#ಭಾರತದ ಕಲಾ ಪ್ರಕಾರಗಳು : ಫ್ಲಿಪ್ಕಾರ್ಟ್‌ ಸಮರ್ಥ್‌ ಮತ್ತು ಎನ್‌ಯುಎಲ್‌ಎಮ್‌ ಜೊತೆಗೆ ದೊಡ್ಡದಾಗಿ ಕನಸು ಕಾಣುತ್ತಿರುವ ಕುಶಲಕರ್ಮಿಗಳನ್ನು ಭೇಡಿ ಮಾಡಿ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಫ್ಲಿಪ್ಕಾರ್ಟ್‌ ಸಮರ್ಥ್-ಎನ್‌ಯುಎಲ್‌ಎಮ್‌ಗಳ ಪಾಲುದಾರಿಕೆಯ ಭಾಗವಾಗಿ ಭಾರತದಾದ್ಯಂತ ಕುಶಲಕರ್ಮಿಗಳು ಮತ್ತು ಕಲೆಗಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗು ತಮ್ಮ ಕಲೆಯನ್ನು ಪೋಷಿಸಲು ಮಾರಾಟ ಮಾಡುವಾಗುವುದಕ್ಕಾಗಿ ʼದ ಬಿಗ್‌ ಬಿಲಿಯನ್‌ ಡೇಸ್‌ʼ ಅನ್ನು ಕಾತರದಿಂದ ಕಾಯುತ್ತಿದ್ದಾರೆ. ಅವರ ಹುಟ್ಟಿದ ಊರುಗಳಿಗೆ ಒಂದು ವರ್ಚುಯಲ್‌ ಪ್ರಯಾಣವನ್ನು ಮಾಡಿ ಮತ್ತು ನಿಮ್ಮ #ಭಾರತದ ಕಲಾ ಪ್ರಕಾರಗಳ ಉತ್ಪನ್ನಗಳು ಕುಶಲಕರ್ಮಿಗಳಿಂದಲೇ ಮಾಡಲ್ಪಡುವುದನ್ನು ಗಮನಿಸಿ, ಮತ್ತು ಅವರನ್ನು ಫ್ಲಿಪ್ಕಾರ್ಟ್‌ನಲ್ಲಿ ಈ ಹಬ್ಬದ ಕಾಲದಲ್ಲಿ ಖಂಡಿತ ಬೆಂಬಲಿಸಿ.

artisans

ತೆಲಂಗಾಣದ ವಾರಂಗಲ್‌ನಿಂದ ಹಿಡಿದು ಹಿಮಾಚಲ ಪ್ರದೇಶದ ಕುಲುವರೆಗೆ ಲಕ್ಷಾಂತರ ಕುಶಲಕರ್ಮಿಗಳು ಭಾರತದ ಸಂಕೀರ್ಣವಾದ ಮತ್ತು ಶತಮಾನಗಳಷ್ಟು ಪುರಾತನವಾದ ಕಲಾ ಪ್ರಕಾರಗಳನ್ನು ಸೃಷ್ಟಿಮಾಡಲು ಮತ್ತು ಉಳಿಸಲು ಹಲವು ತಲೆಮಾರುಗಳಿಂದ ಕೆಲಸ ಮಾಡುತ್ತಿದ್ದಾರೆ. ವಸತಿ ಮತ್ತು ನಾಗರಿಕ ವಿಷಯಗಳ ಮಂತ್ರಾಲಯದ ದೀನ್ದಯಾಲ್‌ ಅನ್ತಯ ಯೋಜನಾ – ರಾಷ್ಟ್ರೀಯ ನಾಗರಿಕ ಜೀವನೋಪಾಯಗಳ ಮಿಷನ್‌ (ಡಿಎವೈ-ಎನ್‌ಯುಎಲ್‌ಎಮ್‌) ಈ ಮಿಷನ್‌ನಲ್ಲಿರುವ ಕುಶಲಕರ್ಮಿಗಳು ಮತ್ತು ನಗರಗಳಲ್ಲಿರುವ ಬಡ ಮಹಿಳೆಯರಿಗೆ ಈಗ ಹೊಮ್ಮುತ್ತಿರುವ ಮಾರುಕಟ್ಟೆಗಳ ಅವಕಾಶಗಳಿಗೆ ಸಂಪರ್ಕ ಪಡೆಯಲು ಸಹಾಯಮಾಡಿ ಅವರಿಗೆ ನೆರವಾಗುತ್ತಿದೆ. ಜನವರಿ ೨೦೨೦ರಲ್ಲಿ

ಎನ್‌ಯುಎಲ್‌ಎಮ್‌ ಫ್ಲಿಪ್ಕಾರ್ಟ್‌ನೊಂದಿಗೆ ಕೈಜೋಡಿಸಿತು, ಏಕೆಂದರೆ ಕುಶಲಕರ್ಮಿಗಳು ಮತ್ತು ಕೌಶಲ್ಯವಿರುವ ಕಾರ್ಮಿಕರನ್ನು ಈ-ಕಾಮರ್ಸ್‌ನ ಕ್ಷೇತ್ರಕ್ಕೆ ತುರುವುದರಿಂದ ಅವರನ್ನು ಇನ್ನೂ ಸಬಲೀಕರಿಸಹುದು ಎಂದು.

