ಕಾರ್ಡ್‌ರಹಿತ ಸಾಲ – ಈ ಬಿಗ್ ಬಿಲಿಯನ್ ಡೇಸ್ ಮಾರಾಟ, ₹ 1 ಲಕ್ಷ ಕ್ರೆಡಿಟ್‌ನೊಂದಿಗೆ ಶಾಪಿಂಗ್ ಮಾಡಿ ಮತ್ತು ನಂತರ ಪಾವತಿಸಿ

Read this article in বাংলা | English | हिन्दी | தமிழ் | ગુજરાતી | मराठी

ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ನಿಮಗೆ ತೃಪ್ತಿಯಾಗುವಷ್ಟು ಶಾಪಿಂಗ್ ಮಾಡಿ ಅದಕ್ಕೆ ನಂತರ ಪಾವತಿಸಬಹುದು ಎಂದು ನಿಮಗೆ ತಿಳಿದಿದೆಯೇ ? ಹಬ್ಬದ ಋತುವಿನಲ್ಲಿ ಫ್ಲಿಪ್‌ಕಾರ್ಟ್‌ನ ಪಾವತಿ ನಾವೀನ್ಯತೆಯಾದ ಕಾರ್ಡ್‌ಲೆಸ್ ಕ್ರೆಡಿಟ್‌ನ ಅತಿ ಹೆಚ್ಚು ಲಾಭ ಪಡೆದುಕೊಳ್ಳಿ - ₹ 1 ಲಕ್ಷದ ಕ್ರೆಡಿಟ್‌ವರೆಗೆ, ಸರಳ ಕೆವೈಸಿ, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಸುಲಭ ಪಾವತಿಗಳೊಂದಿಗೆ, ಈ ಆವಿಷ್ಕಾರವು ನಿಮ್ಮ ಪರಿಪೂರ್ಣವಾದ ಕೈಗೆಟುಕುವ ಪಾಲುದಾರನಾಗಿದೆ.

Flipkart cardless credit

ಕಾರ್ಡ್‌ಲೆಸ್ ಕ್ರೆಡಿಟ್? ಅದು ಸಾಧ್ಯ ಎಂದಾದರೂ ಯಾರಿಗೆ ತಿಳಿದಿತ್ತು? ಬಿಗ್ ಬಿಲಿಯಾನ್ ಡೇಸ್ ಮಾರಾಟದ ಸಮಯದಲ್ಲಿ ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್ ನಿಮ್ಮ ಶಾಪಿಂಗ್ ಅನ್ನು ಹೇಗೆ ಕೈಗೆಟುಕುವಂತೆ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ . </ Em>


ನೀವು ನಿಮ್ಮ ಮುಂದಿನ ತಿಂಗಳ ಸಂಬಳಕ್ಕಾಗಿ ಇನ್ನೂ ಕಾಯುತ್ತಿರುವುದರಿಂದ ಆ ಹೊಸ ಡಬಲ್-ಡೋರ್ ರೆಫ್ರಿಜರೇಟರ್ ಅನ್ನು ಅಮ್ಮನಿಗಾಗಿ ಖರೀದಿಸುವುದನ್ನು ಮುಂದೂಡುತ್ತಿದ್ದೀರಾ? ಕೆಲಸಕ್ಕಾಗಿ ನಿಮಗೆ ಆ ಹೊಸ ಲ್ಯಾಪ್‌ಟಾಪ್ ಅಗತ್ಯವಿದ್ದರೂ ಮತ್ತೆ ಸ್ನೇಹಿತರಿಂದ ಹಣ ಸಾಲ ಪಡೆಯಲು ನಿಮಗಿಷ್ಟವಿಲ್ಲವೇ? ನೀವು ಇನ್ನು ಮುಂದೆ ಬೆಲೆ ಅಥವಾ ಬಜೆಟ್‌ಗಳ ಬಗ್ಗೆ ಚಿಂತಿಸಬೇಕಾಗಿಲ್ಲ!

ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್ ಹೀಗೆ ಕೆಲಸ ಮಾಡುತ್ತದೆ

ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್

ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್‌ನೊಂದಿಗೆ, ನಿಮ್ಮ ಕಣ್ಣನ್ನು ಸೆಳೆದ ಅಥವಾ ನಿಮಗೆ ನಿಜವಾಗಿಯೂ ಅಗತ್ಯವಿರುವ ಯಾವುದಕ್ಕಾದರೂ ನೀವು 1 ಲಕ್ಷದವರೆಗೆ ಸುಲಭದ ಕ್ರೆಡಿಟ್ ಪಡೆಯಬಹುದು. ನೀವು ಚೆಕೌಟ್‌ ಮಾಡುವಾಗ ಇದನ್ನು ಪಾವತಿ ಆಯ್ಕೆಯಾಗಿ ಆರಿಸಿ ಮತ್ತು ಡೌನ್ ಪೇಮೆಂಟ್ ಮಾಡುವ ಬಗ್ಗೆಯೂ ಚಿಂತಿಸಬೇಡಿ! ಅದನ್ನು ಪಾವತಿಸಬೇಕಾದಾಗ, ನೀವು ಮುಂದಿನ ತಿಂಗಳು ಶೂನ್ಯ ಬಡ್ಡಿಯಲ್ಲಿ ಅದನ್ನು ಪಾವತಿಸಲು ಆಯ್ಕೆ ಮಾಡಬಹುದು, 3 ತಿಂಗಳ ಶೂನ್ಯ ಬಡ್ಡಿಯ ಇಎಂಐ ಯಲ್ಲಿ ಅದನ್ನು ಪಾವತಿಸಬಹುದು ಅಥವಾ 12 ತಿಂಗಳ ಸುಲಭ ಇಎಂಐಗಳಲ್ಲಿ ಪಾವತಿಸಬಹುದು. ಕ್ರೆಡಿಟ್ ಹೊರತಾಗಿ, ಸರಳವಾದ ಡಿಜಿಟಲ್ ಕೆವೈಸಿ ಪ್ರಕ್ರಿಯೆ, ಸುಲಭ ಇಎಂಐ ಆಯ್ಕೆಗಳು ಮತ್ತು ಶೂನ್ಯ ಪ್ರಾಸೆಸಿಂಗ್ ಫೀ ನಿಮ್ಮ ಬಿಗ್ ಬಿಲಿಯನ್ ಡೇ ಶಾಪಿಂಗ್ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

