठी

ಖಾತೆಯು ಕಳವಗೀಡಾಗಿ ಶೋಷಿತರಾಗುವವರ ಪರಿಸ್ಥಿತಿಯು ತೀವ್ರ ಕಳವಳಕ್ಕೆ ಕಾರಣವಾಗಬಹುದು; ಇಂತಹ ಪರಿಸ್ಥಿತಿಯಲ್ಲಿಯೇ ವಂಚಕನು ನಿಮ್ಮ ಲಾಗಿನ್ ವಿವರಗಳನ್ನು ಪಡೆದುಕೊಳ್ಳುತ್ತಾನೆ ಮತ್ತು ನಿಮ್ಮ ಖಾತೆಯ ಮೇಲೆ "ಹಿಡಿತವನ್ನು ಸಾಧಿಸುತ್ತಾನೆ". ಆದಾಗ್ಯೂ, ಜಾಗರೂಕತೆಯ ಮತ್ತು ಉತ್ತಮ ಡಿಜಿಟಲ್ ನೈರ್ಮಲ್ಯಗಳ ಮಾಪನದೊಂದಿಗೆ, ಸೈಬರ್ ಅಪರಾಧಿಗಳು ಹೆಣೆಯುವ ಬಲೆಯಿಂದ ನೀವು ಪಾರಾಗಬಹುದು ಮತ್ತು ಒಂದು ಸುರಕ್ಷಿತವಾದ ಶಾಪಿಂಗ್ ಅನುಭವವನ್ನು ಆನಂದಿಸಬಹುದು. ಖಾತೆಯನ್ನು ಕಳವುಗೈಯ್ಯುವವನಿಗೆ ನೀವು ಹೇಗೆ ಬಾಗಿಲನ್ನು ಮುಚ್ಚಬಹುದೆನ್ನುವುದನ್ನು ಹಾಗೂ ಖಾತೆಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ಪ್ರವೇಶಾತಿ ಮಾಹಿತಿಯನ್ನು ಹೇಗೆ ಗೌಪ್ಯವಾಗಿರಿಸಬಹುದೆನ್ನುವುದನ್ನು ಇಲ್ಲಿ ಕೊಡಲಾಗಿದೆ.

Account Takeover

ಈ ಲೇಖನದಲ್ಲಿ: ಖಾತೆಯು ವಂಚನೆಯ ಮೂಲಕ ಪರಾಧೀನವಾಗುವುದನ್ನು ತಡೆಗಟ್ಟುವುದು ಹೇಗೆ


ಖಾತೆಯು ಪರಾಧೀನವಾಗುವುದು? ಹಾಗೆಂದರೇನು?

ವಸ್ತುಸ್ಥಿತಿ: ಫ್ಲಿಪ್‌‌ಕಾರ್ಟ್ ಖಾತೆಯ ಪ್ರವೇಶಾತಿಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸೈಬರ್ ಅಪರಾಧಿಗಳು ಪಡೆದುಕೊಳ್ಳುವುದು ಮತ್ತು ನಿಮ್ಮ ಹೆಸರಿನಲ್ಲಿ ಸ್ವತ: ನೀವೇ ಎಂಬಂತೆ ನಿಮ್ಮ ಖಾತೆಗೆ ಲಾಗಿನ್ ಆಗುವುದೇ ಖಾತೆಯ ಪರಾಧೀನತೆ ಎನಿಸಿಕೊಳ್ಳುವುದು. ಅಪರಾಧಿಯು ಒಮ್ಮೆ ನಿಮ್ಮ ಖಾತೆಯನ್ನು ಪ್ರವೇಶಿಸಿದರೆಂದರೆ, ಆತನು ಅಥವಾ ಆಕೆಯು ಖರೀದಿಗಳನ್ನು ಮತ್ತು ವಹಿವಾಟುಗಳನ್ನು ಮಾಡಲು, ರಿವಾರ್ಡ್ ಪಾಯಿಂಟ್‌ಗಳನ್ನು ಹಾಗೂ ಸೂಪರ್‌‌ಕಾಯಿನ್‌‌ಗಳನ್ನೂ ಕೂಡ ತಾನೇ ಪಡೆದುಕೊಳ್ಳಬಹುದು. ಉದ್ಯಮ ವಲಯದ ವರದಿಯೊಂದರ ಪ್ರಕಾರ, ಜನವರಿ ಮತ್ತು ಮೇ 2021 ರ ನಡುವೆ ಭಾರತದಲ್ಲಿ ಖಾತಾ ಅಪಹರಣದ ಅಪರಾಧಗಳು 90% ದಷ್ಟು ಹೆಚ್ಚಳಗೊಂಡಿವೆ. ಕೇಳುವಾಗಲೇ ಭಯವಾಗುತ್ತದೆಯಲ್ಲವೇ? ಓದುವುದನ್ನು ಮುಂದುವರೆಸಿ.