೨೦೧೯ರ ಜುಲೈಯಲ್ಲಿ ಆರಂಭಿಸಲಾದ ಫ್ಲಿಪ್ಕಾರ್ಟ್‌ ಸಮರ್ಥ್‌ ಭಾರತದ ಕುಶಲಕರ್ಮಿಗಳನ್ನು, ನೇಕಾರರನ್ನು ಮತ್ತು ಕಿರು ಉದ್ದಿಮೆಗಳನ್ನು ಮೇಲಕ್ಕೆತ್ತುವ ಗುರಿಯನ್ನು ಹೊಂದಿದ್ದು ಅವರು ಈ-ಕಾಮರ್ಸ್‌ ಅನ್ನು ಅಳವಡಿಸಿಕೊಳ್ಳುವಂತೆ ಮಾಡಿದೆ. ಅದರಿಂದ ಅವರು ಇಡಿ ದೇಶದ ಗಿರಾಕಿಗಳ ಸಮೂಹವನ್ನು ತಲುಪಬಹುದು. ಈ ಕಾರ್ಯಕ್ರಮವು ಕಡಿಮೆ ಪ್ರಾಮುಖ್ಯತೆ ಗಳಿಸಿರುವ ವರ್ಗಗಳಿಗೆ ಕ್ಯಾಟಲಾಗ್‌ ರಚಿಸುವುಕ್ಕೆ ಬೆಂಬಲ, ತರಬೇತಿಯ ಅವಧಿಗಳು, ಜಾಹಿರಾತು ಮುಂತಾದ ಸವಲತ್ತುಗಳನ್ನು ಒದಗಿಸಿ ಅವರು ಸುಲಭವಾಗಿ ಈ-ಕಾಮರ್ಸ್‌ ವೇದಿಕೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ.

ಈ ಎನ್‌ಯುಎಲ್‌ಎಮ್‌-ಫ್ಲಿಪ್ಕಾರ್ಟ್‌ ಪಾಲುದಾರಿಕೆಯು ೨೫ ರಾಜ್ಯಗಳಿಗೆ ವಿಸ್ತರಿಸಿದ್ದು ಪ್ರತಿಯೊಂದು ರಾಜ್ಯದ ಕುಶಲಕರ್ಮಿಗಳೂ ತಮ್ಮ ಅನನ್ಯ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಒಂದು ಸಾಮಾನ್ಯ ವೇದಿಕೆಗೆ ತರಲು ಉತ್ತೇಜಿಸುತ್ತದೆ. ನಿಮ್ಮ ಉತ್ಪನ್ನ ಎಲ್ಲಿಂದ ಬರುತ್ತದೆ, ಅದನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಅವುಗಳನ್ನು ಜಾಗರೂಕತೆಯಿಂದ ತಯಾರುಮಾಡುವ ಜನರನ್ನು ತಿಳಿದುಕೊಳ್ಳಲು ಕೆಲವು ಕುಶಲಕರ್ಮಿಗಳನ್ನು ನೋಡಿ ಮತ್ತು ಈ ಪಾಲುದಾರಿಕೆಯ ಅಡಿಯಲ್ಲಿ ತಯಾರಾದ ಅಪ್ಪಟ ಉತ್ಪನ್ನಗಳನ್ನು ನೋಡಿ.


ಕುಲ್ಲ್ವಿ ಟೋಪಿಗಳು ಮತ್ತು ಮಫ಼್ಲರ್‌ಗಳು

ಕುಲ್ಲು, ಹಿಮಾಚಲ ಪ್ರದೇಶ

artisans

ಕುಲ್ಲು ವಿನ ನಿವಾಸಿಗಳಿಗೆ ಕುಲ್ಲ್ವಿ ಟೋಪಿಯು ಹೆಮ್ಮೆಯ ಮತ್ತು ಖುಷಿಯ ಸಂಕೇತ. ಅದು ಹಿಮಾಚಲ ಪ್ರದೇಶದ ಒಂದು ಸಾಂಪ್ರದಾಯಿಕ ಉತ್ಪನ್ನ. ಈ ಟೋಪಿಗೆ ಒಂದು ವೃತ್ತಾಕಾರದ ಸಮತಟ್ಟಾದ ಹ್ಯಾಟು ಇರುತ್ತದೆ. ಅದನ್ನು ಅದರ ರಂಗುರಂಗಿನ ಕಸೂತಿ ಕೆಲಸದಿಂದ ಸುಲಭವಾಗಿ ಗುರುತಿಸಬಹುದು. ಅದಕ್ಕೆ ಅನೇಕ ವಿನ್ಯಾಸಗಳನ್ನು ಕೌಶಲ್ಯದಿಂದ ನೇಯಲಾಗಿರುತ್ತದೆ. ಸಾಮಾನ್ಯವಾಗಿ ಅದನ್ನು ಒಂದು ಸ್ಥಳೀಯವಾದ ಉಣ್ಣೆಯ ನೂಲುಹುರಿಯಿಂದ ಒಂದು ಸಣ್ಣ
ಖದ್ದಿಯಮೇಲೆ ನೇಯಲಾಗಿರುತ್ತದೆ. ಈ ಟೋಪಿಯು ಅದನ್ನು ಮಾಡಲು ಬಳಸುವ ನೂಲುಹುರಿಯನ್ನೂ ಒಳಗೊಂಡಂತೆ ೧೦೦ ಪ್ರತಿಶತ ಕೈಯಿಂದ ತಯಾರಾದದ್ದು. ಈ ಕಣಿವೆಯಲ್ಲಿ ಅನೇಕ ಜನ ಹಿಮಾಚಲದ ಚಳಿಗಾಲದಲ್ಲಿ ಬೆಚ್ಚಗಿರಲು ಈ ಟೋಪಿಗಳನ್ನು ಧರಿಸುತ್ತಾರೆ, ಮತ್ತು ಇವು ಸಾಂಪ್ರದಾಯಿಕ ಕುಲ್ಲು ದಿರಿಸಿನ ಅವಿಭಾಜ್ಯ ಅಂಗವಾಗಿವೆ. ಇವುಗಳನ್ನು ವಿಶೇಷ ಸಂದರ್ಭಗಳಾದ ಮದುವೆಗಳು, ಹಬ್ಬಗಳು, ಧಾರ್ಮಿಕ ಸಮಾರಂಭಗಳು, ಸ್ಥಳೀಯ ಸಮಾರಂಭಗಳು ಮತ್ತು ಸಭೆಗಳಲ್ಲಿ ಧರಿಸಲಾಗುತ್ತದೆ.