ಕಾರ್ಡ್‌ಲೆಸ್ ಕ್ರೆಡಿಟ್ ಕಾರ್ಡ್‌ಗೆ ಸೀಮಿತ ಪ್ರವೇಶ ಹೊಂದಿರುವ ಅಥವಾ ಅದನ್ನು ಹೊಂದಿರದ ಭಾರತೀಯರಿಗೆ ಕ್ರೆಡಿಟ್ ನೀಡುತ್ತದೆ

ಕ್ರೆಡಿಟ್ ಕಾರ್ಡ್ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ತೊಡಕಿನದ್ದಾಗಿದೆ, ಸಮಯ ತೆಗೆದುಕೊಳ್ಳುತ್ತದೆ, ದುಬಾರಿಯಾಗಿದೆ ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀವು ಅರ್ಹತೆ ಹೊಂದಿದ್ದೀರಾ ಎಂದು ನಿಮಗೆ ಖಚಿತವಾಗಿ ತಿಳಿದಿರದಿರುವುದರಿಂದ ನೀವು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಹಾಕದಿದ್ದಲ್ಲಿ ನಿಮಗೆ ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್‌ನ ಅವಶ್ಯಕತೆಯಿದೆ. ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್‌ನೊಂದಿಗೆ, ನೀವು ವಿಶ್ವಾಸದಿಂದ ಶಾಪಿಂಗ್ ಮಾಡಬಹುದು.

ಕಾರ್ಡ್‌ಲೆಸ್ ಕ್ರೆಡಿಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್

ನೀವು ಈ ಸರಳ ಹಂತಗಳನ್ನು ಅನುಸರಿಸಿದರೆ ಸಾಕು

  • ನಿಮ್ಮ ಪ್ಯಾನ್ ಮತ್ತು ಇತರ ವಿವರಗಳನ್ನು ನಮೂದಿಸಿ
  • ನಿಮ್ಮ ಕ್ರೆಡಿಟ್ ಮಿತಿಯನ್ನು ಪರಿಶೀಲಿಸಿ
  • ನಿಮ್ಮ ಸರಳ ಮತ್ತು ತ್ವರಿತ ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
  • ಕಾರ್ಡ್‌ಲೆಸ್ ಕ್ರೆಡಿಟ್ ಪಾವತಿ ಆಯ್ಕೆಯನ್ನು ಬಳಸಿಕೊಂಡು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಿ
  • ಮುಂದಿನ ತಿಂಗಳ 15ರೊಳಗೆ ಫ್ಲಿಪ್‌ಕಾರ್ಟ್ ಆಪ್‌ನಲ್ಲಿ ಮರುಪಾವತಿ ಮಾಡಿ

ಫ್ಲಿಪ್‌ಕಾರ್ಟ್ ಆಪ್‌ನಲ್ಲಿ My Accounts > Cardless Creditಗೆ ಹೋಗುವ ಮೂಲಕ ನೀವು ಯಾವಾಗ ಬೇಕಾದರೂ ನಿಮ್ಮ ಕ್ರೆಡಿಟ್ ಮಿತಿಯನ್ನು ಪರಿಶೀಲಿಸಬಹುದು.

ಕ್ರೆಡಿಟ್ ಕಾರ್ಡ್ ಹೊಂದಿರದ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸದ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಶಾಪಿಂಗ್ ಮಾಡಲು ಈ ನವೀನ ಪರಿಹಾರವು ಸುಗಮವಾದ, ಒತ್ತಡ ರಹಿತ ಮಾರ್ಗವನ್ನು ನೀಡುತ್ತದೆ. ಈಗ, ಕಾರ್ಡ್‌ಲೆಸ್ ಕ್ರೆಡಿಟ್‌ನೊಂದಿಗೆ ನೀವು ಬಜೆಟ್‌ನ ಯಾವುದೇ ಚಿಂತೆಯಿಲ್ಲದೆ ನಿಮಗೆ ಬೇಕಾದುದನ್ನು ಅಥವಾ ಅಗತ್ಯವಿರುವ ಎಲ್ಲವನ್ನೂ ಖರೀದಿಸಬಹುದು.

ಈಗ ಪ್ರಾರಂಭಿಸಲು ಇಲ್ಲಿ ಕ್ಲಿಕ್ ಮಾಡಿ!


ಇದನ್ನೂ ಓದಿ: ಎಲ್ಲರಿಗೂ ಕೈಗೆಟಕುವ ಶಾಪಿಂಗ್: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದೇನು

Enjoy shopping on Flipkart