ಒಂದು ಶುಭ ಸಮಾಚಾರ: ಖಾತೆಯೊಂದು ಅಪಹರಣವಾಗುವುದರ ಕಿರಿಕಿರಿಗಳನ್ನು ಕಡಿಮೆಗೊಳಿಸುವುದು ಸುಲಭವಾಗಿದೆ. ಒಂದಷ್ಟು ಉತ್ತಮ ಆನ್‌‌ಲೈನ್ ರೂಢಿಗಳೊಂದಿಗೆ/ಅಭ್ಯಾಸಗಳೊಂದಿಗೆ ನೀವು ನಿಮ್ಮ ಫ್ಲಿಪ್‌‌ಕಾರ್ಟ್ ಖಾತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು.

ಖಾತೆಯು ಅಪಹರಣವಾಗುವುದನ್ನು ತಡೆಗಟ್ಟಲು ಮತ್ತು ಅದರೊಡನೆ ವ್ಯವಹರಿಸಲು ಇಲ್ಲಿ 7 ಮಾರ್ಗೋಪಾಯಗಳನ್ನು ಕೊಡಲಾಗಿದೆ.

Account takeover 7 tips


#1: ಹಾನಿಯನ್ನುಂಟು ಮಾಡುವ ಜಾಲತಾಣಗಳಿಂದ ಮತ್ತು ಆಪ್‌‌ಗಳಿಂದ ದೂರವಿರಿ

ನಿಮ್ಮ ಫ್ಲಿಪ್‌‌ಕಾರ್ಟ್ ಬಳಕೆದಾರ ಐಡಿ ಮತ್ತು ಗುಪ್ತಸಂಕೇತವನ್ನು ಕದಿಯಲು ವಂಚಕರು ಬಳಸುವ ತಂತ್ರವೆಂದರೆ ಫ್ಲಿಪ್‌‌ಕಾರ್ಟ್‌‌ನ ನಕಲಿ ಜಾಲತಾಣವನ್ನು ಅಥವಾ ಆಪ್ ಅನ್ನು ನಡೆಸುವುದು. ಫ್ಲಿಪ್‌‌ಕಾರ್ಟ್‍ನಿಂದ ವಿನ್ಯಾಸಗೊಳಿಸಲ್ಪಟ್ಟಿರುವ ಒಂದು ಅಧಿಕೃತ ಜಾಲತಾಣ ಅಥವಾ ಆಪ್‌‌ನಂತೆಯೇ ಕಾಣುವ ನಕಲಿ ಜಾಲತಾಣವನ್ನು ಅಥವಾ ಆಪ್ ಅನ್ನು ವಿನ್ಯಾಸಗೊಳಿಸಲಾಗುತ್ತದೆ, ಮತ್ತು ಖಾತೆಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ಪ್ರವೇಶಾತಿ ವಿವರಗಳನ್ನು ಅದರಲ್ಲಿ ನೀವು ದಾಖಲಿಸುವಂತೆ ವಂಚಕರು ನಿಮ್ಮನ್ನು ಪ್ರಲೋಭನೆಗೆ ಒಳಪಡಿಸುತ್ತಾರೆ. ಆದಾಗ್ಯೂ, ನೀವು ಅವಲಂಬಿಸಬಹುದಾದ ಸ್ಪಷ್ಟ ಎಚ್ಚರಿಕೆಯ ಸಂಕೇತಗಳು ಈ ಕೆಳಗಿನಂತಿರುತ್ತವೆ:

 • ಐಫೋನ್ 13 ಪ್ರೊ ಮೇಲೆ 98% ದಷ್ಟು ಕಡಿತದಂತಹ ಅವಾಸ್ತವಿಕ ರಿಯಾಯಿತಿಗಳು
 • ಜಾಲತಾಣದ ಯುಆರ್‌‌ಎಲ್ “ಫ್ಲಿಪ್‌‌ಕಾರ್ಟ.ಕಾಮ್” ನೊಂದಿಗೆ ಅಂತ್ಯಗೊಳ್ಳಲಾರದು
 • ನಿಮ್ಮ ಸಂಪರ್ಕವು “ಸುರಕ್ಷಿತವಾಗಿ ಇಲ್ಲ”, ಇದರರ್ಥವೇನೆಂದರೆ ಜಾಲತಾಣವು ಹೆಚ್‌‌ಟಿಟಿಪಿಎಸ್ ಅನ್ನು ಬಳಸುವುದಿಲ್ಲ (ಯುಆರ್‌ಎಲ್ ನ ಪಾರ್ಶ್ವದಲ್ಲಿ ಪ್ಯಾಡ್‌ಲಾಕ್ ಇರುವುದಿಲ್ಲ)

ಫ್ಲಿಪ್‌‌ಕಾರ್ಟ್‌‌ನ ನಕಲಿ ಜಾಲತಾಣವೊಂದನ್ನು ಅಥವಾ ಆಪ್ ಒಂದನ್ನು ಹೇಗೆ ಪತ್ತೆ ಮಾಡುವುದೆನ್ನುವುದಕ್ಕೆ ಇಲ್ಲಿ ಇನ್ನಷ್ಟು ಸಲಹೆಗಳಿವೆ.


#2: ಸಂಶಯಕ್ಕೆಡೆಮಾಡಿಕೊಡುವ ಸಂದೇಶಗಳಿಗೆ ಆಸ್ಪದ ಕೊಡಬೇಡಿ

ಸೈಬರ್ ಅಪರಾಧಿಗಳಿಗೆ ಮುಗ್ಧ ಬಳಕೆದಾರರನ್ನು ಅಧಿಕೃತದ್ದಂತೆಯೇ ಕಂಡುಬರುವ ಇಮೇಲ್ ಗಳೊಂದಿಗೆ, ಕಿರು ಸಂದೇಶ ಸೇವೆಗಳೊಂದಿಗೆ (ಎಸ್ಎಂಎಸ್), ಮತ್ತು ಸಾಮಾಜಿಕ ಜಾಲತಾಣ ಸಂದೇಶಗಳೊಂದಿಗೆ ಬಲಿಪಶುವಾಗಿಸುವುದೆಂದರೆ ಎಲ್ಲಿಲ್ಲದ ಪ್ರೀತಿ. ವಾಸ್ತವದಲ್ಲಿ, ರಿಯಾಯಿತಿಗಳನ್ನು, ಕೊಡುಗೆಗಳನ್ನು ಮತ್ತು ಇನ್ನೂ ಮೊದಲಾದವುಗಳನ್ನು ವಾಗ್ದಾನಿಸುವ ಈ ನಕಲಿ ಫ್ಲಿಪ್‌‌ಕಾರ್ಟ್ ಸಂದೇಶಗಳು ಅಥವಾ ಜಾಹೀರಾತುಗಳು , ಖಾತೆಯೊಂದನ್ನು ಅಪಹರಿಸಲು ವಂಚಕರು ಕಂಡುಕೊಂಡಿರುವ ಒಂದು ಮಾರ್ಗೋಪಾಯವಷ್ಟೇ ಹೊರತು ಬೇರೇನಲ್ಲ. ಇನ್ನೂ ಹೇಳಬೇಕೆಂದರೆ, ನಿಮ್ಮ ಅಂಕಿ-ಅಂಶಗಳನ್ನು ಕದಿಯಲು ಹಿನ್ನೆಲೆಯಲ್ಲಿ ಕಾರ್ಯಾಚರಿಸುವ ಹಾನಿಕಾರಕ ತಂತ್ರಾಂಶಕ್ಕೆ ಅವು ಪ್ರವೇಶದ್ವಾರಗಳೂ ಆಗಿರಬಹುದು. ಇದಕ್ಕಿರುವ ಅತ್ಯಂತ ಪರಿಣಾಮಕಾರೀ ಉಪಾಯವೆಂದರೆ ಸಂಶಯಕ್ಕೆಡೆಮಾಡಿಕೊಡುವ ಸಂದೇಶಗಳೊಂದಿಗೆ ಬರುವ ಕೊಂಡಿಗಳನ್ನು ಕ್ಲಿಕ್ ಮಾಡದೇ ಇರುವುದು. ಅದರ ಬದಲು ನೇರವಾಗಿ ಫ್ಲಿಪ್‌‌ಕಾರ್ಟ್‌‌ನ ಅಧಿಕೃತ ಜಾಲತಾಣ ಅಥವಾ ಆಪ್‌‌ನಲ್ಲಿಯೇ ನೇರವಾಗಿ ಖರೀದಿಸಿ. ನಕಲಿ ಫ್ಲಿಪ್‌‌ಕಾರ್ಟ್ ಸಂದೇಶಗಳು, ಜಾಲತಾಣಗಳು, ಮತ್ತು ಆಪ್‌‌ಗಳಿಂದ ಇತರರನ್ನು ರಕ್ಷಿಸಲು ನಾಗರಿಕ ಜವಾಬ್ದಾರಿಯೊಂದಿಗೆ ವರದಿ ಮಾಡಿರಿ.