ತಯಾರಕರನ್ನು ಭೇಟಿಮಾಡಿ

ಹಿಮಾಚಲ ಪ್ರದೇಶದಲ್ಲಿರುವ ಹಿಮಾಲಯದ ಕಣಿವೆಯಾದ ಕುಲ್ಲುವಿನ ೨೦ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳು ಫ್ಲಿಪ್ಕಾರ್ಟ್‌ನಲ್ಲಿ ಸಿಗುವ ಈ ಪ್ರದೇಶದ ಪ್ರಸಿದ್ಧವಾದ ಉಣ್ಣೆ ಉಡುಪುಗಳನ್ನು ಕೈಯಿಂದ ತಯಾರಿಸುತ್ತಾರೆ. ಈ ಮಹಿಳೆಯರಲ್ಲಿ ಅನೇಕರು ಈ ಉತ್ಪನ್ನಗಳನ್ನು ನೇರ ತಮ್ಮ ಮನೆಗಳಲ್ಲಿ ಅಥವ ಹಳ್ಳಿಗಳಲ್ಲಿರುವ ಸರ್ಕಾರ ನೀಡಿರುವ ಕಾರ್ಯಾಗಾರಗಳಲ್ಲಿ ಸಿದ್ಧಪಡಿಸುತ್ತಾರೆ. ಅವರು ಈ-ಕಾಮರ್ಸ್‌ ಮೂಲಕ ಹೆಚ್ಚು ಯಶಸ್ಸನ್ನು ಕಾಣುತ್ತಿರುವುದರಿಂದ, ಅವರು ಈ ಉತ್ಪನ್ನಗಳನ್ನು ತಯಾರಿಸಲು ಹೆಚ್ಚು ಮಹಿಳೆಯರನ್ನು ಸೇರಿಸಿಕೊಳ್ಳುತ್ತಿದ್ದಾರೆ.

ಅವರ ಬಗ್ಗೆ ತಿಳಿಯಲು ಈ ವಿಡಿಯೊವನ್ನು ನೋಡಿ :

YouTube player

Click here to directly support these artisans on Flipkart


ವಾರಂಗಲ್‌ ಧುರ್ರಿಗಳು

ವಾರಂಗಲ್‌, ತೆಲಂಗಾಣ

artisan

ವಾರಂಗಲ್‌ ಧುರ್ರಿಗಳನ್ನು ಮಾಡುವ ಕಲೆ ಜಟಿಲವಾದದ್ದು. ಅನೇಕ ವರ್ಷಗಳು ಪಿಟ್-ಮತ್ತು-ಫ್ರೇಂ ಮಗ್ಗಗಳಲ್ಲಿ ಶ್ರಮಪಟ್ಟು ದುಡಿಯುವುದರಿಂದ ಅನೇಕ ಬಣ್ಣಗಳ ನೂಲುಗಳನ್ನು ಹೊಳೆಯುವ ವಿನ್ಯಾಸಗಳಾಗಿ ರೂಪಾಂತರಿಸಲು ಸಾಧ್ಯವಾಗುತ್ತದೆ. ತೆಲಂಗಾಣದ ವಾರಂಗಲ್‌ ಜಿಲ್ಲೆಯ ನೂರಾರು ಕುಶಲಕರ್ಮಿಗಳಿಂದ ಅದ್ಭುತವಾಗಿ ತಯಾರಾಗುವ ಈ ಧುರ್ರಿಗಳು ತೆಲಂಗಾಣದ ಕೈಮಗ್ಗ ಪರಂಪರೆಯ ಹೆಮ್ಮೆಯಾಗಿವೆ. ಧುರ್ರಿಗಳಲ್ಲಿರುವ ಕನಿಷ್ಠವಾದ ವಂಕಿವಂಕಿಯಾದ ವಿನ್ಯಾಸಗಳು, ಬಾಳುವಿಕೆ ಮತ್ತು ವೈವಿಧ್ಯದಿಂದಾಗಿ ಇವು ಜಗತ್ತಿನಾದ್ಯಂತ ಜನಪ್ರಿಯವಾಗಿವೆ ಮತ್ತು ಇತ್ತೀಚೆಗೆ ಈ ಕಲೆಗೆ ಜಿಯಾಗ್ರಾಫಿಕಲ್‌ ಇಂಡಿಕೇಷನ್‌ (ಜಿಐ) ಸರ್ಟಿಫಿಕೇಟ್‌ ಟ್ಯಾಗ್‌ ಸಿಕ್ಕಿದೆ.

ತಯಾರಕರನ್ನು ಭೇಟಿಮಾಡಿ

artisan

ಧುರ್ರಿಗಳು ಬಹುಕಾಲ ಬಾಳುತ್ತವೆ ಮತ್ತು ಉಪಯುಕ್ತವಾಗಿವೆ. ಇವುಗಳನ್ನು ವಾರಂಗಲ್‌ನ ನೇಕಾರರು ೧೦೦ ಪ್ರತಿಶತ ಹತ್ತಿಯಿಂದ ತಯಾರಿಸುತ್ತಾರೆ. ಫ್ಕಿಪ್ಕಾರ್ಟ್‌ ಸಮರ್ಥ್-ಎನ್‌ಯುಎಲ್‌ಎಮ್‌ ಪಾಲುದಾರಿಕೆಯಲ್ಲಿ, ಈ ಉತ್ಪನ್ನಗಳನ್ನು ಈ ಜಿಲ್ಲೆಯ ಶ್ರೀ ಸಾಯಿ ಸ್ವಸಹಾಯ ಗುಂಪಿನವರು ತಯಾರಿಸುತ್ತಾರೆ.

