ಒಡಿಶಾದಲ್ಲಿ, 100 ವರ್ಷ ಹಳೆಯ ನೇಕಾರ ಸಮುದಾಯದ ಕರಕುಶಲತೆಯು ಫ್ಲಿಪ್‌ಕಾರ್ಟ್‌ ಜೊತೆ ಅರಳಿದೆ

Read this article in हिन्दी | English | বাংলা | தமிழ் | ગુજરાતી | मराठी

ಫ್ಲಿಪ್‌ಕಾರ್ಟ್‌ ಮತ್ತು ಇ-ಕಾಮರ್ಸ್‌ನೊಂದಿಗೆ, ಒಡಿಶಾದ ಈ ನೇಕಾರ ಸಮುದಾಯವು ತನ್ನ ಪ್ರಸಿದ್ಧ ಜವಳಿ ಕರಕುಶಲ ಮತ್ತು ಕೈಮಗ್ಗ ಕೌಶಲ್ಯಗಳನ್ನು ದೇಶಾದ್ಯಂತ ಹರಡಿದೆ. ಈ ಕಥೆಯಲ್ಲಿ, ಯುವ ಚಿತ್ರಾಂಗನ್ ಪಾಲ್ ಫ್ಲಿಪ್‌ಕಾರ್ಟ್‌ ಮಾರಾಟಗಾರರಾಗಿ ತನ್ನ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಮತ್ತು ಈ ಕೆಲಸವು ಹೇಗೆ ಅವರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಸಂಪ್ರದಾಯಗಳು ಸಹ ಚೆನ್ನಾಗಿ ವಿಕಸನಗೊಂಡಿವೆಯೆಂದು ಹೇಳುತ್ತಾರೆ.

handloom sarees

ನ್ನ ಹೆಸರು ಚಿತ್ರಂಗನ್ ಪಾಲ್ ಮತ್ತು ನನಗೆ 22 ವರ್ಷವಾಗಿದೆ. ನಾನು 2019 ರಲ್ಲಿ ಫ್ಲಿಪ್‌ಕಾರ್ಟ್‌ ಮಾರಾಟಗಾರನಾದೆ. ನಾನು ಒಡಿಶಾದ ಕಟಕ್ ಮೂಲದವನು.

ನಾನು ನೇಕಾರರ ಸಮುದಾಯದ ಒಂದು ಭಾಗವಾಗಿದ್ದೇನೆ. ಕಟಾನ್ ಮತ್ತು ಇಕಾಟ್ ರೇಷ್ಮೆಯೊಂದಿಗೆ ತಯಾರಿಸಿದ ಸಂಬಲ್‌ಪುರಿ ಸೀರೆಗಳನ್ನು ನಾವು ಕೈಯಿಂದ ತಯಾರಿಸಿ ಮಾರಾಟ ಮಾಡುತ್ತೇವೆ. 100 ವರ್ಷಗಳಿಂದ ಇದು ನಮ್ಮ ಕೆಲಸ ಮತ್ತು ಸಂಪ್ರದಾಯವಾಗಿದೆ. ನಾವು ಕೈಮಗ್ಗದ ಸೀರೆಗಳು, ಉಡುಗೆಯ ಸಾಮಗ್ರಿಗಳು, ಸ್ಟೋಲ್‌ಗಳು, ದುಪಟ್ಟಾಗಳು, ಟೇಬಲ್ ಬಟ್ಟೆಗಳು ಮತ್ತು ಕಿಚನ್ ಬಟ್ಟೆಗಳನ್ನು ಮಾರಾಟ ಮಾಡುತ್ತೇವೆ. ನಾವು ಎಲ್ಲಾ ವಯಸ್ಸಿನವರಿಗೂ ಕೈಮಗ್ಗದ ಬಟ್ಟೆಯ ಶ್ರೇಣಿಯನ್ನು ಹೊಂದಿದ್ದೇವೆ.

ನಾನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದಾಗ ಫ್ಲಿಪ್‌ಕಾರ್ಟ್ ನಮ್ಮ 200 ಸೀರೆಗಳನ್ನು ಪಟ್ಟಿ ಮಾಡಲು ನಮಗೆ ಸಹಾಯ ಮಾಡಿದೆ. ಒಡಿಶಾ ರಾಜ್ಯದಿಂದ ಉತ್ಪನ್ನಗಳು ಗೋಚರತೆಯನ್ನು ಪಡೆಯುತ್ತಿರುವುದು ನನಗೆ ಹೆಮ್ಮೆಯೆನಿಸುತ್ತಿದೆ. ಫ್ಲಿಪ್‌ಕಾರ್ಟ್‌ ನಮ್ಮ ಉತ್ಪನ್ನಗಳನ್ನು ರಾಷ್ಟ್ರದಾದ್ಯಂತ ಮಾರಾಟ ಮಾಡಲೂ ನಮಗೆ ಸಹಾಯ ಮಾಡಿದೆ. ಫ್ಲಿಪ್‌ಕಾರ್ಟ್‌ ಸೇರುವ ಮೊದಲು, ನಾವು ನಮ್ಮ ಉತ್ಪನ್ನಗಳನ್ನು ನಮ್ಮ ಗ್ರಾಮ ಅಥವಾ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದೆವು, ಆದರೆ ಈಗ ನಮ್ಮ ಉತ್ಪನ್ನಗಳು ದೇಶಾದ್ಯಂತ ಇರುವ ಗ್ರಾಹಕರಿಗೆ ಲಭ್ಯವಿವೆ.