#3: ಫೋನ್ ಕರೆಯ ಮೂಲಕ ನಿಮ್ಮ ಖಾತೆಯ ವಿವರಗಳನ್ನು ಎಂದೆಂದಿಗೂ ಕೊಡಬೇಡಿ

ಖಾತೆಯ ಅಪಹರಣದ ಉದ್ದೇಶಗಳನ್ನು ಇಟ್ಟುಕೊಂಡಿರುವ ವಂಚಕರಿಂದ ಉಪಯೋಗಿಸಲ್ಪಡುವ ಸಂಪರ್ಕ-ಮಾಡು ವಿಧಾನವೇ ನಕಲಿ ಕರೆಗಳು. ಇಲ್ಲಿ, ಅವರು “ಸಹಾಯಕರು” ಗಳಂತೆ ಸೋಗು ಹಾಕುತ್ತಾರೆ ಮತ್ತು ಖರೀದಿಯೊಂದನ್ನು ಮಾಡುವಲ್ಲಿ, ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸುವುದರಲ್ಲಿ ಹಾಗೂ ಇನ್ನೂ ಹೀಗೆ ಹಲವಾರು ರೀತಿಯಲ್ಲಿ ನಿಮಗೆ ನೆರವನ್ನು ಒದಗಿಸಲು ಮುಂದಾಗುತ್ತಾರೆ . ಫ್ಲಿಪ್‌‌ಕಾರ್ಟ್‌ನ ಅಧಿಕೃತ ಪ್ರತಿನಿಧಿಗಳು ನಿಮ್ಮನ್ನೆಂದಿಗೂ ವೈಯಕ್ತಿಕ ಲಾಗಿನ್ ವಿವರಗಳನ್ನು ಕೇಳುವುದಿಲ್ಲ, ಮತ್ತು ನೀವು ಎಂದೆಂದಿಗೂ ನಿಮ್ಮ ಇಮೇಲ್ ಐಡಿಗಳನ್ನಾಗಲೀ, ಗುಪ್ತಸಂಕೇತಗಳನ್ನಾಗಲೀ ಅಥವಾ ಕರೆಯೊಂದರಲ್ಲಿ ಒಟಿಪಿ ಯನ್ನಾಗಲೀ ಹಂಚಿಕೊಳ್ಳಬಾರದು.


#4: ಖಾತೆಯು ಪರಾಧೀನವಾಗುವುದನ್ನು ಅಥವಾ ಅಪಹರಣಕ್ಕೊಳಗಾಗುವುದನ್ನು ತಡೆಗಟ್ಟಲು ನಿಮ್ಮ ಗುಪ್ತಸಂಕೇತಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರಿ

ನೀವು ಈ ಹಿಂದೆ ಒಂದು ಹಾನಿಕಾರಕ ಜಾಲತಾಣವೊಂದನ್ನು ಸಂದರ್ಶಿಸಿರಬಹುದು. ಅದೇ ರೀತಿಯಾಗಿ, ವಂಚಕರು ಕತ್ತಲ ಜಾಲದಲ್ಲಿ ವೈಯಕ್ತಿಕ ವಿವರಗಳಿಗಾಗಿ ಖರೀದಿಸಬಹುದು ಮತ್ತು ನಿಮ್ಮ ಲಾಗಿನ್ ವಿವರಗಳಿಗೆ ಅಂಶಿಕವಾಗಿ ಪ್ರವೇಶವನ್ನು ಪಡೆಯಬಹುದು. ಗುಪ್ತಸಂಕೇತಗಳನ್ನು ಆಗಾಗ್ಗೆ ಬದಲಾಯಿಸುವುದು, ವಂಚಕರ ಬಳಿಯಿರುವ ದತ್ತಾಂಶಗಳು ವಾಯಿದೆ ಮೀರಿರುವುದನ್ನು ಖಚಿತಪಡಿಸುತ್ತದೆ. ನಿಮ್ಮ ಫ್ಲಿಪ್‌‌ಕಾರ್ಟ್ ಖಾತೆಗೆ ಜೋಡಣೆಯಾಗಿರುವ ಮಿಂಚಂಚೆ (ಇಮೇಲ್) ಐಡಿಯನ್ನು ಬದಲಾಯಿಸುವ ಆಯ್ಕೆಯನ್ನೂ ಫ್ಲಿಪ್‌‌ಕಾರ್ಟ್ ನಿಮಗೆ ಕೊಡಮಾಡುತ್ತದೆ.