Click here to directly support these artisans on Flipkart


ನೀರು ಹಯಸಿಂತ್‌ನ ಬುಟ್ಟಿಗಳು

ನಗಾಂ, ಅಸ್ಸಾಂ

artisan

ನೀ ರಿನ ಹಯಸಿಂತ್‌ ನೀರಿನಲ್ಲಿ ಸ್ವತಂತ್ರವಾಗಿ ತೇಲುವ ಮತ್ತು ವರ್ಷವಿಡೀ ಬೆಳೆಯುವ ನೀರಿನ ಗಿಡ. ಅದಕ್ಕೆ ಅಗಲವಾದ ಹೊಳೆಯುವ ಎಲೆಗಳಿರುತ್ತವೆ ಮತ್ತು ಅದು ಪ್ರಪಂಚದಲ್ಲಿ ಅತಿವೇಗವಾಗಿ ಬೆಳೆಯುವ ಸಸ್ಯಗಳಲ್ಲೊಂದು. ಎನ್‌ಯುಎಲ್‌ಎಮ್‌ನ ಜೊತೆಗೂಡಿರುವ ಅಸ್ಸಾಂನ ನಗಾಂನಲ್ಲಿರುವ ಒಂದು ಸ್ವಸಹಾಯ ಗುಂಪು ಈ ಎಲೆಯ ಒಂದು ಸೃಜನಶೀಲ ಉಪಯೋಗವನ್ನು ಕಂಡೊಕೊಂಡಿದೆ – ಬುಟ್ಟಿಗಳನ್ನು ಹೆಣೆಯುವುದು. ಈ ಸ್ವಸಹಾಯ ಗುಂಪಿನ ಸದಸ್ಯರು ಇದನ್ನು ತಮ್ಮ ಪ್ರದೇಶದ ಹತ್ತಿರುವ ಕೊಲೊಂಗ್‌ ಎಂಬ ಒಂದು ಒಣಗಿರುವ ನದಿಯಿಂದ ಆಯುತ್ತಾರೆ. ಈ ಉದ್ದವಾದ ನೀರಿನ ಹಯಸಿಂತ್‌ ಅನ್ನು ಕೊಯ್ಲು ಮಾಡಿದ ನಂತರ ಅದರ ಬೇರುಗಳು ಮತ್ತು ಎಲೆಗಳನ್ನು ತೆಗೆದು ಅದರ ಕಾಂಡಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. ೫-೭ ದಿನಗಳ ನಂತರ ಆ ಒಣಗಿದ ಕಾಂಡಗಳನ್ನು ತೆಗೆದುಕೊಂಡು ಅವುಗಳನ್ನು ಕಂತುಗಳಾಗಿ ಕಟ್ಟಿ ಒಂದು ಒಣಗಿದ ಜಾಗದಲ್ಲಿ ಶೇಖರಿಸುತ್ತಾರೆ. ಕೊನೆಯಲ್ಲಿ, ಸ್ವಸಹಾಯ ಗುಂಪಿನ ಸದಸ್ಯರು ಅವುಗಳಿಂದ ಒಂದು ಚೀಲವನ್ನೊ ಬುಟ್ಟಿಯನ್ನೊ ಹೆಣೆಯುತ್ತಾರೆ.

ತಯಾರಕರನ್ನು ಭೇಟಿಮಾಡಿ

artisans
ಸ್ವಯಸಹಾಯ ಗುಂಪಿನ ಸದಸ್ಯರಾಗಿರುವ ಅನೇಕ ಮಹಿಳೆಯರು ನೀರಿನ ಹಯಸಿಂತ್‌ನ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ತೊಡಗಿದ್ದಾರೆ. ನಗಾಂ ಪಟ್ಟಣದಲ್ಲಿ ಲಖ್ಯಜ್ಯೋತಿ ಸ್ವಸಹಾಯ ಗುಂಪಿನವರು ಜೊತೆಯಾಗಿ ಕೆಲಸಮಾಡಿ ಮಹಿಳೆಯರ ಕೈಚೀಲಗಳು, ಚಿಕ್ಕ ಪರ್ಸುಗಳು ಮತ್ತು ಬಕೀಟುಗಳನ್ನು ತಯಾರಿಸುತ್ತಾರೆ.

Click here to directly support these artisans on Flipkart


ಛಂಬ ಹಿತ್ತಾಳೆ ತಟ್ಟೆ

ಛಂಬ ಜಿಲ್ಲೆ, ಹಿಮಾಚಲ ಪ್ರದೇಶ

artisans

ಹಿಮಾಚಲ ಪ್ರದೇಶದ ಛಂಬ ಜಿಲ್ಲೆಯು ತನ್ನ ಲೋಹದ ಎರಕದ ಪರಂಪರೆಗೆ ಪ್ರಸಿದ್ಧವಾಗಿದೆ. ಛಂಬ್ಯಲಿ ಥಾಲ್‌l ಅನ್ನು ಮಾಡುವ ಕೆಲಸ ಛಂಬ ಸಂಸ್ಥಾನದ ಕಾಲದಷ್ಟು ಹಳೆಯದು. ಭಾರ್ಮೌರ್‌ ಮತ್ತು ಛಂಬಗಳನ್ನು ಸೇರಿದಂತೆ ಆ ಪ್ರದೇಶದಲ್ಲಿರುವ ಅನೇಕ ದೇವಸ್ಥಾನಗಳು ಈ ಲೋಹದ ಕೆತ್ತನೆಗಳನ್ನು ಹೊಂದಿವೆ. ಲೋಹದ ತಟ್ಟೆಯಲ್ಲಿ ಅನೇಕ ವಿನ್ಯಾಸಗಳು ಮತ್ತು ಅಂಚುಗಳೀರುತ್ತವೆ. ಅವುಗಳನ್ನು ರಿಪೌಸೆ ಎಂಬ ಪುರಾತನ ವಿಧಾನದಿಂದ ಉಬ್ಬಚ್ಚು ಮಾಡಲಾಗುತ್ತದೆ. ಇದರಲ್ಲಿ ವಿನ್ಯಾಸಗಳನ್ನು ಸುತ್ತಿಗೆ ಮತ್ತಿತರ ಸಾಧನಗಳಿಂದ ಉಬ್ಬಿಸಲಾಗಿರುತ್ತದೆ. ಇದರಲ್ಲಿನ ವಿಷಯಗಳು ಸಾಂಪ್ರದಾಯಿಕ ಛಂಬ ಪೌರಾಣಿಕ ದೇವತೆಗಳು, ಸ್ಥಳೀಯ ದೇವಸ್ಥಾನಗಳಲ್ಲಿರುವ ಶಿಲ್ಪಗಳ ಪ್ರತಿಕೃತಿಗಳು ಅಥವ ಪಹರಿ ಸೂಕ್ಷ್ಮ ಪ್ರತಿಕೃತಿಗಳಾಗಿವೆ.