ನಾವು 1,000 ನೇಕಾರರು ಮತ್ತು 200 ವಿನ್ಯಾಸಕರ ಸಮುದಾಯವಾಗಿದ್ದೇವೆ . ಇದರರ್ಥ ಈ ಕೈಮಗ್ಗ ಸೀರೆಗಳನ್ನು ತಯಾರಿಸಲು 1,000 ಕುಟುಂಬಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ನಾವು ರೇಷ್ಮೆ ಮತ್ತು ಹತ್ತಿಯಂತಹ ಕಚ್ಚಾ ವಸ್ತುಗಳನ್ನು ಖರೀದಿಸಿದ ನಂತರ, ನಾವು ಅವುಗಳನ್ನು ನಮ್ಮ ನೇಕಾರ ಸಮುದಾಯದ ಕುಟುಂಬಗಳಲ್ಲಿ ವಿತರಿಸುತ್ತೇವೆ. ವಿನ್ಯಾಸದ ಅವಶ್ಯಕತೆಗಳನ್ನು ಅವರಿಗೆ ಹಸ್ತಾಂತರಿಸಿದ ನಂತರ, ಅವರು ತಮ್ಮ ಮನೆಗಳಲ್ಲಿ ಕೈಮಗ್ಗದ ಸೀರೆಗಳನ್ನು ತಯಾರಿಸುತ್ತಾರೆ.

ಕೈಮಗ್ಗದ ಸೀರೆಗಳು

ಫ್ಲಿಪ್‌ಕಾರ್ಟ್‌ ಮೊದಲು, ನಾವು ಸುಮಾರು 40 ವರ್ಷಗಳ ಕಾಲ ಸಾಂಪ್ರದಾಯಿಕ ಸೀರೆ ಮಾರಾಟಗಾರರಾಗಿದ್ದೆವು ಮತ್ತು ನಾವು ಅದೇ ವಿನ್ಯಾಸಗಳೊಂದಿಗೆ ಕೆಲಸ ಮಾಡುತ್ತಿದ್ದೆವು. ನಮ್ಮ ಗ್ರಾಹಕರು ಒಡಿಶಾ ಮತ್ತು ಕೋಲ್ಕತ್ತಾಗೆ ಮಾತ್ರ ಸೀಮಿತವಾಗಿದ್ದರು ಮತ್ತು ನಮ್ಮ ಸಾಂಪ್ರದಾಯಿಕ ಕರಕುಶಲ ಮತ್ತು ಕೌಶಲ್ಯಗಳ ಬಗ್ಗೆ ಬಹಳ ರಾಜ್ಯಗಳಿಗೇನೂ ತಿಳಿದಿರಲಿಲ್ಲ. ನಮ್ಮ ಲಾಭಾಂಶವು ಚೆನ್ನಾಗಿರಲಿಲ್ಲ ಮತ್ತು ವಿನ್ಯಾಸಗಳು ಹಳೆಯ ಶೈಲಿಯಲ್ಲಿಯೇ ಉಳಿದಿದ್ದವು.

ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ಸ್ಥಳ ಆಧಾರಿತ ಮಾರಾಟವನ್ನು ಅಧ್ಯಯನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ. ಈಗ ನಮಗೆ ವಿಭಿನ್ನ ಸೀರೆಗಳು ಮತ್ತು ವಿನ್ಯಾಸಗಳಿಗೆ ಬೇಡಿಕೆ ಎಲ್ಲಿ ಹೆಚ್ಚಿದೆಯೆಂದು ತಿಳಿದಿದೆ. ನಮ್ಮ ಅನೇಕ ಉತ್ಪನ್ನಗಳು ಬೆಂಗಳೂರು ಮತ್ತು ದಕ್ಷಿಣದ ಇತರ ನಗರಗಳಿಗೂ ಹೋಗುತ್ತವೆ. ಮೆಟ್ರೋ ನಗರಗಳಲ್ಲಿ ರೇಷ್ಮೆ ಉತ್ಪನ್ನಗಳನ್ನು ಖರೀದಿಸುವ ಬಹಳಷ್ಟು ಗ್ರಾಹಕರು ನಮ್ಮಲ್ಲಿದ್ದಾರೆ ಮತ್ತು ನೆರೆಯ ನಗರಗಳಲ್ಲಿ ಹತ್ತಿಗೆ ಬಹಳ ಹೆಚ್ಚಿನ ಬೇಡಿಕೆಯಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವಾಗ, ನಮ್ಮ ಲಾಭಾಂಶವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದು ನನ್ನ ಜನರಿಗೆ ಗೌರವಯುತವಾಗಿ ತಮ್ಮ ಆದಾಯವನ್ನು ಸಂಪಾದಿಸಲು ಹೆಚ್ಚಿನ ಕೆಲಸ ಮತ್ತು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.

ಜಿಷ್ಣು ಮುರಳಿ ಅವರಿಗೆ ಹೇಳಿದಂತೆ ಪಲ್ಲವಿ ಸುಧಾಕರ್ ಅವರಿಂದ ಹೆಚ್ಚುವರಿ . ಕೊಡುಗೆಗಳೊಂದಿಗೆ


ಇದನ್ನೂ ಓದಿ: ತಡೆರಹಿತ ಕನಸುಗಳು – ಸೂರತ್‌ನ ವ್ಯಾಪಾರೀ ಕುಟುಂಬವೊಂದು ಇ-ಕಾಮರ್ಸ್ ಮೂಲಕ ಅನಿಶ್ಚಿತತೆಯನ್ನು ಎದುರಿಸಿತು</ b>

ತಡೆಯಿಲ್ಲದ ಕನಸುಗಳು: ಸೂರತ್‌ನ ಒಂದು ವ್ಯಾಪಾರಸ್ಥ ಕುಟುಂಬವು ಇ-ಕಾಮರ್ಸ್ ಮೂಲಕ ಅನಿಶ್ಚಿತತೆಯನ್ನು ಎದುರಿಸಿದೆ

Enjoy shopping on Flipkart