ಪ್ರಬಲ ಗುಪ್ತಸಂಕೇತವೊಂದನ್ನು ನಿಗದಿ ಪಡಿಸುವುದು ಹೇಗೆ?

 • ನಿಮ್ಮದೇ ಹೆಸರನ್ನು ಅಥವಾ “qwerty” ಅಥವಾ “1234″ ಗಳಂತಹ ಸಾಮಾನ್ಯ ಸರಣಿಗಳನ್ನು ನಿಮ್ಮ ಗುಪ್ತಸಂಕೇತಗಳಲ್ಲಿ ಬಳಸುವುದನ್ನು ಮಾಡಬೇಡಿ
 • ಅಕ್ಷರಗಳು, ಸಂಖ್ಯೆಗಳು, ಮತ್ತು ಸಂಕೇತಗಳನ್ನು ಒಳಗೊಂಡಿರುವ ಕನಿಷ್ಟ 8 ಸಂಕೇತಗಳ ಒಂದು ಸಂಯೋಜನೆಯನ್ನು ಬಳಸುವುದು. ಕನಿಷ್ಟ ಒಂದು ದೊಡ್ಡ ಅಕ್ಷರ, ಒಂದು ಸಂಖ್ಯೆ, ಮತ್ತು ಒಂದು ವಿಶೇಷ ಸಂಕೇತದ ಸಂಯೋಜನೆಯನ್ನು ಯಾದೃಚ್ಛಿಕ ಆದೇಶದಲ್ಲಿ ಬಳಸಿಕೊಂಡು ಒಂದು ಪ್ರಬಲ ಗುಪ್ತಸಂಕೇತವನ್ನು ಸೃಷ್ಟಿಸಿರಿ.
  • ದುರ್ಬಲ ಗುಪ್ತಸಂಕೇತವೊಂದರ ಉದಾಹರಣೆ: Flipkart#1234
  • ಪ್ರಬಲ ಗುಪ್ತಸಂಕೇತವೊಂದರ ಉದಾಹರಣೆ: BD2!ex9@@ (ಈ ಗುಪ್ತಸಂಕೇತವನ್ನು ನಕಲು ಮಾಡಬೇಡಿರಿ!)
  • ಸಾಧ್ಯವಿದ್ದಾಗ ಒಟಿಪಿ-ಆಧಾರಿತ ಅಧಿಕೃತತೆಯನ್ನು ಸಕ್ರಿಯಗೊಳಿಸಿ

ನಿಮ್ಮ ಫ್ಲಿಪ್‌‌ಕಾರ್ಟ್ ಖಾತೆಯನ್ನು ರಕ್ಷಿಸಿಕೊಳ್ಳುವ ಇತರ ಮಾರ್ಗೋಪಾಯಗಳ ಬಗ್ಗೆ ಇನ್ನಷ್ಟು ಓದಿರಿ.