ತಯಾರಕರನ್ನು ಭೇಟಿಮಾಡಿ

artisan

ಫ್ಲಿಪ್ಕಾರ್ಟ್‌ನ ಛಂಬ ಲೋಹದ ತಟ್ಟೆಯ ಉತ್ಪನ್ನಗಳನ್ನು ಕಲಾಕೃತಿ ಸ್ವಸಹಾಯ ಗುಂಪಿನ ಐದು ಸದಸ್ಯರು ತಯಾರಿಸುತ್ತಾರೆ. ಅವರು ಈ ಕಲೆಯೊಂದಿಗೆ ಹತ್ತು ವರ್ಷಗಳಿಗಿಂತ ಹಚ್ಚಾಗಿ ಕೆಲಸ ಮಾಡುತ್ತಿದ್ದಾರೆ.

Click here to directly support these artisans on Flipkart


ಭೈರವ್ಘರ್‌ ಪ್ರಿಂಟ್ಸ್‌

ಉಜ್ಜೈನ್‌, ಮಧ್ಯ ಪ್ರದೇಶ

artisans

ಉಜ್ಜೈನ್ನಗರದಲ್ಲಿ ಹುಟ್ಟಿರುವ ಈ ಪುರಾತನ ಕಲೆಯಾದ ಭೈರವ್ಘರ್ ಪ್ರಿಂಟ್‌ ವಿಧಾನವು ೨೦೦ ವರ್ಷಗಳಿಗೂ ಹಳೆಯ ಕಲೆ.

ಹೆಚ್ಚು ಸಮಯ ಬೇಡುವ ಈ ಪ್ರಕ್ರಿಯೆಯಲ್ಲಿ ಜಟಿಲವಾದ ಮುಖ್ಯ ಸಂಕೇತಗಳನ್ನು ಭೈರವ್ಘರ್‌ ಪ್ರಂಟ್ಸ್‌ಗಳ ಮೇಲೆ ಕರಗಿಸಿದ ಅರಗನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಅರಗನ್ನು ನಿಧಾನವಾಗಿ ಒಂದು ಗ್ಯಾಸ್‌ನ ಬೆಂಕಿಯ ಮೇಲೆ ಅದು ಕರಗುವವರೆಗೂ ಬಿಸಿಮಾಡಲಾಗುತ್ತದೆ. ಅದನ್ನು ಮರಳು ಮುಚ್ಚಿರುವ ಒಂದು ಮೇಜಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಒಂದು ಬಟ್ಟೆಯ ಮೇಲೆ ಅರಗಿನ ವಿನ್ಯಾಸಗಳನ್ನು ಚಿತ್ತಿಸಲಾಗಿರುತ್ತದೆ ಒಂದು ಸ್ಟೈಲಸ್‌ನಿಂದ ಚಿತ್ತಿಸಲಾಗಿರುತ್ತದೆ. ಆ ಸ್ಟೈಲಸ್ಸನ್ನು ಒಂದು ಲೋಹದ ಕಂಬಿಗೆ ತೆಂಗಿನ ತೊಗಟೆಯನ್ನು ಕಟ್ಟಿ ಮಾಡಲಾಗಿರುತ್ತದೆ. ಅರಗು ಒಣಗಿದ ಮೇಲೆ ಆ ಬಟ್ಟೆಗೆ ಬೇಕಾದ ಬಣ್ಣಗಳನ್ನು ಕೊಡಲಾಗುತ್ತದೆ.

ತಯಾರಕರನ್ನು ಭೇಟಿಮಾಡಿ

artisans

ಈ ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಲಾಗಿದೆ. ಇದನ್ನು ಉಜ್ಜೈನಿಯ ಮಡ್ನಿ ಸ್ವಸಹಾಯ ಗುಂಪಿನವರು ತಮ್ಮ ಕುಟುಂಬದವರೊಂದಿಗೆ ಜೀವನೋಪಾಯವನ್ನು ಗಳಿಸಲು ಪಾಲಿಸುತ್ತಾರೆ.

Click here to directly support these artisans on Flipkart


ಬೆಳ್ಳಿಯ ಸೂಕ್ಷ್ಮ ತಂತಿಯ ಚಿತ್ರಕೆಲಸ

ಕರೀಂನಗರ್‌, ತೆಲಂಗಾಣ

artisans

ತೆಲಂಗಾಣ ರಾಜ್ಯದ ಕರೀಂನಗರ್‌ ಪ್ರದೇಶದಲ್ಲಿ ವಿವರವಾದ ಮತ್ತು ಸೂಕ್ಷ್ಮವಾದ ಬಳ್ಳಿ ತಂತಿ ಚಿತ್ರ ಕೆಲಸದ ಉತ್ಪನ್ನಗಳನ್ನು ತಯಾರಿಸುವ ಅನೇಕ ಉತ್ಕೃಷ್ಟ ಕುಶಲಕರ್ಮಿಗಳಿದ್ದಾರೆ. ಸೂಕ್ಷ್ಮವಾದ ಬೆಳ್ಳಿಯ ದಾರಗಳನ್ನು ವಂಕಿವಂಕಿ ವಿನ್ಯಾಸದಲ್ಲಿ ಕುಣಿಕೆಗಳಾಗಿ ತಿರುಚಲಾಗುತ್ತದೆ. ಇದರಿಂದ ಅವುಗಳಿಗೆ ಲೇಸಿನ ಮಾದರಿಯ ರೂಪವು ಬರುತ್ತದೆ. ಈ ಪಟ್ಟಿಗಳನ್ನು ಮತ್ತು ನವಿರಾದ ಬೆಳ್ಳಿಯನ್ನು ಒಟ್ಟಿಗೆ ಬೆಸೆದು ಕಲಾತ್ಮದ ಸಂಕೇತಗಳನ್ನು ರಚಿಸಲಾಗುತ್ತದೆ.

ಕುತೂಹಲವೇನೆಂದರೆ, ಈ ಸೂಕ್ಷ್ಮ ತಂತಿಯ ಕೆಲಸ ಇತಿಹಾಸವನ್ನು ೧೭ರಿಂದ ೧೯ನೆಯ ಶತಮಾನದ ಇಟಲಿಯ ಮತ್ತು ಫ್ರಾಂಸ್‌ನ ಲೋಹಕ ಕೆಲಸದಷ್ಟು ಹಿಂದಕ್ಕೆ ಗುರುತಿಸಬಹುದು. ಕರೀಂನಗರ್‌ ಬೆಳ್ಳಿಯ ಸೂಕ್ಷ್ಮ ತಂತಿಯ ಕೆಲಸಕ್ಕೆ ೨೦೦೭ರಲ್ಲಿ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆ ಅಥವ ಜಿಯಾಗ್ರಾಫಿಕಲ್‌ ಇಂಡಿಕೇಷನ್‌ (ಜಿಐ) ಸ್ಥಾನ ದೊರೆಯಿತು.
ತಯಾರಕರನ್ನು ಭೇಟಿಮಾಡಿ

ಈ ಸೂಕ್ಷ್ಮ ತಂತಿಯ ಕೆಲಸದ ಬ್ರೋಚುಗಳನ್ನು ತೆಲಂಗಾಣದ ಕರೀಂನಗರ್‌ನ ಚಿಲುಕುರಿ ಬಾಲಾಜಿ ಸ್ವಸಹಾಯ ಗುಂಪು ಮತ್ತು ಅವರ ಕುಟುಂಬದವರು ತಯಾರಿಸುತ್ತಾರೆ. ಅವರು ಹಲವು ವರ್ಷಗಳಿಂದ ಈ ಉತ್ಪನಗಳನ್ನು ತಯಾರಿಸುತ್ತಿದ್ದಾರೆ. ಈ ಕಲೆ ನಶಿಸಿ ಹೋಗದೆ ಇರುವಂತೆ ಅದನ್ನು ಉಳಿಸುವುದರಲ್ಲಿ ಇವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈ ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲಾಗುತ್ತದೆ. ಇದು ತೆಲಂಗಾಣದ ಕರೀಂನಗರ್‌ ಜಿಲ್ಲೆಯ ಕಲಾತ್ಮಕ ಹಾಗು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ. ಈ ನಾಜೂಕಾದ ಬೆಳ್ಳಿಯ ಕೆಲಸದಲ್ಲಿ ಪರಿಣತಿ ಪಡೆಯುವುದು ಕಷ್ಟ. ಆದ್ದರಿಂದ ಈ ಸಂಪ್ರದಾಯದಲ್ಲಿ ಕೇವಲ ಕೌಶಲ್ಯವಿರುವ ಕುಶಲಕರ್ಮಿಗಳು ಇದರಲ್ಲಿ ಪರಿಣತರೆಂದು ಪರಿಗಣಿಸಲ್ಪಡುತ್ತಾರೆ.


ಅನ್ಕೊಡಿ

ಅಹಮದಾಬಾದ್‌, ಗುಜರಾತ್

artisans

ಅಂ ಕೋಡಿ ಅಥವ ಗುಂಥನ್‌ ಕಲಾ ಎಂದೂ ಕರೆಯಲ್ಪಡುವ ಈ ಕಲೆಯು ಗುಜರಾತಿನ ದೇಶೇಯ ಕ್ರೋಷ ಕಲೆ. ಇದು ಚಿನ್ನದ ದಾರಗಳನ್ನು ಬಳಸುವ ಅನನ್ನಯ ಕಲೆ. ಇದನ್ನು ಸಂಪೂರ್ಣ ಕೈಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕೈಯಲ್ಲಿ ಹಿಡಿಯುವ ಪರ್ಸು ವ್ಯಾಲೆಟ್‌ ಮುಂತಾದ ಅನೇಕ ವಸ್ತುಗಳನ್ನು ತಯಾರಿಸಲು ಒಂದೇ ಸೂಜಿಯನ್ನು ಬಳಸಲಾಗುತ್ತದೆ.

ತಯಾರಕರನ್ನು ಭೇಟಿಮಾಡಿ

ಈ ಉತ್ಪನ್ನಗಳನ್ನು ೨೦೦೧ರಿಂದ ಅಹಮದಾಬಾದ್‌ನ ಸ್ವಸಹಾಯ ಗುಂಪುಗಳಿಗೆ ಸೇರಿದ ಅತೀವ ಕೌಶಲ್ಯವುಳ್ಳ ಮಹಿಳಾ ಕುಶಲಕರ್ಮಿಗಳು ತಯಾರಿಸುತ್ತಿದ್ದಾರೆ. ಅವರ ಉತ್ಪನ್ನಗಳನ್ನು ಫ್ಲಿಪ್ಕಾರ್ಟ್‌ನಲ್ಲಿ ಮಾರುವುದರಿಂದ ಅವರಿಗೆ ಯಶಸ್ಸು ದೊರಕಿದೆ ಮತ್ತು ಅವರ ಕಲೆಗೆ ಪ್ರಚಾರ ಸಿಕ್ಕದೆ ಎಂದು ಅವರು ಹೇಳುತ್ತಾರೆ. ಇದರಿಂದ ಕುಶಲಕರ್ಮಿಗಳಿಗೆ ಹೆಚ್ಚಿನ ಆದಾಯ ಸಿಗುತ್ತಿದ್ದು ಅವರ ಚಿಕ್ಕ ವ್ಯಾಪಾರಗಳ ಸಲುವಾಗಿ ಅವರು ದೊಡ್ಡದಾಗಿ ಕನಸು ಕಾಣಬಹುದಾಗಿದೆ.