#5: ಇತರ ಇ-ವಾಣಿಜ್ಯ ತಾಣಗಳಲ್ಲಿ ವಿಭಿನ್ನ ಲಾಗಿನ್ ವಿವರಗಳನ್ನು ಬಳಸಿರಿ

ನೀವು ಬೇರೆ ಬೇರೆ ಆನ್‌‌ಲೈನ್ ಮಳಿಗೆಗಳಲ್ಲಿ ಖರೀದಿ ವ್ಯವಹಾರ ಮಾಡಲು ಬಯಸಬಹುದು, ಮತ್ತು ಆ ಪ್ರತಿಯೊಂದರಲ್ಲಿಯೂ ಬೇರೆ ಬೇರೆ ಗುಪ್ತ ಸಂಕೇತಗಳನ್ನು ಬಳಸುವುದು ಅತ್ಯುತ್ತಮ. ಈ ಮೂಲಕ, ಮತ್ತೊಂದು ಕಂಪನಿಯ ಮಾಹಿತಿಕೋಶದಲ್ಲಿ ಅಂಕಿ-ಅಂಶವೊಂದರ ಸೋರಿಕೆಯಾಗಿದ್ದರೂ ಕೂಡ ನಿಮ್ಮ ಫ್ಲಿಪ್‌‌ಕಾರ್ಟ್ ಖಾತೆಯು ಪರಾಧೀನತೆ ಅಥವಾ ಅಪಹರಣದಿಂದ ಸಂರಕ್ಷಿಸಲ್ಪಡುತ್ತದೆ.


#6: ನಿಮ್ಮ ಖಾತೆಗಳಲ್ಲಿನ ಸಂದೇಹಾಸ್ಪದ ಚಟುವಟಿಕೆಗಳಿಗಾಗಿ ವೀಕ್ಷಣೆ ಮಾಡಿರಿ

ವಂಚಕನೋರ್ವನು(ಳು) ಒಮ್ಮೆ ಖಾತೆಯನ್ನು ಅಪಹರಣವನ್ನು ನಿರ್ವಹಿಸಿದ ಬಳಿಕ, ಅವನು/ಅವಳು ನಿಮ್ಮ ಗುಪ್ತಸಂಕೇತವನ್ನು ಬದಲಾಯಿಸುವ ಮೂಲಕ ನಿಮ್ಮ ಖಾತೆಗೆ ನೀವು ಪ್ರವೇಶಿಸಲಾಗದ ರೀತಿಯಲ್ಲಿ ಲಾಕ್ ಮಾಡಲು ಪ್ರಯತ್ನಿಸಿಯಾನು(ಳು). ಫ್ಲಿಪ್‌‌ಕಾರ್ಟನ್ನೂ ಒಳಗೊಂಡಂತೆ ಬಹುತೇಕ ಜಾಲತಾಣಗಳಲ್ಲಿ, ಗುಪ್ತಸಂಕೇತವನ್ನು ಬದಲಾಯಿಸಲು ಸಾಧ್ಯವಾಗುವಂತಾಗುವುದಕ್ಕೆ ಮೊದಲು ಒಟಿಪಿ ಯೊಂದನ್ನು ನಮೂದಿಸಬೇಕಾಗುತ್ತದೆ. ಒಂದೊಮ್ಮೆ ನೀವು ಒಟಿಪಿ ಯೊಂದನ್ನು ನಿಮ್ಮ ಇಮೇಲ್ ಐಡಿಯಲ್ಲಿ ಅಥವಾ ದೂರವಾಣಿ ಸಂಖ್ಯೆಯಲ್ಲಿ ಗುಪ್ತಸಂಕೇತವನ್ನು ಬದಲಾಯಿಸುವುದಕ್ಕಾಗಿ ಅಥವಾ ಮರುಹೊಂದಿಸುವುದಕ್ಕಾಗಿ ಪಡೆದುಕೊಂಡಲ್ಲಿ , ಮತ್ತು ನೀವು ಅದಕ್ಕಾಗಿ ಕೇಳಿಕೊಳ್ಳದೇ ಇದ್ದಲ್ಲಿ, ಏನೋ ತಪ್ಪಾಗಿದೆಯೆಂದೇ ಅದರ ಅರ್ಥವಾಗಿರುತ್ತದೆ. ಅದೇ ರೀತಿ, ಒಂದೊಮ್ಮೆ ನೀವು ಅಜ್ಞಾತ ಸ್ಥಳವೊಂದರಿಂದ ಲಾಗಿನ್ ಆಗಿರುವುದರ ಬಗ್ಗೆ ಸಂದೇಶವೊಂದನ್ನು ಪಡೆದಲ್ಲಿ ಅಥವಾ ಒಮ್ಮಿಂದೊಮ್ಮೆಲೇ ವಸ್ತುಗಳು ನಿಮ್ಮ ಕಾರ್ಟ್‌‌ಗೆ ಸೇರ್ಪಡೆಗೊಂಡಲ್ಲಿ , ಯಾರೋ ನಿಮ್ಮ ಖಾತೆಗೆ ಪ್ರವೇಶಾತಿಯನ್ನು ಹೊಂದಿದ್ದಾರೆನ್ನುವುದರ ಒಂದು ಸಂಕೇತವು ಅದಾಗಿರಬಹುದು.