ಭಾರತಿ ಶಾರದ, ತಜ್ಞ ವಿನ್ಯಾಸಕಿ

artisans

ನಾನು ನನ್ನ ಕೆಲಸದ ಬಗ್ಗೆ ತೀವ್ರವಾದ ಒಲವು ಹೊಂದಿದ್ದೇನೆ ಮತ್ತು ನಾನು ಫ್ಲಿಪ್ಕಾರ್ಟ್‌ನ ʼದಿ ಬಿಗ್‌ ಬಿಲಿಯನ್‌ ಡೇಸ್‌ʼನ ಭಾಗವಾಗಲು ಸಂತೋಷಪಡುತ್ತೇನೆ. ನೀವು ನಮ್ಮ ಉತ್ಪನ್ನಗಳನ್ನು ಕೊಂಡಾಗ ನೀವು ಚಿಕ್ಕ ಸ್ಥಳೀಯ ವ್ಯಾಪಾರಗಳನ್ನು ಬೆಂಬಲಿಸುವಿರಿ ಮತ್ತು ನಾವು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡುವಿರಿ ಮತ್ತು ಮಹಿಳಾ ಉದ್ಯಮಿಗಳನ್ನು ಸಹಾಯ ಮಾಡುವಿರಿ ಕೂಡ ಎಂದು ನಂಬಿದ್ದೇನೆ. ಫ್ಲಿಪ್ಕಾರ್ಟ್‌ನಂತಹ ದೊಡ್ಡ ವೇದಕೆಗಳಲ್ಲಿ ಜನರು ನಮ್ಮ ಉತ್ಪನ್ನಗಳನ್ನು ನೋಡಿದಾಗ ಮತ್ತು ಕೊಂಡುಕೊಂಡಾಗ ಖಂಡಿತವಾಗಿ ಅದು ನಮ್ಮ ಮಾರಾಟದ ಕ್ಷೇತ್ರವನ್ನು ವಿಸ್ತರಿಸುತ್ತದೆ ಮತ್ತು ನಮ್ಮ ಆದಾಯವೂ ವೃದ್ಧಿಯಾಗುತ್ತದೆ.

ನಾವೆಲ್ಲರೂ ʼದಿ ಬಿಗ್‌ ಬಿಲಿಯನ್‌ ಡೇಸ್‌ʼಗಾಗಿ ಉತ್ಸುಕತೆಯಿಂದ ಕಾದಿದ್ದೇವೆ ಮತ್ತು ಒಳ್ಳೆಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಶ್ರಮಿಸುತ್ತಿದ್ದೇವೆ. ಇದು ನಮಗೆ ಒಂದು ದೊಡ್ಡ ಅವಕಾಶ. ಫ್ಲಿಪ್ಕಾರ್ಟ್‌ ಸಮರ್ಥ್‌ನ ಜೊತೆಗೂಡಿರುವುದರಿಂದ ನಮಗೆ ದೊಡ್ಡ ಪ್ರಮಾಣದ ಮಾರಾಟ ಹಾಗು ಪ್ರಚಾರವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ.

ಕವಿತಾ ಬೆನ್‌, ಕುಶಲಕರ್ಮಿ

ನಾವು ಉತ್ಪನ್ನಗಳನ್ನು ತಯಾರಿಸಿ ಹತ್ತಿರದ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದೆವು, ಆದರೆ ಈಗ ನಾವು ಫ್ಲಿಪ್ಕಾರ್ಟ್‌ನಲ್ಲಿ ನಮ್ಮ ಉತ್ಪನ್ನಗಳನ್ನು ಮಾರಿ ಅಭಿವೃದ್ಧಿ ಹೊಂದುವ ಅವಕಾಶವನ್ನೂ ಪಡೆದಿದ್ದೇವೆ. ನಮ್ಮ ಕಲೆ ಮತ್ತುಪ್ರತಿಭೆಯ ಬಗ್ಗೆ ಹೆಚ್ಚು ಜನ ತಿಳಿದುಕೊಳ್ಳುತ್ತಾರೆ. ಇದರಿಂದ ಇಡೀ ಪ್ರಪಂಚದಲ್ಲಿ ಅರಿವು ಮೂಡುತ್ತದೆ ಮತ್ತು ನಮಗೆ ಇನ್ನೂ ಒಳ್ಳೆಯ ಆದಾಯದ ಮೂಲ ಸಿಕ್ಕಂತಾಗುತ್ತದೆ.

ನಮ್ಮ ಚಿಕ್ಕ ಉತ್ಪನ್ನಗಳು ಫ್ಲಿಪ್ಕಾರ್ಟ್‌ನಲ್ಲಿ ಮಾರಾಟವಾಗುತ್ತವೆ ಎನ್ನುವುದು ನಮಗೆ ಸಂತೋಷದ ವಿಷಯ. ನಾವು ದೊಡ್ಡ ಪ್ರಮಾಣದ ಮಾರಾಟವನ್ನು ನಿರೀಕ್ಷಿಸುತ್ತಿದ್ದೇವೆ. ಅದರಿಂದ ನಮ್ಮ ವ್ಯಾಪಾರವು ಬೆಳೆಯಲು ಸಹಕಾರಿಯಾಗುತ್ತದೆ.