#7: ಸಂದೇಹವಿದ್ದಾಗ, ಗ್ರಾಹಕ ಕಾಳಜಿ ವಿಭಾಗವನ್ನು ಸಂಪರ್ಕಿಸಿರಿ

ಖಾತಾ ಅಪರಹಣದ ಅಥವಾ ಪರಾಧೀನತೆಯ ಶೋಷಿತರು ನೀವಾಗಿರುವಿರೆಂದು ನಿಮಗನಿಸಿದಲ್ಲಿ, ಫ್ಲಿಪ್‌‌ಕಾರ್ಟ್‌‌ನ ಸಂಪರ್ಕಕ್ಕೆ ಬನ್ನಿ. ತ್ವರಿತ ವರದಿಗಾರಿಕೆಯು ಅನಧಿಕೃತ ವಹಿವಾಟುಗಳನ್ನು ತಡೆಗಟ್ಟಲು ಕಂಪೆನಿಗಳಿಗೆ ನೆರವಾಗುತ್ತದೆ. ಜೊತೆಗೆ ನಿಮಗೆ ಈ ಸಲಹೆಗಳನ್ನೂ ನೀಡಲಾಗುತ್ತದೆ:

 • ನಿಮ್ಮ ಗುಪ್ತಸಂಕೇತಗಳನ್ನು ಬದಲಾಯಿಸಿರಿ
 • ಎಲ್ಲ ಖಾತೆಗಳಿಂದ ಲಾಗೌಟ್ ಆಗಿರಿ ಮತ್ತು ಮರಳಿ ಲಾಗಿನ್ ಆಗಿರಿ

ಖಾತೆಯ ಅಪಹರಣವನ್ನು ಅಥವಾ ಪರಾಧೀನತೆಯಾಗುವುದನ್ನು ತಡೆಯಲು ಇತರ ಮಾರ್ಗೋಪಾಯಗಳು

ಇತರ ಮಾರ್ಗೋಪಾಯಗಳ ಮೂಲಕವೂ ನೀವು ಅನಧಿಕೃತ ಪ್ರವೇಶಾತಿಯನ್ನು ತಡೆಯುವುದರ ಮೂಲಕ ನಿಮ್ಮ ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು, ಅಂತಹ ಮಾರ್ಗೋಪಾಯಗಳೆಂದರೆ:

 • ಲಾಗಿನ್ ಪ್ರಯತ್ನಗಳ ಸಂಖ್ಯೆಯನ್ನು ಮಿತಗೊಳಿಸುವುದು
 • ಅಂತರ್ಜಾಲವನ್ನು ಬಳಸುವ ಹಿರಿಯ ನಾಗರಿಕರು ಅಧಿಕ-ಅಪಾಯದ ವರ್ಗದಲ್ಲಿದ್ದಾರೆ ಎಂದು ಅಂಕಿ-ಅಂಶಗಳು ತೋರಿಸಿಕೊಟ್ಟಿವೆ. ವಿಶೇಷವಾಗಿ, ಆನ್‌‌ಲೈನ್ ಅಪ್ಲಿಕೇಶನ್‌‌ಗಳನ್ನು ಬಳಸುವುದರ ಕುರಿತಂತೆ ತಿಳುವಳಿಕೆಯಿಲ್ಲದ ಹಿರಿ ವಯಸ್ಸಿನ ಬಳಕೆದಾರರು ನೀವಾಗಿದ್ದಲ್ಲಿ, ನಿಮ್ಮ ನಂಬಿಕಸ್ಥರಾದ ಓರ್ವ ಕಿರಿ ವಯಸ್ಸಿನ ಹಾಗೂ ಉತ್ತಮ ಮಾಹಿತಿಯುಳ್ಳ ಕುಟುಂಬದ ಸದಸ್ಯರೊಡನೆ ನೀವು ಆನ್‌‌ಲೈನ್ ಖರೀದಿ ವ್ಯವಹಾರಕ್ಕೆ ಮುಂದಾಗಬಹುದು
 • ವಿಶೇಷವಾಗಿ ಅನೇಕ ಮಂದಿ ಬಳಸುವ ಕಂಪ್ಯೂಟರನ್ನೇ ನೀವೂ ಬಳಸುವವರಾಗಿದ್ದಲ್ಲಿ, ಗುಪ್ತಸಂಕೇತಗಳನ್ನು ನಿಮ್ಮ ಬ್ರೌಸರ್‌‌ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿರಿ

ಅಂತಿಮವಾಗಿ, ಸೈಬರ್ ಅಪರಾಧಿಗಳು ನಿಮ್ಮ ಅತ್ಯಂತ ಪ್ರಮುಖ ಖಾತೆಗಳ “ಅಪಹರಣ” ಕ್ಕಾಗಿ ಹಾತೊರೆಯುತ್ತಾರೆ — ಹಣಕಾಸಿನ ವಹಿವಾಟುಗಳನ್ನು ಅಧಿಕೃತಗೊಳಿಸುವಂತಹ ಖಾತೆಗಳನ್ನು. ಇದನ್ನು ಅವರು ಪರದೆಯ ಹಿಂದೆ ಮತ್ತು ನಿಧಾನವಾಗಿ ಮಾಡಿಯಾರು. ಹಾಗಾಗಿ, ಸುರಕ್ಷಿತವಾದ ರೀತಿಯಲ್ಲಿ ಬ್ರೌಸ್ ಮಾಡುವುದು ಮತ್ತು ಅದು ನಿಮ್ಮ ಫ್ಲಿಪ್‌‌‌‍ಕಾರ್ಟ್ ಖಾತೆಯಾಗಿರಲೀ, ನಿಮ್ಮ ಇಮೇಲ್ ಆಗಿರಲಿ, ಇಲ್ಲವೇ ನಿಮ್ಮ ಬ್ಯಾಂಕ್ ಖಾತೆಯೇ ಆಗಿರಲೀ, ನಿಮ್ಮ ಖಾತೆಗಳಲ್ಲಿ ಜರುಗುವ ಚಟುವಟಿಕೆಗಳ ಕುರಿತು ಅರಿವುಳ್ಳವರಾಗಿರುವುದೇ ನೀವು ಪಾಲಿಸಬಹುದಾದ ಅತ್ಯುತ್ತಮವಾದ ಸಿದ್ಧಾಂತವಾಗಿದೆ. ನಿಮ್ಮ ಕುರಿತಾದ ಜಾಣ್ಮೆ, ಎಚ್ಚರಿಕೆಗಳನ್ನು ಕಾದಿರಿಸಿಕೊಳ್ಳಿ ಮತ್ತು ಹಾಗೆ ಮಾಡಿದಲ್ಲಿ, ಪ್ರತಿಬಾರಿಯೂ ನೀವು ಫ್ಲಿಪ್‌‌ಕಾರ್ಟನ್ನು ಸಂದರ್ಶಿಸುವಾಗಲೆಲ್ಲ ನೀವು ಖರೀದಿ ವ್ಯವಹಾರದ ಒಂದು ಮಹಾನ್ ಅನುಭೂತಿಯನ್ನು ಆನಂದಿಸಬಹುದು!


ಫ್ಲಿಪ್‌‌ಕಾರ್ಟ್‌‌ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ನಕಲಿಗಳನ್ನು, ವಂಚನೆಗಳನ್ನು ಮತ್ತು ಬೇಹುಗಾರಿಕೆಗಳನ್ನು ವರದಿ ಮಾಡಿರಿ

ವಂಚಕನ ವೆಚ್ಚದಲ್ಲಿಯೇ ಒಂದಿಷ್ಟು ಮೋಜು ಮಾಡಿರಿ! ನಕಲಿ ಫ್ಲಿಪ್‌‌ಕಾರ್ಟ್‍ ಜಾಲತಾಣ ಹಗರಣಗಳನ್ನು ಅತ್ಯುತ್ತಮ ಮತ್ತು ಅತ್ಯಂತ ನಿಕೃಷ್ಟ ಎಂದು ಮೌಲ್ಯಮಾಪನ ಮಾಡಿರಿ

ಇನ್ನಷ್ಟು ಗ್ರಾಹಕ ಶಿಕ್ಷಣ ಲೇಖನಗಳನ್ನು ಓದಿರಿ ನಮ್ಮ ಸುರಕ್ಷಿತ ಖರೀದಿ ವ್ಯವಹಾರ ವಿಭಾಗದಲ್ಲಿ

Enjoy shopping on Flipkart