ಶೀತಲ್‌ ಬೆನ್‌, ಕುಶಲಕರ್ಮಿ

ನಾವು ಬಹಳ ಬುಡಮಟ್ಟದಲ್ಲಿ ವ್ಯವಹರಿಸುವ ಚಿಕ್ಕ ಮಹಿಳಾ ಉದ್ಯಮಿಗಳು. ಫ್ಲಿಪ್ಕಾರ್ಟ್‌ ಸಮರ್ಥ್‌ನ ಜೊತೆ ನಮ್ಮ ವ್ಯಾಪಾರ ಮತ್ತು ನಮ್ಮ ಆದಾಯವೂ ಬೆಳೆಯುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಸಣ್ಣ ಪ್ರಮಾಣದ ಕೆಲಸಗಾರರು ದೈನಂದಿನ ಆಧಾರದ ಮೇಲೆ ಸಂಪಾದಿಸುತ್ತೇವೆ. ಈಗ ನಮಗೆ ಫ್ಲಿಪ್ಕಾರ್ಟ್‌ನಲ್ಲಿ ನಮ್ಮ ಪ್ರತಿಭೆಯನ್ನು ಮತ್ತು ಕೈಯಿಂದ ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸಿಕ್ಕಿದೆ. ʼದಿ ಬಿಗ್‌ ಬಿಲಿಯನ್‌ ಡೇಸ್‌ʼ ಮಾರಾಟದ ಸಮಯದಲ್ಲಿ ಚೆನ್ನಾಗಿ ಬೆಳೆಯಲು ಮತ್ತು ಸಂಪಾದಿಸಲು ಒಳ್ಳೆಯ ಅವಕಾಶ ದೊರೆಯುತ್ತದೆ ಎಂದು ನಾನು ತಿಳಿದಿದ್ದೇನೆ.

Click here to directly support these artisans on Flipkart


ಭದ್ರಕಾಳಿ ಹೂವಿನ ಉತ್ಪನ್ನಗಳು – ಊದುಬತ್ತಿ ಕಡ್ಡಿಗಳು

ವಾರಂಗಲ್‌, ತೆಲಂಗಾಣ

artisans

ಭದ್ರಕಾಳಿಧೂಪ ಉತ್ಪನ್ನಗಳನ್ನು ಪುಡಿಮಾಡಿದ ಗುಲಾಬಿ ದಳಗಳಿಂದ ಮತ್ತು ಒಂದು ಆಯುರ್ವೇದೀಯ ದ್ರವ್ಯವಾದ ಲೋಬಾನ ದಿಂದ ತಯಾರಿಸಲಾಗುತ್ತದೆ. ಈ ಸಾವಯವ ಊದಬತ್ತಿಯ ಕಡ್ಡಿಗಳನ್ನು ಧಾರ್ಮಿಕ ಸಮಾರಂಭಗಳು ಮತ್ತು ಧ್ಯಾನದ ಸಮಯದಲ್ಲಿ ಬಳಸಲಾಗುತ್ತದೆ.

ತಯಾರಕರನ್ನು ಭೇಟಿಮಾಡಿ
ಈ ಉತ್ಪನ್ನವನ್ನು ಆದರ್ಶ ಸಿಟಿ ಲೆವೆಲ್‌ ಫೆಡರೇಷನ್‌ನವರು ತಯಾರಿಸುತ್ತಾರೆ. ಈ ಕೇಂದ್ರದಲ್ಲಿ ಹತ್ತಕ್ಕೂ ಮಿಗಿಲಾದ ಸ್ವಸಹಾಯ ಗುಂಪುಗಳ ಮಹಿಳೆಯರು ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ.


ಶಶಿ ಮಸ್ತಾನಿ ನೌವಾರಿ ಪತಲ್‌ (ಲುಗಡ)

ನಾಗ್ಪುರ್‌, ಮಹಾರಾಷ್ಟ್ರ

artisan

ನೌವಾರಿ ಎನ್ನುವುದು ಮಾಹಾರಾಷ್ಟ್ರ ರಾಜ್ಯದ ಒಂಬತ್ತು ಗಜದ ಸೀರೆ. ಇದರ ಹೆಸರು ಇದರ ಉದ್ದದಿಂದ ಬಂದಿದೆ. ಇದನ್ನು ಉಡುವ ಅನನ್ಯ ಶೈಲಿಯು ಈ ಉಡುಪಿನ ವಿಶೇಷ ಮತ್ತು ಇದರ ಇತಿಹಾಸವನ್ನು ಹಲವು ಶತಮಾನಗಳಷ್ಟು ಹಿಂದಕ್ಕೆ ಗುರುತಿಸಲಾಗುತ್ತದೆ.
.

ತಯಾರಕರನ್ನು ಭೇಡಿಮಾಡಿ

ಮಹಾರಾಷ್ಟ್ರ ರಾಜ್ಯದ ನಾಗ್ಪುರ್‌ ನಗರದ ಸ್ನೇಹಲ್‌ ಮಹಿಳಾ ಬಚರ್‌ ಗತ್‌ ಸಂಸ್ಥೆಯ ಮಹಿಳೆಯರಿಂದ ಈ ನೌವರಿ ಸೀರೆಗಳು ತಯಾರಿಸಲ್ಪಡುತ್ತವೆ. ಇವರಲ್ಲಿ ಅನೇಕರಿಗೆ ತಮ್ಮ ವ್ಯಾಪಾರವನ್ನು ಆರಂಭಿಸಲು ಎನ್‌ಯುಎಲ್‌ಎಮ್‌ ಬಂಡವಾಳ ನೀಡಿ ಬಂಬಲಿಸಿದೆ ಮತ್ತು ಈ ಮಹಿಳೆಯರು ಈ ಕಲೆಯನ್ನು ಬೇರೆಯವರಿಗೆ ಹೇಳಿಕೊಡುತ್ತಿದ್ದಾರೆ.


ಇದನ್ನೂ ಓದಿ : ಫ್ಲಿಪ್ಕಾರ್ಟ್‌ ಸಮರ್ಥ್‌ನ ಜೊತೆಯಲ್ಲಿ ಪಂಜಾಬ್‌ನ ಮಹಿಳಾ ಕುಶಲಕರ್ಮಿಗಳು ಮಹಾಮಾರಿಯ ನಂತರ ತಮ್ಮ ವ್ಯಾಪಾರ ಮರುಜೀವ ಪಡೆಯುತ್ತದೆಂದು ಆಶಿಸುತ್ತಿದ್ದಾರೆ

Enjoy shopping on Flipkart